Author: Author AIN

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಅರೆಸ್ಟ್ ಆಗಿ 10 ದಿನ ಕಳೆದಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು ದರ್ಶನ್ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೀಗ ದರ್ಶನ್ ​ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ, ದರ್ಶನ್ ರನ್ನು ಗಾಡ್​ಫಾದರ್, ಗುರು ಎಂದೇ ಭಾವಿಸಿದ್ದ, ಈ ಹಿಂದೆ ಕೆಲವು ವಿವಾದಗಳಾದ ದರ್ಶನ್ ಪರವಹಿಸಿದ್ದ ನಟಿ ರಚಿತಾ ರಾಮ್ ಇದೀಗ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೇಣುಕಾ ಸ್ವಾಮಿ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಟಿ ರಚಿತಾ ರಾಮ್, ‘ಈ ನೋಟ್‌ ಅನ್ನು ನಾನು ನಟಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದಾನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು, ಮೊದಲಿಗೆ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನಿಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಒಂದೊಂದೆ ಹೊಸ ಹೊಸ ಸುದ್ದಿಗಳು ಹೊರ ಬರುತ್ತಿವೆ. ಅಭಿಮಾನಿಗಳಿಂದ ದೇವರು ಎಂದೇ ಆರಾಧಿಸಿಕೊಳ್ಳುತ್ತಿದ್ದವನ ರಿಯಲ್ ಸ್ಟೋರಿ ಅನಾವರಣ ವಾಗುತ್ತಿದೆ. ಇದೀಗ ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾಧ್ಯಮಗಳ ಮುಂದೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ರೇಣುಕಾ ಸ್ವಾಮಿಯ ಕುಟುಂಬದ ಪರವಾಗಿ ನಿಲ್ಲುವುದು ದರ್ಶನ್ ಅಭಿಮಾನಿಗಳ ಕರ್ತವ್ಯ ಎಂದಿರು ಸಂಬರ್ಗಿ, ಅಪಾರ್ಟ್​ಮೆಂಟ್​ನಲ್ಲಿ ದರ್ಶನ್ ಕರ್ಮಕಾಂಡಗಳ ಬಗ್ಗೆಯೂ ತಿಳಿಸಿದ್ದಾರೆ. ‘ದರ್ಶನ್ ರ ಪತ್ನಿ ವಿಜಯಲಕ್ಷ್ಮಿ ಅವರು ವಾಸವಿರುವ ಅಪಾರ್ಟ್​ಮೆಂಟ್​ನಲ್ಲಿಯೇ ನಾನು ಸಹ ಕಳೆದ ಕೆಲ ವರ್ಷಗಳಿಂದಲೂ ವಾಸವಿದ್ದೇನೆ. ಒಂದು ಬಾರಿಯೂ ಅವರನ್ನು ನೋಡಿದ್ದಿಲ್ಲ. ಅವರು ಹಗಲು ಹೊರ ಬರುವುದೇ ಅಪರೂಪ, ಅವರೇನಿದ್ದರೂ ದೆವ್ವಗಳು ಓಡಾಡುವ ಸಮಯದಲ್ಲಿಯೇ ಬರುತ್ತಿದ್ದಿದ್ದು, ಅವರಿಂದಾಗಿ ಆಗಾಗ್ಗೆ ಅಪಾರ್ಟ್​ಮೆಂಟ್​ನಲ್ಲಿ ಸಮಸ್ಯೆ ಆಗುತ್ತಲೇ ಇರುತ್ತಿತ್ತು’ ಎಂದಿದ್ದಾರೆ. ‘ರಾತ್ರಿ ಬಂದರು ವಾಚ್​ಮ್ಯಾನ್​ಗೆ ಹೊಡೆದರು, ಆ ನಿಯಮ ಮುರಿದರು, ಅವರೊಟ್ಟಿಗೆ ಜಗಳ ಮಾಡಿದರು ಇದೇ ವಿಷಯಗಳು ಕೇಳಲು ಸಿಗುತ್ತಿತ್ತು. ನಮ್ಮ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಳಿಕ ಒಂದೊಂದೆ ಪ್ರಕರಣಗಳು ಆಚೆ ಬರುತ್ತಿದೆ. ದರ್ಶನ್ ಮ್ಯಾನೇಜರ್ ಮಲ್ಲಿ ಕಾಣೆಯಾದ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೆ, ಅನೆಕಲ್​ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಧರ್ ಎಂಬಾತನ ಆತ್ಮಹತ್ಯೆ ಪ್ರಕರಣ ಸುದ್ದಿಯಾಗಿತ್ತು. ಏಪ್ರಿಲ್ 17 ರಂದು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀಧರ್ ದರ್ಶನ್ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಆದರೆ ಇದೀಗ ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಿರುವ ಶ್ರೀಧರ್ ಕುಟುಂಬಸ್ಥರು ಆತ ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತಿರಲಿಲ್ಲ ಎಂದಿದ್ದಾರೆ. ಮೃತ ಶ್ರೀಧರ್ ದುರ್ಗ ಕನ್​ಸ್ಟ್ರಕ್ಷನ್​ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಐದು ವರ್ಷ ರೈಟರ್ ಆಗಿ ಶ್ರೀಧರ್ ಕೆಲಸ ಮಾಡಿದ್ದು, ಅಲ್ಲಿ ವೇತನ ಕೊಡದೇ ಆತನನ್ನು ದುಡಿಸಿಕೊಂಡಿದ್ದ ಆರೋಪವಿದೆ. ದುಡಿಮೆಯ ಬಗ್ಗೆ ಪೋಷಕರು ಪ್ರಶ್ನಿಸಿದಕ್ಕೆ ಆತ್ಮಹತ್ಯೆಗೆ ಸಹ ಪ್ರಯತ್ನ ಪಟ್ಟಿದ್ದ. ವರ್ಷದ ಹಿಂದೆ ಇಲಿ ಪಾಷಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ, ಆತ ಖಿನ್ನತೆಯಲ್ಲಿಯೂ ಇದ್ದ…

Read More

ಸಿಖ್ ಪ್ರತ್ಯೇಕತಾವಾದಿ ಹೋರಾಟಗಾರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಭಾರತ ಮೂಲದ 52 ವರ್ಷದ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಇಂದು ನಿಖಿಲ್ ಗುಪ್ತಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಈ ವೇಳೆ ನ್ಯಾಯಾಧೀಶರ ಮುಂದೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅಮೆರಿಕ ಮನವಿ ಮೇರೆಗೆ ಕಳೆದ ವರ್ಷವೇ ಜೆಕ್ ರಿಪಬ್ಲಿಕ್‌ನಲ್ಲಿ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಭಾನುವಾರ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ತಮ್ಮ ಹಸ್ತಾಂತರ ಪ್ರಶ್ನಿಸಿ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಜೆಕ್ ನ್ಯಾಯಾಲಯವು ಕಳೆದ ತಿಂಗಳು ತಿರಸ್ಕರಿಸಿತ್ತು. ಗುಪ್ತಾ ಅವರನ್ನು ಸೋಮವಾರ ಅಮೆರಿಕ ಫೆಡರಲ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರು ತಾವು ತಪ್ಪಿತಸ್ಥರಲ್ಲ ಎಂದು ಹೇಳಿರುವುದಾಗಿ ಅವರ ವಕೀಲ ಜೆಫ್ರಿ ಚಾಬ್ರೋವ್ ಹೇಳಿದ್ದಾರೆ. ಹೆಸರು ಬಹಿರಂಗಪಡಿಸದ ಭಾರತದ ಸರ್ಕಾರಿ ಅಧಿಕಾರಿ ನಿರ್ದೇಶನದಂತೆ ಗುಪ್ತಾ ಕೆಲಸ ಮಾಡಿದ್ದಾರೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಅವರ ಸೂಚನೆ ಮೇರೆಗೆ ಪನ್ನು ಹತ್ಯೆಗೆ ವ್ಯಕ್ತಿಯೊಬ್ಬನಿಗೆ ಸುಪಾರಿ…

Read More

ಆರ್ ಸಿಬಿ ತಂಡದ ಮಾಜಿ ನಾಯಕ, ಮದ್ಯದ ದೊರೆ ಎಂದೇ ಖ್ಯಾತಿ ಘಳಿಸಿ ಕೈತುಂಬಾ ಸಾಲಾ ಮಾಡಿ ಭಾರತ ಬಿಟ್ಟು ಸದ್ಯ ಲಂಡನ್ ನಲ್ಲಿ ಸೆಟಲ್ ಆಗಿರುವ ವಿಜಯ್ ಮಲ್ಯ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ಈಗಾಗ್ಲೆ ಮಲ್ಯ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಮದುವೆ ಸಂಭ್ರಮದ ಮೊದಲ ಫೋಟೋವನ್ನು ಸಿದ್ದಾರ್ಥ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಾಸ್ಮಿಕ್ ಜೊತೆಗಿರುವ ಫೋಟೋ ಶೇರ್ ಮಾಡಿರುವ ಸಿದ್ದಾರ್ಥ್ ಮಲ್ಯ, “ಮದುವೆಯ ವಾರ ಪ್ರಾರಂಭವಾಗಿದೆ” ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಈ ಜೋಡಿ ಪರಸ್ಪರ ತಬ್ಬಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸಿದ್ದಾರ್ಥ್ ಹಾಗೂ ಜಾಸ್ಮಿನ್ 2023ರ ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ಮದುವೆ ಕುರಿತು ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇನೆ ಎಂದು ಸಿದ್ದಾರ್ಥ್ ಮಲ್ಯ ತಿಳಿಸಿದ್ದರು. ಸಿದ್ದಾರ್ಥ್…

Read More

ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾದ ಅಲ್ಕಾ ಯಾಗ್ನಿಕ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂಗೀತವನ್ನೇ ಉಸಿರಾಗಿಸಿಕೊಂಡ ಈಕೆಗೆ ಇದೀಗ ಕಿವಿ ಕೇಳಿಸುತ್ತಿಲ್ಲ. ಈ ಸಮಸ್ಯೆಯನ್ನು ಸ್ವತಃ ಅಲ್ಕಾ ಯಾಗ್ನಿಕ್ ಹೇಳಿಕೊಂಡಿದ್ದಾರೆ. ವೃತ್ತಿಪರ ಗಾಯಕಿ ಎಂದಮೇಲೆ ಪ್ರತಿದಿನ ಸಂಗೀತವನ್ನು ಕೇಳಿಸಿಕೊಳ್ಳಬೇಕು ಹಾಗೂ ಅಭಿಮಾನಿಗಳಿಗೆ ಇಷ್ಟವಾಗುವಂತೆ ಹಾಡಬೇಕು. ಈ ಕೆಲಸಕ್ಕೆ ತುಂಬಾ ಚೆನ್ನಾಗಿ ಕಿವಿ ಕೇಳಿಸುವುದು ಅತ್ಯಗತ್ಯ. ಆದರೆ ಈಗ ಅಲ್ಕಾ ಯಾಗ್ನಿಕ್ ಗೆ ಕಿವಿ ಕೇಳಿಸುತ್ತಿಲ್ಲ ಎಂಬ ವಿಷಯ ಕೇಳಿ ಸಾಕಷ್ಟು ಮಂದಿ ಶಾಕ್ ಆಗಿದ್ದಾರೆ. ‘ನನ್ನೆಲ್ಲ ಅಭಿಮಾನಿಗಳು, ಸ್ನೇಹಿತರು, ಫಾಲೋವರ್ಸ್​ ಮತ್ತು ಹಿತೈಷಿಗಳಿಗೆ ಈ ವಿಷಯ ತಿಳಿಸುತ್ತಿದ್ದೇನೆ. ಕೆಲವು ವಾರಗಳ ಹಿಂದೆ ನಾನು ವಿಮಾನದಿಂದ ಹೊರಬಂದಾಗ ನನಗೆ ಏನೂ ಕೇಳಿಸುತ್ತಿಲ್ಲ ಎಂಬುದು ತಿಳಿಯಿತು. ಆ ಬಳಿಕ ಸ್ವಲ್ಪ ಧೈರ್ಯ ತಂದುಕೊಂಡು ಈ ಬಗ್ಗೆ ಮೌನ ಮುರಿಯುತ್ತಿದ್ದೇನೆ. ಇತ್ತೀಚೆಗೆ ಯಾಕೆ ನಾನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳುತ್ತಿದ್ದ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಈ ವಿಷಯ ಹೇಳುತ್ತಿದ್ದೇನೆ’. ವೈರಲ್ ಅಟ್ಯಾಕ್‌ನಿಂದಾಗಿ ಅಪರೂಪದ ಸಂವೇದನಾ ನರಗಳ ಶ್ರವಣ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣದ​ ಬಗ್ಗೆ ಪೊಲೀಸ್​ ಕಮಿಷನರ್ ಬಿ.ದಯಾನಂದ್​ ಸುದ್ದಿಗೋಷ್ಠಿ ನಡೆಸಿ ತನಿಖೆಯ ಮಾಹಿತಿ ನೀಡಿದ್ದಾರೆ. ಪೊಲೀಸರು ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕತೆಯಿಂದ ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಪ್ರಕರಣ ಸತ್ಯತೆಯನ್ನು ಬಯಲು ಮಾಡುವುದಾಗಿ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು​, ಈವರೆಗೆ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ರು. ಆರೋಪಿಗಳ ಕೂಲಂಕಷ ವಿಚಾರಣೆ ನಡೆಸಲಾಗ್ತಿದೆ ಇದೆ. ಪ್ರಕರಣದ ತನಿಖೆಯನ್ನ ಎಸಿಪಿ ಮಟ್ಟದ ಅಧಿಕಾರಿಗೆ ನೀಡಲಾಗಿದೆ ಎಂದರು. ಪ್ರತಿ ವಿಚಾರದ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ. ತನಿಖಾ ತಂಡದಲ್ಲಿ ಹಲವು ಇನ್ಸ್‌ಪೆಕ್ಟರ್, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸಾಕ್ಷಿ ಸಂಗ್ರಹಕ್ಕೆ ಸಹಕರಿಸಲು ಎಫ್‌ಎಸ್‌ಎಲ್ ತಜ್ಞರು, ತಾಂತ್ರಿಕ ಪರಿಣತರು ಇದ್ದಾರೆ. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಸುತ್ತಿದ್ದಾರೆ…

Read More

ಬೆಂಗಳೂರಿನ ಹೊರವಲಯದಲ್ಲಿರುವ ನಟ ದರ್ಶನ್ ಅವರಿಗೆ ಸೇರಿದ್ದೆನ್ನಲಾದ ಫಾರ್ಮ್ ಹೌಸ್ ನಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮ್ಯಾನೇಜರ್ ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿದೆ. ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಡೆದಿದ್ದ ಘಟನೆ ನಡೆದಿದ್ದು, ಮೃತ ಮ್ಯಾನೇಜರ್ ಅವರನ್ನು ಶ್ರೀಧರ್ ಎಂದು ಗುರುತಿಸಿಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮ್ಯಾನೇಜರ್ ಶ್ರೀಧರ್  ಆತ್ಮಹತ್ಯೆಗೆ ಶರಣಾಗಿದ್ದರು. ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್‌ನಲ್ಲಿ ಶ್ರೀಧರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದನು. ಆತ, ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇನ್ನು ಶ್ರೀಧರ್ ಮೃತ ದೇಹವನ್ನು ನೋಡಿದ್ದ ಆತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದನು. ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಮ್ಯಾನೇಜರ್ ಶ್ರೀಧರ್ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಮೃತಪಟ್ಟಿದ್ದನು. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಶ್ರೀಧರ್, ಫಾರ್ಮ್‌ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ…

Read More

ಇಟಲಿಯ ಕರಾವಳಿಯಲ್ಲಿ ಸೋಮವಾರ ಹಾಯಿ ದೋಣಿಯೊಂದು ಅಪಪಾಯಕ್ಕೆ ಸಿಲುಕಿದ್ದು ಪರಿಣಾಮ ಕನಿಷ್ಠ 11 ವಲಸಿಗರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ 66 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಇಟಾಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿಯ ಕರಾವಳಿಯ ಬಳಿ ಎರಡು ವಲಸಿಗ ದೋಣಿಗಳು ಸಮಸ್ಯೆ ಸಿಲುಕಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಮೆಡಿಟರೇನಿಯನ್‌ನಲ್ಲಿ ಇಟಲಿಯ ಕರಾವಳಿ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಕ್ಷಿಣ ಇಟಲಿಯ ಕ್ಯಾಲಬ್ರಿಯಾದ ಕರಾವಳಿಯಿಂದ ಸುಮಾರು 120 ಮೈಲಿಗಳು ದೂರದಲ್ಲಿ ಹಾಯಿದೋಣಿಯೊಂದು ಸಂಕಷ್ಟಕ್ಕೆ ಸಿಲುಕಿರುವುದು ಗೊತ್ತಾಗಿದೆ. ಆ ಪ್ರದೇಶದಲ್ಲಿ ವ್ಯಾಪಾರಿ ಹಡಗು ಈ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಆ ಬಳಿಕ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ವ್ಯಾಪಾರಿ ಹಡಗು 12 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇಟಾಲಿಯನ್ ಕರಾವಳಿ ರಕ್ಷಣಾ ಹಡಗು, ಅಪಘಾತದ ಸ್ಥಳಕ್ಕೆ ಬರುವವರೆಗೂ ಅವರಿಗೆ ಸಹಾಯ ಮಾಡಿತು. ಅಪಘಾತಕ್ಕೀಡಾಗಿ ಬದುಕುಳಿದವರಿಗಾಗಿ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳನ್ನು ಇಂದು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರೇಣುಕಾಸ್ವಾಮಿಯ ಹತ್ಯೆ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ಮೈಸೂರಿಗೆ ತೆರಳಿದ್ದ ದರ್ಶನ್ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದರು. ಪ್ರಕರಣದಲ್ಲಿ ಪೊಲೀಸರೆದುರು ಶರಣಾಗಲು ಹಿಂದೇಟು ಹಾಕಿದ್ದಾಗ ಆರೋಪಿಗಳನ್ನು ಮೈಸೂರಿಗೆ ಕರೆಸಿ ಅವರ ಮನವೊಲಿಸುವ ಪ್ರಯತ್ನವನ್ನು ದರ್ಶನ್ ಮಾಡಿದ್ದರು ಎನ್ನಲಾಗಿದೆ. ಆದ್ದರಿಂದ ದರ್ಶನ್ ಮೈಸೂರಿನಲ್ಲಿ ತಂಗಿದ್ದ ಹೋಟೆಲ್ ಗೂ ಪೊಲೀಸರು ಭೇಟಿ ನೀಡಿ ಅಲ್ಲೂ ಮಹತ್ವದ ಮಾಹಿತಿ ಕಲೆ ಹಾಕಲಿದ್ದಾರೆ. ದರ್ಶನ್ ಜೊತೆಗೆ ಇನ್ನೂ ಕೆಲ ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ. ಈಗಾಗಲೇ ಆರೋಪಿಗಳ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿದ್ದು, ಪ್ರಕರಣದ ತನಿಖೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಬೆಳಗ್ಗೆ 10:30ರ ನಂತರ ಆರೋಪಿಗಳನ್ನು ಮೈಸೂರಿಗೆ ಕರೆದೊಯ್ದು ದರ್ಶನ್ ತಂಗಿದ್ದ ಖಾಸಗಿ ಹೋಟೆಲ್, ಜಿಮ್​ನಲ್ಲಿ ಪೊಲೀಸರು…

Read More