ದುಬೈ: ಐಪಿಎಲ್-2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಿದ್ದಾರೆ.
2 ಕೋಟಿ ಮೂಲ ಬೆಲೆಯೊಂದಿಗೆ ಮಿಚೆಲ್ ಸ್ಟಾರ್ಕ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಾರಕ ವೇಗಿ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಕೆಕೆಆರ್ ಹಾಗೂ ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಕೋಲ್ಕತ್ತಾ ನೈಟ್ರೈಡರ್ಸ್ (KKR) ಪಾಲಾಗಿದ್ದಾರೆ.
ಈ ಮೂಲಕ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಸದ್ಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ನಂತರದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ, ಸ್ಯಾಮ್ ಕರ್ರನ್ 18.50 ಕೋಟಿ, ಕ್ಯಾಮರೂನ್ ಗ್ರೀನ್ 17.50 ಕೋಟಿಗೆ ಬಿಕರಿಯಾಗಿದ್ದರು.
ಆಸಿಸ್ ಆಟಗಾರರ ಮೇಲೆ 50 ಕೋಟಿ
ವಿಶ್ವ ಚಾಂಪಿಯನ್ ಆಸಿಸ್ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹಣದ ಮಳೆ ಸುರಿಸಿದೆ. ಕೇವಲ ಮೂವರು ಆಟಗಾರರಿಗೆ 50 ಕೋಟಿ ರೂ. ನೀಡಲಾಗಿದೆ.
ಮಿಚೆಲ್ ಸ್ಟಾರ್ಕ್- 24.75 ಕೋಟಿ (ಕೆಕೆಆರ್)
ಪ್ಯಾಟ್ ಕಮ್ಮಿನ್ಸ್- 20.50 ಕೋಟಿ (ಹೈದರಾಬಾದ್)
ಟ್ರಾವಿಸ್ ಹೆಡ್- 6.80 ಕೋಟಿ (ಹೈದರಾಬಾದ್)