ಉಡುಪಿ: ಕಳೆದ ಸೋಮವಾರ ಉಡುಪಿಯ ಹೆಬ್ರೆಯ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ಆಗಿದ್ದ, ನಕ್ಸಲ್ ಮುಖಂಡ ವಿಕ್ರಂ ಗೌಡ ಮರಣೋತ್ತರ ಪರೀಕ್ಷೆ ನಡೆದಿದೆ. ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಪರೀಕ್ಷೆಯ ನಂತರ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ. ಮುಂಜಾನೆ 5:00 ವೇಳೆ ಗೆ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕಾರ್ಕಳ ತಾಲೂಕಿನ ನ್ಯಾಯಾಧೀಶರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲಾಗಿದೆ. ಇಂದು ಬೆಳಗ್ಗೆ ಕುಟುಂಬದವರಿಗೆ ವಿಕ್ರಂ ಗೌಡ ಮೃತದೇಹವನ್ನು ಹಸ್ತಾಂತರಿಸಲಾಗಿದೆ. https://ainlivenews.com/i-am-not-cheap-enough-to-be-sold-for-50-100-crores-i-am-expensive/
Author: Author AIN
ಬೆಂಗಳೂರು: ರಾಜಾಜಿನಗರದ ಇವಿ ಬೈಕ್ ಶೋರೂಂನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಯುವತಿಯ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬರ್ತ್ ಡೇ ಆಚರಿಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದ ಮಂಗಳವಾರ ಬೈಕ್ ಶೋರಂನಲ್ಲಿ ಬೆಂಕಿ ಅವಘಡದಲ್ಲಿ ಮೃತ ಪಟ್ಟ ಯುವತಿ ಪ್ರಿಯಾ ಬದುಕಿದ್ದರೆ ಇಂದು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ಆದ್ರೆ ವಿಧಿಯಾಟ.. ಆಕೆಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾಳೆ. https://ainlivenews.com/short-circuit-a-burnt-down-electric-scooter-showroom/ ತನ್ನ ಮಗಳ ಸಾವಿನ ಬಗ್ಗೆ ಮಾತನಾಡಿರುವ ತಂದೆ ಆರ್ಮುಗಂ, ಇವತ್ತು ಬರ್ತ್ ಡೇ ಇತ್ತು, ಬಟ್ಟೆಯೆಲ್ಲಾ ತಂದಿಟ್ಟಿದ್ವಿ . ಕೇಕ್ ತರೋದಕ್ಕೆ ಎಲ್ಲಾ ರೆಡಿ ಮಾಡ್ಕೊಂಡಿದ್ವಿ. ಆದ್ರೆ ಹಿಂಗಾಗಿದೆ ನಂಬೋಕಾಗ್ತಿಲ್ಲ. ನನ್ನ ಮಗಳು ನಮ್ಮ ಮನೆ ಮಹಾಲಕ್ಷ್ಮಿ. ಏನೇನೋ ಕನಸು ಕಂಡಿದ್ಳು. ಮನೆ ಜವಾಬ್ದಾರಿ ಹೊತ್ತಿದ್ಳು. ಕಂಪನಿ ಕಷ್ಟ ಅಂದಾಗ ಕಂಪನಿಗೋಸ್ಕರ ದುಡಿದ್ಳು. ಇಪ್ಪತ್ತು ಜನ ಇರೋ ಕಂಪನಿಗೆ ಹೆಡ್ ಆಗಿದ್ಳು. ಇಪ್ಪತ್ತು ಜನರಲ್ಲಿ ನನ್ನ ಮಗಳು ಮಾತ್ರ ಸತ್ತೋದ್ಳು ಅಂತಿದ್ದಾರೆ. ಹೇಗೆ ಹಂಗಾಗುತ್ತೆ. ಇಷ್ಟೊತ್ತಾದ್ರು, ನನ್ನ ಮಗಳನ್ನ ನೋಡಿಲ್ಲ ಸಾರ್.…
ಎ ಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಬಾನು ಏಕಾಏಕಿ ಡಿವೋರ್ಸ್ ಘೋಷಿಸಿ ಪ್ರತಿಯೊಬ್ಬರಿಗೂ ಶಾಕ್ ನೀಡಿದ್ದಾರೆ. 29 ವರ್ಷಗಳ ದಾಂಪತ್ಯ ಜೀವನಕ್ಕೆ ಜೋಡಿ ಕೊನೆ ಹಾಡಿದ್ದಾರೆ. ಬೇರೆ ಬೇರೆಯಾಗುತ್ತಿರುವ ಬಗ್ಗೆ ಆಗುವ ರೆಹಮಾನ್ ಹಾಗೂ ಸೈರಾ ತಿಳಿಸಿದ್ದಾರೆ. ಈ ಮಧ್ಯೆ ರೆಹಮಾನ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಸುಮಾರು ಮೂರು ದಶಕಗಳ ಕಾಲ ಸಂಸಾರ ನಡೆಸಿದ್ದ ರೆಹಮಾನ್ ಹಾಗೂ ಸೈರಾ ಮಧ್ಯೆ ಪ್ರೀತಿ ಹಾಗೂ ಹೊಂದಾಣಿಕೆ ಇತ್ತು. ಆದರೆ, ಈ ಹೊಂದಾಣಿಕೆ ಈಗ ಮುರಿದಿದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ‘1994ರಲ್ಲಿ ನಾನು ಸುಮಾರು ಇಪ್ಪತ್ತೇಳು ವರ್ಷದವನಾಗಿದ್ದೆ. ನಾನು ಮದುವೆಯಾಗಲು ನಿರ್ಧರಿಸಿದೆ. ನನಗೆ ವಯಸ್ಸಾಯಿತು ಎಂದು ಅನಿಸುತ್ತಿತ್ತು. ನಾನು ಯಾವಾಗಲೂ ತುಂಬಾ ನಾಚಿಕೆಪಡುತ್ತಿದ್ದೆ ಮತ್ತು ಹುಡುಗಿಯರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವು ಕೆಲಸ ಮಾಡುವಾಗ ನನ್ನ ಸ್ಟುಡಿಯೋದಲ್ಲಿ ನಾನು ಅನೇಕ ಯುವ ಮಹಿಳಾ ಗಾಯಿಕಿಯಕರನ್ನು ಭೇಟಿಯಾದೆ. ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಅಲ್ಲಿ ಇದ್ದ ಯಾರನ್ನೂ…
ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ಮೂಲಕ 29 ವರ್ಷಗಳ ದಾಂಪತ್ಯ ಜೀವನ ಕೊನೆಯಾಗಿದೆ. ಈ ವಿಚಾರವನ್ನು ಸೈರಾ ಬಾನು ಅವರು ಖಚಿತಪಡಿಸಿದ್ದರು. ಈಗ ಎಆರ್ ರೆಹಮಾನ್ ಕೂಡ ಈ ಬಗ್ಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ರೆಹಮಾನ್ ಅವರು, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ. 1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ವಿವಾಹ ಮದುವೆಯಾದರು. ಮನೆಯವರು ನೋಡಿದ ಹುಡುಗಿಯನ್ನೇ ರೆಹಮಾನ್ ಕೈ ಹಿಡಿದಿದ್ದರು. ಮದುವೆ ಆದಾಗ ರೆಹಮಾನ್ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ರೆಹಮಾನ್ ಅವರು…
ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ ʼMYTH FXʼ ಸ್ಟುಡಿಯೋ ಆರಂಭವಾಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಸುಸಜ್ಜಿತ ವಿ ಎಫ್ ಎಕ್ಸ್ ಸ್ಟುಡಿಯೋವನ್ನು ಉದ್ಘಾಟಿಸಿ ಶುಭ ಕೋರಿದರು. ಸ್ಟುಡಿಯೋ ಮಾಲಿಕ ಕಮಲ್ ಮಾತನಾಡಿ, ವಿಡಿಯೋ ಕಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ನಾನು ಕವಿ ಕೂಡ. ನನ್ನ ಎರಡು ಕವನ ಸಂಕಲನಗಳನ್ನು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಬಿಡುಗಡೆ ಮಾಡಿದ್ದಾರೆ. ಆನಂತರ ನಟನಾಗುವ ಆಸೆ ಮೂಡಿತ್ತು. ಇತ್ತೀಚೆಗೆ ತೆರೆಕಂಡ “ದಿ ಸೂಟ್” ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಅನುಕೂಲವಾಗುವಂತಹ ಏನಾದರೊಂದು ಕೆಲಸ ಮಾಡಬೇಕೆಂದು ನನಗೆ ಅನಿಸುತ್ತಲೇ ಇತ್ತು. ಆ ಸಮಯಕ್ಕೆ ನನಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ಲೋಕೇಶ್ ಹಾಗೂ ಮಾರುತಿ ಎಂಬ ನುರಿತ ತಂತ್ರಜ್ಞರು ಸಿಕ್ಕರು. ನಾವೆಲ್ಲಾ ಸೇರಿ ಈ “MYTH FX” ಸ್ಟುಡಿಯೋವನ್ನು…
ತುಮಕೂರು: ಭೀಕರ ಅಪಘಾತದಲ್ಲಿ ತಂದೆ ಮಗ ಸ್ಥಳದಲ್ಲೇ ಸಾವನಪ್ಪಿದ್ದಾರೆ. ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಕಡಬಗೆರೆ ಬ್ರಿಡ್ಜ್ ಬಳಿ ಅವಘಡ ನಡೆದಿದ್ದು, ಗುರುರಾಜು(35) , ಪುತ್ರ ರಿಷಾಂಕ್ (2) ಮೃತ ದುರ್ದೈವಿಗಳು. https://ainlivenews.com/online-scam-student-cheated-%e2%82%b93-25-lakh-file-a-complaint/ ಬೆಳಗ್ಗೆ 6.30ರ ಸುಮಾರಿಗೆ ಮುಂಡರಿಗಿಯಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ಮುಂದೆ ನಿಂತಿದ್ದ ಸಿಮೆಂಟ್ ಬಲ್ಕರ್‌ಗೆ ಡಿಕ್ಕಿ ಹೊಡೆದಿದ್ದು, ತಂದೆ-ಮಗ ಸಾವನ್ನಪ್ಪಿದ್ದಾರೆ. ಪತ್ನಿ ಹರ್ಷಿತಾ (28) ಸ್ಥಿತಿ ಗಂಭೀರವಾಗಿದ್ದು, ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ರಿಯೋ ಜಿ-20 ಶೃಂಗಸಭೆಯ ಪಾರ್ಶ್ವದಲ್ಲಿ ಭೇಟಿ ಮಾಡಿದ್ದಾರೆ. ಉಭಯ ದೇಶಗಳ ವಿದೇಶಾಂಗ ಸಚಿವರುಗಳು ಭೇಟಿ ಮಾಡಿ, ಗಡಿಗಳಲ್ಲಿನ ಸೇನಾ ಹಿಂತೆಗೆತದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಚೀನಾ- ಭಾರತದ ನಡುವೆ ನೇರ ವಿಮಾನ ಸಂಪರ್ಕ ಆರಂಭಿಸುವುದು, ಮಾನಸ ಸರೋವರ ಯಾತ್ರೆಯನ್ನು ಪುನಾರಂಭ ಮಾಡುವುದರ ಬಗ್ಗೆಯೂ ವಾಂಗ್ ಯಿ ಹಾಗೂ ಜೈಶಂಕರ್ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜೈಶಂಕರ್ ಜೊತೆಗಿನ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಇದು ಭಾರತ- ಚೀನಾ ಸಂಬಂಧದಲ್ಲಿ ಹೊಸ ಆರಂಭದ ಹಂತ” ಎಂದು ಬಣ್ಣಿಸಿದೆ. ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನ ಎರಡು ವಿವಾದಿತ ಪ್ರದೇಶಗಳಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಭಯ ದೇಶಗಳ ನಡುವಿನ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ ಮತ್ತು ಇದು ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆಗೆ ಕೊಡುಗೆ ನೀಡಿದೆ ಎಂದು ಸಚಿವರು ಗಮನಿಸಿದ್ದಾರೆ. 2020 ರಲ್ಲಿ…
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಎರಡೂ ಕಡೆಯವರು ಭೇಟಿಯ ಸಾಧ್ಯತೆಯನ್ನು ನೋಡುತ್ತಿದ್ದಾರೆ ಆದರೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈನಲ್ಲಿ ಮಾಸ್ಕೋದಲ್ಲಿ ಉಭಯ ನಾಯಕರು ಶೃಂಗಸಭೆಯ ಮಾತುಕತೆ ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಕಳೆದ ಮಂಗಳವಾರ, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಭಾರತದ ಹಿರಿಯ ಸಂಪಾದಕರೊಂದಿಗಿನ ವೀಡಿಯೊ ಸಂವಾದದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಉಲ್ಲೇಖಿಸಿದರು ಮತ್ತು ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆದರೆ ಕ್ರೆಮ್ಲಿನ್ ವಕ್ತಾರರು ಯಾವುದೇ ನಿರ್ದಿಷ್ಟ ದಿನಾಂಕಗಳನ್ನು ಘೋಷಿಸಿಲ್ಲ ಅಥವಾ ಭೇಟಿಯ ನಿರ್ಣಾಯಕ ಘೋಷಣೆಯನ್ನು ಮಾಡಿಲ್ಲ.
90ರ ದಶಕದಲ್ಲಿ ಯುವಕರ ಮೆಚ್ಚಿನ ಬೈಕ್ ಆಗಿದ್ದ ಯಮಹಾ ಆರ್‌ಎಕ್ಸ್ 100 ಮತ್ತೆ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತಿದ್ದ ಯಮಹಾ RX100 ಬೈಕ್‌ನ ಸೌಂಡ್ ಮತ್ತೆ ರಸ್ತೆಗಳಲ್ಲಿ ಕೇಳಿಸಲಿದೆ. ಆರ್‌ಎಕ್ಸ್ 100 ರೀಲಾಂಚ್ ಮಾಡುವ ಬಗ್ಗೆ ಅಧಿಕೃತವಾಗಿ ತಿಳಿಸಿದ್ದ ಕಂಪನಿ ದಿನಾಂಕವನ್ನೂ ಪ್ರಕಟ ಮಾಡಿದೆ. ಇದರ ನಡುವೆ ಬೈಕ್‌ನ ಬೆಲೆ ಎಷ್ಟಿರಬಹುದು ಎನ್ನುವ ಅಂದಾಜನ್ನೂ ನೀಡಲಾಗಿದೆ. ಈ ಮೋಟಾರ್‌ಸೈಕಲ್ ಅನ್ನು ಒಂದು ವರ್ಷದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿತ್ತು, ಆದರೆ ಈಗ ಕಂಪನಿಯು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಇದನ್ನು ಮತ್ತೆ ಪ್ರಾರಂಭಿಸಲು ಸಿದ್ಧವಾಗಿದೆ. ಯಮಹಾ RX 100 ಬೈಕ್ ನಲ್ಲಿ ಎಲ್ಲಾ ಸುಧಾರಿತ ಮತ್ತು ಆಧುನಿಕ ವೈಶಿಷ್ಟ್ಯಗಳು ಇರಲಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಯಮಹಾ RX 100 ಬೈಕ್ ಡಿಜಿಟಲ್ ಉಪಕರಣ, ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಸ್ಪೀಡೋಮೀಟರ್, ಓಡೋಮೀಟರ್, ಫ್ಯೂಯಲ್ ಗೇಜ್, ಹೆಡ್‌ಲೈಟ್ ಎಲ್‌ಇಡಿ ಟೈಲ್, ಎಲ್‌ಇಡಿ ಹೆಡ್‌ಲೈಟ್ ಡಿಆರ್‌ಎಲ್‌ಗಳಂತಹ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಹಳೆಯ…
ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದ ಹಾಗೂ ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಕಟ್ಲೆʼ ಚಿತ್ರದ ಮೊದಲ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ʼಯಾರೋ ನಾ ಕಾಣೆ. ಚಂದಾಗೌಳೆ ಶಾಣೆʼ ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ನಾನು ಆಭಾರಿ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಶ್ರೀವಿದ ಅವರು “ಕಟ್ಲೆ” ಚಿತ್ರಕ್ಕೆ ಅದ್ಭುತವಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಬರೆದು ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು…