Author: Author AIN

ತೆಲುಗು ನಟ ನಾಗಚೈತನ್ಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿರುವ ನಾಗಚೈತನ್ಯ ಇದೀಗ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಸದ್ಯ ನಾಗಚೈತನ್ಯ ಅವರು ಚೆನ್ನೈನಲ್ಲಿ ಪೋರ್ಷಾ 911 ಜಿಟಿ3 ಆರ್‌ಎಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟ ನಾಗಚೈತನ್ಯಗೆ ಮೊದಲಿಂದ ಕಾರುಗಳ ಮೇಲೆ ವ್ಯಾಮೋಹ. ಈಗಾಗಲೇ ನಟನ ಬಳಿ ದುಬಾರಿ ಬೆಲೆಯ ಸಾಕಷ್ಟು ಕಾರುಗಳಿವೆ. ಇದೀಗ ಆ ಸಾಲಿಗೆ 3.43 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಕೂಡ ಸೇರಿದೆ. 1.30 ಕೋಟಿ ಬೆಲೆ ಬಾಳುವ ಬಿಎಂಡಬ್ಲೂ ಎಲ್‌ಐ ಕಾರು ಇದೆ. ಇಷ್ಟೇ ಅಲ್ಲ 2.12 ಕೋಟಿಯ ನಿಸಾನ್ GT-R ಮತ್ತು 2.28 ಕೋಟಿಯ ಮರ್ಸಿಡಿಸ್ ಬೆಂಜ್ G-Class G 63 AMG ಕಾರು ಕೂಡ ನಾಗಚೈತನ್ಯ ಅವರ ಬಳಿ ಇವೆ. ಆ ಸಾಲಿಗೆ ಈಗ ಪೊರ್ಶೆ 911 GT3 ಕಾರು ಕೂಡ ಸೇರಿಕೊಂಡಿದೆ. ಹೌದು, 3.51…

Read More

ಭಾನುವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹೀಂ ರಯಿಸೀ ಹಾಗೂ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದುಲಹಿಯಾನ್ ಹಾಗೂ ಇತರ ಆರು ಮಂದಿಯ ಅಂತ್ಯಕ್ರಿಯೆಯ ಪ್ರಯುಕ್ತ ಆಯೋಜಿಸಲಾದ ಪ್ರಾರ್ಥನಾ ಸಭೆಯ ನೇತೃತ್ವವನ್ನು ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ವಹಿಸಿದ್ದರು. ಈ ವೇಳೆ ಲಕ್ಷಾಂತರ ಮಂದಿ ಭಾಗಿಯಾಗಿ ನಾಯಕನಿಗೆ ವಿದಾಯ ಹೇಳಿದರು. ಟೆಹರಾನ್ ವಿಶ್ವವಿದ್ಯಾನಿಲಯದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದ್ದು, ಈ ವೇಳೆ ಮೃತರನ್ನು ಇರಿಸಲಾಗಿದ್ದ ಶವಪೆಟ್ಟಿಗೆಗಳ ಮೇಲೆ ಇರಾನ್‌ನ ರಾಷ್ಟ್ರಧ್ವಜಗಳನ್ನು ಹೊದಿಸಿ ಗೌರವ ಸೂಚಿಸಲಾಯಿತು. ಇರಾನ್ ಅಧ್ಯಕ್ಷರ ಅಂತಿಮ ಯಾತ್ರೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸುವುದು ಹಾಗೂ ಆನ್‌ಲೈನ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಪ್ರಕಟಿಸುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಇದೇ ವೇಳೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾಮೂಹಿಕ ಪ್ರಾರ್ಥನೆಯ ಸಂದರ್ಭ ಇರಾನ್‌ನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಮುಖ್‌ಬೀರ, ಅಯಾತೊಲಾ ಖಾಮಿನೈ ಅವರ ಬಳಿ ಶೋಕತಪ್ತರಾಗಿ ನಿಂತಿರುವುದು ಕಂಡುಬಂದಿತು. ಬಳಿಕ ಮೃತದೇಹಗಳನ್ನು ಇರಿಸಲಾದ ಶವಪೆಟ್ಟಿಗೆಗಳನ್ನು ಮೆರವಣಿಗೆಯ ಮೂಲಕ ರಯಿಸೀ…

Read More

ಮೊದಲ ಬಾರಿಗೆ ಮಗುವಿಗೆ ಹಕ್ಕಿಜ್ವರದ ವೈರಸ್ ಸೋಂಕು ತಗಲಿದ ಪ್ರಕರಣ ಆಸ್ಟ್ರೇಲಿಯದಲ್ಲಿ ದೃಢಪಟ್ಟಿವೆ. ಸೋಂಕಿಗೆ ಒಳಗಾದ ಮಗುವು ಕುಟುಂಬ ಸದಸ್ಯರೊಟ್ಟಿಗೆ ಕೆಲವು ವಾರಗಳ ಹಿಂದೆ ಭಾರತದಲ್ಲಿದ್ದಾಗ ಅದಕ್ಕೆ ಈ ಸೋಂಕು ತಗಲಿರಬೇಕೆಂದು ತಜ್ಞರು ಶಂಕಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಈ ವರ್ಷದ ಮಾರ್ಚ್‌ನಲ್ಲಿ ಮಗು ಅಸ್ವಸ್ಥಗೊಂಡಿತ್ತು. ಆದರೆ ಈಗ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ’’ ಎಂದು ಅದು ಎಕ್ಸ್ ಪೋಸ್ಟ್ ಮಾಡಿದೆ. ಕೆಲವೊಂದು ಕಡೆಗಳಲ್ಲಿ ಕಾಗೆ, ಕೊಕ್ಕೆರೆ ಇತ್ಯಾದಿ ಹಕ್ಕಿಗಳು ರಾಶಿರಾಶಿಯಾಗಿ ಸತ್ತು ಬೀಳುತ್ತಿದ್ದು, ಇದು ಹಕ್ಕಿ ಜ್ವರವೆಂದು ಹೇಳಲಾಗುತ್ತಿದೆ. ರಾಜಸ್ಥಾನದಲ್ಲಿ ಮೊದಲ ಬಾರಿಗೆ ಕಂಡುಬಂದ ಹಕ್ಕಿಜ್ವರವು ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಕೇರಳದಲ್ಲಿ ಕೂಡ ಕಂಡುಬಂದಿದೆ. ಹಕ್ಕಿಜ್ವರನ್ನು ಹತ್ತಿಕ್ಕುತ ನಿಟ್ಟಿನಲ್ಲಿ ಕೇರಳದಲ್ಲಿ ಈಗ ಸಾಕು ಕೋಳಿಗಳು ಹಾಗೂ ಬಾತುಕೋಳಿಗಳಲ್ಲಿ ಸಾಮೂಹಿಕ ದಫನ ಕಾರ್ಯ ಮಾಡಲಾಗುತ್ತಿದೆ. ದಿನನಿತ್ಯದ ಮಾಹಿತಿಗಳನ್ನು ಪಡೆದುಕೊಂಡು ಇದನ್ನು ಹೇಗೆ ನಿಗ್ರಹಿಸಬಹುದು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದರ ಬಗ್ಗೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

Read More

ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ಸದ್ಯ ಕಾಂತಾರ ಅಧ್ಯಾಯ 1ರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ಪತ್ನಿ ಮಕ್ಕಳೊಂದಿಗೆ ಎಂಜಾಯ್ ಮಾಡ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಡಿವೈನ್ ಸ್ಟಾರ್ ದಂಪತಿಗಳು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಚಿಕ್ಕಮಗಳೂರಿನ ಹರಿಹರದ ದೇವಸ್ಥಾನಕ್ಕೆ ಭೇಟಿ ನೀಡಿದ್ದ ದಂಪತಿ ಇದೀಗ ಶಾರದೆಯ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಮಗು ವಿದ್ಯಾಭ್ಯಾಸ ಆರಂಭಿಸುವ ಮುನ್ನ ಅಥವಾ ಶಾಲೆಗೆ ಸೇರಿಸುವ ಮುನ್ನ ಅಕ್ಷರಭ್ಯಾಸ ಮಾಡುವ ಪದ್ಧತಿ ಇದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದೀಗ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಮಗಳಿಗೆ ಅಕ್ಷರಭ್ಯಾಸ ಮಾಡಿಸಿದ್ದಾರೆ. ಮಗಳು ರಾಧ್ಯಾಳಿಗೆ ಶೃಂಗೇರಿಯ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಭ್ಯಾಸ ಮಾಡಿಸಿದ್ದಾರೆ ರಿಷಬ್ ಶೆಟ್ಟಿ. ಕುಟುಂಬ ಸಮೇತ ದೇವಾಸ್ಥಾನಗಳಿಗೆ ಪ್ರವಾಸ ಕೈಗೊಂಡಿದ್ದ ರಿಷಬ್ ಶೆಟ್ಟಿ ಮಗಳು ಅಕ್ಷರಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. “ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ನಮ್ಮ ಪುಟ್ಟ ರಾಧ್ಯಾಳ…

Read More

ಭಜರಂಗಿ, ಮಾರುತಿ 800 ಸೇರಿ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಹಾಗೂ ರಾಜಕಾರಣಿ ವಿದ್ಯಾ ಅವರನ್ನು ಆಕೆಯ ಪತಿ ನಂದೀಶ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ನಂದೀಶ್ ಗಾಗಿ ಹುಡುಕಾಡುತ್ತಿದ್ದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಮೇ 20 ರ ತಡರಾತ್ರಿ ಮೈಸೂರಿನ ಟಿ ನರಸೀಪುರ ತಾಲ್ಲೂಕು ತುರುಗನೂರಿನ ವಿದ್ಯಾರ ಪತಿ ನಂದೀಶ್​ರ ಮನೆಯಲ್ಲಿಯೇ ವಿದ್ಯಾ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಅಂದಿನಿಂದಲೂ ನಂದೀಶ್ ಪರಾರಿಯಾಗಿದ್ದರು. ವಿದ್ಯಾರ ಕೊಲೆ ಮಾಡಿದ್ದ ನಂದೀಶ್​ ಮೈಸೂರಿನಿಂದ ಪರಾರಿಯಾಗಿದ್ದ. ಆತ ಮಂಡ್ಯದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪತ್ತೆ ಮಾಡಿದ ಪೊಲೀಸರು ಘಟನೆ ನಡೆದ ಎರಡು ದಿನಗಳ ಒಳಗಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅವರ ನೇತೃತ್ವದ ತಂಡ ಆರೋಪಿ ನಂದೀಶ್​ನನ್ನು ಬಂಧಿಸಿ ಬನ್ನೂರು ಠಾಣೆಗೆ ಕರೆತಂದಿದೆ. ಇಂದು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸುವ ನಿರೀಕ್ಷೆ ಇದೆ. ಕೌಟುಂಬಿಕ ಕಲಹದಿಂದಲೇ ನಂದೀಶ್, ನಟಿ, ರಾಜಕಾರಣಿ ವಿದ್ಯಾರನ್ನು ಕೊಲೆ ಮಾಡಿದ್ದಾನೆಂದು…

Read More

ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ, ಕೆಕೆಆರ್ ತಂಡದ ಮಾಲಿಕ ಶಾರುಖ್ ಖಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಪಿಎಲ್‌ನ ಮೊದಲ ಪ್ಲೈ ಆಫ್ ಪಂದ್ಯದ ನಂತರ ಹೀಟ್ ಸ್ಟ್ರೋಕ್ ಒಳಗಾಗಿದ್ದು, ಶಾರುಖ್ ಖಾನ್‌ರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ನಟ ಶಾರುಖ್ ಖಾನ್ ಅವರು ಆಸ್ಪತ್ರೆಗೆ ದಾಖಲಾಗಿರುವುದನ್ನು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ಆದರೆ ಯಾವ ಕಾರಣಕ್ಕಾಗಿ ಅವರು ಅಡ್ಮಿಟ್ ಆಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಡಿಹೈಡ್ರೇಷನ್ ಮತ್ತು ಹೀಟ್ ಸ್ಟ್ರೋಕ್ ಕಾರಣದಿಂದ ಶಾರುಖ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೆಲ ಸಮಯ ನಿಗಾವಣೆಯಲ್ಲಿ ಇಡಲಾಗಿತ್ತು. ಇಂದು ಶಾರುಖ್ ಖಾನ್ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದು ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಅಹ್ಮದಾಬಾದ್​ನಲ್ಲಿ 45 ಡಿಗ್ರಿ ಸೆಲ್ಷಿಯಸ್ ಬಿಸಿ ಇತ್ತು. ಗುಜರಾತ್​ನ ಹಲವೆಡೆ ಇದೇ ಪರಿಸ್ಥಿತಿ ಇದೆ. ಭಾರಿ ಬಿಸಿಲಿನಿಂದಾಗಿ ಬಿಸಿಗಾಳಿ ಹರಿದಾಡುತ್ತಿದ್ದು, ಹೀಟ್ ವೇವ್​ನಿಂದಾಗಿ ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಶಾರುಖ್ ಖಾನ್ ಆಸ್ಪತ್ರೆಗೆ…

Read More

2023-24ರ ಹಣಕಾಸು ವರ್ಷಕ್ಕೆ 2.11 ಲಕ್ಷ ಕೋಟಿ ರೂ.ಗಳನ್ನ ಹೆಚ್ಚುವರಿಯಾಗಿ ಸರ್ಕಾರಕ್ಕೆ ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ ಎಂದು ಆರ್ ಬಿ ಐ ತಿಳಿಸಿದೆ. ಬಿಮಲ್ ಜಲನ್ ಸಮಿತಿಯ ಶಿಫಾರಸುಗಳ ಪ್ರಕಾರ 2019 ರ ಆಗಸ್ಟ್ 26ರಂದು ಆರ್ಬಿಐ ಅಳವಡಿಸಿಕೊಂಡ ಆರ್ಥಿಕ ಬಂಡವಾಳ ಚೌಕಟ್ಟು ನ್ನ ಆಧರಿಸಿ 2023-24ರ ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ಹೆಚ್ಚುವರಿ ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಹೆಚ್ಚುವರಿ ಮೊತ್ತದಲ್ಲಿ ತೀವ್ರ ಜಿಗಿತಕ್ಕೆ ಕೇಂದ್ರ ಬ್ಯಾಂಕಿನ ವಿದೇಶಿ ವಿನಿಮಯ ಹಿಡುವಳಿಯಿಂದ ಹೆಚ್ಚಿನ ಆದಾಯ ಮತ್ತು ಇತರ ಅಂಶಗಳು ಕಾರಣವಾಗಬಹುದು. ಈ ಪ್ರಕಟಣೆಯು ಕೇಂದ್ರ ಬ್ಯಾಂಕ್ ತನ್ನ ಇತಿಹಾಸದಲ್ಲಿ ವಿತರಿಸಿದ ಅತ್ಯಧಿಕ ಲಾಭಾಂಶವನ್ನ ಸೂಚಿಸುತ್ತದೆ. 2024-25ರಲ್ಲಿ ವರ್ಗಾವಣೆಯಾದ ಲಾಭಾಂಶವು ಸರ್ಕಾರವು ಮೂಲತಃ ನಿರೀಕ್ಷಿಸಿದ್ದಕ್ಕಿಂತ ತೀವ್ರವಾಗಿ ಹೆಚ್ಚಾಗಿದೆ. ಹೆಚ್ಚುವರಿ ವರ್ಗಾವಣೆಯು 2023-2024ರ ಆರ್ಥಿಕ ವರ್ಷಕ್ಕೆ ಇರುತ್ತದೆ, ಆದರೆ 2025 ರ ಆರ್ಥಿಕ ವರ್ಷದಲ್ಲಿ ಸರ್ಕಾರದ ಖಾತೆಯಲ್ಲಿ ಪ್ರತಿಫಲಿಸುತ್ತದೆ. ನಿರೀಕ್ಷೆಗಿಂತ ಹೆಚ್ಚಿನ ಹೆಚ್ಚುವರಿ…

Read More

ನಟ ರಿಷಬ್ ಶೆಟ್ಟಿ ಸದ್ಯ ಕಾಂತಾರ ಪಾರ್ಟ್ 1 ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಕ್ಷೇತ್ರಕ್ಕೆ  ಪತ್ನಿ ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿದ್ದಾರೆ. ‘ಕಾಂತಾರ’ ಪಾರ್ಟ್ 1ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಕೆಲಸಕ್ಕೆ ಕೊಂಚ ಬ್ರೇಕ್ ಕೊಟ್ಟು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ರಿಷಬ್ ಭೇಟಿ ನೀಡಿದ್ದಾರೆ. ತುಂಗಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ದೇಗುಲವಾಗಿರುವ ಹರಿಹರಪುರದ ಶಾರದ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದಿದ್ದಾರೆ. ಬಳಿಕ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ, ರಿಷಬ್ ಶೆಟ್ಟಿರನ್ನು ನೋಡುತ್ತಿದ್ದಂತೆ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಿಷಬ್, ಜನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ್ರೆ ಒಳ್ಳೆಯದು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ‘ಕಾಂತಾರ’ ಪ್ರೀಕ್ವೆಲ್ ಚಿತ್ರೀಕರಣ ಆರಂಭವಾಗಿದೆ. ಸಿನಿಮಾದ ಕೆಲಸ ಬಹಳ ಚೆನ್ನಾಗಿ ನಡೆಯುತ್ತಿದೆ…

Read More

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ತಮ್ಮ ದೇಶದ ಮಹಿಳೆಯರ ಮೇಲೆ ಮತ್ತೊಂದು ನಿರ್ಬಂಧನೆಯನ್ನು ಹೇರಿದ್ದಾರೆ. ಉತ್ತರ ಕೊರಿಯಾದಲ್ಲಿ ಇನ್ಮುಂದೆ ಮಹಿಳೆಯರು ಬೋಲ್ಡ್‌ ಆದ ರೆಡ್‌ ಕಲರ್ ಲಿಪ್ಸ್‌ಟಿಕ್‌ ಹಾಕುವಂತಿಲ್ಲ ಎಂದು ಕಿಮ್‌ ಆದೇಶ ಹೊರಡಿಸಿದ್ದಾರೆ. ಮಹಿಳೆಯರು ಹಾಕುವ ಲಿಪ್‌ಸ್ಟಿಕ್‌ ಮೇಲೂ ಕಿಮ್‌ ಜಾಂಗ್‌ ಉನ್ ಕಣ್ಣು ಬಿದ್ದಿದೆ. ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ಸ್ಟಿಕ್‌ ಮೇಲಿನ ನಿಷೇಧವು ಕೇವಲ ಸೌಂದರ್ಯ ನಿಯಂತ್ರಣವಾಗಿರದೇ, ಇದು ದೇಶದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ವಿಮೋಚನೆ ಮತ್ತು ಸ್ತ್ರೀಲಿಂಗ ಆಕರ್ಷಣೆಯೊಂದಿಗೆ ಹೆಚ್ಚಾಗಿ ಸಂಬಂಧಿಸಿರುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬಂಡವಾಳಶಾಹಿ ಅವನತಿ ಮತ್ತು ನೈತಿಕ ಅವನತಿಯನ್ನು ಪ್ರತಿನಿಧಿಸುತ್ತದೆ ಎನ್ನುವುದು ಕಿಮ್‌ ಅಭಿಪ್ರಾಯವಾಗಿದೆ. ಈ ದೇಶದಲ್ಲಿ ಹೇರ್‌ಸ್ಟೈಲ್‌, ಮೇಕಪ್‌, ಸಿನಿಮಾ ಇನ್ನಿತರ ವಿಷಯಗಳಿಗೂ ನಿರ್ಬಂಧನೆ ಹೇರಲಾಗಿದೆ. ಕೆಂಪು ಬಣ್ಣ ವಿಮೋಚನೆ ಸಂಕೇತ, ಬಂಡವಾಳಶಾಹಿಯ ಸಂಕೇತ. ಕೆಂಪು ಬಣ್ಣದ ಲಿಪ್‌ಸ್ಟಿಕ್ ಹೆಣ್ಣಿನ ಮಾದಕತೆ ಹೆಚ್ಚಿಸಲಿದೆ, ಹೆಣ್ಣಿನ ಸೌಂದರ್ಯವನ್ನೂ ವದ್ಧಿಸಲಿದೆ. ಇದರಿಂದ ದೇಶ ನೈತಿಕ ಅಧಪತನಕ್ಕೆ…

Read More

ದಕ್ಷಿಣ ಬ್ರೆಜಿಲ್ ನಲ್ಲಿ ಹವಾಮಾನ ಪೀಡಿತ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಕಳೆದ ಕೆಲವು ಗಂಟೆಗಳಲ್ಲಿ ಇನ್ನೂ ನಾಲ್ಕು ಶವಗಳು ಪತ್ತೆಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 161 ಕ್ಕೆ ಏರಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ಏಪ್ರಿಲ್ 29 ರಿಂದ ದಾಖಲೆಯ ಮಳೆ ರಾಜ್ಯವನ್ನು ನಾಶಪಡಿಸಿದೆ, ಇದು 464 ನಗರಗಳಲ್ಲಿ ಮಾರಣಾಂತಿಕ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ ಮತ್ತು ರಾಜಧಾನಿ ಪೋರ್ಟೊ ಅಲೆಗ್ರೆ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2.2 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳ ಮೇಲೆ ಪರಿಣಾಮ ಬೀರಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೋರ್ಟೊ ಅಲೆಗ್ರೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅನಿರ್ದಿಷ್ಟವಾಗಿ ಮುಚ್ಚಲಾಯಿತು, ಆದ್ದರಿಂದ ಫೆಡರಲ್ ಸರ್ಕಾರವು ಕ್ಯಾನೋವಾಸ್ ವಾಯುಪಡೆಯ ವಾಯುನೆಲೆಯನ್ನು ವಾಣಿಜ್ಯ ವಿಮಾನಗಳಿಗೆ ಬಳಸಲು ಅಧಿಕಾರ ನೀಡಿತು. 85 ಜನರು ಕಾಣೆಯಾಗಿರುವುದರಿಂದ ಮತ್ತು 806 ಜನರು ಗಾಯಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.…

Read More