ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು (ಸೆಪ್ಟೆಂಬರ್ 08) ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ನ ಆಸ್ಪತ್ರೆಗೆ ದಾಖಲಾಗಿದ್ದರು. ಮದುವೆಯಾದ ಆರು ವರ್ಷದ ಬಳಿಕ ದೀಪಿಕಾ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ದೀಪಿಕಾ ಪಡುಕೋಣೆಗೆ ಸೆಪ್ಟೆಂಬರ್ 28 ಗೆ ಹೆರಿಗೆ ದಿನಾಂಕ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಸೆಪ್ಟೆಂಬರ್ 08 ರಂದು ಈ ಜೋಡಿಗೆ ಮಗುವಾಗಿದೆ. ಮದುವಿನ ಆಗಮನದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ದೀಪಿಕಾ ಸ್ಪಷ್ಟಪಡಿಸಿದ್ದಾರೆ. ದೀಪಿಕಾ ಪಡುಕೋಣೆ ‘ಕಲ್ಕಿ’ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ತಾವು ಗರ್ಭಿಣಿ ಆಗಿರುವ ವಿಷಯ ಬಹಿರಂಗಪಡಿಸಿದ್ದರು. ಗರ್ಭಿಣಿ ಆಗಿರುವ ಸಂದರ್ಭದಲ್ಲಿಯೇ ಅವರು ‘ಕಲ್ಕಿ 2898’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಅದಾದ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ರಣ್ವೀರ್ ಸಿಂಗ್ ಸಹ ದೀಪಿಕಾ ಗರ್ಭಿಣಿ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ ಪತ್ನಿಯೊಟ್ಟಿಗೆ ಹೆಚ್ಚು ಸಮಯ ಕಳೆಯಲು ತೊಡಗಿದರು. ರಣ್ವೀರ್ ಸಿಂಗ್ ಮತ್ತು ದೀಪಿಕಾ…
Author: Author AIN
ಹಿಂದಿ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದ ನಟ ವಿಕಾಸ್ ಸೇಥಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ವಿಕಾಸ್ ಸೇಥಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಿದ್ರೆಯಲ್ಲಿ ಇರುವಾಗಲೇ ವಿಕಾಸ್ ಸೇಥಿ ಅವರಿಗೆ ಹೃದಯಾಘಾತ ಆಗಿದೆ. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಅವರ ಉಸಿರು ನಿಂತಿತ್ತು. ಈ ವಿಷಯ ತಿಳಿದ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ವಿಕಾಸ್ ಸೇಥಿ ಅವರು ಸಕ್ರಿಯರಾಗಿದ್ದಾರೆ. ಸೀರಿಯಲ್ಗಳು ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿ ಅವರು ಹೆಸರು ಗಳಿಸಿದ್ದರು. ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ, ಕಸೌಟಿ ಜಿಂದಗಿ ಕೆ, ಕಹಿ ತೋ ಹೋಗಾ, ಕೆ. ಸ್ಟ್ರೀಟ್ ಪಾಲಿ ಹಿಲ್, ಹಮಾರಿ ಬೇಟಿಯೋಂಕಾ ವಿವಾಹ್, ಡರ್ ಸಬ್ಕೋ ಲಗ್ತಾ ಹೈ, ಸಂಸ್ಕಾರ್ ಲಕ್ಷ್ಮಿ, ಸರುರಾಲ್ ಸಿಮರ್ ಕಾ ಮುಂತಾದ ಧಾರಾವಾಹಿಗಳಲ್ಲಿ ವಿಕಾಸ್ ಸೇಥಿ ನಟಿಸಿದ್ದರು. ‘ದೀವಾನಾಪನ್’, ‘ಕಭಿ…
1999ರಲ್ಲಿ ನಡೆದ ಭಾರತದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ತನ್ನ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ರಾವಲ್ಪಿಂಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, 1965, 1971 ಮತ್ತು 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, 1948, 1965, 1971 ಅಥವಾ 1999ರ ಕಾರ್ಗಿಲ್ ಯುದ್ಧವಿರಲಿ, ಪಾಕಿಸ್ತಾನ ಮತ್ತು ಇಸ್ಲಾಂ ಧರ್ಮಕ್ಕಾಗಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯು ತನ್ನ ನೇರ ಪಾತ್ರವನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಇದು ‘ಮುಜಾಯಿದ್ದೀನ್’ಗಳ ಕೆಲಸ ಎಂದು ಯಾವಾಗಲೂ ಅಧಿಕೃತವಾಗಿ ಹೇಳಿಕೊಂಡಿದೆ. 1999ರ ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಲಡಾಖ್‌ನಲ್ಲಿ ಸುಮಾರು ಮೂರು ತಿಂಗಳ ಹೋರಾಟದ ನಂತರ ಟೈಗರ್ ಹಿಲ್ ಸೇರಿದಂತೆ ಕಾರ್ಗಿಲ್ ಸೆಕ್ಟರ್‌ನಲ್ಲಿ ಎಲ್‌ಒಸಿಯ ಭಾರತದ ಭಾಗದಲ್ಲಿ ನುಸುಳುಕೋರರು ವಶಪಡಿಸಿಕೊಂಡ…
ಅಮೆರಿಕದ ಕೆಂಟುಕಿಯ ಲಾರೆಲ್ ಕೌಂಟಿಯ ಅಂತರರಾಜ್ಯ 75 ಬಳಿ ಹಲವಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಲಾರೆಲ್ ಕೌಂಟಿ ಶೆರಿಫ್ ಕಚೇರಿಯನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ ಕೆಂಟುಕಿ ರಾಜ್ಯ ಪೊಲೀಸ್ ಟ್ರೂಪರ್ ಸ್ಕಾಟಿ ಪೆನ್ನಿಂಗ್ಟನ್ ಜನರನ್ನು ತಮ್ಮ ಮನೆಗಳಿಂದ ಹೊರ ಬರದಂತೆ ಸೂಚನೆ ನೀಡಿದ್ದಾರೆ. “ಸಕ್ರಿಯ ಶೂಟರ್ ಪರಿಸ್ಥಿತಿಯಿಂದಾಗಿ ಐ -75 ಅನ್ನು ಮೈಲ್ ಮಾರ್ಕರ್ / ಎಕ್ಸಿಟ್ 49 ಮತ್ತು ಯುಎಸ್ 25 ಲಂಡನ್ನ ಉತ್ತರಕ್ಕೆ ಒಂಬತ್ತು ಮೈಲಿ ದೂರದಲ್ಲಿ ಮುಚ್ಚಲಾಗಿದೆ” ಎಂದು ಶೆರಿಫ್ ಕಚೇರಿ ಫೇಸ್ಬುಕ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ. “ಐ -75 ಬಳಿ ಹಲವಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಂಟುಕಿ ರಾಜ್ಯ ಪೊಲೀಸ್ ಟ್ರೂಪರ್ ಸ್ಕಾಟಿ ಪೆನ್ನಿಂಗ್ಟನ್ ಸಾಮಾಜಿಕ ಮಾಧ್ಯಮದ ಮೂಲಕ ಶಂಕಿತನನ್ನು “ಈ ಸಮಯದಲ್ಲಿ ಹಿಡಿಯಲಾಗಿಲ್ಲ” ಎಂದು ಹೇಳಿದರು. ನಾವು ಜನರನ್ನು ಮೆನ ಒಳಗೆ ಇರುವಂತೆ ಒತ್ತಾಯಿಸುತ್ತಿದ್ದೇವೆ. ಕಾನೂನು ಜಾರಿಯು “ಲಭ್ಯವಿರುವಷ್ಟು ಮಾಹಿತಿಯನ್ನು” ಒದಗಿಸುತ್ತದೆ ಎಂದು ಅವರು ಹೇಳಿದರು. ಕೆಂಟುಕಿ ಗವರ್ನರ್…
ಉಕ್ರೇನ್-ರಷ್ಯಾ ಸಂಘರ್ಷವನ್ನು ಭಾರತ ಕೊನೆಗೊಳಿಸಬಹುದು ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾದಂತಹ ದೇಶಗಳು ಪ್ರಮುಖ ಪಾತ್ರ ವಹಿಸಬಹುದು ಎಂದಿದ್ದಾರೆ. ಉತ್ತರ ಇಟಲಿಯ ಸೆರ್ನೊಬಿಯೊ ನಗರದ ಅಂಬ್ರೊಸೆಟ್ಟಿ ಫೋರಮ್‌ನಲ್ಲಿ ಮೆಲೋನಿ ಈ ಹೇಳಿಕೆಯನ್ನು ನೀಡಿದ್ದಾರೆ. ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಭೆ ನಡೆಸಿದರು. ಇದಕ್ಕೂ ಮುನ್ನ, ಈ ಪ್ರದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರತಿಕ್ರಿಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಉಕ್ರೇನ್ ಪ್ರವಾಸದ ನಂತರ ಇದೀಗ ಇಡೀ ವಿಶ್ವದ ಕಣ್ಣು ಭಾರತ ಹಾಗೂ ಪ್ರಧಾನಿ ಮೋದಿಯತ್ತ ನೆಟ್ಟಿದೆ. ಈ ಯುದ್ಧವು ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ನಿನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಈ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುವ ದೇಶಗಳ ಬಗ್ಗೆ ಮಾತನಾಡಿದ್ದರು. ಪುಟಿನ್ ಭಾರತ ಮಾತ್ರವಲ್ಲದೆ ಚೀನಾ ಮತ್ತು ಬ್ರೆಜಿಲ್ ಕೂಡ ಮಧ್ಯಸ್ಥಿಕೆ ವಹಿಸುವಂತೆ…
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ವರದಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಹಲವು ಹಿರಿಯ ನಟ, ನಿರ್ದೇಶಕರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಕೆಲವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಕೆಲ ನಟಿಯರು, ಯುವತಿಯರು ಸೆಲೆಬ್ರಿಟಿಗಳ ಮೇಲೆ ಸುಳ್ಳು ಪ್ರಕರಣ ಸಹ ದಾಖಲಿಸಲು ಮುಂದಾಗಿದ್ದಾರೆ. ಕೆಲವರು ಬ್ಲ್ಯಾಕ್ಮೇಲ್ ಸಹ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ನಟ ನಿವೀನ್ ಪೌಳಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿಯೊಬ್ಬರು ಇದೀಗ ಉಲ್ಟಾ ಹೊಡೆದಿದ್ದಾರೆ. ಕೆಲ ದಿನದ ಹಿಂದೆ ಯುವತಿಯೊಬ್ಬಾಕೆ, ಮಲಯಾಳಂ ಚಿತ್ರರಂಗದ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಕೇರಳದ ಎರ್ನಾಕುಲಂನ ಒನ್ನುಕುಲ್ ನಿವಾಸಿಯಾಗಿದ್ದ ಯುವತಿ, ತಮಗೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಿವಿನ್ ಪೌಲಿ, ಸಿನಿಮಾದ ನಿರ್ಮಾಪಕ, ನಿರ್ದೇಶಕ ಮತ್ತಿತರರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದರು. ಅತ್ಯಾಚಾರವು ದುಬೈನ ಹೋಟೆಲ್…
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್ ನನ್ನು ಬಂಧಿಸುವಾಗ ಪೊಲೀಸರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಪೊಲೀಸರು ಬಂಧಿಸಲು ಹೋದಾಗ ದರ್ಶನ್ ಇದ್ದ ರೂಮ್ ನಂಬರ್ ಹೇಳದೇ ಹೋಟೆಲ್ ಸಿಬ್ಬಂದಿ ಸತಾಯಿಸಿದ್ದರು ಎನ್ನಲಾಗಿದೆ. ಹೋಟೆಲ್‌ನಲ್ಲಿ ಕೆಲಕಾಲ ಕಾದಿದ್ದ ಪೊಲೀಸರಿಗೆ ದಿಢೀರನೆ ಮೂವರು ಬಾಡಿ ಗಾರ್ಡ್ಸ್ ಬಂದಿದ್ದರು. ಪೊಲೀಸರನ್ನು ಕಂಡು ತುರಾತುರಿಯಲ್ಲಿ ದರ್ಶನ್ ಕಾರಿನಲ್ಲಿ ಹೋಗುತ್ತಿದ್ದ ಬಾಡಿ ಗಾರ್ಡ್ಸ್ ಅಡ್ಡ ಹಾಕಿ ಮೊಬೈಲ್ ಪಡೆದಿದ್ದರು. ದರ್ಶನ್ ರೂಂ ತೋರಿಸುವಂತೆ ಬಾಡಿ ಗಾರ್ಡ್ಸ್‌ಗೆ ಪೊಲೀಸರು ಗದರಿಸಿದ್ದರು. ಬಳಿಕ ರೂಮ್ ತೋರಿಸಲು ಕರೆದುಕೊಂಡು ಹೋಗಿದ್ದರು. ಮತ್ತೊಂದು ಕೀ ಬಳಸಿ ದರ್ಶನ್ ಇದ್ದ ರೂಮ್ ಓಪನ್ ಮಾಡಿದ್ದರು. ಈ ವೇಳೆ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ನಟ ದರ್ಶನ್ ಎರಡೇ ನಿಮಿಷದಲ್ಲಿ ಬಾತ್ ರೂಮ್‌ನಿಂದ ಹೊರ ಬಂದಿದ್ದರು. ಪೊಲೀಸರು ನಮ್ಮ ಜತೆಗೆ ಬರಬೇಕು ಎಂದಾಗ ಬಟ್ಟೆ ಹಾಕಿಕೊಂಡು ಬರುತ್ತೇನೆ ಸಾರ್ ಎಂದಿದ್ದರು. ಬಳಿಕ ದರ್ಶನ್‌ನನ್ನು ಎಸಿಪಿ ಚಂದನ್ ಹಾಗೂ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಪೊಲೀಸ್ ಜೀಪ್ ಹತ್ತಿಸಿಕೊಂಡು…
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ರಣ್ವೀರ್ ಸಿಂಗ್ ಮತ್ತು ಕುಟುಂಬದ ಇತರ ಸದಸ್ಯರೊಟ್ಟಿಗೆ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಆಗಮಿಸಿದ್ದಾರೆ. ದಕ್ಷಿಣ ಮುಂಬೈನ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದೀಪಿಕಾ ದಾಖಲಾಗಿದ್ದು, ರಣ್ವೀರ್ ಹಾಗೂ ದೀಪಿಕಾ ಆಸ್ಪತ್ರೆ ಒಳಗೆ ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಇದೇ ತಿಂಗಳ 28 ಕ್ಕೆ ದೀಪಿಕಾಗೆ ಡೆಲಿವರಿ ಡೇಟ್ ನೀಡಲಾಗಿತ್ತು. ಅದೇ ದಿನ ದೀಪಿಕಾರ ಮಾಜಿ ಪ್ರಿಯಕರ ರಣ್ಬೀರ್ ಕಪೂರ್ ಹುಟ್ಟುಹಬ್ಬವೂ ಸಹ ಇತ್ತು. ಸೆಪ್ಟೆಂಬರ್ 20ರ ಮೇಲೆಯೇ ದೀಪಿಕಾಗೆ ಮಗು ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇಂದು ಅಚಾನಕ್ಕಾಗಿ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಅವರುಗಳು ಆಸ್ಪತ್ರೆಗೆ ಬಂದಿರುವುದು ಗಮನಿಸಿದರೆ ಸದ್ಯದಲ್ಲೇ ದೀಪಿಕಾಗೆ ಮಗು ಜನಿಸಲಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 07 ಬೆಳಿಗ್ಗೆಯಷ್ಟೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರುಗಳು ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿದ್ದರು. ಇಬ್ಬರೂ ಒಟ್ಟಿಗೆ ತೆರಳಿ ಗಣೇಶನ ದರ್ಶನ ಮಾಡಿ ಬಂದಿದ್ದರು. ವಿಶೇಷ…
ಚೀನಾದ ಅಗ್ರಗಣ್ಯ ಇ-ಕಾಮರ್ಸ್ ಸಂಸ್ಥೆ ಆಲಿಬಾಬ ಇದೀಗ `ಜೀವನ ಸಹಾಯಕ’ ಎಂಬ ಎಐ(ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮೊಬೈಲ್ ಆಯಪ್ ಗೆ ಚಾಲನೆ ನೀಡಿದ್ದು ಇದರ ಮೂಲಕ ಆಹಾರ ವಸ್ತುಗಳಿಗೆ ಆರ್ಡರ್ ಮಾಡುವುದು, ಟ್ಯಾಕ್ಸಿಗಳನ್ನು ಬುಕ್ ಮಾಡಬಹುದು ಎಂದು ಮೂಲಗಳು ಹೇಳಿವೆ. ಈ ಆಯಪ್ ಮೂಲಕ ಊಟವನ್ನು ಆರ್ಡರ್ ಮಾಡಬಹುದು, ಟ್ಯಾಕ್ಸಿಗಳನ್ನು, ಟಿಕೆಟ್ ಗಳನ್ನು ಬುಕ್ ಮಾಡಬಹುದು, ಸ್ಥಳೀಯ ಮನರಂಜನಾ ಆಯ್ಕೆಗಳನ್ನು ಅನ್ವೇಷಿಸಬಹುದು. ಜತೆಗೆ ಡಿಜಿಟಲ್ ಪಾವತಿಯ ಆಯಪ್ `ಆಲಿಪೇ’ಯ ಸೇವೆಗಳನ್ನು ಬಳಸಬಹುದಾಗಿದೆ. ಎಐಯ ಸಾಮರ್ಥ್ಯ ವನ್ನು ಬಳಸಿಕೊಂಡು ಬಳಕೆದಾರರ ಅನುಕೂಲಗಳನ್ನು ಸುಧಾರಿಸಲು ಆಲಿಪೇ ಬದ್ಧವಾಗಿದೆ. ಎಐ ಆಧಾರಿತ ವ್ಯವಸ್ಥೆ ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಅಮೂಲ್ಯವಾದ ಸಾಧನಗಳಾಗಿ ಮಾರ್ಪಟ್ಟಿವೆ ಎಂದು ಆಲಿಬಾಬಾ ಸಂಸ್ಥೆಯ ಹೇಳಿಕೆ ತಿಳಿಸಿದೆ.
ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿಲ್ಲ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಭಾಷಣ ಮಾಡುವವರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿ ಹೆಸರು ಇಲ್ಲ. ಬದಲಾಗಿ ಜೈಶಂಕರ್ ಭಾಷಣ ಮಾಡುತ್ತಿದ್ದಾರೆ. ಸೆ. 22ರಂದು ಲಾಂಗ್ ಐಲ್ಯಾಂಡ್‌ನ ನಾಸೂ ವೆಟೆರನ್ಸ್ ಮೆಮೊರಿಯಲ್ ಕೊಲಿಸಿಯಂನಲ್ಲಿ ನಡೆಯಲಿರುವ ಸಮುದಾಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಬಳಿಕ ಸೆ.22 ಹಾಗೂ 23ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ವಾರ್ಷಿಕ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಈ ಹಿಂದೆ ನಿಗದಿಯಾಗಿತ್ತು. ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವವರ ತಾತ್ಕಾಲಿಕ ಪಟ್ಟಿಯನ್ನು ವಿಶ್ವಸಂಸ್ಥೆ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ ಸೆಪ್ಟೆಂಬರ್ 26ರಂದು ನಡೆಯಲಿರುವ ಉನ್ನತ ಮಟ್ಟದ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವವರಿದ್ದರು. ಆದರೆ ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ಪಟ್ಟಿಯಲ್ಲಿ, ಸೆಪ್ಟೆಂಬರ್ 28ರಂದು ನಡೆಯುವ ಸಂವಾದದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಲಿದ್ದಾರೆ.…