Author: Author AIN

ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಚಾರ್ಲಿ ನಾಯಿ ಇದೀಗ ಸಿಹಿ ಸುದ್ದಿ ನೀಡಿದೆ. ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದು ಸುದ್ದಿ ಕೇಳಿದ ನಟ ರಕ್ಷಿತ್ ಶೆಟ್ಟಿ ಮೈಸೂರಿಗೆ ಓಡೋಡಿ ಬಂದು ಚಾರ್ಲಿಯನ್ನು ಮುದ್ದಾಡಿದ್ದಾರೆ. ಚಾರ್ಲಿ ಮರಿಗಳಿಗೆ ಜನ್ಮ ನೀಡಿದ ಸುದ್ದಿಯನ್ನು ನಟ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು, ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದ ಶ್ವಾನವು ಈಗ ರಿಯಲ್ ಆಗಿ ತಾಯಿ ಆಗಿದೆ. ಒಂದಲ್ಲಾ ಎರಡಲ್ಲಾ ಆರು ಮರಿಗಳಿಗೆ ಚಾರ್ಲಿ ಈಗ ಜನ್ಮ ನೀಡಿದ್ದಾಳೆ. ಅದರಲ್ಲಿ ಐದು ಹೆಣ್ಣು ಮರಿಗಳಿದ್ದರೆ, ಒಂದು ಗಂಡು ಮರಿ ಇದೆ. ಅಂದಹಾಗೆ, ಚಾರ್ಲಿ ಮೈಸೂರಿನಲ್ಲಿ ಇದ್ದಾಳೆ. ‘777 ಚಾರ್ಲಿ’ ಸಿನಿಮಾಕ್ಕಾಗಿ ಚಾರ್ಲಿಗೆ ತರಬೇತಿ ನೀಡಿದ್ದವರು ಪ್ರಮೋದ್. ಸದ್ಯ ಅವರ ಮನೆಯಲ್ಲಿ ಚಾರ್ಲಿ ವಾಸವಾಗಿದ್ದು, ಇದೀಗ ಸಂತಸದ ವಿಷಯ ತಿಳಿದು ನಟ ರಕ್ಷಿತ್ ಶೆಟ್ಟಿ ಅವರು ಮೈಸೂರಿಗೆ ಭೇಟಿ ನೀಡಿ,…

Read More

ಸರಕಾರದ ವಿರುದ್ಧ ದಂಗೆ ನಡೆಯುವ ಸಾಧ್ಯತೆಯಿದೆ ಎಂದು ಟರ್ಕಿಯ `ನ್ಯಾಷನಲಿಸ್ಟ್ ಮೂವ್‍ಮೆಂಟ್ ಪಾರ್ಟಿ(ಎಂಎಚ್‍ಪಿ) ಅಧ್ಯಕ್ಷ ಡೆವ್ಲೆಟ್ ಬಹ್ಸೆಲಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಗುಪ್ತಚರ ಇಲಾಖೆಯ ಮುಖ್ಯಸ್ಥರು ಹಾಗೂ ನ್ಯಾಯ ಇಲಾಖೆಯೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಈ ಬಗ್ಗೆ ಟರ್ಕಿಯ ಮುಖ್ಯ ಪ್ರಾಸಿಕ್ಯೂಟರ್ ಕಚೇರಿ ತನಿಖೆಯನ್ನು ಆರಂಭಿಸಿದೆ. ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಬಹ್ಸೆಲಿ `2016ರ ದಂಗೆ ಪ್ರಯತ್ನ ಪುನರಾವರ್ತನೆ ಆಗಬಹುದು. ಸರಕಾರದ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆಯಿದೆ ‘ ಎಂದು ಹೇಳಿದ್ದಾರೆ. ಕ್ರಿಮಿನಲ್ ಸಂಘಟನೆಯ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಟರ್ಕಿಯ ನ್ಯಾಯಾಂಗ ಇಲಾಖೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದೆ. ಕೆಲವು ಪೊಲೀಸರ ವಿರುದ್ಧ ಕ್ರಮ ಕೈಗೊಂಡರೆ ಸಾಲದು. ಸರಕಾರದ ವಿರುದ್ಧ ದಂಗೆಗೆ ಪಿತೂರಿ ನಡೆದಿರುವ ಸಾಧ್ಯತೆಯಿದೆ ಎಂದು ಬಹ್ಸೆಲಿ ಎಚ್ಚರಿಕೆ ನೀಡಿದ್ದರು.

Read More

ಇಂಡೊನೇಶ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತದಲ್ಲಿ ಕಳೆದ ವಾರಾಂತ್ಯದಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೂ 58 ಮಂದಿ ಮೃತಪಟ್ಟಿದ್ದು 35 ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದ ಸಮಸ್ಯೆ ಎದುರಾಗಿದೆ. ಭೂಕುಸಿತದಿಂದ ಕೆಸರು ಮಣ್ಣು ಹಾಗೂ ಪಶ್ಚಿಮ ಸುಮಾತ್ರಾದ ಮೂರು ಜಿಲ್ಲೆಗಳಲ್ಲಿ ಮರಾಪಿ ಪರ್ವತದಿಂದ ಸಿಡಿದ ಜ್ವಾಲಾಮುಖಿಯ ಬಿಸಿಬೂದಿ ಪ್ರವಾಹದ ನೀರಿನಲ್ಲಿ ಸೇರಿಕೊಂಡು ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯಗಳು ರಾಶಿಬಿದ್ದಿವೆ. ತನಾಹ್ ದತಾರ್ ಜಿಲ್ಲೆಯಲ್ಲಿ ಹಲವು ಸೇತುವೆ, ಮನೆಗಳು ಕುಸಿದಿಬಿದ್ದಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ರಾಶಿಬಿದ್ದಿರುವ ಕಲ್ಲು ಮಣ್ಣು, ಮರಗಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪ್ರಮುಖ ಆದ್ಯತೆ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕನಿಷ್ಟ 249 ಮನೆಗಳು, 556 ಎಕರೆ ಕೃಷಿ ಪ್ರದೇಶ, 19 ಸೇತುವೆಗಳು ಹಾಗೂ ಪ್ರಮುಖ ರಸ್ತೆಗಳು…

Read More

ಬಾಲಿವುಡ್ ಚಿತ್ರರಂಗದ ವಿವಾದಿತ ನಟಿ ರಾಖಿ ಸಾವಂತ್ ಸದ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಇದು ರಾಖಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ. ಈ ಮಧ್ಯೆ ಇದೊಂದು ನಾಟಕ ಎಂದು ರಾಖಿ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರು ಹೇಳಿಕೆ ನೀಡಿದ್ದಾರೆ. ‘ಜೈಲಿನಿಂದ ತಪ್ಪಿಸಿಕೊಳ್ಳಲು ರಾಖಿ ಈ ರೀತಿ ಮಾಡುತ್ತಿದ್ದಾರೆ’ ಎಂದಿದ್ದಾರೆ. ಮತ್ತೋರ್ವ ಮಾಜಿ ಪತಿ ರಾಖಿಗೆ ಕ್ಯಾನ್ಸರ್ ಇದೆ ಎಂದಿದ್ದಾರೆ. ವಿಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿ ರಾಖಿ ಸಾವಂತ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 500, 504 ಹಾಗೂ 34 ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದಿಲ್​ ಖಾನ್​ಗೆ ಸಂಬಂಧಿಸಿದ ವಿಡಿಯೋ ಇದಾಗಿದ್ದು, ಅವುಗಳನ್ನು ತಿರುಚಿ ಲೀಕ್ ಮಾಡಿದ್ದಾರೆ ಎನ್ನುವ ಆರೋಪ ಇದೆ.  ರಾಖಿ ಸಾವಂತ್​ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು…

Read More

ನಟಿ ಸಾಯಿ ಪಲ್ಲವಿ ಸದ್ಯ ಬಾಲಿವುಡ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ತೊಡಿಗಿಕೊಂಡಿರುವ ಸಾಯಿ ಪಲ್ಲವಿ ಇದೀಗ ತೆಲುಗಿನ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಮುಂದಿನ ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ ಎನ್ನಲಾಗುತ್ತಿದೆ. ಒಂದು ವಿಭಿನ್ನ ಕಥೆಯನ್ನು ತೋರಿಸಲು ನಿರ್ದೇಶಕ ರವಿಕಿರಣ್ ಮುಂದಾಗಿದ್ದಾರೆ. ವಿಜಯ್‌ಗೆ ಸಾಯಿ ಪಲ್ಲವಿ ಸೂಕ್ತ ನಾಯಕಿ ಎಂದು ಚಿತ್ರತಂಡ ಯೋಚಿಸಿ ನಟಿಯನ್ನು ಸಂಪರ್ಕಿಸಿದೆ. ಸಾಯಿ ಪಲ್ಲವಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನೂ ಆಮೀರ್ ಖಾನ್ ಪುತ್ರನಿಗೆ ನಾಯಕಿಯಾಗಿ ಬಾಲಿವುಡ್‌ಗೆ ಸಾಯಿ ಪಲ್ಲವಿ ಪಾದಾರ್ಪಣೆ ಮಾಡುತ್ತಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ನಾಗಚೈತನ್ಯ ಜೊತೆ ತಾಂಡೇಲ್ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ಸಿನಿಮಾಗಳು ಸಾಯಿ ಪಲ್ಲವಿ ಕೈಯಲ್ಲಿದ್ದು ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

Read More

ತಮಿಳಿನ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ ಅವರ ವೈಯಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್, ನಮ್ಮ ಖಾಸಗಿ ಜೀವನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ನಾವು ಬೇರೆ ಬೇರೆಯಾಗಲು ನಿರ್ಧರಿಸಿದ್ದೇವೆ. ಭಾವನೆಗಳನ್ನು ಗೌರವಿಸಿ, ಕಠಿಣ ಸಮಯವನ್ನು ಅರ್ಥಮಾಡಿಕೊಳ್ಳಿ ಎಂದು ನೆಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ. ಅನಗತ್ಯ ಹೇಳಿಕೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನು ತಿಳಿಸಿದ್ದಾರೆ. ನೋವುಂಟು ಮಾಡುವ ಟೀಕೆಗಳು ಮತ್ತು ಟ್ರೋಲಿಂಗ್‌ಗಳನ್ನು ನಿಲ್ಲಿಸುವ ಸಲುವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಜನರು ಸರಿಯಾದ ಮಾಹಿತಿ ಅಥವಾ ತಿಳುವಳಿಕೆಯಿಲ್ಲದೇ ಇಬ್ಬರು ವ್ಯಕ್ತಿಗಳ ಪ್ರತ್ಯೇಕತೆಯ ಬಗ್ಗೆ ಚರ್ಚಿಸುವುದು ಅಸಮಾಧಾನಕರ ವಿಚಾರ. ಸೆಲೆಬ್ರಿಟಿ ಎಂಬ ಕಾರಣಕ್ಕಾಗಿ, ಖಾಸಗಿ ಜೀವನದ ಬಗ್ಗೆ ಟೀಕೆ ಮಾಡುವುದು ಸೂಕ್ತವಲ್ಲ. ತಮ್ಮ ಹೇಳಿಕೆಗಳು ಇತರರಿಗೆ ನೋವುಂಟು ಮಾಡಬಹುದು ಎಂಬುದನ್ನು ಮರೆತು ಬಿಡುವಷ್ಟು ತಮಿಳು…

Read More

ಯೆಹೂದಿ ದೇಶದ ಅಸ್ತಿತ್ವ ಉಳಿಸಿಕೊಳ್ಳಲು ಅಗತ್ಯವಿರುವುದನ್ನು ಇಸ್ರೇಲ್ ಮಾಡಬೇಕು. ಗಾಝಾದ ಮೇಲೆ ಇಸ್ರೇಲ್ ಪರಮಾಣು ಬಾಂಬ್ ದಾಳಿ ನಡೆಸಿದರೆ ಅದನ್ನು ತಪ್ಪು ಎನ್ನಲಾಗದು ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಪಾನ್‍ ನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕ ಬಾಂಬ್ ಹಾಕಿದ್ದರಿಂದ ಎರಡನೇ ವಿಶ್ವಯುದ್ಧ ಅಂತ್ಯಗೊಂಡಿತು. ಬಾಂಬ್ ದಾಳಿ ನಡೆಸಿದ್ದು ಸರಿಯಾದ ನಿರ್ಧಾರವಾಗಿತ್ತು. ಈಗ ಗಾಝಾದಲ್ಲೂ ಹೀಗೆಯೇ ಆಗುವುದಾದರೆ ಇಸ್ರೇಲ್‍ಗೆ ಅಗತ್ಯವಿರುವ ಬಾಂಬ್‍ಗಳನ್ನು ಅಮೆರಿಕ ಒದಗಿಸಬೇಕು. ದಾಳಿಯಲ್ಲಿ ಕನಿಷ್ಠ ಸಾವು-ನೋವು ಸಂಭವಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಹಾಂ ಲಿಂಡ್ಸೆ ಹೇಳಿದ್ದಾರೆ. ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ನಡೆಸಿದ್ದ ಅಣುಬಾಂಬ್ ದಾಳಿಯಲ್ಲಿ ಸುಮಾರು 2 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ರಫಾದ ಮೇಲೆ ಇಸ್ರೇಲ್ ಆಕ್ರಮಣ ನಡೆಸಿದರೆ ಇಸ್ರೇಲ್‍ಗೆ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿಲುವಿಗೆ ತನ್ನ ವಿರೋಧವಿದೆ ಎಂದ ಲಿಂಡ್ಸೆ, ಗಾಝಾದಲ್ಲಿನ ನಿವಾಸಿಗಳನ್ನು ಹಮಾಸ್ ಮಾನವ ಗುರಾಣಿಯನ್ನಾಗಿ…

Read More

ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದಿದ್ದಾರೆ. ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿಕೊಂಡಿದ್ದ ಜೋಡಿ ಏಕಾಏಕಿ ಡಿವೋರ್ಸ್ ವಿಷಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದರೆ ಇವರು ಬೇರೆ ಆಗೋಕೆ ಕಾರಣ ಏನು ಎಂಬುದು ಈಗಲೂ ರಿವೀಲ್ ಆಗಿಲ್ಲ. ಈ ಮಧ್ಯೆ ತಮಿಳು ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಧನುಷ್ ಗೆ ಇದ್ದ ಪರಸ್ತ್ರೀ ಸಹವಾಸವೇ ವಿಚ್ಚೇಧನಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. 2017ರಲ್ಲಿ ಸುಚಿತ್ರಾ ಅವರು ಒಂದು ಗಂಭೀರ ಆರೋಪ ಮಾಡಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ ಎಂದಿದ್ದ ಅವರು, ಧನುಷ್ ಸಹಾಯಕ ತಮ್ಮ ಜೊತೆ ಬೇರೆ ರೀತಿಯಲ್ಲಿ ನಡೆದುಕೊಂಡಿದ್ದ ಎಂದು ಕೂಡ ಅವರು ಆರೋಪಿಸಿದ್ದರು. ಆ ಬಳಿಕ ಸುಚಿತ್ರಾ ಅವರು ಧನುಷ್ ಬಗ್ಗೆಯೂ ಆರೋಪಿಸಿದ್ದರು.  ಧನುಷ್ ಓರ್ವ ಡ್ರಗ್ ಅಡಿಕ್ಟ್, ತಮಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.…

Read More

ಸ್ಲೋವಾಕಿಯಾದ ಜನಪ್ರಿಯ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಫಿಕೊ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ನಡೆಯುತ್ತಿದೆ. ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಕಲ್ಚರ್​ ಹೌಸ್ ಹೊರಗೆ ಪ್ರಧಾನಿ ಮೇಲೆ 4 ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ. ಬುಲೆಟ್​ 59 ವರ್ಷದ ಫಿಕೊ ಅವರ ಹೊಟ್ಟೆಗೆ ತಗುಲಿದ್ದು ಸದ್ಯ ಪ್ರಧಾನಿಗೆ ಚಿಕಿತ್ಸೆ ಮುಂದುವರೆದಿದೆ. ಸಭೆ ಮುಗಿಸಿ ಫಿಕೊ ಹೊರ ಬಂದಾಗ ಗುಂಡಿನ ದಾಳಿ ನಡೆದಿದೆ. ಘಟನೆಯ ಬಳಿಕ ಓರ್ವ ಶಂಕಿತನನ್ನು ಬಂಧಿಸಿದ್ದು, ಸ್ಥಳವನ್ನು ಸೀಲ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಇಂದು, ಹ್ಯಾಂಡ್ಲೋವಾದಲ್ಲಿ ಸರ್ಕಾರದ ಸಭೆಯ ನಂತರ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಹತ್ಯೆಯ ಯತ್ನ ನಡೆದಿದೆ” ಎಂದು ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಸ್ಲೋವಾಕಿಯಾ ಸಂಸತ್ತಿನ ಉಪ ಸ್ಪೀಕರ್ ಲುಬೊಸ್ ಬ್ಲಾಹಾ ಅವರು ಅಧಿವೇಶನದಲ್ಲಿ ಪ್ರಧಾನಿ ಮೇಲೆ ದಾಳಿ ನಡೆದಿರುವುದನ್ನು ದೃಢಪಡಿಸಿದರು. ನಾವು…

Read More

ವಿಶ್ವಸಂಸ್ಥೆಯ ಸುರಕ್ಷೆ ಮತ್ತು ಭದ್ರತಾ ಇಲಾಖೆ (ಯುಎನ್ ಡಿಎಸ್ಎಸ್) ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ನಿವೃತ್ತ ಕರ್ನಲ್ ವೈಭವ್ ಅನಿಲ್ ಕಾಳೆ (46) ಯುದ್ಧಪೀಡಿತ ಗಾಝಾದಲ್ಲಿ ನಿಧನರಾಗಿದ್ದಾರೆ. ಮೃತ ಕಾಳೆಯವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಎಲ್ಲರೂ ಪುಣೆಯಲ್ಲಿ ವಾಸವಿದ್ದಾರೆ. ಕಾಳೆ ಒಂದು ತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ಇಲಾಖೆಗೆ ಸೇರಿದ್ದರು. ರಫ್ಹಾ ಪಟ್ಟಣದ ಯೂರೋಪಿಯನ್ ಆಸ್ಪತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಖಾನ್ ಯೂನಿಸ್ ನಲ್ಲಿ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆದಿದ್ದು ಈ ವೇಳೆ ಕೊನೆಯುಸಿರೆಳೆದಿದ್ದಾರೆ. ಯುನ್ ಡಿಎಸ್ಎಸ್ ನ ಮತ್ತೊಬ್ಬ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ವಾಹನ ಎಂದು ಸ್ಪಷ್ಟವಾಗಿ ಫಲಕವಿದ್ದರೂ, ಅದರ ಮೇಲೆ ದಾಳಿ ನಡೆಸಿದ್ದು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷದ ಅಕ್ಟೋಬರ್ 7ರಂದು ಆರಂಭವಾದ ಹಮಾಸ್-ಇಸ್ರೇಲ್ ಸಂಘರ್ಷದಿಂದ ಮೃತಪಟ್ಟ ಜಾಗತಿಕ ಸಂಸ್ಥೆಯ ಮೊಟ್ಟಮೊದಲ ಅಂತರಾಷ್ಟ್ರೀಯ ಯೋಧನ ಸಾವು ಇದಾಗಿದೆ. ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್, ಈ…

Read More