Author: Author AIN

ಕೀನ್ಯಾದಲ್ಲಿ ಮುಂದಿನ ಆರು ತಿಂಗಳಲ್ಲಿ ಒಂದು ಮಿಲಿಯನ್ ಕಾಗೆಗಳನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದೆ. 2024 ರ ಅಂತ್ಯದ ವೇಳೆಗೆ ಅವುಗಳಲ್ಲಿ ಒಂದು ಮಿಲಿಯನ್ ಅನ್ನು ತೊಡೆದುಹಾಕಲು ಕ್ರಿಯಾ ಯೋಜನೆಯನ್ನು ಪ್ರಕಟಿಸಿದೆ. ಭಾರತೀಯ ಮೂಲದ ಕಾಗೆಗಳು ನಮ್ಮ ಪರಿಸರ ವ್ಯವಸ್ಥೆಗೆ ಮಾರಕವಾಗಿದೆ ಎಂದು ಸ್ಪಷ್ಟಪಡಿಸಿರುವ ಕೀನ್ಯಾ ವನ್ಯಜೀವಿ ಸೇವೆ ಇಂಡಿಯನ್ ಹೌಸ್ ಕ್ರೌಸ್ (ಕೊರ್ವಸ್ ಸ್ಪ್ಲೆಂಡೆನ್ಸ್) ಈ ಕಾಗೆಗಳು ತುಂಬಾ ಆಕ್ರಮಣಕಾರಿಯಾಗಿವೆ. ದಶಕಗಳಿಂದಲೂ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯ ಪಕ್ಷಿಗಳ ಸಂತತಿ ಮೇಲೆ ಮೇಲೆ ಭೀಕರ ಪರಿಣಾಮ ಬೀರುತ್ತಿದೆ ಎಂದು ಸಂಸ್ಥೆ ತಿಳಿಸಿದೆ. KWS ಮಹಾನಿರ್ದೇಶಕ ಮತ್ತು ಸಮುದಾಯ ಸೇವೆಯ ನಿರ್ದೇಶಕ ಚಾರ್ಲ್ಸ್ ಮುಸ್ಯೋಕಿ, ಕೀನ್ಯಾದ ಕರಾವಳಿ ಪ್ರದೇಶದಲ್ಲಿ ಹೊಟೇಲ್ ಉದ್ಯಮಿಗಳು ಮತ್ತು ರೈತರು ಕಾಗೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಕಾಗೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಕೆಡಬ್ಲ್ಯೂಎಸ್‌ ಪ್ರಕಾರ ಭಾರತೀಯ ಕಾಗೆಗಳು ಅಳಿವಿನಂಚಿನಲ್ಲಿರುವ ಸ್ಥಳೀಯ ಪಕ್ಷಿ ಪ್ರಭೇದಗಳನ್ನು ಬೇಟೆಯಾಡುವ ಅಪಾಯಕಾರಿ ಪ್ರವೃತ್ತಿ ಬೆಳೆಸಿಕೊಂಡಿರುವುದು ಸ್ಥಳೀಯ ಜನರಿಗೆ ಆತಂಕ…

Read More

ಕುವೈತ್ ನ ಮಂಗಾಫ್‌ ನಲ್ಲಿನ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 46 ಭಾರತೀಯರು ಸೇರಿ 50 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕುವೈತ್‌ನಾದ್ಯಂತ ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳು ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಭೀಕರ ಅಗ್ನಿ ಅವಘಢದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕುವೈತ್ ಮುನ್ಸಿಪಾಲಿಟಿಯು ಅಕ್ರಮ ಕಟ್ಟಡಗಳ ಮಾಲಿಕರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಿದೆ ಎಂದು ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ವೆಚ್ಚ ಕಡಿತಗೊಳಿಸಲು ಅತ್ಯಂತ ಅಸುರಕ್ಷಿತ ಜಾಗಗಳಲ್ಲಿ ವಲಸೆ ಕಾರ್ಮಿಕರನ್ನು ಇರಿಸುತ್ತಿರುವುದು, ಕಟ್ಟಡಗಳನ್ನು ಅನಧಿಕೃತವಾಗಿ ಮಾರ್ಪಡಿಸುತ್ತಿರುವುದು ಕುವೈತ್‌ನಲ್ಲಿ ಹಲವು ವರ್ಷಗಳಿಂದ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಂಗಾಫ್‌ ಅಗ್ನಿ ದುರಂತ ಘಟನೆಯು ಕಟ್ಟಡಗಳ ಅನಧಿಕೃತ ಮಾರ್ಪಾಡುಗಳ ದೀರ್ಘಕಾಲದ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದು, ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ತಡೆಯಲು ಅಧಿಕಾರಿಗಳು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಗಾಯಗೊಂಡ 25 ಭಾರತೀಯರು ಚಿಕಿತ್ಸೆ ಪಡೆಯುತ್ತಿರುವ ಐದು ಆಸ್ಪತ್ರೆಗಳಿಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ತಂಡ…

Read More

ದರ್ಶನ್ ಎಂಡ್ ಗ್ಯಾಂಗ್‌ನಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ತಂಡಕ್ಕೆ ಮತ್ತೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಸೇರ್ಪಡೆಯಾಗಿದ್ದಾರೆ. ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಹಾಗೂ ಎಸಿಪಿ ಚಂದನ್ ಆರೋಪಿ ದರ್ಶನ್‌ನನ್ನು ಮೈಸೂರಿನಿಂದ  ಕರೆತಂದಿದ್ದರು. ಗಿರೀಶ್ ನಾಯ್ಕ್ ಮೊದಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಗಿರೀಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು ಇದೇ ವೇಳೆ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಮರ್ಡರ್ ನಡೆದಿದೆ. ನಂತರ ಮತ್ತೆ ಗಿರೀಶ್ ನಾಯ್ಕ್ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಆ ಬಳಿಕ ಎಸಿಪಿ ಚಂದನ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆರೋಪಿಗಳ ಹೆಚ್ಚಿನ ವಿಚಾರಣೆ ಅಗತ್ಯತೆ ಹಿನ್ನೆಲೆ ಮತ್ತೆ ಗಿರೀಶ್ ನಾಯ್ಕ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 12 ಮಂದಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಕೊಲೆ ಆರೋಪ ಎದುರಿಸುತ್ತಿರುವವರ ಪೈಕಿ 12 ಆರೋಪಿಗಳನ್ನು…

Read More

ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಕಾಂಬಿನೇಷನ್ ನ 2014ರಲ್ಲಿ ಬಿಡುಗಡೆಯಾದ “ಬಹದ್ದೂರ್” ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಹತ್ತು ವರ್ಷಗಳ ನಂತರ ಜೂನ್ 21 ರಂದು ಈ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಗೋಕುಲ್ ಫಿಲಂಸ್ ಅವರು ಅದ್ದೂರಿಯಾಗಿ ಅನೇಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡುತ್ತಿದ್ದಾರೆ. ಆರ್. ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಚೇತನ್ ಕುಮಾರ್ ನಿರ್ದೇಶನ ಮಾಡಿದ್ದರು. “ಬಹದ್ದೂರ್” ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ಧ್ವನಿ ನೀಡಿದ್ದರು.‌ ಪುನೀತ್ ಅವರು ತಮ್ಮ ಅಭಿನಯದ ಚಿತ್ರವನ್ನು ಹೊರತುಪಡಿಸಿ ಧ್ವನಿ ನೀಡಿದ ಮೊದಲ ಚಿತ್ರ “ಬಹದ್ದೂರ್”. ಚಿತ್ರದ ಮೊದಲ ಸನ್ನಿವೇಶಕ್ಕೆ ರವಿಚಂದ್ರನ್ ಅವರು ಕ್ಲ್ಯಾಪ್ ಮಾಡಿ ಹಾರೈಸಿದ್ದರು. ಪುನೀತ್ ರಾಜಕುಮಾರ್ ಅವರೆ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದ್ದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಇಂದಿಗೂ‌ ಜನಪ್ರಿಯ. “ಬಹದ್ದೂರ್ ” ಬಿಡುಗಡೆಯಾದ ಹತ್ತು ವರ್ಷಗಳಲ್ಲಿ ನೂರಾರೂ ಸಲ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ. ಈ…

Read More

ಉದ್ಯಮಿ ಎಲಾನ್ ಮಸ್ಕ್‌ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ನಿಂದ ವಜಾಗೊಂಡ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಲಾಗಿತ್ತು. ಆದರೆ ಅದನ್ನು ಇದೀಗ ಮರಳಿಸುವಂತೆ ಮಾಜಿ ನೌಕರರನ್ನು ಕಂಪನಿ ಬೆನ್ನು ಹತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ 18 ತಿಂಗಳ ಹಿಂದೆ ಕಂಪನಿಯಿಂದ ವಜಾಗೊಂಡ ನೌಕರರಿಗೆ ವೇತನ ಪಾವತಿ ಸಂದರ್ಭದಲ್ಲಿ ಷೇರುಗಳ ವಿನಿಮಯದಲ್ಲಿ ಆಗಿರುವ ಲೋಪದಿಂದ ಹೆಚ್ಚುವರಿಯಾಗಿ ವೇತನ ಪಾವತಿಯಾಗಿದೆ. ಆದರೆ ಇದೀಗ ಅದನ್ನು ಮರಳಿಸುವಂತೆ ಮಾಜಿ ನೌಕರರಿಗೆ ಕಂಪನಿ ನೋಟಿಸ್‌ ಜಾರಿ ಮಾಡಿದೆ. ಇದು ಸರಾಸರಿ 70 ಸಾವಿರ ಅಮೆರಿಕನ್ ಡಾಲರ್‌ ಎಂದು ಅಂದಾಜಿಸಲಾಗಿದೆ. ಕಂಪನಿಯ ಏಷ್ಯಾ ಪೆಸಿಫಿಕ್‌ ಮಾನವ ಸಂಪನ್ಮೂಲ ಇಲಾಖೆಯ ಇಮೇಲ್ ಮೂಲಕ ಇ-ಮೇಲ್ ಸಂದೇಶ ಕಳುಹಿಸಲಾಗಿದೆ. 2023ರ ಜನವರಿಯಲ್ಲಿ ತಪ್ಪು ಲೆಕ್ಕದಿಂದಾಗಿ ಹೆಚ್ಚಿನ ವೇತನ ಪಾವತಿಯಾಗಿದೆ. ಅದನ್ನು ಆದಷ್ಟು ಬೇಗನ ಹಿಂದಿರುಗಿಸಿದರೆ ನಾವು ಆಭಾರಿ’ ಎಂದು ಕೋರಲಾಗಿದೆ. ‘ಈ ಪಾವತಿಯು ನೌಕರರು ಕಂಪನಿ ಸೇರಿದ ಸಂದರ್ಭದಲ್ಲಿ ನೀಡಲಾದ ಷೇರುಗಳನ್ನು ನಗದೀಕರಿಸುವಾಗ ಆಗಿರುವ ತಪ್ಪು ಲೆಕ್ಕದಿಂದಾಗಿ ಹೆಚ್ಚುವರಿ ಹಣ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ ಧಿಮಾಕಿನ ವರ್ತನೆ ತೋರಿದ್ದಾರೆ ಎನ್ನಲಾಗುತ್ತಿದೆ. ಮನೆಯಲ್ಲಿದ್ದಾಗ  ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಈಗ ಕಸ್ಟಡಿಯಲ್ಲಿ ಅದೇ ರೀತಿಯ ಊಟ, ಉಪಚಾರ ಬೇಕು ಎಂದುಕೊಳ್ಳುತ್ತಿದ್ದಾರೆ. ತನಗೆ ನೀಡಿರುವ ಊಟದ ಬಗ್ಗೆ ಪವಿತ್ರಾ ಚಕರಾರು ತೆಗೆದಿದ್ದಾರೆ. ಶುಕ್ರವಾರ ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ ನೀಡಲಾಗಿತ್ತು. ಎರಡು ತುತ್ತು ಸೇವಿಸಿದ ಪವಿತ್ರಾ ತಾನು ಪೊಲೀಸ್‌ ಕಸ್ಟಡಿಯಲ್ಲಿ ನಾನು ಇದ್ದೇನೆ ಎನ್ನುವುದನ್ನೇ ಮರೆತು ಇದು ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು ಎಂದು ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ. ಪವಿತ್ರಾ ಪ್ರಶ್ನೆಗೆ, ನಾನು ಊಟ ಮಾಡ್ತಿರೋದು ಕೂಡ ಅದೇ ಮೊಸರನ್ನ. ಬೇಕಾದ್ರೆ ಊಟ ಮಾಡು. ಇಷ್ಟ ಇಲ್ಲದೇ ಇದ್ರೆ ಬಿಟ್ಟು ಬಿಡು ಎಂದು ಅಷ್ಟೇ ಖಡಕ್‌ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಪೆಚ್ಚಾದ ಪವಿತ್ರಾ ಗೌಡ ಕೊನೆಗೆ ಮೊಸರನ್ನ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ…

Read More

ಬ್ರಿಟನ್ ನ ವೇಲ್ಸ್‌ನ ರಾಜಕುಮಾರಿ ಕೇಟ್ ಅವರು ಬಕಿಂಗ್‌ಹ್ಯಾಂ ಅರಮನೆಯ ಬಾಲ್ಕನಿಯಿಂದ ಮಿಲಿಟರಿ ಪರೇಡ್ ವೀಕ್ಷಿಸಿ, ನೆರೆದಿದ್ದ ಜನರತ್ತ ಕೈಬೀಸಿದರು. ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ನಂತರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು. 42 ವರ್ಷ ವಯಸ್ಸಿನ ಕೇಟ್ ಅವರು ಜನವರಿಯಲ್ಲಿ ಉದರದ ಶಸ್ತ್ರಚಿಕಿತ್ಸೆ ಒಳಗಾದ ನಂತರ ಎರಡು ವಾರ ಆಸ್ಪತ್ರೆಯಲ್ಲಿದ್ದರು. ಇದಾದ ಎರಡು ತಿಂಗಳ ನಂತರ ವಿಡಿಯೊ ಸಂದೇಶವನ್ನು ರವಾನಿಸಿದ ಅವರು ತಮಗೆ ಕ್ಯಾನ್ಸರ್ ಇರುವುದಾಗಿ, ಮುನ್ನೆಚ್ಚರಿಕೆಯ ಭಾಗವಾಗಿ ಕಿಮೊಥೆರಪಿಗೆ ಒಳಗಾಗಿರುವುದಾಗಿ ತಿಳಿಸಿದ್ದರು. ಈಗಲೂ ಅವರ ಚಿಕಿತ್ಸೆ ಮುಂದುವರೆದಿದೆ. “ನನ್ನ ವೈದ್ಯಕೀಯ ತಂಡವು ನಾನು ತಡೆಗಟ್ಟುವ ಕೀಮೋಥೆರಪಿಯ ಕೋರ್ಸ್‌ಗೆ ಒಳಗಾಗಬೇಕೆಂದು ಸಲಹೆ ನೀಡಿದೆ ಮತ್ತು ನಾನು ಈಗ ಆ ಚಿಕಿತ್ಸೆಯ ಆರಂಭಿಕ ಹಂತದಲ್ಲಿದ್ದೇನೆ” ಎಂದು ಮಾರ್ಚ್ 20 ರಂದು ಚಿತ್ರೀಕರಿಸಲಾದ ವೀಡಿಯೊದಲ್ಲಿ ರಾಜಕುಮಾರಿ ಕೇಟ್ ಹೇಳಿದ್ದಾರೆ. “ಇದು ಸಹಜವಾಗಿ ದೊಡ್ಡ ಆಘಾತವನ್ನು ತಂದಿತು, ಮತ್ತು ವಿಲಿಯಂ ಮತ್ತು ನಾನು ನಮ್ಮ ಯುವ ಕುಟುಂಬದ ಸಲುವಾಗಿ ಇದನ್ನು ಖಾಸಗಿಯಾಗಿ ಪ್ರಕ್ರಿಯೆಗೊಳಿಸಲು ಮತ್ತು…

Read More

ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಸುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ. ಪೆಟ್ರೋಲ್, ಡಿಸೇಲ್ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್‌ ಸೇಲ್ಸ್‌ ಟ್ಯಾಕ್ಸ್‌ ದರ ಹೆಚ್ಚಳ ಮಾಡಲಾಗಿದೆ. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ‌ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1% ರಷ್ಟು ಏರಿಕೆ). ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ಪೆಟ್ರೋಲ್‌ ದರ 100 ರೂಪಾಯಿ ದಾಟಲಿದೆ. ಈಗ ಪೆಟ್ರೋಲ್‌ ದರ 99.54 ರೂ. ಇದ್ದು, ಮುಂದೆ 102 ರೂಪಾಯಿಗೆ ಏರಿಕೆಯಾಗಲಿದೆ. ಇವತ್ತಿನ ಡೀಸೆಲ್‌ ದರ 85.93 ರೂಪಾಯಿ ಇದೆ. ಅದು 89.43 ರೂ.…

Read More

ಇಬ್ಬರು ಏರ್ ಕೆನಡಾ ಉದ್ಯೋಗಿಗಳು ಸೇರಿದಂತೆ ಶಂಕಿತರು ಸ್ವಿಟ್ಜರ್ಲೆಂಡ್ನಿಂದ ಆಗಮಿಸುವ 400 ಕೆಜಿ (882 ಪೌಂಡ್) ತೂಕದ 6,600 ಚಿನ್ನದ ಗಟ್ಟಿಗಳು ಮತ್ತು 2.5 ಮಿಲಿಯನ್ ಡಾಲರ್ ವಿದೇಶಿ ಕರೆನ್ಸಿಯನ್ನು ಕದಿಯಲು ವಾಯುಮಾರ್ಗದ ಬಿಲ್ ಅನ್ನು ನಕಲಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪೊಲೀಸರು ಚಿನ್ನದ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿ ಅರ್ಚಿತ್ ಗ್ರೋವರ್ ಅವರನ್ನು ಬಂಧಿಸಿ ಆರೋಪ ಹೊರಿಸಿದ್ದಾರೆ ಎಂದು ಹೇಳಿದರು

Read More

ಪ್ಯಾಲೆಸ್ಟೀನ್‌ ಹಾಗೂ ಇಸ್ರೇಲ್‌ ನಡುವೆ ಎಂಟು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಿಂದಾಗಿ 37,296 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್‌ ಆಡಳಿತವಿರುವ ಗಾಜಾ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ಒಟ್ಟು 85,197 ನಾಗರಿಕರು ಗಾಯಗೊಂಡಿದ್ದಾರೆ ಎಂದೂ ಹೇಳಿದೆ. ಹಮಾಸ್ ಬಂಡುಕೋರರು ಇಸ್ರೇಲ್‌ ಮೇಲೆ ಕಳೆದ ವರ್ಷ ಅಕ್ಟೋಬರ್‌ 7ರಂದು ದಾಳಿ ನಡೆಸಿದ್ದರು. ಈ ವೇಳೆ ಸಾವಿರಾರು ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇಸ್ರೇಲ್‌ ಪ್ರತಿದಾಳಿ ನಡೆಸುತ್ತಿದೆ.

Read More