Author: Author AIN

ದರ್ಶನ್ ಹಾಗೂ ಸಂಗಡಿಗರಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಸಿಕ್ಕಿದೆ. ರಿಪೋರ್ಟ್ ನಲ್ಲಿ ರೇಣುಕಾಸ್ವಾಮಿ ಸಾಕಷ್ಟು ಹಿಂಸೆಯಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಕೊಲೆ ಆಗಿರುವ ರೇಣುಕಾಸ್ವಾಮಿ ದೇಹದ ಯಾವ್ಯಾವ ಭಾಗಗಳಲ್ಲಿ ರಕ್ತ ಬಂದಿದೆ. ದೇಹದಲ್ಲಿ ಎಲ್ಲೆಲ್ಲಿ ಗಾಯಗಳು ಆಗಿದ್ದವು? ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯಾವ್ಯಾವ ವಸ್ತುಗಳನ್ನು ಬಳಸಿದ್ದರು ಎನ್ನುವುದು ಗೊತ್ತಾಗಿದೆ. ಮರ್ಮಾಂಗದ ಮೇಲೆ ಹಲ್ಲೆ ಮಾಡಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದ್ದು ಆ ಭಾಗದಲ್ಲಿ ರಕ್ತ ಸೋರಿಕೆಯಾಗಿದೆ. ಮರದ ಪೀಸ್​​ನಿಂದ ಹೊಡೆದಿದ್ದಕ್ಕೆ ಹೊಟ್ಟೆಯ ಭಾಗದಲ್ಲೂ ರಕ್ತ ಚಿಮ್ಮಿದೆ. ತಲೆಗೆ ಹೊಡೆದಿದ್ದಾರೆ ಆದರೆ ರಕ್ತ ಸೋರಿಕೆಯಾಗಿಲ್ಲ. ಬೆನ್ನಿಗೆ, ಕೈ, ಕಾಲುಗಳಲ್ಲಿ, ಎದೆ ಭಾಗದಲ್ಲೂ ರಕ್ತ ಬಂದಿದೆ. ದೇಹಕ್ಕೆ ಆಘಾತವಾಗಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ. ಹಲ್ಲೆ ಮಾಡಿ ಹತ್ಯೆ ಮಾಡುವಾಗ ಮರದ ಪೀಸ್, ಬೆಲ್ಟ್ ಅನ್ನು ಬಳಸಿದ್ದಾರೆ. ದೇಹದಲ್ಲಿ 15 ಕಡೆಗಳಲ್ಲಿ ಗಂಭೀರವಾದ ಗಾಯಗಳಾಗಿವೆ. ಇನ್ನು ಕೊಲೆ ಮಾಡಿ ಮೃತದೇಹ…

Read More

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಹತ್ಯೆ ಮಾಡಿದೆ. ನಿನ್ನೆ ಕೋರ್ಟ್ ದರ್ಶನ್ ಹಾಗೂ ಸಹಚರರನ್ನು ಪೊಲೀಸ್ ಕಸ್ಟಡಿಗೆ ನೀಡಿದ ಬಳಿಕ ಸಾಕಷ್ಟು ವಿಚಾರಣೆ ನಡೆಸಲಾಯಿತು. ಇದಾದ ಮೇಲೆ ರೇಣುಕಾಸ್ವಾಮಿ ಅವರ ಕೊಲೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಾಜರು ಮಾಡಿದ್ದಾರೆ. ಆರ್‌.ಆರ್‌ ನಗರದ ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕೊಲೆ ಕೇಸ್‌ನಲ್ಲಿ ಸಾಕ್ಷಿ ಕಲೆಹಾಕುತ್ತಿರುವ ಪೊಲೀಸರು ಇದೀಗ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಅನ್ನು ಪಟ್ಟಣಗೆರೆಯ ಶೆಡ್‌ಗೆ ಕರೆದುಕೊಂಡು ಹೋಗಿ ಸ್ಥಳದ ಮಹಾಜರು ನಡೆಸಿದ್ದಾರೆ. ಪಟ್ಟಣಗೆರೆಯ ಶೆಡ್‌ನಲ್ಲಿ ನಟ ದರ್ಶನ್, ಎ1 ಪವಿತ್ರಾ ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಸ್ಥಳ ಮಹಜರು ಮಾಡುವ ವೇಳೆ ನಟ ದರ್ಶನ್ ಅವರು ಕೈ ಕಟ್ಟಿಕೊಂಡು ನಿಂತಿದ್ದರು. ದರ್ಶನ್ ಅವರ ಪಕ್ಕದಲ್ಲೇ ಪವಿತ್ರಾ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ​ ನಟ ದರ್ಶನ್ ಬಂಧನಕೊಳಗಾಗಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಕೊಲೆಯಲ್ಲಿ ದರ್ಶನ್​ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಕೊಲೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್​ ಅವರ ಈ ನಡೆಯಿಂದ ಕಂಗಾಲಾಗಿರುವ ಪತ್ನಿ ವಿಜಯಲಕ್ಷ್ಮೀ, ಇನ್​ಸ್ಟಾಗ್ರಾಂನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿ, ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. ದರ್ಶನ್​ಗೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ದರ್ಶನ್​ ಅವರ ಕುಟುಂಬ ಸಹ ನಟನಿಂದ ಪ್ರಕರಣದಿಂದ ಅಂತರ ಕಾಯ್ದುಕೊಂಡಿದೆ. ದರ್ಶನ್​ ಅವರ ತಾಯಿ ಮೀನಾ ತೂಗುದೀಪ್​ ಮತ್ತು ಸಹೋದರ ದಿನಕರ್​ ತೂಗುದೀಪ್​ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿರುವ ಮೀನಾ ತೂಗುದೀಪ್​, ದರ್ಶನ್​ ಬಗ್ಗೆ ಮಾತನಾಡಲು ಒಪ್ಪುತ್ತಿಲ್ಲ. ದಿನಕರ್​ ಕೂಡ ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ದರ್ಶನ್​ ಅವರು ಈಗಾಗಲೇ ತಾಯಿ…

Read More

ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ರನ್ನು ನೋಡಲು ಪೊಲೀಸ್‌ ಠಾಣೆ ಮುಂದೆ ಜಮಾಯಿಸಿರುವ ಅಭಿಮಾನಿಗಳನ್ನು ಓಡಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್ ಹಾಗೂ ಫೋಟೋ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಿಸಿ ಕೊಲೆ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಅವರನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ನೆಚ್ಚಿನ ನಟನನ್ನು ನೋಡಲು ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಜರಾಗಿದ್ದಾರೆ. ಕೊಲೆ ಪ್ರಕರಣ ಸಂಬಂಧ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ನೆರೆದಿರುವುದರಿಂದ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಸ್ಥಳದಿಂದ ಕಾಲ್ಕಿತ್ತೀದ್ದಾರೆ.

Read More

ಕನ್ನಡ ಚಿತ್ರರಂಗದ ನಟ ವಿನೋದ್ ರಾಜ್‌ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನುಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ವಿನೋದ್ ರಾಜ್ ಅವರನ್ನು ದಾಖಲಿಸಲಾಗಿದೆ. 11 ವರ್ಷಗಳ ಹಿಂದೆ ವಿನೋದ್ ರಾಜ್ ಹಾರ್ಟ್ ಆಪರೇಷನ್‌ಗೆ ಒಳಗಾಗಿದ್ದರು. ಈ ವೇಳೆ, ಅವರ ಹಾರ್ಟ್‌ಗೆ ಸ್ಟಂಟ್ ಅಳವಡಿಸಲಾಗಿತ್ತು. ಇದೀಗ ಅದೇ ಸ್ಟಂಟ್‌ನಿಂದ ಕರುಳಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಸದ್ಯ ವಿನೋದ್ ರಾಜ್ ಗೆ ಆಪರೇಷನ್ ಮಾಡಲಾಗಿದ್ದು, ಇನ್ನೇರಡು ದಿನಗಲ್ಲಿ ವಿನೋದ್ ರಾಜ್ ಡಿಸ್ಚಾರ್ಜ್ ಆಗಲಿದ್ದಾರೆ. ಹಿರಿಯ ನಟಿ ಲೀಲಾವತಿ ಪುತ್ರ, ನಟ ವಿನೋದ್‌ ರಾಜ್‌ ತಾಯಿ ಅಗಲಿಕೆ ನಂತರ ಏಕಾಂಗಿಯಾಗಿ ವಾಸವಿದ್ದರು. ಇದೀಗ ವಿನೋದ್‌ ರಾಜ್‌ ದಿಢೀರ್‌ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ ಒಟ್ಟು 13ಮಂದಿಯನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.ಇದೀಗ ಮಗನನ್ನು ಕಳೆದುಕೊಂಡ ತಾಯಿ ರತ್ನಪ್ರಭ ರೋಧನೆ ಮುಗಿಲು ಮುಟ್ಟಿದ್ದು ದರ್ಶನ್‍ನನ್ನು ಸಿನಿಮಾ ಇಂಡಸ್ಟ್ರಿಯಿಂದಲೇ ಬ್ಯಾನ್ ಮಾಡಬೇಕು, ದರ್ಶನ್ ನಟನೆಯ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಬಾಸ್ ಎಂದು ಖ್ಯಾತಿ ಪಡೆದ ದರ್ಶನ್ ಖಳನಟ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೊಡ್ಡ ಮನುಷ್ಯನ ಗುಣ ದರ್ಶನಗಿಲ್ಲ, ಅವನು ಕಳ್ಳ. ಸಿನಿಮಾ ಇಂಡಸ್ಟ್ರಿಯಿಂದಲೇ ದರ್ಶನ್ ಬ್ಯಾನ್ ಮಾಡಬೇಕು. ದರ್ಶನ್ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡಬಾರದು. ಡಿ ಬಾಸ್ ಎನ್ನುವ ಅಭಿಮಾನಿಗಳ ಇವನ ಹೇಯ ಕೃತ್ಯವನ್ನು ನೋಡಿ ಕಲಿಯಲಿ. ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೆ ಆಗಬೇಕು. ಅವರ ಕುಟುಂಬವೇ ಸರ್ವನಾಶ ಆಗಬೇಕು ಎಂದು ದರ್ಶನ್ ವಿರುದ್ದ ರೇಣುಕಾಸ್ವಾಮಿ ತಾಯಿ ಹಿಡಿ ಶಾಪ ಹಾಕಿದರು. ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂದು ತೋರಿಸಿಕೊಂಡಿಲ್ಲ.…

Read More

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವವರನ್ನು ದರ್ಶನ್ ಎಂಡ್ ಗ್ಯಾಂಗ್ ಕೊಲೆ ಮಾಡಿದೆ. ಇದೀಗ ನಟಿ ಪವಿತ್ರಾ ಗೌಡ ಯಾರು, ಆಕೆಯ ಹಿನ್ನೆಲೆ ಏನು, ಯಾವ್ಯಾವ ಸಿನಿಮಾಗಳನ್ನ ಮಾಡಿದ್ದಾಳೆ ಎಂದು ಪವಿತ್ರಾ ಗೌಡ ಕುರಿತಾಗಿ ಸಾಕಷ್ಟು ಮಂದಿ ಗೂಗಲ್ ಸರ್ಚ್ ಮಾಡ್ತಿದ್ದಾರೆ. ಅಂದ ಹಾಗೆ ಪವಿತ್ರಾ ಗೌಡ ನಟಿಯಾಗಬೇಕು ಎಂದು ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದರು. ಆದರೆ ಈಕೆ ಹೆಚ್ಚು ಸುದ್ದಿಯಾಗಿದ್ದು ಮಾತ್ರ ನಟ ದರ್ಶನ್ ಜೊತೆಗಿನ ಸಂಬಂಧದಿಂದಲೇ. ಅಸಲಿಗೆ ಪವಿತ್ರಾ ಗೌಡ ಯಾರು? ಈ ಕೊಲೆ ಪ್ರಕರಣ ಆರೋಪಿ 1 ಪವಿತ್ರಾ ಗೌಡ ಅವರ ಹಿನ್ನೆಲೆ ಏನು? ದರ್ಶನ್ ಗೆ ಪವಿತ್ರಾ ಗೌಡ ಹೇಗೆ ಪರಿಚಯ? ಪವಿತ್ರಗೌಡ ಈ ಮೊದಲೇ ಮದುವೆ ಆಗಿತ್ತಾ? ಕಳೆದೆರಡು ವರ್ಷದಿಂದ ದರ್ಶನ್ ಜೊತೆ ಕಾಣಿಸಿಕೊಳ್ತಿರೋ ಪವಿತ್ರಾಗೌಡ ಯಾರು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಜಗ್ಗುದಾದಾ ಸಿನಿಮಾ ಮಾಡುವ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಿಚಯವಾಗಿದೆ. ದರ್ಶನ್…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ ಹಾಗೂ ಇತರೇ ಆರೋಪಿಗಳಿಗೆ ಬಿರಿಯಾನಿ ನೀಡಿರುವ ಕುರಿತ ವರದಿಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ನೀಡಿರುವುದು ಎಷ್ಟು ಸರಿ ಎಂದು ಸಾಕಷ್ಟು ಮಂದಿ ಪ್ರಶ್ನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತಂತೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ಆರೋಪಿಗಳಿಗೆ ಯಾವ ಊಟ ನೀಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಆರೋಪಿಗಳನ್ನು ಊಟ ಇಲ್ಲದೆ ಸಾಯಿಸುವುದಕ್ಕೆ ಆಗಲ್ಲ ಅಲ್ವಾ? ನಿಯಮಗಳಂತೆ ಪೊಲೀಸರು ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ? ಚಿಕನ್ ತರಿಸಿಕೊಟ್ರಾ ಅಂತ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು‌ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ಅರೆಸ್ಟ್ ಮಾಡಿದ್ದಾರೆ, ಪ್ರಕರಣದ ತನಿಖೆ ಮಾಡ್ತಿದ್ದಾರೆ. ತನಿಖೆಯಲ್ಲಿ ಏನ್ ವಿಚಾರ ಬರುತ್ತದೆ ಅದರ ಮೇಲೆ ಪೊಲೀಸರು ಕ್ರಮ ತಗೊಳ್ತಾರೆ.…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಿರುವುದು ಇಡೀ ಕರ್ನಾಟಕದಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ದರ್ಶನ್ ಈ ರೀತಿ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ನಟ ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ‘ಸರ್ವ ಆತ್ಮಾನೇನ ಬ್ರಹ್ಮ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಇದರ ಅರ್ಥವನ್ನು ಅವರು ವಿವರಿಸಿದ್ದಾರೆ. ‘ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ’ ಎಂದು ಜಗ್ಗೇಶ್ ಹೇಳಿದ್ದಾರೆ. ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಕರ್ಮ ಜೀವನವನ್ನು ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕೂ ತತ್ತಕ್ಷಣ ಫಲಿತಾಂಶ ಉಂಟು. ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ’ ಎಂದು ಅವರು ಬರೆದಿದ್ದಾರೆ. ‘ಮದಕ್ಕೆ ಕಾರುಣ್ಯದ ಅರಿವಿಲ್ಲಾ’ ಎನ್ನುವ ವಾಕ್ಯವನ್ನೂ ಜಗ್ಗೇಶ್ ಅವರು ಬಳಸಿದ್ದಾರೆ. ಅಂದರೆ ಮದ…

Read More

ಚಾಟ್ಜಿಪಿಟಿ ತಯಾರಕ ಓಪನ್‌ ಎಐ ಮತ್ತು ಅದರ ಸಿಇಒ ಸ್ಯಾಮ್ ಆಲ್ಟ್ಮನ್ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ ಅಪ್ ನ ಮೂಲ ಧ್ಯೇಯವನ್ನು ಮಾನವೀಯತೆಯ ಪ್ರಯೋಜನಕ್ಕಾಗಿ ತ್ಯಜಿಸಿದ್ದಾರೆ ಮತ್ತು ಲಾಭಕ್ಕಾಗಿ ಅಲ್ಲ ಎಂದು ಆರೋಪಿಸಿ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಸಿದ್ದರು. ಇದೀಗ ಮಸ್ಕ್ ಮೊಕದ್ದಮೆಯನ್ನು ಹಿಂಪಡೆದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಸುಪೀರಿಯರ್ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಪ್ರಕಾರ, ಮಸ್ಕ್ ಅವರ ವಕೀಲರು ಮೂಲತಃ ಫೆಬ್ರವರಿಯಲ್ಲಿ ದಾಖಲಾದ ಮೊಕದ್ದಮೆಯನ್ನು ಯಾವುದೇ ಕಾರಣವನ್ನು ನೀಡದೆ ವಜಾಗೊಳಿಸುವಂತೆ ನ್ಯಾಯಾಲಯವನ್ನು ಕೋರಿದರು. ಬುಧವಾರ ನಿಗದಿಯಾಗಿದ್ದ ವಿಚಾರಣೆಯಲ್ಲಿ ಮೊಕದ್ದಮೆಯನ್ನು ವಜಾಗೊಳಿಸುವ ಓಪನ್‌ಎಐನ ಪ್ರಯತ್ನವನ್ನು ಆಲಿಸಲು ಅಲ್ಲಿನ ಉನ್ನತ ನ್ಯಾಯಾಲಯದ ನ್ಯಾಯಾಧೀಶರು ಸಿದ್ಧರಾಗಿದ್ದರು. ಕೋರ್ಟ್ ಫೈಲಿಂಗ್ನಲ್ಲಿ ಎಲೋನ್ ಮಸ್ಕ್ ಅವರ ಹೇಳಿಕೆಗಳು ‘ಅಸಂಬದ್ಧ’ ಎಂದು ಓಪನ್‌ಎಐ ಹೇಳಿದೆ ಓಪನ್ ಎಐ ಮತ್ತು ಮಸ್ಕ್ ಅವರ ವಕೀಲರು ಮೊಕದ್ದಮೆಯನ್ನು ವಜಾಗೊಳಿಸುವ ಬಗ್ಗೆ ಪ್ರತಿಕ್ರಿಯೆಗಾಗಿ ಮಾಡಿದ ಮನವಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Read More