Author: Author AIN

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹುಭಾಷಾ ನಟ ಕಿಶೋರ್ ಆಗಾಗ ವಾಗ್ದಾಳಿ ನಡೆಸುತ್ತಲೆ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಮೋದಿ ಬಗ್ಗೆ ಹರಿಹಾಯುವ ನಟ ಇದೀಗ ಮತ್ತೆ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮ ಗಾಂಧಿಬಗ್ಗೆ ಮಾತನಾಡುತ್ತಾ ಗಾಂಧಿ ಕುರಿತಾಗಿ 1982ರಲ್ಲಿ ಸಿನಿಮಾ ಬಂದ ನಂತರವೇ ಅವರ ಬಗ್ಗೆ ವಿಶ್ವದ ಇಂಚಿಂಚಿಗೂ ತಿಳಿಯಿತು ಎಂದು ಹೇಳಿದ್ದರು. ಅವರ ಈ ಕಾಮೆಂಟ್‌ಅನ್ನು ವಿರೋಧ ಪಕ್ಷಗಳು ಬಲವಾಗಿ ಟೀಕೆ ಮಾಡುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲೂ ಈ ಕುರಿತಾಗಿ ಪ್ರಧಾನಿ ಮೋದಿ ಸಾಕಷ್ಟು ಟ್ರೋಲ್‌ಗೂ ತುತ್ತಾಗಿದ್ದಾರೆ. ಇದರ ನಡುವೆ ನಟ ಕಿಶೋರ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಿರುವ ಮಾತನ್ನು ಟೀಕೆ ಮಾಡಿದ್ದು, ಕೆಲಸ ಮಾಡಲಾಗದ ಅಯೋಗ್ಯ ಮೋದಿಗೇನು ಹುಚ್ಚೇ ಎಂದು ಪ್ರಶ್ನೆ ಮಾಡಿದ್ದಾರೆ. ‘ಇದೇನು ಹುಚ್ಚೋ … ಹೊಲಸು ಕುತಂತ್ರವೋ? ..ತನ್ನ ಬೌದ್ಧಿಕ ದಿವಾಳಿತನ ಮತ್ತು ಕೆಲಸ ಮಾಡಲಾಗದ ಅಯೋಗ್ಯತೆಯನ್ನು, ನಿರುದ್ಯೋಗ,ಬೆಲೆಯೇರಿಕೆ, ಬಡತನ, ಮಣಿಪುರ, ಚೀನಾ, ಅಗ್ನಿವೀರ್, ರೈತ ಹೋರಾಟ, ನಗದು…

Read More

ಗಾಝಾ ಬಿಕ್ಕಟ್ಟಿನತ್ತ ಜಾಗತಿಕ ಗಮನವನ್ನು ಕೇಂದ್ರೀಕರಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ `ಎಲ್ಲಾ ಕಣ್ಣುಗಳೂ ರಫಾದ ಮೇಲೆ’ ಚಿತ್ರವನ್ನು 4.4 ಕೋಟಿ ಇನ್ಸ್ಟಾಗ್ರಾಮ್ ಬಳಕೆದಾರರು ಮತ್ತು ವಿಶ್ವದ ಪ್ರಮುಖ ಸೆಲೆಬ್ರಿಟಿಗಳು ಶೇರ್ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಮಾಹಿತಿ ನೀಡಿದೆ. ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಈ ಚಿತ್ರದಲ್ಲಿ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಡೇರೆಗಳಿಂದ ತುಂಬಿದ ವಿಶಾಲವಾದ ಮರುಭೂಮಿಯ ಭೂದೃಶ್ಯವನ್ನು ತೋರಿಸುತ್ತದೆ. (ಈಗ ಮುಂದುವರಿದಿರುವ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡಿರುವ ಫೆಲೆಸ್ತೀನೀಯರು ನೆಲೆಸಿರುವ ದಕ್ಷಿಣ ಗಾಝಾಪಟ್ಟಿಯ ಪ್ರದೇಶವನ್ನು ಈ ಚಿತ್ರ ಹೋಲುತ್ತದೆ). `ಎಲ್ಲಾ ಕಣ್ಣುಗಳು ರಫಾದ ಮೇಲೆ’ ಎಂಬ ಘೋಷಣಾ ವಾಕ್ಯವನ್ನು ಇತರ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕವಾಗಿ ಶೇರ್ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ `ಎಕ್ಸ್’ನಲ್ಲಿ `ಆಲ್ಐಸ್ಆನ್ರಫಾ’ ಸುಮಾರು 1 ದಶಲಕ್ಷ ಹಿಟ್ಸ್ ಪಡೆದುಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

Read More

ನೆದರ್ಲ್ಯಾಂಡ್ ನ ರಾಜಧಾನಿ ಆಮ್ಸ್ಟರ್ಡಾಂನ ಶಿಫೋಲ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್ನೊಳಗೆ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು ಡೆನ್ಮಾರ್ಕ್ ನ ಬಿಲುಂಡ್ ಗೆ ಪ್ರಯಾಣಿಸಲು ಸಿದ್ಧಗೊಂಡಿದ್ದಾಗ ವಿಮಾನದ ರೆಕ್ಕೆಯ ಮೇಲೆ ಓಡಿಬಂದ ವ್ಯಕ್ತಿಯೊಬ್ಬ ಕಾಲುಜಾರಿ ಇಂಜಿನ್ ನ ಒಳಗಿರುವ ಕೂಲಿಂಗ್ ಫ್ಯಾನ್ ನ ರೆಕ್ಕೆಗಳಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಇದು ಆಕಸ್ಮಿಕ ಅಪಘಾತವೇ ಅಥವಾ ಆತ್ಮಹತ್ಯೆ ಪ್ರಕರಣವೇ ಎಂಬುದು ದೃಡಪಟ್ಟಿಲ್ಲ. ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

Read More

ಕೆನಡಾದಲ್ಲಿ ಶಿಕ್ಷಣ ಪಡೆಯಲು ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನಕಲಿ ದಾಖಲೆ ಪತ್ರ ತಯಾರಿಸಿ ಕೊಡುತ್ತಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ವಲಸೆ ಏಜೆಂಟ್ ಬೃಜೇಶ್ ಮಿಶ್ರ ದೋಷಿಯೆಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. ಮಿಶ್ರಾ ವಿರುದ್ಧ ದಾಖಲಾಗಿರುವ ಐದು ಪ್ರಕರಣಗಳ ವಿಚಾರಣೆಯನ್ನು ವ್ಯಾಂಕೋವರ್ನ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ನ್ಯಾಯಾಲಯದಲ್ಲಿ ನಡೆಸಿದೆ. ಐದು ಪ್ರಕರಣಗಳಲ್ಲಿ ಮೂರರಲ್ಲಿ ಮಿಶ್ರಾ ಅಪರಾಧ ಸಾಬೀತಾಗಿದೆ. ಇತರ ಎರಡು ಪ್ರಕರಣಗಳ ವಿಚಾರಣೆಗೆ ತಡೆನೀಡಲಾಗಿದೆ. ಪ್ರಕರಣದ ಕುರಿತು ಕೆಲವು ಸಂತ್ರಸ್ತ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಸಾಕ್ಷಿಗಳಾಗಿ ಹಾಜರಿದ್ದರು. ಮಿಶ್ರ ಶಿಕ್ಷೆಯನ್ನು ಪೂರೈಸಿದ ಬಳಿಕ ಗಡೀಪಾರು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ. ಕೆನಡಾದಲ್ಲಿ ಶಿಕ್ಷಣ ಪಡೆದಿದ್ದ ಭಾರತದ ಸುಮಾರು 150 ವಿದ್ಯಾರ್ಥಿಗಳು, ಇವರಲ್ಲಿ ಹೆಚ್ಚಿನವರು ಪಂಜಾಬ್ ಮೂಲದವರು, ನಕಲಿ ದಾಖಲೆಪತ್ರದ ಮೂಲಕ ಕೆನಡಾ ಪ್ರವೇಶಿಸಿರುವುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಈ ವಿದ್ಯಾರ್ಥಿಗಳು 2017 ಮತ್ತು 2019ರ ನಡುವೆ ಕೆನಡಾಕ್ಕೆ ಆಗಮಿಸಿದ್ದರು. ಭಾರತದ ವಲಸೆ ಏಜೆಂಟರು ನಕಲಿ ದಾಖಲೆ ಪತ್ರದ ಮೂಲಕ…

Read More

ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದಲ್ಲಿ ಪಾಕಿಸ್ತಾನೀಯರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಇರಾನ್ ನ ಗಡಿಭದ್ರತಾ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಬಲೂಚಿಸ್ತಾನ್ ಪ್ರಾಂತದ ಗಡಿಯಲ್ಲಿರುವ ಮಷ್ಕೆಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಇರಾನ್ ಯೋಧರು ಗುಂಡಿನ ದಾಳಿ ನಡೆಸಿರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ಕಳೆದ ವರ್ಷ ರಿಲೀಸ್ ಆದ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಬೇಬಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬೇಬಿ ಕಥೆ ನೋಡಿದ ಪ್ರತಿಯೊಬ್ಬರು ಚಿತ್ರವನ್ನು ಮೆಚ್ಚಿಕೊಂಡಿದ್ದರು. ಆದರೆ ಇದೀಗ ಸಿನಿಮಾ ನಿರ್ದೇಶಕನ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿ ಬಂದಿದ್ದು, ಅದಕ್ಕೆ ಸಾಕ್ಷ್ಯಗಳನ್ನು ನಿರ್ದೇಶಕರೊಬ್ಬರು ಬಿಡುಗಡೆ ಮಾಡಿದ್ದಾರೆ. ‘ಬೇಬಿ’ ಸಿನಿಮಾ ಬಿಡುಗಡೆಗೆ ಮುನ್ನವೇ ನಿರ್ದೇಶಕ ಶಿರಿನ್ ಶ್ರೀರಾಮ್ ಎಂಬುವರು ‘ಬೇಬಿ’ ಸಿನಿಮಾದ ನಿರ್ದೇಶಕ ಸಾಯಿ ರಾಜೇಶ್ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿದ್ದರು. ಆಗಲೇ ಸಾಯಿ ರಾಜೇಶ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್​ಐಆರ್ ಸಹ ದಾಖಲಾಗಿದೆ. ಇದೀಗ ನಿರ್ದೇಶಕ ಶಿರಿನ್ ಶ್ರೀರಾಮ್ ‘ಬೇಬಿ’ ಸಿನಿಮಾ, ತಮ್ಮ ಕತೆಯನ್ನು ಕದ್ದು ಮಾಡಿದ ಸಿನಿಮಾ ಎಂಬುದಕ್ಕೆ ಸಾಕ್ಷ್ಯಗಳನ್ನು ಪುಸ್ತಕದ ಮಾದರಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕಕ್ಕೆ ‘ಬೇಬಿ ಲೀಕ್ಸ್’ ಎಂದು ಹೆಸರಿಟ್ಟಿದ್ದಾರೆ. ಪುಸ್ತಕವು ಆನ್​ಲೈನ್​ನಲ್ಲಿ ಉಚಿತವಾಗಿ ಡೌನ್​ಲೋಡ್​ಗೆ ಲಭ್ಯವಿದೆ. ನಿರ್ದೇಶಕ ಶಿರಿನ್, 2015ರಲ್ಲಿ ನಿರ್ದೇಶಕ ಸಾಯಿ ರಾಜೇಶ್​ಗೆ ‘ಬೇಬಿ’ ಸಿನಿಮಾದ ಕತೆ ಹೇಳಿದ್ದರಂತೆ.…

Read More

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ 73ನೇ ವಯಸ್ಸಿನಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರೋ ನಟ ಪ್ರತಿಭಾರಿಯೂ ಹೊಸದೇನೋ ಕಲಿಯಬೇಕು ಎಂದು ಉತ್ಸಾಹದಿಂದಿರುತ್ತಾರೆ. ಅಂತೆಯೇ ಈ ಬಾರಿಯೂ ಹೊಸ ಅನುಭವ ಪಡೆಯಬೇಕು ಎಂದು ಹಿಮಾಲಯದ ಗುಹೆಗಳತ್ತ ಹೆಜ್ಜೆ ಹಾಕಿದ್ದಾರೆ. ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದ ಶೂಟಿಂಗ್​ ಆರಂಭಿಸಬೇಕಿದೆ. ಅದಕ್ಕೂ ಮುನ್ನ ಅಧ್ಯಾತ್ಮದ ಅನುಭವ ಪಡೆಯಲು ಅವರು ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಈಗಾಗಲೇ ಕೇದರನಾಥಕ್ಕೆ ಹೋಗಿರುವ ತಲೈವ  ಹಿಮಾಲಯಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲಿನ ಗುಹೆಗಳಲ್ಲಿ ಅಧ್ಯಾತ್ಮದ ಹೊಸ ಅನುಭವ ಪಡೆಯಲಿದ್ದಾರೆ. ಅಲ್ಲಿಂದ ವಾಪಸ್​ ಬಂದ ನಂತರ ‘ಕೂಲಿ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ರಜನಿಕಾಂತ್ ಗುರುವಾರ ಮುಂಜಾನೆಯೇ ಚೆನ್ನೈನಿಂದ ಡೆಹರಾಡೂನ್​ ತಲುಪಿದ್ದಾರೆ. ಡೆಹರಾಡೂನ್​ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ‘ಪ್ರತಿ ವರ್ಷ ನಾನು ಹೊಸ ಅನುಭವ ಪಡೆಯುತ್ತೇನೆ. ಅದರಿಂದ ನನ್ನ ಅಧ್ಯಾತ್ಮದ ಪಯಣ ಮುಂದುವರಿಯುತ್ತದೆ. ಈ ಬಾರಿ ಕೂಡ ನನಗೆ ಹೊಸ ಅನುಭವ ಆಗಲಿದೆ ಅಂತ…

Read More

ಬಾಲಿವುಡ್​ ನಟ ಸನ್ನಿ ಡಿಯೋಲ್ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. 2023ರಲ್ಲಿ ಬಿಡುಗಡೆ ಆದ ‘ಗದರ್​ 2’ ಸಿನಿಮಾದಿಂದ ಅವರ ಬೇಡಿಕೆ ಹೆಚ್ಚಾಗಿದೆ. ಆದರೆ ಅನೇಕ ನಿರ್ಮಾಪಕರಿಗೆ ಸನ್ನಿ ಡಿಯೋಲ್​ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್​ ನಿರ್ಮಾಪಕ ಸೌರವ್​ ಗುಪ್ತ ಅವರು ಸುದ್ದಿಗೋಷ್ಠಿ ನಡೆಸಿ ಶಾಕಿಂಗ್​ ವಿಚಾರಗಳನ್ನು ಬಯಲು ಮಾಡಿದ್ದಾರೆ. ರಿಯಲ್​ ಎಸ್ಟೇಟ್​ ಕ್ಷೇತ್ರದಲ್ಲಿ ಪಳಗಿರುವ ಸೌರವ್​ ಗುಪ್ತಾ ಅವರು ಸಿನಿಮಾ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಂದ ಸನ್ನಿ ಡಿಯೋಲ್ ಕೋಟ್ಯಂತರ ರೂಪಾಯಿ ಹಣ ಪಡೆದು ​ ಮೋಸ ಮಾಡಿದ್ದಾರೆ ಎನ್ನಲಾಗಿದೆ. 2016ರಲ್ಲಿಯೇ ಸನ್ನಿ ಡಿಯೋಲ್​ ಅವರಿಗೆ ಒಂದು ಸಿನಿಮಾದಲ್ಲಿ ನಟಿಸುವ ಸಲುವಾಗಿ ಸೌರವ್​ ಗುಪ್ತಾ ಅವರು 1 ಕೋಟಿ ರೂಪಾಯಿ ಅಡ್ವಾನ್ಸ್​ ನೀಡಿದ್ದರು. ಆದರೆ ಈ ಸಿನಿಮಾ ಈವರೆಗೆ ಸೆಟ್ಟೇರಿಲ್ಲ. ‘ನಾವು ಅವರಿಗೆ 1 ಕೋಟಿ ರೂಪಾಯಿ ಅಡ್ವಾನ್ಸ್​ ನೀಡಿದ್ದೆವು. ಆದರೆ ನಮ್ಮ ಸಿನಿಮಾ ಮಾಡುವ ಬದಲು ಅವರು ಬೇರೆ ಸಿನಿಮಾದಲ್ಲಿ ನಟಿಸಿದರು. ಅಲ್ಲದೇ ಪದೇ ಪದೇ ನನ್ನಿಂದ ಅವರು ಹೆಚ್ಚು ಹಣ ಕೇಳಿದರು. ಈತನಕ…

Read More

ನಟ ಪ್ರಜ್ವಲ್ ದೇವರಾಜ್ ಅನಾರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಅವರ ಕುಟುಂಬ ಗರಂ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ‘ಪ್ರಜ್ವಲ್ ದೇವರಾಜ್ ಇನ್ನಿಲ್ಲ’ ಎನ್ನುವ ಪೋಸ್ಟರ್ ವೈರಲ್ ಆಗಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಆತಂಕಗೊಂಡಿದ್ದರು. ಪ್ರಜ್ವಲ್ ದೇವರಾಜ್ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಚಾರವಾಗಿ ಅವರ ಕುಟುಂಬಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರಜ್ವಲ್ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳನ್ನ ಹಬ್ಬಿಸಲಾಗಿದೆ. ಪ್ರಜ್ವಲ್ ದೇವರಾಜ್ ಅವರ ಪೋಟೋಗಳನ್ನ ದುರ್ಬಳಕೆ ಮಾಡಲಾಗಿದೆ. ಈ ಸಂಬಂಧ ನಟ ಪ್ರಜ್ವಲ್ ದೇವರಾಜ್ ಆಪ್ತರು ಮಾಹಿತಿಯನ್ನು ಹಂಚಿಕೊಂಡಿದ್ದು, ನಟ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಕಿಡಿಗೇಡಿಗಳು ಸುಮ್ಮನೆ ಇಂತಹ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ಮಾಧ್ಯಮಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಬಗ್ಗೆ ಕಿಡಿಗೇಡಿಗಳು ವೈರಲ್ ಮಾಡುತ್ತಿರುವ ಫೋಟೊ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ನಟ ಪ್ರಜ್ವಲ್ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ…

Read More

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಣಿ ಸಭೆ ಮಾಡಲು ಕೆಲ ಸದಸ್ಯರು ಗೋವಾ ಟ್ರಿಪ್ ಹೋಗಿದ್ದರು. ಆದರೆ ಈ ವೇಳೆ ಗಲಾಟೆ ನಡೆದಿದ್ದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ‘ಗೋವಾದಲ್ಲಿ ನಡೆದ ಘಟನೆ ನನಗೆ ಭಯ ಹುಟ್ಟಿಸಿತು. ಅಂಥಹಾ ಘಟನೆ ನಡೆಯಬಾರದಿತ್ತು. ಗೋವಾದಲ್ಲಿ ರಕ್ತದ ಕೋಡಿಯೇ ಹರಿಯಿತು. ಫಿಲಂ ಚೇಂಬರ್ ಇತಿಹಾಸದಲ್ಲಿಯೇ ಕೈ-ಕೈ ಮಿಲಾಯಿಸಿರಲಿಲ್ಲ. ನನಗೆ ಬಹಳ ಬೇಸರವಾಯ್ತು. ನಿರ್ಮಾಪಕ ಸತೀಶ್​ ಹಲವು ಎಚ್ಚರಿಕೆಗಳ ಬಳಿಕವೂ ಹೀಗೆ ಮಾಡಿದ್ದಾರೆ’ ಎಂದಿದ್ದಾರೆ. ಅಧ್ಯಕ್ಷ ಆದ ಮೇಲೆ ಪದಾಧಿಕಾರಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎಂಬ ಆಸೆಯಿತ್ತು. ಹಾಗಾಗಿ ಗೋವಾಗೆ ಹೋಗಿದ್ದೆವು. ಸತೀಶ್ ಈ ಹಿಂದೆಯೂ ಏರು ಧ್ವನಿಯಲ್ಲಿ ಮಾತಾಡಿದ್ದರು. ಈ ಹಿಂದೆ ಕೂಡ ಅವರಿಗೆ ನೋಟೀಸ್ ಕೊಟ್ಟಿದ್ದೆವು. ಬೈಲಾ ಕಮಿಟಿ ಫಾರ್ ಮೇಶನ್ ನ ಒಂದು ಸಂದೇಶವನ್ನು ಬಹಿರಂಗವಾಗಿ ಮಾಡಿದ್ದರು. ಅದನ್ನ ಹಲವರಿಗೆ ಹಂಚಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುವಂತೆ…

Read More