Author: Author AIN

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಶಿಯೋಮಿ ಕೂಡಾ ಒಂದಾಗಿದ್ದು, ಶಿಯೋಮಿ ಇದೀಗ ತನ್ನ ವೆಬ್‌ಸೈಟ್‌ನಲ್ಲಿ ಶಿಯೋಮಿ ಸೂಪರ್‌ ಸೇವರ್ ಸೇಲ್‌ ಆಯೋಜಿಸಿದೆ. ಗ್ರಾಹಕರ ಗಮನ ಸೆಳೆದಿದೆ. ಈ ಮಾರಾಟದಲ್ಲಿ ಸಂಸ್ಥೆಯ ಕೆಲವು ಜನಪ್ರಿಯ ಮೊಬೈಲ್‌ಗಳು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿವೆ. ಆ ಪಟ್ಟಿಯಲ್ಲಿ ರೆಡ್ಮಿ 13C ಮೊಬೈಲ್‌ ಕೂಡಾ ಬೊಂಬಾಟ್‌ ಬೆಲೆ ಕಡಿತ ಪಡೆದಿದ್ದು, ಖರೀದಿದಾರರು OMG ಎನ್ನುವಂತಾಗಿದೆ. ಶಿಯೋಮಿಯು ತನ್ನ ವೆಬ್‌ಸೈಟ್‌ನಲ್ಲಿ ಶಿಯೋಮಿ ಸೂಪರ್‌ ಸೇವರ್ ಸೇಲ್‌ ( Xiaomi Super Saver Sale ) ಮಾರಾಟ ಆಯೋಜಿಸಿದ್ದು, ಈ ಸೇಲ್‌ನಲ್ಲಿ ಆಯ್ದ ಮೊಬೈಲ್‌ಗಳು ಭಾರೀ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ರೆಡ್ಮಿ 13C 4G ಮೊಬೈಲ್‌ ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನಿನ 8 GB + 256 GB ವೇರಿಯಂಟ್‌ ಈಗ 10,999ರೂ. ಗಳಿಗೆ ಖರೀದಿ ಮಾಡಬಹುದಾಗಿದ್ದು, ಕೆಲವು ಆಯ್ದ ಬ್ಯಾಂಕ್‌ ಕೊಡುಗೆ ಸಹ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಸ್ಟಾರ್ಡಸ್ಟ್ ಕಪ್ಪು ಮತ್ತು…

Read More

ನಟ ಅರ್ಜುನ್ ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅರ್ಜುನ್ ಸರ್ಜಾ ಹಿರಿಯ ಪುತ್ರಿ ನಾಯಕಿ ಐಶ್ವರ್ಯಾ ಹಾಗೂ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಐಶ್ವರ್ಯಾ ಹಾಗೂ ಉಮಾಪತಿ ಜೂನ್ 10 ರಂದು ಚೆನ್ನೈನ ಹನುಮಾನ್ ದೇವಸ್ಥಾನದಲ್ಲಿ ಹಸೆಮಣೆ ಏರಲಿದ್ದಾರೆ. ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆಗೆ ಸಂಬಂಧಿಸಿದ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಸಮಾರಂಭಗಳು ಈಗಾಗಲೇ ಅದ್ಧೂರಿಯಾಗಿ ನಡೆದಿವೆ. ಈ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಮದುವೆ ಖುಷಿಯಲ್ಲಿದ್ದಾರೆ. ತಮ್ಮ ಮುದ್ದಿನ ಮಗಳಿಗೆ ಪ್ರೀತಿಯ ಮುತ್ತು ಕೊಟ್ಟು ಶುಭಕೋರಿದ್ದಾರೆ. ಐಶ್ವರ್ಯಾ ಮತ್ತು ಉಮಾಪತಿ ಇಬ್ಬರು ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಐಶ್ವರ್ಯಾ ಮತ್ತು ಉಮಾಪತಿ ಮೊದಲು ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಈ ವಿಚಾರವನ್ನು ಹಿರಿಯರ ಗಮನಕ್ಕೆ ತಂದಾಗ ಇಬ್ಬರ ಮನೆಯವರು ಮದುವೆಗೆ ಗ್ರೀನ್…

Read More

ಕೆಲವೊಮ್ಮೆ ಸೆಲೆಬ್ರಿಟಿಗಳು ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡು, ಆ ಬಳಿಕ ಕ್ಷಮೆಯಾಚಿಸುವುದುಂಟು. ಇಂಥದ್ದೇ ಒಂದು ಘಟನೆ ಬ್ರೆಜಿಲ್‌ ನಲ್ಲಿ ನಡೆದಿದೆ. ಮೂರು ಬಾರಿ ಬ್ರೆಜಿಲ್‌ನ ರಿಯೊ ಡಿ ಜನೈರೊದ ಮೇಯರ್ ಆಗಿದ್ದ ಸೀಸರ್ ಮಾಯಾ ಪಕ್ಷದ ಸಭೆಯಲ್ಲಿ ಭಾಗಿಯಾದ ವೇಳೆ ಮಾಡಿಕೊಂಡ ಎಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಿಯೊ ಡಿ ಜನೈರೊದಲ್ಲಿನ ಸಿಟಿ ಹಾಲ್‌ನ ಮಾಜಿ ಮೇಯರ್ ಸೀಸರ್ ಮಾಯಾ ಅವರು ಇತರ ಕೌನ್ಸಿಲ್ ಸದಸ್ಯರೊಂದಿಗಿನ ಅಧಿವೇಶನಕ್ಕಾಗಿ ಆನ್‌ ಲೈನ್‌ ನಲ್ಲಿ ಜಾಯಿನ್‌ ಆಗಿದ್ದಾರೆ. ಝೂಮ್‌ ಕಾಲ್‌ ಮೂಲಕ ಲಾಗಿನ್‌ ಆಗಿ ಅವರು ಸಭೆಗೆ ಜಾಯಿನ್‌ ಆಗಿದ್ದಾರೆ. ಕೌನ್ಸಿಲರ್ ಪಾಬ್ಲೋ ಮೆಲ್ಲೋ ಅಧಿವೇಶನವನ್ನು ನಡೆಸುತ್ತಿದ್ದರು. ಅಧಿವೇಶನದಲ್ಲಿ ಸೀಸನ್‌ ಮಾಯಾ ಸೇರಿದಂತೆ ಇತರೆ ಸದಸ್ಯರು ಆನ್‌ ಲೈನ್‌ ನಲ್ಲಿ ಜಾಯಿನ್‌ ಆಗಿದ್ದರು. ಸಭೆ ನಡೆಯುವಾಗ ಸೀಸರ್‌ ಟಾಯ್ಲೆಟ್‌ನಲ್ಲಿ ಕೂತಿದ್ದರು. ಝೂಮ್‌ ಕಾಲ್‌ ನಲ್ಲಿದ್ದ ಅವರು ಕ್ಯಾಮರಾವನ್ನು ಕಾಲಿನತ್ತ ಇಟ್ಟಿದ್ದಾರೆ. ಇದರಿಂದ ಅವರು ಟಾಯ್ಲೆಟ್‌ ನಲ್ಲಿ ಕೂತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು…

Read More

ಬಾಲಿವುಡ್ ನಟಿ, ನೂತನ ಸಂಸದೆ ಕಂಗನಾ ರಣಾವತ್ ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ಬಳಿಕ ಕುಲ್ವಿಂದರ್‌ ಕೌರ್‌ ರನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಗುರುವಾರ ಕಂಗನಾ ಮೇಲೆ CISF ಸಿಬ್ಬಂದಿ ಕೌರ್‌ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಜೋಯಾ ಅಖ್ತರ್, ಸೋನಿ ರಜ್ದಾನ್, ಅರ್ಜುನ್ ಕಪೂರ್ ಮತ್ತು ಪ್ರಜಕ್ತಾ ಕೋಲಿ ಸೇರಿದಂತೆ ಹಲವು ಬಾಲಿವುಡ್ ಗಣ್ಯ ವ್ಯಕ್ತಿಗಳು ಕಂಗನಾ ರಣಾವತ್‌ಗೆ​ ಬೆಂಬಲವನ್ನು ನೀಡಿದ್ದಾರೆ. ಅನುಪಮ್ ಖೇರ್, ಮಿಕಾ ಸಿಂಗ್, ರವೀನಾ ಟಂಡನ್ ಮತ್ತು ಶೇಖರ್ ಸುಮನ್ ಸೇರಿದಂತೆ ಹಲವಾರು ವ್ಯಕ್ತಿಗಳು ಘಟನೆಯನ್ನು ಖಂಡಿಸಿದ್ದಾರೆ. ಪತ್ರಕರ್ತೆ ಫಾಯೆ ಡಿಸೋಜಾ ಅವರು ಕಪಾಳಮೋಕ್ಷ ಘಟನೆಯನ್ನು ಖಂಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, “ಹಿಂಸೆ ಎಂದಿಗೂ ಉತ್ತರವಾಗುವುದಿಲ್ಲ” ಎಂದು ಹೇಳಿದ್ದಾರೆ. “ವಿಶೇಷವಾಗಿ ಗಾಂಧಿಯವರ ಅಹಿಂಸೆಯ ಆದರ್ಶಗಳಿಂದ ಹುಟ್ಟಿದ ನಮ್ಮ ದೇಶದಲ್ಲಿ ಅಲ್ಲ. ಯಾರೋ ಮಾಡಿದ ಅಭಿಪ್ರಾಯಗಳು…

Read More

ಸಿನಿಮಾ, ಪತ್ರಿಕೋದ್ಯಮ ಹಾಗೂ ಉದ್ಯಮ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ ರಾಮೋಜಿ ರಾವ್ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದೀಗ ರಾಮೋಜಿ ರಾವ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋದಿಂದ ಜಗನ್ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮೋಜಿ ರಾವ್ ನಿತ್ರಾಣರಾಗಿ ಹಾಸಿಗೆ ಮೇಲೆ ಮಲಗಿದ್ದರೂ ಬಿಡದೆ ಅಮಾನವೀಯವಾಗಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿರುವ ವಿಡಿಯೋ ಅದಾಗಿದೆ.ರಾಮೋಜಿ ರಾವ್ ಹಾಗೂ ಜಗನ್ ಸರ್ಕಾರಕ್ಕೆ ಮೊದಲಿನಿಂದಲೂ ಸಮಸ್ಯೆ ಇದೆ. 2023 ರಲ್ಲಿ ಹೊರಬಂದ ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದಲ್ಲಿ ಆಂಧ್ರ ಸರ್ಕಾರವು ರಾಮೋಜಿ ರಾವ್​ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಮಾತ್ರವಲ್ಲದೆ ಆ ವೇಳೆಗಾಗಲೆ ಹಾಸಿಗೆ ಹಿಡಿದಿದ್ದ ರಾಮೋಜಿ ರಾವ್ ಅವರನ್ನು ವಿಚಾರಣೆ ಹೆಸರಲ್ಲಿ ಸಾಕಷ್ಟು ಹಿಂಸೆಯನ್ನೂ ನೀಡಿತು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಹರಿದಾಡುತ್ತಿರುವ ವಿಡಿಯೋ ಒಂದು ವರ್ಷ ಹಳೆಯದಾಗಿದ್ದು, ಬೆಡ್​ಮೇಲೆ ಮಲಗಿರುವ ರಾಮೋಜಿ ರಾವ್ ಅವರನ್ನು ಕೆಲವು…

Read More

ಇಂದು ಸಂಜೆ ನರೇಂದ್ರ ಮೋದಿ ಮೂರನೇ ಭಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶದ ಕೆಲವು ಅತಿಥಿಗಳ ಜೊತೆಗೆ ದೇಶದ ಹಲವು ಪ್ರಮುಖ ರಾಜಕಾರಣಿಗಳು, ಸಿನಿಮಾ ನಟರು ಹಾಗೂ ಉದ್ಯಮಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಕೆಲವು ದೇಶಗಳ ಪ್ರಧಾನ ಮಂತ್ರಿಗಳು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿದ್ದು ಇನ್ನೂ ಕೆಲ ಗಂಟೆಗಳಲ್ಲಿ ಮತ್ತಷ್ಟು ಮಂದಿ ಆಗಮಿಸಲಿದ್ದಾರೆ. ದಕ್ಷಿಣ ಭಾರತದಿಂದಲೂ ಕೆಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯವಾಗಿ ನಟ ರಜನೀಕಾಂತ್ ಈಗಾಗಲೇ ದೆಹಲಿ ತಲುಪಿದ್ದು, ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಜನೀಕಾಂತ್, ತಾವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದಾಗಿ ಹೇಳಿದ್ದಾರೆ. ‘ನೆಹರು ಬಳಿಕ ಮೂರನೇ ಬಾರಿ ಪ್ರಧಾನಿ ಆಗುತ್ತಿರುವ ಮೋದಿ ಅವರಿಗೆ ಏನು ಹೇಳಲು ಬಯಸುತ್ತೀರವೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದೊಂದು ಐತಿಹಾಸಿಕ ಇವೆಂಟ್, ಮೂರನೇ ಬಾರಿ ಪ್ರಧಾನಿ ಆಗುತ್ತಿರುವ ಪ್ರಧಾನಿ ನರೇಂದ್ರ…

Read More

ಇಂದು ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಭಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ದೇಶ- ವಿದೇಶದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಸೂಪರ್​​ಸ್ಟಾರ್​​, ಹಿರಿಯ ನಟ ರಜನಿಕಾಂತ್​ ಅವರನ್ನೂ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲಾಗಿದೆ. ಮೋದಿ ಮತ್ತೆ ಪ್ರಧಾನಿ ಆಗುತ್ತಿರುವುದರ ಬಗ್ಗೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವುದು ಅತಿದೊಡ್ಡ ಸಾಧನೆಯಾಗಿದೆ. ಜೊತೆಗೆ ವಿರೋಧ ಪಕ್ಷಗಳೂ ಬಲವರ್ಧನೆಗೊಂಡಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಹೇಳಿದರು. ದೆಹಲಿಗೆ ಪ್ರಯಾಣಿಸುವ ಮೊದಲು ತಮ್ಮ ನಿವಾಸದ ಮುಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಎನ್​ಡಿಎ ನಾಯಕರಾಗಿ ಮೋದಿ ಅವರು ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ಇದು ಸಣ್ಣ ಸಾಧನೆಯಲ್ಲ. ಮಾಜಿ ಪ್ರಧಾನಿ ದಿವಂಗತ ಪಂಡಿತ್​ ಜವಾಹರ್​ ಲಾಲ್​ ನೆಹರೂ ಅವರ ಬಳಿಕ ಮೂರನೇ ಸಲ ಪಿಎಂ ಆಗುತ್ತಿದ್ದಾರೆ. ಇದು ಶ್ಲಾಘನೀಯ ವಿಚಾರ ಎಂದು ಬಣ್ಣಿಸಿದರು. ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಆಡಳಿತ ಹೇಗೆ ಇರಬಹುದು…

Read More

ಬಿಗ್ ಬಾಸ್ ನಲ್ಲಿ ಪ್ರೀತಿಸಿ ಬಳಿಕ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಜೋಡಿಗಳು ಶಾಕ್ ನೀಡಿದ್ದಾರೆ. ಇದೀಗ ಚಂದನ್, ನಿವೇದಿತಾ ಡಿವೋರ್ಸ್ ಬಗ್ಗೆ ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿದ್ದಾರೆ. ಚಂದನ್ ಮತ್ತು ನಿವೇದಿತಾ ಕಾನೂನು ಬದ್ಧವಾಗಿ ಡಿವೋರ್ಸ್ ಪಡೆದ ಬೆನ್ನಲ್ಲೇ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ. ಲೈಫ್ ಇಸ್ ನಾಟ್ ಈಸಿ ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರುಬ್ಯೂಟ್ ಮಾಡದೇ ಹೋದರೆ ನಾವೇನು ಕಾಮೆಂಟ್ ಮಾಡೋಕೆ ಹೋಗಬಾರದು ಎಂದು ನಟಿ ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ ಚಂದನ್ ಹಾಗೂ ನಿವೇದಿತಾ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಸಾಕಷ್ಟು ಸಾಕಷ್ಟು ವಿವಚಾದ ಹುಟ್ಟಿಹಾಕಿತ್ತು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾದ ನಾಲ್ಕೇ…

Read More

ಕಾಣೆಯಾಗಿದ್ದ ಮಹಿಳೆಯ ಶವ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ದಕ್ಷಿಣದ ಪ್ರಾಂತ್ಯವಾದ ಸುಲಾವೇಸಿ ಬಳಿಯ ಕಾಲಾಪಾಂಗ್ ಎಂಬಲ್ಲಿ ನಡೆದಿದೆ. ದೈತ್ಯ ಹೆಬ್ಬಾವೊಂದು ಫರಿದಾ ಎನ್ನುವ 49 ವರ್ಷದ ಮಹಿಳೆಯನ್ನು ಜೀವಂತವಾಗಿ ನುಂಗಿ ಹಾಕಿದೆ. ಈ ಬಗ್ಗೆ ಮಹಿಳೆಯ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಇದೀಗ ಮಹಿಳೆಯ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಇಂಡೋನೇಷ್ಯಾದ ಮಹಿಳೆ ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಗ್ರಾಮದ ಅರಣ್ಯದಲ್ಲಿ 16 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಹೆಬ್ಬಾವು ಮುಂದೆ ಹೋಗದೇ ತೆವಳುವುದನ್ನು ಕಂಡು ಅರಣ್ಯ ಇಲಾಖೆಯವರು ಹೆಬ್ಬಾವಿನ ಹೊಟ್ಟೆ ಸೀಳಿದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಹೆಬ್ಬಾವುಗಳು ಮನುಷ್ಯರನ್ನು ಜೀವಂತವಾಗಿ ನುಂಗುವ ಘಟನೆ ತೀರಾ ಅಪರೂಪವಾದರೂ ಇಂಡೋನೇಷ್ಯಾದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಲೆ ಇರುತ್ತದೆ.

Read More

ಲಿಬಿಯಾ ಕರಾವಳಿಯ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿದ್ದ 160ಕ್ಕೂ ಅಧಿಕ ವಲಸಿಗರನ್ನು ರಕ್ಷಿಸಲಾಗಿದೆ. ಆದರೆ 11 ವಲಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ಪತ್ತೆಹಚ್ಚಿರುವುದಾಗಿ ಸ್ವಯಂಸೇವಾ ಸಂಸ್ಥೆ `ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ. ಲಿಬಿಯಾ ಕಡಲ ತೀರದ ಬಳಿ ಮುಳುಗುತ್ತಿದ್ದ ದೋಣಿಯಲ್ಲಿದ್ದ 146 ಮಂದಿಯನ್ನು ರಕ್ಷಣಾ ಕಾರ್ಯಕರ್ತರ ದೋಣಿ ರಕ್ಷಿಸಿದೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಉಳಿದ 20 ವಲಸಿಗರನ್ನು ರಕ್ಷಿಸಿ ದಡ ಸೇರಿಸಲಾಗಿದೆ. ಈ ಮಧ್ಯೆ, ರಕ್ಷಣಾ ಕಾರ್ಯಕ್ಕೆ ಬಳಸಲಾಗಿದ್ದ ಹೆಲಿಕಾಪ್ಟರ್ ಸಮುದ್ರದಲ್ಲಿ ತೇಲುತ್ತಿದ್ದ 11 ಮೃತದೇಹಗಳನ್ನು ಪತ್ತೆಹಚ್ಚಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೃತದೇಹಗಳನ್ನು ದಡಕ್ಕೆ ತರಲಾಗಿದೆ ಎಂದು ತಿಳಿಸಿದೆ.

Read More