Author: Author AIN

ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌ ನೀಡಿದೆ. ಈವರೆಗೂ ಸಹ ಆಧಾರ್‌ (ಇ-ಕೆವೈಸಿ) ಜೋಡಣೆಯಾಗದ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ಗಳನ್ನು ಸಸ್ಪೆಂಡ್‌ ಮಾಡಲಾಗ್ತಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಈಗಾಗಲೇ ಲಕ್ಷಾಂತರ ಎಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದ್ದು, ಸುಮಾರು 60 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗಿದೆ. ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆಹಾರ ಇಲಾಖೆ ಈಗ ಎಪಿಎಲ್ ಕಾರ್ಡ್​ದಾರರಿಗೂ ಸಹ ಬಿಸಿ ಮುಟ್ಟಿಸಿದೆ. https://www.youtube.com/watch?v=TH0pC_EQyXw ರಾಜ್ಯದಲ್ಲಿ ಪ್ರಸ್ತುತ 25,62,562 ಎಪಿಎಲ್ ಕಾರ್ಡ್​ಗಳಿದ್ದು, ಅದರಲ್ಲಿ 87,86,886 ಸದಸ್ಯರಿದ್ದಾರೆ. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಯಡಿ ಎಪಿಎಲ್ ಪಡಿತರದಾರರಿ​ಗೆ ಕೆಜಿ ಅಕ್ಕಿಗೆ 15 ರೂ.ನಂತೆ 10ಕೆಜಿ ಅಕ್ಕಿ ನೀಡಲಾಗುತ್ತದೆ. ಇದಲ್ಲದೇ ಬಿಪಿಎಲ್ ಕಾರ್ಡ್‌ಗೆ ಕೆಲವೊಂದು ಷರತ್ತು ಹಾಕುವ ಮೂಲಕ ಸರ್ಕಾರ ಉಳಿತಾಯಕ್ಕೆ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಆಪರೇಷನ್‌ ಬಿಪಿಎಲ್‌ ಕಾರ್ಡ್‌ಗೆ ಸೂಚಿಸಿದ ಬೆನ್ನಲ್ಲೇ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ…

Read More

ಬೆಂಗಳೂರು: ಶಾಸಕ ಜಮೀರ್‌ ಅಹ್ಮದ್‌ ಹೇಳಿಕೆಗಳು ಕಾಂಗ್ರೆಸ್‌ ಗೆ ತೀವ್ರ ತಲೆನೋವಾಗಿ ಪರಿಣಮಿಸಿವೆ. ಹೀಗಾಗಿ ಜಮೀರ್‌ ನಾಲಿಗೆಗೆ ನಿಯಂತ್ರಣ ಹಾಕಿ ಎಂಬ ಒತ್ತಾಯ ಕೇಳಿ ಬಂದಿದೆ. ಸಚಿವ ಜಮೀರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಖುದ್ದು ಕೆಪಿಸಿಸಿ  ಉಪಾಧ್ಯಕ್ಷರೇ ಪತ್ರ ಬರೆದಿದ್ದಾರೆ. https://www.youtube.com/watch?v=TH0pC_EQyXw ಜಮೀರ್ ಹೇಳಿಕೆಗಳಿಂದ ಪಕ್ಷ ಹಾಗೂ ಸರ್ಕಾರಕ್ಕೆ ಲಾಭ ಆಗದೆ, ಕೇವಲ ನಷ್ಚ ಆಗ್ತಿದೆ. ಅಮಾನವೀಯ ಹೇಳಿಕೆ ನೀಡುತ್ತಾ, ವಿವಾದ ಹುಟ್ಟು ಹಾಕುತ್ತಾ, ಕೆಟ್ಟ ವಾತಾವರಣ ಸೃಷ್ಟಿಸಿದ್ದಾರೆ  ಎಂದು ಜಮೀರ್ ನಡೆ ಬಗ್ಗೆ ಹುಸೇನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಯಲ್ಲಿನ ಸಚಿವ ಹೇಳಿಕೆ ಪಕ್ಷದ ಮೇಲೆ ದುಷ್ಪರಿಣಾಮ ಬೀರಿದೆ. ರಾಜಕೀಯ ಬೌದ್ದಿಕತೆ ಕಳೆದುಕೊಂಡ ಇಂತಹ ಸಚಿವರನ್ನು ಪಕ್ಷ ಹಾಗೂ ಸರ್ಕಾರ ಮುಖ್ಯ ವಾಹಿನಿಯಲ್ಲಿ ಬಿಂಬಿಸುವುದನ್ನ ಕೈಬಿಟ್ಟರೆ ಕ್ಷೇಮ ಎಂದು ಸಲಹೆ ನೀಡಿದ್ದು, ಬೇಜವಾಬ್ದಾರಿ ಹೇಳಿಕೆ ನೀಡದಂತೆ ಶಿಸ್ತು ಕ್ರಮ ಕೈಗೊಳ್ಳವಂತೆ ಪತ್ರ ಬರೆದಿದ್ದಾರೆ.  

Read More

ಮುಂಬೈ: ಬಾಲಿವುಡ್‌ ನಟಿ ದಿಶಾಪಟಾನಿ ತಂದೆಗೆ 25 ಲಕ್ಷ ರೂಪಾಯಿ ವಂಚಿಸಲಾಗಿದೆ. ದಿಶಾ ಅವರ ತಂದೆ ಜಗದೀಶ್ ಸಿಂಗ್ ಪಟಾನಿ ಅವರಿಗೆ ಸರ್ಕಾರಿ ಆಯೋಗದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಹೇಳಿ 25 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದೆ. ಈ ಸಂಬಂಧ ಬರೇಲಿ ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ. https://www.youtube.com/watch?v=k1qiUfjPKRY ಪಟಾನಿ ಅವರ ತಂದೆಗೆ ವಂಚಕ ಕರೆ ಮಾಡಿ, ಉತ್ತರ ಪ್ರದೇಶ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿದ್ದು, ಹಣ ನೀಡಿದರೆ ಯುಪಿ ರಾಜ್ಯ ಸರ್ಕಾರದ ಕಾರ್ಪೋರೇಷನ್‌ ಸಂಸ್ಥೆಯ ಅಧ್ಯಕ್ಷನಾಗಿ ನೇಮಿಸುವುದಾಗಿ ಭರವಸೆ ನೀಡಿದ್ದಾನೆ. ವಂಚಕನ ಮಾತಿಗೆ ಮರಳಾದ ಪಟಾನಿ ನಕಲಿ ಬ್ಯಾಂಕ್‌ ಖಾತೆಗೆ 20 ಲಕ್ಷ ಹಣ ವರ್ಗಾಯಿಸಿದ್ದು, 5 ಲಕ್ಷ ನಗದು ನೀಡಿದ್ದಾರೆ. ಆದರೆ ಬಹಳ ದಿನಗಳಾದರೂ ಕೆಲಸ ಆಗದೇ ಇದ್ದಾಗ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು, ಬರೇಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಆದರೆ ಈ ಕುರಿತು ದಿಶಾ ಪಟಾನಿ…

Read More

ಉತ್ತರಪ್ರದೇಶ : ಉತ್ತರ ಪ್ರದೇಶದ ಬಿಜ್ನೋರ್‌ ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುವಾಗ ಈ ಘಟನೆ ನಡೆದಿದ್ದು, ನವದಂಪತಿ ಸೇರಿ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮದುವೆ ಸಂಭ್ರಮದಲ್ಲಿದ್ದವರು ಮಸಣ ಸೇರಿದ್ದಾರೆ. https://ainlivenews.com/tension-for-murder-accused-darshan-necessity-to-undergo-operation/ ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ದಟ್ಟ ಮಂಜು ಕವಿದಿತ್ತು. ಮಂಜಿನಿಂದಾಗಿ ದಾರಿ ಕಾಣದೇ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಮದುವೆ ಮುಗಿಸಿಕೊಂಡು ಬರುತ್ತಿದ್ದವರ ವಾಹನ ವೇಗವಾಗಿ ಬಂದು ಟೆಂಪೋಗೆ ಡಿಕ್ಕಿಹೊಡೆದಿದೆ. ಪರಿಣಾಮ ನವಜೋಡಿ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘಟನೆಯಲ್ಲಿ ಸಾವನ್ನಪ್ಪಿದವರರಿಗೆ ಸಂತಾಪ ಸೂಚಿಸಿದ್ದು, ಪರಿಹಾರ ಕಾರ್ಯ ತ್ವರಿತಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Read More

ಬೆಂಗಳೂರು: ಕಳೆದ 16 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹತ್ಯೆ ಆರೋಪಿ  ದರ್ಶನ್  ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗಾಗಲೇ ದರ್ಶನ್‌ ಗೆ ಪಿಸಿಯೋಥೆರಪಿ ಮಾಡಲಾಗುತ್ತಿದೆ. ಇದರ ಜೊತೆಗೆ ಆಪರೇಷನ್ ಕೂಡ ಅಗತ್ಯ ಎನ್ನಲಾಗ್ತಿದೆ.  ಸದ್ಯ ದರ್ಶನ್ ಮೆಡಿಕಲ್ ಕಂಡೀಷನ್ ಅಬ್ಸರ್ವೇಷನ್ ನಲ್ಲಿ ಇಡಲಾಗಿದೆ. https://ainlivenews.com/kmf-products-to-delhi-outlet-opening-soon/ ಮೊದಲಿಗೆ ನಟ ದರ್ಶನ್ ಸೇರಿ ಕುಟುಂಬಸ್ಥರು ಸಹ ಆಪರೇಷನ್ ಬದಲಿಗೆ ಪಿಸಿಯೋಥೆರಪಿ ಗೆ ಮನವಿ ಮಾಡಿದ್ದರು. ಆದರೆ ಬಳ್ಳಾರಿ ಜೈಲಿನಲ್ಲಿದ್ದುಕೊಂಡೇ ಪಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಆದರೆ ದರ್ಶನ್ ಗೆ ತುರ್ತು ಆಪರೇಷನ್ ಅಗತ್ಯವಿದೆ ಎಂದು ಹೈಕೋರ್ಟ್ ನಲ್ಲಿ ಬೇಲ್ ಪಡೆಯಲಾಗಿತ್ತು. ಹೀಗಾಗಿ ಜಾಮೀನಿನ ಮೇಲೆ ಹೊರಬಂದು, ಇದೀಗ ಪಿಸಿಯೋಥೆರಪಿ ಚಿಕಿತ್ಸೆಗೆ ಒಳಪಟ್ಟರೆ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಸದ್ಯ ನಟ ದರ್ಶನ್ ಹಾಗೂ ಕುಟುಂಬಸ್ಥರು ಸಹ ಆಪರೇಷನ್ ಗೆ ಸಮ್ಮತಿಸಿದ್ದಾರೆ ಎನ್ನಲಾಗ್ತಿದೆ. ಇನ್ನೆರಡು ದಿನಗಳಲ್ಲಿ ದರ್ಶನ್ ಗೆ ಆಪರೇಷನ್ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ.

Read More

ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಗೆ ಅಭ್ಯರ್ಥಿಗಳ ಅಗತ್ಯವಿದ್ದು, ಅಪಾರ ಬುದ್ಧಿಮತ್ತೆಯ, ಸರ್ಕಾರಿ ಯಂತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹಾಗೂ ವಾರಕ್ಕೆ 80 ಗಂಟೆಗಳ ಕಾಲ ದುಡಿಯಲು ಮನಸ್ಸಿರುವವರಿಗೆ ಅವಕಾಶ ನೀಡಲಾಗುವುದು ಎಂದು ಇಲಾಖೆಯ ಮುಖ್ಯಸ್ಥರೂ ಆಗಿರುವ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ನೇಮಕಾತಿಗೆ ಜಾಹೀರಾತು ಪ್ರಕಟಿಸುತ್ತಿದ್ದಂತೆ DOGEನ ಸಾಮಾಜಿಕ ಮಾಧ್ಯಮ ಅನುಸರಿಸುವವರ ಸಂಖ್ಯೆ 14 ಲಕ್ಷಕ್ಕೆ ಏರಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, ‘DOGEಗೆ ನೆರವಾಗಲು ನಮ್ಮ ಮೇಲೆ ನಂಬಿಕೆ ಇಟ್ಟ ಸಾವಿರಾರು ಅಮೆರಿಕನ್ನರು ಆಸಕ್ತಿ ತೋರಿಸಿದ್ದಾರೆ. ಹೊಸ ಆಲೋಚನೆಯುಳ್ಳ ತಾತ್ಕಾಲಿಕ ಆಸಕ್ತರು ನಮಗೆ ಬೇಡ. ವಾರಕ್ಕೆ 80 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಬಲ್ಲ ಮತ್ತು ಸರ್ಕಾರಿ ಯಂತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹಾಗೂ ವೆಚ್ಚಕ್ಕೆ ಕಡಿವಾಣ ಹಾಕಬಲ್ಲವರನ್ನು ಮಾತ್ರ ನೇಮಿಸಿಕೊಳ್ಳಲಾಗುವುದು. ಆಸಕ್ತರು ಎಕ್ಸ್‌ನ ತಮ್ಮ ಖಾತೆಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು’ ಎಂದಿದ್ದಾರೆ. ಈ ಉದ್ಯೋಗಕ್ಕೆ ನಿರ್ದಿಷ್ಟ ವಿದ್ಯಾರ್ಹತೆ ಹಾಗೂ…

Read More

ಬೆಂಗಳೂರು : ಕರ್ನಾಟಕದ  ಹೆಮ್ಮೆ ನಮ್ಮ ಕೆಎಂಎಫ್ . ಇದೀಗ ಕೆಎಂಎಫ್‌ ಉತ್ಪನ್ನಗಳು ರಾಷ್ಟ್ರ ರಾಜಧಾನಿಯಲ್ಲೂ ಲಭಿಸಲಿವೆ. ಹೌದು, ದೆಹಲಿಯಲ್ಲಿ ಕೆಎಂಎಫ್‌  ಔಟ್‌ಲೆಟ್‌ ಮತ್ತೆ ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ ಕೆಎಂಎಫ್‌ ಔಟ್‌ ಲೆಟ್‌ ಗಳನ್ನು ಉದ್ಘಾಟಿಸಲಿದ್ದಾರೆ. https://ainlivenews.com/insistence-of-the-son-to-give-the-mobile-phone-inadvertence-of-the-angry-father/ 29 ವರ್ಷಗಳ ಹಿಂದೆಯೇ ದೆಹಲಿಗೆ ಕೆಎಂಎಫ್‌ ಹಾಲನ್ನು ಪೂರೈಸುತ್ತಿತ್ತು. ಆದರೆ ತದನಂತರದಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಹಸುವಿನ ಹಾಲು ಪೂರೈಸುವಂತೆ ಕೆಎಂಎಫ್‍ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಈ ಸಂಬಂಧ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಕೆಎಂಎಫ್ ಮಾತುಕತೆ ನಡೆಸುತ್ತಿತ್ತು. ಇದೀಗ ಕೆಎಂಎಫ್‌ ಉತ್ಪನ್ನ ಪೂರೈಸಲು ಸಮ್ಮತಿಸಿದ್ದು, ನವೆಂಬರ್‌ 21ರಿಂದ ಕೆಎಂಎಫ್‌ ಔಟ್‌ ಲೆಟ್‌ ಗಳು ಆರಂಭವಾಗಲಿದ್ದು,  ಆರಂಭಿಕ ಹಂತದಲ್ಲಿ ಕೆಎಂಎಫ್‌ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ಮುಂದಾಗಿದೆ. ದೆಹಲಿಯಲ್ಲಿ ಅಮೂಲ್‌ ಮತ್ತು ಮದರ್‌ ಡೈರಿ ಚಾಲ್ತಿಯಲ್ಲಿದ್ದು, ಕೆಎಂಎಫ್‌ ಇವಕ್ಕೆ ಪೈಪೋಟಿ ನೀಡಲಿದೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮತ್ತು ಕೇರಳಕ್ಕೆ ಕೆಎಂಎಫ್‌ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.

Read More

ಬೆಂಗಳೂರು: ಮೊಬೈಲ್‌ ವಿಚಾರಕ್ಕೆ ತಂದೆಯೇ ಮಗನ ಕೊಲೆ ಮಾಡಿರುವ ಘಟನೆ ನಡೆದಿದೆ. ನಗರದ ಕುಮಾರಸ್ವಾಮಿ ‌ಲೇಔಟ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ. 14 ವರ್ಷದ ತೇಜಸ್ ಕೊಲೆಯಾದ ಬಾಲಕನಾಗಿದ್ದು, ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೇಜಸ್‌ , ಇತ್ತೀಚೆಗೆ ಶಾಲೆಗೆ ಹೋಗಲು ನಿರಾಕರಸುತ್ತಿದ್ದ, ಶಾಲೆಗೆ ಹೋಗು ಅಂದದಕ್ಕೆ ಕೋಪಗೊಂಡಿದ್ದ. ನನಗೆ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದ. ಆದರೆ ಈಗಾಗಲೇ ‌ಒಂದು ಮೊಬೈಲ್ ‌ಹೊಡೆದು‌ ಹಾಕಿದ್ದನು. ಈಗ ಮತ್ತೊಂದು‌ ಮೊಬೈಲ್ ಕೊಡಿಸುವಂತೆ ಒತ್ತಾಯ ಮಾಡಿದ್ದ. https://ainlivenews.com/food-safety-quality-department-operation-raid-on-pgs/ ಇದರಿಂದ ಕೋಪಗೊಂಡ ಆರೋಪಿ‌ ರವಿ ಮಗನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಕುಸಿದು‌ ಬಿದ್ದಾಗ ನಾಟಕ ವಾಡುತ್ತಿದ್ದಾನೆಂದು ತಾತ್ಸಾರ ಮಾಡಿದ್ದಾನೆ. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಬಾಲಕ ಮೃತ ಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆ.ಎಸ್.ಲೇಔಟ್ ಪೊಲೀಸರು, ಆರೋಪಿ ರವಿಯನ್ನು ವಶಕ್ಕೆ ಪಡೆದು‌ ವಿಚಾರಣೆ ನಡೆಸಿದ್ದಾರೆ.

Read More

ಬೆಂಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗಿಳಿದಿದ್ದಾರೆ. ಇಂದಿರಾ ಕ್ಯಾಂಟೀನ್ ಬಳಿಕ ಇದೀಗ ಪಿಜಿಗಳ ಮೇಲೆ ಮೆಗಾ ರೇಡ್‌ ನಡೆಸಿದ್ದಾರೆ. ಪಿಜಿಗಳಲ್ಲಿ ಸ್ವಚ್ಛತೆ ಕುರಿತು ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇರುವ ಪಿಜಿಗಳ ಮೇಲೆ ದಾಳಿ ನಡೆಸಿದ್ದಾರೆ. https://ainlivenews.com/a-baby-boy-was-born-to-hit-man-rohit-sharma/ ದಾಳಿ ವೇಳೆ ಹಲವು ಪಿಜಿಗಳಲ್ಲಿ FSSAI ಲೈಸೆನ್ಸ್ ಇಲ್ಲದೇ ಇರುವುದು ಪತ್ತೆಯಾಗಿದೆ. ಲೈಸೆನ್ಸ್ ರಿನಿವಲ್ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಈಗಾಗಲೇ ಹಲವು ಪಿಜಿಗಳಿಗೆ ನೋಟೀಸ್ ನೀಡಿದ್ದಾರೆ. ಅಲ್ಲದೇ ಕೆಲವೊಂದು ಪಿಜಿಗಳಿಗೆ 10-50 ಸಾವಿರದವರೆಗೆ ದಂಡ ಕೂಡ ವಿಧಿಸಿದ್ದಾರೆ. ರಾಜ್ಯಾದ್ಯಂತ 150ಕ್ಕೂ ಹೆಚ್ಚು ಪಿಜಿಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Read More

ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯಾ ದಾಳಿಯ ಡ್ರೋನ್‌ ಗಳನ್ನು ಉತ್ಪಾದಿಸುವಂತೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆದೇಶಿಸಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಕೆಸಿಎನ್‍ಎ ವರದಿಯಲ್ಲಿ ಉಲ್ಲೇಖಿಸಿದೆ. ನೆಲದ ಮೇಲಿನ ಹಾಗೂ ಸಮುದ್ರದ ಮೇಲಿನ ಗುರಿಗೆ ಪ್ರಹಾರ ನೀಡಲು ವಿನ್ಯಾಸಗೊಳಿಸಿರುವ ನೂತನ ಡ್ರೋನ್‌ ಗಳ ಪ್ರಯೋಗಾರ್ಥ ಪರೀಕ್ಷೆಯನ್ನು ವೀಕ್ಷಿಸಿದ ಬಳಿಕ ಅಧ್ಯಕ್ಷ ಕಿಮ್ ಜಾಂಗ್ ಉನ್ ` ಇಂತಹ ಡ್ರೋನ್‌ ಗಳನ್ನು ಸಾಧ್ಯವಾದಷ್ಟು ಬೇಗ ದೊಡ್ಡ ಮಟ್ಟದಲ್ಲಿ ಉತ್ಪಾದಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆತ್ಮಹತ್ಯಾ ಡ್ರೋನ್‌ ಗಳು ಸ್ಫೋಟಕ ಸಾಗಿಸುವ ಮಾನವ ರಹಿತ ಡ್ರೋನ್‌ ಗಳಾಗಿದ್ದು ಉದ್ದೇಶಪೂರ್ವಕವಾಗಿ ಶತ್ರು ಗುರಿಗಳಿಗೆ ಅಪ್ಪಳಿಸಲು ವಿನ್ಯಾಸಗೊಳಿಸಲಾಗಿದೆ. ಇವು ಮಾರ್ಗದರ್ಶಿ ಕ್ಷಿಪಣಿಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಡ್ರೋನ್‌ ಗಳನ್ನು ಉತ್ತರ ಕೊರಿಯಾ ಮೊದಲ ಬಾರಿಗೆ ಆಗಸ್ಟ್ ನಲ್ಲಿ ಅನಾವರಣಗೊಳಿಸಿದ್ದು ಇದರ ತಂತ್ರಜ್ಞಾನವನ್ನು ರಶ್ಯ ಒದಗಿಸಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಆತ್ಮಹತ್ಯಾ ದಾಳಿಯ ಡ್ರೋನ್‌ ಗಳು ವಿಭಿನ್ನ…

Read More