Author: Author AIN

ತಮಿಳಿನ ಖ್ಯಾತ ನಟ ಧನುಶ್ ಮೇಲೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿತ್ತು, ಧನುಶ್​  ಸಿನಿಮಾಗಳಿಗೆ ಡೇಟ್ಸ್ ನೀಡಿಲ್ಲವೆಂಬ ಕಾರಣಕ್ಕೆ ನಿಷೇಧ ಹೇರಲಾಗಿದ್ದು ಈ ಬಗ್ಗೆ ಕಲಾವಿಧರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ತಮಿಳು ಚಿತ್ರರಂಗದ ಕಲಾವಿದರ ಸಂಘ ಮಧ್ಯಸ್ಥಿಕೆ ವಹಿಸಿ, ನಿರ್ಮಾಪಕರ ಸಂಘದೊಂದಿಗೆ ಮಾತನಾಡಿ ವಿವಾದ ಬಗೆ ಹರಿಸಿದೆ. ಈ ಮೂಲಕ ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದೆ. ಈ ಹಿಂದೆ ನಟ ಧನುಷ್ ಮೇಲೆ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಕೆಲ ಆರೋಪಗಳನ್ನು ಮಾಡಿತ್ತು. ಧನುಶ್ ವೃತ್ತಿಪರವಲ್ಲದ ನಡವಳಿಕೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿತ್ತು, ನಿರ್ಮಾಪಕರಿಂದ ಮುಂಗಡ ಹಣ ಪಡೆದ ಬಳಿಕವೂ ಡೇಟ್ಸ್​ ನೀಡದೆ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎಂದು ನಿರ್ಮಾಪಕರ ಸಂಘ ಆರೋಪಿಸಿ ಅವರೊಟ್ಟಿಗೆ ಕೆಲಸ ಮಾಡುವುದಿಲ್ಲವೆಂದು ನಿಷೇಧ ಹೇರಿತ್ತು. ಆದರೆ, ಇದೀಗ ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ನಿರ್ಮಾಪಕರ ಸಂಘ ಹಿಂತೆಗೆದುಕೊಂಡಿದೆ. ಈ ಹಿಂದೆ ತೆನಾಂಡಾಲ್ ಫಿಲಮ್ಸ್ ಮತ್ತು 5 ಸ್ಟಾರ್ ಕ್ರಿಯೇಷನ್ಸ್​…

Read More

ಪಾಕಿಸ್ತಾನದ ನಿಷೇಧಿತ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಯ ವಾಹನದ ಮೇಲೆ ಬುಧವಾರ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ಯೋಧ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಗಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಾಜೌರ್‌ ಜಿಲ್ಲೆಯ ಮಾಮೊಂಡ್ ಬಳಿ ಉಗ್ರರು ಭದ್ರತಾ ಪಡೆಯ ವಾಹನದ ಮೇಲೆ ದಿಢೀರ್‌ ಗುಂಡಿನ ದಾಳಿ ನಡೆಸಿದರು. ದಾಳಿಯ ತೀವ್ರತೆಯಿಂದಾಗಿ ಒಬ್ಬ ಯೋಧ ಮೃತಪಟ್ಟಿದ್ದು, ವಾಹನವು ಜಖಂಗೊಂಡಿತು. ಭದ್ರತಾ ಪಡೆಯ ಇನ್ನಷ್ಟು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದಿದ್ದಾರೆ.

Read More

ಕನ್ನಡದ ಖ್ಯಾತ ಹಿರಿಯ ನಟಿ ತಾರಾ ಅನುರಾಧಾ ವಿಶೇಷ ಫೋಟೋ ಶೂಟ್ ಮಾಡಿಸಿದ್ದು ಥೇಟ್ ರಾಜಮಾತೆಯಂತೆ ಕಂಗೊಳಿಸಿದ್ದಾರೆ. ಮೈಸೂರಿನ ಮಹಾರಾಣಿಯ ರೀತಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಪ್ರತಿಯೊಬ್ಬರು ಕ್ಲೀನ್ ಬೋಲ್ಡ್ ಆಗಿದ್ದಾರೆ. ವಿಶೇಷ ಫೋಟೋ ಶೂಟ್ ಮೂಲಕ ನಟಿ ತಾರಾ ಅನುರಾಧಾ ಗೌರಿ ಗಣೇಶ ಹಬ್ಬಕ್ಕೆ ನಾಡಿನ ಜನತೆಗೆ ವಿಶೇಷವಾಗಿಯೆ ಶುಭಾಷಯ ತಿಳಿಸಿದ್ದಾರೆ. ತಾರಾ ಅನುರಾಧಾ ತೇಟ ಮಹಾರಾಣಿಯ ರೂಪದಲ್ಲಿಯೇ ಕಂಗೊಳಿಸಿದ್ದಾರೆ. ಹಬ್ಬದ ದಿನವೇ ಈ ಒಂದು ಲುಕ್‌ನ ರಿವೀಲ್ ಆಗಿದೆ. ಹಾಗೆ ಈ ಬಗ್ಗೆ ತಾರಾ ಅನುರಾಧಾ ತಮ್ಮ ಈ ವಿಶೇಷ ಫೋಟೋದ ಹಿಂದಿನ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ. ಅದರ ಜೊತೆಗೆ ಒಂದಷ್ಟು ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಮೈಸೂರಿನ ರಾಜಮಾತೆಯ ಲುಕ್ ಅನ್ನೇ ಇಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಹಾಗಾಗಿಯೇ ತಾರಾ ಅನುರಾಧಾ ಅವರು ಮಹಾರಾಣಿಯಂತೆ ಕಾಣಿಸುತ್ತಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳೂ ಕೂಡ ತಾರಾ ಅವರನ್ನ ರಾಜ ಮಾತೆ ಅಂತಲೂ ಕರೆದಿದ್ದಾರೆ. ತಾರಾ ಅನುರಾಧಾ ಅವರು…

Read More

ಕಿರುತೆರೆ ನಟ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಅರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೃಂದಾವನ ಸೀರಿಯಲ್​ನಲ್ಲಿ ನಟಿಸುತ್ತಿದ್ದ ವರುಣ್ ಆರಾಧ್ಯ ಅವರು ಸೀರಿಯಲ್​ಗೆ ಎಂಟ್ರಿ ಕೊಡುವ ಸ್ವಲ್ಪ ಮುನ್ನ ವರ್ಷ ಕಾವೇರಿ ಜೊತೆ ಬ್ರೇಕ್ ಅಪ್ ಮಾಡಿ ಕೊಂಡಿದ್ದರು. ಆದರೆ ಇದೀಗ ವರುಣ್ ವಿರುದ್ಧ ವರ್ಷ ಕಾವೇರಿ ದೂರು ದಾಖಲಿಸಿದ್ದಾರೆ. ಖಾಸಗಿ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಮಾಡೋದಾಗಿ ಬೆದರಿಕೆಯ ಆರೋಪದಡಿ ವರುಣ್ ಆರಾಧ್ಯ ವಿರುದ್ಧ ವರ್ಷ ಕಾವೇರಿ ದೂರು ನೀಡಿದ್ದಾರೆ. ಯುವತಿ ಜೊತೆ ಎಂಗೇಜ್ ಆಗಿದ್ದಾಗಲೇ ಬೇರೆ ಅವರೊಂದಿಗೆ ವರುಣ್ ಅಫೇರ್ ಹೊಂದಿದ್ದರು. ಅದನ್ನು ಪ್ರಶ್ನಿಸಿದ ಯುವತಿಗೆ ಖಾಸಗಿ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ವರುಣ್ ಬೆದರಿಸಿದ್ದ. ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿದ್ದಾರೆ. ವಾಟ್ಸ್‌ ಆಪ್‌ಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್‌ ನಿಂದಿಸಿರೋದಾಗಿ ವರ್ಷ ಕಾವೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ…

Read More

ಹಮಾಸ್​ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್​, ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಕಟ್ಟಡ ನಿರ್ಮಾಣ, ಬಡಗಿ, ಕಮ್ಮಾರ ಕೆಲಸದಾಳುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಕಾರ್ಮಿಕರನ್ನು ಒದಗಿಸಲು ಅಲ್ಲಿನ ಸರ್ಕಾರ ಭಾರತಕ್ಕೆ ಮನವಿ ಮಾಡಿದ್ದು10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭೇಡಿಕೆ ಇಟ್ಟಿದೆ. ಒಟ್ಟು 10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರ ಅಗತ್ಯವಿದ್ದು ಮತ್ತೆ ನೇಮಕ ಪ್ರಕ್ರಿಯೆ ನಡೆಸಿಕೊಡುವಂತೆ ಭಾರತಕ್ಕೆ ಇಸ್ರೇಲ್‌ ಮನವಿ ಮಾಡಿದೆ. ಅಲ್ಲದೇ ಮನೆ ಕೆಲಸಕ್ಕೆ 5 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಡುವಂತೆಯೂ ಬೇಡಿಕೆ ಸಲ್ಲಿಸಿದೆ. ಇಸ್ರೇಲ್‌ ಮನವಿಗೆ ಸ್ಪಂದಿಸಿರುವ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ), ಈ ಸಂಬಂಧ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದು ವಿಷಯ ತಿಳಿಸಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ನೇಮಕ ಪ್ರಕ್ರಿಯೆ ಈ ಬಾರಿ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಮೊದಲ ಸುತ್ತಿನ ನೇಮಕಾತಿ ಪ್ರಕ್ರಿಯೆ ಉತ್ತರ ಪ್ರದೇಶ, ಹರಿಯಾಣ ಮತ್ತು ತೆಲಂಗಾಣದಲ್ಲಿ ನಡೆದಿತ್ತು. ಆಗ, 10,349 ಕಾರ್ಮಿಕರು ನೇಮಕಗೊಂಡಿದ್ದರು. ಇದೀಗ ಮತ್ತೆ ಬೇಡಿಕೆ ಸಲ್ಲಿಸಿದ್ದು ಮತ್ತಷ್ಟು ಕಾರ್ಮಿಕರು…

Read More

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಆರು ಸಂಸದರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸಾವಿರಾರು ಬೆಂಬಲಿಗರು ಭಾನುವಾರ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರ್ಯಾಲಿಗಾಗಿ ಜಮಾಯಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಬಂಧಿತ ಸಂಸದರನ್ನು ಇಸ್ಲಾಮಾಬಾದ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಬಂಧಿತರನ್ನು ನ್ಯಾಯಾಧೀಶರು ಅವರಿಗೆ ಎಂಟು ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ. ಕಳೆದ ವಾರವಷ್ಟೇ ಪಾಕ್ ಸಂಸತ್ ನಲ್ಲಿ ಶಾಂತಿಯುತ ಸಭೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಯಿದೆ 2024 ಅನ್ನು ಅಂಗೀಕರಿಸಲಾಯಿತು. ಈ ಕಾಯ್ದೆಯಡಿ ಪಿಟಿಐ ಪಕ್ಷದ ಒಟ್ಟು 34 ಮಂದಿಯನ್ನು ಬಂಧಿಸಲಾಗಿದೆ. ಈ ಸಣ್ಣ ಅಡೆತಡೆಗಳು ನಮ್ಮನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ನಾವು ಇಮ್ರಾನ್ ಖಾನ್ ಅವರ ಸೈನಿಕರು, ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಸಂಸದರ ಜೊತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ ಪಿಟಿಐ ನಾಯಕ ಮತ್ತು ಹಿರಿಯ ವಕೀಲ ಮುಹಮ್ಮದ್ ಶೋಯೆಬ್ ಶಾಹೀನ್ ಹೇಳಿದ್ದಾರೆ. ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ…

Read More

ವೈದ್ಯ ಲೋಕದಲ್ಲಿ ದಿನದಿನೇ ಹೊಸ ಹೊಸ ಸಾಹಸಗಳು ನಡೆಯುತ್ತಲೆ ಇರುತ್ತದೆ. ದೂರದಲ್ಲೆಲ್ಲೋ ಕುಳಿತೇ ವೈದ್ಯರು ದೊಡ್ಡ ದೊಡ್ಡ ಶಸ್ತ್ರ ಚಿಕಿತ್ಸೆಗಳನ್ನು ನಡೆಸುತ್ತಿದ್ದಾರೆ. ಅಂತೆಯೇ ಸ್ವಿಜರ್ಲೆಂಡ್‌ನ‌ ಜ್ಯೂರಿಚ್‌ನಲ್ಲಿ ಕುಳಿತುಕೊಂಡು 9,300 ಕಿ.ಮೀ. ದೂರದ ಹಾಂಕಾಂಗ್‌ ನಲ್ಲಿದ್ದ ಹಂದಿ ಮಾದರಿ ಮೇಲೆ ಟೆಲಿಆಪರೇಟೆಡ್‌ ಮ್ಯಾಗ್ನೆಟಿಕ್‌ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಸೈ ಎನಿಸಿಕೊಂಡಿದ್ದಾರೆ. ಸ್ವಿಜರ್ಲೆಂಡ್‌ನ‌ ಸ್ವಿಸ್‌ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಿಜಿ ಜ್ಯೂರಿಚ್‌ (ಇಟಿಎಚ್‌ ಜ್ಯುರಿಚ್‌) ಮತ್ತು ಚೀನಾದ ಯುನಿವರ್ಸಿಟಿ ಆಫ್ ಹಾಂಕಾಂಗ್‌ (ಸಿಯುಎಚ್‌ಕೆ) ವೈದ್ಯ ಬೋಧಕರು ಜಂಟಿಯಾಗಿ, ಹೊಸ ತಂತ್ರಜ್ಞಾನ ಬಳಸಿಕೊಂಡು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹಾಂಕಾಂಗ್‌ನ ಆಪರೇಷನ್‌ ರೂಮ್‌ನಲ್ಲಿ ವೈದ್ಯರು ಸಮ್ಮುಖದಲ್ಲಿ ಮತ್ತು ಜ್ಯೂರಿಚ್‌ನಲ್ಲಿದ್ದ ರಿಮೋಟ್‌ ಸ್ಪೆಷಲಿಸ್ಟ್‌ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಶಸ್ತ್ರ ಚಿಕಿತ್ಸೆ ಪ್ರಕ್ರಿಯೆ ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಜ್ಯೂರಿಚ್‌ನಲ್ಲಿ ರಿಮೋಟ್‌ ಸ್ಪೆಷಲಿಸ್ಟ್‌ಗಳು ಶಸ್ತ್ರ ಚಿಕಿತ್ಸೆಗೆ ಗೇಮ್‌ ಕಂಟ್ರೋಲರ್‌ ಬಳಸಿಕೊಂಡಿದ್ದರು. ಸೌಲಭ್ಯ ರಹಿತ ಪ್ರದೇಶಗಳಲ್ಲಿ ಶಸ್ತ್ರ ಚಿಕಿತ್ಸೆಯನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಬಹುದು ಎಂಬುದು ಈ ಪ್ರಯೋಗದ ಉದ್ದೇಶವಾಗಿತ್ತು. ಮುಂದಿನ…

Read More

ಭಾರತದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯು ಸಂಪೂರ್ಣ ಬಿಜೆಪಿ ನಿಯಂತ್ರಣದಲ್ಲಿತ್ತು. ಬಿಜೆಪಿ ಬಯಸಿದಂತೆ ಚುನಾವಣ ಆಯೋಗ ಚುನಾವಣೆಯನ್ನು ನಡೆಸಿತು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.  ಅಮೆರಿಕಾದ ಜಾರ್ಜ್ ಟೌನ್ ನಲ್ಲಿ ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದ್ದರೆ ಬಿಜೆಪಿ 240 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ. ಬಿಜೆಪಿ ತನ್ನ ಯೋಚನೆ ಮತ್ತು ಯೋಜನೆಗಳನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ರಚಾರ ಮಾಡುವುದಕ್ಕೆ ಬೇಕಾದ ಅವಕಾಶವನ್ನು ಚುನಾವಣ ಆಯೋಗ ಕಲ್ಪಿಸಿಕೊಟ್ಟಿತು. ಹೀಗಾಗಿ ಪ್ರಧಾನಿ ಮೋದಿ ತಮ್ಮ ಉದ್ದೇಶಗಳನ್ನು ನಿಖರವಾಗಿ ಜನರಿಗೆ ತಲುಪಿಸಿದರು ಎಂದಿದ್ದಾರೆ. ಚುನಾವಣೆ ನಡೆಸುವ ಸಮಯದಲ್ಲಿ ಬಿಜೆಪಿಯ ಬಳಿ ಸಾಕಷ್ಟು ಹಣಕಾಸಿನ ಶಕ್ತಿ ಇತ್ತು. ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಅಮಾನತಿನಲ್ಲಿಟ್ಟು, ಹಣಕಾಸು ನೆರವು ದೊರೆಯದಂತೆ ಮಾಡಲಾಗಿತ್ತು. ಆದರೂ ಚುನಾವಣೆಯಲ್ಲಿ ನಾವು ಗಳಿಸಿದ ಸ್ಥಾನಗಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ರಾಹುಲ್‌ ಹೇಳಿದರು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲ ಎಂದು ದೂರಿದ…

Read More

ದಕ್ಷಿಣ ಭಾರತ ಖ್ಯಾತ ನಟ ಜಯಂ ರವಿ ಇತ್ತೀಚೆಗೆ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಬಗ್ಗೆ ಜಯಂ ರವಿ ಪತ್ನಿ ತಕರಾರು ಎತ್ತಿದ್ದಾರೆ. ನನ್ನ ಗಮನಕ್ಕೆ ತರದೆ ಪತಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿಗೆ ಕುಳಿತು ಮಾತನಾಡಲು ಪತಿಯಿಂದ ಅವರು ಸಮಯ ಕೇಳಿದ್ದಾರೆ. ‘ಕಳೆದ ಕೆಲವು ದಿನಗಳಿಂದ ನನ್ನ ಪತಿ ಜೊತೆ ಮಾತನಾಡಲು ಅವಕಾಶ ಕೇಳಿದೆ. ಇಬ್ಬರ ಮಧ್ಯೆ ಮಾತುಕತೆ ಆಗಬಹುದು ಎಂದು ಭಾವಿಸಿದ್ದೇನೆ. ಇದರಿಂದ ನಮ್ಮಿಬ್ಬರ ಮಧ್ಯೆ ಹಾಗೂ ನಮ್ಮ ಕುಟುಂಬದ ಮಧ್ಯೆ ಬೆಳೆದ ಸಂಬಂಧಕ್ಕೆ ಇದು ಗೌರವ ನೀಡುತ್ತದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ‘ನಾನು ಸಮಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಮ್ಮ ಪರಿಸ್ಥಿತಿ ಅರ್ಥವಾಗುತ್ತದೆ’ ಎಂದು ಅವರು ಬರೆದಿದ್ದಾರೆ. ಮಕ್ಕಳು ಮೊದಲ ಆದ್ಯತೆ ಎಂದು ಅವರು ಹೇಳಿಕೊಂಡಿದ್ದಾರೆ. ವಿಚ್ಛೇದನದಿಂದ ದೂರ ಹೋಗುವ ನಿರ್ಧಾರ ಜಯಂ ರವಿ ಹೇಳಿದ್ದಾರೆ. ಜಯಂ ರವಿ ಹಾಗೂ ಆರತಿ ಮದುವೆ ಆಗಿ 15…

Read More

ಬಾಲಿವುಡ್​ನ ಖ್ಯಾತ ನಟಿ, ಮಾಡೆಲ್ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ತಮ್ಮ ಮನೆಯ ಮೇಲ್ಛಾವಣಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.  75 ವರ್ಷದ ಅನಿಲ್ ಅರೋರಾ ಮುಂಬೈನ ಬಾಂದ್ರಾದಲ್ಲಿ ವಾಸವಿದ್ದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ಮಲೈಕಾ ಅರೋರಾ ಚಿತ್ರೀಕರಣಕ್ಕಾಗಿ ಪುನಾಕ್ಕೆ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಂಬೈಗೆ ರವಾನೆಯಾಗಿದ್ದಾರೆ. ಮಲೈಕಾ ಅರೋರಾರ ಸಹೋದರಿ ಅಮೃತ್ ಅರೋರಾ ಸಹ ತಂದೆಯ ಸಾವಿನ ವಿಷಯ ತಿಳಿದು ಮುಂಬೈಗೆ ವಾಪಸ್ಸಾಗಿದ್ದಾರೆ. ಮಲೈಕಾ ಅರೋರಾರ ತಂದೆ ಅನಿಲ್ ಅರೋರಾ ಭಾರತದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅನಿಲ್ ಅರೋರಾರ ಮೃತ ದೇಹವನ್ನು ಮುಂಬೈನ ಬಾಬಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಗಳಿಗೆ ನೀಡಲಾಗುವುದೆಂದು ತಿಳಿಸಲಾಗಿದೆ. ಅನಿಲ್ ಅವರದ್ದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದರೋ ಎಂಬ ಬಗ್ಗೆ ಅನುಮಾನವಿರುವುದಾಗಿ ಪೊಲೀಸರು…

Read More