Author: Author AIN

ನಟ ದರ್ಶನ್ ಹಾಗೂ ಸಂಗಡಿಗರಿಂದ ಭೀಕರವಾಗಿ ಹತ್ಯೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮನೆಗೆ ಇಂದು ಚಲನ ಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಭೇಟಿ ನೀಡಲಿದ್ದಾರೆ. ರೇಣುಕಾಸ್ವಾಮಿ ಪೋಷಕರು ಹಾಗೂ ಪತ್ನಿಗೆ ಸಾಂತ್ವಾನ ನೀಡಲು ತೆರಳಿದ್ದಾರೆ. ಸಾರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ ಸೇರಿದಂತೆ 15ಕ್ಕೂ ಹೆಚ್ಚು ಸದಸ್ಯರು ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರೋಪಿ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ ಸುರೇಶ್ ಜೂ.13ರಂದು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದು…

Read More

ಕೆಲ ದಿನಗಳ ಹಿಂದೆ ಬಾಲಿವುಡ್​ ನಟಿ ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ಕಾರು ದಾರಿ ಹೋಕರಿಗೆ ಡಿಕ್ಕಿ ಹೊಡೆದಿತ್ತು ಎಂದು ಸುದ್ದಿಯಾಗಿತ್ತು. ಈ ವೇಳೆ ರವೀನಾ ಮೇಲೆ ಕೆಲವರು ಹಲ್ಲೆ ಮಾಡಿದ್ದರು. ಆ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ವಿಡಿಯೋ ಹಂಚಿಕೊಂಡ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕ್ಕದ್ದಮ್ಮೆ ಹೂಡಲಾಗಿದೆ. ಕೇವಲ ರವೀನಾ ಟಂಡನ್​ ಅವರ ವಿಡಿಯೋವನ್ನು ಪೋಸ್ಟ್​ ಮಾಡಿದ್ದಕ್ಕೆ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ಆ ವಿಡಿಯೋದ ಜೊತೆ ನೀಡಿದ ಕ್ಯಾಪ್ಷನ್​ನಿಂದ ನಟಿಗೆ ಸಿಟ್ಟು ಬಂದಿದೆ. ರವೀನಾ ಟಂಡನ್​ ಅವರು ಮದ್ಯಪಾನ ಮಾಡಿದ್ದಾರೆ, ರ್ಯಾಶ್​ ಡ್ರೈವಿಂಗ್​ ಮಾಡಿದ್ದಾರೆ ಹಾಗೂ ಜನರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕ್ಯಾಪ್ಷನ್​ನಲ್ಲಿ ಆರೋಪಿಸಲಾಗಿತ್ತು. ರವೀನಾ ಟಂಡನ್​ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್​ ವಿಡಿಯೋವನ್ನು ಡಿಲೀಟ್​ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್​ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ…

Read More

ಬಾಲಿವುಡ್​ನ ಖ್ಯಾತ ನಟ ಆಮಿರ್ ಖಾನ್ ಪುತ್ರ ಜುನೈದ್​ ಖಾನ್​ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಜುನೈದ್ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ‘ಮಹಾರಾಜ್​​’ ಜೂನ್​ 14ರಂದು ತೆರೆ ಕಾಣಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ ಗುಜರಾತ್​ ಹೈಕೋರ್ಟ್​ ತಡೆ ನೀಡಿದೆ. ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಬೇಕಿದ್ದ ಈ ಸಿನಿಮಾಗೆ ಕಾನೂನಿನ ತೊಡಕು ಉಂಟಾಗಿದೆ. ಆದ್ದರಿಂದ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ‘ಮಹಾರಾಜ್​’ ಚಿತ್ರತಂಡ ನಿರ್ಧರಿಸಿದೆ. ನೈಜ ಘಟನೆಯನ್ನು ಆಧರಿಸಿ ಸೌರಭ್​ ಶಾ ಬರೆದ ‘ಮಹಾರಾಜ್​’ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಯಾರ ಧಾರ್ಮಿಕ ಭಾವನೆಗಳಿಗೂ ಹಾನಿ ಆಗುವಂತಹ ಅಂಶಗಳು ಇಲ್ಲ ಎಂದು ಕೃತಿಯ ಲೇಖಕ ಸೌರಭ್​ ಶಾ ಹೇಳಿದ್ದಾರೆ. ಹಾಗಿದ್ದರೂ ಕೂಡ ‘ಮಹಾರಾಜ್​’ ಚಿತ್ರದ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ‘ಮಹಾರಾಜ್​’ ಸಿನಿಮಾಗೆ ಬಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯಶ್​ ರಾಜ್​ ಫಿಲ್ಮ್ಸ್​’ ಬಂಡವಾಳ ಹೂಡಿದೆ. ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಇದೆ ಎನ್ನುವಾಗ ಗುಜರಾತ್​ ಹೈಕೋರ್ಟ್​ನಿಂದ ತಡೆ ಬಂದಿರುವುದರಿಂದ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎಂಡ್ ಟೀಂ ಪೊಲೀಸ್ ಠಾಣೆಯಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಪೊಲೀಸರು ಸಾಕಷ್ಟು ವಿಚಾರಣೆ ನಡೆಸಿದ್ದು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ನಟನೆಯ ‘ರಾಬರ್ಟ್’ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತು. ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ ಹೊರತಾಗಿಯೂ ಇಬ್ಬರ ಮಧ್ಯೆ ಕಲಹ ಏರ್ಪಟ್ಟಿತ್ತು. ಇಬ್ಬರೂ ಓಪನ್ ಆಗಿ ಕಿತ್ತಾಡಿಕೊಂಡರು. ‘ಕಾಟೇರ ಟೈಟಲ್ ಕೊಟ್ಟಿದ್ದು ನಾನು’ ಎಂದು ಹೇಳೋ ಮೂಲಕ ಉಮಾಪತಿ ಸುದ್ದಿ ಆದರು. ಇದರಿಂದ ಸಿಟ್ಟಾದ ದರ್ಶನ್ ಅವರು ವೇದಿಕೆ ಮೇಲೆಯೇ ಉಮಾಪತಿಗೆ ತಗಡು ಎಂಬ ಪದ ಬಳಕೆ ಮಾಡಿದ್ದರು. ಈ ಹೇಳಿಕೆ ಬಳಿಕ ದರ್ಶನ್ ಹಾಗೂ ಉಮಾಪತಿ ನಡುವೆ ಸಾಕಷ್ಟು ವಾಗ್ವಾದಗಳು ನಡೆದಿತ್ತು. ದರ್ಶನ್ ಅವರ ಈ ಹೇಳಿಕೆಗೆ ಉಮಾಪತಿ ಅವರು ಅಂದು ಉತ್ತರ ಕೊಟ್ಟಿದ್ದರು. ‘ಇವತ್ತು ನಾನು ತಗಡಿರಬಹುದು. ಮುಂದೊಂದು ದಿನ ನಾನು…

Read More

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಸೆಮಣೆ ಏರಲು ಸಜ್ಜಾಗಿದ್ದಾರೆ.  ನಟ ಝಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ಮುಂದಾಗಿದ್ದಾರೆ. ಆದರೆ ಸೋನಾಕ್ಷಿ ನಟ ಝಹೀರ್ ಅವರನ್ನು ಮದುವೆಯಾಗುತ್ತಿರುವ ಬಗ್ಗೆ ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ. ಈ ಬಗ್ಗೆ ನಟಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೋನಾಕ್ಷಿ ಹಾಗೂ ಇಕ್ಬಾಲ್ ಜೂನ್ 23ರಂದು ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ ಎಂದು ಖಚಿತ ಮೂಲಗಳು ಮಾಹಿತಿ ನೀಡಿವೆ. 2019ರಲ್ಲಿ ಬಾಲಿವುಡ್‌ಗೆ ಕಾಲಿಟ್ಟ ಜಹೀರ್ ಇಕ್ಬಾಲ್, ವಯಸ್ಸಿನಲ್ಲೂ ಮತ್ತು ಸಿನಿಮಾರಂಗದಲ್ಲಿನ ಅನುಭವದಲ್ಲೂ ಸೋನಾಕ್ಷಿಗಿಂತ ಚಿಕ್ಕವರು. ‘ನೋಟ್‌ಬುಕ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ಜಹೀರ್, ಆನಂತರ 2022ರಲ್ಲಿ ಸೋನಾಕ್ಷಿ ಸಿನ್ಹಾ ಜೊತೆಗೆ ‘ಡಬಲ್‌ ಎಕ್ಸ್ಎಲ್‌’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಿಂದಲೇ ಸೋನಾಕ್ಷಿ ಮತ್ತು ಜಹೀರ್ ನಡುವೆ ಪ್ರೀತಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ನಟ ಝಹೀರ್ ಜೊತೆ ಸೋನಾಕ್ಷಿ ಮದುವೆ ಆಗುತ್ತಿದ್ದಾರೆ ಎನ್ನುತ್ತಿದ್ದಂತೆ ಸೋನಾಕ್ಷಿರನ್ನು ಭಾರೀ ಟ್ರೋಲ್ ಮಾಡಲಾಗಿದೆ. ಅದಕ್ಕೆ ನಟಿ, ನನ್ನ ಮದುವೆ ನನ್ನ…

Read More

“ನನ್ನ ತಮ್ಮ ಅರೆಸ್ಟ್ ಆದ ಸುದ್ದಿ ಕೇಳಿ ತಂದೆ ಸಾಕಷ್ಟು ಚಿಂತೆಯಲ್ಲಿದ್ದು. ಅವನನ್ನು ಬಿಡಿಸಿಕೊಂಡು ಬನ್ನಿ ಎಂದು ಸಾಕಷ್ಟು ಗೋಳಾಡಿದ್ದರು, ಅದೇ ಚಿಂತೆಯಲ್ಲಿ ಕೊನೆಯುಸಿರೆಳೆದರು. ನಿಜಕ್ಕೂ ನನ್ನ ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ, ಬಡವರ ಮಕ್ಕಳೆಂದು ಅವನನ್ನ ಪ್ರಕರಣದಲ್ಲಿ ಸಿಲುಕಿಸಿದ್ದಾರೆ…” ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಂಧನಕೊಳಗಾಗಿರುವ ಅನು ಅಲಿಯಾಸ್ ಅನಿಲ್ ಸಹೋದರಿ ಕಣ್ಣೀರಿಟ್ಟಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ತಮ್ಮ ಅರೆಸ್ಟ್ ಆದ ಸುದ್ದಿ ಕೇಳಿ ನನ್ನ ತಂದೆ ಕಣೀರಿಟ್ಟಿದ್ದರು. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನನ್ನು ಬಿಡಿಸಿಕೊಂಡು ಬನ್ನಿ ಎಂದು ಗೋಳಾಡಿದ್ದರು. ಅದೇ ಚಿಂತೆಯಲ್ಲಿ ಮಲಗಿದವರು ಕೊನೆಯುಸಿರೆಳೆದಿದ್ದಾರೆ. ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ. ಅವನು ನನ್ನ ಬಳಿ ಯಾವುದೇ ವಿಷಯವನ್ನೂ ಮುಚ್ಚಿಟ್ಟವನಲ್ಲ. ಬಡವರ ಮಕ್ಕಳೆಂದು ನನ್ನ ತಮ್ಮನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ನೋವು ತೋಡಿಕೊಂಡರು. ಅನು ನಮ್ಮ ಜೊತೆಯಲ್ಲಿಯೇ ಇದ್ದರೂ ಯಾವುದೇ ವಿಷಯ ಹೇಳಿಲ್ಲ. ಟಿವಿ ನೋಡಿದ ಬಳಿಕವೇ ನಮಗೂ ವಿಷಯ ತಿಳಿದಿದೆ.…

Read More

ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ವಿಚರಣೆಯಲ್ಲಿರುವ ನಟ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಹತ್ಯೆ ಪ್ರಕರಣ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ. ದರ್ಶನ್‍ಗೆ ರಾಜಮರ್ಯಾದೆಯ ಪ್ರಶ್ನೆಯೇ ಇಲ್ಲ. ಆರೋಪಿ ಆರೋಪಿಯೇ, ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ಇಂತಹ ಆರೋಪ ಎದುರಿಸುತ್ತಿರುವಾಗ ಅವರು ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತಂದು ಕೊಲೆ ಮಾಡಲಾಗಿತ್ತು. ಕೊಲೆಯ ಬಳಿಕ ರೇಣುಕಾಸ್ವಾಮಿ ಶವವನ್ನು ಸುಮ್ಮನಹಳ್ಳಿಯ ಮೋರಿಯಲ್ಲಿ ಎಸೆದು ಹೋಗಲಾಗಿತ್ತು. ಸದ್ಯ ಪ್ರಕರಣ ಸಂಬಂಧ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ 18 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Read More

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ದರ್ಶನ್ ಎಂಡ್ ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಬಳಿಕ ಶವವನ್ನು ಸಾಗಿಸಲು ಹಾಗೂ ತನ್ನ ಹೆಸರು ಹೇಳದಿರಲು ನಟ ದರ್ಶನ್ 30 ಲಕ್ಷ ರೂ ಹಣ ನೀಡಿದ್ದರು. ಇದೀಗ ಆ ಹಣವನ್ನು ಪೊಲೀಸರು ಸೀಸ್ ಮಾಡಿದ್ದಾರೆ. ದರ್ಶನ್‌ ಆಪ್ತ ಬಂಧನಕ್ಕೆ ಒಳಗಾಗಿರುವ ಪ್ರದೋಷ್ ಮೂಲಕ ಆರೋಪಿಗಳಿಗೆ ತಲಾ 5 ಲಕ್ಷದಂತೆ ಮೂವತ್ತು ಲಕ್ಷ ನೀಡಿದ್ದರು. ಅದರನ್ನು ಪ್ರದೋಷ್ ಆಪ್ತರೊಬ್ಬರ ಮನೆಯಲ್ಲಿ ಇಟ್ಟಿದ್ದರು. ಇದೀಗ ಪೊಲೀಸರು ಮನೆಗೆ ಮೇಲೆ ದಾಳಿ ನಡೆಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ 30 ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು 5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ…

Read More

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕೊಳಗಾಗಿರುವವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ತಮ್ಮ ಮಕ್ಕಳು ಅಮಾಯಕರು, ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಗಳ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈ ಮಧ್ಯೆ ಪ್ರಕರಣದ  ಆರೋಪಿಗಳಲ್ಲಿ ಒಬ್ಬನಾದ ಅನು ಅಲಿಯಾಸ್​ ಅನುಕುಮಾರ್​ ಮನೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಮಗನ ಬಂಧನದ ಬಳಿಕ ಚಿಂತೆಗೆ ಒಳಾಗಿದ್ದ ಅನುಕುಮಾರ್​ ತಂದೆ ಚಂದ್ರಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಮುಂತಾದವರ ಜೊತೆ 7ನೇ ಆರೋಪಿಗಾಗಿ ಅನು ಅರೆಸ್ಟ್​ ಆಗಿದ್ದಾನೆ. ಇದರಿಂದಾಗಿ ಅವರ ಕುಟುಂಬಕ್ಕೆ ಆಘಾತ ಆಗಿದೆ. ಅದರ ಬೆನ್ನಲ್ಲೇ ಅನು ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ. ಅನುಕುಮಾರ್ ತಂದೆ ಚಂದ್ರಣ್ಣ ಅವರಿಗೆ 60 ವರ್ಷ ವಯಸ್ಸಾಗಿತ್ತು. ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ಅನು ಬಂಧನ ಆಗಿತ್ತು. ಮಗನ ಬಂಧನದ ಬಳಿಕ ಚಂದ್ರಣ್ಣ ಆಘಾತಕ್ಕೆ ಒಳಗಾಗಿದ್ದರು. ಹೀನಾಯ ಕೃತ್ಯದಲ್ಲಿ ಮಗ ಭಾಗಿ ಆಗಿದ್ದಾನೆ ಎಂಬ ಆರೋಪ ಎದುರಾಗಿದ್ದರಿಂದ ಚಂದ್ರಣ್ಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಚಿತ್ರದುರ್ಗದ ಸಿಹಿನೀರು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೈಲು ಸೇರಿದ್ದಾರೆ. ಆ ಬಳಿಕ ದರ್ಶನ್ ಬಗ್ಗೆ ಅನೇಕ ಆರೋಪಗಳು ಕೇಳಿ ಬರ್ತಿದೆ. ದರ್ಶನ್ ನಟ ಅಲ್ಲ ವಿಲನ್ ಎಂದು ಸಾಕಷ್ಟು ಮಂದಿ ಆರೋಪಗಳನ್ನು ಮಾಡ್ತಿದ್ದಾರೆ. ಈ ಮಧ್ಯೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ದರ್ಶನ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ದರ್ಶನ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ರಾ ಅನ್ನೋ ಬಗ್ಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ ಸುಳಿವು ಕೊಟ್ಟಿದ್ದಾರೆ. ದರ್ಶನ್‌ ಅವರನ್ನ ಕಾಂಗ್ರೆಸ್‌ನಿಂದ ನಿಲ್ಲಿಸಲು ಡಿಕೆ ಬ್ರದರ್ಸ್‌ ಸಿದ್ಧತೆ ನಡೆಸಿದ್ದರು ಎಂದಿದ್ದಾರೆ. ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಹಾಕ್ತೇವೆ ಎಂದಿದ್ದ ಡಿ.ಕೆ ಸುರೇಶ್ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನವರ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ ಬ್ರದರ್ಸ್ ಪ್ಲ್ಯಾನ್‌ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನೀವೆ ಊಹೆ ಮಾಡಿಕೊಳ್ಳಿ ಎಂದು…

Read More