Author: Author AIN

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ ದನಟ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗಿತ್ತು. ಇದು ಸಾಕಷ್ಟು ಟೀಕೆಗೆ ಒಳಗಾದ ಬಳಿಕ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಕಳುಹಿಸಿ 15 ದಿನ ಕಳೆದಿದ್ದು ಅಲ್ಲಿನ ವಾತಾವರಣೆಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಪರದಾಡುತ್ತಿದ್ದಾರೆ. ಈ ಮಧ್ಯೆ ಇಡೀ ರಾಜ್ಯದ ಕಾರಾಗೃಹಗಳಿಗೆ ಮಹತ್ವದ ಆದೇಶ ಹೊರಡಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪಿಗೆ ಜೈಲಿನಲ್ಲಿ ಸಿಕ್ಕ ರಾಜಮರ್ಯಾದೆ, ರೌಡಿಶೀಟರ್‌ಗಳ ರಾಜಾತಿಥ್ಯ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾದ ಬಳಿಕ ರಾಜ್ಯ ಸರ್ಕಾರ ಜೈಲಿನ ರಾಜಾತಿಥ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಜೈಲಿನಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ಬಳಿಕ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಪ್ರಮುಖವಾಗಿ ಜೈಲರ್, ಮುಖ್ಯ ವೀಕ್ಷಕರ ವರ್ಗಾವಣೆ ಮಾಡಿ ಮಹತ್ವದ ಆದೇಶ ನೀಡಲಾಗಿದೆ. ಇದರ ಜೊತೆಗೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನ ತಡೆಯಲು 43 ಮುಖ್ಯ…

Read More

ತಮಿಳು ನಟ ದಳಪತಿ ವಿಜಯ್ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳಿ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಗ್ರೀನ್ ಸಿಗ್ನಲ್ ನೀಡಿರುವ ಕೊನೆಯ ಸಿನಿಮಾ ‘Thalapathy 69’ ಚಿತ್ರಕ್ಕೆ ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ವೆಂಕಟ್ ಅವರು ಬಂಡವಾಳ ಹೂಡತ್ತಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ಮೂಲಕ  ‘Thalapathy 69’ ಚಿತ್ರ ಸಿದ್ಧವಾಗಲಿದೆ. ಈ ಚಿತ್ರದ ಬಗ್ಗೆ ಇಂದು ಸಂಜೆ 5 ಗಂಟೆಗೆ ಅಪ್​ಡೇಟ್ ಕೊಡೋದಾಗಿ ಕೆವಿಎನ್ ಸಂಸ್ಥೆ ತಿಳಿಸಿದೆ. ದಳಪತಿ ವಿಜಯ್ ನಟನೆಯ ಈ ಹಿಂದಿನ ಸಿನಿಮಾಗಳ ದೃಶ್ಯವನ್ನು ಕಟ್ ಮಾಡಿ ಸೇರಿಸಿ ಟೀಸರ್ ಮಾಡಲಾಗಿದೆ. ‘ನಮ್ಮ ಮೊದಲ ತಮಿಳು ಸಿನಿಮಾ’ ಎಂದು ಕೆವಿಎನ್​ ಹೇಳಿದೆ. ಸಂಜೆ ವೇಳೆಗೆ ಸಿನಿಮಾದ ಟೈಟಲ್, ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಸಿಗಲಿದೆ.…

Read More

ರಷ್ಯಾ-ಉಕ್ರೇನ್‌ ಸಂಘರ್ಷಕ್ಕೆ ಪರಿಹಾರದ ಭಾಗವಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌(ಬ್ರೆಜಿಲ್‌, ರಷ್ಯಾ, ಭಾರತ, ಚೀನ, ದಕ್ಷಿಣ ಆಫ್ರಿಕಾ)ನ ರಾಷ್ಟ್ರೀ ಯ ಭದ್ರತಾ ಸಲಹೆಗಾರರ ಸಮಾವೇಶದ ವೇಳೆ ಈ ಮಾತುಕತೆ ನಡೆಸಲಾಗಿದೆ.ಈ ವೇಳೆ, ದೋವಲ್‌ ಜತೆಗಿನ ಮಾತುಕತೆಯಲ್ಲಿ ರಷ್ಯಾದ ಕಝನ್‌ನಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗಕ್ಕೆ ಪ್ರಧಾನಿ ಮೋದಿ ಅವರನ್ನು ಪುಟಿನ್ ಆಹ್ವಾನಿಸಿದ್ದು ಮೋದಿ ಭೇಟಿಗೆ ಕಾಯುತ್ತಿದ್ದೇನೆ ಎಂದು ಪುಟಿನ್ ತಿಳಿಸಿದ್ದಾರೆ. ಇದಕ್ಕೂ ಮೊದಲು ದೋವಲ್‌, ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸೆರ್ಗೆಯ್‌ ಶೋಯಿಗು ಜತೆಗೂ ಮಾತುಕತೆ ನಡೆಸಿದರು. ಈ ವೇಳೆ, ಪ್ರಧಾನಿ ಮೋದಿ ಇತ್ತೀಚೆಗೆ ಉಕ್ರೇನ್‌ ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದರ ಮಾಹಿತಿಯನ್ನು ಹಂಚಿಕೊಂಡಿ ದ್ದಾರೆ. ಈ ಮಧ್ಯೆ, ಉಕ್ರೇನ್‌-ರಷ್ಯಾ ಸಂಘರ್ಷ ನಿವಾರಣೆಯಲ್ಲಿ ಭಾರತ, ಚೀನ ಮಹತ್ವದ ಪಾತ್ರವನ್ನು ನಿರ್ವಹಣೆ ಮಾಡಬಹುದು ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ…

Read More

ಇತ್ತೀಚೆಗೆ ಮೋದಿ ಹಾಗೂ ಪುಟಿನ್ ಭೇಟಿಯಾಗಿದ್ದು ಆ ಬಳಿಕ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 45 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ 50 ಮಂದಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚೆ ನಡೆಸಿದ್ದು ಆ  ಬಳಿಕ 35 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಷ್ಯಾದ ಸೇನೆಯಲ್ಲಿ ಭಾರತೀಯರ ನೇಮಕಾತಿ ವಿಚಾರವು ಭಾರತ ಹಾಗೂ ರಷ್ಯಾದ ಬಾಂಧವ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ರಷ್ಯಾ-ಉಕ್ರೇನ್ ಸಂಘರ್ಷದ ಬೆನ್ನಲ್ಲೇ ಈ ವಿಷಯ ಹೆಚ್ಚು ವಿವಾದಕ್ಕೀಡಾಗಿತ್ತು. ಜುಲೈ ತಿಂಗಳಲ್ಲಿ ರಷ್ಯಾದ ಪ್ರವಾಸ ಕೈಗೊಂಡಿದ್ದ ಮೋದಿ, ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರನ್ನು ತ್ವರಿತವಾಗಿ ಬಿಡುಗಡೆ ಮಾಡಲು ಕ್ರಮ ಕೈಕೊಳ್ಳುವಂತೆ ಪುಟಿನ್ ಅವರನ್ನು ಒತ್ತಾಯಿಸಿದ್ದರು. ‘ರಷ್ಯಾ ಪ್ರವಾಸದ ವೇಳೆ ಪುಟಿನ್ ಜೊತೆ ಈ ವಿಷಯವನ್ನು…

Read More

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ ಅನೇಕ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ನಮೃತಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು ಅಭಿಮಾನಿಗಳ ಬಳಗವು ದುಪ್ಪಟಾಗಿದೆ. ಬಿಗ್ ಬಾಸ್​​ ಮನೆಯಿಂದ ಹೊರಬಂದ ಬಳಿಕ ನಟಿ ನಮ್ರತಾಗೆ ಡಿಮ್ಯಾಂಡ್ ಹೆಚ್ಚಿದೆ. ಹಲವು ಜಾಹೀರಾತುಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಟಿ ಆಗಾಗ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಅಂತೆಯೇ ಈ ಬಾರಿ ಸಂಪೂರ್ಣವಾಗಿ ಬಿಳಿ ಬಣ್ಣದ ಸೀರೆಯಲ್ಲಿ ನಟಿ ನಮೃತಾ ಫೋಟೋ ಶೂಟ್ ಮಾಡಿಸಿದ್ದಾರೆ. ನಮ್ರತಾ ಗೌಡ ಗ್ಲಾಮರಸ್ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಬಿಳಿ ಸೀರೆ ಉಟ್ಟು, ತಲೆಗೆ ಕೆಂಗುಲಾಬಿ ಮುಡಿದು ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನಟಿಯ ಸೌಂದರ್ಯವನ್ನು ಅಭಿಮಾನಿಗಳು ಹೊಗಳಿದ್ದಾರೆ. ನಮ್ರತಾ ಗೌಡ ‘ಬಿಗ್ ಬಾಸ್​’ನಿಂದ ಸಾಕಷ್ಟು ಫೇಮ್ ಪಡೆದರು. ಆದರೆ, ಅವರು ಯಾವುದೇ ಸಿನಿಮಾ ಆಫರ್ ಒಪ್ಪಿಕೊಂಡಿಲ್ಲ. ಅವರ ಕಡೆಯಿಂದ ಯಾವುದೇ ಹೊಸ ಪ್ರಾಜೆಕ್ಟ್…

Read More

ಭಾರತದ ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಅದಾನಿ ಗ್ರೂಪ್​ಗೆ ಸೇರಿದ 6 ಸ್ವಿಸ್ ಬ್ಯಾಂಕ್​ ಅಕೌಂಟ್​ಗಳನ್ನು ಸೀಜ್ ಮಾಡಲಾಗಿದೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದ್ದು ಈ ಆರೋಪಕ್ಕೆ ಪ್ರತಿಕ್ರಿಯಿಸಿರೋ ಅದಾನಿ ಗ್ರೂಪ್ ಇದೆಲ್ಲ ಸುಳ್ಳು ಎಂದಿದೆ. ಅದಾನಿ ಗ್ರೂಪ್​ಗೆ ಸಂಬಂಧಿಸಿದ ಸ್ವಿಸ್ ಬ್ಯಾಂಕ್​ನಲ್ಲಿನ 6 ಅಕೌಂಟ್​ಗಳಲ್ಲಿ 310 ಮಿಲಿಯನ್ ಡಾಲರ್ ಅಂದರೆ 26,017,353,260 ರೂಪಾಯಿ ಹಣವನ್ನು ಸೀಜ್ ಮಾಡಲಾಗಿದೆ ಎಂದು ಮಾಹಿತಿ ಇದೆ. 2021ರ ಮನಿ ಲಾಂಡರಿಂಗ್ ಹಾಗೂ ಸೆಕ್ಯುರಿಟೀಸ್ ಫೋರ್ಜರಿ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಅಕೌಂಟ್​ಗಳನ್ನು ಸ್ವಿಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಇದರಿಂದ ಅದಾನಿ ಗ್ರೂಪ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದಾನಿ ಅವರ ಕೇಸ್​ ಅನ್ನು ಜಿನೀವಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇದರ ಆಧಾರದ ಮೇಲೆ ಹಾಗೂ ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳನ್ನ ಉಲ್ಲೇಖಿಸಿ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪಿಸಿದೆ. ಇನ್ನು…

Read More

ಕೆಲ ಸಮಯದ ಹಿಂದೆ ಶಾಂತವಾಗಿದ್ದ ವಿಯೆಟ್ನಾ ಹಠಾತ್ ಪ್ರವಾಹಕ್ಕೆ ನಲುಗಿ ಹೋಗಿದೆ. ಮಳೆ ಗಾಳಿ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ಥವಾಗಿದ್ದು 226ಜನ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ 134ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗಂಟೆಗೆ 149 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು 1,40,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಚಂಡಮಾರುತ ಉತ್ತರ ವಿಯೆಟ್ನಾಂವನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಇದು ಈ ವರ್ಷ ಏಷ್ಯಾದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಹೇಳಲಾಗುತ್ತಿದೆ. ಉತ್ತರ ವಿಯೆಟ್ನಾಂ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿದ್ದು ಜನ ಮನೆ, ಮಠ, ಪ್ರಾಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ನಿಂತಲ್ಲೆ ನೆಲ ಕುಸಿಯುತ್ತಿದ್ದು ಸೇನಾ ಸಿಬ್ಬಂದಿ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದು ರಕ್ಷಣೆಗೆ ಹರಸಾಹಸ ಪಡುತ್ತಿದೆ. ವಿಯೇಟ್ನಾಂ ರಾಜಧಾನಿ ಹನೋಯಿ ನಗರದಲ್ಲಿ ಎಲ್ಲಿ ನೋಡಿದರು ಮಳೆ ನೀರು. ಅಬ್ಬರಿಸಿದ ಮಳೆಯಿಂದಾಗಿ ಅಕ್ಷರಶಃ ನರಕ ಸದೃಶ್ಯವೇ ಸೃಷ್ಟಿಸ್ತಿದೆ. ಬೀದಿಗಳು ನದಿಗಳಾಗಿ ರೂಪಾಂತರಗೊಂಡಿವೆ. ಅದೇ ರಸ್ತೆ ಮೇಲೆ ದೋಣಿಗಳ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣ…

Read More

ಸಾಮಾನ್ಯವಾಗಿ ಹೆಚ್ಚಿನ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆ ಸಂಪೂರ್ಣವಾಗೋದೆ ಇಲ್ಲ ಅನ್ನೋ ಅಷ್ಟರ ಮಟ್ಟಿಗೆ ಬೆಳ್ಳುಳ್ಳಿ ಅಡುಗೆ ಮನೆಯನ್ನ ಆಕ್ರಮಿಸಿಕೊಂಡಿದೆ. ಆದರೆ ಅದೇ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ. ಅಂದ ಹಾಗೆ ಈ ಬೆಳ್ಳುಳ್ಳೀ ಭಾರತಕ್ಕೆ ಬರ್ತಿರೋದು ಚೀನಾದಿಂದ. ಬೆಳ್ಳುಳ್ಳಿಯನ್ನು ಮಾಂತ್ರಿಕ ಮಸಾಲೆ ಎಂದು ಅಂತಲೇ ಕರೆಯುತ್ತಾರೆ. ಆಹಾರದ ಪರಿಮಳ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ಸಾಕಷ್ಟು ವೈದ್ಯರು ದೃಡಪಡಿಸಿದ್ದಾರೆ. ಆದರೆ ಚೀನಾ ಬೆಳ್ಳುಳ್ಳಿ ಆರೋಗ್ಯಕ್ಕೆ ಮಾರಕವಾಗಿದೆ. ಚೀನಾವು ವಿಶ್ವದ ಅತಿದೊಡ್ಡ ಬೆಳ್ಳುಳ್ಳಿ ಉತ್ಪಾದಕಯನ್ನು ಹೊಂದಿದೆ. ಜಾಗತಿಕ ಪೂರೈಕೆಯ 80% ಅನ್ನು ಉತ್ಪಾದಿಸುತ್ತದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್‌ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್‌ನಲ್ಲಿ ಉತ್ಪಾದಿಸಲಾಗುತ್ತದೆ. ನಿರ್ದಿಷ್ಟವಾಗಿ, ಜಿಂಕ್ಯಾಂಗ್ ಅನ್ನು “ವಿಶ್ವದ ಬೆಳ್ಳುಳ್ಳಿ ರಾಜಧಾನಿ” ಎಂದು ಕರೆಯಲಾಗುತ್ತದೆ. 2014ರಿಂದಲೇ ಭಾರತದಲ್ಲಿ ಚೀನಾ ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ. ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ. ಚೈನೀಸ್ ಬೆಳ್ಳುಳ್ಳಿ ತಿಳಿ ಬಿಳಿ…

Read More

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಧನದ ದರದಿಂದ ವಾಹನ ಮಾಲಿಕರು ಕಂಗಾಲಾಗಿದ್ದಾರೆ. ಇದರಿಂದ ವಾಹಗಳನ್ನು ಹೊರ ತೆಗೆಯುವುದೇ ಬೇಡ ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಆದ್ರೆ ಇದೀಗ ಕಂಗಲಾಗಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆಯಂತೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯನ್ನು ಅವಲಂಬಿಸಿದೆ. ಆದರೆ ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕೆಲವು ವಾರಗಳ ಹಿಂದೆ, ಒಂದು ಬ್ಯಾರಲ್ ತೈಲದ ಬೆಲೆ 80 ಡಾಲರ್‌ಗಿಂತ ಹೆಚ್ಚಿತ್ತು, ಪ್ರಸ್ತುತ ಕಚ್ಚಾ ತೈಲದ ಬೆಲೆ 70-72 ಡಾಲರ್‌ಗಳಿಗೆ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಇನ್ನೂ ಕೆಲ ದಿನ ಮುಂದುವರಿದರೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಇಲಾಖೆಯ ಕಾರ್ಯದರ್ಶಿ ಪಂಕಜ್ ಜೈನ್ ತಿಳಿಸಿದ್ದಾರೆ. ಇದರೊಂದಿಗೆ ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ಕೇಂದ್ರ ಚಿಂತನೆ…

Read More

ಬಾಲಿವುಡ್ ನಟಿ ಕಂ ಮಾಡೆಲ್ ಮಲೈಕಾ ಅರೋರಾ ಕುಟುಂಬದ ದುಃಖದಲ್ಲಿದೆ. ಮಲೈಕಾ ತಂದೆ ಅನಿಲ್ ಮೆಹ್ತಾ ಎರಡು ದಿನಗಳ ಹಿಂದೆ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಸೆಪ್ಟೆಂಬರ್ 11ರಂದು ಅವರು ತಮ್ಮ ಮನೆಯ ಆಯೇಷಾ ಮ್ಯಾನರ್‌ನ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಿಲ್  ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಅಥವಾ ಕೊಲೆಯೋ ಎಂದು ಪೊಲೀಸರು ವಿಚಾರಣೆ ನಡೆಸಿದ್ದರು. ಪ್ರಾಥಮಿಕ ತನಿಖೆಯ ನಂತರ ಇದನ್ನು ಆತ್ಮಹತ್ಯೆ ಎಂದು ಹೇಳಲಾಗಿದೆ. ಸಾಂತಾಕ್ರೂಜ್‌ನಲ್ಲಿರುವ ಹಿಂದೂ ಸ್ಮಶಾನದಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ಅನಿಲ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಮಲೈಕಾ ಅರೋರಾ ಅವರ ತಂದೆ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 62 ವರ್ಷದ ಅನಿಲ್ ಮೆಹ್ತಾ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ ಕಾರಣ ಏನು? ಎಂಬ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟಿಕೊಂಡಿದೆ.  ಅಂದ ಹಾಗೆ ಅನಿಲ್ ಸಾವಿಗೆ ಅವರ ಅನಾರೋಗ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಭಾರವಾದ ಹೃದಯದಿಂದ ತನ್ನ ತಂದೆಯ ಹೆಸರಿನಲ್ಲಿ…

Read More