ಹೈದಾರಬಾದ್: ಮುತ್ತಿನನಗರಿಯಲ್ಲಿ ನಡೆದ ಸಮಾರಂಭದಲ್ಲಿ ಒಂದೇ ಕರ್ನಾಟಕ ಪತ್ರಿಕೆ ಪ್ರಧಾನ ಸಂಪಾದಕರಾದ ಲಿಂಗಯ್ಯ ಬಿ.ಕಾಡದೇವರಮಠ ಅವರಿಗೆ ‘ಪವರ್ ಎಂಟರ್ಪ್ರನೂನರ್ ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು. https://youtu.be/Ke0zLG4tCkA?si=DHUgWGf2kJ2j6Mq- ಕೋಟಕ್ ಲೈಫ್ ಸಮೂಹದ ಪದಾಧಿಕಾರಿಗಳಾದ ದ್ಯಾಲಂಮುತ್ತುಸ್ವಾಮಿ ವೆಂಕಟರಾಮ ಕುಮಾರ್ ಹಾಗೂ ಜಯಪ್ರಕಾಶ್ ರೆಡ್ಡಿ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದು, https://ainlivenews.com/if-you-have-these-problems-do-not-drink-turmeric-milk/ ಅದಲ್ಲದೆ ಉದ್ಯಮಿ ಹಾಗೂ ಪತ್ರಿಕೋದ್ಯಮಿ ಲಿಂಗಯ್ಯ ಬಿ.ಕಾಡದೇವರಮಠ ಅವರ ತಂಡದ ಸದಸ್ಯರಾದ ಎಂ.ಗುರುಬಸಯ್ಯ ಕಾಡದೇವರಮಠ ಹಾಗೂ ಶಂಭು ನಾಗಠಾಣ ಅವರಿಗೆ ಮುತ್ತಿನಗರಿ ಕೋಟಕ್ ಲೈಫ್ ಸಮೂಹದಿಂದ ಬ್ಲೂಕ್ಲಬ್ ಸದಸ್ಯತ್ವ ಲಭಿಸಿದೆ.
Author: Author AIN
ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ರಾಮಲೀಲಾ ಮೈದಾನದಲ್ಲಿಂದು ನಡೆದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಇತರ ಕೇಂದ್ರ ಸಚಿವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ.ಕೆ ಸಕ್ಸೆನಾ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಚಿವರಾಗಿ ಪರ್ವೇಶ್ ಸಾಹಿಬ್ ಸಿಂಗ್, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. https://ainlivenews.com/if-you-have-these-problems-do-not-drink-turmeric-milk/ ಸಮಾರಂಭದಲ್ಲಿ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಚಂದ್ರಬಾಬು ನಾಯ್ಡು ಸೇರಿದಂತೆ ಎನ್‌ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಯಿತು.
ಬಾಗಲಕೋಟೆ : ತ್ರಿಪದಿಗಳ ಮೂಲಕ ಸಮಾಜದಲ್ಲಿ ಪ್ರಖರ ಚಿಂತನೆಗಳನ್ನು ಸಾರಿದ ಹೆಮ್ಮೆಯ ಕವಿ ಸರ್ವಜ್ಞ. ಇಂದು ತ್ರಿಪದಿ ಕವಿ ಸರ್ವಜ್ಞರ ಜಯಂತಿಯಾಗಿದ್ದು, ಬಾಗಲೋಟೆಯ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ನಡೆಯಿತು. https://www.youtube.com/watch?v=ykrwcXwJseo ಇದೇ ಸಂದರ್ಭದಲ್ಲಿ ತಹಶೀಲ್ದಾರ ಗಿರೀಶ ಸ್ವಾಧಿ. ಪತ್ರಕರ್ತರಾದ ಪ್ರಕಾಶ ಕುಂಬಾರ. ಗುರು ಕುಂಬಾರ. ಈ ಎಂ ಹಳೆಮನೆ. ಮಲ್ಲು ಕುಂಬಾರ. ಶಂಕರ ಕುಂಬಾರ. ಗ್ರಾಮ ಲೆಕ್ಕಾಧಿಕಾರಿ ಸದಾಶಿವ ಕುಂಬಾರ. ಕಂದಾಯ ಅಧಿಕಾರಿ ಮಠಪತಿ. ಚೇತನ ಭಜಂತ್ರಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಮೈಸೂರು : ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಭಾರೀ ಚರ್ಚೆ ಗ್ರಾಸವಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದ ಮೌಲ್ವಿಯನ್ನು ಬಂಧಿಸಲಾಗಿದೆ. ಗಲಾಟೆ ನಡೆದ 11 ದಿನಗಳ ಬಳಿಕ ಗಲಭೆಗೆ ಪ್ರಚೋದಿಸಿದ್ದ ಆರೋಪದಡಿ ಮೌಲ್ವಿ ಮುಫ್ತಿ ಮುಸ್ತಾಕ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. https://ainlivenews.com/udayagiri-police-station-riot-case/ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಂತರ ಯುವಕನೋರ್ವ ಸೋಷಿಯಲ್ಲಿ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಒಂದು ಫೋಸ್ಟ್ ಗಲಭೆಗೆ ಕಾರಣವಾಗಿತ್ತು. ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆ ವೇಳೆ ಠಾಣೆ ಮುಂದೆ ಜಮಾಯಿಸಿದ್ದ ಗುಂಪೊಂದು ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸ್ ಠಾಣೆ ವಾಹನಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಈ ಘಟನೆಯ ಭಯಾನಕ ಸಿಸಿಟಿವಿ ದೃಶ್ಯಗಳು ನಂತರ ವೈರಲ್ ಆಗಿದ್ದವು. ಇದೇ ಪ್ರಕರಣ ವಿರೋಧಿಸಿ ಬಿಜೆಪಿ ಸಹ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿತ್ತು. ಇದೀಗ…
ಬೆಂಗಳೂರು: ವಿಷ್ಣುಪ್ರಿಯ ಸಿನಿಮಾ ಪ್ರಮೋಷನ್‌ಗಾಗಿ ದಾವಣಗೆರೆಗೆ ತೆರಳುತ್ತಿದ್ದ ವೇಳೆ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಐಷಾರಾಮಿಗೆ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. https://youtu.be/mPlKb0I0B3c?si=Nny6FU5F-gW4qFmc ‘ವಿಷ್ಣುಪ್ರಿಯಾ’ ಪ್ರಮೋಷನ್ ಮಾಡಲು ಬೆಂಗಳೂರಿನಿಂದ ದಾವಣಗೆರೆಗೆ ಶ್ರೇಯಸ್ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದರು. ಶಿರಾ ಬಳಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ನಡೆದಿದೆ. https://ainlivenews.com/if-you-have-these-problems-do-not-drink-turmeric-milk/ ಲಾರಿ ಡಿಕ್ಕಿಯಾದ ಹಿನ್ನೆಲೆಯ BMW ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೇಯಸ್ ಮಂಜು ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ರು. ಈ ಮಧ್ಯೆ ಕಾರಿಗೆ ಲಾರಿ ಡಿಕ್ಕಿಯಾಗಿ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಬೇಡಿಕೆಯ ತಾರೆಗಳಲ್ಲಿ ಸಾಯಿ ಪಲ್ಲವಿ ಒಬ್ಬರು. ಇತ್ತೀಚೆಗೆ, ಥಂಡೆಲ್ ನಟಿ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಸನ್ಮಾನ ಸಮಾರಂಭಕ್ಕೆ ಧರಿಸಲು ತನ್ನ ಅಜ್ಜಿಯ ಸೀರೆಯನ್ನು ತುಂಬಾ ಜೋಪಾನವಾಗಿ ಇಟ್ಟಿದ್ದೇನೆ ಎಂದು ಅವರು ಹೇಳಿದರು. ಹೌದು ದಕ್ಷಿಣ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರ ಅಂತಂದ್ರೆ, ಲೇಡಿ ಪವರ್ ಸ್ಟಾರ್ ಅಂದ್ರೆ ಸಾಯಿ ಪಲ್ಲವಿ ಅಂತಾನೆ ಹೇಳ್ಬೇಕು. ಸಿನಿಮಾ ವಿಷ್ಯದಲ್ಲಿ ಅವರ ದೃಷ್ಟಿಕೋನ ಅಸಾಮಾನ್ಯ. ಸಾಯಿ ಪಲ್ಲವಿ ಅಂದ್ರೆ ಬರೀ ಗ್ಲಾಮರ್ ಪಾತ್ರಗಳಿಗೆ ಸೀಮಿತ ಅಲ್ಲ. ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. https://youtube.com/shorts/AP8KcfdTtuc?si=yzn5zP6g9tgyq0yN ಇತ್ತೀಚೆಗೆ ಸಾಯಿ ಪಲ್ಲವಿ ಅಭಿನಯದ ಸಿನಿಮಾಗಳು ಸೂಪರ್ ಹಿಟ್ ಆಗ್ತಿವೆ. ಒಳ್ಳೆಯ ಕಥೆ ಮತ್ತು ಪಾತ್ರಗಳ ಆಯ್ಕೆಯಲ್ಲಿ ಅವರು ನಿಖರ. ಹಿಟ್ ಸಿನಿಮಾ ಕೊಡೋಕೆ ಆಗಲ್ಲ ಅಂತಿದ್ದವರಿಗೆ ಉತ್ತರ ಕೊಡುವಂತೆ ಸಾಯಿ ಪಲ್ಲವಿ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಶಿವಕಾರ್ತಿಕೇಯನ್…
ಬೆಂಗಳೂರು: ತಪ್ಪು ಮಾಡಿದ್ದಾರೆಂದು ಆರೋಪಿಸಿ ಬೆಂಗಳೂರಿನ ಹೆಗಡೆ ನಗರದಲ್ಲಿರುವ ಮದರಸ ಕಚೇರಿಗೆ ಕರೆದು ಬಾಲಕಿಯರ ಮೇಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ಜಾಮೀಯ ಆಯೀಷ ಸಿದ್ದಿಕಾ ಆಲ್ ಬನಾತ್‌ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮೊಹಮ್ಮದ್ ಹಸನ್ ಅಲಿ ಬಂಧಿತ ಆರೋಪಿಯಾಗಿದ್ದು, ಮದರಸಾದ ಪ್ರಾಂಶುಪಾಲೆಯ ತಮ್ಮನಾಗಿರುವ ಈತ ಸಲುಗೆಯ ಮೇರೆಗೆ ಮದರಸಾಗೆ ಬಂದಿದ್ದ, ಈ ವೇಳೆ ತಪ್ಪು ಮಾಡಿರುವುದಾಗಿ ಬಾಲಕಿಯರನ್ನು ಕಚೇರಿಗೆ ಕರೆದಿದ್ದು, ಈ ವೇಳೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. https://ainlivenews.com/if-you-have-these-problems-do-not-drink-turmeric-milk/ ಈ ವಿಷಯ ತಿಳಿದ ಬಾಲಕಿಯರ ಪೋಷಕರು ಮದರಸಾ ಮುಂದೆ ಗಲಾಟೆ ನಡೆಸಿದ್ದಾರೆ. ಕಮೀಷನರ್, ಎಸಿಪಿ, ಡಿಸಿಪಿ ನ್ಯಾಯ ಕೊಡಿಸಬೇಕು, ಆರೋಪಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ಬಿಎನ್‌ಎಸ್ 115, ಅಮಡ್ 75 ಆಫ್ ಜೆಜೆ ಆಕ್ಟ್ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಹಗರಣದ ಲೋಕಾಯುಕ್ತ ತನಿಖೆ ಬಳಿಕ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾವರ್ತಿ, ಬಾಮೈದ ಮಲ್ಲಿಕಾರ್ಜುನ್, ಜಮೀನು ಮಾಲೀಕ ದೇವರಾಜುಗೆ ಕ್ಲೀನ್‌ಚಿಟ್ ನೀಡಲಾಗಿದೆ. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ತನಿಖಾಧಿಕಾರಿ ಎಸ್‌ಪಿ ಉದೇಶ್ ಇಂದು ಬೆಳಗ್ಗೆ ಅಂತಿಮ ವರದಿಯ ಜೊತೆ ನ್ಯಾಯಾಲಯಕ್ಕೆ ಆಗಮಿಸಿ ಸಲ್ಲಿಕೆ ಮಾಡಿದರು. https://ainlivenews.com/if-you-have-these-problems-do-not-drink-turmeric-milk/ 50 ಜನರ ಹೇಳಿಕೆಗಳನ್ನು ದಾಖಲು ಮಾಡಿದ ಪೊಲೀಸರು 27 ಸಂಪುಟ, 11,200 ಪುಟಗಳ ತನಿಖಾ ವರದಿಯನ್ನು ಬಿ ರಿಪೋರ್ಟ್ ಎಂದೇ ಉಲ್ಲೇಖಿಸಿದ್ದಾರೆ. ಅಂತಿಮ ವರದಿಯನ್ನು ಪಡೆದ ನ್ಯಾಯಾಲಯ ವಿಚಾರಣೆಯನ್ನು ಫೆ. 24ಕ್ಕೆ ಮುಂದೂಡಿದೆ.
ಟೆಸ್ಲಾ ಕಾರುಗಳು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿವೆ. ಪ್ರಧಾನಿ ಮೋದಿ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ನಡುವಿನ ಭೇಟಿಯ ನಂತರ ಅಮೆರಿಕದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ಮಸ್ಕ್ ಭಾರತದಲ್ಲಿ ಉದ್ಯೋಗಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಟೆಸ್ಲಾ 13 ರೀತಿಯ ಉದ್ಯೋಗಗಳಿಗೆ ಜಾಹೀರಾತು ನೀಡಿದೆ. ಏಪ್ರಿಲ್ ತಿಂಗಳಿಂದಲೇ 25,000 ಯುಎಸ್ ಡಾಲರ್ಗಳಷ್ಟು ಕಡಿಮೆ ಬೆಲೆಗೆ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಬಹುದು ಎನ್ನಲಾಗಿದೆ. 25,000 ಡಾಲರ್ ಎಂದರೆ ಸುಮಾರು 21-22 ಲಕ್ಷ ರುಪಾಯಿ ಆಗುತ್ತದೆ. ಜರ್ಮನಿಯ ಬರ್ಲಿನ್ ನಗರದಲ್ಲಿರುವ ಟೆಸ್ಲಾ ಘಟಕದಲ್ಲಿ ತಯಾರಿಸಲಾಗುತ್ತಿರುವ ಕಾರುಗಳನ್ನು ಭಾರತಕ್ಕೆ ಆಮದು ಮಾಡಬಹುದ ಎಂದು ಹೇಳಲಾಗುತ್ತಿದೆ. https://ainlivenews.com/if-you-have-these-problems-do-not-drink-turmeric-milk/ ಟೆಸ್ಲಾ ನೇಮಕಾತಿಗಳು ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿವೆ. ಮಸ್ಕ್ ವರ್ಷಗಳಿಂದ ಕಸ್ಟಮ್ಸ್ ಸುಂಕ ಕಡಿತಕ್ಕೆ ಒತ್ತಾಯಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಭಾರತ ಇತ್ತೀಚೆಗೆ ಐಷಾರಾಮಿ ಕಾರುಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 110 ರಿಂದ 70 ಕ್ಕೆ ಇಳಿಸಿತು. ಇದು ಆಮದು ಸುಂಕದ ಹೊರೆಯನ್ನು $40,000 ರಷ್ಟು ಕಡಿಮೆ ಮಾಡಿತು.…
ಅಕ್ಕಿನೇನಿ ಕುಟುಂಬವು ಪ್ರಸ್ತುತ ಸಂತೋಷದಿಂದ ತುಂಬಿ ತುಳುಕುತ್ತಿದೆ. ನಾಗ ಚೈತನ್ಯ ಅವರ ಇತ್ತೀಚಿನ ವಿವಾಹದಿಂದ ಅಕ್ಕಿನೇನಿ ಕುಟುಂಬವು ತುಂಬಾ ಸಂತೋಷಪಟ್ಟಿತು. ನಾಗ ಚೈತನ್ಯ ನಟಿ ಶೋಭಿತಾ ಅವರನ್ನು ಪ್ರೀತಿಸಿ ಮದುವೆಯಾದರು ಎಂದು ತಿಳಿದುಬಂದಿದೆ. ಅವರ ವಿವಾಹವು ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ಅಲ್ಲದೆ, ಮದುವೆಯ ನಂತರ, ನಾಗ ಚೈತನ್ಯ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಅನ್ನು ಥಂಡೇಲ್ ಚಿತ್ರವು ಪಡೆದುಕೊಂಡಿತು. ಚಂದು ಮೊಂಡೆಟಿ ನಿರ್ದೇಶನದ ಥಂಡೇಲ್ ಚಿತ್ರವು ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರದಲ್ಲಿ ನಾಗ ಚೈತನ್ಯ ತಮ್ಮ ಅದ್ಭುತ ಅಭಿನಯದಿಂದ ಪ್ರಭಾವಿತರಾದರು. ಈಗ, ಅಕ್ಕಿನೇನಿ ಕುಟುಂಬವು ಮತ್ತೊಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಮಾಧ್ಯಮ ಮತ್ತು ಚಲನಚಿತ್ರ ವಲಯಗಳಲ್ಲಿ ಸದ್ದು ಮಾಡುತ್ತಿದೆ. ಮತ್ತೊಮ್ಮೆ, ಅಕ್ಕಿನೇನಿ ಮನೆಯಲ್ಲಿ ವಿವಾಹ ಸಂಭ್ರಮ ಆರಂಭವಾಗಲಿದೆ. ನಾಗಚೈತನ್ಯ ಮದುವೆಯಾದ ಸಮಯದಲ್ಲೇ ಅಖಿಲ್ ತನ್ನ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇಷ್ಟು ದಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ಅಖಿಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾನೆ. ಅಖಿಲ್ ಇತ್ತೀಚೆಗೆ ಜೈನಾಬ್…