Author: Author AIN

ಇಸ್ರೇಲ್ ಮತ್ತು ಹಮಾಸ್‌ ಬಂಡುಕೋರರ ನಡುವೆ ಯುದ್ಧ ಆರಂಭವಾದ ಬಳಿಕ ಸಾವಿಗೀಡಾದ ಪ್ಯಾಲೆಸ್ಟೀನಿಯರ ಸಂಖ್ಯೆ 38 ಸಾವಿರದ ಗಡಿ ದಾಟಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ‘ಕಳೆದ 24 ಗಂಟೆಗಳ ಅವಧಿಯಲ್ಲಿ 58 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಸಾವಿನ ಸಂಖ್ಯೆ 38,011ಕ್ಕೆ ತಲುಪಿದೆ. ಯುದ್ಧದಲ್ಲಿ 87 ಸಾವಿರ ಮಂದಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದೆ. ಸತ್ತವರಲ್ಲಿ ನಾಗರಿಕರು ಎಷ್ಟು ಮಂದಿ ಇದ್ದಾರೆ ಹಾಗೂ ಹಮಾಸ್‌ ಬಂಡುಕೋರರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಸಚಿವಾಲಯವು ಮಾಹಿತಿ ನೀಡಿಲ್ಲ. ಆದರೆ ಮೃತಪಟ್ಟವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಎನ್ನಲಾಗಿದೆ.

Read More

ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಗುರುವಾರ ಸಿಡಿತಲೆಗಳನ್ನು ಒಳಗೊಂಡ 200ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ತಿಳಿಸಿದೆ. ಸಂಘಟನೆಯ ಹಿರಿಯ ಸೇನಾ ಕಮಾಂಡರ್ ಮೊಹಮ್ಮದ್ ನಾಮೇಹ್ ನಾಸೀರ್ ಅವರನ್ನು ಇಸ್ರೇಲ್ ಹತ್ಯೆ ಮಾಡಿದ್ದು, ಪ್ರತೀಕಾರದ ಭಾಗವಾಗಿ ದಾಳಿ ನಡೆಸಿದ್ದಾಗಿ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ಹೇಳಿಕೊಂಡಿದೆ. ಇಸ್ರೇಲ್-ಲೆಬನಾನ್ ಮಧ್ಯೆ ಹಲವು ತಿಂಗಳಿಂದ ಗಡಿ ಬಿಕ್ಕಟ್ಟು ಮುಂದುವರಿದಿದ್ದು, ಇದೇ ಮೊದಲ ಬಾರಿಗೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್ ಮೇಲೆ ಇಷ್ಟು ದೊಡ್ಡ ಪ್ರಮಾಣದ ದಾಳಿ ನಡೆಸಿದೆ. ‘ಲೆಬನಾನ್‌ ಕಡೆಯಿಂದ ಹತ್ತಾರು ಕ್ಷಿಪಣಿಗಳು ಇಸ್ರೇಲ್‌ ಗಡಿಯೊಳಕ್ಕೆ ಪ್ರವೇಶಿಸಿವೆ. ಆದರೆ, ಅವುಗಳ ಪೈಕಿ ಕೆಲವೊಂದು ಕ್ಷಿಪಣಿಗಳನ್ನು ಪ್ರತಿಬಂಧಿಸಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ’ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇದೇ ವೇಳೆ ಹಿಜ್ಬುಲ್ಲಾ ಸಂಘಟನೆಯ ಮೂರು ವಿಭಾಗಗಳ ಮುಖ್ಯಸ್ಥರ ಪೈಕಿ ಒಬ್ಬರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಒಪ್ಪಿಕೊಂಡಿದೆ. ಕಮಾಂಡರ್ ಹತ್ಯೆಯ ಬಳಿಕ ಸಿಡಿತಲೆಗಳನ್ನು ಒಳಗೊಂಡ ಕತ್ಯುಶಾ ಮತ್ತು ಫಲಕ್ ಹೆಸರಿನ ರಾಕೆಟ್‌ಗಳನ್ನು…

Read More

ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕಣದಿಂದ ಹಿಂದೆ ಸರಿಯತ್ತಿಲ್ಲ ಎಂದು ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಬೈಡನ್‌, ಚುನಾವಣೆ ಕಣದಿಂದ ಹಿಂದೆ ಸರಿಯಬೇಕು ಎಂಬ ಅಭಿಪ್ರಾಯ ಡೆಮಾಕ್ರಟಿಕ್‌ ಪಕ್ಷದಲ್ಲೇ ಕೇಳಿಬಂದಿತ್ತು. ಕಳೆದ ಗುರುವಾರ ಬೈಡನ್‌ ಹಾಗೂ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ನಡುವಣ ಚರ್ಚೆಯಲ್ಲಿ ಬೈಡನ್‌ ಅವರಿಗೆ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿತ್ತು. ಇದರಿಂದ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಒತ್ತಡ ಇನ್ನಷ್ಟು ಹೆಚ್ಚಿತ್ತು. ‘ಇನ್ನೊಂದು ಅವಧಿಗೆ ಅಧ್ಯಕ್ಷನಾಗುವ ಸಾಮರ್ಥ್ಯ ಇದೆ ಎಂಬ ಭರವಸೆಯನ್ನು ತ್ವರಿತವಾಗಿ ಜನರ ಮುಂದಿಡಲು ವಿಫಲವಾದರೆ, ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದೇನೆ ಎಂದು ಬೈಡನ್‌ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ’ ಎಂದು ನ್ಯೂಯಾರ್ಜ್‌ ಟೈಮ್ಸ್‌ ಮತ್ತು ಸಿಎನ್‌ಎನ್‌ ವರದಿ ಮಾಡಿತ್ತು. ಶ್ವೇತಭವನದ ವಕ್ತಾರೆ ಕರೀನ್‌ ಜಾನ್‌ ಪಿಯರ್ ಅವರು ಮಾಧ್ಯಮ ವರದಿಗಳನ್ನು ಅಲ್ಲಗಳೆದಿದ್ದು, ‘ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಬೈಡನ್‌ ಸ್ಪಷ್ಟ ನಿಲುವು ಹೊಂದಿದ್ದು, ಕಣದಿಂದ ಹಿಂದೆ ಸರಿಯುತ್ತಿಲ್ಲ’…

Read More

ಕಳೆದ ಕೆಲ ದಿನಗಳಿಂದ ಬ್ರೆಜಿಲ್ ನಲ್ಲಿ ಭೀಕರ ಪ್ರವಾಹ ಉಂಟಾಗಿದೆ.ಪರಿಣಾಮ ಇದುವರೆಗೂ 180 ಮಂದಿ ಮೃತಪಟ್ಟಿದ್ದು 32 ಜನರು ಕಾಣೆಯಾಗಿದ್ದಾರೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ ಏಪ್ರಿಲ್ 29 ರಂದು ಪ್ರಾರಂಭವಾದ ಧಾರಾಕಾರ ಮಳೆ ಹಲವು ದಿನಗಳವರೆಗೆ ಮುಂದುವರಿದಿದೆ. ರಾಜ್ಯದಾದ್ಯಂತ ಹಲವು ನಗರಗಳು ನೀರಿನಿಂದ ಮುಳುಗಡೆಯಾಗಿದ್ದು ಜನ ಜೀವನ ಅಸ್ಥವ್ಯಸ್ಥವಾಗಿದೆ. ಜೂನ್ ಮಧ್ಯದಲ್ಲಿ ಪ್ರವಾಹ ಕಡಿಮೆಯಾಗಲು ಪ್ರಾರಂಭಿಸಿದ ನಂತರ ರಕ್ಷಣಾ ಕಾರ್ಯಗಳು ಪ್ರಾರಂಭವಾದವು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಾಜ್ಯ ರಾಜಧಾನಿ ಪೋರ್ಟೊ ಅಲೆಗ್ರೆ ಸೇರಿದಂತೆ 478 ಪಟ್ಟಣಗಳಲ್ಲಿ ಸುಮಾರು 2,398,255 ನಿವಾಸಿಗಳ ಮೇಲೆ ತೀವ್ರ ಹವಾಮಾನ ಪರಿಣಾಮ ಬೀರಿದೆ ಎಂದು ಏಜೆನ್ಸಿ ವರದಿಯಲ್ಲಿ ತಿಳಿಸಿದೆ. ಬ್ರೆಜಿಲ್ ಸರ್ಕಾರವು ರಿಯೊ ಗ್ರಾಂಡೆ ಡೊ ಸುಲ್ ಗೆ ಸಹಾಯ ಮಾಡಲು ಮತ್ತು ಪುನರ್ನಿರ್ಮಿಸಲು 85.7 ಬಿಲಿಯನ್ ರಿಯಲ್ ಗಳನ್ನು (ಸುಮಾರು 15.4 ಬಿಲಿಯನ್ ಡಾಲರ್) ನಿಗದಿಪಡಿಸಿದೆ ಎಂದು ಸಾಮಾಜಿಕ ಸಂವಹನ ಕಾರ್ಯದರ್ಶಿ ಪೌಲೊ ಪಿಮೆಂಟಾ ಹೇಳಿದ್ದಾರೆ. ಉರುಗ್ವೆ ಮತ್ತು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಇದುವರೆಗೂ ನಟಿ ಹಾಗೂ ಸಂಸದೆ, ದರ್ಶನ್ ಆಪ್ತೆ ಸುಮಲತಾ ಅಂಬರೀಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಇದೇ ಮೊದಲ ಭಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ನಮಸ್ಕಾರ.. ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಹೆಂಡತಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಇಂದು ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು, ನನ್ನ ಆಲೋಚನೆಗಳು ಮತ್ತು ನೋವನ್ನು ಹಂಚಿಕೊಳ್ಳಲು ಪೋಸ್ಟ್ ಮಾಡುತ್ತಿದ್ದೇನೆ ಏಕೆಂದರೆ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳನ್ನು…

Read More

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿಗೆ ಜು.18ರವರೆಗೆ ನ್ಯಾಯಾಂಗ ಬಂಧನ ಮುಂದೂಡಲಾಗಿದೆ. ಇಂದು (ಜುಲೈ 4) ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಜಡ್ಜ್​ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್​ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಯಿತು. ಆರ್ಥಿಕ ಅಪರಾಧಗಳ ಕೋರ್ಟ್​ಗೆ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಆಗಿದೆ. ಜುಲೈ 18ರವರೆಗೆ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ. ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಲ್ಲಿ ಇರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್​ನಲ್ಲಿ ಹಾಜರು ಪಡಿಸಲಾಯಿತು. ಜಡ್ಜ್ ಎಲ್ಲರ ಹೆಸರು ಕರೆಯುತ್ತಿದ್ದಂತೆಯೇ ಕೈಎತ್ತಿ ಹಾಜರಿ ಖಾತರಿಪಡಿಸಿದರು. ದರ್ಶನ್​ ಅವರು ಜೈಲಿನಿಂದ ಹೊರಬರಲಿ ಎಂಬುದು ಅಭಿಮಾನಿಗಳು ಮತ್ತು ಆಪ್ತರ ಬಯಕೆ ಆಗಿದೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ಸಿಗುವುದು ಸದ್ಯಕ್ಕೆ ಕಷ್ಟವಾಗಿದೆ.

Read More

ಬ್ರಿಟನ್‌ ಪ್ರಧಾನಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಷಿ ಸುನಕ್ ಅವರ ಭವಿಷ್ಯವು ಇಂದು ನಿರ್ಧಾರವಾಗಲಿದೆ. ಇಂಗ್ಲೆಂಡ್ ನಾದ್ಯಂತ ಸಾರ್ವತ್ರಿಕ ಚುನಾವಣೆ ಪ್ರಗತಿಯಲ್ಲಿದೆ. 44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್‌ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ. ಎರಡು ಪ್ರಮುಖ ಪಕ್ಷಗಳ ಹೊರತಾಗಿ, ಮತದಾರರು ಲಿಬರಲ್ ಡೆಮಾಕ್ರಾಟ್‌ಗಳು, ಗ್ರೀನ್ ಪಾರ್ಟಿ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ (ಎಸ್‌ಎನ್‌ಪಿ), ಎಸ್‌ಡಿಎಲ್‌ಪಿ, ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ (ಡಿಯುಪಿ), ಸಿನ್ ಫಿಯೆನ್, ಪ್ಲೈಡ್ ಸಿಮ್ರು, ವಲಸೆ ವಿರೋಧಿ ಸುಧಾರಣೆಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳ ಪಟ್ಟಿಯಿಂದ ಆಯ್ಕೆ ಮಾಡುತ್ತಾರೆ. ಪಕ್ಷ ಮತ್ತು ಹಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಸುಮಾರು 40,000 ಮತಗಟ್ಟೆಗಳು ಸ್ಥಳೀಯ ಕಾಲಮಾನ ಬೆಳಗ್ಗೆ…

Read More

ಪಾಕಿಸ್ತಾನಿ ಖ್ಯಾತ ನಟ ಫವಾದ್​ ಖಾನ್ ಗೆ ಮತ್ತೆ ಹಿಂದಿ ಚಿತ್ರರಂಗದಿಂದ ಆಫರ್ ಹೋಗಿದೆ. ಕಳೆದ ಒಂದಷ್ಟು ವರ್ಷಗಳಿಂದ ಅವರನ್ನು ಸಿನಿಮಾಗಳಿಂದ ಬ್ಯಾನ್​ ಮಾಡಲಾಗಿತ್ತು. ಫವಾದ್ ಮಾತ್ರವಲ್ಲದೇ ಪಾಕಿಸ್ತಾನದ ಎಲ್ಲ ಕಲಾವಿದರು, ಗಾಯಕರು, ಸಂಗೀತಗಾರರನ್ನು ಬಾಲಿವುಡ್​ ಸಿನಿಮಾಗಳಿಂದ ದೂರವಿಡಲಾಗಿತ್ತು. ಆದರೆ ಈಗ ಫವಾದ್​ ಖಾನ್​ ಅವರಿಗೆ ಮತ್ತೆ ಬಾಲಿವುಡ್​ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹೊಸ ಸಿನಿಮಾದಲ್ಲಿ ಫವಾದ್​ ಖಾನ್​ಗೆ ಜೋಡಿಯಾಗಿ ವಾಣಿ ಕಪೂರ್ ಕಾಣಿಸಿಕೊಳ್ತಿದ್ದಾರೆ. 2016ರಲ್ಲಿ ಉರಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಜೊತೆ ಭಾರತದ ಸಂಬಂಧ ಸಂಪೂರ್ಣ ಹದಗೆಟ್ಟಿತು. ಆ ಘಟನೆ ಬಳಿಕ ಪಾಕಿಸ್ತಾನದ ಯಾರೊಂದಿಗೂ ಸಿನಿಮಾ, ಸೀರಿಯಲ್​, ಮ್ಯೂಸಿಕ್​ ವಿಡಿಯೋ ಇತ್ಯಾದಿ ಮನರಂಜನಾ ಕಾಂಟೆಂಟ್​ ಮಾಡಬಾರದು ಎಂದು ಭಾರತದ ನಿರ್ಮಾಪಕರು ನಿರ್ಧರಿಸಿದರು. ‘ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ’ವು ಪಾಕ್​ ಮಂದಿಯ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಣೆ ಮಾಡಿತ್ತು. ಬ್ಯಾನ್​ ಬಳಿಕ ಪಾಕಿಸ್ತಾನದ ಸೆಲೆಬ್ರಿಟಿಗಳಾದ ಫವಾದ್​ ಖಾನ್​, ಮಹೀರಾ ಖಾನ್​, ಅತೀಫ್​ ಅಸ್ಲಂ, ರಾಹತ್​ ಫತೇ ಅಲಿ ಖಾನ್​ ಮುಂತಾದವರು…

Read More

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನಟಿ ಕಂ ಮಾಡೆಲ್ ನತಾಶಾ ಸಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದ್ರೆ ಈ ಬಗ್ಗೆ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಬೇರೆ ಆಗಿದ್ದಾರೆ ಎನ್ನುವುದನ್ನು ಸೂಚಿಸುವಂಥ ಘಟನೆಗಳು ನಡೆಯುತ್ತಿವೆ. ವಿಶ್ವಕಪ್ ಗೆಲ್ಲಲು ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈಗ ಅವರು ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಪರೋಕ್ಷವಾಗಿ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ನತಾಶಾ ಕ್ರೈಸ್ತ ಧರ್ಮದವರು. ಹೀಗಾಗಿ ಅವರು ಆಗಾಗ ಏಸು ಹೇಳಿದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಬೈಬಲ್​ನಲ್ಲಿ ಏನು ಬರೆಯಲಾಗಿದೆ ಎಂಬುದನ್ನು ವಿವರಿಸುತ್ತಾರೆ. ಈಗ ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬೈಬಲ್​ನಲ್ಲಿ ಬರೆಯಲಾದ ಕೆಲವು ಸಾಲುಗಳನ್ನು ಓದಿದ್ದಾರೆ. ‘ಇಂದು ನಾನು ಕೆಲವು ಸಾಲುಗಳನ್ನು ಓದಲು ಉತ್ಸುಕನಾಗಿದ್ದೇನೆ. ಅದಕ್ಕಾಗಿಯೇ ನಾನು ಬೈಬಲ್…

Read More

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಬೇಕಿತ್ತು. ಆದರೆ, ಇಂದು ದರ್ಶನ್ ಅವರು ನೇರವಾಗಿ ಕೋರ್ಟ್​ಗೆ ಬರುತ್ತಿಲ್ಲ, ಬದಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಲಿದ್ದಾರೆ. ದರ್ಶನ್ ಅವರನ್ನು ಮೂರು ಭಾರಿ ಕಸ್ಟಡಿಗೆ ಪಡೆದಿದ್ದ ಪೊಲೀಸರು ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಈ ವೇಳೆ ಪೊಲೀಸರು ಸಾಕಷ್ಟು ಮಹತ್ವದ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಇಂದಿಗೆ ನ್ಯಾಯಾಂಗ ಬಂಧನ ಮುಗಿದಿದ್ದು ಇಂದು ಕೋರ್ಟ್ ಗೆ ಹಾಜರು ಪಡಿಸಬೇಕಿತ್ತು. ಆದ್ರೆ ದರ್ಶನ್ ಕೋರ್ಟ್ ಗೆ ಬರುವ ಬದಲು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ಅವರ ಪಾಲಿಗೆ ಮಹತ್ವದ ದಿನ ಆಗಿದೆ. ಅವರು ಜೈಲಿನಿಂದ ಹೊರ ಬರುತ್ತಾರೋ ಅಥವಾ ಜೈಲಿನಲ್ಲಿ ಉಳಿಯುತ್ತಾರೋ ಎಂಬುದು ತಿಳಿಯಲಿದೆ. ದರ್ಶನ್ ಕೋರ್ಟ್ ಗೆ ಬರ್ತಾರೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು, ಮಾದ್ಯಮದವರು ಮುಗಿ ಬೀಳುತ್ತಾರೆ. ಅಂತೆಯೇ…

Read More