Author: Author AIN

ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ಸಂಸಾರದ ಸಮಸ್ಯೆ ಬೀದಿಗೆ ಬೀದಿದೆ. ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಚೇದನಕ್ಕೆ ಮುಂದಾಗಿದ್ದಾರೆ.  2019ರಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ ಈ ಜೋಡಿ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಯುವ ರಾಜ್‌ಕುಮಾರ್ ಜೂನ್ 6ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಶ್ರೀದೇವಿ ಬೈರಪ್ಪ ವಿಚ್ಛೇದನದ ಅರ್ಜಿಗೆ ಪ್ರತಿಕ್ರಿಯೆ ನೀಡಲ್ಲ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಶ್ರೀದೇವಿ ಬೈರಪ್ಪ ತಮ್ಮ ವಕೀಲ ಮುಖಾಂತರ ಡಿವೋರ್ಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರು ಪ್ರತಿಕ್ರಿಯೆ ನೀಡಿದ ರಿಪ್ಲೈ ನೋಟೀಸ್ ವೈರಲ್ ಆಗಿದೆ. ಇದರಲ್ಲಿ ಯುವರಾಜ್ ಕುಮಾರ್ ಪರ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ನಿಮ್ಮ ಕ್ಲೈಂಟ್‌ನ (ಯುವ ರಾಜ್‌ಕುಮಾರ್) ವರ್ತನೆಯಿಂದ ನಮ್ಮ ಕಕ್ಷಿದಾರದಾರು (ಶ್ರೀದೇವಿ ಬೈರಪ್ಪ) ಆಘಾತ ಹಾಗೂ ಸಂಕಟವನ್ನು ಅನುಭವಿಸಿದ್ದಾರೆ. ಇದು ತೀವ್ರ ಕಿರುಕುಳ ಮತ್ತು ಆಘಾತವನ್ನು ಉಂಟುಮಾಡಿದೆ. ನಮ್ಮ ಕಕ್ಷಿದಾರರು ನಿಮ್ಮ ಕ್ಲೈಂಟ್‌ನಿಂದ ಉಂಟಾದ ಎಲ್ಲಾ ಕಿರುಕುಳವನ್ನು…

Read More

ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಮೊದಲ ಭಾರಿಗೆ ದಂಪತಿಯೊಂದು ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದೆ. ಈ ಸುದ್ದಿ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಂದೆರಗಿದೆ. ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಚೇದನದ ಕುರಿತು ಸಾಕಷ್ಟು ಚರ್ಚೆಗಳು ಕೇಳಿ ಬರ್ತಿದೆ. ಯುವ ಬದುಕಿನಲ್ಲಿ ನಟಿ ಸಪ್ತಮಿ ಗೌಡ ಎಂಟ್ರಿಕೊಟ್ಟಿದ್ದೆ ಈ ಇಬ್ಬರು ದೂರವಾಗೋಕೆ ಕಾರಣ ಎನ್ನಲಾಗುತ್ತಿದ್ದು ಈ ಬಗ್ಗೆ ಯುವ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ. ಶ್ರೀದೇವಿ ಬೈರಪ್ಪ ತಮ್ಮ ವಕೀಲರ ಮೂಲಕ ರಿಪ್ಲೈ ನೋಟಿಸ್‌ ನೀಡಿದ್ದರು. ಇದರಲ್ಲಿ ‘ಯುವ’ ಜೊತೆ ನಟಿಸಿದ ಸಪ್ತಮಿ ಗೌಡ ಹೆಸರನ್ನು ಉಲ್ಲೇಖ ಮಾಡಲಾಗಿದೆ. ತಮ್ಮ ಪತಿ ಯುವ ರಾಜ್‌ಕುಮಾರ್ ತಮ್ಮ ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ಇದು ಮತ್ತಷ್ಟು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಯುವ ರಾಜ್‌ಕುಮಾರ್ ಮೇಲೆ ಶ್ರೀದೇವಿ ಬೈರಪ್ಪ ಹಲವು ಆರೋಪಗಳನ್ನು ಮಾಡಿದ್ದಾರೆ. ಮಾನಸಿಕ ಹಿಂಸೆ, ಆರ್ಥಿಕ ನಿರ್ಬಂಧ, ಸಹ ನಟಿ ಸಪ್ತಮಿ ಗೌಡ ಜೊತೆ…

Read More

ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಶುಭಾಶಯಗಳನ್ನು ಕೋರಿದ್ದಾರೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೆರೆಯ ರಾಷ್ಟ್ರ ಪಾಕಿಸ್ತಾನವನ್ನು ಹೊರತುಪಡಿಸಿ ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ದೀವ್ಸ್‌ನ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಸಮಾರಂಭಕ್ಕೆ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್, ಭೂತಾನ್ ಪ್ರಧಾನಿ ಶೆರಿಂಗ್ ತೊಬ್ಗೆ, ಬಾಂಗ್ಲಾದೇಶದ ಅಧ್ಯಕ್ಷೆ ಶೇಖ್ ಹಸೀನಾ, ಸೆಷೆಲ್ಸ್ ಉಪಾಧ್ಯಕ್ಷ ಅಹಮದ್ ಆಫಿಫ್ ಅವರೂ ಕಾರ್ಯಕ್ರಮದಲ್ಲಿ…

Read More

ಭಾನುವಾರ ಸಂಜೆ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿನಡೆಸಿದ್ದಾರೆ. ಇದರಿಂದ ಬಸ್ ಕಣಿವೆಗೆ ಉರುಳಿಬಿದ್ದು 9 ಜನ ಸಾವನ್ನಪ್ಪಿದ್ದರು. ಘಟನೆಯ ಕುರಿತು ನೆದರ್‌ಲ್ಯಾಂಡ್ಸ್‌ನ ಬಲಪಂಥೀಯ ಪಿವಿವಿ ಫ್ರೀಡಂ ಪಾರ್ಟಿಯ ಮುಖ್ಯಸ್ಥ ಗೀರ್ಟ್ ವೈಲ್ಡರ್ಸ್ ಪ್ರತಿಕ್ರಿಯಿಸಿದ್ದಾರೆ. ‘ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಹಿಂದೂಗಳನ್ನು ಕೊಲ್ಲಲು ಬಿಡಬೇಡಿ. ನಿಮ್ಮ ಜನರನ್ನು ಭಾರತವನ್ನು ರಕ್ಷಿಸಿಕೊಳ್ಳಿ!’ ಎಂದು ವೈಲ್ಡರ್ಸ್ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈಲ್ಡರ್ಸ್ ಹಲವಾರು ಸಂದರ್ಭಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ವಿಷಯವನ್ನು ಎತ್ತಿ ತೋರಿಸಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡರಲ್ಲೂ ಹಿಂದೂಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ. ‘ನಾನು ಪಾಕಿಸ್ತಾನ ಮತ್ತು ಅರಬ್ ಇಮಾಮ್‌ಗಳಿಂದ ಹಲವಾರು ಫತ್ವಾಗಳನ್ನು ಸ್ವೀಕರಿಸಿದ್ದೇನೆ, ಆದರೆ ನಾನು ಹೆದರುವುದಿಲ್ಲ’ ಎಂದು ಗೀರ್ಟ್ ವೈಲ್ಡರ್ಸ್ ಕಳೆದ ವರ್ಷ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ…

Read More

ಇದೇ ಮೊದಲ ಭಾರಿಗೆ ದೊಡ್ಮನೆ ಕುಟುಂಬದ ದಂಪತಿ ಡಿವೋರ್ಸ್ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಡಿವೋರ್ಸ್ ಕುರಿತು ಶ್ರೀದೇವಿ ಪ್ರತಿಕ್ರಿಯೆ ನೀಡಿದ್ದಾರೆ. ವಿಷಯ ಏನೆಂದು ಚಿತ್ರರಂಗದ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್ ಗೆ ಉತ್ತರಿಸಿದ್ದೇನೆ.  ವಿಚ್ಚೇದನದ ಅರ್ಜಿಯು ನನ್ನ ಕೈಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ನಾನು ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಮಾತನಾಡುವ ಮಾನಸೀಕ ಪರಿಸ್ಥಿತಿಯಲ್ಲಿ ಇಲ್ಲ ಎಂದು ಶ್ರೀದೇವಿ ಹೇಳಿದ್ದಾರೆ. 2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದೆ. ಸಾರ್ವಜನಿಕವಾಗಿ ಈ ವಿಷಯ ಬಹಿರಂಗ ಆಗದೇ ಇದ್ದರೂ ಕೂಡ ಆಪ್ತ ವಲಯದಲ್ಲಿ ಗುಸುಗುಸು ಕೇಳಿಬರುತ್ತಿತ್ತು. ಕಡೆಗೂ ಸಂಸಾರದ ಬಿರುಕು ಬಹಿರಂಗವಾಗಿದ್ದು ಇದೀಗ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಮನಸ್ತಾಪ ಹೆಚ್ಚಿದ ಬಳಿಕ ಶ್ರೀದೇವಿ…

Read More

ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಇಂದು ಶಾಕಿಂಗ್ ನ್ಯೂಸ್ ಕೇಳಿ ಬಂದಿದೆ. ಇದೇ ಮೊದಲ ಭಾರಿಗೆ ಡಾ.ರಾಜ್ ಕುಮಾರ್ ಫ್ಯಾಮಿಲಿಯಿಂದ ಜೋಡಿಯೊಂದು ದೂರ ದೂರವಾಗೋ ನಿರ್ಧಾರ ಮಾಡಿದ್ದಾರೆ. ಯೆಸ್.ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮದುವೆಯಾದ ನಾಲ್ಕೇ ವರ್ಷಕ್ಕೆ ಯುವ ಹಾಗೂ ಶ್ರೀದೇವಿ ದೂರ ದೂರವಾಗೋ ನಿರ್ಧಾರ ಮಾಡಿದ್ದಾರೆ. ಡಾ ರಾಜ್‌ಕುಮಾರ್ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್‌ಕುಮಾರ್ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಕಳೆದ 6 ತಿಂಗಳಿನಿಂದ ಯುವ ಹಾಗೂ ಶ್ರೀದೇವಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಶ್ರೀದೇವಿ ಭೈರಪ್ಪ ಅವರು ಮೂಲತಃ ಮೈಸೂರಿನವರು. ಅಲ್ಲೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಮುಗಿಸಿ, ಡಾ. ರಾಜ್ ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ದರು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್…

Read More

ಸ್ಯಾಂಡಲ್ ವುಡ್ ಸಿನಿ ಅಭಿಮಾನಿಗಳಿಗೆ ಒಂದರ ಮೇಲೊಂದರಂತೆ ಶಾಕಿಂಗ್ ಸುದ್ದಿಗಳು ಕೇಳಿ ಬರ್ತಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್ ವಿಷಯ ಜೀರ್ಣಿಸಿಕೊಳ್ಳುವ ಮೊದಲೇ ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಮತ್ತೊಂಡು ಡಿವೋರ್ಸ್ ಸುದ್ದಿ ಕೇಳಿ ಬಂದಿದೆ. ರಾಘವೇಂದ್ರ ರಾಜ್​ಕುಮಾರ್​ ಅವರ ಮಗ ಯುವ ರಾಜ್​ಕುಮಾರ್ ಸಂಸಾರದಲ್ಲಿ ಬಿರುಕು ಮೂಡಿದೆ. ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಬೇಕು ಎಂದು ಯುವ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಈ ದಂತಿಯ ನಡುವೆ ಮನಸ್ತಾಪ ಮೂಡಲು ಕಾರಣ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.  ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗಾಸಿಪ್​ ಪ್ರಕಾರ ಪ್ರಸಿದ್ಧ ನಟಿಯ ಜೊತೆ ಯುವ ರಾಜ್​ಕುಮಾರ್​ ಆಪ್ತತೆ ಹೆಚ್ಚಿಸಿಕೊಂಡಿದ್ದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. 2019ರಲ್ಲಿ ಯುವ ರಾಜ್​ಕುಮಾರ್​ ಮತ್ತು ಶ್ರೀದೇವಿ ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದೆ. ಸಾರ್ವಜನಿಕವಾಗಿ ಈ ವಿಷಯ ಬಹಿರಂಗ ಆಗದೇ ಇದ್ದರೂ ಕೂಡ ಆಪ್ತ ವಲಯದಲ್ಲಿ ಗುಸುಗುಸು ಕೇಳಿಬರುತ್ತಿತ್ತು. ಕಡೆಗೂ…

Read More

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದೆ. ನಿವೇದಿತಾ ಜೀವನದಲ್ಲಿ ಮೂರನೇ ವ್ಯಕ್ತಿ ಬಂದ ಕಾರಣಕ್ಕೆ ಇಬ್ಬರು ದೂರ ದೂರವಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಬೆನ್ನಲ್ಲೇ ಚಂದನ್ ಹಾಗೂ ನಿವೇದಿತಾ ಗೌಡ ಸುದ್ದಿಗೋಷ್ಠಿ ನಡೆಸಿ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ. ಯಾಕೆಂದರೆ ಆ ವ್ಯಕ್ತಿಯ ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದು. ಅವರ ಮನೆಗೆ ಹೋಗುವುದು ನನಗೂ ಖುಷಿ ಆಗುತ್ತಿತ್ತು. ಅವರ ಕಾರ್ಯಕ್ರಮಕ್ಕೆ ನಾವಿಬ್ಬರು ಅನೇಕ ಬಾರಿ ಹೋಗಿದ್ದೆವು. ಆ ವ್ಯಕ್ತಿಯ ಜೊತೆ ನಿವೇದಿತಾ ಗೌಡ ಅವರ ಹೆಸರು ಸೇರಿಸುವಂತಹ ವಿಕೃತ ಮನಸ್ಥಿತಿ ನಮ್ಮ ಕನ್ನಡಿಗರಾದ್ದಾಗಿರಬಾರದು’ ಎಂದು ಚಂದನ್​ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ನಿವೇದಿತಾ ಗೌಡ ಕೂಡ ಮಾತನಾಡಿದ್ದಾರೆ. ‘ಆ…

Read More

ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡ ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ಅವರು ‘ನೇಪಾಳ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಅಭಿನಂದಿಸಿದ ಬಳಿಕ ಅವರು ಕೆಲ ಸಮಯ ಮೋದಿ ಜೊತೆ ಮಾತುಕತೆ ನಡೆಸಿದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನೇಪಾಳ-ಭಾರತ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಕುರಿತು ನಾವು ಚರ್ಚಿಸಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದೊಂದಿಗಿನ ನಮ್ಮ ಬಹುಮುಖಿ ಸಂಬಂಧಗಳು ಏಳಿಗೆಯಾಗುತ್ತವೆ ಎಂಬ ವಿಶ್ವಾಸ ನನಗಿದೆ’ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು, ಬಾಂಗ್ಲಾ ಪ್ರಧಾನಿ ಶೇಖ್‌ ಹಸಿನಾ, ಬಾಲಿವುಡ್‌ ತಾರೆಯರು, ಉದ್ಯಮಿಗಳು ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿ ಮೋದಿಗೆ ಶುಭ ಹಾರೈಸಿದರು.

Read More

ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ದೇಶ, ವಿದೇಶಗಳಿಂದ ಶುಭ ಹಾರೈಕೆಗಳು ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿದೆ. ಈ ಮಧ್ಯೆ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೂಡ ಮೋದಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ರಿಷಬ್ ಟ್ವೀಟ್ ಮಾಡಿದ್ದಾರೆ. ‘3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಅಭಿವೃದ್ಧಿ, ಶಿಕ್ಷಣ ಮತ್ತು ರಾಷ್ಟ್ರೀಯ ಸುರಕ್ಷತೆಯ ಕಡೆಗೆ ನಿಮ್ಮ ಸಮರ್ಪಣೆಯನ್ನು ಗೌರವಿಸುತ್ತೇವೆ’ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ಜೂನ್ 9ರಂದು ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸತತವಾಗಿ ಮೂರನೇ ಭಾರಿಗೆ ಪ್ರಧಾನಿಯಾದ ಗೌರವಕ್ಕೆ ಮೋದಿ ಪಾತ್ರರಾಗಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಈ ಕಾರ್ಯಕ್ರಮ ನಡೆದಿದೆ ಅನೇಕ ಸೆಲೆಬ್ರಿಟಿಗಳು, ದೇಶ, ವಿದೇಶದ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿ ಮೋದಿಗೆ ಶುಭ ಹಾರೈಸಿದ್ದಾರೆ.

Read More