Author: Author AIN

ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದ ನಟ ನಂದಮೂರಿ ಬಾಲಕೃಷ್ಣ ಮತ್ತೆ ಮತ್ತೆ ಸದ್ಯ ಸುದ್ದಿಯಲ್ಲಿದ್ದಾರೆ. ಅವರು ನಟಿ ಅಂಜಲಿ ಅವರನ್ನು ವೇದಿಕೆಯ ಮೇಲೆ ತಳ್ಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಾಲಕೃಷ್ಣ ಅವರಿದ್ದ ವೇದಿಕೆ ಮೇಲೆ ಮದ್ಯ ಇದೆ ಎಂದು ಹೇಳಲಾದ ಬಾಟಲಿ ಕಾಣಿಸಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಮಧ್ಯೆ ಬಾಲಯ್ಯ ಅಳಿಯ ಶ್ರೀಭರತ್ ನೀಡಿದ ಹೇಳಿಕೆಯೊಂದು ವೈರಲ್ ಆಗಿದೆ. ಬಾಲಯ್ಯ ಅವರ ಅಳಿಯ ಶ್ರೀಭರತ್ ನೀಡಿದ ಹೇಳಿಕೆ ಈಗ ವೈರಲ್ ಆಗುತ್ತಿದೆ. ಸ್ಟ್ರೀಟ್ ಬೈಟ್ ಹೆಸರಿನ ಫುಡ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಶ್ರೀಭರತ್ ಮಾತನಾಡಿದ್ದು, ‘ನನ್ನ ಮಾವ ಕುಡಿಯೋ ಮದ್ಯದ ಹೆಸರು ಹೇಳಿದರೆ ಅದರ ಸ್ಟಾಕ್ ಬೆಲೆ ಏರಿಕೆ ಆಗುತ್ತದೆ’ ಎಂದಿದ್ದು, ಬಾಲಯ್ಯ ಯಾವ ಬ್ರ್ಯಾಂಡ್ ನ ಮಧ್ಯ ಸೇವಿಸುತ್ತಾರೆ ಎಂದು ಹೇಳಿದ್ದರು. ‘ನನ್ನ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್​ನ ಕುಡಿಯುತ್ತಾರೆ. ಅವರು ಬಿಸಿ ನೀರಿಗೆ ಮದ್ಯ ಸೇವಿಸಿ ಕುಡಿಯುತ್ತಾರೆ’ ಎಂದಿದ್ದರು ಶ್ರೀಭರತ್. ‘ನನ್ನ…

Read More

ಇಸ್ರೇಲ್ ನಿಂದ ಫೆಲೆಸ್ತೀನ್, ಗಾಝಾಪಟ್ಟಿಯ ಮೇಲೆ ನಡೆಯುತ್ತಿರುವ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ಮಾಲ್ದೀವ್ಸ್, ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರು ಮಾಲ್ದೀವ್ಸ್ ಪ್ರವೇಶಿಸುವುದಕ್ಕೆ ನಿಷೇಧ ಹೇರಿದೆ ಎಂದು ವರದಿಯಾಗಿದೆ. ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಅವರು ಕ್ಯಾಬಿನೆಟ್ ಸಭೆಯಲ್ಲಿ ಈ ನಿಷೇಧವನ್ನು ಜಾರಿಗೊಳಿಸಲು ಅಗತ್ಯವಾದ ಕಾನೂನು ಬದಲಾವಣೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ತಂತ್ರಜ್ಞಾನದ ಸಚಿವ ಅಲಿ ಇಹುಸನ್ ಹೇಳಿದ್ದಾರೆ. ಈ ನಿರ್ಧಾರವನ್ನು ಜಾರಿಗೆ ತರಲು ವಿಶೇಷ ಸಚಿವ ಸಂಪುಟ ಸಮಿತಿಯನ್ನು ರಚಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ, ಮಾಲ್ದೀವ್ಸ್ ಅಧ್ಯಕ್ಷರ ಕಚೇರಿಯು, “ಅಧ್ಯಕ್ಷ ಡಾ ಮುಹಮ್ಮದ್ ಮುಯಿಝ್ಝ, ಕ್ಯಾಬಿನೆಟ್ ಶಿಫಾರಸಿನ ನಂತರ, ಇಸ್ರೇಲಿ ಪಾಸ್ಪೋರ್ಟ್ ಗಳ ಮೇಲೆ ನಿಷೇಧವನ್ನು ಹೇರಲು ನಿರ್ಧರಿಸಿದ್ದಾರೆ. ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರು ಮಾಲ್ದೀವ್ಸ್‌ಗೆ ಪ್ರವೇಶಿಸುವುದನ್ನು ತಡೆಯಲು ಅಗತ್ಯ ಕಾನೂನುಳಿಗೆ ತಿದ್ದುಪಡಿ ಮಾಡಲಾಗುವುದು. ಇದರ ಮೇಲ್ವಿಚಾರಣೆಗಾಗಿ ಕ್ಯಾಬಿನೆಟ್ ಉಪಸಮಿತಿಯನ್ನು ಸ್ಥಾಪಿಸಲಾಗುವುದು”, ಎಂದು ತಿಳಿಸಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್‌ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಫೆಲೆಸ್ತೀನ್…

Read More

ಐಸ್‍ಲ್ಯಾಂಡ್‍ ನ ಅಧ್ಯಕ್ಷೀಯ ಚುನಾವಣೆಯಲ್ಲಿ ಉದ್ಯಮಿ ಹಾಗೂ ಬಿ ಟೀಮ್ ನ ಸಿಇಒ ಹಲ್ಲಾ ತೋಮಸ್ಡೊಟ್ಟಿರ್ ಗೆಲುವು ಸಾಧಿಸಿರುವುದಾಗಿ ಘೋಷಿಸಲಾಗಿದೆ. ಈ ಮೂಲಕ ಆಗಸ್ಟ್ 1ರಿಂದ ಏಳನೇ ಅಧ್ಯಕ್ಷರಾಗಿ ಹಲ್ಲಾ ಅಧಿಕಾರ ಸ್ವೀಕರಿಸಲಿದ್ದಾರೆ. 1980 ರಲ್ಲಿ ಪ್ರಜಾಸತ್ತಾತ್ಮಕವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವದ ಮೊದಲ ಮಹಿಳೆ ವಿಗ್ಡಿಸ್ ಫಿನ್ಫೋಗಡೋಟ್ಟಿರ್ ನಂತರ ತೋಮಸ್ದೊಟ್ಟಿರ್ ಅವರು ಕಚೇರಿಯನ್ನು ಹಿಡಿದ ಎರಡನೇ ಮಹಿಳೆಯಾಗಿದ್ದಾರೆ. ನಿಕಟ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಪ್ರಧಾನಿ ಕ್ಯಾಥ್ರಿನ್ ಜಾಕೊಬ್ಸ್‍ಡೊಟಿರ್ ಸೋಲೊಪ್ಪಿಕೊಂಡಿದ್ದಾರೆ. 55 ವರ್ಷದ ಹಲ್ಲಾ ತೋಮಸ್ಡೊಟ್ಟಿರ್ 34.3% ಮತ ಗಳಿಸಿದರೆ, ಕ್ಯಾಥ್ರಿನ್ ಜಾಕೊಬ್ಸ್‍ಡೊಟಿರ್ 25.5% ಮತ ಪಡೆದಿದ್ದಾರೆ.  ಡೈರೆಕ್ಟರ್ ಜನರಲ್ ಹಲ್ಲಾ ಹ್ರುಂಡ್ ಲೋಗಾಡೋಟ್ಟಿರ್ 15.1 ಪ್ರತಿಶತದೊಂದಿಗೆ ನಂತರದಲ್ಲಿ ಹಾಸ್ಯನಟ ಜಾನ್ ಗ್ನಾರ್ ಐದನೇ ಮತ್ತು ಪ್ರೊಫೆಸರ್ ಬಲ್ದುರ್ ಥೋರ್ಹಾಲ್ಸನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. “ನಾನು ಅವಳನ್ನು ಅಭಿನಂದಿಸಲು ಬಯಸುತ್ತೇನೆ ಮತ್ತು ಅವರು ಉತ್ತಮ ಅಧ್ಯಕ್ಷರಾಗುತ್ತಾರೆ ಎಂದು ನನಗೆ ತಿಳಿದಿದೆ” ಎಂದು ಹಲ್ಲಾ ತೋಮಸ್ಡೋಟ್ಟಿರ್ ಅವರ ಗೆಲುವು ಸ್ಪಷ್ಟವಾಗುತ್ತಿರುವಾಗ ಕ್ಯಾಥ್ರಿನ್ ಜಾಕೊಬ್ಸ್‍ಡೊಟಿರ್ ಹೇಳಿದ್ದಾರೆ.

Read More

ಬಾಲಿವುಡ್ ನಟ ಸುಶಾಂತ್​ ಸಿಂಗ್​ ರಜಪೂತ್​ ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮುಂಬೈನ ಅಪಾರ್ಟ್​ಮೆಂಟ್ ಅನ್ನು ಇತ್ತೀಚೆಗೆ ನಟಿ ಅದಾ ಶರ್ಮಾ ಖರೀದಿ ಮಾಡಿದ್ದಾರೆ. ಇದೀಗ ನಟಿ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಿದ್ದು ಅಲ್ಲಿಯೇ ವಾಸಿಸುತ್ತಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಇದ್ದ ಮನೆಯಲ್ಲಿ ವಾಸಾವಾಗಿರುವ ನಟಿ ಅದಾ ಶರ್ಮಾ ಅಲ್ಲಿನ ವಾತಾವರಣ ಹೇಗಿದೆ ಎಂಬುದನ್ನು  ವಿವರಿಸಿದ್ದಾರೆ. ಈ ಮನೆಯನ್ನು ಖರೀದಿಸುವುದು ಬೇಡ ಎಂದು ಅವರಿಗೆ ಕೆಲವರು ಹೇಳಿದ್ದರಂತೆ. ಆದರೆ ಅಂಥವರ ಮಾತುಗಳಿಗೆ ಅದಾ ಶರ್ಮಾ ಕಿವಿ ಕೊಟ್ಟಿಲ್ಲ. ತಮಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ. ‘ನಾಲ್ಕು ತಿಂಗಳಿಂದ ಬ್ಯುಸಿ ಇದ್ದೆ. ಆ ಮನೆಗೆ ಹೋಗಿ ಸೆಟ್ಲ್​ ಆಗಲು ಈಗತಾನೇ ಸಮಯ ಸಿಕ್ಕಿದೆ’ ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಇಷ್ಟು ದಿನಗಳವರೆಗೆ ನಾನು ಬಾಂದ್ರದ ಪಾಲಿ ಹಿಲ್​ ನಲ್ಲಿರುವ ಮನೆಯಲ್ಲಿ ವಾಸವಾಗಿದ್ದೆ. ಇದೇ ಮೊದಲ ಬಾರಿಗೆ ನಾನು ಆ ಜಾಗದಿಂದ ಹೊರಬಂದಿದ್ದು. ಸ್ಥಳಗಳ ವೈಬ್​ ಬಗ್ಗೆ ನಾನು ಹೆಚ್ಚು…

Read More

ಸೂತ್ರಧಾರಂ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬಳಿಕ ಬಹುಭಾಷಾ ನಟಿಯಾಗಿ ಮಿಂಚಿದ್ದ ನಟಿ ಮೀರಾ ಜಾಸ್ಮಿನ್ ಮದುವೆಯಾದ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದರು. ಆದರೆ ಈಕೆಯ ವೈವಾಹಿಕ ಜೀವನಕ್ಕೆ ಸರಿ ಇಲ್ಲ ಎಂದು ಸಾಕಷ್ಟು ವರದಿಗಳು ಬಿತ್ತರವಾಗಿದ್ದವು. ಇದೀಗ ಸುಮಾರು 10 ವರ್ಷಗಳ ಬಳಿಕ ಗಟ್ಟಿ ಪಾತ್ರದೊಂದಿಗೆ ನಟಿ ಟಾಲಿವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ. ಮಲಯಾಳಂ, ತಮಿಳು, ತೆಲುಗು, ಕನ್ನಡ ಅಂತ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ಮೀರಾ ಜಾಸ್ಮಿನ್ 2014ರಲ್ಲಿ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿದ್ದರು. ಅನಿಲ್ ಜಾನ್ ಎಂಬುವವರನ್ನು ಮದುವೆ ಆಗಿ ದುಬೈ ಸೇರಿದ್ದರು. ಅಲ್ಲಿಂದ ಕೆಲವು ವರ್ಷಗಳ ಕಾಲ ಮೀರಾ ಜಾಸ್ಮಿನ್ ಸಿನಿಮಾದಿಂದ ದೂರವೇ ಇದ್ದರು. ಮಲಯಾಳಂನಲ್ಲಿ ಆಗೊಂದು ಈಗೊಂದು ಸಿನಿಮಾ ಮಾಡಿದ್ದರಷ್ಟೇ. ಆದರೆ, ಇದೀಗ 10 ವರ್ಷಗಳ ಬಳಿಕ ಟಾಲಿವುಡ್‌ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ತೆಲುಗಿನ ಹೀರೋ ಶ್ರೀವಿಷ್ಣು ಜೊತೆ ಮೀರಾ ಎಂಟ್ರಿ ಕೊಟ್ಟಿದ್ದಾರೆ. ‘ಸ್ವಾಗ್’ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ರಾಣಿ ಉತ್ಪಲಾ…

Read More

ಸಂಗೀತ ಮಾಂತ್ರಿಕ ಇಳಯರಾಜ ಅವರು ಜೂನ್ 2ರಂದು ತಮ್ಮ 81ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಳಯರಾಜ ಅವರ ಜೀವನದ ಕಥೆಯನ್ನು ತೆರೆ ಮೇಲೆ ತರಲು ನಿರ್ದೇಶಕರು ಮುಂದಾಗಿದ್ದಾರೆ. ಇಳಯರಾಜ ಅವರ ಪಾತ್ರದಲ್ಲಿ ನಟ ಧನುಷ್ ಕಾಣಿಸಿಕೊಳ್ತಿದ್ದಾರೆ. ಬರ್ತಡೇ ಹಿನ್ನೆಲೆಯಲ್ಲಿ ಧನುಷ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಸಂಗೀತ ಮಾಂತ್ರಿಕ ಇಳಯರಾಜಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಕಾಲಿವುಡ್ ನಟ ಧನುಷ್ ಅವರು ಇಳಯರಾಜ ಅವರ ಬಯೋಪಿಕ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಳಯರಾಜ್ ಬರ್ತಡೇಗೆ ಧನುಷ್ & ಚಿತ್ರತಂಡ ವಿಶೇಷವಾಗಿ ಶುಭಕೋರಿದೆ. ಸಾವಿರಾರು ಜನರ ಮುಂದೆ ಹಾರ್ಮೋನಿಯಂ ಹಿಡಿದು ವೇದಿಕೆಯಲ್ಲಿ ನಿಂತಿರುವ ಪೋಸ್ಟರ್ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಒನ್ ಅಂಡ್ ಓನ್ಲೀ ಇಳಯರಾಜ ಸಾರ್ ಎಂದು ಧನುಷ್ ಬರೆದುಕೊಂಡಿದ್ದಾರೆ. ಇಳಯರಾಜ ಬರೋಪಿಕ್‌ನಲ್ಲಿ ಧನುಷ್ ನಟಿಸೋದು ಅಧಿಕೃತವಾಗಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ. ಈ ಸಿನಿಮಾ ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ…

Read More

ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಕೆಲಸಗಳಿಂದ ದೂರವಿರುವ ನಟಿ ಇದೀಗ ಕುಟುಂಬದವರ ಜೊತೆ ಡಿನ್ನರ್ ಡೇಟ್ ಮಾಡುತ್ತಿದ್ದಾರೆ. ತಾಯಿಯೊಂದಿಗೆ ದೀಪಿಕಾ ರೆಸ್ಟೋರೆಂಟ್ ಒಂದಕ್ಕೆ ತೆರಳಿ ಊಟ ಸವಿದಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ಫ್ಯಾಮಿಲಿ ಜೊತೆ ದೀಪಿಕಾ ಪಡುಕೋಣೆ ಊಟ ಸವಿದಿದ್ದಾರೆ. ಅಲ್ಲಿನ ಸ್ಟಾಪ್ ಜೊತೆ ಫೋಟೋಗೆ ನಟಿ ಪೋಸ್ ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್‌ನಿಂದ ಹೊರಬರುವಾಗ ನಟಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಬೇಬಿ ಬಂಪ್ ಕಾಣದಿರಲಿ ಎಂಬ ಕಾರಣಕ್ಕೆ ಲೂಸ್ ಆಗಿರುವ ಕಲರ್‌ಫುಲ್ ಡ್ರೆಸ್‌ ತೊಟ್ಟಿದ್ದರು. ಇನ್ನೂ ಸಿನಿಮಾಗಳ ವಿಷಯಕ್ಕೆ ಬಂದರೆ ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ  ಕೆಲಸಗಳನ್ನು ನಟಿ ಮುಗಿಸಿಕೊಟ್ಟಿದ್ದು ಸದ್ಯ ಕುಟುಂಬ ಸದಸ್ಯರ ಜೊತೆ ಎಂಜಾಯ್ ಮಾಡ್ತಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾದ ತಮ್ಮ ಪಾತ್ರಕ್ಕೆ ಹಿಂದಿ ಮತ್ತು ಕನ್ನಡದಲ್ಲಿ ಸ್ವತಃ…

Read More

ನಟಿ ಕಾಜಲ್ ಅಗರ್ವಾಲ್ ಉತ್ತರ ಭಾರತವಾದರೂ ನಟಿಯಾಗಿ ಗುರುತಿಸಿಕೊಂಡಿದ್ದು ದಕ್ಷಿಣ ಭಾರತದಲ್ಲಿ. 2007ರಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್ ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ ಮದುವೆಯಾದ ನಟಿಯರಿಗೆ ದಕ್ಷಿಣ ಚಿತ್ರರಂಗಕ್ಕಿಂತ ಬಾಲಿವುಡ್ ಬೆಸ್ಟ್ ಎಂದಿದ್ದಾರೆ. 2 ವರ್ಷಗಳ ಹಿಂದೆ ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಬಳಿಕ ಚೊಚ್ಚಲ ಮಗುವನ್ನು ಕೂಡ ಬರಮಾಡಿಕೊಂಡರು. ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ನಟಿಗೆ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿಲ್ಲವಂತೆ. ಬರೀ ಮಹಿಳಾ ಪ್ರಧಾನ, ಪತ್ತೆಧಾರಿ ಕಥೆಗಳು ಅವರನ್ನು ಅರಸಿ ಬರುತ್ತಿವೆಯಂತೆ. ಹಾಗಾಗಿ ಈ ಬಗ್ಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ. ಬಾಲಿವುಡ್​ನಲ್ಲಿ ಮದುವೆಯಾದ ನಟಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ದೀಪಿಕಾ ಪಡುಕೋಣೆಗೆ ‘ಫೈಟರ್’ ಅಂಥಹಾ ಆಕ್ಷನ್-ರೊಮ್ಯಾಂಟಿಕ್ ಪಾತ್ರ ಸಿಗುತ್ತದೆ. ಆಲಿಯಾ ಭಟ್​ಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಅಂಥಹಾ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿವೆ. ಆದರೆ ದಕ್ಷಿಣ…

Read More

2010ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ನಟನೆಯ ದಬಾಂಗ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸೋನಾಕ್ಷಿ ಸಿನ್ಹಾ. ಮೊದಲ ಚಿತ್ರದಲ್ಲಿ ಸೂಪರ್ ಸ್ಟಾರ್ ಗೆ ನಾಯಕಿಯಾದ ನಟಿ ಅಷ್ಟೇ ಬೇಗನೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಸದ್ಯ ಸೋನಾಕ್ಷಿ ಹೀರಾಮಂಡಿ ಸೀರಿಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಅದ್ಭುತ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಈ ಮಧ್ಯೆ 90 ಕೆಜಿ ಇದ್ದ ಸೋನಾಕ್ಷಿ 30 ಕೆಜಿ ತೂಕ ಇಳಿಸಿಕೊಂಡು 60 ಕೆಜಿ ಆಗಿದ್ದು ಹೇಗೆ ಎಂಬ ಪ್ರಶ್ನೆ ಶುರುವಾಗಿದ್ದು ಅದಕ್ಕೆ ನಟಿ ಉತ್ತರಿಸಿದ್ದಾರೆ. ಇದೀಗ ನಟಿ ಸೋನಾಕ್ಷಿ ಸಿನ್ಹಾ ಸಖತ್ ಫಿಟ್ ಆಗಿದ್ದಾರೆ. ಆದ್ರೆ ಕೆಲ ವರ್ಷಗಳ ಹಿಂದೆ ಸೋನಾಕ್ಷಿ ಸಿನ್ಹಾ ತೂಕ 90 ಕೆಜಿ ಇತ್ತು. ನಟಿ ಸೋನಾಕ್ಷಿ ತನ್ನ ತೂಕದಿಂದಲೂ ಅಪಹಾಸ್ಯಕ್ಕಿಡಾಗಿದ್ರು. ಜೊತೆಗೆ ಸಾಕಷ್ಟು ಸಿನಿಮಾಗಳ ಆಫರ್ ಗಳನ್ನು ಕಳೆದುಕೊಂಡಿದ್ದರು. ಅದನ್ನೇ ಸಾವಾಲಾಗಿ ಸ್ವೀಕರಿಸಿದ ನಟಿ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡರು. ಯಾವುದೇ ಡಯೆಟ್ ಹಾಗೂ ಅತಿಯಾದ ಜಿಮ್ ವರ್ಕೌಟ್…

Read More

ದೇಶಾದ್ಯಂತ ತಾಪಮಾನ ವಿಪರೀತಿ ಹೆಚ್ಚುತ್ತಿದೆ. ಇದರಿಂದ ಪರಿಹಾರ ಕಂಡು ಕೊಳ್ಳಲು ಜನ ಹಣ್ಣಿನ ರಸ ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವುಗಳನ್ನು ಕಂಟ್ರೋಲ್ ಮಾಡುವಂತೆ ಐಸಿಎಂಆರ್ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಕ್ಕರೆ ರಸಗಳು ಮತ್ತು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ, ಐಸಿಎಂಆರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ಸಹಯೋಗದೊಂದಿಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು 17 ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕಬ್ಬಿನ ರಸದಲ್ಲಿ ಸಕ್ಕರೆ ಅಂಶವು ಹೆಚ್ಚಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾದಷ್ಟು ಕಡಿಮೆ ತೆಗೆದುಕೊಳ್ಳಬೇಕು ಎಂದು ಐಸಿಎಂಆರ್ ಹೇಳಿದೆ. ಅಷ್ಟೇ ಅಲ್ಲ, ಆರೋಗ್ಯಕ್ಕೆ ಹಾನಿಕಾರಕವಾದ ತಂಪು ಪಾನೀಯಗಳು, ಸಕ್ಕರೆ ಸೇರಿಸಿದ ಹಣ್ಣಿನ ರಸಗಳು, ಚಹಾ ಮತ್ತು ಕಾಫಿಯಿಂದ ದೂರವಿರಲು ಸೂಚಿಸಲಾಗಿದೆ. ಹಣ್ಣುಗಳ ಜೊತೆಗೆ ಆರೋಗ್ಯಕರ ಪರ್ಯಾಯಗಳನ್ನು ಶಿಫಾರಸು ಮಾಡಲಾಗಿದೆ. ಇದು ಸಮತೋಲಿತ ಆಹಾರ ಮತ್ತು ಉತ್ತಮ ಆಹಾರ ಪದ್ಧತಿಯನ್ನು ಒಳಗೊಂಡ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಐಸಿಎಂಆರ್ ತನ್ನ…

Read More