Author: Author AIN

ಕಳೆದ ತಿಂಗಳು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್‍ನ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧ್ಯಕ್ಷೀಯ ಚುನಾವಣೆ ಜೂನ್ 28ರಂದು ನಡೆಯಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ನಡೆಯಲಿರುವ ಚುನಾವಣೆಯಲ್ಲಿ ಐದು ಸಂಪ್ರದಾಯವಾದಿಗಳು ಮತ್ತು ಓರ್ವ ಸುಧಾರಣಾವಾದಿ ಅಭ್ಯರ್ಥಿ ಕಣದಲ್ಲಿದ್ದಾರೆ. 2020ರಿಂದ ಸಂಸತ್‍ನ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಮುಹಮ್ಮದ್ ಬಘೆರ್ ಘಲಿಬಾಫ್(62 ವರ್ಷ), ರೈಸಿ ಸರಕಾರದ ಕಟ್ಟಾ ಬೆಂಬಲಿಗ ಅಮೀರ್ ಹುಸೇನ್ ಘಝಿಝಾದೆ ಹಷೆಮಿ(53 ವರ್ಷ), ಸಯೀದ್ ಜಲೀಲಿ(58 ವರ್ಷ), ಮಾಜಿ ಆರೋಗ್ಯ ಸಚಿವ ಮಸೂದ್ ಪೆಜೆಶ್ಕಿಯಾನ್(69 ವರ್ಷ), ಮುಸ್ತಫಾ ಪೌರ್ಮೋಹಮ್ಮದಿ(64 ವರ್ಷ), 2021ರಿಂದ ಟೆಹ್ರಾನ್‍ನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಲಿರೆಜಾ ಜಕಾನಿ (58 ವರ್ಷ) ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ. ಅಜರ್‌ಬೈಜಾನ್‌ಗೆ ಅಣೆಕಟ್ಟೆ ಉದ್ಘಾಟನೆಗೆಂದು ಹೋಗಿದ್ದ ಇರಾನ್ ಅಧ್ಯಕ್ಷ ರೈಸಿ ಅವರು ವಿದೇಶಾಂಗ ಸಚಿವ, ತಮ್ಮ ಪ್ರತಿನಿಧಿ ಹಾಗೂ ಅಧಿಕಾರಿಯೊಬ್ಬರ ಸಮೇತ ತೆಹ್ರಾನ್‌ಗೆ 3 ಹೆಲಿಕಾಪ್ಟರ್‌ ತಂಡದೊಂದಿಗೆ ಮರಳುತ್ತಿದ್ದರು. 2 ಹೆಲಿಕಾಪ್ಟರ್…

Read More

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರಾಜೀನಾಮೆ ನಿಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿರುವ ಪಿತ್ರೊಡಾ ಅವರು ಮೇ 8ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದನ್ನು ಆ ತಕ್ಷಣವೇ ಪಕ್ಷದ ಅಧ್ಯಕ್ಷ ಖರ್ಗೆ ಅಂಗೀಕರಿಸಿದ್ದರು. ಭಾರತದ ವೈವಿಧ್ಯತೆ ಕುರಿತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಕೆಲವು ವಿವರಣೆಗಳು ಜನಾಂಗೀಯ ನಿಂದನೆಯವು ಎಂಬ ಆರೋಪಕ್ಕೆ ಗುರಿಯಾದ ನಂತರ ತಮ್ಮ ಸ್ಥಾನಕ್ಕೆ ‍ಪಿತ್ರೊಡಾ ರಾಜೀನಾಮೆ ಸಲ್ಲಿಸಿದ್ದರು. ದೇಶದ ಈಶಾನ್ಯ ರಾಜ್ಯಗಳ ಜನರನ್ನು ಚೀನೀಯರಿಗೆ, ದಕ್ಷಿಣ ಭಾಗದ ಜನರನ್ನು ಆಫ್ರಿಕನ್ನರಿಗೆ, ಪಶ್ಚಿಮ ಭಾಗದ ಜನರನ್ನು ಅರಬ್ಬರಿಗೆ, ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಹೋಲಿಸಿದ್ದು ವಿವಾದಕ್ಕೆ ತಿರುಗಿತ್ತು. ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಅವರು ಆಡಿದ್ದ…

Read More

ಕಾಶ್ಮೀರವನ್ನು ಉಲ್ಲೇಖಿಸಿ ಆಧಾರರಹಿತ ಸಂಕಥನಗಳನ್ನು ಹರಿಬಿಟ್ಟಿದ್ದಕ್ಕಾಗಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಕಿಸ್ತಾನ ನಿಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಆಯೋಗದ ರಾಯಭಾರಿ ಪ್ರತೀಕ್‌ ಮಾಥೂರ್‌ ಅವರು ವಾರ್ಷಿಕ ವರದಿ ಮಂಡನೆ ವೇಳೆ, ‘ದಿನದ ಆರಂಭದಲ್ಲಿ ನಿಯೋಗವೊಂದು ತನ್ನ ಸುಳ್ಳು ಸಂಕಥನವನ್ನು ಪ್ರಚಾರಪಡಿಸಲು ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ.ಇದರಿಂದ ನಮಗೇನೂ ಆಶ್ಚರ್ಯವಾಗಿಲ್ಲ. ಈ ವೇದಿಕೆಯ ಸಮಯವನ್ನು ಹಾಳುಮಾಡಬಾರದು ಎಂಬ ಉದ್ದೇಶದಿಂದ ಆ ಸುಳ್ಳು ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುತ್ತಿಲ್ಲ’ ಎಂದರು. ಪಾಕಿಸ್ತಾನದ ವಿಶ್ವಸಂಸ್ಥೆ ರಾಯಭಾರಿ ಮುನೀರ್‌ ಅಕ್ರಮ್‌ ಅವರು ಚರ್ಚೆ ವೇಳೆ ಕಾಶ್ಮೀರ ಕುರಿತು ಮಾತನಾಡಿದ್ದರು. ವಿಶ್ವಸಂಸ್ಥೆಯ ವಿವಿಧ ವೇದಿಕೆಗಳಲ್ಲಿ ಪಾಕಿಸ್ತಾನವು ಕಾಶ್ಮೀರದ ಕುರಿತು ಪ್ರಸ್ತಾಪಿಸುತ್ತಲೇ ಇದೆ.

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇದರಿಂದ ದರ್ಶನ್ ರ ಲಕ್ಷಾಂತರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಬೇಸರದಲ್ಲಿರುವ ಅಭಿಮಾನಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದಾರೆ. ತಾಳ್ಮೆಯಿಂದ ಇರಿ, ನ್ಯಾಯಾಲಯದ ಮೇಲೆ ನಂಬಿಕೆ ಇಡಿ ಎಂದು ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.  ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ…

Read More

ಹೊಸ ತೆರಿಗೆ ಹಾಗೂ ವಿವಾದಾತ್ಮಕ ಹಣಕಾಸು ಮಸೂದೆ ವಿರೋಧಿಸಿ ಕಿನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಇದೀಗ ಭಾರತೀಯರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ಹೈಕಮೀಷನ್‌ ಸಲಹೆ ನೀಡಿದೆ. ಕಿನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಹಿಂಸಾಚಾರ ಹೆಚ್ಚಾಗುತ್ತಿದೆ, ಪರಿಸ್ಥಿತಿ ಉದ್ವಿಗ್ನವಾಗಿದ್ದು ಭಾರತೀಯರು ಜಾಗರೂಕರಾಗಿರಬೇಕು. ಅನಾವಶ್ಯಕವಾಗಿ ಹೊರಗೆ ಹೋಗಬಾರದು, ಪ್ರತಿಭಟನೆ ಸ್ಥಳಗಳಲ್ಲಿ ಇರದಂತೆ ಜಾಗ್ರತೆವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಲ್ಲಿಯವರೆಗೂ ಏಳು ಜನರು ಮೃತಪಟ್ಟು 31ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಯಾನಿಟರಿ ಟವೆಲ್‌ ಮತ್ತು ಡೈಪರ್ಗಳ ಮೇಲಿನ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಇನ್ನೂ ಹಲವು ಸರಕುಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಹಣಕಾಸು ಮಸೂದೆ ಮೇಲೆ ಸಂಸತ್‌ನಲ್ಲಿ ಚರ್ಚೆ ನಡೆದಿದ್ದು, ಮಸೂದೆಯನ್ನು ಮತಕ್ಕೆ ಹಾಕಲಾಗಿದೆ. ಪ್ರಸ್ತಾವಿತ ತೆರಿಗೆಗಳನ್ನು ವಿರೋಧಿಸಿ ಕಳೆದ ಕೆಲ ದಿನಗಳಿಂದಲೂ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

Read More

ಮೈತುಂಬಾ ಸಾಲಾ ಮಾಡಿಕೊಂಡಿದ್ದ ಮದ್ಯದ ದೊರೆ ಎಂದೇ ಖ್ಯಾತಿ ಘಳಿಸಿದ ಉದ್ಯಮಿ ವಿಜಯ್ ಮಲ್ಯ ಸದ್ಯ ಲಂಡನ್ ನಲ್ಲಿ ಸೆಟಲ್ ಆಗಿದ್ದಾರೆ. ದಿವಾಳಿಯಿಂದ ಘೋಷಿಸಿ ಭಾರತದಿಂದ ಕಾಲ್ಕಿತ್ತ ವಿಜಯ್ ಮಲ್ಯ ಇತ್ತೀಚೆಗೆ ತಮ್ಮ ಮಗನ ಮದುವೆಯನ್ನು ಸಖತ್ ಅದ್ದೂರಿಯಾಗಿ ಮಾಡಿದ್ದಾರೆ. ಈ ಮಧ್ಯೆ  ಭಾರತದಲ್ಲಿ ದಿವಾಳಿ ಎಂದಿರೋ ವಿಜಯ್ ಮಲ್ಯಗೆ ಲಂಡನ್ ನಲ್ಲಿ ಎಷ್ಟು ಆಸ್ತಿ ಇದೆ ಎಂಬ ಹುಡುಕಾಟ ಗೂಗಲ್ ನಲ್ಲಿ ಶುರುವಾಗಿದೆ. ವಿಜಯ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ ಮತ್ತು ಜಾಸ್ಮಿನ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ಇತ್ತೀಚೆಗೆ ಲಂಡನ್ ನಲ್ಲಿರುವ ವಿಜಯ ಮಲ್ಯ ಅವರ 14 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 117 ಕೋಟಿ ಬೆಲೆ ಬಾಳುವ ಭವನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವಿವಾಹಕ್ಕಿಂತ ಹೆಚ್ಚಾಗಿ ಮಲ್ಯ ಅವರ ಎಸ್ಟೇಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿದೆ. ಹರ್ಟ್‌ಫೋರ್ಡ್‌ಶೈರ್‌ನ ಟೆವಿನ್‌ನ ಸ್ಲೀಪಿ ಹಳ್ಳಿಯ ಲೇಡಿವಾಕ್ ನಲ್ಲಿ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್‌ ವಿವಾಹವಾಗಿದ್ದಾರೆ. ವಿಸ್ತಾರವಾದ ಲೇಡಿವಾಕ್ ಎಸ್ಟೇಟ್…

Read More

ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮತ್ತು ಅವರ ತಂಡ ಎರಡು ವಾರಗಳಿಂದ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಿಂದ ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ ತಡವಾಗಿದೆ. ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ತಂಡ ಆರಂಭದಲ್ಲಿ ಜೂನ್ 14 ಕ್ಕೆ ವಾಪಸಾಗುತ್ತಾರೆ ಎಂದು ಹೇಳಲಾಗಿತ್ತು. ನಂತರ ಜೂನ್ 26ಕ್ಕೆ ಮುಂದೂಡಲಾಯಿತು. ಆದಾಗ್ಯೂ, ನಿಲ್ದಾಣವು ಎರಡು ಯೋಜಿತ ನಡಿಗೆಗಳನ್ನು ಜೂನ್ 24 ರಂದು ಮತ್ತು ಇನ್ನೊಂದು ಜುಲೈ 2 ರಂದು ನಡೆಯಬೇಕಾಗಿರುವುದರಿಂದ ಯೋಜನೆಯನ್ನು ಬದಲಾಯಿಸಲಾಗಿದೆ. ನಾವು ನಮ್ಮ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಸ್ಟ್ಯಾಂಡರ್ಡ್ ಮಿಷನ್ ಮ್ಯಾನೇಜ್ಮೆಂಟ್ ತಂಡದ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದ್ದಾರೆ. ಇನ್ನು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಕೇವಲ 27ದಿನಗಳ ಇಂಧನ ಹೊಂದಿದ್ದು, ಅಷ್ಟರೊಳಗೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕಾಗಿದೆ. ನಾಸಾದ ಗಗನಯಾತ್ರಿಗಳಾದ ಬುಚ್…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿಯಾಗಿ ಜೈಲು ಸೇರಿದ್ದಾರೆ. ತಮಗೆ ಕಿರುಕುಳ ನೀಡಿದ ರೇಣುಕಾ ಸ್ವಾಮಿಯನ್ನು ನಟ ದರ್ಶನ್ ಜೊತೆ ಸೇರಿ ಪವಿತ್ರಾ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಪವಿತ್ರಾ ಗೌಡ ಮೇಕಪ್ ಮಾಡಿ ವಿಚಾರಣೆ ವೇಳೆ ಕಾಣಿಸಿಕೊಂಡಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣಕವಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿತ್ತು. ಈ ಮಧ್ಯೆ ಪವಿತ್ರಾಗೆ ಮೇಕಪ್ ಮಾಡಲು ಅವಕಾಶ ನೀಡಿದ ಪಿಎಸ್​ಐಗೆ ಸಂಕಷ್ಟ ಎದುರಾಗಿದೆ. ಜೂನ್ 15ರಂದು ಪವಿತ್ರಾ ಗೌಡ ಮನೆ ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಕೂಡ ಇದ್ದರು. ಪವಿತ್ರಾಗೆ ಲಿಪ್ಸ್ ​​ಟಿಕ್ ಹಚ್ಚಲು ಪಿಎಸ್ಐ ಅವಕಾಶ ಕೊಟ್ಟಿದ್ದರು. ಕರ್ತವ್ಯ ಲೋಪ ಹಿನ್ನಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರಿಂದ ನೋಟಿಸ್ ನೀಡಲಾಗಿದೆ. ಪವಿತ್ರಾ ಅವರು ಜೈಲಿನಲ್ಲಿ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಜೈಲಿನ ಊಟ ಅವರಿಗೆ ಇಷ್ಟ…

Read More

ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಬಿಗ್ ರಿಲೀಫ್ ಸಿಕ್ಕಿದೆ. ನಟಿಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದೀಗ ಪ್ರತಿಕ್ರಿಯಿಸಿರೋ ಸಂಜನಾ ಈ ಡ್ರಗ್ಸ್ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ. ನನ್ನನ್ನು ಕೆಲವರು ಟಾರ್ಗೆಟ್ ಮಾಡಿದ್ದಾರೆ ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಈಗ ನಿರಾಳ ಅನ್ನಿಸುತ್ತಿದೆ. ಆದರೂ ಬೇಸರ ಆಗ್ತಿದೆ. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ. ಆದರೂ ಯಾರೋ ಒಬ್ಬರು ನನ್ನ ವೈಯಕ್ತಿಕ ದ್ವೇಷದಿಂದ ಸಿಲುಕುವಂತೆ ಮಾಡಿದರು. ನನ್ನದೇನೂ ತಪ್ಪಿಲ್ಲದೆ ಈ ಪ್ರಕರಣದಲ್ಲಿ ವಿಕ್ಟಿಮ್ ಆದೆ ಎಂದಿದ್ದಾರೆ. ಕೆಲವರು ನನ್ನ ಹೆಸರು ಬಳಸಿಕೊಂಡು ಮುಂದಕ್ಕೆ ಹೋಗೋಕೆ ನೋಡಿದರು. ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು. ಬರೀ ಮಾತಲ್ಲಿ ಒಬ್ಬ ನನ್ನ ಹೆಸರು ಹೇಳಿದ ಅದಕ್ಕೆ ಅಲ್ವೇ ಇವತ್ತು ಈ ಕೇಸ್ ರದ್ದು ಆಗಿದ್ದು ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ. ನಾನಂತೂ ಈ ಪ್ರಕರಣ ಆದ್ಮೇಲೆ ಸಾಕಷ್ಟು ನೋವು ಅನುಭವಿಸಿದೆ. ಅದು ಯಾವತ್ತೂ ಹೋಗಲ್ಲ. ದೇವರ ದಯೆಯಿಂದ ಒಳ್ಳೆಯ ಕುಟುಂಬ…

Read More

ಕನ್ನಡದ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಮೂಲತಃ ಕೊಡಗಿನವರು. ಕೊಡಗಿನಲ್ಲೇ ಹುಟ್ಟಿ ಬೆಳೆದ ರಶ್ಮಿಕಾ ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಆದರೂ ಆಗಾಗ ಕೊಡಗಿಗೆ ಭೇಟಿ ನೀಡುವ ನಟಿ ಇದೀಗ ಕೊಡವ ಸಂಪ್ರದಾಯದಂತೆ ಸೀರೆಯುಟ್ಟು ಮಿಂಚಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಮಿಂಚಿದ ರಶ್ಮಿಕಾ ಸದ್ಯ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್ ಬಳಿಕ ಬಾಲಿವುಡ್ ಗೆ ಎಂಟ್ರಿಕೊಟ್ಟಿರೋ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಈ ಮಧ್ಯೆ ಕೊಂಚ ಬ್ರೇಕ್ ತೆಗೆದುಕೊಂಡು ಸ್ನೇಹಿತೆಯ ಮದುವೆಗಾಗಿ ಕೊಡಗಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಟಿ ರಾಯಲ್ ಬ್ಲೂ ಸೀರೆಯಲ್ಲಿ ಚೆಂದದ ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಆಗಾಗ ಕೊಡಗಿಗೆ ಬಂದು ಪೋಷಕರ ಜೊತೆ ಕಾಲ ಕಳೆಯುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಾನು…

Read More