Author: Author AIN

ಮೈಸೂರು: ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಸಿನಿಮಾ ಕಾಟೇರ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಬಾಲನಟ ಇದೀಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ, ನಾಲ್ವರಿಗೆ ಗಂಭೀರ ಗಾಯಳಾಗಿವೆ. ರೋಹಿತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದವಡೆ ಭಾಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್‌ ಅಳವಡಿಸಲಾಗಿದೆ. https://ainlivenews.com/leopard-running-scene-captured-on-drone-villagers-worried/ ಘಟನೆ ವಿವರ: ಶನಿವಾರ ಸಂಜೆ ಹೊಸಹಳ್ಳಿ ಸಮೀಪದ ಆರಾಧನಾ ಕಾಲೇಜಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪಾಂಡವಪುರದಿಂದ  ರೋಹಿತ್, ತಾಯಿ ಮತ್ತು ಸ್ನೇಹಿತರನ್ನು‌ ಕಾಲೇಜು ಮುಖ್ಯಸ್ಥ ಯೋಗಣ್ಣ ಅವರ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಕಾರು ಅಪಘಾತಕ್ಕೀಡಾಗಿದೆ. ಕೇರಳದ ಪ್ರವಾಸಿ ಬಸ್ಸೊಂದಕ್ಕೆ ಕಾರು ಮುಖಾಮುಖಿ ಡಿಕ್ಕಿ ಆಗಿದ್ದರಿಂದ ಕಾರಿನಲ್ಲಿದ್ದವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ರೋಹಿತ್ ಅವರ ತಾಯಿ ಛಾಯಾಲಕ್ಷ್ಮಿ ಅವರ ಒಂದು‌ ಕೈ ಮತ್ತು ಒಂದು ಕಾಲು ಮುರಿದಿದೆ. ಕಾರಿನಲ್ಲಿದ್ದ ಸ್ನೇಹಿತ ಯಶಸ್, ಆರಾಧನಾ ಕಾಲೇಜಿನ ಉಪನ್ಯಾಸಕ ಕೇಶವ್​ ಮತ್ತು ಶ್ರೀಕಾಂತ್​ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರು…

Read More

ಚಿಕ್ಕಬಳ್ಳಾಪುರ : ಚಿಂತಾಮಣಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.  ಚಿಂತಾಮಣಿ ತಾಲೂಕಿನ ಕೊಂಗನಹಳ್ಳಿ ಹಾಗೂ ಗುನ್ನಹಳ್ಳಿ ಗ್ರಾಮಗಳ ನಡುವಿನಲ್ಲಿರುವ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. https://ainlivenews.com/a-car-caught-fire-in-the-middle-of-the-road/ ಬೆಟ್ಟದ ಮೇಲೆ ಚಿರತೆ ಓಡಾಡುತ್ತಿರುವ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಚಿರತೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದು, ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಚಿರತೆ ಓಡಾಟದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Read More

ವಿಜಯನಗರ: ಹೊಸಪೇಟೆ ತಾಲೂಕಿನ ರಾಯರಕೆರೆ ಬಳಿ ವಿಂಟೇಂಜ್‌ ಕಾರು ಹೊತ್ತಿ ಉರಿದಿದೆ. ಸಂಚರಿಸುವಾಗಲೇ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕಾರು ಬೆಂಕಿಗಾಹುತಿಯಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಆಕರ್ಷಣೆಗಾಗಿ ಆಯೋಜಿಸಲಾಗಿದ್ದ ವಿಂಟೇಜ್ ಸಂಭ್ರಮದಲ್ಲಿ, 100 ವರ್ಷ ಪೂರೈಸಿದ್ದ 20 ಕಾರುಗಳು ಭಾಗಿಯಾಗಿದ್ದವು. ಅದರಲ್ಲಿ ಈ ಕಾರು ಸಹ ಭಾಗಿಯಾಗಿತ್ತು. https://ainlivenews.com/good-news-big-fall-in-gold-and-silver-prices-in-bangalore/ ಕಾರ್ಯಕ್ರಮ ಮುಗಿಸಿ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತು ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ಘಟನಾ ಸ್ಥಳಕ್ಕೆ ಶಾಸಕ ಗವಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.  ಗವಿಯಪ್ಪ ಅವರ ಆಹ್ವಾನದ ಮೇರೆಗೆ ಕಾರುಗಳ ಮಾಲೀಕರು ಆಗಮಿಸಿದ್ದು,  ಹಂಪಿ, ಅಂಜನಾದ್ರಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ವಿಂಟೇಜ್‌ ಕಾರುಗಳು ಸಂಚರಿಸಿದ್ದವು.

Read More

ರಾಜ್ಯದ ರೈತರಿಗಾಗಿ ಸರ್ಕಾರ ಹಲವು ಯೋಜನೆಗಳು ಜಾರಿ ಮಾಡುತ್ತಲೆ ಇದೆ. ಇದರಿಂದ ರೈತರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದು ಸರ್ಕಾರಿದಿಂದ ಸಿಗುವ ಹಲವು ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಮಿನಿ ಟ್ರ್ಯಾಕ್ಟರ್ ಕೊಳ್ಳುವ ರೈತರಿಗೆ ಶೇ.90ರಷ್ಟು ಧನ ಸಹಾಯ ಮಾಡಲು ಸರ್ಕಾರಿ ಮುಂದಾಗಿದೆ. 2024-25ನೇ ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವೀಡರ್, ಪವರ್ ಸ್ಪ್ರೇಯರ್ಸ್, ಡೀಸೆಲ್ ಪಂಪ್‍ಸೆಟ್, ಪ್ಲೋರ್‍ಮಿಲ್, ಯಂತ್ರ ಚಾಲಿತ ಮೋಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ಹಾಗೂ ತುಂತುರು ನೀರಾವರಿ ಯೋಜನೆಯಡಿಯಲ್ಲಿ ಶೇ.90ರ ರಿಯಾಯ್ತಿ ದರದಲ್ಲಿ ತುಂತುರು ನೀರಾವರಿ ಘಟಕ(ಹೆಚ್‍ಡಿಪಿಇ ಪೈಪ್ಸ್) ವಿತರಿಸಲಾಗುತ್ತಿದೆ. ಆಸಕ್ತ ರೈತರು ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ…

Read More

ಭಾರತದ ಹಲವು ಕಡೆಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ದರೋಡೆ, ಲೂಟಿ ಮಾಡಿ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಅಮೆರಿಕ ಭಾರತದ ವಶಕ್ಕೆ ನೀಡಿದೆ. 1980ರಲ್ಲಿ ಮಧ್ಯಪ್ರದೇಶದಿಂದ ದರೋಡೆ ಮಾಡಲಾಗಿದ್ದ ಕಲ್ಲಿನ ಮೂರ್ತಿ, 1960ರ ದಶಕದಲ್ಲಿ ರಾಜಸ್ಥಾನದಲ್ಲಿ ಲೂಟಿ ಮಾಡಿದ್ದ ಹಸಿರು ಪದರ ಶಿಲೆ ಸೇರಿದಂತೆ ಇನ್ನೂ ಹಲವು ಪ್ರಾಚೀನ ವಸ್ತುಗಳನ್ನು ಅಮೆರಿಕ ವಾಪಸ್ ಭಾರತಕ್ಕೆ ಹಸ್ತಾಂತರಿಸಿದೆ. ಅಲ್ಲದೆ, ದೇಶದಿಂದ ಲೂಟಿ ಮಾಡಲಾದ 600ಕ್ಕೂ ಅಧಿಕ ಪ್ರಾಚೀನ ವಸ್ತುಗಳನ್ನು ಮುಂದಿನ ತಿಂಗಳಲ್ಲಿ ಮರಳಿ ತರಲು ಕ್ರಮ ಕೈಗೊಳ್ಳಲಾಗಿದೆ. ‘ಭಾರತದ ಕಾನ್ಸುಲೇಟ್‌ ಜನರಲ್‌ ಮನೀಶ್‌ ಕುಲ್ಹರಿ ಹಾಗೂ ನ್ಯೂಯಾರ್ಕ್‌ ಹೋಮ್‌ ಲ್ಯಾಂಡ್‌ ಸೆಕ್ಯೂರಿಟಿ ವಿಭಾಗದ ಮೇಲುಸ್ತುವಾರಿ ಅಲೆಕ್ಸಾಂಡ್ರಾ ಡೆ ಅರ್ಮಾಸ್‌ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು’ ಎಂದು ಮ್ಯಾನ್‌ಹಟನ್‌ ಡಿಸ್ಟ್ರಿಕ್ಟ್‌ ಆಟರ್ನಿ ಅಲ್ವಿನ್‌.ಎಲ್. ಬ್ರಾಗ್‌ ತಿಳಿಸಿದರು. ‘ಈ ವರ್ಷದಲ್ಲಿ ಭಾರತದಿಂದ ಲೂಟಿ ಆಗಿದ್ದ 600 ಪ್ರಾಚೀನ ವಸ್ತುಗಳು ಸೇರಿದಂತೆ ವಿಶ್ವದ 1 ಸಾವಿರಕ್ಕೂ…

Read More

‘ಹವಾಮಾನ ಆಧರಿತ ಆರ್ಥಿಕ ಹಾನಿ ತಡೆಯಲು ಮಾಲಿನ್ಯಕ್ಕೆ ‌ತ್ವರಿತ ನಿಯಂತ್ರಣ ಹೇರಬೇಕು’ ಎಂದು ಈ ವೇಳೆ ಜಿ-20 ರಾಷ್ಟ್ರಗಳ ಮುಖ್ಯಸ್ಥರಿಗೆ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್‌ ಸ್ಟಿಯಲ್‌ ಆಗ್ರಹಿಸಿದ್ದಾರೆ. ‘ಹವಾಮಾನ ಬದಲಾವಣೆ ತಡೆಗೆ ಕೈಗೊಂಡಿರುವ ನಿರ್ಧಾರಗಳು ‘ಜಿ-20 ರಾಷ್ಟ್ರಗಳ ಆರ್ಥಿಕತೆ ಸ್ವಯಂರಕ್ಷಣೆ’ ಕ್ರಮಗಳೇ ಆಗಿವೆ’ ಎಂದು ಅವರು ಪ್ರತಿಪಾದಿಸಿದ್ದಾರೆ. ತಾಪಮಾನ ಬದಲಾವಣೆ ಕುರಿತಂತೆ ಅಜೈರ್‌ಬೈಜಾನ್‌ನ ರಾಜಧಾನಿ ಬಾಕುವಿನಲ್ಲಿ ನಡೆದ ‘ಸಿಒಪಿ29’ ಶೃಂಗಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು. ‘ಹವಾಮಾನ ಬದಲಾವಣೆ ತಡೆಗೆ ಜಿ-20 ರಾಷ್ಟ್ರಗಳೂ ಪರಿಹಾರ ಕಂಡುಕೊಳ್ಳಬೇಕು. ಒಂದು ರಾಷ್ಟ್ರ, ಕೆಲವೇ ರಾಷ್ಟ್ರಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ, ಮುಂದಿನ ವಾರ ರಿಯೊದಲ್ಲಿ ನಡೆಯುವ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ಬದಲಾವಣೆ ವಿಷಯವೇ ಮೊದಲ ಆದ್ಯತೆಯಾಗಿರಬೇಕು’ ಎಂದು ಒತ್ತಿ ಹೇಳಿದರು. ನವೆಂಬರ್ 18-19ರಂದು ಜಿ-20 ಸಮಾವೇಶವು ಬ್ರೆಜಿಲ್‌ನ ರಿಯೊ ಡ- ಜನೈರೊದಲ್ಲಿ ನಡೆಯಲಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹಾಗೂ…

Read More

80ರ ದಶಕದ ಖ್ಯಾತ ಹಿರಿಯ ನಟಿ, ಪರಸಂಗದ ಗೆಂಡೆ ತಿಮ್ಮ ಸಿನಿಮಾ ಖ್ಯಾತಿಯ ರೀಟಾ ಅಂಚನ್  ರಾಧಾಕೃಷ್ಣ ನಿಧನರಾಗಿದ್ದಾರೆ. ಪರಸಂಗದ ಗೆಂಡೆ ತಿಮ್ಮ ಸಿನಿಮಾದಲ್ಲಿ ರೀಟಾ ನಟ ಲೋಕೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರೀಟಾ ಅಂಚನ್ ರಾಧಾಕೃಷ್ಣ’ಪರಸಂಗದ ಗೆಂಡೆತಿಮ್ಮ’ ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದರೂ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ದಿನ ಉಳಿದುಕೊಳ್ಳಲಾಗಲಿಲ್ಲ. 68 ವರ್ಷ ವಯಸ್ಸಿನ ರೀಟಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೀಟಾ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಕೆಲವೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಈ ನಟಿಯ ನಿಧನದ ಸುದ್ದಿಯನ್ನು ನಿರ್ದೇಶಕ ರಘುರಾಮ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೀಟಾ ಅಂಚನ್ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಅವರನ್ನು ಬಹುತೇಕವಾಗಿ ಗುರುತಿಸುತ್ತಿದ್ದಿದ್ದು ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಮೂಲಕವೇ. 1978ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ರೀಟಾ ಅಂಚನ್ ಬೋಲ್ಡ್‌ ರೋಲ್‌ನಲ್ಲಿ ನಟಿಸಿದ್ದರು. ಲೋಕೇಶ್ ಅಂತಹ ದಿಗ್ಗಜರ ಮುಂದೆ ನಟಿಸಿ ರೀಟಾ…

Read More

ವಿದ್ಯಾರ್ಥಿಯೋರ್ವ ನಡೆಸಿದ ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು 17 ಜನರು ಗಾಯಗೊಂಡಿರುವ ಘಟನೆ ಚೀನಾದ ವುಕ್ಸಿ ನಗರದ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಟೆಕ್ನಾಲಜಿಯಲ್ಲಿ  ನಡೆದಿದೆ. ಚೀನಾದ ವುಕ್ಸಿ ಸಿಟಿಯಲ್ಲಿ 21 ವರ್ಷದ ವಿದ್ಯಾರ್ಥಿ ಮನಸೋ ಇಚ್ಚೇ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ 8 ಮಂದಿ ಸಾವನಪ್ಪಿದ್ದು 17 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 21 ವರ್ಷದ ವಿದ್ಯಾರ್ಥಿಯೊಬ್ಬ ಇಂದು ಸಂಜೆ ಪೂರ್ವ ಚೀನಾದ ವುಕ್ಸಿ ನಗರದಲ್ಲಿ ಚೂರಿ ಇರಿತಕ್ಕೆ ಹೋಗಿ ಎಂಟು ಮಂದಿ ಸಾವನ್ನಪ್ಪಿ 17 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ಹೇಳಿಕೆಯಲ್ಲಿ ದಾಳಿಯನ್ನು ದೃಢಪಡಿಸಿದ್ದಾರೆ. ಆದರೆ ಈ ದಾಳಿಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿಲ್ಲ. ಝುಹೈನಲ್ಲಿ ನಡೆದ ಮತ್ತೊಂದು ದುರಂತದ ಕೆಲವೇ ದಿನಗಳಲ್ಲಿ ಈ ಚೂರಿ ಇರಿತದ ಘಟನೆ ಸಂಭವಿಸಿದೆ. ಅಲ್ಲಿ ಕ್ರೀಡಾ ಕೇಂದ್ರದ ಹೊರಗೆ ಹಿಟ್ ಅಂಡ್ ರನ್ ಘಟನೆಯಲ್ಲಿ 35 ಜನರು ಸಾವನ್ನಪ್ಪಿದರು ಮತ್ತು…

Read More

ದರ್ಶನ್‌ ನಟನೆಯ ಸೂಪರ್ ಹಿಟ್ ʻಕಾಟೇರʼ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ಮಾಸ್ಟರ್‌ ರೋಹಿತ್‌ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರೋಹಿತ್‌ ಗಾಯಗೊಂಡಿದ್ದಾರೆ. ಸದ್ಯ ಮಾಸ್ಟರ್‌ ರೋಹಿತ್‌ಗೆ ಮೈಸೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಘಟನೆ ನಡೆದಿದೆ, ಘಟನೆಯಲ್ಲಿ ರೋಹಿತ್ ತಾಯಿಯೂ ಗಾಯಗೊಂಡಿದ್ದು ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ʻಒಂದಲ್ಲ ಎರಡಲ್ಲʼ ಸಿನಿಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತನಾಗಿದ್ದ ರೋಹಿತ್‌, ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದರು.

Read More

ಬಿಗ್ ಬಾಸ್ ಸೀಸನ್ 11ರಲ್ಲಿ ಮನೆಯೊಳಗಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗೆ ತಲೆ ಸುತ್ತಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಹೋಗಿ ಬಂದ ಚೈತ್ರಾ ಎಲ್ಲಾ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಹಿಂಟ್ ಕೊಟ್ಟಿದ್ದರು. ಇದು ಹೊರಗಿನ ಅಭಿಪ್ರಾಯ ಎಂದು ಕೂಡ ಹೇಳಿದ್ದರು. ಇದರಿಂದ ಸುದೀಪ್ ಸಖತ್ ಸಿಟ್ಟಾಗಿದ್ದಾರೆ. ಅಲ್ಲದೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಚೈತ್ರಾ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸುದೀಪ್ ಅವರು ಒಪ್ಪಿಲ್ಲ. ‘ನಾನು ತಲೆಕೆಟ್​ ನನ್​ಮಗ’ ಎಂದಿದ್ದಾರೆ. ವೀಕೆಂಡ್ ಬಂತು ಅಂದರೆ ಪ್ರತಿಯೊಬ್ಬರು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಅದಕ್ಕೆ ಕಾರಣ ಸುದೀಪ್. ಕಿಚ್ಚ ಪ್ರತಿ ಶನಿವಾರ ತಪ್ಪು ಮಾಡಿದ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಲಿಮಿಟ್ ದಾಟಿ ಹೋಗಿದ್ದು ಕಡಿಮೆ. ಆದರೆ, ಈ ವಾರ ಮಾತ್ರ ಅವರು ಮಿತಿ ಮೀರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಚೈತ್ರಾ ಶಾಕ್ ಆಗಿದ್ದಾರೆ. ಅವರಿಗೆ ಏನು ಹೇಳಬೇಕು ಎಂದೇ ಗೊತ್ತಾಗಲೇ ಇಲ್ಲ. ಕಣ್ಣಿನ…

Read More