ಹೊಸಕೋಟೆ: ತಿರುಮಲಶೆಟ್ಟಿಹಳ್ಳಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಬಂಧಿಸಿದ್ದಾರೆ. 46 ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು, 25 ವರ್ಷಗಳ ನಂತರ ಆರೆಸ್ಟ್ ಮಾಡಲಾಗಿದೆ. ಸರ್ದಾರ್ (50) ಮತ್ತು ಸುಹೇಲ್ ( 51) ಬಂಧಿತ ಆರೋಪಿಗಳು.. ದೇವನಜೀವನಹಳ್ಳಿ ಮತ್ತು ಬನಶಂಕರಿ ನಿವಾಸಿಗಳಾಗಿರುವ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 25 ವರ್ಷಗಳಿಂದಲೂ ತಲೆಮರೆಸಿಕೊಂಡಿದ್ದರು. https://ainlivenews.com/winter-session-in-belgaum-from-december-9/ ಇದೀಗ ತಿರುಮಲಶೆಟ್ಟಿಹಳ್ಳಿ ಪೋಲಿಸ್ ಇನ್ಸ್ಪೆಕ್ಟರ್ ಸುಂದರ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇವರ ಮೇಲೆ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ 5 ಪ್ರಕರಣಗಳು, ಅನುಗೊಂಡನಹಳ್ಳಿ 5, ಹೊಸಕೋಟೆ 5, ನಂದಗುಡಿ 7, ಕೆಂಗೇರಿ 1, ಸರ್ಜಾಪುರ 1, ವರ್ತೂರು 1, ಜ್ಞಾನಭಾರತಿ 1 ಪ್ರಕರಣ ಮತ್ತು ಮಾಲೂರು ಪೋಲಿಸ್ ಠಾಣೆಯಲ್ಲಿ 20 ಪ್ರಕರಣಗಳು ದಾಖಲಾಗಿವೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
Author: Author AIN
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡಿಯನ್ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ ಮೇಳದಲ್ಲಿ ವಿಜಯಪುರ ಬಂಜಾರ ಕಸೂತಿ ಆರ್ಗನೈಸೇಷನ್ ಮಳಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಂನಲ್ಲಿ ನಡೆಯುತ್ತಿರುವ ಐಐಟಿಎಫ್ ನಲ್ಲಿನ ವಿಜಯಪುರ ಜಿಲ್ಲೆಯ `ಬಂಜಾರ ಕಸೂತಿ ಆರ್ಗನೈಸೇಷನ್’ ಮಳಿಗೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿವ ಎಂ.ಬಿ.ಪಾಟೀಲ ಪತ್ನಿ ಆಶಾ ಪಾಟೀಲ್ ಇದರ ನೇತೃತ್ವ ವಹಿಸಿದ್ದು, ಬಂಜಾರ ಕಸೂತಿ ಮಳಿಗೆಯು 2 ಲಕ್ಷ ರೂ.ಗಳಷ್ಟು ವಹಿವಾಟು ನಡೆಸಿದೆ. ಲಂಬಾಣಿ ಕರಕುಶಲ ಮತ್ತು ಕೈಮಗ್ಗದ ವಸ್ತುಗಳೆಂದರೆ ಕೇವಲ ರಾಜಸ್ಥಾನ ಮತ್ತು ಉತ್ತರ ಭಾರತದ್ದು ಎನ್ನುವುದನ್ನು ಮೀರಿ, ಈ ಮಳಿಗೆ ಗ್ರಾಹಕರನ್ನು ಸೆಳೆದಿದೆ. ಇದೇ 14ರಂದು ಆರಂಭವಾಗಿರುವ ಐಐಟಿಎಫ್ ಮೇಳವು ನ.27ರವರೆಗೆ ನಡೆಯಲಿದ್ದು, ಉಳಿದ ಒಂಬತ್ತು ದಿನಗಳಲ್ಲಿ ರಾಷ್ಟ್ರ ರಾಜಧಾನಿಯ ಇನ್ನೂ ಹೆಚ್ಚಿನ ಜನರನ್ನು ಮಳಿಗೆಯು ಆಕರ್ಷಿಸಲಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಲಂಬಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲ ಈ ಸಮುದಾಯದವರು ಹೆಚ್ಚಾಗಿದ್ದು, ಇವರ ಸಾಂಪ್ರದಾಯಿಕ…
ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ಎನಿಸಿರುವ ‘ಬೆಂಗಳೂರು ಟೆಕ್ ಶೃಂಗ 2024’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಟೆಕ್ ಅನ್ ಬೌಂಡ್ ಥೀಮ್ ನಡಿ ಅಯೋಜಿಸಲಾಗಿರುವ ಬೆಂಗಳೂರು ಟೆಕ್ ಶೃಂಗಸಭೆ 2024ಯನ್ನು ಮುಖ್ಯಮಂತ್ರಿಗಳು ಉದ್ಘಾಟಸಿದರು, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ ಮತ್ತು ಭಾರತ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಬೆಂಗಳೂರು ಟೆಕ್ ಶೃಂಗಸಭೆ 2024ರ 27ನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಬೆಂಗಳೂರು ಟೆಕ್ ಶೃಂಗ 2024’ಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಐ. ಟಿ, ಡೀಪ್ ಟೆಕ್, ಬಯೋ ಟೆಕ್ನಾಲಜಿ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿಯನ್ನು ರಾಜ್ಯದ ವ್ಯಾಪಕ ಪ್ರತಿಭೆ, ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ ಅಪ್ ಪರಿಸರ ಮತ್ತು ಸದೃಢವಾದ ಮೂಲಸೌಕರ್ಯ ವ್ಯವಸ್ಥೆ ಉತ್ತೇಜಿಸಿದೆ. ಈ ಹೆಮ್ಮೆಯ ಪರಂಪರೆಯನ್ನು ಆಧರಿಸಿ ನಾವೀನ್ಯತೆ, ಸುಸ್ಥಿರತೆ ಮತ್ತು ಒಳಗೊಂಡ ಬೆಳವಣಿಗೆಗೆ ನಮ್ಮ ಬದ್ಧತೆ ಆಚಲವಾಗಿದೆ. ಭಾರತದ ಮೊದಲ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ನೀತಿಯನ್ನು ಕರ್ನಾಟಕ…
‘ಜೋಡಿಹಕ್ಕಿ’ ಧಾರವಾಹಿ ಖ್ಯಾತಿಯ ನಟ ತಾಂಡವ್ ರಾಮ್ ನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಕ್ಕೆ ಬಂಧನ ಮಾಡಲಾಗಿದೆ. ಘಟನೆ ಕುರಿತು ಕಮಿಷನರ್ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಏರ್‌ಫೈರ್ ಮಾಡಿರೋದು ಗೊತ್ತಾಗಿದೆ ಎಂದಿದ್ದಾರೆ. ನಿನ್ನೆ (ನ.18) ಸಂಜೆ ಈ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಆರೋಪಿ ತಾಂಡವ್‌ರನ್ನು ಈಗಾಗಲೇ ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ ಗನ್ ಸೀಜ್ ಮಾಡಲಾಗಿದೆ. ಸಿನಿಮಾಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರದಲ್ಲಿ ತಾಂಡವ್ ಮತ್ತು ನಿರ್ದೇಶಕ ಭರತ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂಬುದು ಪ್ರಾರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗುಂಡು ಹಾರಿಸಬೇಕು ಎಂಬ ದೃಷ್ಟಿಕೋನದಲ್ಲಿ ಹೀಗೆ ಮಾಡಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿದ್ದಾರೆ. ‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ಹೀರೋ ಆಗಿ ನಟಿಸುತ್ತಿದ್ದರು. ಈ ಚಿತ್ರಕ್ಕೆ ಭರತ್ ನಿರ್ದೇಶನ ಮಾಡುತ್ತಿದ್ದರು. ಕಳೆದ 2 ವರ್ಷಗಳಿಂದ ನಡೆಯುತ್ತಿದ್ದ ಸಿನಿಮಾ ಶೂಟಿಂಗ್, ನಿರ್ಮಾಪಕರು ಸಿಗದ…
ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಈ ಬೆನ್ನಲ್ಲೇ ನಟಿ ಹಸೆಮಣೆ ಏರಲು ಸಜ್ಜಾಗಿದ್ದು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿಂದೆ ಕೀರ್ತಿ ಸುರೇಶ್, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಂಚಂದ್ರನ್ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಮಾತ್ರವಲ್ಲ ಇನ್ನೂ ಕೆಲವು ನಟ, ಕೆಲ ನಿರ್ದೇಶಕರ ಜೊತೆಗೂ ಸಹ ಕೀರ್ತಿ ಸುರೇಶ್ ಹೆಸರು ಕೇಳಿ ಬಂದಿತ್ತು. ಇದೀಗ ಕೊನೆಗೂ ಕೀರ್ತಿ ಸುರೇಶ್ ಮದುವೆ ಫಿಕ್ಸ್ ಆಗಿದೆ. ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಅವರನ್ನು ವಿವಾಹವಾಗಲಿದ್ದಾರೆ. ಆಂಟೊನಿ ಹಾಗೂ ಕೀರ್ತಿ ಸುರೇಶ್ ಸಹಪಾಠಿಗಳಾಗಿದ್ದು, ಒಟ್ಟಿಗೆ ಹೈಸ್ಕೂಲ್ ಶಿಕ್ಷಣವನ್ನು ಮಾಡಿದವರು. ಆಗಿನಿಂದಲೂ ಇವರು ಪ್ರೀತಿಯಲ್ಲಿದ್ದರಂತೆ. ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಈ ಜೋಡಿಯ ವಿವಾಹ ಡಿಸೆಂಬರ್ 11-12 ರಂದು ಗೋವಾನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕುಟುಂಬಸ್ಥರು ಮತ್ತು ಕೆಲವೇ ಆತ್ಮೀಯರ ಸಮ್ಮುಖದಲ್ಲಿ…
ಬೆಂಗಳೂರು: ಕುಂದಾನಗರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಡಿ.9 ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲ ಅಧಿವೇಶನ ಡಿ.20ರವರೆಗೆ ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಅಧಿವೇಶನದ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಡತ ರವಾನಿಸಿದ್ದು, ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಡಿ.9ರಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. https://ainlivenews.com/cold-weather-will-prevail-from-november-to-january-meteorological-department/
ಬೆಂಗಳೂರು : ರಾಜ್ಯದ ಜನರೇ ಎಚ್ಚರ… ಎಚ್ಚರ…!!..ಈ ಬಾರೀ ಉಷ್ಣಾಂಶದ ಪ್ರಮಾಣ ಭಾರಿ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾತನಾಡಿದ್ದು, ಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಭಾರೀ ಇಳಿಕೆಯಾಗುವ ಸಾಧ್ಯತೆ ಇದ್ದು, ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶ ಇಳಿಕೆ ಆಗಲಿದೆ ಎಂದು ವರದಿಯಾಗಿದೆ. ಸಾಮಾನ್ಯ ಮಟ್ಟಕ್ಕಿಂತ ಉಷ್ಣಾಂಶ ಭಾರೀ ಇಳಿಕೆ ಆಗಲಿದ್ದು, ಹವಾಮಾನ ಇಲಾಖೆಯ ಭಾಷೆಯಲ್ಲಿ ಲಾ-ನಿನೋ ಎಂದು ಕರೆಯಲಾಗುವುದು. ಲಾ-ನಿನೋ ಪರಿಸ್ಥಿತಿಯಿಂದಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ ಇರಲಿದೆ. https://ainlivenews.com/three-drug-peddlers-arrested-by-madiwala-police/ ಉತ್ತರಭಾರತದಿಂದ ರಾಜ್ಯಕ್ಕೆ ತಂಪು ಹವೆ ಬೀಸಲಿದ್ದು, ಇದರಿಂದ ಉಷ್ಣಾಂಶವು ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದ್ದು, ಡಿಸೆಂಬರ್ ಹಾಗೂ ಜನವರಿಯಲ್ಲಿ ತಾಪಮಾನ 8ರಿಂದ 10ಡಿಗ್ರಿ ಇಳಿಯುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 12ರಿಂದ 14ಡಿಗ್ರಿ ಸೆಲ್ಸಿಯಸ್ ಇಳಿಯುವ ಸಾಧ್ಯತೆ ಇದೆ. ಬೆಳಗ್ಗೆ 4 ಗಂಟೆಯಿಂದ 8ಗಂಟೆಯವರೆಗೂ ಶೀತದ…
‘ಮುಗಿಲ್ ಪೇಟೆ’ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ಮೇಲೆ ನಟ ತಾಂಡವ್ ರಾಮ್ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಚಂದ್ರಾ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಪೊಲೀಸರು ಬಂದಿಸಿದ್ದಾರೆ. ತಾಂಡವ್ ರಾಮ್ ಕೆಲ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶನ ಮಾಡುತ್ತಿದ್ದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಭರತ್ ನಿರ್ದೇಶನದ ಸಿನಿಮಾದಲ್ಲಿ ನಾಯಕನಾಗಿ ತಾಂಡವ್ ರಾಮ್ ನಟಿಸುತ್ತಿದ್ದರು. ಆದರೆ ಭರತ್ ಆ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ತಾಂಡವ್ ರಾಮ್, ನಿರ್ದೇಶಕ ಭರತ್ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಒಂದು ಸುತ್ತು ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಬಂಧಿಸಲಾಗಿದೆ. ‘ಮುಗಿಲ್ ಪೇಟೆ’ ಸಿನಿಮಾವನ್ನು ಭರತ್ ನಿರ್ದೇಶನ ಮಾಡಿದ್ದರು. ಇನ್ನು ತಾಂಡವ್ ರಾಮ್, ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಎಂ…
ಬ್ರೆಜಿಲ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಇಟಲಿ ಪ್ರಧಾನಿ ಮೆಲೋನಿಯವರನ್ನು ಭೇಟಿಯಾದರು. ಬ್ರೆಜಿಲ್, ಸಿಂಗಾಪುರ, ಬ್ರಿಟನ್, ಇಟಲಿ, ಫ್ರಾನ್ಸ್, ಇಂಡೋನೇಷ್ಯಾ ಸೇರಿದಂತೆ ಹಲವು ಜಾಗತಿಕ ನಾಯಕರ ಜೊತೆ ಮೋದಿ ಮಾತುಕತೆ ನಡೆಸಿದರು. ಜಿ-20 ಶೃಂಗಸಭೆಯಲ್ಲಿ ಭಾಗಿಯಾದ ಮೋದಿ ಅಲ್ಲಿ ಇಟಲಿ ಪ್ರಧಾನಿ ಮೆಲೋನಿಯವರನ್ನು ಭೇಟಿಯಾದರು. ಬ್ರೆಜಿಲ್, ಸಿಂಗಾಪುರ, ಬ್ರಿಟನ್, ಇಟಲಿ, ಫ್ರಾನ್ಸ್, ಇಂಡೋನೇಷ್ಯಾ ಸೇರಿದಂತೆ ಹಲವು ಜಾಗತಿಕ ನಾಯಕರ ಜತೆ ಮಾತುಕತೆ ನಡೆಸಿದರು. ರಿಯೊ ಡಿ ಜನೈರೊದಲ್ಲಿನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್‌ನಲ್ಲಿ ಎರಡು ದಿನಗಳ ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಪಿಎಂ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು. ಇದಲ್ಲದೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ರಕ್ಷಣೆ, ಭದ್ರತೆ ಮತ್ತಿತರ ಸಂಬಂಧಗಳ ಬಲವರ್ಧನೆ…
ಬೆಂಗಳೂರು : ಮಡಿವಾಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕುಖ್ಯಾತ ಗಾಂಜಾ ಪೆಡ್ಲರ್ಸ್ಗ ನ್ನು ಬಂಧಿಸಿದ್ದಾರೆ. ಅಭಯ್ ಕುಮಾರ್, ಮೋಸಿನ್, ಚಿರಾನ್ ಬಂಧಿತ ಆರೋಪಿಗಳಾಗಿದ್ದು,ಇಬ್ಬರೂ ಸಹ ಮಾರತಹಳ್ಳಿಯಲ್ಲಿರುವ ಡಿ ಪಬ್ ಅಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. https://ainlivenews.com/former-home-minister-anil-deshmukhs-car-pelted-with-stones/ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದಾರೆ. ಕ್ರಿಸ್ ಮಸ್ ಮತ್ತು ನ್ಯೂ ಇಯರ್ ಟಾರ್ಗೆಟ್ ಮಾಡಿದ್ದು, ಒರಿಸ್ಸಾದ ಚಿರಾನ್ ಗೆ ಹಣ ಹಾಕಿ ರೈಲಿನ ಮೂಲಕ ಗಾಂಜಾ ತರಿಸಿಕೊಳ್ತಿದ್ರು. ಸದ್ಯ ಮೂವರು ಆರೋಪಿಗಳ ಬಂಧಿಸಿರುವ ಮಡಿವಾಳ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.