Author: Author AIN

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಹಾಗೂ ಆತನ ಗ್ಯಾಂಗ್ ಸದಸ್ಯರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಂದು ಇವರಗಳು ಕಸ್ಟಡಿ ಅಂತ್ಯವಾಗಲಿದ್ದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ದರ್ಶನ್ ಬಂಧನದ ಕುರಿತು ಸಾಷಕ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಬಗ್ಗೆ ಕೇಳ್ತಿದ್ದಂಗೆ ನಟ ಪ್ರೇಮ್ ಸೈಲೆಂಟ್ ಆಗಿದ್ದಾರೆ. ಪ್ರೇಮ್ ಆಪ್ತ ಸ್ನೇಹಿತ ಬನ್ನೂರಿನ ಮಹೇಂದ್ರ ಸಿಂಗ್ ಕಾಳಪ್ಪ ಅವರ ತಂದೆಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಟ ಪ್ರೇಮ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರು ದರ್ಶನ್ ಕುರಿತಾಗಿ ಪ್ರಶ್ನಿಸುತ್ತಿದ್ದಂತೆ ‘ಪ್ಲೀಸ್, ಆ ಬಗ್ಗೆ ಪ್ರಶ್ನಿಸಬೇಡಿ’ ‘ದಯಮಾಡಿ ಕಾರ್ಯಕ್ರಮದ ಬಗ್ಗೆ ಮಾತ್ರ ಮಾತಾಡಿ. ವೇದಿಕೆ ಮೇಲೆ ಆ ಕುರಿತು ಪ್ರತಿಕ್ರಿಯಿಸಲು ಪ್ರಶ್ನಿಸಬೇಡಿ’ ಎಂದ ಪ್ರೇಮ್. ದರ್ಶನ್ ಕುರಿತು ಯಾವುದೇ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಮ್ಯಾ, ರಚಿತಾ ರಾಮ್, ಅನಿರುದ್ಧ್, ಇಂದ್ರಜಿತ್ ಲಂಕೇಶ್, ಉಮಾಪತಿ ಶ್ರೀನಿವಾಸ್ ಗೌಡ, ಸುದೀಪ್ ಹೀಗೆ ಸಾಕಷ್ಟು ಮಂದಿ…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀಯವರು ಘಟನೆಯ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ಘಟನೆ ನಡೆದು ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾ ಖಾತೆಯಿಂದ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಬಳಿಕ ಏಕಾಏಕಿ ಇನ್ ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಅನುಮಾನ ಮೂಡಿಸಿದ್ದರು. ಘಟನೆ ನಡೆದು ಸಾಕಷ್ಟು ದಿನ ಕಳೆದಿದ್ದರು ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕೊನೆಗೂ ದರ್ಶನ್ ಪತ್ನಿ ಘಟನೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ʼಕಳೆದ ಕೆಲವು ದಿನಗಳಿಂದ ದರ್ಶನ್‌ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಮತ್ತು ಈ ಘಟನೆಯಿಂದ ನನಗೆ ಹಾಗೂ ನನ್ನ ಹದಿಹರೆಯದ ಮಗನಿಗೆ, ದರ್ಶನ್‌ ಅವರ ಸ್ನೇಹಿತರಿಗೆ, ಅಭಿಮಾನಿಗಳಿಗೆ ತುಂಬಾ ದುಃಖವಾಗಿದೆʼ ಎಂದು ಹೇಳಿದ್ದಾರೆ. ತಾಯಿ…

Read More

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಟ ದರ್ಶನ್,ಪವಿತ್ರಾ ಗೌಡ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ಬಳಿಕ ಎಲ್ಲಾ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ  ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ  ರೇಣುಕಾಸ್ವಾಮಿಯನ್ನು ಕಿಡ್ಯ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದಕ್ಕೆ ದರ್ಶನ್ ಹಾಗೂ ಅವರ ಗ್ಯಾಂಗ್ ಕಾರಣ ಎನ್ನುವ ಆರೋಪ ಬಂದಿದೆ. ಹೀಗಾಗಿ ಜೂನ್ 11ರ ಮುಂಜಾನೆಯೇ ದರ್ಶನ್ ಅವರನ್ನು ಬಂಧಿಸಲಾಯಿತು. ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧಿಸಿದ್ದು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಲಾಗಿದೆ.ಇಂದು ಎರಡನೇ ಬಾರಿಗೆ ಪೊಲೀಸ್ ಕಸ್ಟಡಿ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯದ ಎದುರು ಆರೋಪಿಗಳನ್ನು ಪೊಲೀಸರು ಹಾಜರಿಪಡಿಸಲಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ದರ್ಶನ್ ಹಾಗೂ ತಂಡವನ್ನು ಎರಡು ಬಾರಿ ಪೊಲೀಸ್ ಕಸ್ಟಡಿಗೆ…

Read More

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧ ಈಗ ಜಗತ್‌ ಜಾಹೀರಾಗಿದೆ. ಕಳೆದ ಹತ್ತು ವರ್ಷದಿಂದ ದರ್ಶನ್ ಜೊತೆಗೆ ಸಂಬಂಧದಲ್ಲಿ ಇರುವುದಾಗಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ದರ್ಶನ್ ಈ ಬಗ್ಗೆ ಯಾವುದೇ ಓಫನ್ ಸ್ಟೇಟ್ ಮೆಂಟ್ ನೀಡಿರಲಿಲ್ಲ. ಆದರೆ ಇದೀಗ ಪವಿತ್ರಾಗಾಗಿ ವ್ಯಕ್ತಿಯೋರ್ವನನ್ನೇ ಕೊಲೆ ಮಾಡೋ ಮೂಲಕ ದರ್ಶನ್ ಹಾಗೂ ಪವಿತ್ರಾ ಗೌಡ ಸಖತ್ ಸುದ್ದಿಯಲ್ಲಿದ್ದಾರೆ. ಯಾವಾಗ ದರ್ಶನ್ ಹಾಗೂಪವಿತ್ರಾ ಗೌಡ ಸುದ್ದಿಯಾಗೋಕೆ ಶುರುವಾದ್ರೋ ಇದೇ ವೇಳೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೆಸರು ಕೂಡ ಕೇಳಿ ಬರೋಕೆ ಶುರುವಾಗಿದೆ. ಅಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪವಿತ್ರಾ ಗೌಡ ಹಾಗೂ ಆಕೆಯ ಮಾಜಿ ಪತಿ ಸಂಜಯ್ ಸಿಂಗ್ ಒಟ್ಟಿಗಿರೋ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಪವಿತ್ರಾ ಗೌಡ ಮಾಜಿ ಪತಿಯ ಬಗ್ಗೆ ರಿವೀಲ್ ಮಾಡಿದ್ದರು. ಅಲ್ಲಿಂದ ಸಂಜಯ್ ಸಿಂಗ್ ಅವರ ಹೆಸರು ದರ್ಶನ್ ಹಾಗೂ ಪವಿತ್ರಾ ಗೌಡ ಹೆಸರಿನಲ್ಲಿ ಓಡಾಡುತ್ತಿದೆ.…

Read More

ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಅವರೊಂದಿಗಿನ ಸಭೆಯ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಯಟ್ನಾಂನ ಹನೋಯ್‌ಗೆ ತೆರಳಿದ್ದಾರೆ ಎಂದು ರಷ್ಯಾದ ಅಧ್ಯಕ್ಷರ ಕಚೇರಿ ತಿಳಿಸಿದೆ. ವಿಯಟ್ನಾಂನ ಪ್ರಧಾನ ಕಾರ್ಯದರ್ಶಿ ನ್ಗುಯೆನ್ ಫು ಟ್ರೋಂಗ್ ಅವರ ಆಹ್ವಾನದ ಮೇರೆಗೆ ಪುಟಿನ್ ವಿಯೆಟ್ನಾಂ ರಾಜಧಾನಿಗೆ ​​ ಭೇಟಿ ನೀಡುತ್ತಿದ್ದಾರೆ. ಎರಡು ದಿನಗಳ ಭೇಟಿಯ ನಂತರ ಅವರು ಬುಧವಾರ ಸಂಜೆ ಉತ್ತರ ಕೊರಿಯಾದಿಂದ ಹನೋಯ್‌ಗೆ ಪ್ರಯಾಣ ಬೆಳೆಸಿದ್ದರು. ಗುರುವಾರ, ರಷ್ಯಾದ ನಾಯಕ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಟ್ರೋಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಇದಕ್ಕೂ ಮೊದಲು ಅಧ್ಯಕ್ಷೀಯ ಭವನದಲ್ಲಿ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅವರು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಮತ್ತು ರಷ್ಯಾದಲ್ಲಿ ಅಧ್ಯಯನ ಮಾಡಿದ ವಿಯೆಟ್ನಾಮೀಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಪುಟಿನ್ ಅವರು ವಿಯಟ್ನಾಂ ಸರ್ಕಾರ ಏರ್ಪಡಿಸುವ ಔತಣಕೂಟದಲ್ಲಿ ಭಾಗಿಯಾಗಲಿದ್ದು ಆತಿಥ್ಯವನ್ನು ಸ್ವೀಕರಿಸಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತ್ಯೇಕವಾಗಿರುವ ಪುಟಿನ್ ರಷ್ಯಾದ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕೊಳಗಾಗಿ ಸದ್ಯ ವಿಚಾರಣೆಯಲ್ಲಿರೋ ನಟ ದರ್ಶನ್ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ ಹಲವು ಸುತ್ತಿನ ವಿಚಾರಣೆ ನಡೆಸಲಾಗಿದೆ. ವಿವಿಧ ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ. ಈ ಮೂಲಕ ನೂರಾರು ಬಗೆಯ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದ್ದು ಇದೀಗ ಡಿಎನ್ ಎ ಟೆಸ್ಟ್ ಕೂಡ ಮಾಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್​, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ. ಒಟ್ಟು 9 ಆರೋಪಿಗಳ ಸ್ಯಾಂಪಲ್ಸ್​ ಪಡೆದುಕೊಳ್ಳಲಾಗಿದೆ. ಆರೋಪಿಗಳ ರಕ್ತ ಮತ್ತು ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ರೇಣುಕಾ ಸ್ವಾಮಿ ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಕೂದಲು ಹಾಗೂ ರಕ್ತದ ಮಾದರಿಯ ಜೊತೆ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಇನ್ನೂ ಇದೇ ವೇಳೆ ನಟ ದರ್ಶನ್ ಅವರು ತಲೆಗೆ ಹಾಕಿದ್ದ ವಿಗ್ ಅನ್ನು ಪೊಲೀಸರು ತೆಗೆಸಿದ್ದಾರೆ ಎನ್ನಲಾಗಿದೆ. ಇಂದು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಎ-೧ ಆರೋಪಿ ಪವಿತ್ರಾ ಗೌಡ, ಎ-೨…

Read More

ಸೌದಿ ಅರೇಬಿಯಾದಲ್ಲಿ ಬಿಸಿಲ ತಾಪ ಅತಿಯಾಗಿದ್ದುಇದರಿಂದ ಹಜ್​ ಯಾತ್ರೆಕರು ಕಂಗಾಲಾಗಿದ್ದಾರೆ. ಬೀಕರ ಬಿಸಿಲಿನ ತಾಪದಿಂದ ಕನಿಷ್ಠ 41 ಜೋರ್ಡಿಯನ್ನರು ಸಾವನ್ನಪ್ಪಿದ್ದಾರೆ ಎಂದು ಜೋರ್ಡಾನ್​ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಗಾಳಿಯಿಂದ ಸಾವನ್ನಪ್ಪಿದ ಜೋರ್ಡಾನ್ ಯಾತ್ರಾರ್ಥಿಗಳನ್ನು ಮೆಕ್ಕಾದಲ್ಲಿ ಸಮಾಧಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಜೊತೆಗೆ ನಾಪತ್ತೆಯಾಗಿರುವ ಯಾತ್ರಾರ್ಥಿಗಳಿಗಾಗಿ ಶೋಧ ಕಾರ್ಯವೂ ಮುಂದುವರಿದಿದೆ. ಸೌದಿ ಅರೇಬಿಯಾದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಈ ಸಂಬಂಧ ಯಾತ್ರಿಕರಿಗೆ ಮುನ್ನೆಚ್ಚರಿಕೆವಹಿಸುವಂತೆ ತಿಳಿಸಲಾಗಿದೆ. ಅಲ್ಲದೇ, ಅಲ್ಲಿನ ಸ್ಥಳೀಯ ಕಾಲಮಾನ 4 ಗಂಟೆವರೆಗೆ ತಮ್ಮ ಆಚರಣೆಗಳನ್ನು ಮುಂದೂಡುವಂತೆ ತಿಳಿಸಲಾಗಿದೆ. ಮೆಕ್ಕಾದಲ್ಲಿ ಗರಿಷ್ಠ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಇಲ್ಲಿನ ಇತರ ಯಾತ್ರಿಕರ ಸ್ಥಳಗಳಲ್ಲಿ 48 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾದ ವರದಿಯಾಗಿದೆ. ಈ ಬಾರಿ ಹಜ್​ದಲ್ಲಿ 1.8 ಮಿಲಿಯನ್​​ ಮಂದಿ ಭಾಗಿಯಾಗಿದ್ದು, ಸುಡುವ ತಾಪಮಾನದ ನಡುವೆ ಶುಕ್ರವಾರದಿಂದ ಪವಿತ್ರ ಹಜ್​ ಯಾತ್ರೆ ಪ್ರಾರಂಭವಾಗಿದೆ. ಯಾತ್ರಿಕರ ಅನುಕೂಲಕ್ಕಾಗಿ ಸಾರಿಗೆ ಬಸ್​​ ಮತ್ತು ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಭಾರಿ ಸಂಖ್ಯೆಯ ಜನಸ್ತೋಮ ಮತ್ತು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ಎ2 ಆರೋಪಿಯಾಗಿರೋ ದರ್ಶನ್ ನಡೆಸಿದ ಕೃತ್ಯವನ್ನು ಸಾಕಷ್ಟು ಮಂದಿ ಖಂಡಿಸಿದ್ದಾರೆ. ಆದರೆ ಘಟನೆ ನಡೆದು 10 ದಿನ ಕಳೆದಿದ್ದರು ದರ್ಶನ್ ಪತ್ನಿ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ವಿಜಯಲಕ್ಷ್ಮಿ ಮೌನ ಮುರಿದಿದ್ದಾರೆ. ಹತ್ಯೆ ಆಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಕ್ಕೆ ವಿಜಯಲಕ್ಷ್ಮಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಸತ್ಯ ಯಾವತ್ತಿದ್ದರು ಗೆದ್ದೆ ಗೆಲ್ಲುತ್ತದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಎಲ್ಲಕ್ಕಿಂತ ಮೊದಲು, ಮೃತ ಶ್ರೀ ರೇಣುಕಾ ಸ್ವಾಮಿ ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ವಿಜಯಲಕ್ಷ್ಮಿ ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಕೆಲವು ಪ್ರಮುಖ ವಿಚಾರಗಳನ್ನು ಅವರು ತಿಳಿಸಿದ್ದಾರೆ. ದರ್ಶನ್​ ಹಾಗೂ ಅವರ ಕುಟುಂಬದವರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುಳ್ಳು ಸುದ್ದಿ ಹರಡದಂತೆ ಅವರು ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ. ಆ ಬಗ್ಗೆಯೂ ವಿಜಯಲಕ್ಷ್ಮಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸಾಕಷ್ಟು ಮಾಹಿತಿಗಳು ಹೊರ ಬಿದ್ದಿದ್ದು ಘಟನೆಯ ಕುರಿತು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಘಟನೆಯ ಕುರಿತು ‘ಚಿಂಗಾರಿ’ ಚಿತ್ರದ ನಿರ್ಮಾಪಕ ಮಹಾದೇವ್ ಪ್ರತಿಕ್ರಿಯಿಸಿದ್ದಾರೆ. ”ಚಿಂಗಾರಿ ಸಿನಿಮಾಗೆ ಹಾಕಿದ್ದ ಬಂಡವಾಳ ನನಗೆ ವಾಪಸ್ ಬಂದಿತ್ತು. ಚಿತ್ರೀಕರಣದ ಸಮಯದಲ್ಲಿ ದರ್ಶನ್ ವಿನಯದಿಂದ ವರ್ತಿಸಿದ್ದರು‌. ಸಿನಿಮಾ ಶೂಟಿಂಗ್ ಪೂರ್ಣಗೊಂಡು, ಅಂದುಕೊಂಡಂತೆ ರಿಲೀಸ್ ಆಗಿತ್ತು. ಕಮರ್ಷಿಯಲ್ ಸಿನಿಮಾವಾದ ಕಾರಣ ಚಿತ್ರ ಕೂಡ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆಗ ಯಾರೋ ಮೂರನೇ ವ್ಯಕ್ತಿಯ ಮಾತು ಕೇಳಿ,‌ ನನಗೆ ಇಂತಿಷ್ಟು ಹಣ ಕೊಡಿ ಎಂದು ದರ್ಶನ್‌ ಕೇಳಿದಾಗ ನಮ್ಮ ನಡುವೆ ವಾಗ್ವಾದ ನಡೆದಿತ್ತು. ಕೊನೆಗೆ ಅವರು ಹೇಳಿದಂತೆ ಒಂದಿಷ್ಟು ಹಣ ಕೊಡಬೇಕಾಯಿತು ಎಂದು ನಿರ್ಮಾಪಕ ಮಹಾದೇವ ಹೇಳಿದ್ದಾರೆ. “ನಾನು ಗಮನಿಸಿದಂತೆ, ದರ್ಶನ್ ಅವರಿಗೆ ಸ್ವಂತ ಬುದ್ಧಿ ಕಡಿಮೆ. ಅವರು ಹೆಚ್ಚಾಗಿ ಮೂರನೇ ವ್ಯಕ್ತಿಗಳ ಮಾತು ಕೇಳುತ್ತಾರೆ. ಆ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಪ್ರತಿಕ್ರಿಯೆ ನೀಡಿದ್ದರು. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳಿಂದ ಪ್ರಥಮ್ ಗೆ ಬೆದರಿಕೆ ಕರೆ ಬರುತ್ತಿದೆ. ಈ ವಿಚಾರವಾಗಿ ಪ್ರಥಮ್, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಬೆದರಿಕೆ ಕರೆ ಕುರಿತು ಮಾತನಾಡಿದ್ದಾರೆ. ದರ್ಶನ್ ಪ್ರಕರಣದ ವಿಚಾರವಾಗಿ ಇತ್ತೀಚೆಗೆ ಪ್ರಥಮ್ ಧ್ವನಿಯೆತ್ತಿದ್ದರು. ಇದು ದರ್ಶನ್ ಫ್ಯಾನ್ಸ್‌ಗೆ ಕೆರಳಿಸಿತ್ತು. ಬಳಿಕ ಪ್ರಥಮ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಪ್ರಥಮ್ ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾ ಶೂಟಿಂಗ್ ಮಾಡೋಕೆ ಆಗುತ್ತಿಲ್ಲ ಎಂದಿದ್ದಾರೆ. ಇಲ್ಲಿ ಯಾರಿಗೂ ಯಾರು ಬಾಸ್ ಅಲ್ಲ. ಬಾಸ್ ಎನ್ನಬೇಡಿ ತಲೆಗೆ ಹತ್ತುತ್ತದೆ. ನಿಮಗೆ ನಿಮ್ಮ ತಂದೆ ತಾಯಿಗಳು ಬಾಸ್ ದುಡಿದು ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಅಲ್ಲಿ ನಿಂತು ಟೈಮ್ ವೇಸ್ಟ್ ಮಾಡಿಕೊಳ್ತಿರಾ ಅದೇ ಟೈಮ್ ಬೇರೆ ಕಡೆ ಹಾಕಿ ಉಪಯೋಗಿಸಿಕೊಳ್ಳಿ ಎಂದಿದ್ದಾರೆ. ಯಾರು ಯಾರಿಗೋಸ್ಕರನೋ ಜೈಲಿಗೆ ಹೋಗಬೇಡಿ. ಸ್ಟೇಷನ್ ಹತ್ತಿರ ಅಲ್ಲ…

Read More