Author: Author AIN

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿಗೆ ಸಂಗೀತದ ಮೇಲೆ ಸಾಕಷ್ಟು ಒಲವಿದೆ. ಸದ್ಯ ಸಾನ್ವಿ ತಮ್ಮ ನೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ತೆಲುಗಿನ ತಮನ್ ಅವರನ್ನು ಭೇಟಿಯಾಗಿದ್ದಾರೆ. ನೆಚ್ಚಿನ ಸಂಗೀತ ನಿರ್ದೇಶಕನನ್ನು ಭೇಟಿಯಾದ ಬಗ್ಗೆ ಸಾನ್ವಿ ಸಂತಸ ವ್ಯಕ್ತಪಡಿಸಿದ್ದಾರೆ. ತಮನ್ ಎಸ್. ಅವರ ಸಂಗೀತ ನನಗಿಷ್ಟ. ಇವರ ಹಾಡುಗಳನ್ನು ತುಂಬಾನೇ ಕೇಳಿದ್ದೇನೆ. ಅವುಗಳಲ್ಲಿ ಎಲ್ಲವೂ ಇಷ್ಟ. ಆದರೆ ಇಲ್ಲಿಯವರೆಗೂ ಅವರನ್ನು ಭೇಟಿಯಾಗಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಒಂದಲ್ಲ ಒಂದು ದಿನ ನಿಮ್ಮ ಜೊತೆ ಕೆಲಸ ಮಾಡುವ ಕನಸಿದೆ. ನಿಮ್ಮನ್ನು ಭೇಟಿಯಾಗಿರೋದು ಕನಸು ನನಸಾದಂತೆ ಆಗಿದೆ. ನಿಮ್ಮ ಬೆಂಬಲದ ಮಾತುಗಳು ಖುಷಿ ಕೊಟ್ಟಿದೆ ಎಂದು ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸುದೀಪ್ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ರೆ, ಮಗಳು ಗಾಯಕಿಯಾಗಿ ಗುರುತಿಸಿಕೊಳ್ಳುವ ಹಂತದಲ್ಲಿದ್ದಾರೆ. ಅದ್ಭುತವಾಗಿ ಹಾಡುವ ಸಾನ್ವಿ ಇದೀಗ ‘ಜಿಮ್ಮಿ’ ಸಿನಿಮಾದ ಮೂಲಕ ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಿತರಾಗುತ್ತಿದ್ದಾರೆ.

Read More

ಮದುವೆಯಾದ ಬಳಿಕ ಬಾಲಿವುಡ್ ಬ್ಯೂಟಿ ನಟಿ ಪ್ರೀತಿ ಜಿಂಟಾ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಐಪಿಎಲ್ ಕಾರಣದಿಂದ ಆಗಾಗ ಭಾರತಕ್ಕೆ ಭೇಟಿ ನೀಡುತ್ತಿರುವ ನಟಿ ಇದೀಗ ಹಲವು ವರ್ಷಗಳ ಬಳಿಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ‘ಗದರ್ 2’ ಸಿನಿಮಾದ ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ನೀಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದ ಖ್ಯಾತ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಸಂದರ್ಭದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ ಚಿತ್ರದ ಮೂಲಕ ತೆರೆ ಮೇಲೆ ಮೋಡಿ ಮಾಡಲು ಜೋಡಿ ಒಂದಾಗಿದೆ.

Read More

ಇಂದು ವರನಟ ಡಾ.ರಾಜ್‌ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ರಾಜ್‌ಕುಮಾರ್ ಪುತ್ರಿ ವಂದಿತಾಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಹೊನ್ನವಳ್ಳಿ ಕೃಷ್ಣ ಕೂಡ ಭಾಗಿಯಾಗಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು.  ಡಾ.ರಾಜ್ ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಅಭಿಮಾನಿಗಳು ನಾನಾ ರೀತಿಯ ಸಿದ್ಧತೆಯನ್ನು ಹಮ್ಮಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.

Read More

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಿರ್ದೇಶಕ ಪ್ರಶಾಂತ್​ ನೀಲ್ ಇತ್ತೀಚೆಗೆ ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವಿಜಯ್ ನಿವಾಸದಲ್ಲಿ ನಡೆದಿದ್ದು, ಭೇಟಿಯ ಬಳಿಕ ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ. ಚಿತ್ರರಂಗದಲ್ಲಿ ಯಾರೂ ಕೂಡ ಕಾರಣ ಇಲ್ಲದೇ ಒಬ್ಬರನ್ನೊಬ್ಬರು ಭೇಟಿ ಆಗುವುದಿಲ್ಲ. ಈಗ ಪ್ರಶಾಂತ್​ ನೀಲ್ ಹಾಗೂ ವಿಜಯ್​ ದೇವರಕೊಂಡ ನಡುವಿನ ಭೇಟಿಯ ಹಿಂದೆ ಇರುವ ಉದ್ದೇಶ ಏನು ಎಂಬ ಪ್ರಶ್ನೆ ಮೂಡಿದೆ. ಅಂದುಕೊಂಡಂತೆ ಆಗಿದ್ದರೆ ಸಲಾರ್ 2 ಸಿನಿಮಾ ಶುರುವಾಗಬೇಕಿತ್ತು. ಇದಾದ ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಪ್ರಶಾಂತ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಇವೆರಡೂ ಸಿನಿಮಾ ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದರಿಂದ ವಿಜಯ್ ಭೇಟಿ ಕುತೂಹಲ ಮೂಡಿಸಿದೆ. ಹಲವು ಸಾಧ್ಯತೆಗಳ ಬಗ್ಗೆ ನೆಟ್ಟಿಗರು ಊಹಿಸುತ್ತಿದ್ದಾರೆ. ‘ಸಲಾರ್​ 2’ ಸಿನಿಮಾದಲ್ಲಿ ಅಥವಾ ಜೂನಿಯರ್​ ಎನ್​ಟಿಆರ್​ ಜೊತೆಗಿನ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರಿಗೂ…

Read More

ಅಮೆರಿಕದ ವಾಷಿಂಗ್ಟನ್ ನಗರದ ಬಳಿ ವೆಸ್ಟ್ ರಿಚ್ಲಂಡ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಆರೋಪಿ ಪರಾರಿಯಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಸಂಜೆ ಶಾಲೆಯಿಂದ ಮಕ್ಕಳು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಾಲೆಯ ಕಂಪೌಂಡ್ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗುಂಡೇಟಿನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಗುಂಡು ಹಾರಿದ ಬಳಿಕ ಶಾಲೆಯ ಕ್ಯಾಂಪಸ್ ಅನ್ನು ಮುಚ್ಚಲಾಗಿದ್ದು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಪರಾರಿಯಾಗಿರುವ ಆರೋಪಿ ಮಾಹಿತಿ ಲಭಿಸಿದ್ದು ಆತನ ಮನೆಯನ್ನೂ ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Read More

ರಶ್ಯದ ವೈಮಾನಿಕ ದಾಳಿಯಿಂದ ಉಕ್ರೇನ್‍ನ ಖಾರ್ಕಿವ್ ನಗರದಲ್ಲಿದ್ದ 240 ಮೀಟರ್ ಎತ್ತರದ ಟಿವಿ ಗೋಪುರ ನೆಲಸಮಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಖಾರ್ಕಿವ್ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ರಶ್ಯ ದಾಳಿ ನಡೆಸುತ್ತಿದೆ. ರಶ್ಯದ ಕ್ಷಿಪಣಿ ದಾಳಿಯಲ್ಲಿ 240 ಮೀಟರ್ ಎತ್ತರದ ಟಿವಿ ಗೋಪುರ ಮುರಿದು ಬಿದ್ದಿದ್ದು ನಗರಕ್ಕೆ ಡಿಜಿಟಲ್ ಟಿವಿ ಸಿಗ್ನಲ್ ಕಡಿತಗೊಂಡಿದೆ. ಕಾರ್ಮಿಕರು ಶೆಲ್ಟರ್‍ನಲ್ಲಿ ಇದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲ ದಿನಗಳ ಹಿಂದೆ ಇಂಟರ್‍ನೆಟ್ ವ್ಯವಸ್ಥೆಗೂ ರಶ್ಯದ ದಾಳಿಯಿಂದ ಹಾನಿಯಾಗಿತ್ತು ಎಂದು ಪ್ರಾದೇಶಿಕ ಗವರ್ನರ್ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ.

Read More

ಎಂಬಿಬಿಎಸ್ ಪದವಿ ಪಡೆಯಲು ವರ್ಷದ ಹಿಂದೆ ಕಿರ್ಗಿಸ್ತಾನಕ್ಕೆ ತೆರಳಿದ್ದ ಆಂಧ್ರಪ್ರದೇಶ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಕಿರ್ಗಿಸ್ತಾನದಲ್ಲಿ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಆಂಧ್ರಪ್ರದೇಶದ ಅನಕಪಳ್ಳಿಯ ಮುದುಗುಲಾ ಗ್ರಾಮದವರು ದಾಸರಿ ಚಂದು (21) ಮೃತ ವಿದ್ಯಾರ್ಥಿ. ಎರಡನೇ ವರ್ಷದ ಪರೀಕ್ಷೆ ಮುಗಿಸಿದ ದಾಸರಿ ಚಂದು ಬಳಿಕ ಸ್ನೇಹಿತರ ಜೊತೆ ವಿಹಾರಕ್ಕೆ ತೆರಳಿದ್ದರು. ಆದರೆ ಚಂದು ಹೆಪ್ಪುಗಟ್ಟಿದ ಜಲಪಾತದ ಮಂಜುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ. ಕಿರ್ಗಿಸ್ತಾನದ ಅಧಿಕಾರಿಗಳು, ವಿದ್ಯಾರ್ಥಿಯ ಪೋಷಕರಿಗೆ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಪೋಷಕರು ಅನಕಪಳ್ಳಿ ಸಂಸದ ಬಿ.ವೆಂಕಟ ಸತ್ಯವತಿಯವರ ನೆರವು ಕೋರಿದ್ದಾರೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಕೂಡಾ ಈ ಬಗ್ಗೆ ಎಂಇಎ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Read More

ವಾಹನಗಳಿಗೆ ಹೈಸೆಕ್ಯುರಿಟಿ ನಂಬ‌ರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿರುವ ಗಡುವನ್ನು ಮತ್ತೆ ವಿಸ್ತರಣೆ ಮಾಡುವ ಅವಕಾಶ ಇಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಕಳೆದ ವರ್ಷ ನವೆಂಬರ್ ಮತ್ತು ಈ ಫೆಬ್ರವರಿಯಲ್ಲಿ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದ್ದು ಇನ್ನು ಮುಂದೆ ಆದನ್ನು ವಿಸ್ತರಿಸಲು ಚಿಂತನೆ ನಡೆಸಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್‌ & ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ. ರಾಜ್ಯ ಸರ್ಕಾರವು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ.31ರವರೆಗೆ ಅವಕಾಶ ನೀಡಿದೆ. ರಾಜ್ಯ ಸಾರಿಗೆ ಇಲಾಖೆ ಮೇ. 31ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂ. 1 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್…

Read More

ಇದುವರೆಗೂ ನಿಮ್ಮ ಹೆಸರಿನಲ್ಲಿ ಸೈಟ್ ಅಥವಾ ಜಮೀನು ಇದ್ದರೆ ಯಾರ ಅನುಮತಿಯೂ ಹೊಂದುವ ಅವಶ್ಯಕತೆ ಇರಲಿಲ್ಲ. ಆದರೆ ಈಗ ಸರ್ಕಾರ ಈ ನಿಯಮವನ್ನ ಕೊಂಚ ಬದಲಾಯಿಸಿದೆ. ಒಂದು ವೇಳೆ ನೀವು ಕಮರ್ಷಿಯಲ್ ಸೈಟ್ ನಲ್ಲಿ ಮನೆ ನಿರ್ಮಿಸಲಾಗ್ತಿದ್ರೆ ,ನೀವು ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಒಂದು ವೇಳೆ ಜಮೀನಿನಲ್ಲಿ ಮನೆ ಕಟ್ಟಬೇಕು ಎಂದುಕೊಂಡಿದ್ದರೆ ಸರ್ಕಾರದ ಅನುಮತಿ ಕಡ್ಡಾಯವಾಗುತ್ತೆ. ಜಮೀನಿನಲ್ಲಿ ಮನೆ ನಿರ್ಮಿಸಬೇಕು ಎಂಬ ಕನಸು ಕಂಡಿರುವವರು ಎರಡು ಬಗೆಯ ಮಂದಿ ಇರುತ್ತಾರೆ. ಒಂದು ತಮಗೆ ಇರುವ ಜಾಗದಲ್ಲೇ ಹೇಗೋ ಸಣ್ಣಸೂರು ನಿರ್ಮಿಸಿಕೊಳ್ಳೋಣ ಎನ್ನುವರು, ಮತ್ತೊಂದು ಒಂದು ತೋಟದ ಮನೆ ಸ್ವರೂಪದಲ್ಲಿ ಜಮೀನಿನಲ್ಲಿ ಒಂದು ಮನೆ ಇರಲಿ ಅಂತ ಮನೆ ನಿರ್ಮಾಣ ಮಾಡುವುದಕ್ಕೆ ಮುಂದಾಗುವವರು. ಆದರೆ ಇನ್ನು ಮುಂದೆ ನೀವು ನಿಮ್ಮದೇ ಜಮೀನಿನಲ್ಲಿ ಮನೆ ನಿರ್ಮಿಸಬೇಕು ಅಂದ್ರೂ, ಅದಕ್ಕೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಫಲವತ್ತಾದ ಕೃಷಿ ಭೂಮಿಗಳನ್ನ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೃಷಿ ಭೂಮಿಯನ್ನು…

Read More

ಬಾಲಿವುಡ್ ನಟ ಶಾಹಿದ್ ಕಪೂರ್ ಇತ್ತೀಚೆಗೆ ಪತ್ನಿ ಮೀರಾ ಅವರೊಂದಿಗೆ ಡಿನ್ನರ್ ಗಾಗಿ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಈ ವೇಳೆ ಮೀರಾ ಫೋಟೋ ತೆಗೆಯಲು ಬಂದ ಪಾಪಾರಾಜಿಗಳ ಮೇಲೆ ಶಾಹಿದ್ ಗರಂ ಆಗಿದ್ದಾರೆ. ಬಿಡುವಿನ ವೇಳೆ, ಮುಂಬೈನ ಖಾಸಗಿ ಹೋಟೆಲ್‌ವೊಂದರಲ್ಲಿ ಪತ್ನಿ ಜೊತೆ ಶಾಹಿದ್ ಊಟ ಸವಿದಿದ್ದಾರೆ. ಬಳಿಕ ಹೋಟೆಲ್‌ನಿಂದ ಹೊರಬರುವಾಗ ಪಾಪರಾಜಿಗಳು ಫೋಟೋಗಾಗಿ ಮುಗಿಬಿದ್ದಿದ್ದಾರೆ. ಇದು ನಟನಿಗೆ ಕಿರಿಕಿರಿ ಆಗಿದೆ. ಬಳಿಕ ಪತ್ನಿ ಫೋಟೋ ತೆಗೆಯಲು ಬಂದಿದ್ದು ನಟನಿಗೆ ಕೋಪ ತರಿಸಿದೆ. ನೀವು ಫೋಟೋ ತೆಗೆಯುವುದನ್ನು ನಿಲ್ಲಿಸುತ್ತೀರಾ ಎಂದು ಕೂಗಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಶಾಹಿದ್ ಹಾಗೂ ಕೃತಿ ಸನೋನ್ ನಟನೆಯ ‘ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶಾಹಿದ್ ನಟನೆ ಮತ್ತು ಚಿತ್ರಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರದ ಬಳಿಕ ಪೂಜಾ ಹೆಗ್ಡೆ ಜೊತೆ ‘ದೇವ’ ಸಿನಿಮಾದಲ್ಲಿ ನಟಿಸಿದ್ದು…

Read More