ಇತ್ತೀಚೆಗೆ ಪ್ರತಿಯೊಂದು ಮಕ್ಕಳ ಕೈಯಲ್ಲಿ ಮೊಬೈಲ್ ಇರುತ್ತದೆ. ಇದೀಗ ಆಸ್ಟ್ರೇಲಿಯಾ ಸರ್ಕಾರ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಹೆಜ್ಜೆ ಮುಂದಿರಿಸಿದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಸಂಸತ್ನ ಮೇಲ್ಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಅಂಗೀಕರಿಸಿದೆ.
ಪ್ರಧಾನಿ ಅಂಥೋನಿ ಅಲ್ಬಾನೀಸ್ ಅವರ ಲೇಬರ್ ಪಕ್ಷದ ಸರಕಾರದ ಬೆಂಬಲ ಪಡೆದಿರುವ ಮಸೂದೆಯ ಪರ ಮೇಲ್ಮನೆಯಲ್ಲಿ 102 ಸದಸ್ಯರು ಮತ ಚಲಾಯಿಸಿದರೆ 13 ಸದಸ್ಯರು ವಿರೋಧಿಸಿದರು. ಗೂಗಲ್ ಮತ್ತು ಮೇಟಾದಂತಹ ಅಗ್ರಗಣ್ಯ ತಂತ್ರಜ್ಞಾನ ಸಂಸ್ಥೆಗಳ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ. ಇದೀಗ ಮಸೂದೆಯನ್ನು ಸೆನೆಟ್ನಲ್ಲಿ ಮಂಡಿಸಲಾಗುತ್ತದೆ.