Author: Author AIN

ಟೀಚೀಂಗ್ ಫಿಲ್ಡ್ ನಲ್ಲಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಶೀಘ್ರದಲ್ಲಿಯೇ ಈ ಕುರಿತಾದ ಅಧಿಸೂಚನೆ ಹೊರ ಬೀಳಲಿದೆ. ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಜೂನ್‌ 3ರಂದು ಪ್ರಕಟಣೆ ಹೊರಡಿಸಿದೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನೇಕ ಬೋಧಕ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ, ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ-ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಟ್ಟು 35 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅತಿಥಿ ಶಿಕ್ಷಕರ ಹಾಜರಾತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 10 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.…

Read More

ದಕ್ಷಿಣ ಭಾರತದ ಖ್ಯಾತಿ ನಟಿ ಕಾಜಲ್ ಅಗರ್ವಾಲ್ ಚಿತ್ರರಂಗದಲ್ಲಿ ಸಾಕಷ್ಟು ಭೇಡಿಕೆ ಕಾಯ್ದುಕೊಂಡಿದ್ದಾರೆ. ಮದುವೆಯಾಗಿ ಮಗುವಾದ ಬಳಿಕವೂ ನಟಿಗೆ ಕೊಂಚವೂ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಮಗುವಾದ ಬಳಿಕ ಕೊಂಚ ದಿನಗಳ ಕಾಲ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದ ನಟಿ ಇದೀಗ ಮತ್ತೆ ಫೀಲ್ಡ್ ಗೆ ಎಂಟ್ರಿಕೊಟ್ಟಿದ್ದಾರೆ. ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗೆ ನಟಿ ಬಣ್ಣ ಹಚ್ಚುತ್ತಿದ್ದಾರೆ. ಸಾಮಾನ್ಯವಾಗಿ ಮದುವೆಯ ಬಳಿಕ ಮಗು ಪಡೆಯಲು ನಟಿಯರು ಕೆಲ ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಕಾಜೋಲ್ ಮದುವೆಯಾದ ಒಂದು ವರ್ಷದೊಳಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಕೆಲ ದಿನಗಳಲ್ಲಿಯೇ ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದರು. ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ಕಾಜಲ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗಿ ತಮ್ಮ ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಅಮ್ಮನಾದರೂ ನಟಿಯ ಸೌಂದರ್ಯ ಕೊಂಚವೂ ಮಾಸದ್ದು ನೋಡಿ ಅಭೀಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಕೆಲವರು ನಿಮಗೆ 38 ವರ್ಷ…

Read More

ಕಳೆದ ಆಗಸ್ಟ್​ನಲ್ಲಿ ನಡೆದ ಸಾಗರೋತ್ತರ ನರ್ಸ್ ​​ಗಳ ಉದ್ಯೋಗ ಮೇಳದಲ್ಲಿ ಮೇಘಾಲಯ 27 ನರ್ಸ್​ಗಳು ಜಪಾನ್​ನಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಂಡಿದ್ದಾರೆ. ಈ 27 ನರ್ಸ್​​ಗಳು ಇದೀಗ ಜಪಾನಿ ಭಾಷೆಯ ತರಬೇತಿ ಕಲಿಕೆ ಪೂರ್ಣಗೊಳಿಸಿದ್ದು, ಇದೀಗ ದೂರದ ದೇಶದಲ್ಲಿ ವೃತ್ತಿಜೀವನದ ಪ್ರಯಾಣ ಆರಂಭಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ತಮ್ಮ ಹೊಸ ಭಾಷಾ ಕೌಶಲ್ಯದೊಂದಿಗೆ ಇದೀಗ ಈ ನರ್ಸ್​​ಗಳ ಜಪಾನ್​ ವಿವಿಧ ಆಸ್ಪತ್ರೆ ಮತ್ತು ಕೇರ್​ ಹೋಮ್​ಗಳಲ್ಲಿ ನೇಮಿಸಲಾಗುವುದು ಎಂದು ಮೇಘಾಲಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ 14 ನರ್ಸ್​​ಗಳು ಸಿಂಗಾಪೂರ್​ ನ ಹಲವಾರು ಸಂಸ್ಥೆಗಳಿಗೆ ನೇಮಿಸಲಾಗಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ 50 ಸಾವಿರ ಅಭ್ಯರ್ಥಿಗಳಿಗೆ ಮೇಘಾಲಯ ರಾಜ್ಯ ಕೌಶಲ್ಯ ಅಭಿವೃದ್ಧಿ ಸೊಸೈಟಿ ಅಡಿ ಕೌಶಲ್ಯ ಮೇಘಾಲಯ ಯೋಜನೆ ಭಾಗವಾಗಿ ತರಬೇತಿ ಅವಕಾಶವನ್ನು ಒದಗಿಸುತ್ತಿದೆ. ಮುಂದಿನ ವರ್ಷದಲ್ಲಿ 300 ನರ್ಸ್​​ಗಳನ್ನು ಈ ಯೋಜನೆಯ ಭಾಗವಾಗಿಸುವ ಗುರಿ ಹೊಂದಲಾಗಿದೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ, ಈ ಉಪಕ್ರಮದಲ್ಲಿ ಭಾಗಿಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು…

Read More

2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಗಾಜಾ ಪಟ್ಟಿಗೆ ಅಪಹರಿಸಿಕೊಂಡು ಹೋಗಿದ್ದ ಒತ್ತೆಯಾಳುಗಳ ಪೈಕಿ ಮತ್ತೆ ನಾಲ್ಕು ಜನ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ದೃಢಪಡಿಸಿವೆ. ಗಾಜಾದಲ್ಲಿ ಆಡಳಿತ ನಡೆಸುತ್ತಿದ್ದ ಗುಂಪುಗಳ ಬಳಿ ಈ ಮೃತರ ಶವಗಳಿವೆ ಎಂದು ತಿಳಿಸಿದೆ. ಮೃತಪಟ್ಟ ನಾಲ್ವರನ್ನು ಅಮಿರಾಮ್ ಕೂಪರ್, ಚೈಮ್ ಪೆರಿ, ಯೊರಾಮ್ ಮೆಟ್ಜರ್ ಮತ್ತು ನಾಡವ್ ಪಾಪ್ಲೆವೆಲ್ ಎಂದು ಗುರುತಿಸಲಾಗಿದೆ. 80ರ ಹರೆಯದ ಕೂಪರ್, ಪೆರಿ ಮತ್ತು ಮೆಟ್ಜರ್ ಗಾಜಾ ಪಟ್ಟಿಯ ಗಡಿಯ ಬಳಿಯ ನಿರ್ ಓಜ್ ನಿವಾಸಿಗಳಾಗಿದ್ದು, ಡಿಸೆಂಬರ್​ನಲ್ಲಿ ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಜೀವಂತವಾಗಿ ಕಾಣಿಸಿಕೊಂಡಿದ್ದರು. 51 ವರ್ಷದ ಪಾಪ್ಲೆವೆಲ್ ನಿರ್ ಓಜ್ ಬಳಿಯ ನಿರಿಮ್ ಗ್ರಾಮದವರು. ಮೇ ಆರಂಭದಲ್ಲಿ ಹಮಾಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅವರು ಕೊನೆಯ ಬಾರಿಗೆ ಜೀವಂತವಾಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಐಡಿಎಫ್ ವಕ್ತಾರ ಡೇನಿಯಲ್ ಹಗರಿ, “ಹಲವಾರು ತಿಂಗಳ ಹಿಂದೆ ಖಾನ್ ಯೂನಿಸ್ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ಸಂಘರ್ಷ ನಡೆಸುತ್ತಿರುವ…

Read More

ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ತುದಿಗಾಲಲ್ಲಿ ನಿಂತಿರ್ತಾರೆ. ಆದರೆ ಅವರನ್ನೆಲ್ಲರನ್ನು ಭೇಟಿ ಮಾಡಲು ಸ್ಟಾರ್ ನಟರಿಗೆ ಸಾಧ್ಯವಾಗೋದಿಲ್ಲ. ಆದರು ಕೆಲವೊಮ್ಮೆ ಬಿಡುವು ಮಾಡಿಕೊಂಡು ಅಭಿಮಾನಿಗಳು ಭೇಟಿ ಮಾಡಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಅಂತೆಯೇ ಇತ್ತೀಚೆಗೆ ಸುದೀಪ್ ಅವರನ್ನು ವಿಶೇಷ ಅಭಿಮಾನಿಯೊಬ್ಬರು ಭೇಟಿ ಮಾಡಿದ್ದು ಅಭಿಮಾನಿಗೆ ಸುದೀಪ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಮಾತು ಬಾರದ ವಿಶೇಷಚೇತನ ಅಭಿಮಾನಿ ಇತ್ತೀಚೆಗೆ ಸುದೀಪ್ ಅವರನ್ನು ಭೇಟಿ ಮಾಡಿದ್ದಾನೆ. ಕಿಚ್ಚನಿಗೆ ಏನು ಹೇಳಬೇಕು ಅದನ್ನ ಬರವಣಿಗೆಯಲ್ಲಿ ಬರೆದು ತಂದಿದ್ದಾನೆ. ಅಭಿಮಾನಿ ಬರೆದುಕೊಂಡು ಬಂದಿದ್ದ ಪತ್ರವನ್ನ ಸುದೀಪ್ ತಾಳ್ಮೆಯಿಂದ ಓದಿದ್ದಾರೆ. ನಂತರ ನನ್ನಿಂದ ಏನಾಗ್ಬೇಕು ಅಂತ ಸುದೀಪ್ ಸನ್ನೆಯಿಂದಲೇ ಕೇಳಿದ್ದಾರೆ. ಅದಕ್ಕೆ ಅಭಿಮಾನಿ ಕೂಡಾ ಪ್ರತಿಕ್ರಿಯಿಸಿದ್ದಾನೆ. ಬಳಿಕ ಸುದೀಪ್ ವಿಶೇಷಚೇತನ ಅಭಿಮಾನಿಗೆ ಸಹಾಯವನ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಊಟ ಆಯ್ತಾ ಅಂತಾ ಸುದೀಪ್ ಸನ್ನೆ ಮೂಲಕ ಕೇಳಿದ್ದಾರೆ, ಇಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾನೆ. ಸರಿ ಇಲ್ಲೆ ಊಟ ಮಾಡಿ ಹೋಗಿ ಎಂದು ಸುದೀಪ್ ಅಭಿಮಾನಿಗೆ ಊಟ…

Read More

ತಮಿಳು ನಟ ಹಾಗೂ ಮಾಜಿ ಶಾಸಕ ಕರುಣಾಸ್ ಅವರ ಬ್ಯಾಗ್ ನಲ್ಲಿ ಸುಮಾರು 40 ಜೀವಂತ ಗುಂಡುಗಳು ಪತ್ತೆಯಾಗಿವೆ. ಚೆನ್ನೈ ಏರ್‌ಪೋರ್ಟ್‌ನಲ್ಲಿ 40 ಜೀವಂತ ಗುಂಡುಗಳ ಸಮೇತ ಕರುಣಾಸ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.  ಜೂನ್ 2ರಂದು ಬೆಳಗ್ಗೆ ತಿರುಚ್ಚಿಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಶಾಸಕ ಕರುಣಾಸ್‌ರನ್ನು ಭದ್ರತಾ ಪಡೆಗಳು ತಪಾಸಣೆ ನಡೆಸಿದಾಗ ಅವರ ಬ್ಯಾಗ್‌ನಲ್ಲಿ 40 ಬುಲೆಟ್‌ಗಳು ಪತ್ತೆಯಾಗಿವೆ. ಈ ಕಾರಣಕ್ಕಾಗಿ ಅವರ ಪ್ರಯಾಣ ರದ್ದು ಮಾಡಿ ಕರುಣಾಸ್‌ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯ ವೇಳೆ ಮಿಸ್ ಆಗಿ ಬುಲೆಟ್ ಇರುವ ಬ್ಯಾಗ್ ಅನ್ನು ಕರುಣಾಸ್ ತಂದಿರೋದು ತಿಳಿದು ಬಂದಿದೆ. ತಮ್ಮ ರಕ್ಷಣೆಗಾಗಿ ಲೈಸೆನ್ಸ್ ಸಹಿತ ಮಾರಕಾಸ್ತ್ರ ಹೊಂದಿರುದಾಗಿ ವಿಚಾರಣೆ ವೇಳೆ ನಟ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ತಮ್ಮ ಬಂದೂಕನ್ನು ಪೊಲೀಸ್ ಠಾಣೆಗೆ ನಟ ಒಪ್ಪಿಸಿದ್ದಾರೆ.

Read More

ಬಾಲಿವುಡ್ ಬ್ಯೂಟಿ ನಟಿ ಊರ್ವಶಿ ರೌಟೇಲಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕಾನ್ಸ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಡುಕೋಣೆ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಎಂಬ ಕಾರಣಕ್ಕೆ ಊರ್ವಶಿ ಸಖತ್ ಟ್ರೋಲ್ ಆಗಿದ್ದರು. ಇದೀಗ ಇದಕ್ಕೆ ಉತ್ತರಿಸಿದ ನಟಿ ಟ್ರೋಲ್ ಮಾಡುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಟ್ರೋಲ್ ಗಳನ್ನು ಯಾವ ರೀತಿಯಲ್ಲಿ ಎದುರಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಮೊದಲು ಟ್ರೋಲ್ ಅನ್ನು ನಿಭಾಯಿಸುವುದನ್ನು ಅರಿತಿರಬೇಕು ಎಂದಿದ್ದಾರೆ. ಅಲ್ಲದೇ ನನ್ನ ಬಿಡುವಿಲ್ಲದ ಶೆಡ್ಯೂಲ್‌ನಲ್ಲಿ ಇದರ ಬಗ್ಗೆ ಯೋಚನೆ ಮಾಡಲು ಕೂಡ ಸಮಯ ಇಲ್ಲ ಎಂದಿದ್ದಾರೆ. ನೀವು ಟ್ರೋಲ್ ಬಗ್ಗೆ ಗಮನ ಕೊಡದೇ ಇದ್ದಾಗ, ಟ್ರೋಲ್ ಆಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ಮೂಲಕ ತಾವು ಟ್ರೋಲ್ ಬಗ್ಗೆ ಚಿಂತೆ ಮಾಡಲ್ಲ ಎಂದು ಟ್ರೋಲಿಗರಿಗೆ ನಟಿ ತಿರುಗೇಟು ನೀಡಿದ್ದಾರೆ.

Read More

ಬಹುಭಾಷಾ ನಟಿ ಸೌಂದರ್ಯ ನಿಧನರಾಗಿ ಸಾಕಷ್ಟು ವರ್ಷಗಳೆ ಕಳೆದು ಹೋಗಿದೆ. ಇಂದಿಗೂ ಲಕ್ಷಾಂತರ ಮಂದಿ ಆಕೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ಸೌಂದರ್ಯ ಮೃತಪಟ್ಟ ವೇಳೆ ಟಾಲಿವುಡ್ ನಟ ಜಗಪತಿ ಬಾಬು ಅವರಿಗೆ ಅಳಬೇಕು ಅಂತ ಅನ್ನಿಸಿಲ್ಲವಂತೆ. ಅಂದು ಅವರಿಗೆ ನಟಿಯ ಸಾವಿಗಿಂತ ಬೇರೆ ವಿಷಯಗಳು ಹೆಚ್ಚು ನೋವನ್ನುಂಟು ಮಾಡಿದ್ದವು ಎಂದು ಸಂದರ್ಶನದದಲ್ಲಿ ಹೇಳಿಕೊಂಡಿದ್ದರು. ಸೌಂದರ್ಯಾ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಸ್ಟಾರ್ ನಟರ ಜೊತೆ ನಟಿಸಿದ್ದರು. ಅದರಲ್ಲಿಯೂ ಖ್ಯಾತ ನಟ ಜಗಪತಿ ಬಾಬು ಮತ್ತು ಸೌಂದರ್ಯ ಸಾಕಷ್ಟು ಆಪ್ತಾರಾಗಿದ್ದರು . ಸೌಂದರ್ಯ ಸಾವಿನ ಕುರಿತು ಜಗಪತಿ ಬಾಬು ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ನಿರೂಪಕ, ನಿಮ್ಮ ಆತ್ಮೀಯ ಸ್ನೇಹಿತೆ ಸೌಂದರ್ಯ ಮೃತರಾದಾಗ ನಿಮ್ಮ ಮನಸ್ಥಿತಿ ಹೇಗಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ನಟ, ನಾನು ಫಿಲಾಸಪಿಯಲ್ಲಿ ನಂಬಿಕೆಯುಳ್ಳ ವ್ಯಕ್ತಿ. ಹಾಗಾಗಿ ಸೌಂದರ್ಯ ಸಾವಿನಿಂದ ನನಗೆ ತೀವ್ರ ನೋವು ಆಗಲಿಲ್ಲ. ಹುಟ್ಟಿದ ಜೀವಿ ಸಾಯಲೇಬೇಕು ಎಂದು ಎಲ್ಲರಿಗೂ ಗೊತ್ತಿರುವ ವಿಷಯ.…

Read More

ಮಾಲ್ಡೀವ್ಸ್ ಸರ್ಕಾರ ಇಸ್ರೇಲಿ ಪ್ರಜೆಗಳಿಗೆ ವಿಧಿಸಿರುವ ನಿಷೇಧವನ್ನು ಇಸ್ರೇಲ್ ಟೀಕಿಸಿದ್ದು ಲಕ್ಷದ್ವೀಪ ಸೇರಿದಂತೆ ಭಾರತದ ಬೀಚ್‍ಗಳನ್ನು ಸಂದರ್ಶಿಸುವಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. `ಮಾಲ್ದೀವ್ಸ್ ಇನ್ನು ಮುಂದೆ ಇಸ್ರೇಲಿಯನ್ನರನ್ನು ಸ್ವಾಗತಿಸುತ್ತಿಲ್ಲವಾದ್ದರಿಂದ, ಇಸ್ರೇಲಿ ಪ್ರಜೆಗಳನ್ನು ಪ್ರೀತಿಯಿಂದ ಸ್ವಾಗತಿಸುವ ಮತ್ತು ಆತಿಥ್ಯ ನೀಡುವ ಸುಂದರವಾದ ಮತ್ತು ಅದ್ಭುತವಾದ ಬೀಚ್‍ಗಳು ಭಾರತದಲ್ಲಿವೆ. ನಮ್ಮ ರಾಜತಾಂತ್ರಿಕರು ಭೇಟಿ ನೀಡಿದ ಸ್ಥಳಗಳನ್ನು ಆಧರಿಸಿದ ಈ ಶಿಫಾರಸುಗಳನ್ನು ಪರಿಶೀಲಿಸಿ’ ಎಂದು ಭಾರತದಲ್ಲಿನ ಇಸ್ರೇಲಿ ರಾಯಭಾರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಇದರ ಜೊತೆಗೆ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಗೋವಾ ಹಾಗೂ ಕೇರಳದ ಬೀಚ್‍ಗಳ ಚಿತ್ರವನ್ನು ಹಂಚಿಕೊಂಡಿದೆ. ` ಮಾಲ್ದೀವ್ಸ್ ಸರಕಾರದ ನಿರ್ಧಾರಕ್ಕೆ ಧನ್ಯವಾದಗಳು. ಇದೀಗ ಇಸ್ರೇಲಿಯನ್ನರು ಲಕ್ಷದ್ವೀಪ ಸಹಿತ ಭಾರತದ ಸುಂದರ ಬೀಚ್‍ಗಳನ್ನು ಸಂದರ್ಶಿಸಬಹುದು’ ಎಂದು ಭಾರತದಲ್ಲಿನ ಇಸ್ರೇಲ್ ಕಾನ್ಸುಲ್ ಜನರಲ್ ಕೋಬಿ ಶೊಶಾನಿ `ಎಕ್ಸ್’ ಮಾಡಿದ್ದು ಜನವರಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಪ್ರಾಕೃತಿಕ ಸೌಂದರ್ಯವನ್ನು ಶ್ಲಾಘಿಸಿದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಈ…

Read More

ಭಾರತೀಯ ಮೂಲದ 23 ವರ್ಷದ ತೆಲುಗು ವಿದ್ಯಾರ್ಥಿನಿಯೊಬ್ಬರು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಮತ್ತು ಸ್ಯಾನ್ ಬರ್ನಾರ್ಡಿನೊದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವ ನಿತಿಶಾ ಕಂದುಲಾ ಮೇ 28 ರಿಂದ ನಾಪತ್ತೆಯಾಗಿದ್ದಾರೆ. ನಿತೀಶಾ ಅವರು ಕೊನೆಯ ಬಾರಿಗೆ ಲಾಸ್ ಏಂಜಲೀಸ್​ನಲ್ಲಿ ಕಾಣಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯವು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ವಿದ್ಯಾರ್ಥಿನಿಯ ಪತ್ತೆಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ. ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಒಂದು ತಿಂಗಳೊಳಗೆ ಇಂಥ ಮತ್ತೊಂದು ಘಟನೆ ನಡೆದಿರುವುದು ಕಳವಳ ಮೂಡಿಸಿದೆ. ತೆಲಂಗಾಣ ಮೂಲದ ರೂಪೇಶ್ ಚಂದ್ರ ಚಿಂತಾಕಿಂಡಿ ಕಳೆದ ತಿಂಗಳು ಚಿಕಾಗೋದಲ್ಲಿ ನಾಪತ್ತೆಯಾಗಿದ್ದರು. ಈ ವಿದ್ಯಾರ್ಥಿ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ವರ್ಷದ ಆರಂಭದಲ್ಲಿ, ಹೈದರಾಬಾದಿನ ಮೊಹಮ್ಮದ್ ಅಬ್ದುಲ್ ಅರಾಫತ್ ಎಂಬುವರು ಮಾರ್ಚ್​ನಲ್ಲಿ ಕಾಣೆಯಾಗಿದ್ದರು. ಒಂದು ತಿಂಗಳ ನಂತರ ಅವರ ಶವ ಓಹಿಯೋದ ಕ್ಲೀವ್ ಲ್ಯಾಂಡ್​ನ ಸರೋವರದಲ್ಲಿ ಪತ್ತೆಯಾಗಿತ್ತು. ಕ್ಲೀವ್ ಲ್ಯಾಂಡ್​ನಲ್ಲಿನ…

Read More