Author: Author AIN

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿನಟನೆಯ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದು ನಿರೀಕ್ಷೆಗೂ ಮೀರಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಿಂದ ಅಭಿಮಾನಿಗಳು ಸಿನಿಮಾಗಾಗಿ ಮತ್ತಷ್ಟು ಕುತೂಹಲದಿಂದ ಕಾಯುವಂತಾಗಿದೆ. ಕಾಂತಾರ ಚಾಪ್ಟರ್​ 1 ಸಿನಿಮಾ ಟೀಸರ್ ಆರಂಭದಲ್ಲಿ ಕಾಂತಾರ ಸಿನಿಮಾದ ದೃಶ್ಯವಿದೆ. ಬೆಳಕಲ್ಲಿ ಕಣ್ಣ ಮುಂದೆ ಇರೋದೆಲ್ಲಾ ಕಾಣುತ್ತೆ ಆದ್ರೆ, ಇದು ಬೆಳಕಲ್ಲ ದರ್ಶನ. ಇದು ಹಿಂದೆ ನಡೆದಿದ್ದು, ಮುಂದೆ ನಡೆಯೋದನ್ನು ತೋರಿಸುವ ಬೆಳಕು, ಕಣ್ತದಾ.. ಎಂಬ ಅಶರೀರವಾಣಿ ಕೇಳಿ ಬರುತ್ತೆ. ಬಳಿಕ ಕಾಂತಾರ ಚಾಪ್ಟರ್​ ಒನ್​ ದೃಶ್ಯ ಬರಲಿದೆ. ಬೆಂಕಿಯಲ್ಲಿ ಬರೆದ ವೃತ್ತಾಕಾರದ ಕೆಳಗೆ ದೊಡ್ಡ ಗುಹೆ ಭಾಸವಾಗುತ್ತೆ. ಆ ಗುಹೆಯಲ್ಲಿ ರಕ್ತಸಿಕ್ತಕೊಂಡ ವ್ಯಕ್ತಿ ಇರುತ್ತಾನೆ. ಆತನೇ ನಟ ರಿಷಬ್ ಶೆಟ್ಟಿ, ಮೈತುಂಬಾ ರಕ್ತವಿರುತ್ತೆ. ಕೈಯನ್ನು ಬಿಗಿ ಮಾಡುವ, ಉಸಿರೆಳೆಯುವ ಸೀನ್ ಕೂಡ ಅದ್ಬುತ ಎನಿಸಿತ್ತು. ರುದ್ರಾಕ್ಷಿ…

Read More

ಬ್ರೆಜಿಲ್ ನಲ್ಲಿ ಆಯೋಜಿಸಿದ 19ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಬಡತನ ನಿವಾರಣೆ, ಆಹಾರ ಭದ್ರತೆ ಮತ್ತು ಜಾಗತಿಕ ಆಡಳಿತ ಸುಧಾರಣೆಗಳಂತಹ ನಿರ್ಣಾಯಕ ವಿಷಯಗಳ ಕುರಿತು ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಿದರು. ಅಂತರ್ಗತ ಅಭಿವೃದ್ಧಿ ಮತ್ತು ಜಾಗತಿಕ ದಕ್ಷಿಣದ ಆಕಾಂಕ್ಷೆಗಳಿಗೆ ಭಾರತದ ಬದ್ಧತೆಯನ್ನು ಇದೇ ವೇಳೆ ಮೋದಿ ಪುನರುಚ್ಚರಿಸಿದರು. ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗ್ಲೋಬಲ್ ಸೌತ್‌ಗಾಗಿ ಧ್ವನಿ ಎತ್ತಿದ್ದಾರೆ. ಈ ಪ್ರದೇಶದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ಜಾಗತಿಕ ವೇದಿಕೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಯಶಸ್ವಿಯಾಗಲು ಸಾಧ್ಯ ಎಂದು ಮೋದಿ ಒತ್ತಿ ಹೇಳಿದ್ದಾರೆ. “ಜಾಗತಿಕ ಸಂಘರ್ಷಗಳಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣದ ದೇಶಗಳ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಜಾಗತಿಕ ದಕ್ಷಿಣದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ನಮ್ಮ ಚರ್ಚೆಗಳು ಯಶಸ್ವಿಯಾಗುತ್ತವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಆದ್ಯತೆ…

Read More

ಮಣಿಪುರ : ಮಣಿಪುರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹಿಂಸಾಚಾರ ಪೀಡಿತ ಜಿರಿಬ್ರಾಮ್‌ ನಲ್ಲಿ ಭಧ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಯುವಕ ಸಾವನ್ನಪ್ಪಿದ್ದಾನೆ. ಮಣಿಪುರದ ವಿಶೇಷ ಪೊಲೀಸ್‌ ಕಮಾಂಡೋಗಳು ಗುಂಪು ಚದುರಿಸಲು ಗುಂಡು ಹಾರಿಸಿದ್ದು, ಈ ವೇಳೆ ಅಥೌಬೌ ಎಂಬಾತ ಸಾವನ್ನಪಿದ್ದು, ಇಬ್ಬರಿಗೆ ಗಾಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. https://ainlivenews.com/horrible-accident-between-two-bikes-two-killed-young-woman-injured/ ಇನ್ನೂ ಮಣಿಪುರದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ.  5000 ಭದ್ರತಾ ಸಿಬ್ಬಂದಿಗಳನ್ನೊಳಗೊಂಡ ಹೆಚ್ಚುವರಿ 50 ಸಿಎಪಿಎಫ್‌ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನೂ ಮಣಿಪುರದಲ್ಲಿ ಪ್ರಾಣಹಾನಿ ಮತ್ತು ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣವಾದ ಮೂರು ಪ್ರಕರಣಗಳ ಬಗ್ಗೆ ಎನ್‌ ಐಎ ತನಿಖೆ ತೀವ್ರಗೊಳಿಸಿದೆ.

Read More

ನವದೆಹಲಿ: ನಿನ್ನೆಯಷ್ಟೇ ಆಮ್‌ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಕೈಲಾಶ್ ಗೆಹ್ಲೋಟ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೈಲಾಶ್‌ ಗೆಹ್ಲೋಟ್‌  ಪಕ್ಷದ ನಿರ್ದೇಶನ ಮತ್ತು ಆಂತರಿಕ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲಿ ಯಾವುದೇ ಭರವಸೆಯನ್ನು ಈಡೇರಿಸಿದ ಸರ್ಕಾರದ ವಿರುದ್ದ ಅಸಮಾಧಾನ ತೋರಿ ಎಎಪಿಗೆ ರಾಜೀನಾಮೆ ನೀಡಿದ್ದರು. ಇದೀಗ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. https://ainlivenews.com/cm-somanna-interesting-talk-about-muda/ ಈ ವೇಳೆ ಮಾತನಾಡಿದ ಗೆಹ್ಲೋಟ್, ಇದು ನನಗೆ ಸುಲಭದ ಹೆಜ್ಜೆಯಲ್ಲ. ನಾನು ಅಣ್ಣಾಜಿಯವರ ಕಾಲದಿಂದಲೂ ಎಎಪಿಯೊಂದಿಗೆ ಸಂಬಂಧ ಹೊಂದಿದ್ದೇನೆ. ದೆಹಲಿಯ ಜನರಿಗಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ನಾನು ಯಾವತ್ತೂ ಒತ್ತಡದಲ್ಲಿ ಏನನ್ನೂ ಮಾಡಿಲ್ಲ. ನಾನು ಎಎಪಿಗೆ ಸೇರಲು ನನ್ನ ವಕೀಲ ವೃತ್ತಿಯನ್ನು ತೊರೆದಿದ್ದೇನೆ. ನಮ್ಮ ಏಕೈಕ ಉದ್ದೇಶ ದೆಹಲಿಯ ಜನರಿಗೆ ಸೇವೆ ಸಲ್ಲಿಸುವುದಾಗಿದೆ ಎಂದರು. ‘ಆ ಮೌಲ್ಯಗಳಿಗೆ ಧಕ್ಕೆಯಾಗುತ್ತಿರುವುದನ್ನು ಕಂಡು ಅತೀವ ನೋವಿನಿಂದ ಪಕ್ಷ ತೊರೆದಿದ್ದೇನೆ’ ಎಂದಿದ್ದಾರೆ.

Read More

ಕನ್ನಡದಲ್ಲಿ ಗೆಳೆಯ, ಬಿರುಗಾಳಿ, ಭಜರಂಗಿಯಂತಹ ಭರ್ಜರಿ ಹಿಟ್‌ ಕೊಟ್ಟ ನಿರ್ದೇಶಕ ಎ. ಹರ್ಷ ಇದೀಗ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಹ್ಯಾಟ್ರಿಕ್‌ ಹೀರೋ ಶಿವಣ್ಣ ಜೊತೆಗೆ ಕೆಲ ಸಿನಿಮಾಗಳ ನಿರ್ದೇಶಿದ್ದ ಎ.ಹರ್ಷ ಇದೀಗ ಬಾಲಿವುಡ್‌ ನಲ್ಲಿ ತಮ್ಮ ಅದೃಷ್ಟಪರೀಕ್ಷೆಗಿಳಿದಿದ್ದು, ಟೈಗರ್‌ ಶ್ರಾಫ್‌ ಅಭಿನಯದ ಬಾಘಿ-4 ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ.  ಬಾಲಿವುಡ್‌ ನಲ್ಲಿ ಬಾಘಿ ಸರಣಿ ಯಶಸ್ವಿಯಾಗಿದೆ. ಬಾಘಿ ಸರಣಿಯ ಮೊದಲ ಎರಡು ಚಿತ್ರಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದವು. ಆದರೆ ಉತ್ತಮ ಗಳಿಕೆಕಂಡಿದ್ದ ಬಾಘಿ ವಿಮರ್ಶೆಯಲ್ಲಿ ಸೋತಿತ್ತು. ಈಗ ಮತ್ತೆ ಸಾಜಿದ್ ನಾಡಿಯಾದ್ವಾಲಾ ಬಾಘಿ ಸರಣಿಯಲ್ಲಿ ನಾಲ್ಕನೇ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಎ.ಹರ್ಷ  ನಿರ್ದೇಶನ ಮಾಡಲಿದ್ದಾರೆ ಅನ್ನೋದು ವಿಶೇಷ. https://www.youtube.com/watch?v=MboLELP37ws 2007ರಲ್ಲಿ ಬಿಡುಗಡೆಗೊಂಡ  ‘ಗೆಳೆಯ’ ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದವರು ಹರ್ಷ ‘ಬಿರುಗಾಳಿ’, ‘ಚಿಂಗಾರಿ’, ‘ಭಜರಂಗಿ’, ‘ವಜ್ರಕಾಯ’, ‘ಅಂಜನೀ ಪುತ್ರ’, ‘ಭಜರಂಗಿ 2’, ‘ವೇದ’ ಸಿನಿಮಾಗಳ ನಿರ್ದೇಶಿಸಿದ್ದಾರೆ. ಇದಲ್ಲದೇ ತೆಲುಗಿನ ಭೀಮ ಸಿನಿಮಾವನ್ನು…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ವಿ.ಸೋಮಣ್ಣ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ಉಭಯನಾಯಕರು ಮುಡಾ ಬಗ್ಗೆ ಚರ್ಚಿಸಿದ್ದು ಸ್ವಾರಸ್ಯಕರವಾಗಿತ್ತು. ನಗರದ ರಮಣಶ್ರೀ ಹೋಟೆಲ್ ಆವರಣದಲ್ಲಿ ವಿ ಸೋಮಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಎದುರುಬದುರಾಗಿದ್ದಾರೆ. ಈ ವೇಳೆ ಇಬ್ಬರು ಸಹ ನಗುನಗುತ್ತಲೇ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಿದ್ದಾರೆ. https://www.youtube.com/watch?v=0FSunkNuVA8 ಮೊದಲಿಗೆ ಇಬ್ಬರೂ ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ, ಮುಡಾ ಸೈಟ್ ವಿಚಾರ ಪ್ರಸ್ತಾಪಿಸಿದ ವಿ.ಸೋಮಣ್ಣ, ಸಿದ್ದರಾಮಣ್ಣ ಅಂದೇ ಹೇಳಿದ್ದೆ. ಸಿದ್ದರಾಮಣ್ಣ ವಿಚಾರದಲ್ಲಿ ನಂದು ಏನಿದ್ದರೂ ನೇರ ಮಾತು. ಬೇರೆಯವರ ಹಾಗೆ ಹೆದರಿಸುವುದು, ಹಿಂದೊಂದು ಮುಂದೊಂದು ಮಾಡುವುದು ನನಗೆ ಗೊತ್ತಿಲ್ಲ. ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ..? ಸಣ್ಣ ವಿಚಾರಕ್ಕೆ ಇಷ್ಟೆಲ್ಲಾ ಆಗುತ್ತಿದೆ. ಅಂದೇ ನನ್ನ ಮಾತು ಕೇಳಬೇಕಿತ್ತು ಎಂದರು. ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಹಾಗಲ್ಲ, ಸುಳ್ಳು ಹೇಳ್ತಾವ್ರೆ ಕಣಯ್ಯಾ. ನನ್ನ ಮಾತು ಕೇಳು. ಗೊತ್ತಿಲ್ಲದೇ ಏನೇನೋ ಮಾತನಾಡಬೇಡ ಎಂದರು. ಇವರಿಬ್ಬರ ಈ ಚರ್ಚೆ…

Read More

ಬೆಂಗಳೂರು : ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಔಷಧಿಗಳು ಕಡಿಮೆ ಕ್ವಾಂಟಿಟಿಯಲ್ಲಿ ಖರೀದಿ ಮಾಡುವುದು ಅಂತಿಮವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಔಷಧಿ ಖರೀದಿ ಮಾಡಲು ಸೂಚನೆ ಕೊಟ್ಟಿದ್ದೇವೆ. ಹೀಗಾಗಿ ಅವರಿಗೆ ಹಣ ಕೂಡ ಒದಗಿಸಿದ್ದೇವೆ. ಇಲ್ಲಿಂದ ಸರಬರಾಜು ಆಗೋದು ತಡ, ಆದರೆ ಸ್ಥಳೀಯವಾಗಿಯೇ ಖರೀದಿ ಮಾಡಿಕೊಡಲು ಅವಕಾಶವನ್ನು ಕೊಟ್ಟಿದ್ದೇವೆ. ಎಎಸ್‌ ಎಂಸಿಎಲ್‌ನಿಂದಲೇ  ಔಷಧ ಪೂರೈಕೆ ಆಗಬೇಕು ಎಂದರು. https://ainlivenews.com/development-of-railway-station-on-airport-model-union-minister-v-somanna/ ತಾಂತ್ರಿಕ ಕಾರಣದಿಂದ ಟೆಂಡರ್ ವಿಳಂಬವಾಗಿದೆ. ಈಗ ಸರಬರಾಜು ಆಗಿರುವ ಔಷಧಿಗಳು ಎರಡು ವರ್ಷದ ಹಳೆಯ ಇಂಡೆಂಟ್ ಮೇಲೆ ಖರೀದಿ ಮಾಡಿರೋದು. ಈ ವರ್ಷದ ಇಂಡೆಂಟ್ ಪ್ರಕಾರವೇ ಈ ವರ್ಷವೇ ಖರೀದಿ ಮಾಡಬೇಕು ಎಂಬ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ, ಸಾಕಷ್ಟು ಇದೆ. ಯಾವ ಔಷಧಗಳು ಇಲ್ಲ ಅದನ್ನು ಸ್ಥಳೀಯವಾಗಿ ಖರೀದಿ ಮಾಡಿ ಹೇಳಿದ್ದೇವೆ ಎಂದರು. ಸರ್ಕಾರ ಬಂದಾಗ ಕೇವಲ…

Read More

ಬೆಂಗಳೂರು: ವಿಮಾನ ನಿಲ್ಧಾಣ ಮಾದರಿಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದೆ. ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ರೈಲ್ವೆ ಮಂಡಳಿ ಕೆಲ ಸ್ಪಷ್ಟನೆ ಕೇಳಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಮಂಡಳಿ ಮುಂದೆ ಇಡುತ್ತೇವೆ. ಒಳ್ಳೆಯ ಕೆಲಸಗಳಿಗೆ ಪ್ರಧಾನಿ ನರೇಂದ್ರ ಮೋದಿ ಬೇಡ ಎನ್ನುವುದಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆ ಚರ್ಚಿಸಿ ಕೆಲಸ ಆರಂಭಿಸುತ್ತೇವೆ ಎಂದರು. ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಏರ್ಪೋರ್ಟ್‌ ಗಿಂತ ವಿಭಿನ್ನವಾಗಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ. ಏರ್ಪೋರ್ಟ್ ನಲ್ಲಿ ಸಿಗುವ ಎಲ್ಲಾ ಸವಲತ್ತುಗಳು ಸಿಗಲಿದೆ. ನಮಗೆ 160 ಎಕರೆ ಜಾಗ ಇದೆ. ನಿರೋದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. https://ainlivenews.com/it-was-siddaramaiah-who-sent-some-mlas-to-bjp-union-minister-joshi-bomb/ ಶಾಸಕ ರವಿ ಗಣಿಗ ಆರೋಪಕ್ಕೆ ಕಿಡಿ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್ ಎಂಬ ಶಾಸಕ…

Read More

ನಟ ದರ್ಶನ್‌ ಅಭಿನಯದ ಮತ್ತೊಂದು ಸಿನಿಮಾ ತೆರೆ ಮೇಲೆ ಬರೋಕೆ ಸಜ್ಜಾಗುತ್ತಿದೆ. ಶಾಸ್ತ್ರಿ, ಕರಿಯ, ನವಗ್ರಹ, ಪೊರ್ಕಿ ಸಿನಿಮಾಗಳು ಈ ವರ್ಷ ರೀ ರಿಲೀಸ್‌ ಆಗಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದ್ದವು. ಇದೀಗ ಇದೀಗ ದರ್ಶನ್‌ ನಟಿಸಿದ್ದ ಐತಿಹಾಸಿಕ ಸಿನಿಮಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮರು ಬಿಡುಗಡೆಗೆ ಸಜ್ಜಾಗಿದೆ. https://ainlivenews.com/bpl-card-only-for-those-who-deserve-it-food-ministers-clarification/ ಆಧುನಿಕ‌ ತಂತ್ರಜ್ಞಾನ ಸ್ಪರ್ಷದೊಂದಿಗೆ ನ.22ರಂದು ಸಂಗೊಳ್ಳಿ ರಾಯಣ್ಣ ಮರು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಿದ್ದು, ಆನಂದ್ ಬಿ. ಅಪ್ಪುಗೋಳ್ ನಿರ್ಮಾಣ ಮಾಡಿದ್ದರು. ಎಸ್‌ಜಿಕೆ ಫಿಲಂಸ್ ಮೂಲಕ ಕೆ.ಬಸವರಾಜ್ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಶಾಲಾ ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಪ್ರವೇಶ ದರದಲ್ಲಿ ಶೇ. 50% ರಿಯಾಯಿತಿ ಸಹ ಇರಲಿದೆಯಂತೆ.

Read More

ದೇವನಹಳ್ಳಿ : ಯಾವುದೇ ಬಿಪಿಎಲ್ ಕಾರ್ಡ್ ರದ್ಧಾಗಿಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಅವರು ಬಿಪಿಎಲ್‌ ಕಾರ್ಡ್‌ ರದ್ದತಿ ಬಗ್ಗೆ ಸ್ಪಷ್ಟನೆ ಕೊಟ್ಟರು. ಬಿಪಿಎಲ್ ಕಾರ್ಡ್ ರದ್ದಾಗಿಲ್ಲ, ಎಪಿಎಲ್ ಕಾರ್ಡ್ ಕೂಡ ರದ್ದಾಗಿಲ್ಲ. ಬಿಜೆಪಿಯವರು ರಾಜಕೀಯ ಮಾಡಲು ಗೊಂದಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.. https://ainlivenews.com/it-was-siddaramaiah-who-sent-some-mlas-to-bjp-union-minister-joshi-bomb/ ರಾಜ್ಯದ ದಕ್ಷಿಣ ಭಾಗದಲ್ಲಿ ಬಿಪಿಎಲ್ ಕಾರ್ಡ್ ಶೇ. 80ರಷ್ಟು ಇವೆ. ಇದರಲ್ಲಿ ಕೆಲವರು ಬಿಪಿಎಲ್ ಕಾರ್ಡ್ʼಗೆ ಅರ್ಹರಲ್ಲದವರು ಇದ್ದಾರೆ. ಬಿಪಿಎಲ್ ಕಾರ್ಡ್ ಗೆ ಅರ್ಹರಲ್ಲದವರನ್ನ ಎಪಿಎಲ್ ಗೆ ಹಾಕುತ್ತೇವೆ. ಯಾರು ತೆರಿಗೆ ಪಾವತಿ ಮಾಡುತ್ತಾರೋ ಅಂತವರನ್ನು ಎಪಿಎಲ್ ಕಾರ್ಡ್ ಗೆ ಬದಲಿಸುತ್ತೇವೆ. ಆದರೇ ಇವರನ್ನ ರದ್ದು ಮಾಡೋದಿಲ್ಲ ಎಂದರು. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಶೇ 50ರಷ್ಟು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಆದರೇ ಕರ್ನಾಟಕದಲ್ಲಿ ಮಾತ್ರ ಶೇ 80ರಷ್ಟು ಬಿಪಿಎಲ್ ಕಾರ್ಡ್ʼಗಳು ಹೊಂದಿದ್ದಾರೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದರು.

Read More