Author: Author AIN

ಬೆಳಗಾವಿ: ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿಕೊಂಡು ಹೊರಟಿದ್ದ ಚಾಲಕನನ್ನು ಹಿಡಿದು ಹತ್ಯೆ ಮಾಡಲಾಗಿದೆ.  ಬೆಳಗಾವಿ ‌ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಬಳಿ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಮೃತನಾಗಿದ್ದು, ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ. ಕುಡಿದು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಪರಸಪ್ಪ ನಾಯಕ್‌ ಗೆ ಸೇರಿದ ಬೈಕ್ ಮತ್ತುಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್‌ ಗೆ ಡಿಕ್ಕಿ ಹೊಡೆದಿದ್ದಾನೆ. https://ainlivenews.com/kalaghatagi-quarterly-kdp-meeting-minister-santhosh-lad-class-for-officers/ ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪರಾರಿಯಾಗಲು ಅಜೀಂ ಯತ್ನಿಸಿದ್ದು, ಈ ವೇಳೆ ಅಟ್ಟಿಸಿಕೊಂಡು ಹೋದ ಪರಸಪ್ಪ ಮತ್ತು ಹಣಮಂತ ಕಟಬಾಳಿ ಗ್ರಾಮದ ಬಳಿ ಲಾರಿಗೆ ಕಲ್ಲೆಸೆದು ತಡೆದಿದ್ದಾರೆ.  ಈ ವೇಳೆ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಇದು ವಿಕೋಪಕ್ಕೆ ತಿರುಗಿ ಅಜೀಂ ಮರ್ಮಾಂಗಕ್ಕೆ ಒದ್ದು, ಹಲ್ಲೆಗೊಳಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅಜೀಂನನ್ನು ಬೆಳಗಾವಿಯ ಬೀಮ್ಸ್‌‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ…

Read More

ಧಾರವಾಡ: ಕಲಘಟಗಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಸಚಿವ ಸಂತೋಷ್‌ ಲಾಡ್ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡರು. ಪಟ್ಟಣದ ತಾಲೂಕ ಪಂಚಾಯತ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಅಧಿಕಾರಿಗಳ ಮೇಲೆ ಜವಾಬ್ದಾರಿ ಇಟ್ಟು ಸರ್ಕಾರ ಆಡಳಿತ ನಡೆಸುತ್ತಿದೆ. ನೀವು ಯಾರಾದರೂ ಒಂದು ಗ್ರಾಮಕ್ಕಾದರೂ ಭೇಟಿ ನೀಡಿದ್ದೀರಾ..? ಎಂದು ಪ್ರಶ್ನಿಸಿದರು. ನಿಮ್ಮಂತ ಅಧಿಕಾರಿಗಳಿಂದ ಕ್ಷೇತ್ರದಲ್ಲಿ ನನ್ನ ಹೆಸರು ಕೆಡಿಸುತ್ತಿದ್ದೀರಿ ಇದು ನಿಮಗೆ ಕೊನೆ ಎಚ್ಚರಿಕೆ ಎಂದರು. https://ainlivenews.com/should-i-give-a-card-to-the-tax-payer-as-much-as-the-cm-said-about-the-cancellation-of-ration-card/ ಇನ್ನೂ ಇದೇ ವೇಳೆ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಯಾರನ್ನು ಕೇಳಿ ಅರ್ಜಿಗಳನ್ನು ರಿಜೆಕ್ಟ್ ಮಾಡುತ್ತೀರಿ..? ನನ್ನ ಗಮನಕ್ಕೆ ತರದೇ ಯಾವ ಅರ್ಜಿಯನ್ನು ರಿಜೆಕ್ಟ್ ಮಾಡಬೇಡಿ. ಇದರಲ್ಲಿ ಅಜ್ಜ ಮುತ್ತಜ್ಜ ಕಾಲದಿಂದ ಸಾಗುವಳಿ ಮಾಡುತ್ತಿರುವ ರೈತರು ಇರುತ್ತಾರೆ. ಬಗರ ಹುಕುಂ 1521 ಅರ್ಜಿಗಳನ್ನು ಸರ್ವೇ ಮಾಡಿ ವರದಿ ಒಪ್ಪಿಸಿರಿ. ಉಪ ಗ್ರಾಮಗಳ ಕುರಿತು ಸಂಪೂರ್ಣ ದಾಖಲೆಗಳನ್ನು ಪೂರ್ಣಗೊಳಿಸಿ ಎಂದು ತಹಶೀಲ್ದಾರ ವೀರೇಶ ಮುಳಗುಂದಮಠ ಅವರಿಗೆ ತಾಕೀತು ಮಾಡಿದರು. ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಿಗಿಗಟ್ಟಿ ತಾಂಡಾದಲ್ಲಿ ಚರಂಡಿ ನೀರು…

Read More

ಬಾಗಲಕೋಟೆ: ಟ್ಯಾಕ್ಸ್ ಕಟ್ಟುವರಿಗೆ, ಸರ್ಕಾರಿ ನೌಕರರಿಗೆ ಬಿಪಿಎಲ್‌ ಕಾರ್ಡ್ ಕೊಡಬೇಕಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರೇಷನ್ ಕಾರ್ಡ್ ರದ್ದು ವಿಚಾರವಾಗಿ ಪ್ರಶ್ನಿಸಿದ್ದ ಪತ್ರಕರ್ತರಿಗೆ ಸಿಟ್ಟಿನಿಂದಲೇ ಉತ್ತರ ಕೊಟ್ಟರು. https://ainlivenews.com/long-range-hypersonic-missile-test-successful/ ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲಯ್ಯ.. ಏ ಥು.. ಯಾರು ಅರ್ಹರಿದ್ದಾರೆ ಅವರಿಗೆ ಕೊಟ್ಟೆ ಕೊಡ್ತೇವೆ. ಯಾರು ಅನರ್ಹರಿದ್ದಾರೆ ಅವರನ್ನು ತೆಗೆದು ಹಾಕ್ತೀವಿ. ಟ್ಯಾಕ್ಸ್ ಕಟ್ಟವವರಿಗೆ, ಸರ್ಕಾರಿ ನೌಕರರಿಗೆ ಕೊಡಬೇಕಾ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದ್ರು. ಟ್ಯಾಕ್ಸ್ ಕಟ್ಟುವವರಿಗೆ, ಸರ್ಕಾರಿ ನೌಕರರಿಗೆ ಬಿಪಿಎಲ್ ಕಾರ್ಡ್ ಇದ್ದರೆ ಅದನ್ನ ಎಪಿಎಲ್ ಮಾಡ್ತೇವೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ. ಅರ್ಹರಿದ್ದರೆ ಯಾರಿಗೂ ತಪ್ಪಿಸಲ್ಲ ಎಂದು ಸ್ಪಷ್ಟನೆ ನೀಡಿದರು.

Read More

ನವದೆಹಲಿ: ದೀರ್ಘ ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷ ಯಶಸ್ವಿಯಾಗಿ ನಡೆದಿದೆ.ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಒಡಿಶಾ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳ ಸೇವೆಗಳಿಗಾಗಿ 1,500 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯ ವಿವಿಧ ರೀತಿಯ ಸಿಡಿತಲೆಗಳನ್ನು ಸಾಗಿಸಲು ಅನುವಾಗುವಂತೆ ಹೈಪರ್‌ ಸಾನಿಕ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದೆ. ಚೀನಾ, ರಷ್ಯಾ, ಅಮೆರಿಕ ಈಗಾಗಲೇ ಈ ಹೈಪರ್‌ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದು, ಇದೀಗ ಈ ಪಟ್ಟಿಗೆ ಭಾರತ ಸಹ ಸೇರ್ಪಡೆಯಾಗಿದೆ. https://ainlivenews.com/60-percent-commission-government-in-the-state-opposition-leader-r-ashok-alleges/ ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಡಿಆರ್‌ಡಿಒವನ್ನು ಅಭಿನಂದಿಸಿದ್ದಾರೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು,ಈ ಮಹತ್ವದ ಸಾಧನೆಯಿಂದ ಆಯ್ದ ದೇಶಗಳ ಸಾಲಿನಲ್ಲಿ ನಮ್ಮ ದೇಶವು ಸ್ಥಾನ ಪಡೆದಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

Read More

ಭಾರತದ ವೇಗಿ ಮೊಹಮ್ಮದ್‌ ಶಮಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಭಾರತೀಯ ಆಟಗಾರ ಶಮಿ ತಮ್ಮ ವಯಸ್ಸನ್ನು ಮರೆಮಾಚಿದ್ದಾರೆಂದು ಮೋಹನ್‌ ಕೃಷ್ಣ ಎಂಬಾತ ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಮಿ ಅವರ ಡ್ರೈವಿಂಗ್‌ ಲೈಸೆನ್ಸ್‌ ಫೋಟೋವನ್ನು ಸಹ ಶೇರ್‌ ಮಾಡಿದ್ದಾರೆ. ಇದರಲ್ಲಿ ಶೇರ್‌ ಮಾಡಿರುವ ಡ್ರೈವಿಂಗ್‌ ಲೈಸೆನ್ಸ್‌ ಪ್ರಕಾರ ಮೊಹಮ್ಮದ ಶಮಿ ಅವರು ವಯಸ್ಸು 42 ವರ್ಷ. ಆದರೆ ಅಧಿಕೃತವಾಗಿ ಪ್ರಸ್ತಾಪಿಸಿರುವ ವಯಸ್ಸು 34 ವರ್ಷವಾಗಿದೆ. ಹೀಗಾಗಿ ಶಮಿ ಅವರು ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ತನಿಖೆ ಮಾಡುವಂತೆ ಬಿಸಿಸಿಐಗೆ ಸಹ ಮನವಿ ಮಾಡಿದ್ದಾರೆ. https://ainlivenews.com/60-percent-commission-government-in-the-state-opposition-leader-r-ashok-alleges/ ಒಂದು ವೇಳೆ ಬಿಸಿಸಿಐ ಈ ಮನವಿ ಮನ್ನಿಸಿ ತನಿಖೆ ನಡೆಸಿ, ಆರೋಪ ಸಾಬೀತಾದರೆ ಬ್ಯಾನ್‌ ಆಗುವ ಸಾಧ್ಯತೆ ಇದೆ. ಬಿಸಿಸಿಐ ನಿಯಮಗಳ ಪ್ರಕಾರ ವಯಸ್ಸನ್ನು ಮರೆಮಾಚುವುದು ಗಂಭೀರ ಆರೋಪವಾಗಿದೆ. ಕೆಲವೊಮ್ಮೆ ಅಂಡರ್‌- 19 ತಂಡದಲ್ಲಿ ಸ್ಥಾನ ಪಡೆಯಲು ಕೆಲ ಆಟಗಾರರು ತಮ್ಮ ವಯಸ್ಸನ್ನು ಕಡಿಮೆಮಾಡಿ ಘೋಷಿಸುತ್ತಾರೆ. ಹೀಗೆ ವಯಸ್ಸು…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ಸಿನದ್ದು 60% ಕಮಿಷನ್ ಸರ್ಕಾರ ಎಂದ ವಿಪಕ್ಷ ನಾಯಕ ಆರ್.‌ ಅಶೋಕ್‌ ಆರೋಪಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂಪಾಯಿ ಹಗರಣ ನಡೆದಿದೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾವಣೆಗೆ ಹೋಗಿದೆ. ಸಿಎಂ ಸಿದ್ದರಾಮಯ್ಯನವರ ಜೀವನ ತೆರೆದ ಪುಸ್ತಕದಂತೆ ಅಂತಾರೆ. ಆದರೆ ಈಗ ಒಬ್ಬೊಬ್ಬ ಮಂತ್ರಿಯ ದರೋಡೆಯ ಪುಸ್ತಕ ಹೊರಗೆ ಬರುತ್ತಿದೆ. ಕಪ್ಪು ಚುಕ್ಕೆ ಇಲ್ಲವೆಂದು ಸಿದ್ದರಾಮಯ್ಯ ಹೇಳ್ತಾನೇ ಇರ್ತಾರೆ. ಆದರೆ ತಪ್ಪು ಮಾಡದಿದ್ದರೆ 14 ಸೈಟ್ ಯಾಕೆ ವಾಪಸ್ ಕೊಟ್ಟಿದ್ರಿ ಎಂದು ಪ್ರಶ್ನಿಸಿದರು. ನಾನು ಸೈಟ್ ವಾಪಸ್ ಕೊಡಲ್ಲ ಎಂದವರು, ನನ್ನ ಹೆಂಡತಿ ಗೊತ್ತಿಲ್ಲದೇ ಕೊಟ್ರು ಅಂತಾರೆ. ಸಿದ್ದರಾಮಯ್ಯಗೆ ಹಿಂದುಳಿದ ನಾಯಕ ಎಂಬುವುದನ್ನುತೆಗೆದು, ಮುಸಲ್ಮಾನರ ಚಾಂಪಿಯನ್ ಸಿದ್ದರಾಮಯ್ಯ ಎನ್ನಬೇಕು ಎಂದು ಕಿಡಿಕಾರಿದರು. https://ainlivenews.com/dolly-weds-dhanyatha-a-simple-dolly%ca%bcs-engagement/ ಇನ್ನೂ ನಮ್ಮ ಮೇಲಿದ್ದ 40 ಪರ್ಸೆಂಟ್ ಆರೋಪದಿಂದ ಮುಕ್ತರಾಗಿದ್ದೇವೆ. ಟೂಲ್ ಕಿಟ್‌ನಂತ ಕೆಂಪಣ್ಣರನ್ನು ಕಾಂಗ್ರೆಸ್ ಬಳಸಿಕೊಂಡಿತ್ತು. ಕೆಂಪಣ್ಣ, ಪದ್ಮರಾಜ್‌ನನ್ನು ಟೂಲ್‌ಕಿಟ್‌ನಂತೆ ಬಳಸಿಕೊಂಡು, ನಿರುದ್ಯೋಗಿ…

Read More

ಹಾಸನ : ಕನ್ನಡದ ನಟ ನಟ ಡಾಲಿ ಧನಂಜಯ್‌ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇತ್ತೀಚಿಗಷ್ಟೇ ತನ್ನ ಬಾಳ ಸಂಗಾತಿಯ ಪರಿಚಯಿಸಿದ ಧನಂಜಯ್‌ ಇಂದು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅರಸೀಕೆರೆಯ ಕಾಳೇನಹಳ್ಳಿಯಲ್ಲಿರುವ ಡಾಲಿ ಧನಂಜಯ್‌ ನಿವಾಸದಲ್ಲಿ ಮದುವೆ ಶಾಸ್ತ್ರಗಳು ನೆರವೇರುತ್ತಿವೆ. https://www.youtube.com/shorts/jgkCxuNjGcw ಇಂದು ಲಗ್ನಪತ್ರಿಕೆ ಬರೆಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ಶಾಸ್ತ್ರ ನಡೆಯಿತು. ಹಿರಿಯರ ಸಮ್ಮುಖದಲ್ಲಿ ಡಾಲಿ ಹಾಗೂ ಧನ್ಯತಾ ಉಂಗುರ ಬದಲಾಯಿಸಿಕೊಂಡಿದ್ದು, 2025ರ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬೀಷನ್ ಗ್ರೌಂಡ್ ನಲ್ಲಿ ಮದುವೆ ನಡೆಯಲಿದೆ.

Read More

ರಾಯಚೂರು: ಪಿಡಿಓ ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಪ್ರತಿಭಟನೆ ನಡೆಸಿದರು. ಸಿಂಧನೂರು ಪಟ್ಟಣದ ಪ್ರಾಥಮಿಕ ದರ್ಜೆಯ ಡಿಗ್ರಿ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆಂದು 35 ಕೊಠಡಿಗಳ ಮಾಡಿದ್ದು, ಒಂದು ಕೊಟ್ಟಡಿಗೆ 24 ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. https://ainlivenews.com/ration-card-cancellation-issue-hdk-sparks-against-the-government/ ಪ್ರತಿ ಕೊಠಡಿಗೆ ಎರಡು ಓಎಂಆರ್‌ (OMR ) ಶೀಟ್ ಮತ್ತು ಪ್ರಶ್ನೆ ಪತ್ರಿಕೆ ಪೇಪರ್ ತೆಗೆದುಕೊಂಡು ಹೋಗಬೇಕು. ಆದರೆ 24 ಅಭ್ಯರ್ಥಿಗಳಿಗೆ ಪೇಪರ್ ಗಳ. ಹಂಚದೇ ಕೇವಲ 12 ಅಭ್ಯರ್ಥಿಗಳಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಆಕ್ರೋಶಗೊಂಡ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ಪ್ರತಿಭಟನೆ ನಡೆಸಿದರು. ಹಂಚಿಕೆ ಮಾಡೋದಾದರೆ ಎಲ್ಲರಿಗೆ ಹಂಚಿಕೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಸಿಂಧನೂರು ಪೊಲೀಸರು ಆಗಮಿಸಿದ್ದು, ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದವೂ ನಡೆಯಿತು.

Read More

ಕೋಲಾರ : ರಾಜ್ಯದಲ್ಲಿ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ರದ್ದು ವಿಚಾರವಾಗಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, 11 ಲಕ್ಷ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಗೆ ಬದಲಾವಣೆ ಆಗ್ತಿದೆ. ಬದಲಾವಣೆಗೆ ಕೈ ಹಾಕಿರುವ ಸರ್ಕಾರದ ಬಗ್ಗೆ ಜನರು ಪ್ರಶ್ನೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲೂ ಅಕ್ಕಿ ಕಡಿತ ಮಾಡ್ತಿಲ್ಲ. ಬಿಪಿಎಲ್‌ ನಿಂದ ಎಪಿಎಲ್‌ ಗೆ ಬದಲಾವಣೆ ಬಗ್ಗೆ ಯೋಚನೆ ಮಾಡಿದ್ದೀರಾ.. ಎಪಿಎಲ್‌ ಕಾರ್ಡ್ ನವರಿಗೆ ದುಡ್ಡು ಕೊಡಬೇಕಲ್ವಾ..?, ಸರ್ಕಾರದ ಮೇಲೆ ಹೊರೆ ತಪ್ಪಿಸಲು ಈ ರೀತಿ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಕೊಡ್ತಿದ್ದಾರೆ. ಗ್ಯಾರಂಟಿ ಸ್ಕೀಮ್ ನಿಂದ ಸರ್ಕಾರಕ್ಕೆ ಏನೂ ಹೊರೆ ಇಲ್ಲ ಎಂದಿರುವ ಹೆಚ್‌ ಡಿಕೆ, ತೆರಿಗೆ ಹೆಚ್ಚಿಸಿ ಸಂಗ್ರಹ ಮಾಡಿರುವ ಹಣ ಏನಾಯ್ತು..? ಎಂದು ಪ್ರಶ್ನಿಸಿದ್ದಾರೆ. ಈಗ ರಾಜ್ಯ ಸರ್ಕಾರ 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದೆ ಎಂದರು. https://www.youtube.com/shorts/jgkCxuNjGcw?feature=share ಇನ್ನೂ…

Read More

ಮಣಿಪುರ : ಮಣಿಪುರ ಮತ್ತೆ ಪ್ರಕ್ಷುಬ್ಧವಾಗಿದ್ದು, ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೊನ್ನೆ ನಾಪತ್ತೆಯಾಗಿದ್ದ ಹಸುಳೆ ಸೇರಿದಂತೆ ಆರು ಮಂದಿ ಶವ ಪತ್ತೆಯಾದ ಬಳಿಕ ಮಣಿಪುರದಲ್ಲಿ ಜನರ ಆಕ್ರೋಶ ಹೆಚ್ಚಾಗಿದ್ದು, ಪ್ರತಿಭಟನೆ ತೀವ್ರಗೊಂಡಿದೆ. ಈ ವೇಳೆ ಆಕ್ರೋಶಿತರ ಗುಂಪು ಮಣಿಪುರ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಮನೆ ಮೇಲೆ ದಾಳಿಗೆ ಯತ್ನಿಸಿದ್ದು, ಸಚಿವರು ಮತ್ತು ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದು ನಿವಾಸಗಳನ್ನು ಧ್ವಂಸಗೊಳಿಸಿದ್ದಾರೆ. ಇಂಫಾಲ್‌ನ ವಿವಿಧ ಭಾಗಗಳಲ್ಲಿ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದಾರೆ. ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಇಂಫಾಲ್‌ನಲ್ಲಿ ಕರ್ಫ್ಯೂ ವಿಧಿಸಿದೆ. ಆರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಣಿಪುರದಲ್ಲಿ ಎರಡು ಚರ್ಚ್ ಸೇರಿದಂತೆ ಹಲವೆಡೆ ಬೆಂಕಿ ಹಚ್ಚಲಾಗಿದೆ. ಮೂವರು ಸಚಿವರು ಮತ್ತು ಆರು ಶಾಸಕರ ಮನೆಗಳನ್ನು ಆಕ್ರೋಶಿತರ ಗುಂಪು ಧ್ವಂಸ ಮಾಡಿದೆ. https://ainlivenews.com/good-news-big-fall-in-gold-and-silver-prices-in-bangalore/ ಕಳೆದ ವಾರ ಜಿರಿಬಾಮ್ ಜಿಲ್ಲೆಯಲ್ಲಿ ಕುಕಿ ಬುಡಕಟ್ಟು ಸಮುದಾಯದ ಹ್ಮಾರ್ ಗುಂಪಿನ 31 ವರ್ಷದ ಮಹಿಳೆಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಬಳಿಕ ನಡೆದ ಹಿಂಸಾಚಾರದ…

Read More