Encounter specialist Daya Naik from Karnataka entered the Saif Ali Khan case investigation
Author: Author AIN
ಹುಬ್ಬಳ್ಳಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು, ಹೊಸ ಈರುಳ್ಳಿ ತಳಿಯಾದ ‘ಲೈನ್-883’ ಅನ್ನು ಅಭಿವೃದ್ಧಿಪಡಿಸಿದೆ. ಈ ತಳಿಯು ಅತಿ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರಲಿದ್ದು, ಹೆಚ್ಚು ಇಳುವರಿ ನೀಡಲಿದೆ. ‘ಕಪ್ಪು ಒಣಭೂಮಿಯಲ್ಲಿ ಈ ತಳಿಯ ಈರುಳ್ಳಿ ಬೆಳೆಯಬಹುದು. ಜೂನ್‌ನಿಂದ ಆಗಸ್ಟ್‌ವರೆಗೆ ಬಿತ್ತನೆ ಮಾಡಬಹುದು. 85 ರಿಂದ 90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಟಾವು ಆಗಿ ಮಾರುಕಟ್ಟೆಗೆ ಪೂರೈಸಬಹುದು’ ಎಂದು ಹುಬ್ಬಳ್ಳಿಯ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕೇಂದ್ರದ ತಾಂತ್ರಿಕ ಅಧಿಕಾರಿಗಳುತಿಳಿಸಿದ್ದಾರೆ. https://ainlivenews.com/dont-do-these-things-on-fridays-without-fail-lakshmi-muni-is-the-guarantee/ ಸಾಮಾನ್ಯ ತಳಿಗಳ ಈರುಳ್ಳಿ ಪ್ರತಿ ಹೆಕ್ಟೇರ್‌ಗೆ 200ರಿಂದ 250 ಕ್ವಿಂಟಲ್ ಇಳುವರಿ ನೀಡಿದರೆ, ಲೈನ್-883 ತಳಿಯು 300ರಿಂದ 325 ಕ್ವಿಂಟಲ್ ನೀಡುತ್ತದೆ. ಈ ತಳಿಯ ಈರುಳ್ಳಿ ಗೆಡ್ಡೆ ದೊಡ್ಡಾಗಿರುತ್ತವೆ. 5ರಿಂದ 5.5 ಸೆಂ.ಮೀ ಸುತ್ತಳತೆ ಹೊಂದಿರುತ್ತವೆ. ಆಕರ್ಷಕ ದಟ್ಟ ಕೆಂಪು ಬಣ್ಣ ಹೊಂದಿರುತ್ತವೆ. ಗೆಡ್ಡೆಯ ಒಳಪದರ ಬಿಗಿಯಾಗಿದ್ದು, ಗೆಡ್ಡೆ…
ನ್ಯೂಯಾರ್ಕ್ : ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್‍ನ(ಎಫ್‍ಬಿಐ) 10 ಮೋಸ್ಟ್ ವಾಂಟೆಡ್ ದೇಶಭ್ರಷ್ಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಭದ್ರೇಶ್ ಕುಮಾರ್ ಚೇತನ್ ಭಾಯ್ ಪಟೇಲ್ ಬಂಧನಕ್ಕಾಗಿ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2015ರಲ್ಲಿ ಅಮೆರಿಕದಲ್ಲಿ ತನ್ನ ಪತ್ನಿಯನ್ನು ಕೊಲೆಗೈದ ಬಳಿಕ 34 ವರ್ಷದ ಗುಜರಾತ್ ಮೂಲದ ಪಟೇಲ್ ನಾಪತ್ತೆಯಾಗಿದ್ದಾನೆ. ಶಸ್ತ್ರಾಸ್ತ್ರ ಹೊಂದಿರುವ ಈತ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದು ಈತನ ಬಗ್ಗೆ ಮಾಹಿತಿ ಒದಗಿಸುವಂತೆ ಎಫ್‍ಬಿಐ ಮನವಿ ಮಾಡಿದೆ. 2017 ರಿಂದ ಯುಎಸ್‌ನಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳಲ್ಲಿ ಅವರ ಪತ್ನಿ ಪಾಲಕ್ ಪಟೇಲ್ ಅವರನ್ನು ಹತ್ಯೆಗೈದ ಆರೋಪ ಭದ್ರೇಶ್ ಕುಮಾರ್ ಮೇಲೆ ಕೇಳಿ ಬಂದಿದೆ. ಭದ್ರೇಶ್ ಮತ್ತು ಪಾಲಕ್ ಅವರು 2014 ರಲ್ಲಿ ವಿಸಿಟಿಂಗ್ ವೀಸಾದ ಮೇಲೆ ಯುಎಸ್‌ಗೆ ಹೋಗಿದ್ದರು ಮತ್ತು ಅವರ ಸಂಬಂಧಿ ಮಾಲೀಕತ್ವದ ಮೇರಿಲ್ಯಾಂಡ್‌ನ ಹ್ಯಾನೋವರ್‌ನಲ್ಲಿರುವ ಡಂಕಿನ್ ಡೋನಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಿಸಿಟಿಂಗ್ ವೀಸಾ ಅವಧಿ ಮುಗಿದ ನಂತರವೂ ದಂಪತಿಗಳು ಅಮೆರಿಕದಲ್ಲಿ…
ಗಾಝಾ: ಕಳೆದ 24 ಗಂಟೆಗಳಲ್ಲಿ ಗಾಝಾದಾದ್ಯಂತ ಇಸ್ರೇಲ್ ನ ದಾಳಿಯಲ್ಲಿ ಕನಿಷ್ಠ 81 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 188 ಮಂದಿ ಗಾಯಗೊಂಡಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಗಾಝಾ ಮತ್ತು ಇಸ್ರೇಲ್ ನಲ್ಲಿ ಜನರು ಕದನ ವಿರಾಮ ಒಪ್ಪಂದದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಇಸ್ರೇಲ್ ನ ಮಿಲಿಟರಿ ಗಾಝಾದಲ್ಲಿ ಬುಧವಾರ ರಾತ್ರಿಯಿಂದ ವ್ಯಾಪಕ ವೈಮಾನಿಕ ದಾಳಿ ನಡೆಸಿರುವುದಾಗಿ ನಾಗರಿಕ ತುರ್ತು ಸೇವಾ ಇಲಾಖೆ ತಿಳಿಸಿದೆ. ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಮಧ್ಯವರ್ತಿಗಳು ಘೋಷಿಸಿದ್ದಾರೆ. ಆ ಮೂಲಕ ಗಾಝಾ ಪಟ್ಟಿಯಲ್ಲಿ 15 ತಿಂಗಳಿನಿಂದ ನಡೆಯುತ್ತಿರುವ ವಿನಾಶಕಾರಿ ಯುದ್ಧಕ್ಕೆ ವಿರಾಮ ಸಿಗಲಿದೆ ಎಂದು ಜನರು ಖುಷಿಯಲ್ಲಿದ್ದರು. ಈ ಖುಷಿಯ ಬೆನ್ನಲ್ಲೇ ಇದೀಗ ಮತತೆ ವೈಮಾನಿಕ ದಾಳಿ ನಡೆಸಲಾಗಿದ್ದು ಸ್ಥಳೀಯರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆ ವೈಯಕ್ತಿಕವಾದದ್ದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಎಂದರು. ಸಚಿವ ಆರ್.ಬಿ.ತಿಮ್ಮಾಪುರ ಅವರ ದಲಿತ ಸಿ.ಎಂ ಹೇಳಿಕೆ ಕುರಿತು, ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ಪಕ್ಷ ದಲಿತರು, ಶೋಷಿತರ ಪರವಾಗಿದೆ ಎಂದರು. ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಯಿಸಿ, ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಇರುವ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬುದನ್ನು ಅವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದರು. https://ainlivenews.com/dont-do-these-things-on-fridays-without-fail-lakshmi-muni-is-the-guarantee/ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಹೋದರೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜತೆಗೆ ಹೋಗುವುದಿಲ್ಲ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸುವುದಿಲ್ಲ ಎಂದು ಹೇಳಿದರು. 21ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದ್ದು, ಅದರ ಪೂರ್ವಭಾವಿ ಸಭೆ ಹುಬ್ಬಳ್ಳಿಯಲ್ಲಿ ಶೀಘ್ರ ನಡೆಯಲಿದೆ ಎಂದು ಹೇಳಿದರು.
ಮಂಡ್ಯ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಆರ್ ಎಪಿಸಿಎಂಎಸ್ ನಿರ್ದೇಶಕ ಬೇಲೂರು ಸೋಮಶೇಖರ್ ಅವರು ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬೇಲೂರು ಸೋಮಶೇಖರ್ ಅವರು ಮಾಜಿ ಸಂಸದ ಸುಮಲತಾ ಅಂಬರೀಷ್ ಅವರ ಆಪ್ತರಾಗಿದ್ದು, ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾಗಿದ್ದಾರೆ. https://ainlivenews.com/dont-do-these-things-on-fridays-without-fail-lakshmi-muni-is-the-guarantee/ ಕಾಂಗ್ರೆಸ್ ಸೇರ್ಪಡೆಗೊಂಡ ಬೇಲೂರು ಸೋಮಶೇಖರ್ ಅವರನ್ನು ಮನ್ ಮುಲ್ ನಿರ್ದೇಶಕ ಯು.ಸಿ.ಶಿವಪ್ಪ, ಪಿಎಲ್ಲಿ ಬ್ಯಾಂಕ್ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭಾ ಮಾಜಿ ಸದಸ್ಯ ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಸಿ.ಕೆ.ನಾಗರಾಜ್, ಬಿಳಿದೇಗಲು ಬೋರೇಗೌಡ, ಮಹಾದೇವ ಇದ್ದರು.
ಟೊರಂಟೊ: ಮುಂಬರುವ ಫೆಡರಲ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ರೂಡೋ, `ನನ್ನ ಸ್ವಂತ ನಿರ್ಧಾರಗಳ ಪ್ರಕಾರ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. `ರಾಜಕೀಯ ಜೀವನದ ಬಳಿಕದ ಬದುಕಿನ ಬಗ್ಗೆ ನಾನಿನ್ನೂ ಯೋಚಿಸಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಆ ಬಗ್ಗೆ ಯೋಚಿಸಲು ನನಗೆ ಹೆಚ್ಚಿನ ಸಮಯವಿಲ್ಲ. ಕೆನಡಿಯನ್ನರು ನನ್ನನ್ನು ಆಯ್ಕೆ ಮಾಡಿದ ಉದ್ದೇಶವನ್ನು ಇದೀಗ ಸಂಪೂರ್ಣವಾಗಿ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸಿದ್ದೇನೆ ಎಂದು ಟ್ರೂಡೊ ಹೇಳಿದ್ದಾರೆ. ಈ ವರ್ಷದ ಅಕ್ಟೋಬರ್ ಗೆ ನಿಗದಿಯಾಗಿರುವ ಫೆಡರಲ್ ಚುನಾವಣೆ ಅದಕ್ಕೂ ಮುನ್ನವೇ ನಡೆಯುವ ಸಾಧ್ಯತೆಯಿದೆ. ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಜತೆ ವ್ಯವಹರಿಸಲು ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ತನ್ನ ಮತ್ತು ಕೆನಡಾದ ಪ್ರಾಂತಗಳ ಪ್ರೀಮಿಯರ್ ಗಳ ನಡುವೆ ನಡೆದ ಸಭೆಯ ಬಳಿಕ ಟ್ರೂಡೊ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಏಳು ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಜಾಮೀನು ಸಿಕ್ಕ ಬಳಿಕ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಕುಟುಂಬ ಸದಸ್ಯರ ಜೊತೆ ಆಚರಿಸಿದ್ದ ದರ್ಶನ್ ಇದೀಗ ಕುಟುಂಬಸ್ಥರ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದಿಂದ ಆಚರಿಸಿದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತರ ಜೊತೆ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ ನೀಡಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದೇವಸ್ಥಾನದಲ್ಲಿ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಇದೇ ಮೊದಲ ಬಾರಿ ದರ್ಶನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಪ್ರತಿವರ್ಷದಂತೆ ದರ್ಶನ್ ಎಂದಿನಂತೆ ಈ ವರ್ಷವೂ ಕೂಡ ಜ.14ರಂದು ಸಂಕ್ರಾಂತಿ ಹಬ್ಬ ಸೆಲೆಬ್ರೇಟ್ ಮಾಡಿ ಸಂಭ್ರಮಿಸಿದ್ದಾರೆ. ಫಾರಂ ಹೌಸ್‌ನಲ್ಲಿ ಸಹೋದರ ದಿನಕರ್, ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೊತೆ ಹಬ್ಬ ಆಚರಿಸಿದ್ದು…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ ಈ ಯೋಜನೆಯಿಂದ ಬಹುತೇಕರು ಪ್ರಯೋಜನ ಪಡೆದಿದ್ದಾರೆ. ರಾಜ್ಯದೆಲ್ಲೆಡೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಜನರಿಗೆ ಸಿಕ್ಕಿಲ್ಲ. ಹೌದು, ಕಳೆದ ಎರಡು ತಿಂಗಳಿಂದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಬಿದ್ದಿಲ್ಲ. ಹಲವರು ಈ ಬಗ್ಗೆ ಗೊಂದಲಕ್ಕೂ ಒಳಗಾಗಿದ್ದಾರೆ. ಆದರೆ ಇದೀಗ ಗೃಹಲಕ್ಷ್ಮಿ 16ನೇ ಕಂತಿನ ಹಣದ ಬಗ್ಗೆ ಸ್ಪಷ್ಟ ಮಾಹಿತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ. https://ainlivenews.com/eating-pumpkin-seeds-will-not-cause-these-health-problems/ 16 ನೇ ಕಂತಿನ ಹಣ ಇದೇ ತಿಂಗಳು ಅಂದರೆ ಜನವರಿ 14ನೇ ತಾರೀಖಿನಿಂದ ಗೃಹಲಕ್ಷ್ಮಿ 16ನೇ ಕಂತಿನ 2000 ಹಣವನ್ನು ಜಮಾ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿಸಿದ್ದಾರೆ ಮತ್ತು ಜನವರಿ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ 16ನೇ ಕಂತಿನ ಹಣವನ್ನು ಜಮಾ ಮಾಡುತ್ತಿವೆ…
ನಾವು ಚಳಿಗಾಲದ ತಿಂಗಳುಗಳಿಗೆ ಕಾಲಿಡುತ್ತಿದ್ದಂತೆ, ನಮ್ಮ ಪಾದಗಳು ದಪ್ಪ ಸಾಕ್ಸ್ ಮತ್ತು ಬೂಟುಗಳೊಳಗೆ ಕಣ್ಮರೆಯಾದಾಗ ನಾವು ಅವುಗಳ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ನಾವು ಅರಿತುಕೊಳ್ಳದ ಸಂಗತಿಯೆಂದರೆ, ಶೀತವು ನಮ್ಮ ಪಾದಗಳನ್ನು ಒಣಗಿಸುತ್ತದೆ,ಪಾದಗಳ ಬಗ್ಗೆ ಸರಿಯಾದ ಕೇರ್ ತೆಗೆದುಕೊಳ್ಳದೇ ಇದ್ದರೆ ಪಾದ ಅಥವಾ ಹಿಮ್ಮಡಿ ಬಿರುಕು ಬಿಟ್ಟು ರಕ್ತಸ್ರಾವವಾಗುತ್ತದೆ. ಅದಲ್ಲದೆ ಚಳಿಗಾಲದ ಹಾಗೆ ಬೇಸಿಗೆಯಲ್ಲಿ ಕೂಡ ಹಿಮ್ಮಡಿಗಳು ಒಡೆಯುತ್ತವೆ. ಒಡೆದ ಹಿಮ್ಮಡಿಯಿಂದ ಅನೇಕ ಬಾರಿ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಕೆಲವರಿಗಂತೂ ಹಿಮ್ಮಡಿ ಒಡೆದು ರಕ್ತ ಕೂಡ ಬರುತ್ತದೆ. ಹಿಮ್ಮಡಿಗಳು ಹೀಗೆ ಬಿರುಕು ಬಿಟ್ಟಾಗ ನಡೆದಾಡಲು ಕೂಡ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಹಿಮ್ಮಡಿ ಏಕೆ ಒಡೆಯುತ್ತದೆ ಹಾಗೆ ಒಡೆಯುವುದನ್ನು ತಪ್ಪಿಸಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ಬೇಸಿಗೆಯಲ್ಲಿ ಹಿಮ್ಮಡಿ ಒಡೆಯಲು ಇದು ಕಾರಣ : • ಬೇಸಿಗೆಯಲ್ಲಿ ವಿಟಮಿನ್ ಕೊರತೆಯಿಂದ ಹಿಮ್ಮಡಿಗಳು ಒಡೆಯುತ್ತದೆ. ಶರೀರದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ3 ಮತ್ತು ವಿಟಮಿನ್ ಇ ಗಳ ಕೊರತೆಯಿಂದ ಚರ್ಮ ಶುಷ್ಕವಾಗುತ್ತದೆ. ಚರ್ಮ ಹೆಚ್ಚು ಒಣಗುವುದರಿಂದ…