Author: Author AIN

ತೆಲುಗು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಪವನ್ ಕಲ್ಯಾನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಬಂಡ್ಲ ಗಣೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸುಮಾರು 75 ಕೋಟಿ ಮೌಲ್ಯದ ಮನೆಯೊಂದನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ ಸಂಸ್ಥೆಯೊಂದು ಬಂಡ್ಲ ಗಣೇಶ್ ವಿರುದ್ಧ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಹೀರಾ ಗ್ರೂಫ್​ನ ಸಿಇಓ ನೌಹೀರಾ ಶೇಖ್, ಬಂಡ್ಲ ಗಣೇಶ್ ವಿರುದ್ಧ ದೂರು ನೀಡಿದ್ದಾರೆ. ಗಣೇಶ್ 75 ಕೋಟಿ ಮೌಲ್ಯದ ಮನೆಯೊಂದನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಲ್ಲದೆ, ತಮಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.ಈ ಬಗ್ಗೆ ಹೈದರಾಬಾದ್​ನ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ನೌಹೀರಾ ಶೇಖ್ ದೂರು ದಾಖಲಿಸಿದ್ದಾರೆ. ಹೀರಾ ಗ್ರೂಫ್ ನ ಪ್ರಾಪರ್ಟಿಯೊಂದನ್ನು ಬಂಡ್ಲ ಗಣೇಶ್ ಬಾಡಿಗೆಗೆ ಪಡೆದಿದ್ದರು ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳಿಗೆ ಹೀರಾ ಗ್ರೂಫ್ ಹಾಗೂ ಬಂಡ್ಲ ಗಣೇಶ್ ಸಹಿ ಮಾಡಿದ್ದರು. ಬಾಡಿಗೆಗೆ ಒಪ್ಪಂದಕ್ಕಾಗಿ 3 ಕೋಟಿ ರೂಪಾಯಿ ಹಣವನ್ನು ಬಂಡ್ಲ ಗಣೇಶ್ ಪಾವತಿ ಮಾಡಿದ್ದರು. ಆದರೆ ಪ್ರಾಪರ್ಟಿ ವಿಷಯವಾಗಿ ಕಳೆದ ಕೆಲ ತಿಂಗಳುಗಳಿಂದ…

Read More

ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024ರ ಶೋ ಮೇ 06ರಂದು ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದಿದ್ದು ನಟಿ ಆಲಿಯಾ ಭಟ್ ಸೀರೆಯುಟ್ಟು ಹೆಜ್ಜೆ ಹಾಕಿದ್ದಾರೆ. ಮೆಟ್ ಗಾಲಾ ಕೆಂಪು ಹಾಸಿನ ಮೇಲೆ ನಟಿ ಆಲಿಯಾ ಭಟ್ ಸಬ್ಯಸಾಚಿ ಸೀರೆ ಡಿಸೈನ್ ಮಾಡಿದ ಸೀರೆಯುಟ್ಟು ಗಮನ ಸೆಳೆದಿದ್ದಾರೆ. ಸದ್ಯ ನಟಿಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್ ಅವರಿಗೆ ಮೆಟ್ ಗಾಲಾ ಹೊಸ ಅನುಭವವೇನಲ್ಲ. ಪ್ರತಿಷ್ಠಿತ ಸಮಾರಂಭದಲ್ಲಿ ಸತತವಾಗಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದು, 2023ರಲ್ಲಿ ಮೊದಲ ಭಾರಿಗೆ ಪ್ರವೇಶ ಮಾಡಿದ್ದರು. “ಈವೆಂಟ್‌ನಲ್ಲಿ ಎರಡನೇ ಬಾರಿ ಭಾಗಿಯಾಗಿದ್ದೇನೆ. ಆದರೆ ನಾನು ಮೊದಲ ಬಾರಿಗೆ ಸೀರೆ ಧರಿಸಿದ್ದೇನೆ. ನಾನು ‘ಗಾರ್ಡನ್ ಆಫ್ ಟೈಮ್’ ಡ್ರೆಸ್ ಕೋಡ್ ಅನ್ನು ಪರಿಗಣಿದ್ದೇನೆ. ಇದು ಟೈಮ್‌ಲೆಸ್‌ ಎಂದು ನಾನು ಭಾವಿಸಿದ್ದೇನೆ. ಸೀರೆಗಿಂತ ಹೆಚ್ಚು ಕಾಲಾತೀತ ಸೌಂದರ್ಯ ಮತ್ತೊಂದಿಲ್ಲ” ಎಂದು ಆಲಿಯಾ ಭಟ್ ಹೇಳಿದ್ದಾರೆ. ಮೆಟ್ ಗಾಲಾ ನೋಟ ವೈರಲ್​ ಆಗೋ…

Read More

ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥಕ್ಕೆ ಅಪಮಾನ ಮಾಡಿರುವ ಹಿನ್ನೆಲೆಯಲ್ಲಿʼರಾಮನ ಅವತಾರ’ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರಿಗೆ ಹಿಂದು ಜನಜಾಗೃತಿ ಸಮಿತಿಯ ಶರತ್ ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ ಎಂಬ ಕನ್ನಡ ಚಲನಚಿತ್ರ ಮೇ 10 ಕ್ಕೆ ಬಿಡುಗಡೆಗೊಳ್ಳಲಿದ್ದು, ಅದರ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕೋಟ್ಯಂತರ ಹಿಂದುಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಲಾಗಿದೆ. ಆದ್ದರಿಂದ ಸಿನಿಮಾದ ಹೆಸರನ್ನು ಬದಲಾಯಿಸಬೇಕು ಮತ್ತು ಅದರಲ್ಲಿನ ರಾಮಾಯಣದ ಅಪಮಾನಾತ್ಮಕ ಸನ್ನಿವೇಶಗಳನ್ನು ತೆಗೆದುಹಾಕಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ. ಚಿತ್ರನಟ ‘ರಾಮನ’ ಹೆಸರಿನಲ್ಲಿ ಚುನಾವಣೆಗೆ ನಿಂತಿರುತ್ತಾನೆ, ಅಲ್ಲಿ ‘ಯಾರ ಮನೆ ಮುಂದೆ ಕಸ ಇದ್ದರೆ ರಾಮನಿಗೆ ಕಾಲ್ ಮಾಡಿ’ ಎಂದು…

Read More

ಸೋಮವಾರ ಇರಾನ್‌ನಲ್ಲಿ ಯಸುಜ್ ಪ್ರದೇಶದಲ್ಲಿ ತೀವ್ರ ಮಳೆಯಾಗಿದ್ದು ಈ ವೇಳೆ ಅಪರೂಪದ ಘಟನೆ ನಡೆದಿದೆ. ಮಳೆಯ ವೇಳೆ ಆಗಸದಿಂದ ಉದುರಿದ ಮೀನುಗಳು ಉದುರಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಜೀವಂತ ಮೀನುಗಳು ಆಕಾಶದಿಂದ ಭೂಮಿಗೆ ಬಿದ್ದಿದ್ದು, ರಸ್ತೆಯಲ್ಲಿ ಎಗರಿವೆ. ಈ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಘಟನೆ ಇರಾನ್ ನ ಮುನ್ಸಿಪಲ್ ಪ್ಲಾಜಾ ಬಳಿ ಮೀನುಗಳು ಆಕಾಶದಿಂದ ರಸ್ತೆಗೆ ಬಿದ್ದಿದೆ. ದೃಶ್ಯವನ್ನು ಸೆರೆಹಿಡಿದ ವ್ಯಕ್ತಿ ಆಕಾಶದಿಂದ ಭೂಮಿಯತ್ತ ಬೀಳುತ್ತಿದ್ದ ಜೀವಂತ ಮೀನು ಒದ್ದಾಡುತ್ತಿರುವುದನ್ನು ತೋರಿಸಿದ್ದಾರೆ. ಇರಾನ್ ಈಗಾಗಲೇ ಪ್ರವಾಹದಿಂದ ತತ್ತರಿಸಿದೆ. ಇದೇ ಪ್ರವಾಹದ ಜೊತೆಗೆ ಸಣ್ಣ ಪಟ್ಟಣಗಳು ಚಂಡಮಾರುತದ ಹೊಡೆತಕ್ಕೆ ತತ್ತರಿಸಿದೆ. ಸಮುದ್ರದ ತೀರದಿಂದ 280 ಕಿಲೋ ಮೀಟರ್ ಸಮೀಪದಲ್ಲಿರುವ ಪ್ರದೇಶದಲ್ಲಿ ಗಾಳಿಯಲ್ಲಿ ಬಂದ ಮೀನುಗಳು ಆಕಾಶದಿಂದ ಭೂಮಿಯತ್ತ ಬೀಳುತ್ತಿವೆ. ಇರಾನ್ ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ದೇಶದ 21 ವಿವಿಧ ಜಾಗಗಳಲ್ಲಿ ಅತಿಯಾದ ಮಳೆಯಿಂದ ಪ್ರವಾಹ…

Read More

ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಗೆ ಸಂಬಂಧಿಸಿದ ಕೋವಿಶೀಲ್ಡ್ ಅಪರೂಪದ ಅಡ್ಡಪರಿಣಾಮಗಳ ಬಗ್ಗೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.` ಕೋವಿಡ್‌ನಿಂದಾಗಿ ತಮ್ಮ ಮಗಳನ್ನು ಕಳೆದುಕೊಂಡಿದ್ದ ಗೋವಿಂದನ್ ಎಂಬ ವ್ಯಕ್ತಿ ಅರ್ಜಿಸಲ್ಲಿಸಿದ್ದು, ಕೋವಿಡ್ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ನಡೆಯಬೇಕು. ಹಾಗೆಯೇ ಈ ಲಸಿಕೆ ಸೇವನೆಯಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ನೀಡಲು ಸೂಚಿಸಬೇಕು ಎಂದಿದ್ದಾರೆ. ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ ಆದರೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಈ ವಿಷಯವನ್ನು ಒಪ್ಪಿಕೊಂಡಿದ್ದು, ನಿರ್ದಿಷ್ಟವಾಗಿ, ಅರ್ಜಿದಾರರು ಅಡ್ಡಪರಿಣಾಮ ಮತ್ತು ಇತರ ಸಂಭಾವ್ಯ ಅಪಾಯಗಳ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಬೇಕೆಂದು ಮತ್ತು ಈ ತನಿಖೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಲಸಿಕೆ ತೆಗೆದುಕೊಂಡವರು ಸಹ ಅಂಗವಿಕಲರಾದ ನಿದರ್ಶನಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅವರಿಗೂ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ…

Read More

ನ್ಯೂಯಾರ್ಕ್ ನಗರದ 24ಕ್ಕೂ ಅಧಿಕ ಯೆಹೂದಿ ಪ್ರಾರ್ಥನಾ ಮಂದಿರ, ಮ್ಯೂಸಿಯಂ ಹಾಗೂ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಲಾಗಿದ್ದು ಇದರಿಂದ ಕೆಲ ಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮ್ಯಾನ್‍ಹಟನ್ ನಗರದಲ್ಲಿ 14 ಯೆಹೂದಿ ಪ್ರಾರ್ಥನಾ ಮಂದಿರ ಮತ್ತು ಯೆಹೂದಿ ಸಂಸ್ಥೆಗಳು, ಬ್ರೂಕ್ಲಿನ್‍ನ 2, ಕ್ವೀನ್ಸ್‍ನಲ್ಲಿ 5, ಲಾಂಗ್‍ಐಲ್ಯಾಂಡ್‍ನ ಒ0ದು ಯೆಹೂದಿ ಸಂಸ್ಥೆಗೆ, ದಿ ನ್ಯೂಯಾರ್ಕ್ ಲ್ಯಾಂಡ್‍ಮಾಕ್ರ್ಸ್ ಕನ್ಸರ್ವೆನ್ಸಿ (ಮ್ಯೂಸಿಯಂ)ಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ರವಾನೆಯಾಗಿದೆ. `ನಿಮ್ಮ ಕಟ್ಟಡದಲ್ಲಿ ಬಾಂಬ್ ಇರಿಸಿದ್ದೇನೆ. ನಿಮಗೆ ಹೆಚ್ಚಿನ ಸಮಯಾವಕಾಶವಿಲ್ಲ. ತಕ್ಷಣ ಓಡಿಹೋಗಿ. ಇಲ್ಲದಿದ್ದರೆ ರಕ್ತದ ಅಭಿಷೇಕವಾಗುತ್ತದೆ’ ಎಂದು `ಭಯೋತ್ಪಾದಕರು 111′ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ ಸದಸ್ಯ ಎಚ್ಚರಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಕ್ಷಣ ಶೋಧ ಕಾರ್ಯಾಚರಣೆ ನಡೆಸಿದ್ದು ಇದು ಹುಸಿ ಬಾಂಬ್ ಕರೆ ಎಂದು ದೃಢಪಟ್ಟಿದೆ. ಇದೀಗ ಇ-ಮೇಲ್ ರವಾನಿಸಿರುವ ವ್ಯಕ್ತಿಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.

Read More

ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿರುವುದಾಗಿ ‘ಅಲ್-ಜಝೀರಾ’ ವರದಿಯಲ್ಲಿ ಉಲ್ಲೇಖಿಸಿದೆ. ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರು ಖತರ್ ಮತ್ತು ಈಜಿಪ್ಟ್ ಮಧ್ಯ ಪ್ರವೇಶದ ಬಳಿಕ ಕದನ ವಿರಾಮ ಪ್ರಸ್ತಾಪ ಒಪ್ಪಿಕೊಂಡಿದೆ. ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರೆ, ತಮ್ಮ ಬಳಿ ಒತ್ತೆಯಾಳಾಗಿರುವ ಇಸ್ರೇಲ್ ಪ್ರಜೆಗಳನ್ನು ಬಿಡುಗಡೆಗೊಳಿಸುವುದಾಗಿ ಹಮಾಸ್ ತಿಳಿಸಿದೆ. ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದ ಮೇಲೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲು ಒತ್ತಡ ಹೆಚ್ಚಾಗಿದೆ. ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪ್ರತಿಭಟನೆ ಮಾಡುತ್ತಿರುವ ಜನರು ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸುತ್ತಿದ್ದಾರೆ. “ಹಮಾಸ್ ಕದನ ವಿರಾಮ ಪ್ರಸ್ತಾಪಿಸಿದ್ದಕ್ಕೆ ಇಸ್ರೇಲ್ ತನ್ನ ತೀರ್ಮಾನ ಪ್ರಕಟಿಸಿಲ್ಲ. ಈ ಬಗ್ಗೆ ತುರ್ತು ಸಭೆ ನಡೆಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ” ಎಂದು ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿದ್ದನ್ನು ಅಲ್-ಜಝೀರಾ ಉಲ್ಲೇಖಿಸಿದೆ.…

Read More

‘ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ ಅವಾರ್ಡ್ಸ್‌’ನಲ್ಲಿ ನಟಿ ನಯನತಾರಾಗೆ ‘ಬೆಸ್ಟ್ ವರ್ಸಟೈಲ್ ನಟಿ ‘ ಪ್ರಶಸ್ತಿ ನೀಡಲಾಗಿದೆ. ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗಗಳಲ್ಲಿ ಖ್ಯಾತಿ ಘಳಿಸಿರುವ ನಟಿ ಇದೀಗ  ‘ಅತ್ಯುತ್ತಮ ಬಹುಮಖ ಪ್ರತಿಭೆಯುಳ್ಳ ನಟಿ’ ಪ್ರಶಸ್ತಿ ಗಳಿಸಿದ್ದಾರೆ. ಇದೇ ವೇಳೆ ‘ಅನಿಮಲ್’ ಚಿತ್ರಕ್ಕಾಗಿ ಸಂದೀಪ್ ರೆಡ್ಡಿ ವಂಗಾ ಅವರು ಬೆಸ್ಟ್ ಡೈರೆಕ್ಟರ್’ ಪ್ರಶಸ್ತಿ ಪಡೆದಿದ್ದಾರೆ. 2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಸಿನಿಮಾದ ಜೊತೆಗೆ ಸಂಸಾರವನ್ನು ಚಂದವಾಗಿ ನಡೆಸಿಕೊಂಡು ಹೋಗುತ್ತಿರುವ ನಟಿ ಇದೀಗ ‘ಬೆಸ್ಟ್ ವರ್ಸಟೈಲ್ ನಟಿ ‘ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣದ ಭಾರತದ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ತಮ್ಮ ಸ್ವಂತ ಇನ್‌ಸ್ಟಾಗ್ರಾಂ ಅಕೌಂಟ್ ಮಾಡಿಕೊಂಡಿರುವ ನಟಿ ನಯನತಾರಾ, ಈ ಮೊದಲು ತಮ್ಮ ಪತಿ ವಿಘ್ನೇಶ್ ಶಿವನ್‌ ಅಕೌಂಟ್‌ನಿಂದ ತಮ್ಮ ಮಾಹಿತಿ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಿದ್ದರು.…

Read More

ಸಿನಿಮಾ ರಂಗದಲ್ಲಿ ಹಲವು ನಟಿಯರು ತಮಗಾದ ದೌರ್ಜನ್ಯಗಳ ಕುರಿತು ಮಾತನಾಡಿದ್ದಾರೆ. ಇದೀಗ 1990ರಿಂದ ಹಿಡಿದು ಸುಮಾರು 30 ವರ್ಷಗಳ ಕಾಲ ಸಿನಿರಂಗವನ್ನು ಆಳಿದ ನಟಿ ರಮ್ಯಾ ಕೃಷ್ಣನ್ ಕೂಡ ತಮಗಾಗಿರುವ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ರಮ್ಯಾ ಕೃಷ್ಣನ್ ಗೆ ಇದೀಗ 53 ವರ್ಷ ವಯಸ್ಸು. ಆದರೂ ಆಕೆಗಿರೋ ಸೌಂದರ್ಯ ಕೊಂಚವೂ ಕಮ್ಮಿಯಾಗಿಲ್ಲ. ಚೆನ್ನೈ ಮೂಲದ ರಮ್ಯಾ, ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಲ್ಕು ಫಿಲ್ಮ್​ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ನಟಿ ತಮಗಾಗಿರುವ ಕರಾಳ ಅನುಭವನ್ನು ಬಿಚ್ಚಿಟ್ಟಿದ್ದಾರೆ.  ಕಾಸ್ಟಿಂಗ್‌ ಕೌಚ್‌ ಕುರಿತು ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಸಮಸ್ಯೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಇದೆ. ಆದರೆ ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಎಲ್ಲರೂ ಹೆಚ್ಚಾಗಿ ಸಿನಿ ಸೆಲೆಬ್ರಿಟಿಗಳ ಕಾಸ್ಟಿಂಗ್ ಕೌಚ್ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ.…

Read More

ಇತ್ತೀಚೆಗೆ ನಟಿಯರು ಒಬ್ಬರ ಹಿಂದೊಬ್ಬರಂತೆ ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಯುವತಿಯರನ್ನು ನಟಿಯರನ್ನಾಗಿ ಮಾಡಬೇಕು ಎಂದರೆ ಡೈರೆಕ್ಟರ್​, ಪ್ರೊಡ್ಯೂಸರ್​… ಹೀಗೆ ಚಿತ್ರರಂಗದ ಕೆಲವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಅವರು ಮಂಚಕ್ಕೆ ಕರೆದಾಗ ಹೋಗಬೇಕು ಎಂಬ ಆರೋಪಗಳು ಕೇಳಿ ಬಂದಿದೆ. ಇದೀಗ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ನಟಿ ರಾಖಿ ಸಾವಂತ್ ಸಿನಿಮಾ ರಂಗದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ನಿರ್ದೇಶಕರು, ನಿರ್ಮಾಪಕರ ಬಳಿ ಇರುವ ಹಲವು ಯುವತಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂದು ರಾಖಿ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂಡಸ್ಟ್ರಿಯಲ್ಲಿ ರೇಪ್​ ನಡೆಯುವುದಿಲ್ಲ. ಬದಲಿಗೆ ರೇಪ್​ ಮಾಡಿಸಿಕೊಳ್ಳಲು ಯುವತಿಯರು ಮುಂದೆ ಬರುತ್ತಾರೆ. ತೀರಾ ಅಸಭ್ಯ, ಅಶ್ಲೀಲ ರೀತಿಯಲ್ಲಿ ನಡೆದುಕೊಂಡು, ಮುಂದೆ ಇರುವವರನ್ನು ಉತ್ತೇಜಿಸಿ ನಂತರ ಎಲ್ಲವನ್ನೂ ರೆಕಾರ್ಡ್​ ಮಾಡಿಕೊಂಡು ನಿರ್ದೇಶಕರು, ನಿರ್ಮಾಪಕರನ್ನೇ ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಅವರಿಗೆ ಅಭಿನಯದ ಗಂಧಗಾಳಿಯೂ ಇರುವುದಿಲ್ಲ, ಎಬಿಸಿಡಿಯೂ ಗೊತ್ತಿರುವುದಿಲ್ಲ. ಆದರೆ ಆ ವಿಡಿಯೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿ, ಇದನ್ನು ನಿಮ್ಮ ಮನೆಯವರಿಗೆ ತೋರಿಸಲಾ ಅಥವಾ ನಟಿಯರನ್ನಾಗಿ ಮಾಡುತ್ತೀರಾ ಎಂದು…

Read More