Author: Author AIN

ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗೆ ಹಿಮಾಲಯಕ್ಕೆ ತೆರಳಿದ್ದಾರೆ. ಹಿಮಾಲಯಕ್ಕೆ ತೆರಳುವ ಮುನ್ನ ನಾನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲ್ಲ ಎಂದಿದ್ದ ನಟ ಇದೀಗ ಹಿಮಾಲಯದಿಂದ ಬರುತ್ತಿದ್ದಂತೆ ಮೂವರು ಪ್ರಮುಖ ರಾಜಕೀಯ ಮುಖಂಡರಿಗೆ ಶುಭಾಶಯ ಕೋರಿದ್ದಾರೆ. ಈ ಬಾರಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬಹುದಾ ಎನ್ನುವ ಪ್ರಶ್ನೆಗೆ ಅವರು ಮಾತನಾಡಲು ನಿರಾಕರಿಸಿದ್ದರು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ರಜನಿಕಾಂತ್ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಎನ್.ಡಿ.ಎ ಮಿತ್ರಕೂಟಕ್ಕೂ ಅವರು ಗೆಲುವಿನ ಶುಭಾಶಯ ತಿಳಿಸಿದ್ದಾರೆ. ಒಂದು ವಾರಗಳ ಕಾಲ ಹಿಮಾಲಯ ಪ್ರವಾಸದಲ್ಲಿದ್ದ ರಜನಿಕಾಂತ್, ಅಲ್ಲಿನ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ. ಸದ್ಯ ವಾಪಾಸಾಗಿರೋ ರಜನಿಕ ಸದ್ಯದಲ್ಲೇ ತಮ್ಮ ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ.

Read More

ಲಂಚ ಪಡೆದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಸಚಿವ ಝಿಝಿ ಕೊಡ್ವಾ ಅವರನ್ನು ಪೊಲೀಸರು ಬಂಧಿಸಲಾಗಿದೆ. ಕ್ರೀಡಾ, ಕಲೆ ಮತ್ತು ಸಂಸ್ಕೃತಿ ಖಾತೆಗಳನ್ನು ಹೊಂದಿರುವ ಕೊಡ್ವಾ, ಉದ್ಯಮಿಯೊಬ್ಬರಿಂದ 90 ಸಾವಿರ ಡಾಲರ್‌ ( ₹75ಲಕ್ಷ) ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಲಂಚ ಪಡೆದ ಹಣವನ್ನು ಐಷಾರಾಮಿ ಎಸ್‌ಯುವಿ ವಾಹನಗಳನ್ನು ಖರೀದಿಸಲು ಇವರು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಡ್ವಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ.

Read More

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿರೋ ನಟಿ ಹೇಮಾರನ್ನು ಸಿಸಿಬಿ ಅಧಿಕಾರಿಗಳು ಆನೇಕಲ್ ಕೋರ್ಟ್‌ಗೆ ಹಾಜರು ಪಡಿಸಿದ್ದರು. ನಟಿಯನ್ನು ಹೆಚ್ಚುವರಿ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಬೇಕು ಎಂದು ಅಧಿಕಾರಿಗಳು ಕೋರ್ಟ್‍ಗೆ ಮನವಿ ಮಾಡಿದ್ದರು. ವಾದ ಆಲಿಸಿದ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 24 ಗಂಟೆಗಳ ಕಾಲ ಹೇಮಾ ಅವರನ್ನು ಸಿಸಿಬಿ ವಶಕ್ಕೆ ನೀಡಿದೆ. ಕೋರ್ಟಿಗೆ ಬರುತ್ತಿದ್ದಂತೆಯೇ ಮತ್ತೆ ಮಾಧ್ಯಮಗಳ ಮೇಲೆ ಹೇಮಾ ಗರಂ ಆದರು. ‘ನಾನು ಮರ್ಡರ್ ಮಾಡಿದ್ದೀನಾ. ಅರ್ಧ ರಾತ್ರಿಯಲ್ಲಿ ಕರ್ಕೊಂಡು ಹೋಗಿ ಕಾಡಿನಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ. ನಾನು ಏನು ಮಾಡಿದ್ದೀನಿ. ನನ್ನನ್ನು ನಡುರಾತ್ರಿಯಲ್ಲಿ ಯಾಕೆ ಹಂಗೆ ಕರೆದುಕೊಂಡು ಹೋದ್ರು. ಇಲ್ಲಿಯ ವರೆಗೆ ನೀವು ಮಾಧ್ಯಮದವರು ಮಾತನಾಡಿಲ್ಲ. ಈಗಲಾದ್ರು ಮಾತನಾಡಿ’ ಎಂದು ಆಕ್ರೋಶ ಹೊರ ಹಾಕಿದರು. ಹೆಚ್ಚಿನ ವಿಚಾರಣೆಗಾಗಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡುವಂತೆ ಕೋರ್ಟಿಗೆ ಸಿಸಿಬಿ ಪರ ವಕೀಲರು ಮನವಿ ಮಾಡಿಕೊಂಡರು. ಪಬ್ಲಿಕ್‌ ಪ್ರಾಸಿಕ್ಯೂಟರ್‌…

Read More

2024ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 3ನೇ ಭಾರಿ ಪ್ರಧಾನಿಯಾಗಿ ಗದ್ದುಗೆ ಏರಲು ನರೇಂದ್ರ ಮೋದಿ ಸಿದ್ದರಾಗಿದ್ದಾರೆ. ಮೋದಿ ಗೆಲುವಿಗೆ ವಿಶ್ವದ ಸಾಕಷ್ಟು ನಾಯಕರು ಶುಭ ಹಾರೈಸಿದ್ದಾರೆ. ದೇಶ ವಿದೇಶದ ಗಣ್ಯರು ಮೋದಿಗೆ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಅಮೆರಿಕದ ಖ್ಯಾತ ಗಾಯಕಿ, ನಟಿ ಮೇರಿ ಮಿಲ್ಬೆನ್ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮನ್ನು ಜನರು ಮಾತ್ರವಲ್ಲ, ದೇವರೂ ಆಯ್ಕೆ ಮಾಡಿದ್ದಾರೆ ಎಂದು ನಟಿ ಸಂದೇಶ ಕಳುಹಿಸಿದ್ದಾರೆ. ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿರುವ ಮಿಲ್ಬೆನ್‌, ‘ನವ ಭಾರತ’ವನ್ನು ತರಲು ದೇವರ ರಾಯಭಾರಿ ಮತ್ತು ಜನರ ಧ್ವನಿಯಾಗಬೇಕೆಂದು ಅವರು ಪೋಸ್ಟ್ ಮಾಡಿದ್ದಾರೆ. ನನ್ನ ಪ್ರೀತಿಯ ಭಾರತ, ನಮಸ್ತೆ. ಇಂದು ಭಾರತ ಮತ್ತು ವಿಶ್ವಕ್ಕೆ ಐತಿಹಾಸಿಕ ದಿನವಾಗಿದೆ. ನನ್ನ ಸ್ನೇಹಿತ, ಗೌರವಾನ್ವಿತ ಪ್ರಧಾನ ಮಂತ್ರಿಗಳ ಮರು ಆಯ್ಕೆ ಮತ್ತು ನವ ಭಾರತದ ಉದಯ. ಪ್ರಧಾನಿ ಮೋದಿ, ನಿಮ್ಮ ಪುನರಾಯ್ಕೆಗಾಗಿ ನಿಮ್ಮನ್ನು ಅಭಿನಂದಿಸುವ ಅಮೆರಿಕದಿಂದ ಮೊದಲಿಗರಲ್ಲಿ…

Read More

ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ನಟಿ ರೋಜಾ ಸೋಲು ಕಂಡಿದ್ದಾರೆ. ಮಾಜಿ ಸಚಿವೆಯೂ ಆಗಿದ್ದ ರೋಜಾ ವೈಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಹೀನಾಯ ಸೋಲು ಕಂಡಿದ್ದಾರೆ. ಇವರ ಸೋಲಿಗೆ ನಿರ್ಮಾಪಕ, ಉದ್ಯಮಿ ಬಂಡ್ಲ ಗಣೇಶ್ ಪ್ರತಿಕ್ರಿಯೆ ನೀಡಿದ್ದು, ರೋಜಾ ಅವರನ್ನು ಕಾಲೆಳೆದಿದ್ದಾರೆ. ರೋಜಾ ಸೋಲಿನ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಬಂಡ್ಲ ಗಣೇಶ್, ‘ಜಬರ್ದಸ್ತ್ ಕಾಯ್ತಿದೆ.. ಬೇಗ ಬಾ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಜಬರ್ದಸ್ತ್ ಅನ್ನೋದು ರೋಜಾ ನಡೆಸಿಕೊಡುತ್ತಿದ್ದ ಶೋ. ಈಗ ರೋಜಾ ಸೋತಿದ್ದರಿಂದ ಯಾವುದೇ ಕೆಲಸ ಇರುವುದಿಲ್ಲ. ಹಾಗಾಗಿ ಈ ಶೋ ನಡೆಸಿಕೊಂಡು ಹೋಗು ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರ ಆಪ್ತ ಬಂಡ್ಲೆ ಗಣೇಶ್, ಹಾಗಾಗಿ ರೋಜಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ರೋಜಾ ಸಿಡಿದೆದ್ದಾಗೆಲ್ಲ ಪವನ್ ಪರ ಬ್ಯಾಟ್ ಬೀಸಿದವರು ಗಣೇಶ್, ಪವನ್ ಗೆಲುವಿಗಾಗಿ ಸಾಕಷ್ಟು ಶ್ರಮ ವಹಿಸಿದವರು. ಈಗ ಪವನ್ ಗೆದ್ದಿದ್ದಾರೆ. ಅಧಿಕಾರ ಚುಕ್ಕಾಣಿಯನ್ನೂ ಹಿಡಿಯಲಿದ್ದಾರೆ. ಈ ವೇಳೆಯಲ್ಲಿ ಬಂಡ್ಲ ಬರೆದಿರೊ…

Read More

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಯಾಗಿದ್ದ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ನಟಿ ಕಂಗನಾ ರಣಾವತ್ ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದ್ದಾರೆ. ಇದೇ ವೇಳೆ ನಟಿ ತಮ್ಮ ಮೊದಲ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸಿದ್ದಾರೆ. ನನ್ನ ಜನ್ಮಭೂಮಿ ಹಿಮಾಚಲ ಪ್ರದೇಶದಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗುರಿಯಲ್ಲಿ ನಾನು ಸೈನಿಕನಾಗಿ ಕೆಲಸ ಮಾಡುತ್ತೇನೆ. ಬಹುಶಃ, ಬೇರೊಬ್ಬರು ತಮ್ಮ ಬ್ಯಾಗ್ ಪ್ಯಾಕ್ ಮಾಡಿ ಹೊರಡಬೇಕಾಗುತ್ತದೆ. ಆದರೆ ನಾನು ಇಲ್ಲಿ ಇದ್ದೇ ಇರುತ್ತೇನೆ ಎಂದು ಗೆಲುವಿನ ಮುಂಚೆ ನಟಿ ಹೇಳಿಕೆ ನೀಡಿದ್ದರು. ಬಳಿಕ ಮೊದಲ ಗೆಲುವಿನ ಖುಷಿಯನ್ನು ನರೇಂದ್ರ ಮೋದಿಯವರಿಗೆ ಕಂಗನಾ ಅರ್ಪಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಇನ್ನೂ ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ,…

Read More

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಹಿನ್ನಡೆ ಅನುಭವಿಸುತ್ತಿದ್ದಂತೆ ನಿನ್ನೆ ಶೇರು ಮಾರುಕಟ್ಟೆಡಿಢೀರ್‌ ಕುಸಿತ ಕಂಡಿತ್ತು. ಆದರೆ ಇಂದು ನರೇಂದ್ರ ಮೋದಿಮತ್ತೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 1.95 ರಷ್ಟು ಏರಿಕೆಯಾಗಿ 73,486.14ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 1.91 ರಷ್ಟು ಏರಿಕೆಯಾಗಿ 22,303.40 ಮಟ್ಟದಲ್ಲಿದೆ. ಕಳೆದ ಬಾರಿ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಎನ್‌ಡಿಎ ಒಕ್ಕೂಟ ಕೇವಲ 291 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಲ್ಲದೇ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ನಿನ್ನೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪವರ್ ಫೈನಾನ್ಸ್ ಕಾರ್ಪೊರೇಷನ್ ಷೇರುಗಳು ಭಾರೀ ಕುಸಿತ ಕಂಡಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಪಕ್ಕಾ ಆಗುತ್ತಿದ್ದಂತೆ ನಿಫ್ಟಿಯಲ್ಲಿ ONGC,…

Read More

ಚಂದ್ರನ ಅಂಗಳದಲ್ಲಿನ ಕಲ್ಲು ಮತ್ತು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ತರಲಿರುವ ತನ್ನ ಬಾಹ್ಯಾಕಾಶ ನೌಕೆಯು ಭೂಮಿಯತ್ತ ಪ್ರಯಾಣ ಆರಂಭಿಸಿದೆ ಎಂದು ಚೀನಾ ಹೇಳಿಕೆ ನೀಡಿದೆ. ಕಳೆದ ತಿಂಗಳು ಉಡಾವಣೆ ಮಾಡಲಾಗಿದ್ದ ಚೇಂಜ್’ಇ-6 ಹೆಸರಿನ ಬಾಹ್ಯಾಕಾಶ ನೌಕೆಯು ಇತ್ತೀಚೆಗೆ ಚಂದ್ರನ ಮೇಲ್ಮೈನಲ್ಲಿ ಇಳಿದಿತ್ತು.ಈಗಾಗಲೇ ಚಂದ್ರನ ಮೇಲ್ಮೈನಲ್ಲಿ ಸಂಗ್ರಹಿಸಿರುವ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ನೌಕೆಯಲ್ಲಿನ ಪೆಟ್ಟಿಗೆಯಲ್ಲಿಟ್ಟುಕೊಂಡಿದ್ದು, ಜೂನ್ 25ರಂದು ಚೀನಾದ ಇನ್ನರ್ ಮಂಗೋಲಿಯಾ ಪ್ರಾಂತ್ಯದ ಮರುಭೂಮಿಯಲ್ಲಿ ಬಂದಿಳಿಯಲಿದೆ ಎಂದು ಚೀನಾ ತಿಳಿಸಿದೆ.

Read More

ದ್ವಿಪಕ್ಷೀಯ ಸಂಬಂಧ ಉತ್ತಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಪ್‌ ಐದು ದಿನಗಳ ಕಾಲ ಅಧಿಕೃತ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಹ್ವಾನದ ಮೇರೆಗೆ ಜೂನ್‌ 4ರಿಂದ 8ರ ವರೆಗೆ ಷರೀಫ್‌ ಚೀನಾ ಪ್ರವಾಸ ಕೈಗೊಂಡಿದ್ದಾರೆ.  ಮಾರ್ಚ್‌ನಲ್ಲಿ ಪಿಎಂಎನ್‌ಎಲ್‌ ಪಕ್ಷ ಹಾಗೂ ಇತರ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾದ ಶೆಹಬಾಜ್‌ ಷರೀಫ್‌ ಮೊದಲ ಬಾರಿಗೆ ಚೀನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ‘ಚೀನಾ ಭೇಟಿ ವೇಳೆ ಪಾಕ್‌ ಪ್ರಧಾನಿ ಶರೀಫ್‌ ಅವರು ಅಧ್ಯಕ್ಷ ಜಿನ್‌ಪಿಂಗ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಚೀನಾ-ಪಾಕಿಸ್ತಾನ ಸಂಬಂಧ ವೃದ್ಧಿಗಾಗಿ ಜಂಟಿ ನೀಲನಕ್ಷೆ ರೂಪಿಸಲಿದ್ದಾರೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್‌ ಅವರು ಕಳೆದ ವಾರ ಹೇಳಿದ್ದರು.

Read More

ಕಾಂತಾರ ಸಿನಿಮಾ ರಿಲೀಸ್‌ ಆದ ಬಳಿಕ ನಟಿ ಸಪ್ತಮಿ ಗೌಡ ಅವರ ಲಕ್ಕು ಹಾಗೂ ಲುಕ್ಕೂ ಎರಡು ಬದಲಾಗಿದೆ. ಸಪ್ತಮಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಜೊತೆಗೆ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿಕೊಟ್ಟು ಬಂದಿದ್ದಾರೆ. ಸದ್ಯ ಕನ್ನಡದಲ್ಲಿ ಕಾಳಿ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಗ್ಯಾಪ್‌ನಲ್ಲಿಯೇ ಹೊಸ ಫೋಟೋ ಶೂಟ್‌ನಲ್ಲಿ ನಟಿ ಮಿಂಚಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಇದು ಫೋಟೋ ಶೂಟ್ ಮಾಡಿಸಲು ಸರಿಯಾದ ಸಮಯ ಎಂದು ಅನಿಸುತ್ತಿದ್ದಂತೆ ಮಳೆ ನಿಂತ ತಕ್ಷಣವೇ ಸಪ್ತಮಿ ಮಸ್ತ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಸಿಲಿಕಾನ್ ಸಿಟಿ ಮಳೆ ಸುರಿದು ತಂಪಾಗಿದೆ. ಈ ಕೂಲ್ ವಾತಾವರಣದಲ್ಲಿ ಅಷ್ಟೇ ಕೂಲ್ ಎಂಡ್ ಸ್ಟೈಲಿಶ್ ಆಗಿ ಸಪ್ತಮಿ ನಯಾ ಫೋಟೋ ಶೂಟ್ ಮಾಡಿಸಿದ್ದಾರೆ. ವೈಟ್ ಸ್ಲಿವ್‌ಲೆಸ್ ಟಾಪ್, ನೀಲಿ ಬಣ್ಣದ ಸ್ಕರ್ಟ್ ತೊಟ್ಟು ಬೆಂಗಳೂರಿನ ರಸ್ತೆಯಲ್ಲಿ ನಿಂತು ಸ್ಟೈಲಿಶ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಬೋಲ್ಡ್ ಅವತಾರ ನೆಟ್ಟಿಗರ ಗಮನ…

Read More