ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾಥಿತ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡನ್ ನಾಗನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಆದೇಶ ಹೊರಡಿಸಿದೆ. ವಿಲ್ಸನ್ ಗಾರ್ಡನ್ ನಾಗ ಸೇರಿ ಕೋಕಾ ಕೇಸ್ ಅಲ್ಲಿ ಬಂಧನ ಆಗಿದ್ದ 20 ಜನರೂ ಕೂಡ ಬೇರೆ ಬೇರೆ ಜೈಲಿಗೆ ವರ್ಗವಣೆ ಮಾಡುವಂತೆ ಆದೇಶ ಹೊರಡಿಸಿದ್ದು ಅದರಂತೆ 20 ಜನರನ್ನು ಬೇರೆ ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾಥಿತ್ಯ ಕೊಟ್ಟಿದ್ದ ಆರೋಪ ವಿಲ್ಸನ್ ಗಾರ್ಡನ್ ನಾಗನ ಮೇಲಿತ್ತು. ನಾಗನ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಹಾಗೂ ಬೆಂಗಳೂರು ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಸಿದ್ದಪುರ ಮಹೇಶ್‌ನನ್ನ ನಾಗ ತಂಡ ಕೊಚ್ಚಿ ಕೊಲೆ ಮಾಡಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಸಿದ್ದಪುರ…
Author: Author AIN
ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಾಂತರಗೊಳ್ಳುವಂತೆ ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಆದೇಶಿಸುವ ಕರಪತ್ರಗಳನ್ನು ಲೆಬನಾನ್ ಗಡಿಭಾಗದ ಗ್ರಾಮದಲ್ಲಿ ಇಸ್ರೇಲ್ ಡ್ರೋನ್ ಗಳ ಮೂಲಕ ಬೀಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕರಪತ್ರಗಳನ್ನು ಸೇನೆಯ ತುಕಡಿಯೊಂದು ಅನುಮತಿ ಪಡೆಯದೆ ಉದುರಿಸಿದೆ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ. ಗಾಝಾದಲ್ಲಿ 11 ತಿಂಗಳಿಂದ ಮುಂದುವರಿದಿರುವ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಲೆಬನಾನ್ನಿ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಇಸ್ರೇಲ್ ಆದೇಶಿಸಿದೆ. `ಇಸ್ರೇಲಿ ಶತ್ರುಗಳು ವಝಾನಿ ನಗರದಲ್ಲಿ ಕರಪತ್ರಗಳನ್ನು ಉದುರಿಸಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದವರು ತಕ್ಷಣ ಸ್ಥಳಾಂತರಗೊಳ್ಳಲು ಸೂಚಿಸಿದ್ದಾರೆ. ಕರಪತ್ರದಲ್ಲಿ ಪ್ರದೇಶದ ನಕ್ಷೆ ಹಾಗೂ ಸ್ಥಳಾಂತರಗೊಳ್ಳಬೇಕಾದ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ 10 ಸಂಸದರಿಗೆ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶನಿವಾರ ಇಸ್ಲಮಾಬಾದ್ ನಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ(ಪಿಟಿಐ) ನಡೆಸಿದ್ದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಪಕ್ಷದ 10 ಸಂಸದರ ಸಹಿತ ಪಕ್ಷದ ಕನಿಷ್ಠ 30 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಸಂಸದರ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದ ಹೊಸ ಕಾನೂನು ಹಾಗೂ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆ ನಡೆಯುವುದಕ್ಕೆ ಎರಡು ದಿನ ಮೊದಲು ಅನುಮೋದಿಸಲಾಗಿದ್ದ `ಶಾಂತಿಯುತ ಸಭೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆ’ಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಟೀಕಿಸಿವೆ.
ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಮುದ್ದು ಕಂದನ ಆಗಮನವಾಗಲಿದೆ. ಸದ್ಯದಲ್ಲೇ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ತಂದೆ ತಾಯಿಯಾಗಲಿದ್ದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಸುಮಲತಾ ಮನೆಯಲ್ಲಿ ಸದ್ಯದಲ್ಲೇ ಪುಟ್ಟ ಕಂದನ ಆಗಮನವಾಗಲಿದೆ. ಸೊಸೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ನಟಿ ಸುಮಲತಾ ಅಂಬರೀಶ್ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಸೀಮಂತ ಶಾಸ್ತ್ರ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು. ಸುಮಲತಾ ನಿವಾಸದಲ್ಲಿಯೇ ಅವಿವಾ ಸೀಮಂತ ಶಾಸ್ತ್ರ ಮಾಡಲಾಗಿದೆ. ಕೆಲವೇ ಕೆಲವು ಅತಿಥಿಗಳು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಸದ್ಯ ಕೆಲವು ಫೋಟೋಗಳು ವೈರಲ್ ಆಗಿವೆ. ಅಕ್ಟೋಬರ್ ವೇಳೆಗೆ ಅಭಿ ಹಾಗೂ ಅವಿವಾ ಬಾಳಿನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದ್ದು. ಅಂಬಿ ನಿವಾಸದಲ್ಲಿ ಪುಟ್ಟ ಮಗುವಿನ ನಗು ಕೇಳಿಸಲಿದೆ. ಕನ್ನಡ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರು…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ಪರಪ್ಪನ ಅಗ್ರಹಾರ ಹೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿಯಲ್ಲಿ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗಿದ್ದು, ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲು ಸೇರಿ 19 ದಿನಗಳೇ ಕಳೆದು ಹೋಗಿದೆ. ಈ ಮಧ್ಯೆ ದರ್ಶನ್ ಮನ ಅಮ್ಮನನ್ನು ಕಾಣಲು ಹಂಬಲಿಸುತ್ತಿದೆ. ದರ್ಶನ್ ಬಳ್ಳಾರಿ ಜೈಲು ಸೇರಿ ಇಷ್ಟು ದಿನ ಕಳೆದಿದ್ರು ಒಮ್ಮೆಯೂ ಮಗನನ್ನು ನೋಡಲು ದರ್ಶನ್ ತಾಯಿ ಮೀನಾ ತೂಗುದೀಪ ಬಂದಿಲ್ಲ. ಬಳ್ಳಾರಿ ಜೈಲು ಸೇರಿ 19 ದಿನ ಆದ್ರೂ ನಟ ದರ್ಶನ್ ತಾಯಿ ಮೀನಾ ತೂಗುದೀಪ ಮಗನನ್ನು ನೋಡಲು ಈ ಜೈಲಿಗೆ ಬಂದಿಲ್ಲ. ಅಮ್ಮನನ್ನು ನೋಡಬೇಕು ಎಂದು ದರ್ಶನ ಹಂಬಲಿಸುತ್ತಿದ್ದಾರಂತೆ. ಅಮ್ಮನ ಕನವರಿಕೆಯಲ್ಲೇ ದಿನದೂಡುತ್ತಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ 3 ಬಾರಿ ಬಳ್ಳಾರಿ ಜೈಲಿಗೆ ಬಂದು ದರ್ಶನ್ ಭೇಟಿಯಾದ್ರು. ಸಹೋದರ ದಿನಕರ್ ತೂಗುದೀಪ್ ಕೂಡ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲೂ ದರ್ಶನ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಪತ್ರ ಬರೆದ ದರ್ಶನ್ ಪರ ವಕೀಲರು ಕಿವಿ ಮಾತು ಹೇಳಿದ್ದಾರೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಈ ಮೊದಲು ಟಿವಿಗಾಗಿ ಕಿರಿಕ್ ಮಾಡಿಕೊಂಡಿದ್ದರು. ಕೊಟ್ಟ ಟಿವಿ ಸರಿ ಇಲ್ಲ, ನನಗೆ ಸರಿಯಾದ ಟಿವಿ ಬೇಕು ಎಂದಿದ್ದರು. ಆ ಬಳಿಕ ಮಾಧ್ಯಮಗಳಿಗೆ ಅಸಭ್ಯ ಸನ್ನೆ ಮಾಡಿ ವಿವಾದ ಸೃಷ್ಟಿಸಿದ್ದರು. ಈ ಎಲ್ಲವು ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಸಮಯದಲ್ಲಿ ಸಮಸ್ಯೆಗಳು ತಂದೊಡ್ಡುತವೆ ಎಂಬ ಕಾರಣಕ್ಕೆ ವಕೀಲರು ಪತ್ರ ಬರೆದಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಈ ಚಾರ್ಜ್ಶೀಟ್ನಲ್ಲಿ ಹಲವು ವಿಚಾರಗಳು ಉಲ್ಲೇಖ ಆಗಿವೆ. ಈವರೆಗೆ ದರ್ಶನ್ ಪರ ವಕೀಲರು ಜಾಮೀನು ಸಲ್ಲಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿ ಸಲ್ಲಿಕೆ…
ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಸದ್ಯ ಬಳ್ಲಾರಿ ಜೈಲಿನಲ್ಲಿರುವ ದರ್ಶನ್ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಆದರೆ ಸದ್ಯದ ಮಟ್ಟಿಗಂತು ದರ್ಶನ್ ಗೆ ಬಿಡುಗಡೆ ಭಾಗ್ಯವಿಲ್ಲವಾಗಿದೆ. ಇಂದು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ಮತ್ತೊಮ್ಮೆ ಕುರ್ಚಿಗಾಗಿ ಮನವಿ ಮಾಡಿದ್ದಾರೆ. ‘ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕು ಜೈಲಾಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ. ಆದರೆ, ದರ್ಶನ್‌ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದರು. ‘ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಜೈಲಿನ ನಿಯಮ ಪಟ್ಟಿಯಲ್ಲಿ ಇದೆ. ಅದು ಕೊಡಬೇಕು ಎಂದು ಆದೇಶ ಮಾಡುತ್ತೇನೆ’ ಎಂದು ಜಡ್ಜ್ ಹೇಳಿದರು. ಇಂದು…
2019ರಲ್ಲಿ ತೆರೆಗೆ ಬಂದ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. 3ಡಿ 2ಮೋಡಿಯಲ್ಲಿ ಈ ಪೌರಾಣಿಕ ಯುದ್ಧದ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ರೆ, ಚಿತ್ರದಲ್ಲಿ ನಟ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದರು. ಅಚ್ಚರಿ ಅಂದ್ರೆ ಈ ಸಿನಿಮಾದ ಇಬ್ಬರು ಈಗ ಜೈಲು ಸೇರಿದ್ದಾರೆ. ಹೌದು. ಕುರುಕ್ಷೇತ್ರ ಸಿನಿಮಾಗೆ ಬಂಡವಾಳ ಹೂಡಿದ್ದ ಮುನಿರತ್ನ ಹಾಗೂ ದುರ್ಯೋಧನನಾಗಿ ಅಬ್ಬರಿಸಿದ ದರ್ಶನ್ ಇಬ್ಬರು ಈಗ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಬಳ್ಳಾರಿ ಜೈಲು ಸೇರಿದ್ರೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ನಲ್ಲಿ ಮುನಿರತ್ನರನ್ನು ಬಂಧಿಸಲಾಗಿದೆ. ಮುನಿರತ್ನ ರಾಜಕೀಯದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಉತ್ತಮ ನಂಟು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮುನಿರತ್ನ ಪ್ರತಿಷ್ಠಿತ ನಿರ್ಮಾಪಕ ಆಗಿದ್ದವರು. ಅಷ್ಟೇ ಅಲ್ಲ ನಿರ್ಮಾಪಕರ ಸಂಘದ ಅಧ್ಯಕ್ಷ ಕೂಡ ಆಗಿದ್ರು. 2002ರಲ್ಲಿ ಕಂಬಾಲಪಲ್ಲಿ ಅನ್ನೋ ಸಿನಿಮಾ ನಿರ್ಮಿಸೋ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಮುನಿರತ್ನ ಸ್ಯಾಂಡಲ್ ವುಡ್ ನ ಅನೇಕ…
ಮಹಾ ಮಾರಿ ಕ್ಯಾನ್ಸರ್ ಗೆ ಔಷಧಿ ಕಂಡು ಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇದೀಗ ಮಾಡರ್ನಾ ಪಾರ್ಮಾಸೆಟಿಕಲ್ಸ್ ಕಂಪನಿ ಕ್ಯಾನ್ಸರ್ಗೆ ಹೊಸ ಲಸಿಕೆಯನ್ನು ಕಂಡು ಹಿಡಿದಿದೆ. ಈ ಲಸಿಕೆ ಕ್ಯಾನ್ಸರ್ ರೋಗದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಮಾಡರ್ನಾ ಪಾರ್ಮಾಸೆಟಿಕಲ್ಸ್ ಕಂಪನಿ ರೋಗಿಗಳಲ್ಲಿ ಹೊಸ ಆಶಾಭಾವವನ್ನು ಮೂಡಿಸಿದೆ. ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಬಳಸಲಾದ mRNA ತಂತ್ರಜ್ಞಾನವನ್ನೇ ಬಳಸಿ ಈ ಒಂದು ಲಸಿಕೆಯನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕಂಡು ಹಿಡಿದಿರುವ ಈ ವ್ಯಾಕ್ಸಿನ್ಗೆ mRNA-4359 ಎಂದು ಹೆಸರಿಡಲಾಗಿದೆ. ಕೊರೊನಾ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದಲ್ಲಿರುವ ಆರೋಗ್ಯಕರ ಸೆಲ್ಸ್ಗಳನ್ನ ಅಪಾಯದಿಂದ ಪ್ರತ್ಯೇಕಿಸುತ್ತಿತ್ತು. ಇದೇ ಮಾದರಿಯ ಲಸಿಕೆಯನ್ನು ಈಗ ಕ್ಯಾನ್ಸರ್ ಲಸಿಕೆಯ ತಯಾರಿಕೆಯಲ್ಲಿ ವಿಸ್ತರಿಸಲಾಗಿದೆ. ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ದೊಡ್ಡ ಮಟ್ಟದ ಟ್ಯೂಮರ್ ಹೊಂದಿದ್ದ 19 ರೋಗಿಗಳು, ಕ್ಯಾನ್ಸರ್ ಟ್ಯೂಮರ್ ಈಗಷ್ಟೇ ವೃದ್ಧಿಯಾಗುತ್ತಿರುವ 8 ರೋಗಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ಲಸಿಕೆ ರೋಗಿಗಳ…
ನಟಿಯರು ಚಿತ್ರರಂಗದಲ್ಲಿ ತಮಗಾಗುತ್ತಿರುವ ದೌರ್ಜನ್ಯಗಳು ಕುರಿತು ಮೌನ ಮುರಿಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ತಾವು ಅನುಭವಿಸಿದ ನೋವುಗಳ ಬಗ್ಗೆ ಮಾತನಾಡಿದ್ದಾರೆ. ಇದೀಗ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಹಿಂದಿ ಚಿತ್ರರಂಗದ ಹೀರೋಗಳ ವಿರುದ್ಧ ಹರಿಹಾಯುತ್ತಾರೆ. ಚಿತ್ರರಂಗದಲ್ಲಿ ಅನೇಕರನ್ನು ಕಂಗನಾ ಎದುರು ಹಾಕಿಕೊಂಡಿದ್ದಾರೆ. ಇದೀಗ ನಟಿ ಬಾಲಿವುಡ್ ನಟರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ ಹೀರೋಗಳೇ ನಟಿಯರಿಗೆ ಕಿರುಕುಳ ನೀಡುತ್ತಾರೆ ಎಂದಿದ್ದಾರೆ. ‘ಆ ಹೀರೋಗಳು ಮಹಿಳೆಯರಿಗೆ ಹೇಗೆ ಕಿರುಕುಳ ನೀಡುತ್ತಾರೆ ಗೊತ್ತಾ? ಅವರು ಊಟಕ್ಕೆ ಕರೆಯುತ್ತಾರೆ, ಮೆಸೇಜ್ ಮಾಡುತ್ತಾರೆ ನಂತರ ಮನೆಗೆ ಬರುವಂತೆ ಹೇಳುತ್ತಾರೆ’ ಎಂದಿದ್ದಾರೆ ಕಂಗನಾ ರಣಾವತ್. ಕಂಗನಾ ಅವರು ಈ ರೀತಿಯ ಅನೇಕ ಆರೋಪಗಳನ್ನು ಈ ಮೊದಲು ಕೂಡ ಮಾಡಿದ್ದರು. ‘ಕೋಲ್ಕತ್ತಾ ರೇಪ್ ಹಾಗೂ ಮರ್ಡರ್ ಕೇಸ್ ನೋಡಿ. ನನಗೆ ಬರುತ್ತಿರುವ ಅತ್ಯಾಚಾರ ಬೆದರಿಕೆಗಳನ್ನು ನೋಡಿ. ನಾವು ಮಹಿಳೆಯರಿಗೆ ಗೌರವ ಕೊಡಲ್ಲ ಅನ್ನೋದು ಗೊತ್ತು. ಸಿನಿಮಾ ರಂಗ ಬೇರೆ ರೀತಿ ಇಲ್ಲ. ಕಾಲೇಜು…