Author: Author AIN

ಸ್ಯಾಂಡಲ್ ವುಡ್ ನಲ್ಲಿ ದಿನದಿಂದ ದಿನಕ್ಕೆ ಒಂದೊಂದೆ ಅಹಿತಕರ ಘಟನೆಗಳು ನಡೆಯುತ್ತಿದೆ. ಬ್ಯಾಕ್ ಟು ಬ್ಯಾಕ್ ಡಿವೋರ್ಸ್, ದರ್ಶನ್ ವಿವಾದಗಳು ಸ್ಯಾಂಡಲ್ ವುಡ್ ಗೆ ಸುತ್ತಿಕೊಂಡಿದ್ದರು. ಈ ಮಧ್ಯೆ ನಟ ದುನಿಯಾ ವಿಜಯ್ ಡಿವೋರ್ಸ್ ವಿಚಾರ ಕೂಡ ಸುದ್ದಿಯಾಗಿದೆ. ಕೆಲ ವರ್ಷಗಳ ಹಿಂದೆ ತಮಗೆ ಪತ್ನಿ ನಾಗರತ್ಯ ಅವರಿಂದ ವಿಚ್ಛೇದನ ಬೇಕೆಂದು ನಟ ದುನಿಯಾ ವಿಜಯ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದು, ವಿಚ್ಛೇದನ ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರಿಗೆ ಗೆಲುವಾಗಿದೆ. ಅದರ ಬೆನ್ನಲ್ಲೆ ಫೇಸ್​ಬುಕ್​ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ನಾಗರತ್ನ, ಇದು ನಾನು ನಂಬಿದ ದೇವರಿಂದ ಸಿಕ್ಕ ಗೆಲುವು, ನನ್ನ ನಂಬಿಕೆಗೆ ಸಿಕ್ಕ ಗೆಲುವು’ ಎಂದಿದ್ದಾರೆ. ‘ಸಮಸ್ತ ನಾಡಿನ ಜನತೆಗೆ ನನ್ನ ನಮಸ್ಕಾರ , ಈ ದಿನ ತುಂಬಾ ಖುಷಿ ಕೊಟ್ಟ ದಿನವಾಗಿದೆ, ನನ್ನ ಪತಿ ವಿಜಯ್ ರವರು ತಮಗೆ ವಿಚ್ಛೇಧನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ…

Read More

ದರ್ಶನ್ ಎಂಡ್ ಗ್ಯಾಂಗ್ ನಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಬಗ್ಗೆ ದಿನಕ್ಕೊಂದು ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹಲವು ಆರೋಪಿಗಳನ್ನು ಬಂಧಿಸಿದ್ದು ಮಹಜರು ಪ್ರಕ್ರಿಯೆ ಬಹುತೇಕ ಮುಗಿದದಿದೆ. ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಲಾಗಿದ್ದ ಚಿತ್ರದುರ್ಗಕ್ಕೂ ತೆರಳಿ ಅಲ್ಲಿಯೂ ಮಹಜರು ಮಾಡಲಾಗಿದೆ. ಪ್ರಕರಣದ ಎ8 ಆರೋಪಿ ರವಿ ಪೊಲೀಸರಿಗೆ ಶರಣಾಗಿದ್ದಾನೆ. ರವಿಯ ಗೆಳೆಯ, ಮೋಹನ್ ಎಂಬುವರು ರೇಣುಕಾ ಸ್ವಾಮಿಯ ಅಪಹರಣದ ಬಗ್ಗೆ ರವಿ ತಮಗೆ ಹೇಳಿದ ವಿಷಯಗಳನ್ನು ಹೇಳಿದ್ದಾರೆ. ಪ್ರಕರಣದ ಎ8 ಆರೋಪಿ ರವಿ, ಕ್ಯಾಬ್ ಚಾಲಕ. ಟೊಯೊಟಾ ಇಟಿಯಾಸ್ ಕಾರು ಇಟ್ಟುಕೊಂಡು ಬಾಡಿಗೆ ಕಾರು ಓಡಿಸುತ್ತಿರುವ ರವಿಗೆ ಅವರ ಇನ್ನೊಬ್ಬ ಗೆಳೆಯ ಕರೆ ಮಾಡಿ, ಬೆಂಗಳೂರಿಗೆ ಬಾಡಿಗೆಗೆ ಹೋಗಲು ಹೇಳಿದ್ದಾರೆ. ಅಂತೆಯೇ ರವಿ, ಜಗ್ಗು ಎಂಬಾತನ ಬೇಡಿಕೆ ಮೇರೆಗೆ ಇಟಿಯಾಸ್ ಕಾರು ತೆಗೆದುಕೊಂಡು ಹೋಗಿದ್ದಾರೆ. ಚಿತ್ರದುರ್ಗದ ಬಳಿ ಜಗ್ಗು, ಅನು, ರಘು ಹಾಗೂ ರೇಣುಕಾ ಸ್ವಾಮಿ ಕಾರಿಗೆ ಹತ್ತಿದ್ದಾರೆ. ಕಾರಿನಲ್ಲಿ ಹೋಗುವಾಗಲೇ…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಬಹುತೇಕ ನಟಿಯರಿಗೆ ಇದ್ದೇ ಇರುತ್ತೆ. ಈತನ ಜೊತೆ ಒಂದೇ ಒಂದು ಸಿನಿಮಾ ಮಾಡಿದ್ರು ಸಾಕು ಆ ನಟಿ ಸ್ಟಾರ್ ಆಗಿ ಬಿಡ್ತಾರೆ. ಆದರೆ ದರ್ಶನ್ ಒಬ್ಬ ನಟಿಯ ಜೊತೆ ಒಂದೇ ಒಂದು ಭಾರಿ ನಟಿಸೋದು. ಮತ್ತೊಂದು ಸಿನಿಮಾ ಮಾಡ್ಬೇಕು ಅಂದರೆ ಆಕೆ ಬೇರೆಯೇ ನಟಿಯಾಗಿರ್ಬೇಕು. ಆದರೆ ನಟಿ ನಿಖಿತಾ ತುಕ್ರಾಲ್ ಮಾತ್ರ ಬ್ಯಾಕ್ ಟು ಬ್ಯಾಕ್ ದರ್ಶನ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದರು. ನಿಕಿತಾ ತುಕ್ರಾಲ್ ಅವರು ದರ್ಶನ್​​ಗೆ ಜೋಡಿಯಾಗಿ ನಟಿಸಿದ ಸಿನಿಮಾ ಹಿಟ್ ಆಯಿತು. ಅಷ್ಟೇ ಅಲ್ಲದೆ ಮತ್ತೆ ಮತ್ತೆ ದರ್ಶನ್​ ಜೊತೆ ನಟಿಸೋ ಅವಕಾಶ ಅವರಿಗೆ ಸಿಕ್ಕಿತು. ಇದರಿಂದ ನಿಕಿತಾ ಹಾಗೂ ದರ್ಶನ್ ಜೋಡಿ ಬೇಗನೆ ಬೆಳ್ಳಿ ತೆರೆಯ ಮೇಲೆ ಫೇಮಸ್ ಆಗಿ ಪ್ರೇಕ್ಷಕರ ಮನ ಗೆದ್ದಿದ್ದರು. ನಿಕಿತಾ ತುಕ್ರಾಲ್ ಹಾಗೂ ದರ್ಶನ್ ಜೋಡಿಯಾಗಿ ಯೋಧ, ಪ್ರಿನ್ಸ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸ್ನೇಹಿತರು ಸೇರಿದಂತೆ ಒಟ್ಟು ನಾಲ್ಕು…

Read More

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 35,000 ಮತ್ತು ಪ್ರೌಢಶಾಲೆಗಳಿಗೆ 10,000 ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮೋದನೆ ನೀಡಿದೆ. ರಾಜ್ಯದ ಸುಮಾರು 49,679 ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸಾಕಷ್ಟು ಸಮಯದಿಂದ ಖಾಲಿ ಉಳಿದಿತ್ತು. ಹೊಸ ಶೈಕ್ಷಣಿಕ ವರ್ಷವು ಈಗಾಗಲೇ ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗಿದ್ದರೂ, 2024-25 ಕ್ಕೆ ಈ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ವರದಿಯಾಗಿದೆ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಾತಿ ಇಲ್ಲಿಯವರೆಗೆ ಭರದಿಂದ ಸಾಗಿದೆ. ನೇಮಕ ಪ್ರಕ್ರಿಯೆಯನ್ನು ವೇಗಗೊಳಿಸಲು ಶಾಲಾ ಮಟ್ಟದಲ್ಲಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿಕೊಳ್ಳುವಂತೆ ಇಲಾಖೆಯು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ. ಹೆಚ್ಚಾಗಿ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಅನ್ನು ನಿಭಾಯಿಸುವುದು ವಿದ್ಯಾರ್ಥಿಗಳಿಗೆ ಕಷ್ಟವಾಗುವುದರಿಂದ ಆ ವಿಷಯಗಳ ಶಿಕ್ಷಕರನ್ನೇ ಹೆಚ್ಚು ನೇಮಕ ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿ…

Read More

ಕುವೈತ್ ನ ವಸತಿ ಅಪಾರ್ಟ್ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರು ಸೇರಿದಂತೆ ಒಟ್ಟು 49 ಜನ ಸಜೀವ ದಹನವಾಗಿದ್ದಾರೆ. ಇದೀಗ ಖ್ಯಾತ ಎನ್‌ಆರ್‌ಐ ಉದ್ಯಮಿ ಮತ್ತು ಯುಎಇ ಮೂಲದ ಲುಲು ಗ್ರೂಪ್‌ ಅಧ್ಯಕ್ಷ ಎಂಎ ಯೂಸುಫ್ ಅಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕುವೈತ್ ನ ದಕ್ಷಿಣ ನಗರವಾದ ಮಂಗಾಫ್‌ನಲ್ಲಿ 196 ವಲಸೆ ಕಾರ್ಮಿಕರು ತಂಗಿದ್ದ ಏಳು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 49 ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ. ಪರಿಹಾರ ನಿಧಿಯ ಭಾಗವಾಗಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ನೀಡಲಾಗುವುದು ಎಂದು ಅಬುಧಾಬಿಯಲ್ಲಿ ಲುಲು ಗ್ರೂಪ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರ ಕೂಡ ಮೃತರ ಕುಟುಂಬಕ್ಕೆ ಇದೇ ರೀತಿಯ ಪರಿಹಾರ ಘೋಷಿಸಿವೆ.

Read More

ಕುವೈತ್‌ ಮಂಗಾಫ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ 45 ಮಂದಿ ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ(IAF) ವಿಮಾನ ಇಂದು ಬೆಳಗ್ಗೆ 8:30ಕ್ಕೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ. ನಿನ್ನೆ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮೃತದೇಹಗಳನ್ನು ತವರೂರಿಗೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ 45 ಮಂದಿ ಮೃತರಲ್ಲಿ 31 ಮೃತದೇಹಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದೆ. ನಂತರ ವಿಮಾನವು ಉಳಿದ ಮೃತದೇಹಗಳನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ ಏಳು ಮಂದಿ ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿಗೆ ತರಲಾಗುತ್ತಿದೆ. ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್…

Read More

ಸ್ಪೇಸ್ ಎಕ್ಸ್ ನ ಮಾಜಿ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಕಾನೂನು ಮೊರೆ ಹೋಗಿರುವ ಬೆನ್ನಲ್ಲೇ ಮತ್ತಷ್ಟು ಮಸ್ಕ್ ಗೆ ಮತ್ತಷ್ಟು ಸಂಕಷ್ಟು ಎದುರಾಗಿದೆ. ಎಲಾನ್ ಮಸ್ಕ್ ತಮ್ಮ ಸಂಸ್ಥೆಯ ಇಂಟರ್ನ್ ಸೇರಿದಂತೆ ಇಬ್ಬರು ಸಿಬ್ಬಂದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿದ್ದು, 2016 ರಲ್ಲಿ ವಿಮಾನ ಪರಿಚಾಕರೊಬ್ಬರಿಗೆ ಸೆಕ್ಸ್ ಗಾಗಿ ಕುದುರೆಯ ಆಫರ್ ನೀಡಿದ್ದು ಈಗ ಬಹಿರಂಗವಾಗಿದೆ. ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಕೇಳಿದ್ದ ಎಲಾನ್ ಮಸ್ಕ್ ಇದಕ್ಕಾಗಿ ನನಗೆ ಕುದುರೆಯನ್ನು ಖರೀದಿ ಮಾಡಿಕೊಡುವ ಆಫರ್ ಮುಂದಿಟ್ಟಿದ್ದರು ಎಂದಿದ್ದಾರೆ. ವಿಮಾನದಲ್ಲೇ ಎಲಾನ್ ಮಸ್ಕ್ ತನ್ನೆದುರು ಆತನ ತನ್ನ ಖಾಸಗಿ ಅಂಗ ಪ್ರದರ್ಶಿಸಿದ್ದ ಇದಕ್ಕೆ ತಾನು ಒಪ್ಪದೇ ಇದ್ದಾಗ ಸಂಸ್ಥೆಯೂ ನನ್ನ ಪಾಳಿಗಳನ್ನು ಕಡಿತಗೊಳಿಸಿತ್ತು ಎಂದು ಮಹಿಳೆ ಹೇಳಿದ್ದಾರೆ. ಮಹಿಳೆಯ ಆರೋಪಗಳನ್ನು ನಿರಾಕರಿಸಿರುವ ಎಲನ್ ಮಸ್ಕ್, ಆಕೆಯ ಆರೋಪಗಳು “ಸಂಪೂರ್ಣವಾಗಿ ಸುಳ್ಳು” . ಇದನ್ನು…

Read More

ಪ್ರಧಾನಿ ನೇಂದ್ರ ಮೋದಿ ಇಂದು ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲಿದ್ದಾರೆ. ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಬೋರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ವಿಶ್ವದ ಗಣ್ಯ ನಾಯಕರ ಜೊತೆಗೆ ಜನರ ಜೀವನ ಸುಧಾರಿಸುವ ಹಾಗೂ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ-ಮೆಡಿಟರೇನಿಯನ್ ವಿಷಯ ಸೇರಿದಂತೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಪೋಪ್ ಫ್ರಾನ್ಸಿಸ್ ಅವರು ಸಹ ಇರಲಿದ್ದಾರೆ. ಅಪುಲಿಯಾದಲ್ಲಿ ಶೃಂಗಸಭೆಯಲ್ಲಿ ಅವರು ಭಾಗಿಯಾಗಲಿದ್ದು, ಅಲ್ಲಿ ಅವರು ವಿಶ್ವ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಭಾರತದ ದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ವಿಡಿಯೋ ಮೂಲಕ ತಿಳಿಸಿದ್ದಾರೆ. ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಮುಂದಿನ ಸಿನಿ ಜರ್ನಿ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ದರ್ಶನ್ ಅವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬರ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಫಿಲ್ಮ್ ಚೇಂಬರ್‍ನಲ್ಲಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದರು. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ಇದ್ದಾಗ ನಾವು ಎಂಟ್ರಿ ಆಗಲು ಆಗುವುದಿಲ್ಲ. 2011 ರಲ್ಲಿ ಸರಿದೂಗಿಸಿದ್ದೆವು. ಅದು ಕುಟುಂಬದ…

Read More

ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ರಶ್ಮಿಕಾ ಹಾಗೂ ರಣಬೀರ್ ನಟನೆಯ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಒಂದು ವರ್ಗದ ಜನರು ‘ಅನಿಮಲ್​’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ. ರಣಬೀರ್​ ಕಪೂರ್ಮಾಡಿದ ರಣ್​ವಿಜಯ್​ ಸಿಂಗ್​ ಎಂಬ ಪಾತ್ರಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಯಿತು. ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ಅನಿಮಲ್​’ ಸಿನಿಮಾದ ಕಥೆಯಲ್ಲಿ ರಣ್​ವಿಜಯ್​ ಸಿಂಗ್​ ಹಾಗೂ ಗೀತಾಂಜಲಿ ಪ್ರೀತಿಸಿ ಮದುವೆ ಆಗಿರುತ್ತಾರೆ. ಎಂದಿಗೂ ನಿನಗೆ ಮೋಸ ಮಾಡಲ್ಲ ಅಂತ ರಣ್​ ವಿಜಯ್​ ಸಿಂಗ್​ ಪ್ರಮಾಣ ಮಾಡಿರುತ್ತಾನೆ. ಹಾಗಿದ್ದರೂ ಕೂಡ ಆತ ಪರಸ್ತ್ರೀ ಸಹವಾಸ ಮಾಡಿ, ಗೀತಾಂಜಲಿಗೆ ಮೋಸ ಮಾಡುತ್ತಾನೆ. ಆ ವಿಡಿಯೋ ತುಣುಕನ್ನು ಅಭಿಮಾನಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಾನಕವಾದ ವಿಷಯ ಬೇರೇನೂ ಇಲ್ಲ’ ಎಂದು ಈ ವಿಡಿಯೋಗೆ ಅಭಿಮಾನಿಯೊಬ್ಬರು ಕ್ಯಾಪ್ಷನ್​ ನೀಡಿದ್ದಾರೆ. ಅದು ರಶ್ಮಿಕಾ ಮಂದಣ್ಣ ಅವರ ಗಮನಕ್ಕೆ ಬಂದಿದೆ. ಆ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ…

Read More