Author: Author AIN

ಕುವೈತ್‌ನ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹಲವರು ಭಾರತೀಯರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕುವೈತ್‌ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಗ್ನಿ ದುರಂತ ಸಂಭವಿಸಿದ ಕಟ್ಟಡದಲ್ಲಿ ಒಂದೇ ಕಂಪನಿಯ 160 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ. ಮೃತರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದು, ಅವರೆಲ್ಲ 20ರಿಂದ 50 ವರ್ಷ ವಯಸ್ಸಿನ ನಡುವಿನವರು ಎಂದು ವಿಧಿವಿಜ್ಞಾನ ಇಲಾಖೆಯ ಮಹಾನಿರ್ದೇಶಕ ಮೇಜರ್ ಜನರಲ್ ಇದ್ ಅಲ್-ಒವೈಹಾನ್ ಅವರು ಹೇಳಿರುವುದಾಗಿ ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ನಿವಾಸಿಗಳು ನಿದ್ರಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಹೆಚ್ಚಿನವರು ದಟ್ಟವಾಗಿ ಆವರಿಸಿದ ಹೊಗೆಯ ಪರಿಣಾಮವಾಗಿ ಮೃತಪಟ್ಟಿದ್ದಾರೆ, ಕಟ್ಟಡದಲ್ಲಿ ಇದ್ದ ಹಲವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ. ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕುವೈತ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ನಡ ಅನೇಕರಿಗೆ ಬೇಸರ ಮೂಡಿಸಿದ್ದ ತಪ್ಪಿತಸ್ತರಿಗೆ ತಕ್ಕ ಶಿಕ್ಷೇಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ದರ್ಶನ್ ಅವರ ಹಳೆಯ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿವೆ. ಪರಿಹಾರ ಕೇಳಲು ಹೋದ ಸಂತ್ರಸ್ತರ ವಿರುದ್ಧ ದರ್ಶನ್ ಯಾವ ರೀತಿ ನಡೆದುಕೊಂಡಿದ್ದರು ಎನ್ನುವ ವಿಚಾರ ಈಗ ಬಯಲಾಗಿದೆ. ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬುವವರು ದರ್ಶನ್ ಗೆ ಸೇರಿರುವ ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವ ವೇಳೆ ಇವರಿಗೆ ಎತ್ತು ಕೊಂಬಿನಿಂದ ತಿವಿದಿತ್ತು. ಎತ್ತಿನ ಕೊಂಬು ಕಣ್ಣಿನಿಂದ ತೂರಿ ತಲೆ ಬುರುಡೆಯ ಹೊರಗೆ ಬಂದಿತ್ತು. ಇದರಿಂದ ಅವರ ಕಣ್ಣು ಹೋಗಿದೆ, ಕೋಮ ಹಂತ ತಲುಪಿದ್ದಾರೆ. ಮಹೇಶ್ ಅವರನ್ನು ದರ್ಶನ್ ಕಡೆಯವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ದುಬಾರಿ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಮಹೇಶ್ ಅವರನ್ನು ಅವರ ಮನೆಗೆ ತಂದು ಬಿಟ್ಟು ಹೋಗಿದ್ದಾರೆ. ಆ ಬಳಿಕ ದರ್ಶನ್ ಈ ಕುಟುಂಬದ…

Read More

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ಮೊದಲ ದಿನ ದರ್ಶನ್ ಎಂಡ್ ಟೀಂಗೆ ಪೊಲೀಸರು ಭರ್ಜರಿ ಬಿರಿಯಾನಿ ತರಿಸಿಕೊಟ್ಟಿದ್ದರು.ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಜನ ಸಾಮಾನ್ಯರಿಗೆ ಒಂದು ನ್ಯಾಯಾ? ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾ? ತಪ್ಪು ಯಾರೇ ಮಾಡಿರಲಿ ಅದು ತಪ್ಪೇ ಎಂದು ಜನ ಆಕ್ರೋಶ ಹೊರ ಹಾಕಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ . ಪೊಲೀಸರು ದರ್ಶನ್ ಹಾಗೂ ಗ್ಯಾಂಗ್​ಗೆ ಅನ್ನ-ಸಾರು ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ರನ್ನು ಜೂನ್ 11ರಂದು ಅರೆಸ್ಟ್ ಮಾಡಲಾಯಿತು. ಅಂದು ರಾತ್ರಿ ದರ್ಶನ್ ಹಾಗೂ ಅವರ ಗ್ಯಾಂಗ್​ಗೆ ಬಿರಿಯಾನಿ ನೀಡಲಾಗಿತ್ತು. ಜೈಲಿನ ಹೊರ ಭಾಗದಲ್ಲಿ ಬಿರಿಯಾನಿ ಬಾಕ್ಸ್ ಕಾಣಿಸಿತ್ತು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಪೊಲೀಸರು ಸಂಕಷ್ಟ ಅನುಭವಿಸಿದ್ದಾರೆ. ಈ ಘಟನೆಯಿಂದ ಅವರು ಎಚ್ಚೆತ್ತುಕೊಂಡಿದ್ದಾರೆ. ಕೊಲೆ ಆರೋಪಿಗಳಿಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಗರಂ ಆಗಿದ್ದಾರೆ ಎನ್ನುವ ಮಾತೂ ಇದೆ ಎನ್ನಲಾಗಿದೆ. ಬಿರಿಯಾನಿ…

Read More

ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರನ್ನು ದರ್ಶನ್ ಎಂಡ್ ಗ್ಯಾಂಗ್ ಕೊಲೆ ಮಾಡಿದೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ 14 ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯ ಎಡ ಹಾಗೂ ಬಲಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲದೇ ದರ್ಶನ್ ಮನೆಯ ಅಕ್ಕಪಕ್ಕದ ಮನೆಗೆ ಹೋಗುವ ಹಾಗೂ ಬರುವವರನ್ನು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರನ್ನು ಬಂಧಿಸಲಾಗಿದೆ. ದರ್ಶನ್ ಬಂಧನವಾಗುತ್ತಿದ್ದಂತೆಯೇ ಅಭಿಮಾನಿಗಳು ನಟನ ಪರ ನಿಂತಿದ್ದಾರೆ. ಮೊನ್ನೆ ದರ್ಶನ್ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆಯೇ ಠಾಣೆ…

Read More

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಒಂದು ಕಡೆ ಮಳೆ ಸುರಿಯುತ್ತಿದ್ದರು ಮತ್ತೊಂದು ಕಡೆ ಕಡು ಬಿಸಿಲು ಜನರನ್ನು ಹೈರಾಣಾಗಿಸಿದೆ. ಇತ್ತ ತಾಪಮಾನ ಹೆಚ್ಚಳದಿಂದಾಗಿ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು, ವಾಹನಗಳಿಗೆ ಫುಲ್​ ಟ್ಯಾಂಕ್​ ಮಾಡಿಸದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಿರುವಾಗಲೇ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರೊಂದು ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಕಾರು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಕಾರು ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಯ್ತು ಎಂಬ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಕಾರಿನ ಸೀಟ್​ ಮೇಲೆ ಇಡಲಾಗಿದ್ದ ಖಾಲಿ ನೀರಿನ ಬಾಟಲಿಗೆ ಸೂರ್ಯನ ಕಿರಣ ತಾಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದೆ. ಘಟನೆ ನಡೆದಾಗ ಕಾರಿನಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ವಿಚಾರ ತಿಳಿದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಪ್ರಕರಣ…

Read More

ಇಲಿಯನ್ನು ಸಾಯಿಸಲು ಹಿಂಜರಿಯುತ್ತಿದ್ದ ಹುಡುಗಿ ಪವಿತ್ರಾ ಗೌಡ. ಅವಳು ಒಬ್ಬರನ್ನ ಕೊಲೆ ಮಾಡುತ್ತಾಳೆ ಅಂದ್ರೆ ಅದು ಸುಳ್ಳು ಎಂದು ಪವಿತ್ರಾ ಮಾಜಿ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ. ಉತ್ತರ ಪ್ರದೇಶ ಮೂಲದ ಸಂಜಯ್‌ ಸಿಂಗ್‌ ಮತ್ತು ಪವಿತ್ರಾ ಗೌಡ ಪ್ರೀತಿಸಿ ಮದುವೆಯಾಗಿದ್ದರು. ಮಗಳು ಹುಟ್ಟಿದ ನಂತರ ಸಂಜಯ್‌ ಸಿಂಗ್‌ ಅವರನ್ನು ದೂರ ಮಾಡತೊಡಗಿದ ಪವಿತ್ರಾ ಗೌಡ ಕೊನೆಗೆ ಡಿವೋರ್ಸ್‌ ಮೂಲಕ ದೂರ ದೂರವಾಗಿದ್ದರು. ಇದೀಗ ದರ್ಶನ್ ಹಾಗೂ ಪವಿತ್ರಾ ಗೌಡ ಅರೆಸ್ಟ್ ಆದ ಬೆನ್ನಲ್ಲೇ ಸಂಜಯ್ ಮತ್ತೆ ಸುದ್ದಿಯಾಗಿದ್ದಾರೆ. ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್‌ ಸಿಂಗ್‌ ಸದ್ಯ ಉತ್ತರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸದ್ಯ ಪತ್ನಿ ಅರೆಸ್ಟ್ ಆಗಿರುವ ಬಗ್ಗೆ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ನನ್ನದು ಮತ್ತು ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದು 12 ವರ್ಷ ಆಗಿದೆ. ಇವತ್ತು ನನಗೆ ಕೊಲೆ ಮಾಡಿದ ವಿಚಾರ ಗೊತ್ತಾಯಿತು. ಮಗಳ ಬಗ್ಗೆ ಯೋಚನೆ ಬಂತು. ಅದಕ್ಕೆ ಏನು ಅಂತ ಕೇಳೋಣ…

Read More

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರ ಮೈದುನ ನಿಕ್​ ಜೋನಸ್​ ಅವರ ಸಹೋದರ ಕೇವಿನ್​ ಜೋನಸ್​ ಅವರಿಗೆ ಚರ್ಮದ ಕ್ಯಾನ್ಸರ್​ ಆಗಿದೆ. ಈ ಬಗ್ಗೆ ಶಾಕಿಂಗ್ ನ್ಯೂಸ್​  ನೀಡಿರುವ ಕೇವಿನ್ ತಮಗಿರುವ ಕ್ಯಾನ್ಸರ್ ಕಾಯಿಲೆಯ ಬಗ್ಗೆ ವಿವರಣೆ ನೀಡಿದ್ದಾರೆ. ಹಣೆಯ ಮೇಲೆ ಮಚ್ಚೆ ಗುರುತು ಕಂಡುಬಂದಿತು. ಆಮೇಲೆ ಅದು ಕ್ಯಾನ್ಸರ್​ಗೆ ತಿರುಗಿತು ಎಂದಿರುವ ಕೇವಿನ್​ ಅವರು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇಬ್ಬರು ಮಕ್ಕಳ ತಂದೆಯಾಗಿರುವ ಕೇವಿನ್​ ಅವರು ಹಾಲಿ ಆರೋಗ್ಯ ಸ್ಥಿತಿಯನ್ನು ಹೇಳಿದ್ದು, ಈ ರೀತಿಯ ಮಚ್ಚೆ ಕಂಡುಬಂದಾಗ ಜಾಗೃತೆ ವಹಿಸಿ ಎಂದಿದ್ದಾರೆ. ಚರ್ಮದ ಮೇಲೆ ಕಂಡುಬರುವ ಗುಳ್ಳೆಗಳು, ಮಚ್ಚೆಗಳು, ಕಡು ಕಪ್ಪು ಬಣ್ಣದ ಚುಕ್ಕೆಗಳು ಎಲ್ಲವೂ ಕ್ಯಾನ್ಸರ್​ ಅಲ್ಲದಿದ್ದರೂ ಇದನ್ನು ಇಷ್ಟಕ್ಕೆ ನಿರ್ಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇದು ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ಸ್ವರೂಪಕ್ಕೆ ತಿರುಗಬಹುದು ಎಂದು ಇದಾಗಲೇ ವೈದ್ಯರು ಕೂಡ ಎಚ್ಚರಿಕೆ ಕೊಟ್ಟಿದ್ದು, ಗಾಯಕ ಕೂಡ ಅದನ್ನೇ ಹೇಳಿದ್ದಾರೆ. ಸದ್ಯ ನಾನು…

Read More

ಟಾಲಿವುಡ್ ಡಾರ್ಲಿಂಗ್ ನಟ ಪ್ರಭಾಸ್ ತಮ್ಮ ಸಿನಿಮಾಗಳ ಜೊತೆಗೆ ಹೆಚ್ಚು ಹೆಚ್ಚು ಸುದ್ದಿಯಾಗೋದು ಮದುವೆ ಮ್ಯಾಟರ್ ನಿಂದ. ಪ್ರಭಾಸ್ ಎಲ್ಲಿಯೇ ಹೋದರು ಮದುವೆ ಯಾವಾಗ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಲೆ ಇರುತ್ತದೆ. ಆದರೆ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಇದೀಗ ನಿರ್ದೇಶಕ ರಾಜಮೌಳಿ ಪ್ರಭಾಸ್ ಮದುವೆ ಯಾಕಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. 44 ವರ್ಷಕ್ಕೆ ಕಾಲಿಟ್ಟಿರುವ ಪ್ರಭಾಸ್ ಮದುವೆಯ ವಿಚಾರ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಹುಟ್ಟುಹಾಕಿತ್ತಿರುತ್ತದೆ. ಡಾರ್ಲಿಂಗ್‌ ಜೀವನದಲ್ಲಿಯೇ ಮದುವೆಯಾಗುವುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಮದುವೆ ಆಗುತ್ತಾರೆ ಎನ್ನುತ್ತಿದ್ದಾರೆ. ಆದ್ರೆ, ಪ್ರಭಾಸ್ ಇನ್ನೂ ಯಾಕೆ ಮದುವೆಯಾಗಿಲ್ಲ.. ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಇದೀಗ ನಿರ್ದೇಶಕ ರಾಜಮೌಳಿ ಕಾರಣ ತಿಳಿಸಿದ್ದಾರೆ. ಬಾಹುಬಲಿಗಾಗಿ ಐದು ವರ್ಷಗಳ ಕಾಲ ಪ್ರಭಾಸ್ ಜೊತೆ ಕೆಲಸ ಮಾಡಿದ ಸ್ಟಾರ್ ಡೈರೆಕ್ಟರ್ ರಾಜಮೌಳಿ, ನಟನ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಹೇಳಿಕೆಯನ್ನು ನೀಡಿದ್ದಾರೆ. ಡಾರ್ಲಿಂಗ್‌ ಯಾಕೆ ಮದುವೆಯಾಗುತ್ತಿಲ್ಲ ಎಂಬುದಕ್ಕೆ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಕುರಿತು ಒಂದೊಂದೆ ಮಾಹಿತಿಗಳು ಹೊರ ಬೀಳುತ್ತಿದ್ದು ಇನ್ನೂ ಸಾಕಷ್ಟು ಸತ್ಯಗಳು ತೆರೆದುಕೊಳ್ಳಲಿವೆ. ಈ ಮಧ್ಯೆ ನಟಿ ಪವಿತ್ರಾ ಗೌಡ ಯಾರು? ದರ್ಶನ್ ಗೂ ಆಕೆಗಿರೋ ವಯಸ್ಸಿನ ಅಂತರವೆಷ್ಟು? ಎಂಬೆಲ್ಲಾ ಹುಡುಕಾಟ ಶುರುವಾಗಿದೆ. ಪವಿತ್ರಾ ಗೌಡ ಹಾಗೂ ನಟ ದರ್ಶನ್ ಅವರ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಹುಡುಕಾಟ ನಡೆದಿದೆ. ದರ್ಶನ್ ಮತ್ತು ಪವಿತ್ರಾಗೆ ಬರೋಬ್ಬರಿ 14 ವರ್ಷಗಳ ವಯಸ್ಸಿನ ಅಂತರವಿದೆ. ದರ್ಶನ್ ಗೆ ಈಗ 47 ವರ್ಷ ಮತ್ತು ಪವಿತ್ರಾಗೆ ಈಗ 33 ವರ್ಷ. ಇವರ ಸಂಬಂಧಕ್ಕೆ 10 ವರ್ಷ. ಅಂದರೆ ಪವಿತ್ರಾ 23 ವರ್ಷದವಳಿದ್ದಾಗ ದರ್ಶನ್‌ ಗೆ 37 ವರ್ಷವಾಗಿತ್ತು. ಆಗ ಅವರಿಬ್ಬರ ಸಂಬಂಧ ಆರಂಭವಾಗಿತ್ತು.  ಅಂದ ಹಾಗೆ ಪವಿತ್ರಾ ಗೌಡರನ್ನು ದರ್ಶನ್ ಎರಡನೇ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಪವಿತ್ರಾರನ್ನು ಮದುವೆಯಾಗಿದ್ದಾರೆ ಎಂಬುದು ರೇಣುಕಾಸ್ವಾಮಿ ಕೊಲೆಯ…

Read More

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಕ ಜಿ.ಆರ್​. ಫಾರ್ಮ್​ಹೌಸ್​ನಲ್ಲಿ  ರೇವ್ ಪಾರ್ಟಿ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತೆಲುಗು ನಟಿ ಹೇಮಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.‌  ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಹೇಮಾ ಅವರನ್ನು ಜೂನ್​ 14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಹೇಮಾಗೆ ಜಾಮೀನು ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಎನ್​ಡಿಪಿಎಸ್​ ವಿಶೇಷ ಕೋರ್ಟ್‌ನಿಂದ ನಟಿ ಹೇಮಾಗೆ ಜಾಮೀನು ನೀಡಲಾಗಿದೆ. ಹೇಮಾಳಿಂದ ಯಾವುದೇ ಮಾದಕವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಾಡಿದ್ದಾರೆ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶಿಸಿದೆ. ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರು ಜೆ.ಆರ್​. ಫಾರ್ಮ್​ಹೌಸ್​ ಮೇಲೆ ದಾಳಿ ನಡೆಸಿದಾಗ ತೆಲುಗು ನಟಿ ಹೇಮಾ ಸಿಕ್ಕಿಬಿದ್ದಿದ್ದರು. ಆ ಸುದ್ದಿ ಹೊರಬಿದ್ದಾಗ ಅದೇ ಫಾರ್ಮ್​ಹೌಸ್​ನಿಂದಲೇ ವಿಡಿಯೋ ರೆಕಾರ್ಡ್​…

Read More