Author: Author AIN

ಮಧ್ಯ ಅಮೆರಿಕಾದಲ್ಲಿ ಬೀಕರ ಬಿರುಗಾಳಿ ಮತ್ತು ಭಾರಿ ಮಳೆ ಮುಂದುವರಿದಿದೆ. ಪರಿಣಾಮ 30 ಜನರು ಸಾವನ್ನಪ್ಪಿದ್ದಾರೆ ಸಾಕಷ್ಟುಮಂದಿ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಸಾವಿರಾರು ಜನರನ್ನು ಸ್ಥಳಾಂತರಗೊಳಿಸಲಾಗಿದೆ. ನಿರಂತರ ಮಳೆಯಿಂದಾಗಿ ನದಿಗಳು ಪ್ರವಾಹಕ್ಕೆ ಸಿಲುಕಿದ್ದು, ಮನೆಗಳು ಜಲ ಸಮಾಧಿಯಾಗಿವೆ. ಆರು ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ ಈಗ 19 ಕ್ಕೆ ತಲುಪಿದೆ ಮತ್ತು 3,000 ಕ್ಕೂ ಹೆಚ್ಚು ಜನರು ತಾತ್ಕಾಲಿಕ ಆಶ್ರಯಗಳಲ್ಲಿದ್ದಾರೆ ಎಂದು ಸಾಲ್ವಡಾರ್ ಅಧಿಕಾರಿಗಳು ತಿಳಿಸಿದ್ದಾರೆ. “ನಾವು ಜನರ ಜೀವವನ್ನು ಉಳಿಸಬೇಕು” ಎಂದು ಎಲ್ ಸಾಲ್ವಡಾರ್ನ ನಾಗರಿಕ ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಲೂಯಿಸ್ ಅಮಾಯಾ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. “ಭೌತಿಕ ಸರಕುಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಈಗ ನಾವು ಜೀವಗಳನ್ನು ರಕ್ಷಿಸುವತ್ತ ಗಮನ ಹರಿಸಬೇಕು.”ಎಂದರು. ಗ್ವಾಟೆಮಾಲಾ ಅಧಿಕಾರಿಗಳು ಶುಕ್ರವಾರ 10 ಸಾವುಗಳು, ಸುಮಾರು 11,000 ಜನರನ್ನು ಸ್ಥಳಾಂತರಿಸಲಾಗಿದೆ, ಸುಮಾರು 380 ಜನರು ಇನ್ನೂ ತಾತ್ಕಾಲಿಕ ಆಶ್ರಯಗಳಲ್ಲಿದ್ದಾರೆ, 300 ತೀವ್ರ ಹಾನಿಗೊಳಗಾದ ಹಾನಿ ಮತ್ತು ನಾಲ್ಕು ಸೇತುವೆಗಳು ನಾಶವಾಗಿವೆ ಎಂದು ವರದಿ ಮಾಡಿದ್ದಾರೆ.…

Read More

ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್ ಗಳು ಇದ್ದೇ ಇರುತ್ತೆ, ಚಿಕ್ಕ ಮಕ್ಕಳಿಂದ ಹೊಡಿದು ವಯಸ್ಸಾದವರ ಕೈಯಲ್ಲೂ ಮೊಬೈಲ್ ಗಳಿರುತ್ತೆವೆ. ಆದರೆ ಕೆಲವೇ ಕೆಲವು ವರ್ಷಗಳಲ್ಲಿ ಈ ಮೊಬೈಲ್ ಗಳು ಮಾಯವಾಗಲಿದ್ದು ಅವುಗಳ ಬದಲು ನ್ಯೂರಾಲಿಂಕ್‌ನ ಮೆದುಳಿನ ಚಿಪ್‌ಗಳು ಬರಲಿದೆ ಎಂದು ಎಲಾನ್ ಮಾಸ್ಕ್ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ (x) ಪೋಸ್ಟ್ ಮಾಡಿರುವ ಅವರು, ಭವಿಷ್ಯದಲ್ಲಿ ಯಾವುದೇ ಫೋನ್‌ಗಳು ಇರುವುದಿಲ್ಲ, ಕೇವಲ ನ್ಯೂರಾಲಿಂಕ್‌ಗಳು ಎಂದು ಹೇಳಿದ್ದಾರೆ. ಮೆದುಳಿನ ಚಿಪ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂರಾಲಿಂಕ್‌ ಈಗಾಗಲೇ ಮೊದಲ ಮಾನವ ಪ್ರಯೋಗ ನಡೆಸುತ್ತಿದೆ. 29 ವರ್ಷದ ನೋಲ್ಯಾಂಡ್ ಅರ್ಬಾಗ್ ಎಂಬವರ ಮೇಲೆ ಈ ಪ್ರಯೋಗ ಮಾಡಲಾಗಿದೆ.ತಮ್ಮ ಹಣೆಯ ಮೇಲೆ ನ್ಯೂರಲ್ ನೆಟ್‌ವರ್ಕ್ ವಿನ್ಯಾಸದೊಂದಿಗೆ ಫೋನ್ ಅನ್ನು ಹಿಡಿದಿರುವ ಮಸ್ಕ್‌ನ ಎಐ ರಚಿತ ಚಿತ್ರವನ್ನು ಇದರೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿರುವ ಕೆಲವರು ತಮ್ಮ ಸಾಧನಗಳನ್ನು ಆಲೋಚನೆಯಿಂದ ನಿಯಂತ್ರಿಸಲು ನ್ಯೂರಾಲಿಂಕ್ ಇಂಟರ್‌ಫೇಸ್ ಅನ್ನು ಸ್ಥಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೊಸ…

Read More

ಹುಬ್ಬಳ್ಳಿಗೆ ಕೇಂದ್ರ ಸರ್ಕಾರ ಅತ್ಯಾಧುನಿಕ “ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ”ಕ್ಕೆ ಮಂಜೂರಾತಿ ನೀಡಿದೆ. ಉತ್ತರ ಕರ್ನಾಟಕದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರೋ ಹುಬ್ಬಳ್ಳಿಯ ‘ಕಿಮ್ಸ್‌’ ನಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸದೆ. ಕಿಮ್ಸ್‌ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ ಮತ್ತು ಕಿಮ್ಸ್‌ ನಿರ್ದೇಶಕರ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಜೆ.ಪಿ. ನಡ್ಡಾ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಹುಬ್ಬಳ್ಳಿಯಲ್ಲಿ ಈ ಪ್ರಯೋಗಾಲಯ ನಿರ್ಮಾಣ ಮಾಡುವಂತೆ ಧಾರವಾಡ ಸಂಸದರು ಆಗಿರುವ ಸಚಿವ ಪ್ರಲ್ಹಾದ್‌ ಜೋಶಿ ಮನವಿ ಮಾಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇಂದು ಪ್ರಯೋಗಾಲಯ ಸ್ಥಾಪನೆ ಸಾಕಾರಗೊಂಡಿದೆ. ಪ್ರಸ್ತುತ, ದೇಶದ 8 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಶೋಧನಾ ಮತ್ತು ರೋಗ ನಿಯಂತ್ರಣ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ಸ್ಥಾಪನೆಗೂ ಇದೀಗ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಪ್ರಲ್ಹಾದ್‌…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ನಾಲ್ವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಿದ್ದು ಮುಂದೆ ಏನಾಗಲಿದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಶುರುವಾಗಿದೆ. ಪ್ರಕರಣದ ಆರೋಪಿಗಳಾದ ದರ್ಶನ್, ವಿನಯ್, ಧನರಾಜ್, ಪ್ರದೋಶ್‌ ಕಸ್ಟಡಿ ಅವಧಿ ಅಂತ್ಯವಾಗಲಿದ್ದು, ಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ. ಇವರು ನಾಲ್ವರಿಗೂ ಜೈಲಾಗಲಿದೆ ಎಂಬ ಮಾತು ಕೇಳಿ ಬರ್ತಿದೆ. ಆರೋಪಿಗಳನ್ನು ಮೂರು ಬಾರಿ ಕಸ್ಟಡಿಗೆ‌ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 3 ಗಂಟೆಯ ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಿಂದ ಕೋರ್ಟ್‌ಗೆ ಆರೋಪಿಗಳನ್ನು ಕರೆದೊಯ್ಯಲಾಗುವುದು. ನಟ ದರ್ಶನ್ ಮನೆಯಲ್ಲಿ ಸಿಕ್ಕಂತಹ ಹಣದ ಬಗ್ಗೆ ವಿಚಾರಿಸಲು ಎರಡು ದಿನದ ಹಿಂದೆ ಪೊಲೀಸರು, ದರ್ಶನ್‌ ಸೇರಿದಂತೆ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದರು. ಅಷ್ಟೊಂದು ಹಣ ಎಲ್ಲಿಂದ ಬಂತು? ಯಾವ ಅಕೌಂಟ್‌ನಿಂದ ಹಣ ಡ್ರಾ ಮಾಡಿದ್ರಿ? ಬೇರೆ ಯಾರಾದ್ರೂ ಹಣ ನೀಡಿದ್ರಾ? ಈ ಹಣಕ್ಕೆ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಳಿಕ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್‌ ಸಂಬರಗಿ ಒಂದಲ್ಲ ಒಂದು ಹೇಳಿಕೆ ಪೋಸ್ಟ್‌ ಮಾಡುತ್ತಲೇ ಇದ್ದಾರೆ. ಇದೀಗ ದರ್ಶನ್‌ ಕುರಿತಾದ ಹೊಸ ಪೋಸ್ಟ್‌ ಮಾಡಿರವ ಸಂಬರಗಿ ನಟ ಶಿವರಾಜ್‌ಕುಮಾರ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾದ ಪ್ರಶಾಂತ್ ಸಂಬರ್ಗಿ, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಶಿವರಾಜ್ ಕುಮಾರ್ ಸೈಲೆಂಟ್‌ ಆಗಿರುವುದು ಯಾಕೆ? ನಿಮ್ಮ ಮೌನ ಸಮ್ಮತಿ ಇದೆಯಲ್ಲ ಅದು ಎಲ್ಲೋ ಒಂದು ಕಡೆ ದುಷ್ಟರನ್ನು, ರೌಡಿಯನ್ನು ಬೆಳೆಸುತ್ತದ್ದೀರಾ ಎಂದು ನೇರ ಆಪಾದನೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಸಂಬರಗಿ ಮಾತನಾಡಿ ʻʻಶಿವರಾಜಕುಮಾರ್‌ ಅವರಲ್ಲಿ ನಾನು ಕೇಳುವುದು ಏನಂದರೆ ಈ ಘಟನೆಗೆ ನಿಮ್ಮ ಮೌನ ಸಮ್ಮತಿ ಸೂಚಿಸುತ್ತದೆ. ನೀವು ಈವರೆಗೂ ಒಂದೇ ಒಂದು ಮಾತನಾಡದೇ ಇರುವುದು ದರ್ಶನ್‌ ಮಾಡಿರುವ ಕರ್ಮಕಾಂಡಕ್ಕೆ ಸಮ್ಮತಿ ಸೂಚಿಸಿದಂತಾಗುತ್ತದೆ. ದರ್ಶನ್‌ ಅಟ್ಟಹಾಸಕ್ಕ ಮೊದಲು ನೀವು ಬಂದು ಮಾತನಾಡಬೇಕಿದೆ. ಅನೇಕ ಸಣ್ಣ ವಿಚಾರಗಳನ್ನು ಮಾತನಾಡುವ ನೀವು. ಈ ವಿಚಾರದಲ್ಲಿ ಸೈಲೆಂಟ್‌…

Read More

ಸಿನಿಮಾರಂಗದಲ್ಲಿ ನಟಿಯರು ಎದುರಿಸುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಓಪನ್ ಆಗಿ ಹೇಳಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ಲಕ್ಷ್ಮಿ ರೈ ತಮಗಾದ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಈ ಬೆನ್ನಲ್ಲೇ ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’ ಸಿನಿಮಾದಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್ ಕೂಡ ಕಾಸ್ಟಿಂಗ್ ಬಗ್ಗೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ನನಗೆ ಆಗ 18 ವರ್ಷ. ಓರ್ವ ಸೆಕ್ರೆಟರಿ ನನಗೆ ಕರೆ ಮಾಡಿದರು. ಹೀರೋಗೆ ನೀವು ಒಂಟಿಯಾಗಿ ಸಿಗಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದ್ದರು. ಹೀರೋ ಜೊತೆ ನೀವು ಫ್ರೆಂಡ್ಲಿ ಆಗಿರಬೇಕು ಎಂದು ಸೂಚಿಸಿದರು. ನಾನು ಎಲ್ಲರ ಜೊತೆ ಫ್ರೆಂಡ್ಲಿ ಆಗಿದ್ದೇನೆ. ಆದರೆ ನೀವು ಹೇಳುವ ಫ್ರೆಂಡ್ಲಿ ಎಂದರೆ ಏನು ಅರ್ಥವಾಗಿಲ್ಲ ಎಂದು ಫೋನ್ ಇಟ್ಟಿದ್ದೆ. 23ನೇ ವಯಸ್ಸಿನಲ್ಲೂ ಹಾಗೆಯೇ ಆಗಿತ್ತು. ಒಂಟಿಯಾಗಿ ಸಿಗುವಂತೆ ಹಿಂದಿ ಸ್ಟಾರ್ ನಟನೊಬ್ಬ ಕೇಳಿದ್ದ. ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಬರುವಂತೆ ಆತ ಹೇಳಿದ್ದ. ಆತನ ಹೆಸರು ಈಗಾಗಲೇ ಹಲವು ನಾಯಕಿಯರ ಜೊತೆ ತಳುಕು ಹಾಕಿಕೊಂಡಿದೆ ಎಂದಿದ್ದಾರೆ. ಆದರೆ ಆತ…

Read More

ಕೋಕ-ಕೋಲಾ ಕಂಪನಿಯ ಉತ್ತರಾಧಿಕಾರಿ ಅಲ್ಕಿ ಡೇವಿಡ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಉದ್ಯೋಗಿಗೆ 900 ಮಿಲಿಯನ್ ಡಾಲರ್ (7,200 ಕೋಟಿ ರೂ.) ಪಾವತಿಸಲು ಲಾಸ್ ಏಂಜಲೀಸ್ ನ್ಯಾಯಾಲಯ ತೀರ್ಪು ನೀಡಿದೆ. ಇದು ಇತಿಹಾಸದಲ್ಲಿ ಲೈಂಗಿಕ ಹಾನಿಗಾಗಿ ವಿಧಿಸಲಾದ ಇದುವರೆಗಿನ ಅತಿದೊಡ್ಡ ಪರಿಹಾರ ಮೊತ್ತವಾಗಿದೆ ಎನ್ನಲಾಗಿದೆ. 2016- 2019ರ ನಡುವೆ ಮೂರು ವರ್ಷಗಳ ಕಾಲ ಜೇನ್ ಡೋ ಎಂಬ ಮಹಿಳೆ ಅಲ್ಕಿ ಡೇವಿಡ್ ಅವರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು. ಮಾಜಿ ನಿರ್ಮಾಣ ಸಹಾಯಕ ಮಹಿಮ್ ಖಾನ್ 2019ರಲ್ಲಿ ಡೇವಿಡ್ ವಿರುದ್ಧ ದೂರು ನೀಡಿದ್ದು, ಬಳಿಕ ಡೇವಿಡ್‌ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಲೈಂಗಿಕ ದುರ್ವರ್ತನೆಯನ್ನು ಒಳಗೊಂಡ ಹಲವಾರು ಇತರ ಪ್ರಕರಣಗಳಲ್ಲಿ ಡೇವಿಡ್ ತಪ್ಪಿತಸ್ಥರೆಂದು ಕಂಡುಬಂದಿದೆ. ಕಂಪನಿಗಳು ಇವರ ವಿರುದ್ಧ ಸುಮಾರು 70 ಮಿಲಿಯನ್ ಡಾಲರ್‌ನಷ್ಟು ಮೊತ್ತದ ಹಾನಿಯನ್ನು ಪಾವತಿಸಲು ಒತ್ತಾಯಿಸಿವೆ. ಮೂವತ್ತು ವರ್ಷದ ಮಾಡೆಲ್ ಜೇನ್ ಡೋ ಅವರು ಹೊಲೊಗ್ರಾಮ್ ಯುಎಸ್‌ಎನಲ್ಲಿ ಡೇವಿಡ್‌ಗಾಗಿ ಕೆಲಸ ಮಾಡಿದ್ದರು. ಕೆಲಸದ…

Read More

ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಭಾರತ ಮೂಲದ ಉದ್ಯಮಿ ಪ್ರಕಾಶ್‌ ಹಿಂದುಜಾ ಸೇರಿದಂತೆ ಅವರು ಕುಟುಂಬದ ನಾಲ್ವರಿಗೆ ಸ್ವಿಟ್ಜರ್‌ಲ್ಯಾಂಡ್‌ ನ್ಯಾಯಾಲಯ ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಿಂದುಜಾ ಕುಟುಂಬದ ಉದ್ಯಮಿ ಪ್ರಕಾಶ್‌ ಹಿಂದುಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ, ಹಿಂದುಜಾ ಕುಟುಂಬದ ಮ್ಯಾನೇಜರ್‌ ನಜೀಬ್‌ ಜಿಯಾಜಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ನಾಲ್ವರನ್ನೂ ದೋಷಿಗಳು ಎಂದು ಕೋರ್ಟ್‌ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ. ಹಿಂದುಜಾ ಕುಟುಂಬವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ಕಡಿಮೆ ಸಂಬಳ ನೀಡಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650…

Read More

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಟ ಜಹೀರ್‌ ಇಕ್ಬಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಮದುವೆ ಸಂಭ್ರಮ ನಡೆಯಲಿದ್ದು ಅದಕ್ಕೂ ಮುನ್ನ ಅಂದರೆ ಶುಕ್ರವಾರ (ಜೂನ್‌ 21) ಮೆಹಂದಿ ಶಾಸ್ತ್ರವೂ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರದ ಮೊದಲ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮುಂಬೈನಲ್ಲಿ ನಡೆದ ಸೋನಾಕ್ಷಿ ಹಾಗೂ ಜಹೀರ್ ಮೆಹಂದಿ ಶಾಸ್ತ್ರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗವಹಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು ಜಹೀರ್‌ ಇಕ್ಬಾಲ್‌ ಹಾಗೂ ಗೆಳೆಯರೊಂದಿಗೆ ನಿಂತಿರುವ ಫೋಟೊ ಲಭ್ಯವಾಗಿದೆ. ಜಹೀರ್‌ ಇಕ್ಬಾಲ್‌ ಅವರ ಸಹೋದರಿ ಸನಮ್‌ ರತಾನ್ಸಿ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಜಹೀರ್‌ ಇಕ್ಬಾಲ್‌ ಕೂಡ ಕುರ್ತಾ ಧರಿಸಿ ಭಾವಿ ಪತ್ನಿಯೊಂದಿಗೆ ಮಿಂಚಿದ್ದಾರೆ. ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದಕ್ಕೆ, ಅದರಲ್ಲೂ ಮದುವೆ ದಿನಾಂಕವನ್ನೂ ಹೇಳದಿರುವುದಕ್ಕೆ ಮೊದಲು ನಟ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಇದಕ್ಕೂ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಶತ್ರುಘ್ನ ಸಿನ್ಹಾ, ನಟಿಯ ತಾಯಿ…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಂದು ದರ್ಶನ್ ಅವರ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್‌ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಯೆಸ್. ನಿರ್ಮಾಪಕರು ನಟ ದರ್ಶನ್ ಮೇಲೆ 150 ಕೋಟಿ ಹೂಡಿಕೆ ಮಾಡಿದ್ದಾರೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಟ ದರ್ಶನ್ ಜೊತೆಗೆ 20 ವರ್ಷಗಳಿಂದ ಜರ್ನಿ ಮಾಡುತ್ತಿದ್ದೇನೆ, ಅವರು ತುಂಬ ಒಳ್ಳೇ ವ್ಯಕ್ತಿ. ನಮ್ ಹಳ್ಳಿ ಕಡೆ ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೋ ಮಾತಿದೆ. ದರ್ಶನ್ ಅವರ ಸುತ್ತ ಇದ್ದಾರಲ್ಲ, ಅವರಿಂದ ಇವತ್ತು ಹೀಗೆ ಆಗಿದೆ ಅಷ್ಟೇ. ಎಷ್ಟೋ ಸಲ ಅವರ ತೋಟಕ್ಕೆ ಹೋಗಿ ಅವರ ಜೊತೆಗೆ ಊಟ ಮಾಡಿದ್ದೇನೆ, ಅವರ ಮನೆಗೂ ಹೋಗಿದ್ದೇನೆ. ದರ್ಶನ್ ಅವರದ್ದು ತುಂಬ ಒಳ್ಳೆಯ ಹೃದಯ. 20 ವರ್ಷದ ಒಡನಾಟ ಇರುವ…

Read More