Author: Author AIN

ಆಕರ್ಷಕ ವೇತನದ ಉದ್ಯೋಗ ನೀಡುವ ವಂಚನೆಯ ಜಾಲಕ್ಕೆ ಬಿದ್ದು ಕಾಂಬೋಡಿಯಾದಲ್ಲಿ ಒದ್ದಾಡುತ್ತಿದ್ದ ಸುಮಾರು 60 ಮಂದಿ ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಮೋಸದ ಜಾಲದಲ್ಲಿ ಸಿಲುಕಿದ್ದ ಭಾರತೀಯರ ಮೊದಲ ತಂಡವನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಈ ತಂಡದಲ್ಲಿ 60 ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಇವರನ್ನು ಮೇ 20ರಂದು ಜಿನ್ಬೈ- 4 ಎಂಬ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಭಾರತೀಯ ಉದ್ಯೋಗಿಗಳ ರಕ್ಷಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ರಾಯಭಾರ ಕಚೇರಿ, ‘ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸಹಾಯ ನೀಡಲು ಯಾವಾಗಲೂ ನಾವು ಬದ್ಧ. ಕಾಂಬೋಡಿಯಾದಲ್ಲಿ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ 60 ಮಂದಿಯ ರಕ್ಷಿಸಲಾಗಿದೆ. ಕಾರ್ಯಾಚರಣೆಗೆ ಬೆಂಬಲ ನೀಡಿದ ಕಾಂಬೋಡಿಯಾ ಅಧಿಕಾರಿಗಳಿಗೆ ಧನ್ಯವಾದ’ ಎಂದು ತಿಳಿಸಿದೆ ಮತ್ತೊಂದು ಪೋಸ್ಟ್​ನಲ್ಲಿ, ಸಿಹಾನೌಕ್ವಿಲ್ಲೆ ಪ್ರಾಧಿಕಾರದ ಸಹಾಯದಿಂದ ಭಾರತೀಯರನ್ನು ರಕ್ಷಿಸಲಾಗಿದೆ. ಇವರೆಲ್ಲರನ್ನೂ ವಂಚಿಸಿ ಸಿಹಾನೌಕ್ವಿಲ್ಲೆಯೊಂದ ನಾಮ್​ ಪೆನ್ ಸ್ಥಳಕ್ಕೆ ಕಳುಹಿಸಲಾಗಿತ್ತು. ಇದೀಗ ಅಗತ್ಯ ಪ್ರಯಾಣ ದಾಖಲೆ ಮತ್ತು ಇತರೆ ವ್ಯವಸ್ಥೆಗಳ ಸಹಾಯದಿಂದ ಮರಳಿ ಕರೆತರಲಾಗಿದೆ…

Read More

ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲು ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡುತ್ತಿದೆ. ಗೋಲ್ಡನ್ ವೀಸಾ ಹೊಂದಿರುವವರನ್ನು 10 ವರ್ಷಗಳ ಕಾಲ ಯುಎಇ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಅನೇಕ ಭಾರತೀಯ ನಟರಿಗೆ ಗೋಲ್ಡನ್ ವೀಸಾ ನೀಡಲಾಗಿದೆ. ಇದೀಗ ಖ್ಯಾತ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ಕಳೆದ ವರ್ಷ 2018 ರಿಂದ ಗೋಲ್ಡನ್ ವೀಸಾ ನೀಡಲಾಗುತ್ತಿದೆ. ಬಾಲಿವುಡ್ ನಟರಾದ ಸಂಜಯ್ ದತ್, ಶಾರುಖ್ ಖಾನ್, ಮಲಯಾಳಂ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮತ್ತು ಗಾಯಕಿ ಚಿತ್ರಾ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಹಿಂದಿ ನಟಿ ಊರ್ವಶಿ ರೌಟೇಲಾ ಮತ್ತು ನಟಿ ಮೀರಾ ಜಾಸ್ಮಿನ್ ಅವರಿಗೂ ಗೋಲ್ಡನ್ ವೀಸಾ ನೀಡಲಾಗಿತ್ತು. ಸದ್ಯ ವೆಟ್ಟೈಯಾನ್ ಚಿತ್ರದಲ್ಲಿ ನಟಿಸುತ್ತಿರುವ ರಜನಿಕಾಂತ್ ವಿಹಾರಕ್ಕೆಂದು ದುಬೈಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಬುಧಾಬಿಯಲ್ಲಿ ನಡೆದ…

Read More

ಪ್ರಭಾಸ್ ನಟನೆಯ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇಂದಿಗೂ ಬಾಹುಬಲಿ ಸಿನಿಮಾ ಇತಿಹಾಸ ನಿರ್ಮಿಸಿದೆ. ಇದೀಗ ಬಾಹುಬಲಿಯ ಸಂಪೂರ್ಣ ಕಥೆಯನ್ನು ಅನಿಮೇಟೆಡ್ ಫಾರ್ಮೆಟ್‌ನಲ್ಲಿ ರವಾನಿಸಲಾಗುತ್ತಿದೆ. ನಟ ಶರದ್ ಕೇಲ್ಕರ್ ಹಲವು ಐತಿಹಾಸಿಕ ಪ್ರಾಜೆಕ್ಟ್‌ಗಳಿಗೆ ಧ್ವನಿ ನೀಡಿ ಖ್ಯಾತರಾಗಿದ್ದಾರೆ. ಇದೀಗ ಬಾಹುಬಲಿ ಸಿನಿಮಾ ನಾಯಕ ಪ್ರಭಾಸ್‌ ಅವರ ದೃಶ್ಯಕ್ಕೆ ಕಂಠದಾನ ಮಾಡಿ ಗಮನ ಸೆಳೆದಿದ್ದಾರೆ. ”ನಾನೊಬ್ಬ ನಟನಾಗಿ ನನ್ನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಬಲ್ಲೆ. ವಿವಿಧ ಬಗೆಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಆದಾಗ್ಯೂ ಒಳ್ಳೆಯ ಕಾಲಕ್ಕೆ ಕಾಯುತ್ತಿದ್ದೇನೆ. ಅತ್ಯುತ್ತಮವಾದದ್ದು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಧ್ವನಿ ನೀಡುವಾಗ ಯಾವ ಆಯಾಮಕ್ಕೂ ತೆಗೆದುಕೊಂಡು ಹೋಗಬಲ್ಲೆ. ಬಾಹುಬಲಿಗೆ ಧ್ವನಿ ನೀಡಿದ್ದು, ಇದರ ಕೀರ್ತಿ ರಾಜಮೌಳಿ ಸರ್‌ಗೆ ಸಲ್ಲಬೇಕು. ಪಾತ್ರಕ್ಕೆ ತಕ್ಕಂತೆ ಡಬ್ ಮಾಡಲು ಸ್ವಾತಂತ್ರ್ಯ ನೀಡಿದರು. ಮೊದಲ ಭಾಗದಲ್ಲೇ ಸಂಜೆ ಬಂದು ಎಲ್ಲಾ ಡಬ್‌ಗಳನ್ನು ಪರೀಕ್ಷಿಸುತಿದ್ದರು. ಎರಡನೇ ಭಾಗದ ಡಬ್ಬಿಂಗ್ ನಡೆಯುವಾಗ ಬರಲಿಲ್ಲ. ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದರು. ನಿಮ್ಮ ಕೆಲಸ ಮಾಡಿ ಎಂದು…

Read More

ಸ್ಯಾಂಡಲ್ ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ‘ಉದ್ಯಮದ ಪಾಲುದಾರರು ಮೋಸ ಮಾಡಿದ್ದರಿಂದ ಮಾನಸಿಕವಾಗಿ ನೊಂದು ಸೌಂದರ್ಯ ಜಗದೀಶ್ ಏಪ್ರಿಲ್ 4ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಡೆತ್ ನೋಟ್ ಸಿಕ್ಕಿದೆ’ ಎಂದು ಜಗದೀಶ್ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಅವರೇ‌ ಕಾರಣ ಹಾಗೂ ಅವರಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಶಶಿರೇಖಾ ಆರೋಪಿಸಿದ್ದಾರೆ. ಮೇ 18ರಂದು ಜಗದೀಶ್ ಅವರ ರೂಮಿನಲ್ಲಿದ್ದ ಬಟ್ಟೆಯನ್ನು ಪೂಜೆಗಿಡಲು ತೆಗೆದುಕೊಳ್ಳುವಾಗ ಡೆತ್ ನೋಟ್ ಲಭ್ಯವಾಯಿತು. ಅದರಲ್ಲಿ, ಸೌಂದರ್ಯ ಕನ್ಸ್ಟ್ರಕ್ಷನ್​​ನ ಸಹ ಪಾಲುದಾರರಾದ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಎಂಬವರು ಜಗದೀಶ್ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು. ಕಂಪನಿ ಲಾಭದಲ್ಲಿದ್ದರೂ ಸಹ ಸುಳ್ಳು ನಷ್ಟ ತೋರಿಸಿ ತಮ್ಮ ಕುಟುಂಬದ…

Read More

ಟಾಲಿವುಡ್ ಬ್ಯೂಟಿ ನಟಿ ಸಮಂತಾ ಸಿನಿಮಾಗಳ ಜೊತೆ ಜೊತೆಗೆ ತಮ್ಮ ಸೌಂದರ್ಯದ ಮೂಲಕವು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆಲ ತಿಂಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡ್ತಿರುವ ಸ್ಯಾಮ್, ಇದೀಗ ಮತ್ತೆ ಹಾಟ್ ಲುಕ್ ಕ್ಯಾಮಾರಾಗೆ ಫೋಸ್ ನೀಡಿದ್ದಾರೆ. ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಚಿಕಿತ್ಸೆ ಪಡೆದು ಇದೀಗ ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗ್ತಿದ್ದಾರೆ. ಆರಂಭದಲ್ಲಿ ಹೋಮ್ಲಿ ಗರ್ಲ್ ಆಗಿ ಕಾಣಿಸಿಕೊಳ್ತಿದ್ದ ಸಮಂತಾ ಇದೀಗ ದಿನಕಳೆದಂತೆ ಸಖತ್ ಹಾಟ್ ಹಾಟ್ ಅವತಾರಗಳಲ್ಲಿ ಮಿಂಚುತ್ತಿದ್ದಾರೆ. ನಟಿಯ ಬೋಲ್ಡ್ ನೆಸ್ ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಮಂತಾ ಫೋಟೋಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮೈಯೋಸಿಟಿಸ್ ನಿಂದ ಬಳಲುತ್ತಿದ್ದ ಸಮಂತಾ, ಸಿನಿ ಕೆರಿಯರ್ ಗೆ ವಿರಾಮ ತೆಗೆದುಕೊಂಡ್ರು. ಕಾಯಿಲೆಗೆ ಚಿಕಿತ್ಸೆ ಪಡೆದು…

Read More

ಮೇ 21ರಂದು ಸಿಂಗಪುರ ಏರ್‌ಲೈನ್ಸ್ ಕಂಪನಿಯ ವಿಮಾನವೊಂದು ಹಿಂದೂ ಮಹಾಸಾಗರದ ಮೇಲೆ ಸಾಗುತ್ತಿದ್ದಾಗ ತೀವ್ರ ಟರ್ಬುಲೆನ್ಸ್‌ಗೆ ಸಿಲುಕಿ, ಮೂರು ನಿಮಿಷದಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟನ್‌ ಪ್ರಜೆಯೊಬ್ಬರು ಮೃತಪಟ್ಟಿದ್ದರು, ಇದೀಗ, ವಿಮಾನದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿರುವುದು ವರದಿಯಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 22 ಪ್ರಯಾಣಿಕರಿಗೆ ಬೆನ್ನುಹುರಿ ಗಾಯ, 6 ಮಂದಿಗೆ ಮಿದುಳು ಮತ್ತು ಬುರುಡೆಯಲ್ಲಿ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. 20 ಮಂದಿ ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ಬ್ಯಾಂಕಾಕ್‌ನ ಸಮಿತಿವೇಜ್ ಶ್ರೀನಕರಿನ್ ಆಸ್ಪತ್ರೆಯ ನಿರ್ದೇಶಕ ಡಾ. ಅದಿನುನ ಕಿಟ್ಟಿರಾಟನಪೈಬುಲ್ ಹೇಳಿರುವುದಾಗಿ ದಿ ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ 83 ವರ್ಷದ ಹಿರಿಯ ವ್ಯಕ್ತಿ ಹಾಗೂ 2 ವರ್ಷ ಕಿರಿಯ ಮಗು ಸೇರಿದೆ. ಲಂಡನ್‌ನಿಂದ ಸಿಂಗಪುರಕ್ಕೆ ತೆರಳುತ್ತಿದ್ದ SQ321 ವಿಮಾನವು ಬ್ಯಾಂಕಾಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. 40 ಪ್ರಯಾಣಿಕರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ…

Read More

ಪಿಸಿ-ಪಿಎನ್ಡಿಟಿ ಕಾಯ್ದೆಯಡಿ ನೋಂದಾಯಿಸಲಾದ ರಾಜ್ಯದ ಜೆನೆಟಿಕ್ ಕೌನ್ಸೆಲಿಂಗ್ ಕೇಂದ್ರಗಳು, ಕ್ಲಿನಿಕ್ ಗಳು ಹಾಗೂ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಗಂಡಂದಿರು ಸೇರಿದಂತೆ ಸಂಬಂಧಿಕರು ಅಲ್ಟ್ರಾಸೌಂಡ್ ಕೋಣೆಗೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ, ಗರ್ಭಿಣಿಯರ ಸಂಬಂಧಿಕರು ಭ್ರೂಣದ ಲಿಂಗವನ್ನು ನಿರ್ಧರಿಸಲು ಅಲ್ಟ್ರಾಸೌಂಡ್ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಂಡ ನಿದರ್ಶನಗಳನ್ನು ಅಧಿಕಾರಿಗಳು ಗಮನಿಸಿದ್ದಾರೆ ಮತ್ತು ತುಣುಕನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಅಲ್ಟ್ರಾಸೌಂಡ್ ಕೊಠಡಿಗಳು ಹೆಚ್ಚುವರಿ ಮಾನಿಟರ್ ಗಳನ್ನು ಸಹ ಹೊಂದಿದ್ದವು, ಇದು ಕುಟುಂಬ ಸದಸ್ಯರಿಗೆ ಕಾರ್ಯವಿಧಾನವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿತು. ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (ಪಿಸಿ-ಪಿಎನ್ಡಿಟಿ) ಕಾಯ್ದೆಯ ಸೆಕ್ಷನ್ 5 ಉಪ-ವಿಭಾಗ 2 ಮತ್ತು ಸೆಕ್ಷನ್ 4 ಉಪ-ಸೆಕ್ಷನ್ 4 ರ ಉಲ್ಲಂಘನೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಯ್ದೆಯ ಸೆಕ್ಷನ್ 5 ರ ಉಪ-ವಿಭಾಗ 2 ಹೀಗೆ ಹೇಳುತ್ತದೆ: “ಪ್ರಸವಪೂರ್ವ ರೋಗನಿರ್ಣಯ ಕಾರ್ಯವಿಧಾನಗಳನ್ನು ನಡೆಸುವ ವ್ಯಕ್ತಿ ಸೇರಿದಂತೆ ಯಾವುದೇ ವ್ಯಕ್ತಿಯು…

Read More

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅನಾರೋಗ್ಯ ಕಾರಣದಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ವರದಿಗಳ ಪ್ರಕಾರ ಶಾರುಖ್ ಖಾನ್ ಅವರಿಗೆ ಸನ್​ ಸ್ಟ್ರೋಕ್ ಆಗಿದೆ ಎನ್ನಲಾಗಿತ್ತು. ಆದರೆ, ಅಸಲಿಗೆ ಅವರಿಗೆ ಸನ್​ ಸ್ಟ್ರೋಕ್ ಆಗಿಯೇ ಇಲ್ಲವಂತೆ. ಶಾರುಖ್ ಖಾನ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇದು ವೈರಲ್ ಫಿವರ್ ಎನ್ನಲಾಗುತ್ತಿದೆ. ಸದ್ಯ ಶಾರುಖ್ ಖಾನ್ ಅವರು ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶಾರುಖ್ ಖಾನ್ ಅವರು ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಸಹ ಮಾಲಿಕತ್ವ ಹೊಂದಿದ್ದಾರೆ. ಕೆಕೆಆರ್ ಈ ಬಾರಿ ಫೈನಲ್ ತಲುಪಿದೆ. ಶಾರುಖ್ ಖಾನ್ ಅವರು ಕುಟುಂಬದವರ ಜೊತೆ ಫೈನಲ್ ನೋಡಲು ಚೆನ್ನೈ ತೆರಳಲಿದ್ದಾರಂತೆ. ಅವರಿಗೆ ಅನಾರೋಗ್ಯ ಆಗಿದೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈಗ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿರೋ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಶಾರುಖ್ ಆಸ್ಪತ್ರೆಯಿಂದ ಹೊರ ಬರುವ ವೇಳೆ ಮುಖಕ್ಕೆ ಛತ್ರಿಯನ್ನು ಅಡ್ಡವಾಗಿ ಹಿಡಿದುಕೊಂಡಿದ್ದರು. ನಟ ಆರಾಮವಾಗಿದ್ದರೆ ಯಾಕೆ ಮುಖ ಅಡಗಿಸಿದ್ದಾರೆ…

Read More

ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆದ ಮಲಯಾಳಂನ ‘ಮಂಜುಮೇಲ್ ಬಾಯ್ಸ್’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಹ್ಯಾಟ್ಸ್ ಆಫ್ ಎಂದಿದ್ದಾರೆ. ‘ಮಂಜುಮೇಲ್ ಬಾಯ್ಸ್’ ಚಿತ್ರದಲ್ಲಿ ಕಣ್ಮಣಿ ಹಾಡು ಮುಖ್ಯ ಪಾತ್ರವಹಿಸಿದೆ. ‘ಗುಣ’ ಸಿನಿಮಾದ ಹಾಡನ್ನು ಈ ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ‘ಗುಣ’ ಚಿತ್ರದ ಸಂಗೀತ ಸಂಯೋಜಕ ಇಳಯರಾಜ ಆರೋಪ ಮಾಡಿದ್ದಾರೆ. 1991ರಲ್ಲಿ ತೆರೆಕಂಡ ಗುಣ ಸಿನಿಮಾಗೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ..’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ಜನರು ಸಖತ್ ಇಷ್ಟಟ್ಟಿದ್ದರು. ಈ ಹಾಡು ‘ಮಂಜುಮ್ಮೇಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ. ಆದರೆ, ಇದನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ಇಳಯರಾಜ ನೋಟಿಸ್ ನೀಡಿದ್ದಾರೆ. ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡಿನ ಹಕ್ಕು ನಮ್ಮದು ಎಂದು ಅವರು ಹೇಳಿದ್ದಾರೆ. ‘ಕಣ್ಮಣಿ…

Read More

ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ. ಕ್ರಿಕೆಟ್, ಎಲೆಕ್ಷನ್ ಸ್ಟಾರ್ ಸಿನಿಮಾಗಳ ಕೊರತೆ ಇನ್ನಿತರೆ ಕಾರಣಗಳಿಂದ ಚಿತ್ರಮಂದಿರಗಳಿಗೆ ಜನ ಬರುವುದು ಕಮ್ಮಿಯಾಗಿದೆ. ಇದರಿಂದ ಮಾಲಿಕರು ತೀವ್ರ ಸಂಕಷ್ಟು ಎದುರಿಸುತ್ತಿದ್ದಾರೆ. ಇದರಿಂದ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ. ತೆಲಂಗಾಣದಂತೆ ಕರ್ನಾಟಕದಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಕೇಳಿ ಬಂದಿದೆ. ಈ ವಿಚಾರವಾಗಿ ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್‌ ಚಿತ್ರಮಂದಿರ ಬಂದ್‌ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫಿಲಂ ಚೇಂಬರ್ ಕರೆದಿದ್ದ ಸಭೆಯಲ್ಲಿ ಚಿತ್ರರಂಗದ ಸಕ್ರಿಯ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಸಭೆಗೆ ಕರೆಯಲಾಗಿತ್ತು. ಸಭೆಯಲ್ಲಿ ನಿರ್ಮಾಪಕ, ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ನಿರ್ಮಾಪಕ ತರುಣ್ ಶಿವಪ್ಪ, ಲಹರಿ ವೇಲು, ಕೆಪಿ ಶ್ರೀಕಾಂತ್ ಇನ್ನೂ ಕೆಲವರು ಭಾಗಿಯಾಗಿದ್ದರು. ಫಿಲಂ ಚೇಂಬರ್​ನ ಅಧ್ಯಕ್ಷ…

Read More