ಸೂಪರ್ ಸ್ಟಾರ್ ರಜನೀಕಾಂತ್, ಐಶ್ವರ್ಯಾ ರೈ ನಟನೆಯ ಶಂಕರ್ ನಿರ್ದೇಶನದ 2010 ರಲ್ಲಿ ಬಿಡುಗಡೆಯಾಗಿದ್ದ ‘ರೋಬೊ’ ಸಿನಿಮಾನ ಸೂಪರ್ ಹಿಟ್ ಆಗಿತ್ತು. ಬಿಗ್ ಬಜೆಟ್ ನಲ್ಲಿ ರೆಡಿಯಾದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆಗಿನ ಕಾಲಕ್ಕೆ ‘ರೋಬೊ’ ಸಿನಿಮಾ ಸುಮಾರು 500 ಕೋಟಿಗೂ ಹೆಚ್ಚಿನ ಹಣ ಗಳಿಸಿ, ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ಅದೇ ಸಿನಿಮಾದಿಂದಾಗಿ ಶಂಕರ್ ಮೇಲೆ ಪ್ರಕರಣ ದಾಖಲಾಗಿದ್ದು, ಶಂಕರ್ ಆಸ್ತಿಯನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ. ಶಂಕರ್ ಅವರ ‘ರೋಬೊ’ ಸಿನಿಮಾ ತಮ್ಮ ರಚನೆಯ ‘ಜಿಗುಬಾ’ ಹೆಸರಿನ ಕಾದಂಬರಿ ಆಧರಿಸಿದ್ದು ಎಂದು ಬರಹಗಾರ ಅರುರ್ ತಮಿನಾದನ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಇದೀಗ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯಾದ ಇಡಿ (ಜಾರಿ ನಿರ್ದೇಶನಾಲಯ) ಈ ಪ್ರಕರಣದಲ್ಲಿ ಶಂಕರ್ಗೆ ಸೇರಿದ 10 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಶಂಕರ್ ಅವರ ಕೆಲ ಸ್ಥಿರಾಸ್ತಿಯನ್ನು ಇಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ವಿಚಾರಣೆ…
Author: Author AIN
ತೆಲುಗು ಚಿತ್ರರಂಗದ ಯುವನಟ ವಿಶ್ವಕ್ ಸೇನ್ ಸಿನಿಮಾ ಕಾರ್ಯಕ್ರಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಭಾಷಣ, ಹೇಳಿಕೆಗಳನ್ನು ನೀಡುತ್ತ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ವಿಶ್ವಕ್ ಸೇನ್ ನಟನೆಯ ಲೈಲಾ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದೀಗ ವಿಶ್ವಕ್ ಸೇನ್ ಬಹಿರಂಗವಾಗಿ ಕ್ಷೆಮ ಕೇಳಿದ್ದಾರೆ. ಲೈಲಾ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ವಿಶ್ವಕ್ ಸೇನ್ ಆಹ್ವಾನಿಸಿದ್ದರು. ಚಿರಂಜೀವಿ ಸಹ ಕಿರಿಯ ನಟನ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿ ಹೋದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಸೈಲೆಂಟ್ ಆಗಿದ್ದು ಇದೀಗ ವಿಶ್ವಕ್ ಸೇನ್ ಕ್ಷಮೆ ಕೇಳಿದ್ದಾರೆ.ʼ ಸಿನಿಮಾದಲ್ಲಿ ವಿಶ್ವಕ್ ಸೇನ್ ಯುವಕ-ಯುವತಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನೋಡಿದ ಒಬ್ಬ ವಿಮರ್ಶಕನಂತೂ ಸಿನಿಮಾದ ಬಗ್ಗೆ ಬೇಸರ, ಕೋಪದಿಂದ ವಿಮರ್ಶೆ ಮಾಡಿದ್ದು, ಆ ವಿಮರ್ಶಕನ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಿನಿಮಾ ಅಟ್ಟರ್ ಫ್ಲಾಪ್ ಆದ ಬಳಿಕ ಇದೀಗ ನಟ ವಿಶ್ವಕ್ ಸೇನ್…
ತುಮಕೂರು : ರೈತನಿಗೆ ಚಾಕು ಇರಿದು ಹಣ ಮತ್ತು ಒಡವೆ ದೋಚಿರುವ ಘಟನೆ ನಡೆದಿದೆ. ಕಳೆದ ಬುಧವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ನಗರ ಹೊರವಲಯದ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. https://ainlivenews.com/hyderabad-based-doctor-neerupalu-body-found-after-thirty-hours/ ಕಳೆದ ಬುಧವಾರ ರಾತ್ರಿ ರೈತ ಗಿರೀಶ್ ಮತ್ತು ಚೇತನ್ ಅರಸೀಕೆರೆಯಿಂದ ಬೆಂಗಳೂರಿಗೆ ವಾಹನದಲ್ಲಿ ಟೊಮೆಟೊ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾತ್ರಿ ಸುಮಾರಿಗೆ 11.30ಕ್ಕೆ ನಿದ್ದೆದಂತಾಗಿ, ರಿಂಗ್ ರಸ್ತೆ ಬಳಿ ವಾಹನ ನಿಲ್ಲಿಸಿಕೊಂಡಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಚಾಕು ತೋರಿಸಿ ಬೆದರಿಸಿದ್ದಾರೆ. ಹಣ ಕೊಡಲು ಒಪ್ಪದಿದ್ದಾಗ ಗಿರೀಶ್ ತೊಡೆಗೆ ಚಾಕುವಿನಿಂದ ಇರಿದು ವಾಚ್, ಚಿನ್ನದ ಸರ, 6 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸದ್ಯ ರೈತ ಗಿರೀಶ್‌ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇರಿಸಿಕೊಂಡಿದ್ದಾರೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಬ್ರುವರಿ 21 ‘ವಿಶ್ವ ಮಾತೃಭಾಷಾ ದಿನ’. ಬಹುಭಾಷೆ ಮತ್ತು ಬಹುಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾವಜೀವಿಯಾದ ಮಾನವ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇತರರೊಂದಿಗೆ ಹಂಚಿಕೊಳ್ಳಲು ಸಂವಹನ ಅಗತ್ಯ. ಇದಕ್ಕೆ ಚಂದದ ಸೇತುವೆಯೇ ಭಾಷೆ. ಈ ದಿನವನ್ನು ಜಗತ್ತಿನಾದ್ಯಂತ ಇರುವ ಭಾಷಾ ವೈವಿಧ್ಯತೆಯ ಅರಿವು ಮೂಡಿಸಲು ಮತ್ತು ಅದನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ. ವಿಶ್ವ ಮಾತೃಭಾಷೆ ದಿನದ ಈ ವರ್ಷದ ಶೀರ್ಷಿಕೆ ‘Fostering multilingualism for inclusion in education and society’ ಅಂದರೆ, ‘ಸೇರ್ಪಡೆಗಾಗಿ ಶಿಕ್ಷಣ ಮತ್ತು ಸಮಾಜದಲ್ಲಿ ಬಹುಭಾಷಿಕತೆಯನ್ನು ಬೆಳೆಸುವುದು’. ಈ ಉದ್ದೇಶ ಶಿಕ್ಷಣ ಮತ್ತು ನಿತ್ಯಜೀವನದಲ್ಲಿ ಮಾತೃಭಾಷೆಯ ಬಳಕೆಗೆ ಒತ್ತು ನೀಡುವುದನ್ನು ಹೇಳುತ್ತದೆ. UNESCO ನಿರ್ದೇಶಕರಾದ ಔಡ್ರಿ ಅಝೌಲೆ ವಿಶ್ವ ಮಾತೃಭಾಷಾ ದಿನದ ಬಗ್ಗೆ ನೀಡಿದ ಸಂದೇಶದಲ್ಲಿ, ‘ವಿಶ್ವದ ಶೇ. 40ಕ್ಕೂ ಹೆಚ್ಚು ಜನರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುತ್ತಿಲ್ಲ. ಇದರಿಂದ ಅವರ ಕಲಿಕೆಗೂ, ತಮ್ಮ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೂ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಗೂ ಧಕ್ಕೆಯಾಗುತ್ತದೆ’…
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಎನ್ನುತ್ತಾರೆ ಆರೋಗ್ಯ ತಜ್ಞರು. NIH ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪಪ್ಪಾಯಿಯಲ್ಲಿರುವ ಕಿಣ್ವವಾದ ಪಪೈನ್, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿನ್ನುವುದರಿಂದ ನಮಗೆ ಹಲವಾರು ಪ್ರಯೋಜನಗಳನ್ನು ಸಿಗುತ್ತದೆ. ಹಾಗಾದ್ರೆ ಅವು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಶಕ್ತಿಯನ್ನು ನೀಡುತ್ತದೆ ಪಪ್ಪಾಯ ಹಣ್ಣಿನಲ್ಲಿ ನೈಸರ್ಗಿಕವಾದ ಸಿಹಿ ಅಂಶ, ವಿಟಮಿನ್ ಗಳು, ಹಾಗೂ ಮಿನಿರಲ್ ಅಂಶಗಳಿರುವುದರಿಂದ, ಇದನ್ನು ಸೇವಿಸಿದರೆ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ ಹಾಗೂ ಹೆಚ್ಚು ಸಮಯದ ಕಾಲ ಹಸಿವಾಗುವುದಿಲ್ಲ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ ಹೆಚ್ಚಾಗಿರುವುದರಿಂದ ಆರೋಗ್ಯಕರವಾದ ತ್ವಚೆಯನ್ನು ಹೊಂದಬಹುದು. ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವು ದರಿಂದ ಮೊಡವೆಗಳು, ಸಣ್ಣ ಸಣ್ಣ ಗುಳ್ಳೆಗಳು, ಚರ್ಮದ ವಯಸ್ಸಾಗವಿಕೆ ಪ್ರಕ್ರಿಯೆ ಹೀಗೆ ಅನೇಕ ಸಮಸ್ಯೆಗಳು ಇಲ್ಲವಾಗುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಗಳ ಯಥೇಚ್ಛವಾಗಿರುವುದರಿಂದ ಇದು ದೇಹದಿಂದ ವಿಷಕಾರಿ…
ಕ್ರೆಡಿಟ್ ಕಾರ್ಡ್‌ಗಳನ್ನು ಸಾಮಾನ್ಯವಾಗಿ ಕೈಗೆಟುಕುವ ಖರ್ಚು ಮಾಡಲು ಅನುಕೂಲಕರ ಆರ್ಥಿಕ ಸಾಧನವಾಗಿ ನೋಡಲಾಗುತ್ತದೆ. ಕೆಲವು ಜನರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಹಳ ವಿರಳವಾಗಿ ಬಳಸುತ್ತಾರೆ ಅಥವಾ ಎಂದಿಗೂ ಬಳಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ. ಕಾರ್ಡ್ ಅನ್ನು ಸುಮಾರು ಆರು ತಿಂಗಳಿಂದ ಒಂದು ವರ್ಷದವರೆಗೆ ಬಳಸದಿದ್ದರೆ, ಅದು ನಿಷ್ಕ್ರಿಯವಾಗುತ್ತದೆ. ಕಾರ್ಡ್ ರದ್ದತಿ: ಬ್ಯಾಂಕುಗಳು ನಿಮ್ಮ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದು, ಸಾಮಾನ್ಯವಾಗಿ 6 ರಂದ 12 ತಿಂಗಳ ಬಳಕೆಯಿಲ್ಲದ ನಂತರ. ರದ್ದು ಮಾಡುವ ಮೊದಲು ಅವರು ನಿಮ್ಮನ್ನು ಸಂಪರ್ಕಿಸಬಹುದು. ಶೂನ್ಯ ಶುಲ್ಕದ ಕ್ರೆಡಿಟ್ ಕಾರ್ಡ್ ರದ್ದತಿಗೆ ಸಾಧ್ಯತೆ ಹೆಚ್ಚು. ಆದರೆ ವಾರ್ಷಿಕ ಶುಲ್ಕವಿರುವ ಕ್ರೆಡಿಟ್ ಕಾರ್ಡ್ ರದ್ದಾಗುವುದಿಲ್ಲ. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ: ಕಾರ್ಡ್ ರದ್ದತಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕ್ರೆಡಿಟ್ ಕಾರ್ಡ್ ಬಳಕೆ ನಿಮ್ಮ ಸ್ಕೋರ್‌ನ 30% ರಷ್ಟಿದೆ. ಒಂದು ಬಾರಿ ನಿಮ್ಮ ಕ್ರೆಡಿಟ್ ಕಾರ್ಡನ್ನು ಬ್ಯಾಂಕ್ ರದ್ದು ಮಾಡಿದರೆ ಸಿಬಿಲ್ ಸ್ಕೋರ್ ಕುಸಿಯಲಿದೆ.…
ಲಕ್ಷ್ಮಿ ದೇವಿಯ ಶುಕ್ರನ ಸಂಬಂಧವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಶುಕ್ರ ಮತ್ತು ಲಕ್ಷ್ಮೀ ಇಬ್ಬರೂ ಸಂಪತ್ತನ್ನು ಕರುಣಿಸುವವರು. ಈ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ತಾಯಿಯು ಸಂತೋಷಗೊಂಡರೆ, ಅವಳು ತನ್ನ ಸ್ಥಳೀಯರಿಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. https://ainlivenews.com/if-you-have-these-problems-do-not-drink-turmeric-milk/ ಶುಕ್ರವಾರದಂದು ಅವಳನ್ನು ಪೂಜಿಸುವುದರ ಜೊತೆಗೆ, ಮನೆಯ ವಾತಾವರಣವನ್ನು ಶಾಂತಿಯುತವಾಗಿ ಮತ್ತು ಸ್ವಚ್ಛವಾಗಿಡಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಶಾಂತಿ ಮತ್ತು ಪ್ರೀತಿ ಇರುವ ಮನೆಯಲ್ಲಿ ಮಾತ್ರ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಇಷ್ಟೆಲ್ಲಾ ಮಾಡಿದ ನಂತರವೂ ನಿಮ್ಮ ಮನೆಯಲ್ಲಿ ಹಣದ ಸಂಚಲನವಿಲ್ಲದಿದ್ದರೆ ಶುಕ್ರವಾರದಂದು ಈ ಕೆಲಸ ಮಾಡಿ. ಹಣದ ವ್ಯವಹಾರ ಮಾಡದಿರಿ ಶಾಸ್ತ್ರದ ಪ್ರಕಾರ, ಸಾಧ್ಯವಾದರೆ, ಶುಕ್ರವಾರದಂದು ಯಾರಿಗೂ ಸಾಲ ನೀಡಬೇಡಿ ಅಥವಾ ಯಾರಿಂದಲೂ ಸಾಲ ಪಡೆದುಕೊಳ್ಳಬೇಡಿ. ಈ ದಿನದಂದು ನೀವು ಸಾಲ ನೀಡಿದರೆ, ನಿಮ್ಮ ಹಣವನ್ನು ಮರಳಿ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. ಇದಲ್ಲದೇ ಶುಕ್ರವಾರ ಸಂಜೆ ಪೂಜೆಯ ನಂತರವೂ ಯಾರಿಗೂ ಸಾಲ ಕೊಡದಂತೆ ವಿಶೇಷ…
ಭಾರತ ಸರ್ಕಾರದಿಂದ ನೀಡಲಾಗುವ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ತೆರಿಗೆದಾರರಿಗೆ ನಿರ್ಣಾಯಕ ದಾಖಲೆಯಾಗಿರುತ್ತದೆ. ಹಣಕಾಸು ಚಟುವಟಿಕೆಗಳ ಕುರಿತು ಇದು ಮಾಹಿತಿ ಒದಗಿಸುತ್ತದೆ. ಅಷ್ಟೇ ಅಲ್ಲದೇ, ಗುರುತಿನ ಮತ್ತು ಜನ್ಮ ದಿನಾಂಕದ ಪುರಾವೆಯಾಗಿಯೂ ಕೆಲಸ ಮಾಡುತ್ತದೆ. ಇನ್ನೂ ನಿಮ್ಮ ಪ್ಯಾನ್ ಕಾರ್ಡ್ ಮೂಲಕ ನೀವು ತ್ವರಿತವಾಗಿ ಮತ್ತು ಸುಲಭವಾಗಿ 5000 ರೂ. ಸಾಲವನ್ನು ಪಡೆಯಬಹುದು. ಸಾಲಗಾರನು 21 ರಿಂದ 57 ವರ್ಷ ವಯಸ್ಸಿನವನಾಗಿರಬೇಕು ಮತ್ತು ಕನಿಷ್ಠ ಮಾಸಿಕ ಆದಾಯ ರೂ. 25,000 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಇದಲ್ಲದೆ, ಅರ್ಹತೆ ಪಡೆಯಲು ಅವರ ಆದಾಯವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನೀವು ನಿಮ್ಮ ಪ್ಯಾನ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ ಮತ್ತು KYC ಪರಿಶೀಲನೆಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ಆದಾಗ್ಯೂ, ಕೆಲವು ಬ್ಯಾಂಕುಗಳು ಮತ್ತು ಸಾಲ ನೀಡುವ ಅಪ್ಲಿಕೇಶನ್‌ಗಳು ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡನ್ನೂ ಅಗತ್ಯವಿರುತ್ತದೆ. ಡಿಜಿಟಲ್ ಸಾಲ ನೀಡುವ…
ಸೂರ್ಯೋದಯ – 6:43 ಬೆ. ಸೂರ್ಯಾಸ್ತ – 6:16 ಸಂಜೆ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ಅಷ್ಟಮಿ ನಕ್ಷತ್ರ – ಅನುರಾಧ ಯೋಗ – ವ್ಯಾಘಾತ ಕರಣ – ಕೌಲವ ರಾಹು ಕಾಲ – 10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 07:30 ದಿಂದ 09:00 ವರೆಗೆ ಬ್ರಹ್ಮ ಮುಹೂರ್ತ – 5:07 ಬೆ.ದಿಂದ 5:55 ಬೆ.ವರೆಗೆ ಅಮೃತ ಕಾಲ – ಯಾವುದೂ ಇಲ್ಲ ಅಭಿಜಿತ್ ಮುಹುರ್ತ – 12:06 ಮ. ದಿಂದ 12:52 ಮ.ವರೆಗೆ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ನೌಕರರಿಗೆ ಉದ್ಯೋಗದಲ್ಲಿ ಅನುಕೂಲವಿದೆ ಆದರೆ ಕಿರಿಕಿರಿ ಅನಿಸುತ್ತಿದೆ, ಮೇಲಿನವರು…
ಹುಬ್ಬಳ್ಳಿ : ಮುಡಾ ಪ್ರಕರಣದ ಲೋಕಾಯುಕ್ತ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದು ಮೊದಲೇ ಗೊತ್ತಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಲ್ಲಿ ಅಧಿಕಾರಿಗಳನ್ನ ಪೋಸ್ಟಿಂಗ್ ಮಾಡುವುದು ಸಿಎಂ ಕೈಯಲ್ಲೇ ಇರುತ್ತದೆ. ಇದನ್ನ ಲೋಕಾಯುಕ್ತ ಪೊಲೀಸರಿಂದ ತನಿಖೆ ಮಾಡಿದ್ರೆ ಇದನ್ನ ಮುಚ್ಚಿ ಹಾಕ್ತಾರೆ ಅಂತ ಆವತ್ತೇ ಹೇಳಿದ್ದೆ, ಇಂದು ಅದೇ ಪರಿಸ್ಥಿತಿ ಆಗಿದೆ ಎಂದರು. ರಾತ್ರೋ ರಾತ್ರಿ ಅಧಿಕಾರಿಗಳನ್ನ ಯಾರೆಲ್ಲ ಭೇಟಿಯಾಗಿ ಬಂದಿದ್ದಾರೆ ಅನ್ನೋದು ಎಲ್ಲವೂ ಗೊತ್ತಿದೆ. ಇದೇನೂ ಆಶ್ಚರ್ಯಕರ ಸಂಗತಿ ಏನೂ ಅಲ್ಲ. ನಿಷ್ಪಕ್ಷಪಾತ ತನಿಖೆಯಾಗಬೇಕಾದ್ರೆ ನೇರವಾಗಿ ಸಿಬಿಐ ತನುಖೆ ಮಾಡಿಸಬೇಕು. ಆವಾಗ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು. https://ainlivenews.com/ed-submitted-the-muda-scam-investigation-report-to-the-high-court/ ಇನ್ನೂ ಪಡಿತರ ಅಕ್ಕಿ ವಿಚಾರವಾಗಿ ರಾಜ್ಯ ಸರ್ಕಾರದವರಿಗೆ ಈಗ ಜ್ಞಾನೋದಯವಾಗಿದೆ. ನಾವು ಅಕ್ಕಿ ಕೊಡುತ್ತೇವೆ ಅಂದಾಗ ಇವ್ರು ತಗೋಳೋಕೆ ಮುಂದೆ ಬರಲಿಲ್ಲ. ಈಗ ಈ ಬಗ್ಗೆ ಚರ್ಚೆ ಗಂಭೀರವಾದಾಗ ಸಿಎಂ ಅವರಿಗೆ ಬುದ್ದಿ ಬಂದಿದೆ. ಇದೀಗ ಅನಿವಾರ್ಯವಾಗಿ…