ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೂರು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಗೆ ಶಿಫ್ಟ್ ಆದ 15 ದಿನಕ್ಕೆ ದರ್ಶನ್ ಸಂಪೂರ್ಣವಾಗಿ ಸೊರಗಿ ಹೋಗಿದ್ದಾರೆ. ಹೊರಗಿದ್ದ ವೇಳೆ ನಿತ್ಯ ಪಾರ್ಟಿ, ಪಬ್ಬು, ನಾನ್ ವೆಜ್ ಎಂದು ತಿಂದು ತೇಗುತ್ತಿದ್ದ ದರ್ಶನ್ ಗೆ ಜೈಲು ವಾಸ ನುಂಗಲಾರದ ಬಿಸಿ ತುಪ್ಪವಾಗಿದೆ. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ದರ್ಶನ್, ಬಳ್ಳಾರಿ ಜೈಲೂಟಕ್ಕೆ ಸಂಪೂರ್ಣ ಸೊರಗಿ ಹೋಗಿದ್ದಾರೆ. ಜೈಲು ಸೇರಿದ ಹದಿನೈದೇ ದಿನಕ್ಕೆ ದರ್ಶನ್ ಸಂಪೂರ್ಣವಾಗಿ ಸಣ್ಣಗಾಗಿದ್ದಾರೆ. ಕಟ್ಟು ಮಸ್ತಾದ ದೇಹ ಹೊಂದಿದ್ದ ದರ್ಶನ್ ಇದೀಗ ಸಣಕಲು ಕಡ್ಡಿಯಂತೆ ಕಾಣುತ್ತಿದ್ದಾರೆ. ಅಂದ ಹಾಗೆ ಸಾಕಷ್ಟು ಮಂದಿ ಸಣ್ಣಗಾಗಲು ಹರ ಸಾಹಸ ಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಔಷದಿಗಳ ಮೊರೆ ಹೋಗುತ್ತಾರೆ. ಆದರೆ ದಿಡೀರ್ ಸಣ್ಣಗಾಗುವುದು ತಪ್ಪು. ಇದರಿಂದ ದೇಹಕ್ಕೆ ಅಪಾಯ ಎಂದು ಸಾಕಷ್ಟು ಭಾರಿ ವೈದ್ಯರು ಹೇಳಿರುತ್ತಾರೆ. ದಿಡೀರ್ ಸಣ್ಣಗಾಗಲು ಹೋಗಿ ಸಾಕಷ್ಟು…
Author: Author AIN
ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸೊರಗಿ ಹೋಗಿದ್ದಾರೆ. ಅಲ್ಲಿನ ವಾತವಾರಣ, ಆಹಾರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಕಂಗಲಾಗಿದ್ದಾರೆ. ಈ ಮಧ್ಯೆ ದರ್ಶನ್ ರನ್ನು ಭೇಟಿಯಾಗಲು ಬಳ್ಳಾರಿ ಜೈಲಿಗೆ ಅವರ ಕುಟುಂಬಸ್ಥರು, ವಕೀಲರು ಆಗಮಿಸಿದ್ದರು. ಈ ವೇಳೆ ದಾಸ ಗಡ್ಡ ಬಿಟ್ಟು ಸೆಲ್‌ನಿಂದ ಹೊರಗೆ ಬಂದಿದ್ದು ಪತ್ನಿ ಹಾಗೂ ಸಹೋದರನನ್ನು ನೋಡಿ ದರ್ಶನ್ ಮುಖದಲ್ಲಿ ಮತ್ತೆ ಕಳೆ ಕಾಣಿಸಿಕೊಂಡಿದೆ. ಜೈಲಿನಲ್ಲಿರುವ ದರ್ಶನ್ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ತೆರಳಿದ್ದರು. ಈ ವೇಳೆ ಸಂದರ್ಶಕರ ಕೊಠಡಿಗೆ ತೆರಳಲು ದರ್ಶನ್ ಅವರನ್ನು ಸೆಲ್‌ನಿಂದ ಹೊರಗೆ ಕರೆ ತರಲಾಯಿತು. ಹೈಸೆಕ್ಯೂರಿಟಿ ಸೆಲ್‌ನಿಂದ ಹೊರ ಬಂದ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆ ತರಲಾಯಿತು. ಸುಮಾರು 24 ನಿಮಿಷಗಳ ಕಾಲ ವಿಜಯಲಕ್ಷ್ಮಿ, ದಿನಕರ್ ಹಾಗೂ ವಕೀಲರ ಜೊತೆಗೆ ದರ್ಶನ್ ಚರ್ಚೆ ಮಾಡಿ ವಾಪಸ್ ಸೆಲ್‌ಗೆ ತೆರಳಿದರು. ಕುಟುಂಬಸ್ಥರು ಹಾಗೂ ವಕೀಲರನ್ನು ಭೇಟಿಯಾಗಿ ಹೋಗುವಾಗ ದರ್ಶನ್ ಮುಖದಲ್ಲಿ ಕೊಂಚ ರಿಲ್ಯಾಕ್ಸ್ ಕಾಣಿಸಿಕೊಂಡಿತ್ತು. ದರ್ಶನ್…
ಕಳೆದ ಒಂದೆರಡು ದಿನಗಳಿಂದ ಕನ್ನಡ ಕಿರುತೆರೆ ನಟ ವರುಣ್ ಆರಾಧ್ಯ ಹಾಗೂ ಆತನ ಮಾಜಿ ಪ್ರೇಯಸಿ ಬ್ಯಾಕ್ ಟು ಬ್ಯಾಕ್ ಸುದ್ದಿಯಾಗ್ತಿದ್ದಾರೆ. ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಈಗ ವರುಣ್ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್ ಮಾಡಿ ಇದೆಲ್ಲಾ ಸುಳ್ಳು ಸುದ್ದಿ ಅಂತ ಡ್ರಾಮಾ ಮಾಡ್ತಾ ಇದ್ದಾರೆ. ಮಾಧ್ಯಮದಲ್ಲಿ ನೋಡುತ್ತಿರುವುದು ಸುಳ್ಳು ಮಾಹಿತಿ. ಫೇಕ್ ಸುದ್ದಿ ಹರಡುವುದನ್ನ ನಿಲ್ಲಿಸಿ ಅಂತ ವರುಣ್ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಮನವಿ ಮಾಡಿದ್ದಾರೆ. ಇನ್ನು, ಇದೇ ವಿಚಾರವಾಗಿ ವರುಣ್ ಆರಾಧ್ಯ ಯುಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ತುಂಬಾ ಜನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೈಲಲ್ಲಿ ಇದ್ದಾರೆ ಅಂತ ಯಾಕೆ ಹೇಳುತ್ತಿದ್ದೀರಾ? ನಾನು ಆರಾಮ ಆಗಿ ನಮ್ಮ ಮನೆಯಲ್ಲಿ ಇದ್ದೇನೆ. ಯಾಕೆ ತಪ್ಪು ತಪ್ಪಾಗಿ ಇನ್ಫಾಮೇಶನ್…
ರೀಲ್ಸ್ ಗಳ ಮೂಲಕ ಖ್ಯಾತಿ ಘಳಿಸಿ ಬಳಿಕ ಬೃಂಧಾವನ ಧಾರವಾಹಿ ಮೂಲಕ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದರು. ವರುಣ್ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು. ಆದರೆ ಇದೀಗ ವರುಣ್ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್ ಮಾಡಿ ಇದೇಲ್ಲಾ ಸುಳ್ಳು ಸುದ್ದಿ ಅಂತ ಹೇಳುತ್ತಿದ್ದಾರೆ. ಇದೀಗ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಪೊಲೀಸ್ ಅಧಿಕಾರಿಗೆ ದೂರು ಸಲ್ಲಿಸಿದ FIRನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ವರುಣ್ ಆರಾಧ್ಯ ತನ್ನನ್ನ ಪ್ರೀತಿಸಿ ವಂಚಿಸಿದ್ದಾನೆ. ನಾನು ವರುಣ್ ಫೋನ್ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ಫೋಟೋ ನೋಡಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್ ಬ್ರೇಕಪ್ ಆಗಿತ್ತು. ಲವ್ ಬ್ರೇಕಪ್ ಆಗುತ್ತಿದ್ದಂತೆ ವರುಣ್ ನನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ.…
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಬಿಡುಗಡೆ ಮಾಡಬೇಕು. ಜೊತೆಗೆ ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆಡಳಿತಾರೂಢ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಅವರ ವಿರುದ್ಧ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ವಿಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ಪ್ರಧಾನಿ ಷರೀಫ್ ಅವರು ರಾಜೀನಾಮೆ ನೀಡಬೇಕು ಎಂದು ಆರೋಪಿಸಿ ಪಿಟಿಐ ಕಾರ್ಯಕರ್ತರು ಕೆಲ ದಿನಗಳಿಂದ ಚಳವಳಿ ಆರಂಭಿಸಿದ್ದಾರೆ. ಮೂರು ದಿನಗಳ ಹಿಂದೆ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು, ನಾಯಕರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಬಂಧಿಸಲಾಗಿದೆ. ಇದರಿಂದ ಹೋರಾಟ ಮತ್ತಷ್ಟು ಕಾವು ಪಡೆದಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಕ್ಷವು ಆರೋಪಿಸಿದ್ದಾಗಿ ಅಲ್ಲಿನ ಮಾಧ್ಯಮಗಳು…
ಕಳೆದ ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ಯುವ ನಟ ಶವವಾಗಿ ಪತ್ತೆಯಾಗಿದ್ದಾರೆ. ಮೆಕ್ಸಿಕನ್ ನಟ ಜೇಮ್ಸ್ ಹಾಲ್‌ಕ್ರಾಫ್ಟ್ ಅವರು ಕೆಲ ದಿನಗಳ ಹಿಂದೆ ಮೆಕ್ಸಿಕೋ ಸಿಟಿಯಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಜೇಮ್ಸ್ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. ಮೂಲಗಳ ಪ್ರಕಾರ ಸೆ.3 ರಿಂದ ಜೇಮ್ಸ್ ಹಾಲ್‌ಕ್ರಾಫ್ಟ್ ನಾಪತ್ತೆಯಾಗಿದ್ದರು. ಅವರು ಯಾವುದೇ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಈ ಸಂಬಂಧ ನಟನ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಇದೀಗ ಅವರು ಶವವಾಗಿ ಪತ್ತೆಯಾಗಿದ್ದು, ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ದೊಡ್ಡ ಆಘಾತವನ್ನೀಡಿದೆ. ನಟನ ಸಾವಿನ ಹಿಂದಿನ ಕಾರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಸಾಮಾನ್ಯವಾಗಿ ದಂತ ವೈದ್ಯರ ಬಳಿಕ ಹಲ್ಲು ಕೀಳಿಸಲು ಹೋದಕ್ಕೆ ಒಂದೋ ಅಥವಾ ಎರಡು ಹಲ್ಲೋ ಕೀಳುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಒಂದೇ ದಿನ 23 ಹಲ್ಲುಗಳನ್ನು ಕಿತ್ತು 12 ಹೊಸ ಹಲ್ಲುಗಳನ್ನು ಫಿಕ್ಸ್ ಮಾಡಿದ್ದಾನೆ. ಇದರಿಂದ ನೋವು ತಾಳಲಾರದೆ ವ್ಯಕ್ತಿ ಮೃತಪಟ್ಟ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿ ನಡೆದಿದೆ. ಈ ಬಗ್ಗೆ ಯುವತಿ ಆನ್‌ಲೈನ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಯುವತಿಯ ತಂದೆ ಹುವಾಂಗ್ ಅವರು ಆಗಸ್ಟ್ 14 ರಂದು ಯೋಂಗ್‌ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ ಸುದೀರ್ಘ ದಂತ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ದಂತ ಶಸ್ತ್ರಚಿಕಿತ್ಸಕರು “ತಕ್ಷಣದ ಮರುಸ್ಥಾಪನೆ” ವಿಧಾನವನ್ನು ಅನುಸರಿಸಿದರು. ಈ ಕಾರ್ಯವಿಧಾನದ ಭಾಗವಾಗಿ 23 ಹಲ್ಲುಗಳನ್ನು ಹೊರತೆಗೆಯಲಾಯಿತು. ಇದಲ್ಲದೇ 12 ಹೊಸ ಹಲ್ಲುಗಳನ್ನು ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ಶಸ್ತ್ರಚಿಕಿತ್ಸಕ ಐದು ವರ್ಷಗಳ ಸೇವೆಯಲ್ಲಿ ಅನುಭವ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ರೂಟ್ ಕೆನಾಲ್ ಚಿಕಿತ್ಸೆ, ಹೊರತೆಗೆಯುವಿಕೆ ಮತ್ತು ಇತರ ಹಲ್ಲಿನ ಚಿಕಿತ್ಸೆಗಳಲ್ಲಿ ಹೆಚ್ಚು ನುರಿತ. ಆದರೆ ಚಿಕಿತ್ಸೆಯ ನಂತರ,…
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮೇ 15ರಂದು ಆಯೋಜಿಸಿದ್ದ ರೇವ್ ಪಾರ್ಟಿ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಇತ್ತೀಚೆಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ತೆಲುಗು ನಟಿ ಹೇಮಾ ಡ್ರಗ್ಸ್ ಸೇವನೆ ಮಾಡಿರುವುದು ಕನ್ಪಾರ್ಮ್ ಆಗಿದೆ. ಬೆಂಗಳೂರಿನಲ್ಲಿ ನಡೆದ ಈ ರೇವ್ ಪಾರ್ಟಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಾಸು ಎಂಬಾತ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದು,\ಈ ಪಾರ್ಟಿಗೆ ಅನೇಕ ಸೆಲೆಬ್ರಿಟಿಗಳಿಗೆ ಆತ ಆಹ್ವಾನ ನೀಡಿದ್ದ. ಈ ಈವೆಂಟ್ನಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿ ಆಗಿದ್ದರು. ಆದರೆ ವಿಚಾರಣೆ ವೇಳೆ ನಟಿ ತಾನು ರೇವ್ ಪಾರ್ಟಿಯಲ್ಲಿ ಇರಲೇ ಇಲ್ಲ ಎಂದು ಹೇಳಿದ್ದರು. ಅಲ್ಲದೆ ಘಟನೆ ನಡೆದ ಸಂದರ್ಭದಲ್ಲಿ ನಾನು ನನ್ನ ಮನೆಯಲ್ಲೇ ಇದ್ದೆ ಎಂದಿದ್ದರು. ಆದ್ರೆ ಬಳಿಕ ನಟಿ ತಾನು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪ್ರಕರಣದ ತನಿಖೆ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ರನ್ನು ನೋಡಲು ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರು ದೀನಾಕರ್ ತೂಗುದೀಪ್ ಆಗಮಿಸಿದ್ದರು. ಈ ಮಧ್ಯೆ ದರ್ಶನ್ ಗೆ ಅಮ್ಮನನ್ನು ನೋಡಲು ಮನ ಹಂಬಲಿಸಿದೆ. ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಇಂದಿಗೆ 15 ದಿನ. ಪೊಲೀಸರು ಪ್ರಕರಣ ಸಂಬಂಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೇ ವಿಚಾರವಾಗಿ ದರ್ಶನ್ ಜೊತೆ ಮಾತುಕತೆ ನಡೆಸಲು ಅವರ ಕುಟುಂಬ ಬಳ್ಳಾರಿ ಜೈಲಿಗೆ ಆಗಮಿಸಿತ್ತು. ಈ ವೇಳೆ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ವಕೀಲರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಬರೋಬ್ಬರಿ 24 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ. ಸಹೋದರನ ಬಳಿ ಅಮ್ಮನ ಬಗ್ಗೆ ದರ್ಶನ್ ಕೇಳಿದ್ದಾರೆ. ಅಮ್ಮ ಬರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನಿನ್ನೆಯೇ ತಾಯಿ ಮೀನಾ ತೂಗುದೀಪ ಜೈಲಿಗೆ ಬಂದು ಮಾತನಾಡಿಸಿಕೊಂಡು ಹೋಗಬೇಕಿತ್ತು. ಕಾರಣಾಂತರಗಳಿಂದ ನಿನ್ನೆಯ ಜೈಲು ಭೇಟಿ ಕ್ಯಾನ್ಸಲ್ ಆಗಿದೆ. ಇವತ್ತು…
ತಮಿಳು ನಟ ಜೀವ ಹಾಗೂ ಅವರ ಪತ್ನಿ ಸುಪ್ರಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಸೇಲಂನಿಂದ ಚೆನ್ನೈಗೆ ತೆರಳುವಾಗ ಕಲ್ಲಕುರಿಚಿಯಲ್ಲಿ ಈ ಅಪಘಾತ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ಹೀರೋ ಜೀವ ಸಿಟ್ಟಾದ ವಿಡಿಯೋ ಕೂಡ ಇದೆ. ಅಷ್ಟಕ್ಕೂ ಆ ಸ್ಥಳದಲ್ಲಿ ನಡೆದಿದ್ದು ಏನು ಗೊತ್ತಾ.. ಜೀವ ಅವರು ಕಾರು ಹೈವೇಲಿ ಸಾಗುತ್ತಿತ್ತು. ಈ ವೇಳೆ ಬೈಕ್ ಅಡ್ಡ ಬಂದಿದೆ. ನಂತರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಭಿಮಾನಿಯೋರ್ವ ಜೀವ ಅವರನ್ನು ಟಚ್ ಮಾಡಲು ಬಂದಿದ್ದಾರೆ. ಇದರಿಂದ ಜೀವ ಅವರು ಸಿಟ್ಟಾಗಿದ್ದಾರೆ. ‘ನನಗೆ ಅಪಘಾತ ಆಗಿದೆ. ನೀವೇನು ಮಾಡುತ್ತಿದ್ದೀರಾ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅದೃಷ್ಟವಶಾತ್ ಜೀವ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಂತರ ಅವರು ಬೇರೆ ಕಾರಿನಲ್ಲಿ ಚೆನ್ನೈ ತೆರಳಿದ್ದಾರೆ. ಅವರು ಆಸ್ಪತ್ರೆಗೆ ತೆರಳಿ…