Author: Author AIN

ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿದ್ದ ಮಂಗಳೂರಿನಿಂದ ಲಕ್ಷದ್ವೀಪ ಪ್ರಯಾಣಿಕ ಹಡಗು ಪುನರಾರಂಭಗೊಂಡಿದೆ. ಇದರ ಅಂಗವಾಗಿ, ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಮೊದಲ ಹೈಸ್ಪೀಡ್ ಪ್ರಯಾಣಿಕ ಹಡಗು ಎಂಎಸ್‌ವಿ ಪ್ಯಾರಾಲಿ ಮೇ 2ರಂದು ಗುರುವಾರ ಆಗಮಿಸಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಸೇವೆಯನ್ನು ಪುನರಾರಂಭಿಸುವ ಭರವಸೆ ಪ್ರವಾಸಿಗರಲ್ಲಿತ್ತು. ಲಕ್ಷದ್ವೀಪದಿಂದ ಹಳೆ ಬಂದರಿಗೆ 150 ಪ್ರಯಾಣಿಕರು, 8 ಕಾರ್ಮಿಕರು ಮತ್ತು 3 ಸಿಬ್ಬಂದಿ ಪ್ರಯಾಣಿಕ ಹಡಗಿನಲ್ಲಿ ಬಂದರು. ಮಾಜಿ ಶಾಸಕ ಜೆ.ಆರ್.ಲೋಬೊ ಬಂದರಿನಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಲಕ್ಷದ್ವೀಪಕ್ಕೆ ಮರಳಲಿದೆ. ಈ ಮೊದಲು ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನ ಪ್ರಯಾಣಕ್ಕೆ 13 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು ಆದರೆ ಈಗ ಹೈ-ಸ್ಪೀಡ್ ಹಡಗು ಕೇವಲ 7 ಗಂಟೆ ತೆಗೆದುಕೊಳ್ಳುತ್ತದೆ. ಪ್ರಯಾಣದ ದರ 450 ರೂ. ಇದೆ. ಲಕ್ಷದ್ವೀಪದಿಂದ ನೇರವಾಗಿ ಮಂಗಳೂರಿಗೆ ಪ್ರಯಾಣಿಸಿದ್ದು ಸಂತಸ ನೀಡಿದೆ. ಹಡಗು ಇಲ್ಲದಿದ್ದರೆ ನಾವು ಕೊಚ್ಚಿಗೆ ಪ್ರಯಾಣಿಸಿ ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ತಲುಪಬೇಕಾಗಿತ್ತು.…

Read More

ಗಾಝಾ ಪಟ್ಟಿಯಲ್ಲಿ ಬಾಂಬ್‍ ದಾಳಿಯಿಂದ ನಾಶಗೊಂಡಿರುವ ಮನೆಗಳನ್ನು ಮರು ನಿರ್ಮಿಸುವ ಕಾರ್ಯ ಮುಂದಿನ ಶತಮಾನಕ್ಕೂ ವಿಸ್ತರಿಸಬಹುದು ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಿದೆ. ಗಾಝಾದಲ್ಲಿ ಈ ಹಿಂದಿನ ಘರ್ಷಣೆಗಳ ಪ್ರವೃತ್ತಿಗಳನ್ನು ಗಮನಿಸಿದರೆ, ಅಕ್ಟೋಬರ್ 7ರಿಂದ ಮುಂದುವರಿದಿರುವ ಯುದ್ಧದಲ್ಲಿ ಹಾನಿಗೊಂಡಿರುವ ಮನೆಗಳನ್ನು ಮರು ನಿರ್ಮಿಸಲು ಕನಿಷ್ಠ 80 ವರ್ಷ ಬೇಕಾಗಬಹುದು. ಗಾಝಾ ಪಟ್ಟಿಯ ಮೇಲೆ ಸುಮಾರು 7 ತಿಂಗಳಿಂದ ಮುಂದುವರಿದಿರುವ ಬಾಂಬ್ ದಾಳಿಯಿಂದಾಗಿ ಕೋಟ್ಯಂತರ ಡಾಲರ್ ನಷ್ಟ ಸಂಭವಿಸಿದ್ದು ಜನನಿಬಿಡ ಪ್ರದೇಶದ ಬಹುತೇಕ ಬಹುಮಹಡಿ ಕಟ್ಟಡಗಳು ನೆಲಸಮಗೊಂಡಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಹೋರಾಟಗಾರರು ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತೀಕಾರ ದಾಳಿಯಲ್ಲಿ ಸುಮಾರು 80,000 ಮನೆಗಳು ನಾಶಗೊಂಡಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಹಾನಿಗೊಂಡಿರುವ ಎಲ್ಲಾ ಮನೆಗಳ ಮರುನಿರ್ಮಾಣಕ್ಕೆ ಸುಮಾರು 80 ವರ್ಷ ಬೇಕಾಗಬಹುದು. ಆದರೆ, ನಿರ್ಮಾಣ ಕಾಮಗಾರಿಗೆ ವಸ್ತುಗಳನ್ನು ಐದು ಪಟ್ಟು ಕ್ಷಿಪ್ರವಾಗಿ ಪೂರೈಸಿದರೆ 2040ರ ಒಳಗೆ…

Read More

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇತರ 20 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ದುಕ್ಕಿ ಜಿಲ್ಲೆಯಲ್ಲಿ ಕಲ್ಲಿದ್ದಲು ತುಂಬಿದ್ದ ಲಾರಿಯೊಂದು ನೆಲಬಾಂಬ್‍ಗೆ ಡಿಕ್ಕಿಯಾಗಿ ಮೊದಲ ಸ್ಫೋಟ ಸಂಭವಿಸಿದ್ದರೆ, ಸ್ಫೋಟದ ಸ್ಥಳದಲ್ಲಿ ಜನರು ಸೇರಿದಾಗ ದೂರ ನಿಯಂತ್ರಕ ಸಾಧನ ಬಳಸಿ ಎರಡನೇ ಸ್ಫೋಟ ನಡೆಸಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ `ಕ್ಸಿನ್‍ಹುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ. ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಹಾಗೂ ಗಣಿ ಕೆಲಸಗಾರರು ಸಾವನ್ನಪ್ಪಿದವರಲ್ಲಿ ಮತ್ತು ಗಾಯಗೊಂಡವರಲ್ಲಿ ಸೇರಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಭದ್ರತಾ ಪಡೆಗಳು ಪ್ರದೇಶದಲ್ಲಿ ನಾಕಾಬಂದಿ ನಡೆಸಿದ್ದು ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Read More

ಒಂದು ಕಾಲದಲ್ಲಿ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಹಾಗೂ ಸ್ವರಾ ಭಾಸ್ಕರ್ ಒಟ್ಟೊಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮೊದ ಮೊದಲು ಉತ್ತಮ ಬಾಂದವ್ಯ ಹೊಂದಿದ್ದ ನಟಿಯರು ಬರು ಬರುತ್ತಾ ಹಾವು ಮುಂಗುಸಿಗಳಂತಾದರು. ಆ ಕಿತ್ತಾಟ ಈಗಲೂ ಮುಂದುವರೆದಿದೆ. ಕಂಗನಾ ಈಗ ಲೋಕಸಭಾ ಕಣದಲ್ಲಿ ಇದ್ದಾರೆ. ಅದಕ್ಕೂ ಮುನ್ನ ಆಡಳಿತ ಪಕ್ಷದ ಪರವಾಗಿ ಸಾಕಷ್ಟು ಮಾತನಾಡಿದ್ದಾರೆ. ಈ ಕುರಿತಂತೆ ಸ್ವರಾ ಅಪಸ್ವರ ಎತ್ತಿದ್ದಾರೆ. ಸಂದರ್ಶನವೊಂದರಲ್ಲಿ ಸ್ವರಾ ಭಾಸ್ಕರ್ ತಮಗೂ ಹಾಗೂ ಕಂಗನಾಗೂ ಇರುವ ವ್ಯತ್ಯಾಸವನ್ನು ಹೇಳಿಕೊಂಡಿದ್ದಾರೆ.  ಕಂಗನಾ ಎಂದಿಗೂ ಆಡಳಿತ ಸರಕಾರದ ವಿರೋಧವಾಗಿ ಮಾತನಾಡಲ್ಲ. ಅವರು ಯಾವಾಗಲೂ ಪರವಾಗಿಯೇ ಇರುತ್ತಾರೆ. ನಾನು ಹಾಗಲ್ಲ, ಜನರ ಪರವಾಗಿ ನಿಂತುಕೊಳ್ಳುತ್ತೇನೆ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವರಾ ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡುತ್ತಲೆ ಇರುತ್ತಾರೆ. ಇತ್ತೀಚೆಗೆ ಪ್ರಜ್ವಲ್ ರೇವರಣ್ಣ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದ ನಟಿ, ಅಪರಾಧಿ ಮುಸ್ಲಿಂ ಆಗಿದ್ದರೆ ಮಾತ್ರ ಮಹಿಳಾ ರಕ್ಷಣೆ ಬಗ್ಗೆ ಜನರು ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಪ್ರಕರಣದ ವಿಶ್ಲೇಷಣೆ…

Read More

ಐ ಪಿ ಎಲ್ ಪಂದ್ಯದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ ನಟ ಕಿಚ್ಚ ಸುದೀಪ್‌ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದೆ. ಆ ಉಡುಗೊರೆ ನೀಡಿ ಖುಷಿಪಟ್ಟ ಕಿಚ್ಚ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕಡುನೀಲಿ ಮತ್ತು ತಿಳಿಗೆಂಪು ಮಿಶ್ರಿತ ಬಣ್ಣದ ಜೆರ್ಸಿಯನ್ನು ರಾಯಸ್ಥಾನ್ ರಾಯಲ್ಸ್ ತಂಡ ಸುದೀಪ್ ಅವರಿಗೆ ನೀಡಿದೆ. ಜೆರ್ಸಿ ಹಿಂಭಾಗದಲ್ಲಿ ಸುದೀಪ್‌ ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಜೆರ್ಸಿ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದೊಂದಿಗೆ ಮೊದಲಿನಿಂದಲೂ ಸುದೀಪ್‌ ಅವಿನಾಭಾವ ಸಂಬಂಧ ಹೊಂದಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡ ಈ ಹಿಂದೆಯೂ ಕಿಚ್ಚ ಸುದೀಪ್‌ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿತ್ತು. ಸುದೀಪ್‌ ಅವರಿಗೆ ವಿಶೇಷ ಜೆರ್ಸಿಯೊಂದಿಗೆ ವಿಶ್‌ ಕಾರ್ಡ್‌ ಮಾಡಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು.ಕ್ರಿಕೆಟ್‌ ಎಂದರೆ ಸುದೀಪ್‌ಗೆ ತುಂಬಾ…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ಸೀಕ್ವೆಲ್ ಬರುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ನಾನು ಆ ರೀತಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಥಿಯೇಟರ್ ನಲ್ಲಿ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದ್ದು, ಓಟಿಟಿಯಲ್ಲೂ ಕಮಾಲ್ ಮಾಡ್ತಿದೆ. ಶತದಿನೋತ್ಸವ ಕೂಡ ಆಚರಿಸಿಕೊಂಡಿದೆ. ಹಾಗಾಗಿ ಕಾಟೇರ 2 ಸಿನಿಮಾ ಬರತ್ತಾ ಎನ್ನುವ ಕೆಟ್ಟ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ನಾನು ಗೆದ್ದಿತ್ತಿನ ಬಾಲ ಹಿಡಿಯೋದಿಲ್ಲ. ಹಾಗಾಗಿ ಕಾಟೇರ 2 ಬರಲ್ಲ ಎಂದಿದ್ದಾರೆ. ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಕಾಟೇರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿಕೊಟ್ಟ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಗೂ ದೊಡ್ಡ ಹೆಸರು ನೀಡಿತ್ತು. ಕಥೆ ಬರೆದ…

Read More

ಸ್ಯಾಂಡಲ್‌ವುಡ್ ನಟಿ ಸಾನ್ಯ ಅಯ್ಯರ್ ನವ ವಧುವಿನಂತೆ ಸಿಂಗಾರಗೊಂಡಿದ್ದಾರೆ. ರಾಯಲ್ ಲುಕ್‌ನಲ್ಲಿ ಕಂಗೊಳಿಸುತ್ತಿರುವ ಸಾನ್ಯರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಲೆಹಂಗಾದಲ್ಲಿ ಸಾನ್ಯ ವಧುವಿನಂತೆಯೇ ಕಂಗೊಳಿಸಿದ್ದಾರೆ. ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಇದೀಗ ಬ್ರೈಡಲ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ. ‘ಬಿಗ್ ಬಾಸ್’ ಕಾರ್ಯಕ್ರಮದ ಬಳಿಕ ಸಾಕಷ್ಟು ಖ್ಯಾತಿ ಘಳಿಸಿದ ಸಾನ್ಯಾ ‘ಗೌರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ನಟಿಸಿದ್ದು, ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದಾರೆ.

Read More

ಖ್ಯಾತ ಸಂಗೀತ ನಿರ್ದೇಶಕರ ಮೆಚ್ಚುಗೆಗೆ ಪಾತ್ರರಾಗಿದ್ದ, ಹೊಸ ಹೊಸ ಆಲೋಚನೆಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ್ದ ತಮಿಳಿನ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್  ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರವೀಣ್ ಕುಮಾರ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೇಡಗು, ರಾಕಥಾನ್ ನಂತಹ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಅನಿಸಿಕೊಂಡಿದ್ದರು ಪ್ರವೀಣ್. ಇವರ ಪ್ರತಿಭೆಗೆ ಕೈ ತುಂಬಾ ಅವಕಾಶಗಳು ಇದ್ದವು. ಆದರೆ, ಆರೋಗ್ಯ ಕೈ ಕೊಟ್ಟ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಖಾಸಗಿ ಆಸ್ಪತ್ರೆಯ ನಂತರ ಅವರನ್ನು ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಚಿಕಿತ್ಸೆ ಫಲಕಾರಿಯಾಗಿ ಬೆಳಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ. ಪ್ರವೀಣ್ ಕುಮಾರ್ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರೋದ್ಯಮದವರು ಕಂಬನಿ ಮಿಡಿದಿದ್ದಾರೆ.

Read More

ಕೋವಿಡ್ ಸಂದರ್ಭದಲ್ಲಿ ನೀಡಲಾದ ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲೆ ಕೆಲವು ಅಪರೂಪದ ಪ್ರಕರಣದಲ್ಲಿ ಅಡ್ಡಪರಿಣಾಮ ಉಂಟಾಗಲಿದೆ ಎಂದು ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಒಪ್ಪಿಕೊಂಡಿದೆ. ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಈಗ ಎರಡನ್ನೂ ಲಿಂಕ್ ಮಾಡುವ ಕೆಲಸ ಆಗುತ್ತಿದೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಕುರಿತ ಪೋಸ್ಟ್ ಒಂದು ವೈರಲ್ ಆಗಿದೆ. ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರು ಹೃದಯಾಘಾತಕ್ಕೆ ಒಳಪಟ್ಟು ಮೃತಪಟ್ಟರು. ಸಖತ್ ಫಿಟ್ ಆಗಿದ್ದ ಅವರು ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಕೋವಿಶೀಲ್ಡ್ ತೆಗೆದುಕೊಂಡಿದ್ದರಿಂದಲೇ ಪುನೀತ್​ಗೆ ಹೃದಯಾಘಾತ ಆಯಿತು ಎಂದು ಕೆಲವರು ಆರೋಪಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರು 2021ರ ಏಪ್ರಿಲ್ 7ರಂದು ವ್ಯಾಕ್ಸಿನ್ ಪಡೆದಿದ್ದಾಗಿ ಪೋಸ್ಟ್ ಮಾಡಿದ್ದರು. ‘ನೀವು 45 ವರ್ಷ ಮೇಲ್ಪಟ್ಟಿದ್ದರೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ’ ಎಂದು ಮನವಿ ಮಾಡಿದ್ದರು. ಇದಕ್ಕೆ ಬೃಂದಾವನಾ ಹೆಸರಿ ಖಾತೆಯಿಂದ ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದರು. ‘ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ. 45…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ ಸೂಪರ್ ಹಿಟ್ ಆಗಿದೆ.ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಕಾಟೇರ ಇದೀಗ 100 ದಿನಗಳನ್ನು ಪೂರೈಸಿದ ಖುಷಿಯಲ್ಲಿದೆ. ಈ ಖುಷಿಯನ್ನು ಚಿತ್ರತಂಡ ವಿಶೇಷವಾಗಿ ಸಂಭ್ರಮಿಸುತ್ತಿದೆ.  ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಅನಿಸಿಕೊಂಡ ಕಾಟೇರ ಸಿನಿಮಾವನ್ನು ನಿರ್ಮಾಣ ಮಾಡಿದ ರಾಕ್ ಲೈನ್ ವೆಂಕಟೇಶ್ ಅವರು ರಾಕ್​ಮಾಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಪ್ರೆಸ್​ಮೀಟ್​ನಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ಡೈಲಾಗ್ ರೈಟರ್ ಮಾಸ್ತಿ, ಕಥೆಗಾರ ಜಡೇಶ್ ಕೆ ಹಂಪಿ ಭಾಗಿಯಾಗಿದ್ರು. ಕಾಟೇರ ಸಿನಿಮಾ ನೂರು ದಿನ ಪೂರೈಕೆ ಹಿನ್ನಲೆ ನಿರ್ಮಾಪಕರ ಚಿತ್ರತಂಡದ ಕೆಲವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕಾಟೇರ ಚಿತ್ರಕಥೆ ಬರೆದ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ಹಾಗೂ ನಟ ಸೂರಜ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದರು. ಕಾಟೇರ ಚಿತ್ರದ ಗೆಲುವಿಗೆ ಕಾರಣವಾದ ತಂತ್ರಜ್ಞರಿಗೆ ಭರ್ಜರಿ ಗಿಫ್ಟ್ ಕೂಡ ನೀಡಲಾಗಿದೆ.  ಚಿತ್ರದಲ್ಲಿ ನಟಿಸಿರುವ ಸೂರಜ್ ಅವರಿಗೆ​ ಸಿನಿಮಾ ರಿಲೀಸ್…

Read More