Author: Author AIN

ಸಿನಿಮಾ ರಂಗದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ನಿರರ್ಗಲವಾಗಿ ಮಾತನಾಡುತ್ತಿದ್ದಾರೆ. ಈಗಾಗ್ಲೆ ಸಾಕಷ್ಟು ನಟಿಯರು ತಮಗಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇದೀಗ ಮರಾಠಿ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿರುವ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಆಫರ್ ನೀಡಿ ನಿರ್ಮಾಪಕರ ಜೊತೆ ಮಲಗಲು ಹೇಳ್ತಾರೆ ಎಂದು ನಟಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ, ಒಂದು ಬಾರಿ ನನಗೆ ಚಿತ್ರತಂಡದಿಂದ ಫೋನ್ ಕರೆ ಬಂದಿತ್ತು. ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂದು ಹೇಳಿದರು. ಬಳಿಕ ಕತೆ ಬಗ್ಗೆ ವಿಚಾರಿಸಿದಾಗ ಇದಕ್ಕೂ ಮುನ್ನ ಒಮ್ಮೆ ನೀವು ನಿರ್ಮಾಪಕರ ಜೊತೆ ಮಲಗಬೇಕು ಎಂದರು. ನೀವಾಗಿರುವ ಕಾರಣ ಹೀರೋ ಜೊತೆ ಮಲಗಿ ಎಂದು ನಾನು ಹೇಳಲ್ಲ ಎಂದು ಹೇಳಿದ್ದರು. ಅವರ ಆ ಮಾತು ನನಗೆ ಕೆರಳಿಸಿತ್ತು. ಕೊಡಲೇ ನಿಮ್ಮ ತಾಯಿಯನ್ನು ಅವರ ಜೊತೆ ಮಲಗಿಸಿ ಎಂದೆ. ಅವರ ಕಡೆಯಿಂದ ಉತ್ತರ ಬರಲಿಲ್ಲ. ಇನ್ನೋಮ್ಮೆ ಕಾಲ್ ಮಾಡಿದರೆ ನೆಟ್ಟಗೆ ಇರಲ್ಲ ಎಂದು ಗದರಿದೆ. ಆ…

Read More

2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚುವ ಯತ್ನಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮತ್ತೆ ಮುಂದೂಡಿದೆ. ಇದರಿಂದಾಗಿ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಪ್ರಕರಣ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಕುಂಠಿತವಾಗಿದೆ. 6-3 ಮತಗಳಿಂದ ತೀರ್ಪು ನೀಡಿರುವ ನ್ಯಾಯಮೂರ್ತಿಗಳು, ಇದೇ ಮೊದಲ ಬಾರಿಗೆ, ಮಾಜಿ ಅಧ್ಯಕ್ಷರು ತಮ್ಮ ಅಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿಕ್ಷೆಯಿಂದ ವಿನಾಯಿತಿ ಪಡೆಯಬಹುದು. ಆದರೆ, ಅನಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಹೇಳಿದರು. ಕೆಳಹಂತದ ನ್ಯಾಯಾಲಯಗಳು ಟ್ರಂಪ್‌ ಅವರ ಪ್ರಕರಣದಲ್ಲಿ ನಿರ್ಧಾರಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತೀರ್ಮಾನಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದರು. ಇದರಿಂದಾಗಿ ವಿಶೇಷ ವಕೀಲ ಜಾಕ್‌ ಸ್ಮಿತ್ ವಾದ ಮಂಡಿಸುತ್ತಿರುವ ಪ್ರಕಣದಲ್ಲಿ ಟ್ರಂಪ್‌ ವಿಚಾರಣೆ ಎದುರಿಸುವುದು ವಿಳಂಬವಾಗಬಹುದು ಎನ್ನಲಾಗಿದೆ.

Read More

ಮರಣದಂಡನೆಗೆ ಗುರಿಯಾಗಿದ್ದ 6 ಮಂದಿ ಸೇರಿ ಕನಿಷ್ಠ 18 ಅ‍ಪರಾಧಿಗಳು ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾದ ಘಟನೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾವಲಕೋಟ್ ಜೈಲಿನಲ್ಲಿ ಅಪರಾಧಿಯೊಬ್ಬ ಜೈಲು ಕಾವಲುಗಾರನಿಗೆ ಬಂದೂಕು ತೋರಿಸಿ ಜೈಲಿನ ಕೀ ಪಡೆದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಉಳಿದವರು ಕೂಡ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. 18 ಕೈದಿಗಳ ಪೈಕಿ ಆರು ಮಂದಿ ಮರಣದಂಡನೆಗೆ ಗುರಿಯಾಗಿದ್ದರು. ಮೂವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ತಪ್ಪಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಓರ್ವ ಕೈದಿ ಹತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಾರಿಯಾದ ಕೈದಿಗಳಿಗಾಗಿ ಈ ಪ್ರದೇಶದಲ್ಲಿ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಜೈಲಿನ ಮುಖ್ಯಾಧಿಕಾರಿ ಮತ್ತು ಇತರ ಕೆಲವು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಅಲ್ಲದೇ ಜೈಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್ ಸೇರಿದಂತೆ 7 ಮಂದಿ ಅಧಿಕಾರಿಗಳನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಭದ್ರತಾ ಲೋಪ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ…

Read More

ತಮಿಳಿನ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ ಇಂದು ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿಗಳ ವಿವಾಹ ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ಜರುಗಲಿದ್ದು, ಸಾಕಷ್ಟು ಕಲಾವಿದರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ನಟ ಶರತ್‌ಕುಮಾರ್ ಮತ್ತು ರಾಧಿಕಾ ದಂಪತಿ ಪುತ್ರಿ ವರಲಕ್ಷ್ಮಿ ವಿವಾಹ ಪೂರ್ವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದೆ. ಇಂದು ಥೈಲ್ಯಾಂಡ್‌ನಲ್ಲಿ ಉದ್ಯಮಿ ನಿಕೋಲಾಯ್ ಜೊತೆ ವರಲಕ್ಷ್ಮಿ ಹಸೆಮಣೆ ಏರುತ್ತಿದ್ದಾರೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಗೂ ನಟಿಯ ಕುಟುಂಬ ವಿಶೇಷವಾಗಿ ಆಮಂತ್ರಣ ನೀಡಿ ಆಹ್ವಾನಿಸಿದೆ.

Read More

ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಕ್ಬಾಲ್ ಮದುವೆಯಾಗಿದ್ದಾರೆ. ಹಿಂದೂ, ಮುಸ್ಲಿಂ ವಿವಾಹ ಎಂಬ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಜೋಡಿಗಳು ಸಿಂಪಲ್ ಆಗಿ ನಾಗಾರೀಕ ವಿವಾಹವಾಗಿದ್ದರು. ಇದೀಗ ಮದುವೆಯಾದ ವಾರಕ್ಕೆಲ್ಲಾ ಪತಿ ಝಹೀರ್ ಕೈಗೆ ನಟಿ ಚಪ್ಪಲಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸೋನಾಕ್ಷಿ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಜೂನ್ 23ರಂದು ಝಹೀರ್ ಇಕ್ಬಾಲ್ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮದುವೆಯಾಗಿ ಒಂದು ವಾರ ಕಳೆದಿದ್ದು, ಗಂಡನ ಕೈಗೆ ಚಪ್ಪಲಿ ಕೊಟ್ಟಿದ್ದಾರೆ. ಅದನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಹಂಚಿಕೊಂಡಿದ್ದು, ಚೆಂದದ ಅಡಿಬರಹ ಕೂಡ ನೀಡಿದ್ದಾರೆ. ಶಾಪಿಂಗ್ ಮಾಲ್‌ನಲ್ಲಿ ಪತಿ ಝಹೀರ್ ತನ್ನ ಚಪ್ಪಲಿ ಹಿಡಿದುಕೊಂಡು ಹೋಗುತ್ತಿರುವ ಫೋಟೋ ಶೇರ್ ಮಾಡಿದ ನಟಿ, ಇಷ್ಟಪಟ್ಟವರನ್ನು ಮದುವೆಯಾದರೆ ಇರುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಕಳೆದ 7 ವರ್ಷಗಳ ಹಿಂದೆ 2017ರ…

Read More

ಗಾಝಾದಲ್ಲಿ ಯುದ್ಧ ಸಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಸಾವಿರಾರು ಮಂದಿ ಇಸ್ರೇಲ್ ಪ್ರಜೆಗಳು ಟೆಲ್ ಅವೀವ್ ನಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು. ಹಮಾಸ್ ವಿರುದ್ಧದ ದಾಳಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರು ಇಸ್ರೇಲಿ ಸರ್ಕಾರವನ್ನು ಒತ್ತಾಯಿಸಿದರು. 2023ರ ಅಕ್ಟೋಬರ್ ನಲ್ಲಿ ಇಸ್ರೇಲ್- ಹಮಾಸ್ ನಡುವೆ ಯುದ್ಧ ಆರಂಭವಾದ ಬಳಿಕ ಪ್ಯಾಲೆಸ್ತೀನ್ ನಲ್ಲಿ ಈ ಯುದ್ಧಕ್ಕೆ ಹಲವು ಜೀವಗಳು ಬಲಿಯಾಗಿವೆ. ಆರು ತಿಂಗಳ ಹಿಂದೆ ಹಮಾಸ್ ವಶಕ್ಕೆ ಪಡೆದಿದ್ದ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿದರು. ಇದರ ಜೊತೆಗೆ ಗಾಝಾದ ಪ್ರಸ್ತುತ ಪರಿಸ್ಥಿತಿಗೆ ಕಾರಣರಾದ ಇಸ್ರೇಲ್ ಪ್ರಧಾನಿ ನೆತನ್ಯಾಹು ರಾಜೀನಾಮೆಗೂ ಆಗ್ರಹಿಸಿದರು

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್‌ರನ್ನು ನೋಡಲು ತಾಯಿ ಮೀನಾ, ಪತ್ನಿ ಮತ್ತು ಮಗ ಜೈಲಿಗೆ ಭೇಟಿ ನೀಡಿದ್ದು ಈ ವೇಳೆ ತಾಯಿಯನ್ನು ನೋಡ್ತಿದ್ದಂಗೆ ದರ್ಶನ್‌ ಕಣ್ಣೀರು ಹಾಕಿದ್ದಾರೆ. ಇಂದು (ಜು.1) ಬೆಳಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಮಾಧ್ಯಮಗಳ ಕಣ್ಣು ತಪ್ಪಿಸಲು ಖಾಸಗಿ ವಾಹನದಲ್ಲಿ ಬಂದ ದರ್ಶನ್ ಕುಟುಂಬ ಜೈಲಿನ ಒಳಗೆ ಹೋಗಿ ಭೇಟಿ ಮಾಡಿದೆ. ಮಗನ ಸ್ಥಿತಿ ನೋಡ್ತಿದ್ದಂತೆ ತಾಯಿ ಮೀನಾ ತೂಗುದೀಪ್ ಭಾವುಕರಾಗಿದ್ದಾರೆ. ದರ್ಶನ್‌ಗೆ ಸಹೋದರ ದಿನಕರ್ ಧೈರ್ಯ ತುಂಬಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕೆ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ. ಇದೀಗ ಖಾಸಗಿ ವಾಹನದಲ್ಲೇ ದರ್ಶನ್ ಕುಟುಂಬ ಭೇಟಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ ಕೊಡಬೇಕಾದರೆ ಹತ್ತಾರು ರೂಲ್ಸ್ ಹೇಳುತ್ತಾರೆ.…

Read More

ತೆಲುಗು ಚಿತ್ರರಂಗದ ನಟಿ ಕಂ ನಿರೂಪಕಿ ಅನಸೂಯಾ ಭಾರದ್ವಾಜ್ ಆಗಾಗ ತಮ್ಮ ಹಾಟ್ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಮತ್ತೆ ಹಾಟ್ ಅವತಾರ ತಾಳಿದ್ದು ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.  ‘ಜಬರ್ದಸ್ತ್’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿ ಆ್ಯಂಕರ್ ಆಗಿ ಸ್ಟಾರ್ ಇಮೇಜ್ ಗಿಟ್ಟಿಸಿಕೊಂಡಿದ್ದ ಪುಷ್ಪ ಲೇಡಿ ವಿಲನ್ ಅನಸೂಯಾ ಭಾರದ್ವಾಜ್ ಹೆಚ್ಚಾಗಿ ತಮ್ಮ ಫೋಟೋಗಳ ಮೂಲಕವೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಆಗಾಗ ಗ್ಲಾಮರಸ್ ಫೋಟೋಗಳ ಮೂಲಕ ಸಾಮಾಜಿಕ ಜಾಲಾ ತಾಣದಲ್ಲಿ ಸದ್ದು ಮಾಡುವ ನಟಿ ಇದೀಗ ಬಾಸ್ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಸದ್ದು ಮಾಡಿದ್ದ ನಟಿ ಇದೀಗ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದು, ಇತ್ತೀಚೆಗೆ ನಟಿ ಶೇರ್ ಮಾಡಿದ ಬೋಲ್ಡ್ ಮತ್ತು ಹಾಟ್ ಫೋಟೋಗಳು ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುತ್ತಿವೆ.  ಇತ್ತೀಚೆಗೆ ನಟಿ ಯಾವ ಫೊಟೋ ಶೇರ್ ಮಾಡಿದರೂ ಕೂಡಾ ನೆಟ್ಟಿಗರು ಕಮೆಂಟ್ ಮಾಡುತ್ತಲೇ ಇದ್ದಾರೆ. ಯಾವುದೇ ಫೋಟೋ ಅಪ್ಲೋಟ್ ಮಾಡಿದರೂ ರಿಯಾಕ್ಟ್ ಮಾಡುತ್ತಿದ್ದಾರೆ.…

Read More

ಗೂಗಲ್ ಟ್ರಾನ್ಸ್​ಲೇಟ್​ಗೆ ಕ್ಯಾಂಟೊನೀಸ್, ಎನ್​ಕೊ ಮತ್ತು ತಮಾಜೈಟ್ ಸೇರಿದಂತೆ 110 ಹೊಸ ಭಾಷೆಗಳನ್ನು ಸೇರಿಸಿರುವುದಾಗಿ ಗೂಗಲ್ ಘೋಷಿಸಿದೆ. ವಿಶ್ವದಲ್ಲಿ ಈ ಭಾಷೆಗಳನ್ನು ಮಾತನಾಡುವ 614 ಮಿಲಿಯನ್ ಜನರಿದ್ದು ಇವರು ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ 8ರಷ್ಟಿದ್ದಾರೆ. ಈ ಭಾಷೆಗಳ ಪೈಕಿ ಸುಮಾರು ಕಾಲು ಭಾಗದಷ್ಟು ಹೊಸ ಭಾಷೆಗಳು ಆಫ್ರಿಕಾ ವಲಯದ್ದಾಗಿವೆ. ಇದರಲ್ಲಿ ಫೋನ್, ಕಿಕೊಂಗೊ, ಲುವೊ, ಗಾ, ಸ್ವಾತಿ, ವೆಂಡಾ ಮತ್ತು ವೊಲೊಫ್ ಭಾಷೆಗಳಿವೆ. 2022ರಲ್ಲಿ, ಗೂಗಲ್ ಜೀರೊ-ಶಾಟ್ ಯಂತ್ರ ಅನುವಾದವನ್ನು ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಲಾಗಿತ್ತು. ಈ ವಿಧಾನದಲ್ಲಿ ಯಂತ್ರ ಕಲಿಕೆ ಮಾದರಿಯು ಹಿಂದಿನ ಯಾವುದೇ ಉದಾಹರಣೆಯನ್ನು ಬಳಸದೆ ಮತ್ತೊಂದು ಭಾಷೆಗೆ ಅನುವಾದಿಸಲಾಗುತ್ತದೆ. “ನಾವು 1,000 ಭಾಷೆಗಳ ಉಪಕ್ರಮವನ್ನು ಘೋಷಿಸಿದ್ದೇವೆ. ಇದು ವಿಶ್ವದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ (ಕೃತಕ ಬುದ್ಧಿಮತ್ತೆ) ಮಾದರಿಗಳನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಕಂಪನಿ ತಿಳಿಸಿದೆ. ಈಗ ಸೇರ್ಪಡೆಯಾದ ಹೊಸ ಭಾಷೆಗಳಲ್ಲಿ ಪಂಜಾಬಿ (ಶಹಮುಖಿ) ಕೂಡ ಸೇರಿದೆ. ಇದು ಪರ್ಸೊ-ಅರೇಬಿಕ್…

Read More

ಪಡ್ಡೆ ಹುಡುಗರ ನಿದ್ದೆ ಕೆಡಿಸಿದರ ಸುಂದರಿ ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹದಿಹರೆಯದ ಹುಡುಗರಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಸನ್ನಿ ಲಿಯೋನ್ ಬಗ್ಗೆ ತಿಳಿದಿರುತ್ತಾರೆ. ಟಿವಿ ಅಥವಾ ಮೊಬೈಲ್ ಗಳಲ್ಲಿ ನೋಡಿರುತ್ತಾರೆ. ಅಂದ ಹಾಗೆ ಈಕೆ ನೀಲಿ ತಾರೆ ಅನ್ನೋದು ಕೂಡ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಈಕೆ ಅದರಿಂದ ಹೊರ ಬಂದಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಸನ್ನಿ ಲಿಯೋನ್ ಬಾಲ್ಯದಲ್ಲಿ ಬಹಳಷ್ಟು ಬಡತನ ಕಂಡವರು. ಕೆನಡಾದಲ್ಲಿ ಜನಿಸಿ ಅಲ್ಲಿಯೇ ಬಾಲ್ಯವನ್ನು ಕಳೆದಿರುವ ಸನ್ನಿ ಲಿಯೋನ್ ಭಾರತದ ಅಮ್ಮ ಹಾಗು ಕೆನಡಾದ ಅಪ್ಪ ಜೋಡಿಗೆ ಹುಟ್ಟಿದ ಮಗು. ಹೀಗಾಗಿ ಸನ್ನಿಗೆ ಭಾರತದ ಬೇರು ಸಹ ಇದೆ ಎನ್ನಬಹುದು. ಇಡೀ ಪ್ರಪಂಚದ ಗಮನ ಸೆಳೆದಿರುವ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ಇತ್ತೀಚೆಗೆ ಸಾಕಷ್ಟು ಬದಲಾಗಿದ್ದಾರೆ ಎಂಬುದು ಬಹತೇಕರಿಗೆ ಗೊತ್ತು. ಆದರೆ ಇಂದು ಸನ್ನಿ ಲಿಯೋನ್ ಮೊದಲಿಗೆ ಹೋಲಿಸಿಕೊಂಡರೆ ಬಹಳಷ್ಟು ಗೌರವ ಗಳಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸನ್ನಿಯ ಬಹುಮುಖ ವ್ಯಕ್ತಿತ್ವ…

Read More