Author: Author AIN

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಬೋಲ್ಡ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುವ ನಟಿ ಇದೀಗ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಚೈತ್ರಾರ ಲುಕ್ ಬಾಲಿವುಡ್ ಬೆಡಗಿಯರ ರೇಂಜ್ ನಲ್ಲಿದೆ. ತಮ್ಮ ಉತ್ತಮ ಅಭಿನಯದಿಂದಲೇ ನಟಿ ಚೈತ್ರಾ ಆಚಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶೇಷ ಪಾತ್ರಗಳ ಮೂಲಕ ನಟಿ ಚೈತ್ರಾ ಆಚಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಜೊತೆಗೆ ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಚೈತ್ರಾ ಆಚಾರ್ ಸುದ್ದಿ ಆಗುತ್ತಿರುತ್ತಾರೆ. ಮಹಿರಾ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಚೈತ್ರಾ ಆಚಾರ ಬಳಿಕ ತಲೆ ದಂಡ, ಗಿಲ್ಕಿ, ಅದೃಶ್ಯ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.  ನಟಿ ಚೈತ್ರಾ ಅಧ್ಬುತ ಗಾಯಕಿ ಕೂಡ ಹೌದು, ಇವರು ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜು…

Read More

ರೇಣುಕಾಸ್ವಾಮಿ ಕೊಲೆ ಕೇಸ್ ​ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ದರ್ಶನ್ ಬಂಧನದ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ದರ್ಶನ್ ಆಪ್ತ , ನಟ ಧರ್ಮ ಕೀರ್ತಿ ರಾಜ್ ಮಾತನಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆರೋಪಿ ಸ್ಥಾನದಲ್ಲಿ ನೋಡಿ ಬೇಸರ ಆಗ್ತಿದೆ. ದರ್ಶನ್ ಅಂತಹ ವ್ಯಕ್ತಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ನಮ್ಮನ್ನೆಲ್ಲ ತಮ್ಮನಂತೆ ನೋಡಿಕೊಳ್ತಿದ್ದರು. ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರಾ..? ಇಲ್ವಾ ಅಂತ ನ್ಯಾಯಾಲಯ ಹೇಳಬೇಕು. ದರ್ಶನ್ ನೋಡೋಕೆ ಜೈಲಿಗೆ ಹೋಗ್ತೀನಿ ಎಂದಿದ್ದಾರೆ. ಚಿತ್ರರಂಗಕ್ಕೆ ಬರೋಕೆ ಮುಂಚೆನೇ ನಾನು ಅವರ ದೊಡ್ಡ ಫ್ಯಾನ್​. ಅವರ ಮನೆಯಲ್ಲಿ ಊಟ ಮಾಡಿದ್ದೀನಿ. ವಿಜಯಕ್ಕ ತಮ್ಮ ಕೈಯಿಂದ ನನಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ದಾರೆ. ಇದೆಲ್ಲ ಆಗಬಾರದಿತ್ತು. ಈಗ ನೋಡಿದರೆ ನೋವಾಗುತ್ತೆ. ಎಲ್ಲ ಚೆನ್ನಾಗಿದ್ದರು. ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಕೇಸ್ ಕೋರ್ಟ್​​ನಲ್ಲಿದೆ. ಇದು ಆಗಿರೋದು ಆಕಸ್ಮಿಕವಾಗಿ ಆಗಿರುತ್ತೆ.…

Read More

ಬಿಗ್ ಬಾಸ್ ಮೂಲಕ ಸಾಕಷ್ಟು ಖ್ಯಾತಿ ಘಳೀಸಿದ ಹಳ್ಳಿಕಾರ್ ಎಂದೇ ಜನಪ್ರಿಯತೆ ಪಡೆದ ವರ್ತೂರು ಸಂತೋಷ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಹುಲಿ ಉಗುರಿನ ಕಾರಣದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವರ್ತೂರು ಸಂತೋಷ್ ಗೆ ಇದೀಗ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದಿದೆ. ವರ್ತೂರ್ ಸಂತೋಷ್ ಅವರು ಪ್ರಾಣಿಗಳ ಸಾಗಾಣಿಕೆ ಮಾಡುವಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. SPCA ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್​ ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವರ್ತೂರು ಸಂತೋಷ್ ಅವರು ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ. ಕೇವಲ ಎನ್​ಸಿಆರ್​ ಮಾಡಿ ಪ್ರಕರಣ ಮುಚ್ಚಿ ಹಾಕುವುದ ಬೇಡ. ಎಫ್​ಐಆರ್​ ದಾಖಲು ಮಾಡಿ ಕೋರ್ಟ್​​ ಮೆಟ್ಟಿಲೇರಲು ದೂರುದಾರ ಹರೀಶ್ ಅವರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಎಫ್​ಐಆರ್ ದಾಖಲಾದರೆ ವರ್ತೂರು ಸಂತೋಷ್​ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವರ್ತೂರು ಸಂತೋಷ್ ಅವರು ಒಂದು ಕಡೆ…

Read More

ನಟ ದರ್ಶನ್ ಬಂಧನವಾಗ್ತಿದ್ದಂಗೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸಾಕಷ್ಟು ದರ್ಶನ್ ಫ್ಯಾನ್ಸ್ ದರ್ಶನ್ ಬಂಧನವನ್ನು ಖಂಡಿಸಿದ್ದಾರೆ. ಅಲ್ಲದೆ ಕೆಲವರು ಬೆದರಿಕೆಯನ್ನು ಹಾಕಿದ್ದಾರೆ. ಇದೀಗ ನಟ ಪ್ರಥಮ್, ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಥಮ್ ಹಾಗೂ ಉಮಾಪತಿಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರಿನಿಂದ ದರ್ಶನ್ ಅಂದಾಭಿಮಾನಿ ಚೇತನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಮತ್ತೊಬ್ಬ ಅಭಿಮಾನಿ ನಾಗೇಶ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆದರಿಕೆ ಹಾಕಿದ ಅಭಿಮಾನಿಗಳ ಮೇಲೆ ಪಿ ಸಿ ಆರ್ ದಾಖಲು ಮಾಡಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಕೋರ್ಟ್ ಸೂಚನೆಯಂತೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಅರೆಸ್ಟ್ ಆಗ್ತಿದ್ದಂತೆ ಉಮಾಪತಿ ಗೌಡ ಹಾಗೂ ಪ್ರಥಮ್ ಗೆ ಚೇತನ್ ಕ್ಷಮೆ ಕೇಳಿದ್ದಾನೆ. ಕಾನೂನು ಬದ್ಧವಾಗಿ ನಡೆದುಕೊಳ್ತೀನಿ ಕ್ಷಮಿಸಿ ಅಂತಾ ವೀಡಿಯೋದಲ್ಲಿ ಮನವಿ ಮಾಡಿದ್ದಾನೆ.

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಇರುವ ಕೊಠಡಿಗೆ ಪೊಲೀಸರು ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದಾರೆ. ಬ್ಯಾರಕ್ ನಂ.3 ರ ಭದ್ರತಾ ಕೊಠಡಿಯಲ್ಲಿರೋ ದರ್ಶನ್ ಗೆ ಜೈಲಿನ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದರ್ಶನ್ ನೋಡಲು ಜೈಲಿನ ಕೈದಿಗಳು ಬರವ ಸಾಧ್ಯತೆಗಳಿವೆ. ಹೀಗಾಗಿ ಬ್ಯಾರಕ್ 3 ಬಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದೆ. ಸೋಮವಾರ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಗೆ 15 ನಿಮಿಷ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ. ದರ್ಶನ್ ಯಾರ ಸಂಪರ್ಕಕ್ಕೂ ಸಿಗದಂತೆ ಜೈಲಾಧಿಕಾರಿಗಳು ಭದ್ರತೆ ವಹಿಸಿದ್ದಾರೆ. ಊಟ, ತಿಂಡಿ ಅಂತಾ ಯಾವುದೇ ಸಮಯದಲ್ಲೂ ಜೈಲಿನ ಕೈದಿಗಳು ದರ್ಶನ್ ಬ್ಯಾರಕ್ ಬಳಿ ಬರದಂತೆ ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಇನ್ನು ಬ್ಯಾರಕ್ ನಲ್ಲಿ ತನ್ನ ಜೊತೆಗಿದ್ದವರ ಜೊತೆಯೇ ದರ್ಶನ್ ಸರಿಯಾಗಿ ಮಾತನಾಡುತ್ತಿಲ್ಲ. ಮಾನಸಿಕವಾಗಿ…

Read More

ತೀವ್ರತರದ ಮೂರ್ಛೆರೋಗದಿಂದ ಬಳಲುತ್ತಿರುವ ಶಾಲಾ ವಿದ್ಯಾರ್ಥಿಯೊಬ್ಬನ ತಲೆಬುರುಡೆಯೊಳಗೆ ಮೂರ್ಛೆಯನ್ನು ನಿಯಂತ್ರಿಸುವ ಸಾಧನವನ್ನು ಬ್ರಿಟನ್‌ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಮೂಲಕ ಇದು ಪ್ರಪಂಚದಲ್ಲೇ ಮೊದಲ ಪ್ರಯತ್ನವಾಗಿದೆ. ಓರನ್‌ ನೋಲ್ಸನ್‌ ಎಂಬ ಹೆಸರಿನ ಬಾಲಕನು ವೈದ್ಯಕೀಯ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾನೆ ಎಂದು ವರದಿಯೊಂದು ಹೇಳಿದೆ. ತಲೆಬುರುಡೆಯಲ್ಲಿ ಅಳವಡಿಸಿರುವ ನರಉತ್ತೇಜಕ (ನ್ಯೂರೋಸ್ಟಿಮ್ಯುಲೇಟರ್‌) ಸಾಧನವು ಮಿದುಳಿಗೆ ವಿದ್ಯುತ್‌ ಸಂಕೇತಗಳನ್ನು ರವಾನಿಸುತ್ತದೆ. ಇದು ಬಾಲಕ ಹಗಲು ಹೊತ್ತಿನಲ್ಲಿ ಮೂರ್ಛೆಹೋಗುವ ಪ್ರಮಾಣವನ್ನು ಶೇ 80ರಷ್ಟು ಕಡಿಮೆ ಮಾಡಿದೆ. ‘ಲೆನ್ನೊಕ್ಸ್‌-ಗ್ಯಾಸ್ಟೌಟ್‌ ಸಿಂಡ್ರೋಮ್‌ನಿಂದ (ಎಲ್‌ಜಿಎಸ್‌) ಓರನ್‌ ಬಳಲುತ್ತಿದ್ದ. ಇದು ಚಿಕಿತ್ಸೆ ಇಲ್ಲದ ತೀವ್ರ ಸ್ವರೂಪದ ಮೂರ್ಛೆರೋಗವಾಗಿದೆ. ಓರನ್‌ ಮೂರು ವರ್ಷದವನಾಗಿದ್ದಾಗ ಈ ಕಾಯಿಲೆ ಕಂಡು ಬಂದಿದ್ದು, ]ಅಂದಿನಿಂದ ಪ್ರತಿ ದಿನ ಆತ ಕನಿಷ್ಠ 24ರಿಂದ 100 ಬಾರಿ ಪ್ರಜ್ಞೆ ತಪ್ಪುತ್ತಿದ್ದ’ ಎಂದು ಬಿಬಿಸಿ ವರದಿ ಮಾಡಿದೆ. ‘ಲಂಡನ್ನಿನ ಗ್ರೇಟ್‌ ಆರ್ಮಂಡ್‌ ಸ್ಟ್ರೀಟ್‌ ಆಸ್ಪತ್ರೆಯಲ್ಲಿ ಲಂಡನ್‌ ಯೂನಿವರ್ಸಿಟಿ ಕಾಲೇಜು, ಕಿಂಗ್ಸ್‌ ಕಾಲೇಜು ಆಸ್ಪತ್ರೆ ಮತ್ತು ಆಕ್ಸ್‌ಫರ್ಡ್‌ ವಿವಿಯ ಸಹಯೋಗದಲ್ಲಿ ಪ್ರಾಯೋಗಿಕವಾಗಿ 2023ರ ಅಕ್ಟೋಬರ್‌ನಲ್ಲಿ ಈ…

Read More

ದೇಶದ ನಾಗರಿಕ- ಸೇನಾ ವಿಮಾನ ನಿಲ್ದಾಣಗಳಲ್ಲಿ ವಿಮಾನ ಟೇಕಾಫ್‌ ಹಾಗೂ ಇಳಿಯುವ ವೇಳೆ ಕಿಟಕಿ ಮೂಲಕ ಚಿತ್ರಗಳನ್ನು ತೆಗೆಯದಂತೆ ಚೀನಾದ ಉನ್ನತ ಬೇಹುಗಾರಿಕೆ ಸಂಸ್ಥೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ವಿದೇಶಿ ಪ್ರಯಾಣಿಕರೊಬ್ಬರು ಕಿಟಕಿಯ ಪರದೆ ಸರಿಸಿ ಚಿತ್ರ ತೆಗೆದಿರುವುದನ್ನು ಪತ್ತೆ ಮಾಡಿದ ಬೆನ್ನಲ್ಲೇ, ಈ ನಿರ್ದೇಶನ ನೀಡಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ನಾಗರಿಕ-ಸೇನಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ವೇಳೆ ಕಿಟಕಿ ಪರದೆ ಮುಚ್ಚುವ ಜೊತೆಗೆ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಚೀನಾ ರಾಜ್ಯ ಭದ್ರತಾ ಸಚಿವಾಲಯವು ‘ವಿ-ಚಾಟ್‌’ನಲ್ಲಿ ಹೇಳಿದೆ. ‘ಅನಧಿಕೃತವಾಗಿ ಚಿತ್ರ, ವಿಡಿಯೊಗಳನ್ನು ತೆಗೆದು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡುವಂತಿಲ್ಲ. ಸೇನಾ ಸೌಲಭ್ಯಗಳ ಕುರಿತು ಗೋಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಪ್ರಮಾಣಿತ ವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು’ ಎಂದು ಹಾಂಗ್‌ಕಾಂಗ್‌ ಮೂಲದ ‘ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌’ ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೂರ್ವ ಚೀನಾದ ಯಿವು ಪಟ್ಟಣದಿಂದ ಬೀಜಿಂಗ್‌ಗೆ ತೆರಳುವ ವೇಳೆ ವಿದೇಶಿ ಪ್ರಯಾಣಿಕರೊಬ್ಬರು…

Read More

ನಾನ್ ವೆಜ್ ಪ್ರಿಯರ ಫೇವರೆಟ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ 7 ವರ್ಷಗಳವರೆಗೆ ಗರಿಷ್ಠ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ರಾಜ್ಯಾದ್ಯಂತ 39 ಕಬಾಬ್ ಮಾದರಿಯನ್ನು ಸಂಗ್ರಹಿಸಿ, ಕ್ವಾಲಿಟಿ ಚೆಕ್ ಮಾಡಿ 8 ಕಬಾಬ್ ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಸನ್‍ಸೆಟ್ ಯೆಲ್ಲೋ, ಕಾರ್ಮೋಸಕಿನ್‍ನಂತಹ ರಾಸಯನಿಕ ಅಂಶ ಇರುವುದು ಪತ್ತೆಯಾಗಿತ್ತು. ಈ ಎರಡು ಅಂಶಗಳಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂಬುದು ಬಯಲಾಗಿದೆ. ಈ ಹಿನ್ನೆಲಯ್ಲಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಇದರ ಜೊತೆಗೆ ಗೋಬಿ ಮಂಚೂರಿಯಲ್ಲಿ ಕೂಡ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ…

Read More

ಕ್ಯಾಸಿನೊ ಗೇಮ್​​ನಲ್ಲಿ ಬರೋಬ್ಬರಿ 33 ಕೋಟಿ ರೂಪಾಯಿಗಳನ್ನು ಗೆದ್ದ ಖುಷಿಯಲ್ಲಿ ವ್ಯಕ್ತಿಯೊಬ್ಬರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿಂಗಾಪುರದ ಮರೀನಾ ಬೇಯಲ್ಲಿ ಕ್ಯಾಸಿನೊ ಗೇಮ್ ಸಾಕಷ್ಟು ಖ್ಯಾತಿ ಘಳಿಸಿದೆ. ಈ ಗೇಮ್​ ಆಡಲೆಂದೆ ವ್ಯಕ್ತಿಯೊಬ್ಬರು ಯಾವಾಗಲೂ ಕ್ಯಾಸಿನೊಗೆ ಬರುತ್ತಿದ್ದರು. ಆದರೆ ಸಾಕಷ್ಟು ಭಾರಿ ಸೋತು ಬೇಸರದಿಂದ ಹಿಂದಿರುಗುತ್ತಿದ್ದರು. ಆದರೆ ಈ ಬಾರಿ ಬರೋಬ್ಬರಿ 33,42,61,604 ರೂಪಾಯಿಗಳ ಜಾಕ್​ಪಾಟ್ ಹೊಡೆದಿದೆ. ಇದರಿಂದ ವ್ಯಕ್ತಿ ಸಾಕಷ್ಟು ಖುಷಿಯಲ್ಲಿದ್ದರು. ಆದರೆ ಆ ಖುಷಿ ಇದ್ದಿದ್ದು ಕೆಲವೇ ಕೆಲವು ನಿಮಿಷಗಳು ಮಾತ್ರವೇ. ಕೋಟಿ ಕೋಟಿ ಹಣ ಗೆದ್ದು ಅತಿಯಾದ ಉತ್ಸಾಹದಿಂದಿದ್ದ ವ್ಯಕ್ತಿಗೆ ಕಾರ್ಡಿಕ್ ಅರೆಸ್ಟ್​​ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಕ್ಯಾಸಿನೊದ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಅದರ ಸಿಬ್ಬಂದಿ ಅವರನ್ನು ಪರೀಕ್ಷಿಸಿದ್ದಾರೆ. ಆದರೆ ಅವರು ಕಾರ್ಡಿಕ್ ಅರೆಸ್ಟ್​​ ಆದ ತಕ್ಷಣವೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. 33 ಕೋಟಿ ಹಣ ಗೆದ್ದಾಗ ಅವರಲ್ಲಿ ಆದ ತೀವ್ರ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ1 ಆರೋಪಿಯಾಗಿ ನಟಿ ಪವಿತ್ರಾ ಗೌಡ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸರು ಪ್ರಕರಣವನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಂಡಿದ್ದು ಈಗಾಗಲೇ 17 ಮಂದಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ತನಿಖೆಯ ವೇಳೆ ಸಾಕಷ್ಟು ಮಾಹಿತಿಗಳು ಬಹಿರಂಗವಾಗುತ್ತಿದ್ದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯಾ ಜಗದೀಶ್ ಖಾತೆಯಿಂದ ಪವಿತ್ರಾ ಗೌಡಗೆ 2 ಕೋಟಿ ಹೋಗಿರೋದು ಗೊತ್ತಾಗಿದೆ. ಸೌಂದರ್ಯಾ ಜಗದೀಶ್​ ಅವರ ಬ್ಯಾಂಕ್​ ಖಾತೆಯಿಂದ ಪವಿತ್ರಾ ಗೌಡ ಅವರ ಖಾತೆಗೆ ಬರೋಬ್ಬರಿ 2 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸೌಂದರ್ಯಾ ಜಗದೀಶ್​ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಆರ್ಥಿಕ ಸಂಕಷ್ಟ ಕೂಡ ಕಾರಣ ಎನ್ನಲಾಗಿದೆ. ಹೀಗಿರುವಾಗ ಅವರು ಪವಿತ್ರಾ ಗೌಡಗೆ 2 ಕೋಟಿ ರೂಪಾಯಿ ನೀಡಿದ್ದು ಯಾಕೆ ಎಂಬುದು ನಿಗೂಢವಾಗಿಯೇ ಉಳಿದುಕೊಂಡಿದೆ. ಇನ್ನೊಂದು ಶಾಕಿಂಗ್​ ವಿಚಾರ ಇದೆ. ಪವಿತ್ರಾ ಗೌಡಗೆ ಸೌಂದರ್ಯಾ ಜಗದೀಶ್​ ಅವರು ಇಷ್ಟು ದೊಡ್ಡ ಮೊತ್ತದ ಹಣ ನೀಡಿದ್ದರ ಬಗ್ಗೆ ಜಗದೀಶ್​…

Read More