Author: Author AIN

ಸ್ಯಾಂಡಲ್​ವುಡ್ ನಟ ನಟ ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಹಾಗೂ ಆಪ್ತ ಪ್ರಶಾಂತ್ ಪೂಜಾರಿ ಅವರ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದ ಬನಶಂಕರಿಯ ಕೆ.ಆರ್.ರಸ್ತೆಯಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ಅಪರಿಚಿತರು ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪ್ರಶಾಂತ್ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದು, ಸದ್ಯ ಪ್ರಶಾಂತ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡಿಗೇಡಿಗಳು ಲಾಂಗ್ ನಲ್ಲಿ ಪ್ರಶಾಂತ್ ಕಾಲಿಗೆ ಹೊಡೆದಿದ್ದು, ಕಾಲಿಗೆ 15 ಸ್ಟಿಚ್ ಹಾಕಲಾಗಿದೆ. ಸದ್ಯ  ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆಸ್ಪತ್ರೆಗೆ ಬಂದು ಪ್ರಶಾಂತ್ ಹೇಳಿಕೆ ದಾಖಲಿಸಿದ್ದಾರೆ. ಹಾಕಿ ಸ್ಟಿಕ್, ಮಚ್ಚು ಲಾಂಗ್ ಗಳಿಂದ ಪ್ರಶಾಂತ್ ಮೇಲೆ ಹಲ್ಲೆ ಮಾಡಲಾಗಿದೆ. ಲವ್ ಕೇಸ್ ನಲ್ಲಿ ಪ್ರಶಾಂತ್ ಮೇಲೆ ಹಲ್ಲೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಧ್ರುವ ಸರ್ಜಾ, ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಆತ ನಮ್ಮ ಹುಡುಗ, ಅವನ ಜೊತೆಗಿರುತ್ತೇನೆ ಎಂದಿದ್ದಾರೆ.…

Read More

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ನಾಡ ಅದಿದೇವತೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದು ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ದೇವಸ್ಥಾನದ ಹೊರಾಂಗಣದಲ್ಲಿ ಕಿಚ್ಚ ಸುದೀಪ್ ನೋಡಲು ಅಭಿಮಾನಿಗಳು ಸಾಗರವೇ ನೆರೆದಿತ್ತು. ಕಿಚ್ಚ ಸುದೀಪ್‌ ಕಂಡೊಡನೆ ಜೈಕಾರ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್. ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಶೀಘ್ರದಲ್ಲೇ ಈ ಚಿತ್ರದ ಟ್ರೈಲರ್‌ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಅವರು ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಸಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ…

Read More

ಯುದ್ಧಪೀಡಿತ ಗಾಝಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 35 ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಗಾಝಾದಲ್ಲಿ ಸ್ಥಳಾಂತರಿತ ನಾಗರಿಕರಿಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಡೇರೆಯ ಮೇಲೆ ಈ ದಾಳಿ ನಡೆದಿದೆ. ಹೊತ್ತಿ ಉರಿಯುತ್ತಿರುವ ಅವಶೇಷಗಳಡಿ ಹಲವು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದು, ಮೃತಪಟ್ಟವರಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ರಫಾ ದಲ್ಲಿ ಮಿಲಿಟರಿ ದಾಳಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ ಎರಡು ದಿನಗಳಲ್ಲೇ ಇಸ್ರೇಲ್ ನ ಈ ಅಮಾನವೀಯ ದಾಳಿ ನಡೆದಿದೆ. ಇಸ್ರೇಲ್ ದಾಳಿ ಆರಂಭಕ್ಕೆ ಮುನ್ನ ಗಾಝಾದ ಅರ್ಧದಷ್ಟು ಜನ ಈ ಭಾಗದಲ್ಲಿ ಆಸರೆ ಪಡೆದಿದ್ದರು ಈ ಅತ್ಯಂತ ಭಯಾನಕ ದಾಳಿಯ ದೃಶ್ಯಾವಳಿಗಳು, ಭಾರಿ ಹಾನಿಯುಂಟಾಗಿರುವುದನ್ನು ತೋರಿಸುತ್ತವೆ. ಇಸ್ರೇಲ್ ಕೂಡಾ ಈ ದಾಳಿಯನ್ನು ದೃಢಪಡಿಸಿದ್ದು, ಹಮಾಸ್ ನ ಸ್ಥಾವರಗಳನ್ನು ಗುರಿ ಮಾಡಿ ನಡೆಸಿದ ದಾಳಿಯಲ್ಲಿ ಇಬ್ಬರು…

Read More

ಪಪುವಾ ನ್ಯೂಗಿನಿ  ದೇಶದ ಉತ್ತರ ಭಾಗದಲ್ಲಿರುವ ಹಳ್ಳಿಯೊಂದರಲ್ಲಿ ಸಂಭವಿಸಿದ ಭೂಕುಸಿತದಲ್ಲಿ 2,000 ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂಗಿನಿ ರಾಷ್ಟ್ರೀಯ ವಿಪತ್ತು ಕೇಂದ್ರ ತಿಳಿಸಿದೆ. “ಭೂಕುಸಿತವು 2,000 ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ಸಮಾಧಿ ಮಾಡಿದ್ದು, ಕಟ್ಟಡಗಳು, ಆಹಾರ ತೋಟಗಳು ವ್ಯಾಪಕ ನಾಶಕ್ಕೆ ಗುರಿಯಾಗಿದೆ. ಈ ದುರ್ಘಟನೆಯಿಂದಾಗಿ ದೇಶದ ಆರ್ಥಿಕ ಜೀವನಾಧಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ” ಎಂದು ರಾಷ್ಟ್ರೀಯ ವಿಪತ್ತು ಕೇಂದ್ರದ ಅಧಿಕಾರಿಯೊಬ್ಬರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Read More

ಬ್ರಿಟನ್ ನ ಸಾರ್ವತ್ರಿಕ ಚುನಾವಣೆಯನ್ನು ಜುಲೈ 4ರಂದು ನಡೆಸುವ ನಿರ್ಧಾರವನ್ನು ಪ್ರಧಾನಿ ರಿಷಿ ಸುನಾಕ್ ಪ್ರಕಟಿಸಿದ ಬೆನ್ನಲ್ಲೇ, ಸ್ವಪಕ್ಷೀಯರಿಂದಲೇ ಭಾರಿ ಆಘಾತ ಎದುರಿಸಿದ್ದಾರೆ. ಮೊದಲ ವಾರಾಂತ್ಯ ಪ್ರಚಾರದಿಂದ ಒಂದು ದಿನ ದೂರ ಉಳಿಯಲು ನಿರ್ಧರಿಸಿ, ತಮ್ಮ ಆಪ್ತ ಸಹೆಗಾರರ ಜತೆ ಸುನಾಕ್ ವಾರಾಂತ್ಯ ಕಳೆದಿದ್ದಾರೆ. ತಮ್ಮ ಆಪ್ತರು ಹಾಗೂ ಕುಟುಂಬದ ಸದಸ್ಯರೊಂದಿಗೆ ವಿಹಾರಕ್ಕೆ ತೆರಳಿರುವ 44 ವರ್ಷದ ಸುನಾಕ್ಗೆ ಕನ್ಸರ್ವೇಟಿವ್ ಪಾರ್ಟಿಯ 78 ಸಂಸದರ ಸಾಮೂಹಿಕ ನಿರ್ಗಮನ ಭಾರೀ ಆಘಾತ ನೀಡಿದೆ. ಮುಂಚೂಣಿ ಟೋರಿ ಮುಖಂಡರು ಹಾಗೂ ಸಂಪುಟ ಸಹೋದ್ಯೋಗಿಗಳಾದ ಮೈಕೆಲ್ ಗೋವ್ ಮತ್ತು ಆ್ಯಂಡ್ರಿಯಾ ಲೀಡ್ಸಮ್ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.ಈ ಮೂಲಕ ಪಕ್ಷದ ಸದಸ್ಯತ್ವ ತೊರೆದ ಸಂಸದರ ಸಂಖ್ಯೆ 78ಕ್ಕೇರಿದೆ. ಗೋವ್ ತಮ್ಮ ರಾಜೀನಾಮೆ ಪತ್ರವನ್ನು ಶುಕ್ರವಾರ ಸಂಜೆ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ದೇಶಾದ್ಯಂತ ಪ್ರಸ್ತುತ ಇರುವ ಟೋರಿಗಳಿಗೆ ಪ್ರಬಲ ಸವಾಲು ಎದುರಾಗಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಸುನಾಕ್ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಲೀಡ್ಸಮ್…

Read More

ಧ್ರುವ ಸರ್ಜಾ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಗುತ್ತಿದೆ. ಸಾಕಷ್ಟು ವರ್ಷಗಳ ಬಳಿಕ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ‘ಸಿನಿಮಾದ ರಿಲೀಸ್ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ. ಬೆನ್ನಲ್ಲೇ ಇದೀಗ ಮತ್ತೊಂದು ಬಿಗ್ ನ್ಯೂಸ್ ಸಿಕ್ಕಿದೆ. ಧ್ರುವ ಸರ್ಜಾ ನಟನೆಯ‘ಪೊಗರು’ ಸಿನಿಮಾ ರಿಲೀಸ್ ಆಗಿ 3 ವರ್ಷ ಕಳೆದರೂ ಫ್ಯಾನ್ಸ್‌ಗೆ ಅವರ ಚಿತ್ರಗಳ ಬಗ್ಗೆ ಏನು ಅಪ್‌ಡೇಟ್ ಸಿಗದೇ ನಿರಾಶರಾಗಿದ್ದರು. ಆದರೆ ತಮ್ಮ ಮುಂಬರುವ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಧ್ರುವ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಈಗ ಮಾರ್ಟಿನ್, ಕೆಡಿ ಚಿತ್ರಗಳ ಟ್ರೇಲರ್, ಟೀಸರ್ ರಿಲೀಸ್‌ಗಾಗಿ ಫ್ಯಾನ್ಸ್ ಕಾಯುತ್ತಿರುವಾಗಲೇ ಹೃತಿಕ್ ರೋಷನ್ ಜೊತೆ ಧ್ರುವ ಸರ್ಜಾ ನಟಿಸುವ ಕುರಿತು ಮಾಹಿತಿ ಸಿಕ್ಕಿದೆ. ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಅವರ ಸಹೋದರನಾಗಿ ಪವರ್‌ಫುಲ್ ಪಾತ್ರದಲ್ಲಿ ನಟಿಸೋಕೆ ಧ್ರುವಗೆ ಕರೆ ಬಂದಿದೆ ಎನ್ನಲಾಗುತ್ತಿದೆ. ಹೃತಿಕ್, ಜ್ಯೂ.ಎನ್‌ಟಿಆರ್ ಜೊತೆ ಧ್ರುವ ಕೂಡ ಪ್ರಮುಖ ಪಾತ್ರದಲ್ಲಿ…

Read More

ಕನ್ನಡದ ನಟಿ, ಕರಾವಳಿ ಬ್ಯೂಟಿ ನೇಹಾ ಶೆಟ್ಟಿ ಸದ್ಯ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಡಿಜೆ ಟಿಲ್ಲು’ ನಂತರ ಇದೀಗ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ, ತಮ್ಮ ಬಗೆಗಿನ ಟ್ರೋಲ್‌ಗಳ ಕುರಿತು ನೇಹಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ತಾವು ಟ್ರೋಲ್‌ಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ. ಜಗತ್ತಿನಲ್ಲಿ ಜನರು ತಮ್ಮದೇ ಆದ ವಿವಿಧ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ನಾನು ತಿಳಿದಿದ್ದೇನೆ. ಬೇರೆಯವರ ಅಭಿಪ್ರಾಯಗಳು ನನ್ನ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಹಾಗಾಗಿ ನನಗೆ ಸಂಬಂಧಿಸಿದ ಟ್ರೋಲ್, ಸುದ್ದಿಗಳನ್ನು ನಾನು ನೋಡುವುದಿಲ್ಲ. ಅಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್‌ ವಿಚಾರಗಳು ಹೆಚ್ಚಾಗಿರುತ್ತದೆ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ. ಗಣೇಶ್ ನಟನೆಯ ಮುಂಗಾರುಮಳೆ 2 ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ನೇಹಾ ಶೆಟ್ಟಿ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದ್ದಾರೆ.

Read More

ಭಾನುವಾರ ರಾತ್ರಿ ಬಾಂಗ್ಲಾದೇಶದ ಕರಾವಳಿಯನ್ನುತೀವ್ರ ಚಂಡಮಾರುತ ‘ರೆಮಲ್’ ಅಪ್ಪಳಿಸಿದ್ದು  ದೇಶದ ತಗ್ಗು-ಪಶ್ಚಿಮ ಕರಾವಳಿ ಪ್ರದೇಶಗಳಿಂದ ಸುಮಾರು ಎಂಟು ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ರೆಮಲ್ ಚಂಡಮಾರುತವು ಬಾಂಗ್ಲಾದೇಶದ ನೈಋತ್ಯ ಭಾಗದ ಮೊಂಗ್ಲಾ ಮತ್ತು ಖೆಪುಪಾರಾ ಕರಾವಳಿಯ ಮೂಲಕ ರಾತ್ರಿ 8:30 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಭಾರತದ ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟಲು ಪ್ರಾರಂಭಿಸಿತು” ಎಂದು ಹವಾಮಾನ ಕಚೇರಿಯ ವಕ್ತಾರರು ಸುದ್ದಿಗಾರರಿಗೆ ತಿಳಿಸಿದರು. ಚಂಡಮಾರುತವು ಬಾಂಗ್ಲಾದೇಶದ ನೈಋತ್ಯ ಕರಾವಳಿ ಪ್ರದೇಶಗಳು ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪದಿಂದ ಉತ್ತರದ ಕಡೆಗೆ ಚಲಿಸುತ್ತಿದೆ ಮತ್ತು ‘ಮುಂದಿನ ಐದರಿಂದ ಏಳು ಗಂಟೆಗಳಲ್ಲಿ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ’ ಎಂದು ಹೇಳಿದರು. ಸೈಕ್ಲೋನಿಕ್ ಚಂಡಮಾರುತವು 12:00-1:00 am ನಡುವೆ ಬಾಂಗ್ಲಾದೇಶವನ್ನು ದಾಟುವ ನಿರೀಕ್ಷೆಯಿದೆ, ನಂತರ ಅದು ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಚಂಡಮಾರುತಕ್ಕೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ನಂಬಲಾಗಿದೆ ಮತ್ತು ಆಗ್ನೇಯ ಪಟುವಾಖಾಲಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 50 ಕ್ಕೂ ಹೆಚ್ಚು…

Read More

77ನೇ ಸಾಲಿನ ಕಾನ್ಸ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾರತಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ನಿರ್ದೇಶಕಿ ಪಾಯಲ್​ ಕಪಾಡಿಯಾ ನಿರ್ದೇಶನದ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾಗೆ ಗ್ರ್ಯಾಂಡ್​ ಪ್ರಿಕ್ಸ್​ ಪ್ರಶಸ್ತಿ ದೊರೆತಿದ್ದು, ಈ ಪ್ರಶಸ್ತಿ ಪಡೆದ ಭಾರತದ ಮೊದಲ ಡೈರೆಕ್ಟರ್​ ಎಂಬ ಖ್ಯಾತಿಗೆ ಪಾಯಲ್​ ಕಪಾಡಿಯಾ ಪಾತ್ರರಾಗಿದ್ದಾರೆ. ಸದ್ಯ ಪಾಯಲ್ ಅವರಗೆ ಸೋಶಿಯಲ್​ ಮೀಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪಾಯಲ್​ ಕಪಾಡಿಯಾ ಅವರಿಂದಾಗಿ ಯುವ ಫಿಲ್ಮ್​ ಮೇಕರ್​ಗಳಿಗೆ ಸ್ಫೂರ್ತಿ ಸಿಕ್ಕಿದೆ ಎಂದು ನರೇಂದ್ರ ಮೋದಿ ಹೊಗಳಿದ್ದಾರೆ. ‘ಪಾಯಲ್​ ಕಪಾಡಿಯಾ ಅವರಿಂದ ಭಾರತಕ್ಕೆ ಹೆಮ್ಮೆ ಆಗಿದೆ. 77ನೇ ಕಾನ್​ ಚಿತ್ರೋತ್ಸವದಲ್ಲಿ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾಗೆ ಅವರು ಗ್ರ್ಯಾಂಡ್​ ಪ್ರಿಕ್ಸ್​ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಹಳೇ ವಿದ್ಯಾರ್ಥಿಯಾದ ಅವರು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯಿಂದ ಶೈನ್​ ಆಗುತ್ತಿದ್ದಾರೆ. ಭಾರತದ ಶ್ರೀಮಂತ ಸೃಜನಶೀಲತೆಗೆ ಅವರು ಸಾಕ್ಷಿ. ಈ ಪ್ರತಿಷ್ಠಿತ ಪ್ರಶಸ್ತಿಯು ಅವರಿಗೆ ಸಂದ…

Read More

ಸ್ಯಾಂಡಲ್‌ವುಡ್ ನಟ ದರ್ಶನ್ ಅಭಿಮಾನಿಗಳು ಹಾಗೂ ಅರಣ್ಯಾಧಿಕಾರಿಗಳ ಮಧ್ಯೆ ಇದೀಗ ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಗಲಾಟೆ ಶುರುವಾಗಿದೆ. ಮೃತ ಅರ್ಜುನ ಆನೆ ಸಮಾಧಿ ನಿರ್ಮಾಣಕ್ಕೆ ದರ್ಶನ್​ ಮುಂದಾಗಿದ್ದು, ಧನಸಹಾಯ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅರಣ್ಯಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.  ದರ್ಶನ್ ಇತ್ತೀಚೆಗೆ ಅರ್ಜುನ ಆನೆ ಸಮಾಧಿ ನಿರ್ಮಾಣ ಮಾಡಲು ಸ್ವಂತ ಹಣ ಖರ್ಚು ಮಾಡಿ ಸ್ಲ್ಯಾಬ್ ಕಲ್ಲುಗಳನ್ನು ಕಳುಹಿಸಿ ಕೊಟ್ಟಿದ್ದರು. ಅರಣ್ಯಾಧಿಕಾರಿಗಳಿಂದ ಅನುಮತಿ ಸಿಕ್ಕ ಬಳಿಕವೇ ದರ್ಶನ್ ಅಭಿಮಾನಿಗಳು ಕೆಲಸ ಪ್ರಾರಂಭಿಸಿದ್ದರು. ಆದರೆ ಅರ್ಜುನನ ಸ್ಮಾರಕ ನಿರ್ಮಿಸುವ ಕೆಲಸದ ವೇಳೆ, ಅರಣ್ಯಾಧಿಕಾರಿಗಳು ತಡೆದರು. ಬಳಿಕ ತಾವೇ ಅರ್ಜುನನ ಸ್ಮಾರಕ ನಿರ್ಮಾಣ ಮಾಡೋದಾಗಿ ಹೇಳಿ ಅಲ್ಲಿಂದ ದರ್ಶನ್ ಅಭಿಮಾನಿಗಳನ್ನು ಕಳುಹಿಸಿದ್ದರು. ಹಣವನ್ನು ಹಿಂದಿರುಗಿಸೋದಾಗಿ ಕೂಡ ಹೇಳಿದ್ದರು ಎಂದು ವಿಡಿಯೋ ಮೂಲಕ ದರ್ಶನ್ ಆಪ್ತ ನಾಗರಾಜ್ ತಿಳಿಸಿದ್ದಾರೆ. ಇದುವರೆಗೂ ನಮ್ಮ ಖಾತೆಗೆ ಹಣ ಬಂದಿಲ್ಲ. ನಮಗೆ ನಿಮ್ಮ ಹಣ ಬೇಕಿಲ್ಲ. ಮೊದಲು ಅನುಮತಿ ಕೊಟ್ಟು ಬಳಿಕ ನಾವೇ ಮಾಡ್ತೀವಿ…

Read More