Author: Author AIN

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆ ಖಂಡಿತವಾಗಿಯೂ ನಡೆಯಲಿದೆ ಮತ್ತು ವಿಕ್ರಮ್ ಸಿಂಘೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಯುನೈಟೆಡ್ ನ್ಯಾಷನಲ್ ಪಾರ್ಟಿಯ ಉಪಾಧ್ಯಕ್ಷ ರುವಾನ್ ವಿಜೆವರ್ಧನ್ ಖಚಿತಪಡಿಸಿದ್ದಾರೆ. ಚುನಾವಣಾ ಆಯೋಗ ಜುಲೈ 17ರ ಬಳಿಕ ಅಧ್ಯಕ್ಷೀಯ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸುವ ನಿರೀಕ್ಷೆಯಿದೆ. ಶ್ರೀಲಂಕಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಬಲ್ಲ ಸಾಮರ್ಥ್ಯವುಳ್ಳ ಏಕೈಕ ನಾಯಕ ವಿಕ್ರಮ್ ಸಿಂಘೆ. ಅವರು ತಮ್ಮ ಕೆಲಸದಿಂದ  ಅದನ್ನು ಸಾಭೀತುಪಡಿಸಿದ್ದಾರೆ ಎಂದು ರುವಾನ್ ಹೇಳಿದ್ದಾರೆ. ವಿಕ್ರಮ್ ಸೀಂಘೆ ಜುಲೈ 2022ರಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Read More

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಮಾನುಷಿ ಚಿಲ್ಲರ್ ಸದ್ಯ ಲವ್ ಮ್ಯಾಟರ್ ನಿಂದ ಸದ್ದು ಮಾಡ್ತಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಅವರ ಕಿರಿಯ ಸಹೋದರ ವೀರ್ ಪಹಾರಿಯಾ ಜೊತೆ ಮಾನುಷಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಜು.12ಕ್ಕೆ ಅನಂತ್ ಅಂಬಾನಿ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಈ ಜೋಡಿಯ ಸಂಗೀತ ಕಾರ್ಯಕ್ರಮ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ವೀರ್ ಜೊತೆ ಮಾನುಷಿ ಚಿಲ್ಲರ್ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರ ಬಗ್ಗೆ ಡೇಟಿಂಗ್ ಸುದ್ದಿ ಕೇಳಿ ಬರ್ತಿದೆ. ಸಂಗೀತ ಕಾರ್ಯಕ್ರಮಕ್ಕೆ ಇಬ್ಬರೂ ಲೈಟ್ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಪಲ್ ಡ್ರೆಸ್ ಕೋಡ್‌ನಲ್ಲಿ ಎಂಟ್ರಿ ಕೊಟ್ಟಿರೋದು ಚರ್ಚೆಯಾಗ್ತಿದೆ. ಇದು ನಿಜನಾ ಎಂದು ನಟಿ ಪ್ರತಿಕ್ರಿಯೆ ನೀಡುವವರೆಗೂ ಕಾಯಬೇಕಿದೆ. ಅಂದಹಾಗೆ, ಈ ಹಿಂದೆ ಉದ್ಯಮಿ…

Read More

ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಲಿದ್ದಾರೆ. ಮೋದಿ ಹಾಗೂ ಪುಟೀನ್ ಭೇಟಿಯನ್ನು ರಷ್ಯಾ ಅಧ್ಯಕ್ಷರ ಕಚೇರಿಯು ಈ ಭೇಟಿಯನ್ನು ಬಹಳ ಮುಖ್ಯವಾದ ಮತ್ತು ಪೂರ್ಣ ಪ್ರಮಾಣದ ಭೇಟಿ ಎಂದು ಬಣ್ಣಿಸಿದೆ. ಶೃಂಗಸಭೆ ಮಟ್ಟದ ಮಾತುಕತೆ ಉಭಯ ನಾಯಕರ ನಡುವೆ ನಡೆಯಲಿದ್ದು, ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಯನ್ನು ಪಶ್ಚಿಮದ ದೇಶಗಳು ಹೊಟ್ಟೆಕಿಚ್ಚಿನಿಂದ ನೋಡುತ್ತಿವೆ ಎಂದು ಕ್ರೆಮ್ಲಿನ್ ಹೇಳಿದೆ. 22 ನೇ ಭಾರತ- ರಷ್ಯಾ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ರಷ್ಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಜು.08 ರಿಂದ 9 ವರೆಗೆ ಪ್ರಧಾನಿ ಮೋದಿ ಮಾಸ್ಕೋದಲ್ಲಿರಲಿದ್ದಾರೆ. ಫೆಬ್ರವರಿ 2022 ರಲ್ಲಿ ರಷ್ಯ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದ ಬಳಿಕ ಪ್ರಧಾನಿ ಮೋದಿ ರಷ್ಯಾಗೆ ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ. ಉಭಯ ನಾಯಕರು ತಮ್ಮ ದೇಶಗಳ ನಡುವಿನ ಬಹುಮುಖಿ ಸಂಬಂಧಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ ಮತ್ತು ಪರಸ್ಪರ ಹಿತಾಸಕ್ತಿಯ ಸಮಕಾಲೀನ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು…

Read More

ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಪಾಯಲ್ ರಜಪೂತ್ ತೆಲುಗಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾವೊಂದರ ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ ಪ್ರಭಾಸ್‌ಗಾಗಿ ಏನು ಬೇಕಾದ್ರೂ ಮಾಡ್ತೀನಿ ಎಂದು ಹೇಳಿದ್ದಾರೆ. ಚಿತ್ರರಂಗದ  ನೆಚ್ಚಿನ ನಟ, ನಟಿಯರ ಬಗ್ಗೆ ಮಾತನಾಡಿದ ಪಾಯಲ್, ಇಲಿಯಾನಾ ಮತ್ತು ಅನುಷ್ಕಾ ಶೆಟ್ಟಿ ಎಂದರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ. ಅಲ್ಲದೇ, ಪವನ್ ಕಲ್ಯಾಣ್ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತೇನೆ. ಅವಕಾಶ ಸಿಕ್ಕರೆ ಮಹೇಶ್ ಬಾಬು, ಪ್ರಭಾಸ್ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಪ್ರಭಾಸ್ ನನ್ನ ನೆಚ್ಚಿನ ವ್ಯಕ್ತಿ ಎಂದಿದ್ದಾರೆ. ಇನ್ನೂ ಪ್ರಭಾಸ್‌ಗೆ ನಾನು ಅಡುಗೆ ಮಾಡಿ ಬಡಿಸಲು ಇಷ್ಟಪಡುತ್ತೇನೆ. ಅಷ್ಟೇ ಅಲ್ಲ, ಅವರು ಏನು ಕೇಳುತ್ತಾರೋ ಅದನ್ನು ಮಾಡಿ ಕೊಡಲು ಸಿದ್ಧ ಎಂದಿದ್ದಾರೆ. ನನಗೆ ರಾಜ್ಮಾ ರೈಸ್ ತುಂಬಾ ಇಷ್ಟ. ಅದನ್ನು ವಿಶೇಷವಾಗಿ ಅಡುಗೆ ಮಾಡಿ ಪ್ರಭಾಸ್‌ಗೆ ನನ್ನ ಕೈಯಿಂದ ತಿನ್ನಿಸಲು ಬಯಸುತ್ತೇನೆ. ಅಂತಹ ಅವಕಾಶ ಬಂದರೆ ನಾನು ಅದನ್ನು…

Read More

ಇರಾನ್ ಅಧ್ಯಕ್ಷೀಯ ಚುನಾವಣೆ ಮುಕ್ತ ಮತ್ತು ನ್ಯಾಯೋಚಿತವಾಗಿಲ್ಲ. ಸದ್ಯ ನಡೆದಿರುವ ಚುನಾವಣೆ  ಮಾನವ ಹಕ್ಕುಗಳಿಗೆ ಸಂಬಂಧಿಸಿ ಇರಾನ್ ನ ನಿಲುವಿನಲ್ಲಿ ಬದಲಾವಣೆ ತರುವ ನಿರೀಕ್ಷೆಯಿಲ್ಲ ಎಂದು ಅಮೆರಿಕ ಟೀಕಿಸಿದೆ. ಇರಾನಿನ ಅಧ್ಯಕ್ಷೀಯ ಚುನಾವಣೆ ಮುಕ್ತ ಮತ್ತು ನ್ಯಾಯೋಚಿತವಾಗಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನತೆ ಮತದಾನದಲ್ಲಿ ಪಾಲ್ಗೊಂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಚುನಾವಣೆ ಇರಾನಿನ ನಿಲುವಿನಲ್ಲಿ ಮೂಲಭೂತ ಬದಲಾವಣೆಗೆ ಕಾರಣವಾಗುತ್ತದೆ ಅಥವಾ ಅದರ ನಾಗರಿಕರ ಮಾನವ ಹಕ್ಕುಗಳಿಗೆ ಹೆಚ್ಚಿನ ಗೌರವವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ. ಅಭ್ಯರ್ಥಿಗಳು ಸ್ವತಃ ಹೇಳುವಂತೆ ಇರಾನಿನ ನೀತಿಯನ್ನು ಸರ್ವೋಚ್ಛ ಮುಖಂಡರು ರೂಪಿಸುತ್ತಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು ಚುನಾವಣೆಯು ಇರಾನಿನ ಕುರಿತ ಅಮೆರಿಕದ ನಿಲುವಿನ ಮೇಲೆಯೂ ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ ಎಂದಿದೆ.

Read More

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಝಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಸೋನಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಸೋನಾಕ್ಷಿ ಗರ್ಭಿಣಿಯಾಗಿದ್ದಾರೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದು ಮದುವೆ ಆದವರು ಗರ್ಭಿಣಿಯಾದರೆ ಮಾತ್ರ ಆಸ್ಪತ್ರೆಗೆ ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ. ಮದುವೆಯಾದ ಬಳಿಕ ನಾವು ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಜನರು ನಾನು ಗರ್ಭಿಣಿ ಎಂದು ಭಾವಿಸುತ್ತಾರೆ ಎಂದು ನಟಿ ಸೋನಾಕ್ಷಿ ಸಿನ್ಹಾ ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಮದುವೆಯ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ನಟಿ, ಏಳು ವರ್ಷಗಳ ಹಿಂದೆ 2017ರ ಜೂನ್ 23ರಂದು ಇದೇ ದಿನ ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಅದರ ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವೆ. ಇಂದು ಆ ಪ್ರೀತಿ ನಮಗೆ ಮಾರ್ಗದರ್ಶನ ನೀಡಿದೆ. ಎಲ್ಲಾ ಸವಾಲುಗಳು ಮತ್ತು ವಿಜಯಗಳ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ದರ್ಶನ್ ಅವರನ್ನು ನೆನೆದು ಸ್ಯಾಂಡಲ್ ವುಡ್ ನ ಹಿರಿಯ ನಟ ಟೆನ್ನಿಸ್ ಕೃಷ್ಣ ಕಣ್ಣೀರು ಹಾಕಿದ್ದಾರೆ. ‘ದರ್ಶನ್ ಚಿತ್ರರಂಗಕ್ಕೆ ಬರುವ ಮುನ್ನ ಪರಿಚಯ. ಅದಾದ ಬಳಿಕ ಪಿಠೀಲು ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ನೋಡಿದೆ. ನಂತರ ಕತ್ರಿಗುಪ್ಪೆಲಿ ಶೂಟಿಂಗ್ ಟೈಂ ನೋಡಿದ್ದೆ. ದರ್ಶನ್ ನನ್ನ ಪಕ್ಕ ಕೈ ಕಟ್ಕೊಂಡು ನಿಂತಿದ್ರು. ಹಿರಿಯ ಕಲಾವಿದರಿಗೆ ಗೌರವ ಕೊಡ್ತಿದ್ರು. ನನ್ಗೆ ತುಂಬಾ ಅವಮಾನ ಮಾಡ್ತಿದ್ದಾರೆ ಅಂತಾ ದರ್ಶನ್ ಹೇಳಿದ್ರು. ನಾನು ಅವತ್ತು ಒಂದು ಮಾತ್ ಹೇಳಿದೆ. ಈವಾಗ ಕೈಕಟ್ಕೊಂಡು ನಿಲ್ಲಿ.. ಇವತ್ತು ಅವಮಾನ ಮಾಡಿದವ್ರು ನಿಮ್ಮುಂದೆ ಕೈಕಟ್ಕೊಂಡು ನಿಲ್ಲುವ ಟೈಂ ಬರುತ್ತೆ’ ಎಂದು ಹೇಳಿದ್ದೆ ಎಂದು ಟೆನ್ನಿಸ್ ಕೃಷ್ಣ ನೆನಪಿಸಿಕೊಂಡಿದ್ದಾರೆ. ದರ್ಶನ್ ಗೆ ‘ಸ್ಟಾರ್ ಗಿರಿ ಬಂದ ಮೇಲೂ ಬದಲಾಗಲಿಲ್ಲ. ಈ ಕೇಸ್ ನಲ್ಲಿ ಯಾಕಾಯ್ತು ಏನಾಯ್ತು ನನ್ಗೆ ಗೊತ್ತಿಲ್ಲ. ದರ್ಶನ್ ಬಹಳಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ. ವಿಷ್ಣು…

Read More

ಕಳೆದ ನಾಲ್ಕು ತಿಂಗಳಿಂದ ಎಕ್ಸ್( ಟ್ವಿಟರ್) ನಿಷೇಧಿಸಿರುವ ಪಾಕಿಸ್ತಾನ ಇದೀಗ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು 6 ದಿನಗಳ ಕಾಲ ಬ್ಯಾನ್ ಮಾಡಿದೆ. ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾಗೆ ಜುಲೈ 13ರಿಂದ 18ರ ವರೆಗೆ ನಿರ್ಬಂಧ ವಿಧಿಸಲಾಗಿದೆ. ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ವಿಡಿಯೋ, ಫೋಟೋಗಳು, ಸಂದೇಶ ಹರಡದಂತೆ ತಡೆಯಲು ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ. ಪಾಕಿಸ್ದಾನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಸೋಶಿಯಲ್ ಮೀಡಿಯ ಬ್ಯಾನ್ ಪ್ರಸ್ತಾವನೆ ಸಲ್ಲಿಸಿದ್ದರು. ಪಂಜಾಬ್ ಪ್ರಾಂತ್ಯದಲ್ಲಿ ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ಸಂದೇಶಗಳು, ವಿಡಿಯೋಗಳನ್ನು ಹರಡುವುದು ಹೆಚ್ಚಾಗುತ್ತಿದೆ. ಇದರಿಂದ ರಂಜಾನ್ ತಿಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ಪವಿತ್ರ ತಿಂಗಳಲ್ಲಿ ಈ ರೀತಿಯ ಘಟನೆಗೆ ಅವಕಾಶ ನೀಡದಂತೆ ತಡೆಯಲು ಈ ಕ್ರಮಕೈಗೊಂಡಿದೆ. ಜುಲೈ4ರ ತಡ ರಾತ್ರಿ ಪಂಜಾಬ್ ಪ್ರಾವಿನ್ಸ್ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ಮರಿಯಮ್ ನವಾಜ್ ತಮ್ಮ ಅಂಕಲ್, ಪ್ರಧಾನಿ ನವಾಜ್ ಷರೀಫ್‌ಗೆ…

Read More

ಬ್ರಿಟನ್ ಸಂಸತ್‌ಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರ ಬಿದ್ದಿದೆ. ಇದರಲ್ಲಿ ದಾಖಲೆಯ ‍ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಸುಮಾರು 26 ಮಂದಿ ಭಾರತ ಮೂಲದವರು ಗೆಲುವು ಸಾಧಿಸಿದ್ದಾರೆ. ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರು ಯಾಕ್‌ಶೈರ್ನ ರಿಚ್‌ಮಂಡ್‌ ಹಾಗೂ ನಾರ್ತಲೆಟ್ರೊನ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳಾದ ಸುಯೆಲ್ಲಾ ಬ್ರೇವ್‌ಮೆನ್ ಹಾಗೂ ಪ್ರೀತಿ ಪಟೇಲ್ ಅವರು ಜಯಶಾಲಿಗಳಾಗಿದ್ದಾರೆ. ಸುನಕ್ ಸಂಪುಟದದಲ್ಲಿ ಸಚಿವೆಯಾಗಿದ್ದ ಗೋವಾ ಮೂಲದ ಕ್ಲಾರಿ ಕುಟಿನ್ಹೊ, ಗಗನ್ ಮಹೀಂದ್ರಾ, ಶಿವಾನಿರಾಜ ಅವರು ಜಯಭೇರಿ ಭಾರಿಸಿದ್ದಾರೆ. ಲೇಬರ್ ಪಕ್ಷದಿಂದ ಅತಿ ಹೆಚ್ಚು ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಫೆಲ್ತಮ್ ಹಾಗೂ ಹೆಸ್ಟನ್‌ ಕ್ಷೇತ್ರದಿಂದ ಸೀಮಾ ಮಲ್ಹೋತ್ರಾ ಸುಲಭ ಗೆಲುವು ದಾಖಲಿಸಿದ್ದಾರೆ. ವಲ್‌ಸಲ್‌ ಹಾಗೂ ಬ್ಲಾಕ್ಸ್‌ವಿಚ್‌ನಿಂದ ವಲೇರಿ ವಾಜ್‌, ವಿಗನ್‌ನಲ್ಲಿ ಲಿಸಾ ನ್ಯಾಂಡಿಯವರು ಗೆದ್ದಿದ್ದಾರೆ. ಬ್ರಿಟಿಷ್ ಸಿಖ್‌ ಸಂಸದರಾದ ಪ್ರೀತ್ ಕೌರ್‌ ಗಿಲ್‌, ತನ್‌ಮನ್‌ಜೀತ್‌ ಸಿಂಗ್ ದೇಶಿ ಅವರು ಕ್ರಮವಾಗಿ ಬರ್ಮಿಂಗ್‌ಹ್ಯಾಮ್ ಎಜ್‌ಬಾಸ್ಟನ್‌ ಹಾಗೂ ಸ್ಲೋ ಕ್ಷೇತ್ರದಿಂದ…

Read More

ಬ್ರಿಟನ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ರಿಷಿ ಸುನಕ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ಬಂಕಿಂಗ್‌ಹ್ಯಾಮ್‌ ಅರಮನೆ ಅಧಿಕೃತ ಮಾಹಿತಿ ನೀಡಿದೆ. ಕಿಂಗ್‌ ಚಾರ್ಲ್ಸ್‌ ಅವರನ್ನು ಭೇಟಿಯಾದ ಸುನಕ್ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸುನಕ್ ಅವರ ರಾಜೀನಾಮೆಯನ್ನು ಚಾರ್ಲ್ಸ್‌ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಬ್ರಿಟನ್‌ನ ನೂತನ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ. ಸ್ಟಾರ್ಮರ್‌ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಮುನ್ನವೇ ಪಕ್ಷ ವಿಜಯೋತ್ಸವ ಆಚರಿಸಿದೆ. ಬ್ರಿಟನ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಲೇಬರ್ ಪಕ್ಷದ ಅಭ್ಯರ್ಥಿ ಕೀರ್ ಸ್ಟಾರ್ಮರ್ ಭಾರತ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಧನಾತ್ಮಕ ಸಹಯೋಗವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಇದೇ ವೇಳೆ ನಿರ್ಗಮಿತ ಪ್ರಧಾನಿ ರಿಷಿ ಸುನಕ್‌ ಅವರ ಬಗ್ಗೆ ಬರೆದುಕೊಂಡ ಮೋದಿ, ಸುನಕ್‌…

Read More