Author: Author AIN

ಸಿಂಗಾಪುರದಲ್ಲಿ ಕೋವಿಡ್-19ರ ಹೊಸ ಅಲೆ ಕಾಣಿಸಿಕೊಂಡಿದೆ. ಪರಿಣಾಮ ಒಂದೇ ವಾರದಲ್ಲಿ 25,900 ಸೋಂಕಿನ ಪ್ರಕರಣ ದಾಖಲಾಗಿದ್ದು, ಮತ್ತೆ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವ ಓಂಗ್ ಯೆಕುಂಗ್ ಜನತೆಗೆ ಸಲಹೆ ನೀಡಿದ್ದಾರೆ. `ದೇಶದಲ್ಲಿ ಕೋವಿಡ್ ಸೋಂಕಿನ ಅಲೆ ಆರಂಭಿಕ ಹಂತದಲ್ಲಿದ್ದು ಸ್ಥಿರವಾಗಿ ಏರುತ್ತಿದೆ. ಮುಂದಿನ 2ರಿಂದ 4 ವಾರಗಳಲ್ಲಿ, ಅಂದರೆ ಜೂನ್ ಅಂತ್ಯದ ವೇಳೆಗೆ ಅಲೆ ಗರಿಷ್ಟ ಮಟ್ಟ ತಲುಪಲಿದೆ ಎಂದು ಓಂಗ್ ಎಚ್ಚರಿಕೆ ನೀಡಿದ್ದಾರೆ. ಮೇ 5ರಿಂದ 11ರವರೆಗಿನ ವಾರದಲ್ಲಿ 25,900 ಕೋವಿಡ್-19 ಸೋಂಕಿನ ಪ್ರಕರಣ ದಾಖಲಾಗಿದ್ದರೆ ಅದಕ್ಕಿಂತ ಹಿಂದಿನ ವಾರದಲ್ಲಿ 13,700ರಷ್ಟಿತ್ತು. ಆಸ್ಪತ್ರೆಗೆ ದಾಖಲಾಗುವ ದೈನಂದಿನ ಸರಾಸರಿ 250ನ್ನು ದಾಟಿದ್ದು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ದಾಖಲಾಗುವ ದೈನಂದಿನ ಸರಾಸರಿ ಪ್ರಕರಣ 3 ಆಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಹಾಸಿಗೆಗಳನ್ನು ಕಾಯ್ದಿರಿಸುವ ಉದ್ದೇಶದಿಂದ ತುರ್ತು ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಹಾಗೂ ಸೂಕ್ತ ರೋಗಿಗಳನ್ನು ಮನೆಗೆ ವಾಪಾಸು ಕಳುಹಿಸಿ ಸಂಚಾರಿ ಚಿಕಿತ್ಸಾಲಯದ ಸೇವೆ ಮುಂದುವರಿಸುವಂತೆ ಸೂಚಿಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ. ಕೋವಿಡ್-19 ಸೋಂಕಿನ…

Read More

ಪ್ರಸ್ತಾವಿತ ಸಂಸತ್ ಸುಧಾರಣೆ ಮಸೂದೆಯ ಬಗ್ಗೆ ತೈವಾನ್‍ನ ಸಂಸದರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಸಂಸದರೊಬ್ಬರು ಮಸೂದೆಯ ಪ್ರತಿಯನ್ನು ಅಧಿಕಾರಿಗಳ ಕೈಯಿಂದ ಎಳೆದುಕೊಂಡು ಸದನದ ಹೊರಗೆ ಓಡಿಹೋದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚುನಾಯಿತ ಅಧ್ಯಕ್ಷ ಲಾಯ್ ಚಿಂಗ್‍ಟೆ ಶಾಸಕಾಂಗ ಬಹುಮತವಿಲ್ಲದೆ ಅಧಿಕಾರ ಸ್ವೀಕರಿಸುವ ಕೆಲವೇ ದಿನಗಳ ಮೊದಲು ತೈವಾನ್ ಸಂಸತ್ ಈ ಗದ್ದಲದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸರಕಾರದ ಮೇಲೆ ನಿಗಾ ವಹಿಸಲು ಸಂಸತ್‍ಗೆ ಹೆಚ್ಚಿನ ಅಧಿಕಾರವನ್ನು ನೀಡುವುದು ವಿರೋಧ ಪಕ್ಷಗಳ ಉದ್ದೇಶವಾಗಿದೆ. ಮಸೂದೆಯನ್ನು ಮತಕ್ಕೆ ಹಾಕುವುದಕ್ಕೂ ಮೊದಲೇ ಸದನದ ಹೊರಗೆ ಕೆಲವು ಸಂಸದರ ನಡುವೆ ವಾಗ್ಯುದ್ದ, ನೂಕಾಟ, ಪರಸ್ಪರರನ್ನು ಹಿಡಿದೆಳೆಯುವುದು ನಡೆದಿತ್ತು. ಬಳಿಕ ಸದನದ ಒಳಗೂ ಈ ಸನ್ನಿವೇಶ ಪುನರಾವರ್ತನೆಗೊಂಡಿದ್ದು ಸ್ಪೀಕರ್ ಆಸನದ ಸುತ್ತ ಸೇರಿದ ಕೆಲವು ಸಂಸದರು ಮಸೂದೆಯನ್ನು ವಿರೋಧಿಸಿ ಘೋಷಣೆ ಕೂಗಿದರೆ, ಇನ್ನು ಕೆಲವರು ಮೇಜಿನ ಮೇಲೇರಿ ಘೋಷಣೆ ಕೂಗುತ್ತಿದ್ದವರನ್ನು ಹಿಡಿದೆಳೆದರು. ಈ ಗದ್ದಲದಲ್ಲಿ…

Read More

ರಶ್ಯದೊಂದಿಗೆ ಸಂಪರ್ಕ ಹೊಂದಿದ್ದ 4 ಮಾಧ್ಯಮ ಸಂಸ್ಥೆಗಳ ಪ್ರಸರಣವನ್ನು ನಿಷೇಧಿಸಿರುವುದಾಗಿ ಯುರೋಪಿಯನ್ ಯೂನಿಯನ್ ತಿಳಿಸಿದೆ. `ದಿ ವಾಯ್ಸ್ ಆಫ್ ಯುರೋಪ್, ಆರ್‍ಐಎ ನೊವೋಸ್ತಿ ನ್ಯೂಸ್‍ಏಜೆನ್ಸಿ, ಇಝ್ವೆಸ್ಟಿಯಾ ಮತ್ತು ರೊಸ್ಸಿಸ್ಕಯ ಗಝೆಟ್ ದಿನಪತ್ರಿಕೆಗಳ ಪ್ರಸಾರವನ್ನು ನಿಷೇಧಿಸಲಾಗಿದೆ. ಈ ಸುದ್ಧಿಸಂಸ್ಥೆಗಳು ಉಕ್ರೇನ್ ವಿರುದ್ಧದ ರಶ್ಯದ ಆಕ್ರಮಣಕಾರಿ ಯುದ್ಧದ ಪರವಾಗಿ ಅಭಿಪ್ರಾಯ ಮೂಡಿಸಲು ಮತ್ತು ಯುದ್ಧವನ್ನು ಬೆಂಬಲಿಸುವ ಸುದ್ಧಿಗಳನ್ನು ಪ್ರಸಾರ ಮಾಡುತ್ತಿದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಯುರೋಪಿಯನ್ ಕೌನ್ಸಿಲ್ ಹೇಳಿದೆ. ಈ ನಿಷೇಧವು 2022ರಿಂದ ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ಪೂರ್ಣಪ್ರಮಾಣದ ಆಕ್ರಮಣದ ವಿರುದ್ಧ ಜಾರಿಗೊಳಿಸಲು ಯೋಜಿಸಿರುವ 14ನೇ ನಿರ್ಬಂಧ ಪ್ಯಾಕೇಜ್‍ನ ಭಾಗವಾಗಿದೆ. ರಶ್ಯದ ಸರಕಾರಿ ಸ್ವಾಮ್ಯದ `ರಶ್ಯ ಟುಡೆ ಮತ್ತು ಸ್ಪುಟ್ನಿಕ್’ ವಿರುದ್ಧ ಈ ಹಿಂದೆಯೇ ನಿರ್ಬಂಧ ಜಾರಿಗೊಂಡಿದೆ. ಯುರೋಪಿಯನ್ ಯೂನಿಯನ್ ಕ್ರಮಕ್ಕೆ ಮಿಂಚಿನ ವೇಗದಲ್ಲಿ ಮತ್ತು ಪಾಶ್ಚಿಮಾತ್ಯರಿಗೆ ತೀವ್ರ ನೋವುಂಟು ಮಾಡುವ ರೀತಿಯಲ್ಲಿ ಪ್ರತಿಕ್ರಮ ಕೈಗೊಳ್ಳಲಿದ್ದೇವೆ’ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಪ್ರತಿಕ್ರಿಯಿಸಿದ್ದಾರೆ.

Read More

ಕೇನ್ಸ್ 77ನೇ ಆವೃತ್ತಿಯ ಉತ್ಸವದಲ್ಲಿ ಪಾಲ್ಗೊಳ್ಳಲು ನಟಿ ಶೋಭಿತಾ ಧೂಳಿಪಾಲ ಫ್ರಾನ್ಸ್ ಗೆ ತೆರಳಿದ್ದಾರೆ. ಶೋಭಿತಾ ಧೂಳಿಪಾಲ ಗೋಲ್ಡನ್ ಡ್ರೆಸ್ ನಲ್ಲಿ ಮಿಂಚಿದ್ದು ಅವುಗಳ ಸುಂದರ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಗೋಲ್ಡನ್ ಡ್ರೆಸ್ ನಲ್ಲಿ ಶೋಭಿತಾ ಧೂಳಿಪಾಲ ಗೋಲ್ಡನ್​ ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ತೆಲುಗು ಹೀರೋಯಿನ್ ಗಳು ಆಫರ್ ಗಳಿಗಾಗಿ ಗ್ಲಾಮರ್ ಶೋಗಳ ಜೊತೆಗೆ ಬೋಲ್ಡ್ ಮಾತುಗಳಿಂದಲೂ ನಟಿಯರು ಗಮನ ಸೆಳೆಯುತ್ತಿದ್ದಾರೆ. ಇದೀಗ ತೆಲುಗು ನಟಿ ಮಾಡಿರುವ ಕಮೆಂಟ್ ವೈರಲ್ ಆಗಿತ್ತು. ತೆಲುಗು ನಟಿಯರು ಇದೀಗ ಕಾಲಿವುಡ್, ಬಾಲಿವುಡ್ ಇಂಡಸ್ಟ್ರಿಯಲ್ಲೂ ಮಿಂಚುತ್ತಿದ್ದಾರೆ. ಹಿಂದಿ ಸಿನಿಮಾಗಳಲ್ಲಿಯೂ ನಟಿ ಮಣಿಯರಿಗೆ ಡಿಮ್ಯಾಂಡ್ ಹೆಚ್ಚಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರು ಗ್ಲಾಮರ್ ಪ್ರದರ್ಶನ ಮಾಡ್ತಾರೆ. ಇತ್ತೀಚೆಗೆ ತೆಲುಗು ಹುಡುಗಿ ಸೋಭಿತಾ ಧೂಳಿಪಾಲ ಕ್ರೇಜಿ ಕಾಮೆಂಟ್ ಗಳನ್ನು ಮಾಡಿದ್ದರು. ಸೋಭಿತಾ ಧೂಳಿಪಾಲ ಫೆಮಿನಾ ಮಿಸ್ ಇಂಡಿಯಾ 2013 ಸ್ಪರ್ಧೆಯಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದರು. ಅವರು 2016…

Read More

ಪ್ರಧಾನಿ ನರೇಂದ್ರ ಮೋದಿ ಜೀವನದ ಕುರಿತಾದ ಸಿನಿಮಾ ಈಗಾಗಲೇ ತೆರೆಗೆ ಬಂದಿದೆ. ಆದರೆ ಆ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಇದೀಗ ಮತ್ತೆ ನರೇಂದ್ರ ಮೋದಿ ಬಯೋಪಿಕ್​ ಮಾಡಲು ತಯಾರಿ ನಡೆದಿದೆ. ಆ ಸಿನಿಮಾಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ. ವರದಿಗಳ ಪ್ರಕಾರ ಸತ್ಯರಾಜ್​ ಅವರು ನರೇಂದ್ರ ಮೋದಿಯ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಕಟ್ಟಪ್ಪನ ಪಾತ್ರ ಮಾಡುವ ಮೂಲಕ ಸತ್ಯರಾಜ್ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಈಗ ಅವರಿಗೆ ದೊಡ್ಡ ಆಫರ್​ ನೀಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ವಿವೇಕ್ ಒಬೆರಾಯ್​ ನಟಿಸಿದ ‘ಪಿಎಂ ನರೇಂದ್ರ ಮೋದಿ’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ವಿವೇಕ್​ ಒಬೆರಾಯ್​ ಅವರು ಮೋದಿಯ ಪಾತ್ರ ಮಾಡಿದ್ದರು. ವಿವೇಕ್​ ಒಬೆರಾಯ್ ಅವರ ಲುಕ್​ ಸರಿ ಇರಲಿಲ್ಲ ಹಾಗೂ ಅವರ ನಟನೆ ಕೂಡ ಚೆನ್ನಾಗಿಲ್ಲ ಎಂದು ಪ್ರೇಕ್ಷಕರು ಆ ಸಿನಿಮಾವನ್ನು ತಿರಸ್ಕರಿಸಿದ್ದರು. ಈಗ ಮತ್ತೆ ನರೇಂದ್ರ ಮೋದಿ ಅವರ ಜೀವನಾಧಾರಿತ…

Read More

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ವಿಶೇಷ ವ್ಯಕ್ತಿಯ ಆಗಮನವಾಗುತ್ತಿದೆ ಎಂದು ಇನ್ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡು ಕುತೂಹಲ ಮೂಡಿಸಿದ್ದರು. ಎಲ್ಲರೂ ನಟನ ಮದುವೆ ಮ್ಯಾಟರ್ ಎಂದೇ ಭಾವಿಸಿದ್ದರು. ಈಗ ಅಸಲಿ ವಿಚಾರ ಏನು ಎಂಬುದನ್ನು ಪ್ರಭಾಸ್ ತಿಳಿಸಿದ್ದಾರೆ. ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನಕ್ಕೆ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ. ಕಾಯುತ್ತಾ ಇರಿ ಎಂದು ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಎಲ್ಲರೂ ಮದುವೆ ಬಗ್ಗೆ ಸಿಹಿಸುದ್ದಿ ಕೊಡಲು ಪ್ರಭಾಸ್ ರೆಡಿಯಾಗಿದ್ದಾರೆ ಎಂದು ಭಾವಿಸಿದ್ದರು. ಆದರೆ ಈಗ ನಟ ನೀಡಿರುವ ಮಾಹಿತಿನೇ ಬೇರೆ.. ‘ಕಲ್ಕಿ 2898’ ಎಡಿ (Kalki 2898 AD) ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಟ್ರಿಕ್ ಯೂಸ್ ಮಾಡಿದ್ದಾರೆ. ಬುಜ್ಜಿ ಕಾರನ್ನು ಪರಿಚಯಿಸಿದ್ದಾರೆ. ಶೇರ್ ಮಾಡಿರುವ ವಿಡಿಯೋದಲ್ಲಿ ‘ಮಹಾನಟಿ’ ಕೀರ್ತಿ ಸುರೇಶ್ ಧ್ವನಿ ಕೂಡ ಕೇಳಿ ಬಂದಿದೆ. ಅಂದಹಾಗೆ, ಇದು ಪ್ರಭಾಸ್ ಅವರ ವೈಯಕ್ತಿಕ ಜೀವನದ ವಿಷಯ ಅಲ್ಲ. ಪಕ್ಕಾ ಸಿನಿಮಾದ ವಿಚಾರ. ‘ಕಲ್ಕಿ 2898 ಎಡಿ’ ಸಿನಿಮಾದ…

Read More

ತೆಲುಗಿನ ತ್ರಿಯನಯನಿ ಧಾರವಾಹಿಯಲ್ಲಿ ನಟಿಸುತ್ತಿದ್ದ ನಟಿ ಪವಿತ್ರಾ ಜಯರಾಮ್ ಕೆಲದಿನಗಳ ಹಿಂದೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬಳಿಕ ಮೇ 17ರಂದು ಪವಿತ್ರಾ ಅವರ ಗೆಳೆಯ ಚಂದು ಅಲಿಯಾಸ್ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾದರು. ಈ ಬೆನ್ನಲ್ಲೇ ಇಬ್ಬರ ಸಂಬಂಧದ ಬಗ್ಗೆ ಮುನ್ನೆಗೆ ಬಂತು. ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರವಾಗಿ ಪವಿತ್ರಾ ಪುತ್ರ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಕಾಂತ್ ಸಾವನ್ನಪ್ಪಿದ ಬಳಿಕ ಅವರ ಕುಟುಂಬಸ್ಥರು ಪವಿತ್ರಾ ಬಗ್ಗೆ ಹಲವು ವಿಚಾರಗಳ ಬಗ್ಗೆ ದೂರಿದ್ದರು. ಪ್ರವಿತ್ರಾ ಬಂದ ಮೇಲೆ ನಮ್ಮ ಸಂಸಾರ ಹಾಳಾಯ್ತು ಎಂದು ತೆಲುಗು ಮಾಧ್ಯಮಗಳಲ್ಲಿ ಕಣ್ಣೀರಿಟ್ಟಿದ್ದರು. ಈ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್ ಅವರ ಪುತ್ರ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗ ಹೇಗೆ ಅಂತ ನಿಮಗೂ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ಕೂಡ ಹಾಗೆಯೇ. ನನ್ನ ಜೊತೆ ಯಾರಾದರೂ ಇದ್ದರೆ ಮೊದಲು ಆ ರೀತಿಯ ಗಾಸಿಪ್ ಹುಟ್ಟಿಕೊಳ್ಳುತ್ತದೆ. ಅಮ್ಮ ಮತ್ತು…

Read More

ವಿಜಯ್ ಸೇತುಪತಿ ನಟನೆಯ ಏಸ್ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ವಿಜಯ್ ಸೇತುಪತಿಯವರ ಏಸ್ ಚಿತ್ರದ ಫಸ್ಟ್ ಲುಕ್‌ನಲ್ಲಿ ವಿಜಯ್ ತುಂಬಾ ಯಂಗ್ ಆಗಿ ಸ್ಟೈಲಿಶ್ ಆಗಿ ಕಂಡುಬಂದಿದ್ದು, ವಿಜಯ್ ಸೇತುಪತಿ ಫ್ಯಾನ್ಸ್‌ನಲ್ಲಿ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ. ವಿಜಯ್ ಪೋಸ್ಟರ್‌ನಲ್ಲಿ ಗಡ್ಡಬಿಟ್ಟುಕೊಂಡು ಬಾಯಲ್ಲಿ ಸಿಗಾರ್ ಪೈಪ್  ಇನ್ನೊಂದು ಕೈಯಲ್ಲಿ  ದಾಳವನ್ನು ಉರುಳಿಸುತ್ತಿರುವ ದೃಶ್ಯ ಕಂಡುಬಂದಿದೆ. “#VJS51 #ACE ನ ಫಸ್ಟ್ ಲುಕ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ನೀವು ಕಾಯುತ್ತಿರುವ ಟ್ರಂಪ್ ಕಾರ್ಡ್ ಎಂದು ಕ್ಯಾಪ್ಶನ್ ಇರುವ ಬರಹವನ್ನು 46 ವರ್ಷದ ನಟ ಪೋಸ್ಟರ್‌ನೊಂದಿಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿತ್ರದ ಫಸ್ಟ್ ಲುಕ್‌ನಲ್ಲಿ ವಿಜಯ್ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಚಿತ್ರಕ್ಕೆ ಅರುಮುಗಾ ಕುಮಾರ್ ನಿರ್ದೇಶನ ಮಾಡಿದ್ದು, ವಿಜಯ್ ಸೇತುಪತಿ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಯೋಗಿ ಬಾಬು, ಪಿಎಸ್ ಅವಿನಾಶ್, ದಿವ್ಯ ಪಿಳ್ಳೈ, ಬಬ್ಲು, ರಾಜ್‌ಕುಮಾರ್ ಹೀಗೆ ಅನೇಕ…

Read More

ಬಾಲಿವುಡ್ ಬ್ಯೂಟಿ, ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ನಟಿಯ ಸಖತ್​ ಗ್ಲಾಮರಸ್​ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿರುತ್ತದೆ. ಕೆಲವರು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಇನ್ನೂ ಕೆಲವರು ಕೆಟ್ಟದಾಗಿ ಟ್ರೋಲ್​ ಮಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಟಿಯರು ಇಂಥದ್ದನ್ನು ಪ್ರತಿ ದಿನವೂ ಎದುರಿಸುತ್ತಾರೆ. ಅದಕ್ಕೆ ಜಾನ್ವಿ ಕಪೂರ್​ ಕೂಡ ಹೊರತಾಗಿಲ್ಲ. ಇತ್ತೀಚೆಗೆ ಅವರು ಕರಣ್​ ಜೋಹರ್​ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಬಾಲಕಿ ಆಗಿದ್ದಾಗಲೇ ತಮ್ಮ ಫೋಟೋವನ್ನು ಅಶ್ಲೀಲ ವೆಬ್​ಸೈಟ್​ನಲ್ಲಿ ಹಾಕಲಾಗಿತ್ತು ಎಂದು ಜಾನ್ವಿ ಕಪೂರ್​ ನೋವು ತೋಡಿಕೊಂಡಿದ್ದಾರೆ. ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’ ಸಿನಿಮಾದಲ್ಲಿ ಜಾನ್ವಿ ಕಪೂರ್​ ಅವರು ನಟಿಸಿದ್ದಾರೆ. ಮೇ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಟ ರಾಜ್​ಕುಮಾರ್​ ರಾವ್​ ಜೊತೆ ಜಾನ್ವಿ ಕಪೂರ್​ ತೆರೆಹಂಚಿಕೊಂಡಿದ್ದಾರೆ. ಚಿತ್ರದ ಕುರಿತು ಕರಣ್​ ಜೋಹರ್​ ಅವರ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಜಾನ್ವಿ ಕಪೂರ್​ ಅವರ ವೈಯಕ್ತಿಕ ಜೀವನದ…

Read More

ಬಹುಭಾಷಾ ನಟ ಕಿಶೋರ್ ಬಿಜೆಪಿ ಪಕ್ಷವನ್ನು, ಪ್ರಧಾನಿ ಮೋದಿಯನ್ನು ಪದೇ ಪದೆ ಟೀಕಿಸುತ್ತಲೇ ಇರುತ್ತಾರೆ. ಸದ್ಯ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ವಿವಿಧ ಹಂತಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಆಗಿದೆ. ಇಂತಹ ಸಮಯದಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ ಹೊರ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಷಣದ ವೀಡಿಯೋ ತುಣುಕುಗಳನ್ನು ಹಂಚಿಕೊಂಡು “ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ” ಎಂದು ಕಿಶೋರ್ ಬರೆದುಕೊಂಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಕಿಶೋರ್ ದ್ವೇಷ ಹೊರ ಹಾಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೊಂಚ ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. “ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ. ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವಾಸ ಕಂಡ ಅತೀ ಸುಳ್ಳುಗಾರ, ಅತೀ…

Read More