ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ರಾಜಾತಿಥ್ಯದಿಂದ ಬಳ್ಳಾರಿ ಜೈಲು ಸೇರಿದ್ದಾರೆ. ಬಳ್ಳಾರಿ ಜೈಲಿನಲ್ಲಿ ನಿತ್ಯ ನರಕ ಅನುಭವಿಸ್ತಿದ್ದರು ದರ್ಶನ್ ಕೊಬ್ಬು ಮಾತ್ರ ಕೊಂಚವು ಕಮ್ಮಿಯಾಗಿಲ್ಲ. ಜೈಲು ಸಿಬ್ಬಂದಿ ಜೊತೆ ಟಿವಿ ಗಾಗಿ ಗಲಾಟೆ, ಮಾಧ್ಯಮಗಳನ್ನು ನೋಡಿ ಅಸಭ್ಯವಾಗಿ ಕೈ ಸನ್ನೆ ಮಾಡಿದ್ದ ದರ್ಶನ್ ಗೆ ಇದೀಗ ಜೈಲರ್ ವಾರ್ನಿಂಗ್ ಮಾಡಿದ್ದಾರೆ. ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ಮಾಡುತ್ತಿರುವ ದರ್ಶನ್‌ಗೆ ಜೈಲಾಧಿಕಾರಿಗಳು ಖಡಕ್ ವಾರ್ನಿಂಗ್ ಮಾಡಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಜೈಲಿನಲ್ಲಿ ಇರುವಷ್ಟು ದಿನ ಜೈಲು ನಿಯಮಗಳನ್ನು ಪಾಲನೆ ಮಾಡಬೇಕು. ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗುತ್ತದೆ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ಆದರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ದರ್ಶನ್ ನಡೆಯನ್ನು ಜೈಲರ್ ಖಂಡಿಸಿದ್ದಾರೆ. ಪದೇ ಪದೇ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡುತ್ತೇವೆ. ಹೆಚ್ಚಿನದು ಬೇಕು ಅಂದರೆ…
Author: Author AIN
ಇಸ್ರೋದ ವಿಜ್ಞಾನಿಗಳು ಹೊಸ ಹೊಸ ಆವಿಷ್ಕಾರಗಳ ಮೂಲಕ ಭಾರತದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯುತ್ತಿದ್ದಾರೆ. ಇಸ್ರೋದ ವಿಜ್ಞಾನಿಗಳು ಮಹತ್ವಾಕಾಂಕ್ಷೆಯ ಯೋಜನೆ ‘ಗಗನಯಾನ್’. 2025ರ ವೇಳೆಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸಿದೆ. ಆದರೆ ಇದರ ಉಡಾವಣೆಗೂ ಮುನ್ನ ಯೋಜನೆಯ ಸುರಕ್ಷತೆಯನ್ನು ಪರೀಕ್ಷಿಸಲು ವ್ಯೋಮಮಿತ್ರ ಬಾಹ್ಯಾಕಾಶ ಹಾರಲಿದೆ. ಗಗನಯಾತ್ರಿಗಳ ನಿರ್ದೇಶನದೊಂದಿಗೆ ವ್ಯೋಮಮಿತ್ರ, ರೋಬೋಟಿಕ್ ಕಾರ್ಯಗಳನ್ನು ನಿರ್ವಹಿಸಲು ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುತ್ತದೆ?, ಬಾಹ್ಯಾಕಾಶ ನೌಕೆಯಲ್ಲಿನ ವ್ಯವಸ್ಥೆಗಳನ್ನು ಅದು ಹೇಗೆ ನಿಯಂತ್ರಿಸುತ್ತದೆ?, ಭೂಮಿಯಿಂದ ಇಸ್ರೋ ತಂಡ ನೀಡುವ ಸಂಕೇತಗಳನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಈ ಪ್ರಯೋಗದಲ್ಲಿ ಪರಿಶೀಲಿಸಲಾಗುತ್ತದೆ. ಬಳಿಕ ಪಡೆದ ಫಲಿತಾಂಶಗಳನ್ನು ವಿಶ್ಲೇಷಿಸಿ, ಭವಿಷ್ಯದ ಮಾನವ ಬಾಹ್ಯಾಕಾಶ ಪ್ರಯಾಣದ ಮೇಲಿನ ಪ್ರಭಾವವನ್ನು ಅಂದಾಜಿಸಲಾಗುತ್ತದೆ. ಹ್ಯೂಮನಾಯ್ಡ್‌ಗಳು ಮತ್ತು ಹಾಫ್ ಹ್ಯೂಮನಾಯ್ಡ್‌ಗಳ ಹೆಸರಿನಲ್ಲಿ ರೋಬೋಟಿಕ್ ವ್ಯವಸ್ಥೆಗಳು ಕೆಲಸ ಮಾಡುತ್ತವೆ. ಇವು ಮನುಷ್ಯರನ್ನೇ ಹೋಲುತ್ತವೆ. ಬಾಹ್ಯಾಕಾಶದಲ್ಲಿ ಚಲಿಸುವ ತೋಳುಗಳು, ಮುಂಡ, ತಲೆ ಮತ್ತು ಕುತ್ತಿಗೆಯೊಂದಿಗೆ ಸ್ವತಃ ಕೆಲಸ ಮಾಡುವಲ್ಲಿ ವ್ಯೋಮಮಿತ್ರ ಅನನ್ಯವಾಗಿದೆ. ಇಸ್ರೋ ವಿಜ್ಞಾನಿಗಳು ಅರ್ಧ ಹ್ಯೂಮನಾಯ್ಡ್ ಆಧರಿತ ಬಾಹ್ಯಾಕಾಶ ರೋಬೋಟ್…
ಮುಂದಿನ 2025ರಿಂದ ಚೀನಾ ಸರ್ಕಾರ ನಿವೃತ್ತಿಯ ವಯಸ್ಸನ್ನು ಇನ್ನೂ 3 ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಈ ಪಸ್ತಾವನೆಗೆ ಯುವ ಉದ್ಯೋಗಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಪುರುಷ ಕಾರ್ಮಿಕರ ಶಾಸನಬದ್ಧ ನಿವೃತ್ತಿ ವಯಸ್ಸನ್ನು 60 ರಿಂದ 63 ಕ್ಕೆ ಏರಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಮಹಿಳಾ ಕಾರ್ಮಿಕರಿಗೆ ಇದು 50 ಅಥವಾ 55 ವರ್ಷದಿಂದ 55 ಮತ್ತು 58 ವರ್ಷಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ನಿವೃತ್ತಿ ವಯಸ್ಸನ್ನು ಜನವರಿ 1, 2025 ರಿಂದ 15 ವರ್ಷಗಳಲ್ಲಿ ಕ್ರಮೇಣ ಹೆಚ್ಚಿಸಲಾಗುವುದು ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಚೀನಾದ ಯುವ ನಿರುದ್ಯೋಗವು ಜುಲೈನಲ್ಲಿ 17.1 ಪ್ರತಿಶತದಷ್ಟಿತ್ತು. ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬಗ್ಗೆಯೂ ಕ್ಸಿನ್ ಜಿ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ನಿವೃತ್ತಿಯ ವಯಸ್ಸಿನ ವಿಸ್ತರಣೆ ಮಕ್ಕಳನ್ನು ಹೊಂದುವ ಬಗ್ಗೆ ಜನರು ಮರುಪರಿಶೀಲಿಸುವಂತೆ ಮಾಡುತ್ತದೆ, ಚೀನಾದ ವಯಸ್ಸಾದ ಜನಸಂಖ್ಯೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ಸಾಕಷ್ಟು ಮಂದಿ ಆಕ್ರೋಶ ಹೊರ ಹಾಕಿದ್ದಾರೆ. ಚೀನಾ ವೇಗವಾಗಿ…
ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಫೈನಲಿಸ್ಟ್ ನ ಭೀಕರವಾಗಿ ಹತ್ಯೆ ಮಾಡಲಾಗಿದೆ. 38 ವರ್ಷದ ಕ್ರಿಸ್ಟೀನಾ ಜೋಕ್ಸಿಮೊವಿಕ್ರನ್ನ ಅವರ ಪತಿಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ರಿಸ್ಟೀನಾ ಅವರ ಮೃತದೇಹ ಅವರ ಮನೆಯ ಲಾಂಡ್ರಿಯಲ್ಲಿ ಫೆಬ್ರವರಿ 13 ರಂದು ಸಿಕ್ಕಿತ್ತು. ಪ್ರಕರಣವನ್ನು ತನಿಖೆ ಮಾಡಿದ ಸ್ಥಳೀಯ ಪೊಲೀಸರು ಕ್ರಿಸ್ಟೀನಾರ 41 ವರ್ಷದ ಪತಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕ್ರಿಸ್ಟೀನಾ ಪತಿ ಥಾಮಸ್ರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು. ವಿಚಾರಣೆಯಲ್ಲಿ ತನ್ನ ಪತ್ನಿಯನ್ನು ನಾನೇ ಹತ್ಯೆ ಮಾಡಿರುವುದಾಗಿ ಥಾಪಸ್ ಒಪ್ಪಿಕೊಂಡಿದ್ದಾನೆI. ಜೊತೆಗೆ ಅಲ್ಲಿನ ಫೆಡರಲ್ ಕೋರ್ಟ್ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಕ್ರಿಸ್ಟಿನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ವೇಳೆ ಆಕೆಯನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿದೆ ಎಂದು ಬಯಲಾಗಿತ್ತು. ಕ್ರಿಸ್ಟೀನಾ ಮೃತದೇಹ ಸಿಕ್ಕ ಲಾಂಡ್ರಿ ರೂಮ್ನಲ್ಲಿ ಚಿಕ್ಕ ಗರಗಸ, ಚಾಕೂ ಹಾಗೂ ದೊಡ್ಡದೊಂದು ಕತ್ತರಿ ಕೂಡ ಸಿಕ್ಕಿತ್ತು. ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಆಕೆಯ…
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರ ಎಕ್ಸ್ (ಟ್ವಿಟರ್) ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿರುವ ಅವರು ಅನಗತ್ಯ ಟ್ವೀಟ್ಸ್ ನಿರ್ಲಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹ್ಯಾಕ್ ಆಗಿರುವ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ, ”ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಯಾವುದೇ ಅನಗತ್ಯ ಅಥವಾ ವಿಚಿತ್ರ ಟ್ವೀಟ್‌ಗಳು ಬಂದರೆ ಅವುಗಳನ್ನು ದಯವಿಟ್ಟು ನಿರ್ಲಕ್ಷಿಸಿ” ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರದ ನಯನತಾರಾ 2023ರ ಆಗಸ್ಟ್ 31ಕ್ಕೆ ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟರು. ಅಂದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ವಿಡಿಯೋ ಮೂಲಕ ರಿವೀಲ್ ಮಾಡಿದ್ರು. ಈ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ 8.9 ಮಿಲಿಯನ್ ಫಾಲೋವರ್ಸ್ ಸಂಪಾದಿಸಿರುವ ಅವರು ಈವರೆಗೆ 119 ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ನಯನತಾರಾ ಕೊನೆಯದಾಗಿ ‘ಅನ್ನಪೂರ್ಣಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ‘ಮನ್ನಂಗಟ್ಟಿ: ಸಿನ್ಸ್ 1960’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ರಾಕಿಂಗ್ ಸ್ಟಾರ್…
ಸ್ಟಾರ್ಸ್ ಗಳ ಹೊಸ ಸಿನಿಮಾ ಘೋಷಣೆ ಆದಾಗ ಅಭೀಮಾನಿಗಳ ಸಡಗರ ಮುಗಿಲು ಮುಟ್ಟುತ್ತದೆ. ಸಿನಿಮಾದ ಕುರಿತು ಹೊಸ ಹೊಸ ಅಪ್ ಡೇಟ್ ಗಳಿಗಾಗಿ ಕಾಯ್ತಿರ್ತಾರೆ. ಆದ್ರೆ ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರ ಹೊಸ ಸಿನಿಮಾ ಘೋಷಣೆ ಆಗ್ತಿದ್ದಂಗೆ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ವಿಜಯ್ ನಟನೆಯ 69ನೇ ಸಿನಿಮಾವನ್ನು ಘೋಷಣೆ ಆಗಿದ್ದು ಈ ಸಿನಿಮಾವನ್ನು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಸಿನಿಮಾ ಘೋಷಣೆಯನ್ನು ವಿಜಯ್ರ ಇತರೆ ಸಿನಿಮಾಗಳ ವಿಡಿಯೋ ತುಣುಕುಗಳನ್ನು ಬಳಸಿ ಮಾಡಲಾಗಿದೆ. ವಿಜಯ್ ನಟನೆಯ 69ನೇ ಚಿತ್ರವನ್ನು ಎಚ್ ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ಗೆ ಜೋಡಿಯಾಗಿ ಸಿಮ್ರಾಣ್ ಕಾಣಿಸಿಕೊಳ್ತಿದ್ದಾರೆ. ಸುಮಾರು 20 ವರ್ಷಗಳ ಬಳಿಕ ನಟಿ ಸಿಮ್ರನ್ ಜೊತೆ ವಿಜಯ್ ನಟಿಸುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅರಾಮಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ವಾಸ ನಿತ್ಯ ನರಕವಾಗಿದೆ. ಸರಿಯಾಗಿ ಊಟ ತಿಂಡಿ ಸೇರದೆ, ನಿದ್ದೆ ಬರದೆ ದರ್ಶನ್ ಪರಿತಪಿಸುತ್ತಿದ್ದಾರೆ. ಇದರಿಂದ ಫುಲ್ ಟೆನ್ಷನ್ ಆದ ದಾಸ ಬಳ್ಳಾರಿ ಸೆಲ್ನಲ್ಲಿ ಜೈಲು ಸಿಬ್ಬಂದಿ ವಿರುದ್ಧವೇ ಗರಂ ಆಗಿದ್ದಾರೆ. ದರ್ಶನ್ ರನ್ನು ಫುಲ್ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಇಡಲಾಗಿದ್ದು ಅಕ್ಕ ಪಕ್ಕದ ಸೆಲ್ ಗಳು ಖಾಲಿಯಾಗಿವೆ. ಇದರಿಂದಾಗಿ ದರ್ಶನ್ ಯಾರ ಜೊತೆಯೂ ಬೆರೆಯಲೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ದರ್ಶನ್ ಟಿ.ವಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ಆದರೆ ಜೈಲು ಸಿಬ್ಬಂದಿ ತಂದುಕೊಟ್ಟ ಟಿ.ವಿ ಕೂಡ ಸರಿಯಾಗಿ ವರ್ಕ್ ಆಗ್ತಿಲ್ಲ. ಹೀಗಾಗಿ ಫುಲ್ ಟೆನ್ಷನ್ ಆಗಿರೋ ದರ್ಶನ್, ಟಿ.ವಿ ವಿಚಾರಕ್ಕೆ ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡ್ಕೊಂಡಿದ್ದಾರೆ ಎನ್ನಲಾಗುತ್ತಿದೆ. ನಾನು ಆರೋಪಿ, ಅಪರಾಧಿಯಲ್ಲ ಎಂದಿರುವ ದರ್ಶನ್ ಅವರು ವಿಚಾರಣಾಧೀನ ಕೈದಿಗಳಿಗೆ ಟಿ.ವಿ ಕೊಡುವಂತೆ ಜೈಲು ನಿಯಮವೇ ಇದೆ. ಆದ್ರೂ ಕೊಡ್ತಿಲ್ಲ ಯಾಕೆ. ಅದಕ್ಕೂ ಕೋರ್ಟ್‌ಗೆ ಅಪ್ಲಿಕೇಷನ್ ಹಾಕ್ಬೇಕಾ ಅಂತ ದರ್ಶನ್…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ನಿತ್ಯ ನರಕವಾಗಿದೆ. ಬಳ್ಳಾರಿ ಜೈಲಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಸ್ಥಿತಿ ಮತ್ತಷ್ಟು ಕಷ್ಟ ಆಗಿದೆ. ಜಾಮೀನು ಪಡೆಯುವ ಪ್ರಯತ್ನವೂ ಕೈಗೂಡುತ್ತಿಲ್ಲ. ಇದು ಕೊಲೆ ಆರೋಪ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುವುದಿಲ್ಲ. ಅಲ್ಲದೇ, ಈಗ ಅವರು ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗಿರುವುದರಿಂದ ಬಳ್ಳಾರಿ ಜೈಲಿನಲ್ಲಿ ಮಾಂಸದೂಟ ನೀಡಿದರು ಸೇವಿಸದೆ ದರ್ಶನ್ ಮಂಕಾಗಿದ್ದಾರೆ. ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದು, ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆದ ಹಿನ್ನೆಲೆಯನ್ನು ದರ್ಶನ್ ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ. ಜೈಲಿನ ಮೆನು ಪ್ರಕಾರ ಇಂದು ದರ್ಶನ್‌ಗೆ ಮಟನ್ ಊಟ ನೀಡಲಾಯಿತು. ಜಾಮೀನು ಸಿಗದೇ ಟೆನ್ಷನ್ ಆಗಿರುವ ದರ್ಶನ್ ಮಟನ್ ಊಟ…
ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರು ಮಂದಿ ಬ್ರಿಟಿಷ್ ರಾಜತಾಂತ್ರಿಕರನ್ನು ರಷ್ಯಾ ಹೊರ ಹಾಕಿದೆ. ರಾಜತಾಂತ್ರಿಕರು ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೇಶದ ಗುಪ್ತಚರ ಸಂಸ್ಥೆ ಎಫ್ಎಸ್ಬಿ ಆರೋಪಿಸಿದೆ. ಇದು ಈ ಮೂಲಕ ಮೊದಲೇ ಹದಗೆಟ್ಟಿರುವ ಮಾಸ್ಕೊ- ಯುಕೆ ಸಂಬಂಧಗಳು ಮತ್ತಷ್ಟು ಹಳಸಲು ಕಾರಣವಾಗಲಿದೆ. ರಷ್ಯಾಗೆ ಕಾರ್ಯತಂತ್ರದ ಸೋಲನ್ನು ಉಂಟುಮಾಡುವ ಪ್ರಯತ್ನವಾಗಿ ಯುಕೆ ರಷ್ಯಾದಲ್ಲಿ ವಿಧ್ವಂಸಕ ನೀತಿಗಳನ್ನು ಬೆಂಬಲಿಸಿದೆ ಮತ್ತು ಈ ಪ್ರಯತ್ನಗಳಿಗೆ ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿಯ ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾ ನಿರ್ದೇಶನಾಲಯ (ಇಇಸಿಎಡಿ)ವು ನೇತೃತ್ವ ವಹಿಸಿದೆ ಎಂದು ಸಂಸ್ಥೆ ಹೇಳಿದೆ. ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಇಇಸಿಎಡಿ ಮೂಲಭೂತವಾಗಿ ಮಾಸ್ಕೋ ವಿರುದ್ಧ ಕೆಲಸ ಮಾಡುವ ವಿಶೇಷ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಅದರ ಉದ್ಯೋಗಿಗಳು ರಷ್ಯಾದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ಎಫ್ಎಸ್ಬಿ ಆರೋಪಿಸಿದೆ. ಈ ವಿಚಾರ ಮತ್ತು ಯುಕೆಯ ಇತರ ಪ್ರತಿಕೂಲ ಕೃತ್ಯಗಳ ಕಾರಣಕ್ಕಾಗಿ ರಷ್ಯಾದ ವಿದೇಶಾಂಗ…
ಬಿಗ್ ಬಾಸ್ ಮೂಲಕ ಖ್ಯಾತಿ ಘಳಿಸಿದ ನಟಿ ತನಿಷಾ ಕುಪ್ಪಂಡ ಸದ್ಯ ಉದ್ಯಮದ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ತನಿಷಾ ಖಾಸಗಿ ಯೂಟ್ಯೂಬ್ ಚಾಲನ್ ನಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ತನಿಷಾ ಇಷ್ಟಪಟ್ಟು ತೆಗೆದುಕೊಂಡ ಕಾರಿನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ನಾನು ಒಂದು ಕಾರು ತೆಗೆದುಕೊಳ್ಳಲು 11 ವರ್ಷ ದುಡಿದಿದ್ದೇನೆ. ಅದು ಯಾರಪ್ಪನ ದುಡ್ಡು ಅಲ್ಲ. ಅದರ ಹೊರತಾಗಿಯೂ ಕಾರಿನ ಖರೀದಿ ಬಗ್ಗೆ ತುಂಬಾ ದೊಡ್ಡ ಕಥೆಯೇ ನಡೆದೋಯ್ತು ಎಂದಿದ್ದಾರೆ. ಸ್ನೇಹಿತ ಎಂದು ಹೇಳಿಕೊಂಡವನು ತಮಗೆ ಮಾಡಿದ ಅನ್ಯಾಯದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಕಾರು ತೆಗೆದುಕೊಳ್ಳುವ ಯೋಚನೆ ಮಾಡಿದೆ ಎಂಬುದು ನನ್ನ ಸೋ ಕಾಲ್ಡ್ ಸ್ನೇಹಿತನಿಗೆ ಗೊತ್ತಾಯ್ತು. ಹಣವನ್ನು ಆಮೇಲೆ ಇಎಂಐ ಮೂಲಕ ಕೊಡು, ಈಗ ನಾನು ದುಡ್ಡು ಕೊಟ್ಟಿರುತ್ತೇನೆ ಎಂದ. ನಾನೂ ಒಪ್ಪಿದೆ. ಸಾಮಾನ್ಯವಾಗಿ ಆಭರಣಗಳನ್ನು ಇದೇ ರೀತಿ ತೆಗೆದುಕೊಳ್ಳುವುದು. ಅದಕ್ಕಾಗಿಯೇ ಇದನ್ನು ಒಪ್ಪಿಕೊಂಡುಬಿಟ್ಟೆ. ಆದರೆ ಆಮೇಲೆ ಆದದ್ದೇ ಬೇರೆ. ಅವನು ಮೊದಲು ನನ್ನ…