ಬೆಂಗಳೂರು: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಮಹಾಕುಂಭಮೇಳ ಭಕ್ತರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದಿನ ಕಳೆದಂತೆ ಭಕ್ತ ಸಾಗರ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಇದೀಗ ಪರಿಷತ್ ಶಾಸಕ ಟಿಎ ಶರವಣ ಅವರು ಕೂಡ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾ ಕುಂಭಮೇಳದಲ್ಲಿ ಸಂಚರಿಸಿದ ಪರಿಷತ್ ಶಾಸಕ ಟಿಎ ಶರವಣ ಅವರು ವಿನಯ್ ಗುರೂಜಿ ಅವರ ಜೊತೆ ಪುಣ್ಯಸ್ನಾನ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಕೊನೆಯ ಘಟದತ್ತ ತಲುಪಿದೆ. ಫೆಬ್ರವರಿ 26ರಂದು ಈ ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 56 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಫೆಬ್ರವರಿ 26 ಮಹಾಶಿವರಾತ್ರಿ ಇರೋ ಕಾರಣ ಮಹಾ ಕುಂಭಮೇಳಕ್ಕೆ ಭಕ್ತ ಸಾಗರ ಹರಿದು ಬರುವ ಸಾಧ್ಯತೆ ಇದೆ. ಈಗಾಗ್ಲೆ…
Author: Author AIN
ತುಮಕೂರು : ಕನ್ನಡ ನಿರ್ಮಾಪಕ ಕೆ.ಮಂಜು ಅವರ ಪುತ್ರ ನಟ ಶ್ರೇಯಸ್ ಮಂಜು ಅವರ ಕಾರು ಅಪಘಾತಕ್ಕೀಡಾಗಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹೆಗ್ಗನಹಳ್ಳಿ ಬಳಿ ಘಟನೆ ನಡೆದಿದೆ. https://www.youtube.com/watch?v=S_aZfchlwPw ಶ್ರೇಯಸ್ ಅಭಿನಯದ ವಿಷ್ಣುಪ್ರಿಯ ಸಿನಿಮಾದ ಪ್ರಚಾರಕ್ಕಾಗಿ ದಾವಣಗೆರೆಗೆ ಹೊರಟಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಮುಂದೆ ಹೋಗುತ್ತಿದ್ದ ಲಾರಿಗೆ ಶ್ರೇಯಸ್ ಅವರ ಕಾರು ಡಿಕ್ಕಿಯಾಗಿದೆ. ಕಾರಿನನ ಸ್ವಲ್ಪ ಭಾಗಕ್ಕೆ ಹಾನಿ ಎನ್ನಲಾಗಿದೆ. ನಟ ಶ್ರೇಯಸ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಕೇಸ್ ದಾಖಲಾಗಿಲ್ಲ.
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವ ಸಿಕ್ಕ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದ್ದು, ಯುವತಿಯನ್ನು ಹತ್ಯೆಗೈದು, ಯುವಕನೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಮೃತ ಮಧು ಮೂಲತಃ ಶಿವಮೊಗ್ಗದ ಭದ್ರಾವತಿಯವನಾಗಿದ್ದು, ಕಾರು ಡ್ರೈವರ್ ಆಗಿದ್ದ. ಮೃತ ಯುವತಿ ಪೂರ್ಣಿಮಾ ಮಾಗಡಿಯ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದರು. ಇಬ್ಬರ ಕುಟುಂಬದ ಜೊತೆ ವಿಶ್ವಾಸ-ಸ್ನೇಹ ಇತ್ತು. ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಮಧು ಭಾಗವಹಿಸುತ್ತಿದ್ದ. ಕಳೆದ ಏಳೆಂಟು ತಿಂಗಳ ಹಿಂದೆ ಪೂರ್ಣಿಮಾ ತಂಗಿಯ ಮದುವೆಯಾಗಿತ್ತು. ಆ ಮದುವೆಯಲ್ಲೂ ಮಧು ಭಾಗಿಯಾಗಿ ಎಲ್ಲಾ ಕೆಲಸ ಮಾಡಿದ್ದನು. ಮದುವೆಗೆ ಈತನ ಕಾರನ್ನ ಬಾಡಿಗೆ ಪಡೆದಿದ್ದರು. https://ainlivenews.com/bengaluru-youth-and-girl-die-in-chikkamagaluru-suspicion-surrounds-death/ ಕಳೆದ ಬುಧವಾರ ಸಂಜೆ ಶಾಲೆ ಮುಗಿಸಿ ಪೂರ್ಣಿಮಾ ಮನೆಗೆ ಬರುತ್ತಿದ್ದಾಗ, ಶಾಲೆಯಿಂದ 20 ಕಿ.ಮೀ. ದೂರದ ಊರಿಗೆ ಡ್ರಾಪ್ ಮಾಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಚಿಕ್ಕಮಗಳೂರಿಗೆ ಬಂದಿದ್ದಾನೆ.…
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಇಂದಿನಿಂದ 2025 ರ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸುತ್ತಿವೆ. ಈ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆಯಾದರೂ ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. https://ainlivenews.com/if-you-have-these-problems-do-not-drink-turmeric-milk/ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದೆ. ಅದರಂತೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಐವರು ಬ್ಯಾಟರ್ಗಳು, ಮೂವರು ಆಲ್ರೌಂಡರ್ಗಳು ಹಾಗೂ ಮೂವರು ಪರಿಪೂರ್ಣ ಬೌಲರ್ಗಳಿಗೆ ಸ್ಥಾನ ನೀಡಲಾಗಿದೆ. ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ. ಬಾಂಗ್ಲಾದೇಶ್ 11: ತಂಝಿದ್ ಹಸನ್, ಸೌಮ್ಯ ಸರ್ಕಾರ್, ನಜ್ಮುಲ್…
ಬೆಂಗಳೂರು: ಮುಡಾ ಕೇಸ್‌ನಲ್ಲಿ ಸತ್ಯ ಇಲ್ಲ ಎಂದು ನಮಗೆ ಗೊತ್ತಿದ್ದ ವಿಷಯ.ಇದರಲ್ಲಿ ಸಿಎಂ ಯಾವುದೇ ಪ್ರಭಾವ ಬೀರಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾ ಕೇಸ್‌ನಲ್ಲಿ ಸತ್ಯ ಇಲ್ಲ ಎಂದು ನಮಗೆ ಗೊತ್ತಿದ್ದ ವಿಷಯ. ಇದರಲ್ಲಿ ಸಿಎಂ ಯಾವುದೇ ಪ್ರಭಾವ ಬೀರಿಲ್ಲ. ಯಾವುದೇ ಲೆಟರ್ ಬರೆದಿರಲಿಲ್ಲ. ಬದಲಿ ನಿವೇಶನ ಎಲ್ಲರಿಗೂ ಕೊಡ್ತಾರೆ. ಅದರಂತೆ ಸಿಎಂ ಪತ್ನಿಗೂ ಕೊಟ್ಟಿದ್ದಾರೆ. ಈ ತಪ್ಪು ಆಗಿರೋದು ಬಿಜೆಪಿ ಅವಧಿಯಲ್ಲಿ. ಏನಾದರೂ ಕ್ರಮ ಆಗೋದಿದ್ದರೆ ಅವರ ಮೇಲೆ ಕ್ರಮ ಆಗಬೇಕು ಎಂದಿದ್ದಾರೆ. https://ainlivenews.com/if-you-have-these-problems-do-not-drink-turmeric-milk/ ಸಿದ್ದರಾಮಯ್ಯ ಅವರದ್ದು ಏನೇ ತಪ್ಪು ಇಲ್ಲದೇ ಹೋದರು ಪಾದಯಾತ್ರೆ ಮಾಡಿದ್ರು. ಈಗ ಕ್ಲೀನ್‌ಚಿಟ್ ಸಿಕ್ಕಿದೆ. ಇದರ ಹೊಣೆ ಈಗ ಬಿಜೆಪಿ-ಜೆಡಿಎಸ್‌ನವರು ಹೊರಬೇಕು. ಸಿಬಿಐ ತನಿಖೆ ಬೇಡ ಎಂದು ಕೋರ್ಟ್ ಹೇಳಿತ್ತು. ಲೋಕಾಯುಕ್ತಗೆ ವರದಿ ಕೊಟ್ಟಿದೆ. ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡೋಣ? ಬಿಜೆಪಿಯವರು ಮಂಡು ಬಿದ್ದಿದ್ದಾರೆ ಎಂದು ಹೇಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಕಲಬುರಗಿ : ಹೊಲಕ್ಕೆ ನುಗ್ಗಿದ್ದ ಜೀವಂತ ಮೊಸಳೆಯನ್ನು ರೈತರೇ ಹಿಡಿದು ಜೆಸ್ಕಾಂ ಕಚೇರಿಗೆ ತಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕಲಬುರಗಿ ಅಫ್ಜಲ್ ಪುರ ತಾಲೂಕಿನ ಗೊಬ್ಬೂರ್ ಗ್ರಾಮದಲ್ಲಿ ಘಟನೆ ನಡೆದಿದೆ. https://ainlivenews.com/bear-attack-while-going-to-farm-farmer-seriously-injured/ ಬೆಳಗಿನ ಜಾವ 4 ಗಂಟೆಗೆ ಪೂಜಾರಿ ಎಂಬಾತ ಗೋಧಿಗೆ ನೀರು ಬಿಡಲು ಹೋದಾಗ ಮೊಸಳೆ ಪ್ರತ್ಯಕ್ಷವಾಗಿದೆ. ಕೂಡಲೇ ಎಲ್ಲರು ಸೇರಿ ಮೊಸಳೆಯನ್ನ ಕಟ್ಟಿ ಹಾಕಿ ಜೆಸ್ಕಾಂ ಕಚೇರಿ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ. ನಸುಕಿನ ಜಾವ ವಿದ್ಯುತ್ ಮಾಡಿದ್ರೆ ಕತ್ತಲಲ್ಲಿ ರೈತರ ಜೀವಕ್ಕೆ ಏನಾದ್ರು ಆದ್ರೆ ಹೊಣೆ ಯಾರು ಅಂತ ಆರೋಪಿಸಿದ್ದಾರೆ. ಹೀಗಾಗಿ ಆರು ಗಂಟೆಯವರೆಗೆ ವಿದ್ಯುತ್ ನೀಡುವಂತೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ : ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಸಿ.ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ಕೇಸ್ ಪ್ರಕರಣವನ್ನು ಪರಿಷತ್ ನ ವಿಷಯ ನೀತಿ ನಿರೂಪಣಾ ಸಮಿತಿಗೆ ಕಳಿಸಲಾಗಿದೆ. ಇನ್ನು ಅಲ್ಲಿಂದ ಯಾವುದೇ ರಿಪೋರ್ಟ್ ಮಾಹಿತಿ ಬಂದಿಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಟಿಯಲ್ಲಿ ಎಲ್ಲಾ ಪಕ್ಷಗಳ 8 ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ಇರುತ್ತಾರೆ. ಕಮಿಟಿ ಶೀಘ್ರದಲ್ಲೇ ಮೀಟಿಂಗ್ ಕರೆಯುವ ನಿರೀಕ್ಷೆ ಎಂದರು. https://www.youtube.com/watch?v=p33MFLBmtXY ಏನೇಯಾಗಲಿ ಪ್ರಕರಣವನ್ನು ಬಗಹರಿಸುವ ಜವಾಬ್ದಾರಿ ನನ್ನ ಮೇಲಿದ್ದು, ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಇದೆ. ಮಾರ್ಚ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಪ್ರಕರಣದಲ್ಲಿ ಅತಿ ಹೆಚ್ಚು ಎಂದರೆ ಒಂದು ಅವಧಿಯ ಅಧಿವೇಶನದಿಂದ ಹೊರಹಾಕಬಹುದು. ಇತ್ತೀಚೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಎರಡು ಬಾರಿ ಕರೆ ಮಾಡಿದ್ದೆ. ಆದರೆ, ಅವರು ಫೋನ್ ರಿಸೀವ್ ಮಾಡಿಲ್ಲ ಎಂದು ಕರೆ ಮಾಡಿದ್ದನ್ನು ಮಾಧ್ಯಮಗಳಿಗೆ…
ಧಾರವಾಡ : ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ರೈತ ಗಂಭೀರ ಗಾಯಗೊಂಡಿರುವ ಘಟನೆ ಕಲಘಟಗಿ ತಾಲೂಕಿನ ಈಚನಹಳ್ಳಿ ತಾಂಡಾದಲ್ಲಿ ಭಾನುವಾರ ರವಿವಾರ ಮಧ್ಯಾಹ್ನ ಸಂಭವಿಸಿದೆ. ಈಚನಹಳ್ಳಿ ತಾಂಡಾದ ನಿವಾಸಿ ಮಾರುತಿ ರಾಮಪ್ಪ ರಾಠೋಡ (೫೬) ಎಂಬುವವರೇ ಕರಡಿ ದಾಳಿಗೆ ಒಳಗಾದವರು. ರೈತ ಮಾರುತಿ ಜಮೀನುಗಳಿಗೆ ಬಂದಿದ್ದ ಮಂಗಳನ್ನು ಓಡಿಸಲು ಮುಂದಾದಾಗ ಏಕಾಏಕಿ ಕರಡಿ ದಾಳಿ ನಡೆಸಿದೆ ಎನ್ನಲಾಗಿದೆ. https://www.youtube.com/watch?v=IKnpGlEhocg ರೈತ ಮಾರುತಿ ಅವರಿಗೆ ತಲೆ ಭಾಗಕ್ಕೆ ಗಂಬೀರ ಗಾಯವಾಗಿದೆ. ತಕ್ಷಣ ಅವರನ್ನು ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಸಾಗಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಚನಹಳ್ಳಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿದ್ದಾರೆ.
ಹೈದಾರಬಾದ್: ಮುತ್ತಿನನಗರಿಯಲ್ಲಿ ನಡೆದ ಸಮಾರಂಭದಲ್ಲಿ ಒಂದೇ ಕರ್ನಾಟಕ ಪತ್ರಿಕೆ ಪ್ರಧಾನ ಸಂಪಾದಕರಾದ ಲಿಂಗಯ್ಯ ಬಿ.ಕಾಡದೇವರಮಠ ಅವರಿಗೆ ‘ಪವರ್ ಎಂಟರ್ಪ್ರನೂನರ್ ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು. https://youtu.be/Ke0zLG4tCkA?si=DHUgWGf2kJ2j6Mq- ಕೋಟಕ್ ಲೈಫ್ ಸಮೂಹದ ಪದಾಧಿಕಾರಿಗಳಾದ ದ್ಯಾಲಂಮುತ್ತುಸ್ವಾಮಿ ವೆಂಕಟರಾಮ ಕುಮಾರ್ ಹಾಗೂ ಜಯಪ್ರಕಾಶ್ ರೆಡ್ಡಿ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದು, https://ainlivenews.com/if-you-have-these-problems-do-not-drink-turmeric-milk/ ಅದಲ್ಲದೆ ಉದ್ಯಮಿ ಹಾಗೂ ಪತ್ರಿಕೋದ್ಯಮಿ ಲಿಂಗಯ್ಯ ಬಿ.ಕಾಡದೇವರಮಠ ಅವರ ತಂಡದ ಸದಸ್ಯರಾದ ಎಂ.ಗುರುಬಸಯ್ಯ ಕಾಡದೇವರಮಠ ಹಾಗೂ ಶಂಭು ನಾಗಠಾಣ ಅವರಿಗೆ ಮುತ್ತಿನಗರಿ ಕೋಟಕ್ ಲೈಫ್ ಸಮೂಹದಿಂದ ಬ್ಲೂಕ್ಲಬ್ ಸದಸ್ಯತ್ವ ಲಭಿಸಿದೆ.
ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ರಾಮಲೀಲಾ ಮೈದಾನದಲ್ಲಿಂದು ನಡೆದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಇತರ ಕೇಂದ್ರ ಸಚಿವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ.ಕೆ ಸಕ್ಸೆನಾ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಚಿವರಾಗಿ ಪರ್ವೇಶ್ ಸಾಹಿಬ್ ಸಿಂಗ್, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. https://ainlivenews.com/if-you-have-these-problems-do-not-drink-turmeric-milk/ ಸಮಾರಂಭದಲ್ಲಿ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಚಂದ್ರಬಾಬು ನಾಯ್ಡು ಸೇರಿದಂತೆ ಎನ್‌ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಯಿತು.