ಆಸ್ಟ್ರೇಲಿಯಾ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಅಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ.
ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಜಯದ ಹಳಿಗೆ ಮರಳಿರುವ ಆಸ್ಟ್ರೇಲಿಯಾ ಆಡಿರುವ 7 ಪಂದ್ಯಗಳಲ್ಲಿ 10 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನೊಂದು ಜಯದೊಂದಿಗೆ ಅಧಿಕೃತವಾಗಿ ಉಪಾಂತ್ಯಕ್ಕೆ ಲಗ್ಗೆಯಿಡಲಿದೆ. ಇತ್ತ ಅಘಾನಿಸ್ತಾನ ತಂಡ ಇಷ್ಟೇ ಪಂದ್ಯಗಳನ್ನಾಡಿ 4ರಲ್ಲಿ ಗೆಲುವು ದಾಖಲಿಸಿ 8 ಅಂಕದೊಂದಿಗೆ ಆರನೇ ಸ್ಥಾನದಲ್ಲಿದೆ. ಮಿಚೆಲ್ ಮಾರ್ಷ್ ಆಗಮನ ಆಸೀಸ್ ತಂಡದ ಬಲ ಹೆಚ್ಚಿಸಿದೆ. ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಭರ್ಜರಿ ಾರ್ಮ್ನಲಿದ್ದು, ಬ್ಯಾಟಿಂಗ್ ಸ್ನೇಹಿ ವಾಂಖೆಡೆಯಲ್ಲಿ ರನ್ ಹೊಳೆ ಹರಿಸುವ ನಿರೀಕ್ಷೆಯಲ್ಲಿದೆ. ಆದರೆ ಮಧ್ಯಮ ಸರದಿಯ ಬ್ಯಾಟರ್ಗಳು ಟೂರ್ನಿಯಲ್ಲಿ ಇದುವರೆಗೂ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಸ್ಟೀವನ್ ಸ್ಮಿತ್ ಅಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬೌಲಿಂಗ್ನಲ್ಲಿ ಸ್ಪಿನ್ನರ್ ಆಡಂ ಜಂಪಾ 19 ವಿಕೆಟ್ ಉರುಳಿಸಿ ಟೂರ್ನಿಯ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಬ್ಯಾಟರ್ಗಳ ಜತೆಗೆ ಬೌಲರ್ಗಳಿಗೂ ನೆರವು ಒದಗಿಸುವ ಅಂಗಣದಲ್ಲಿ ಕಾಂಗರೂ ಪಡೆಯ ಬೌಲಿಂಗ್ ವಿಭಾಗ ಆಘನ್ಗೆ ಸವಾಲೊಡ್ಡಲಿದೆ.
ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಜತೆಗೆ ಜೋಶ್ ಹ್ಯಾಸಲ್ ವುಡ್ ಸಾಥ್ ನೀಡಿದ್ದಾರೆ.
ಕಳೆದ ಐದು ಪಂದ್ಯಗಳಲ್ಲಿ 4ರಲ್ಲಿ ಜಯಿಸಿ ಸೆಮಿೈನಲ್ ಆಸೆ ಜೀವಂತವಿರಿಸಿರುವ ಅಘಾನಿಸ್ತಾನಕ್ಕೆ ಸ್ಪಿನ್ನರ್ಗಳೇ ಪ್ರಮುಖ ಶಕ್ತಿ. ರಹಮಾನುಲ್ಲಾ ಗುರ್ಬಜ್ ಹೊರತುಪಡಿಸಿ ಅಗ್ರ ಕ್ರಮಾಂಕ ಬ್ಯಾಟರ್ಗಳು ಬ್ಯಾಟಿಂಗ್ನಲ್ಲಿ ಪರಿಣಾಮಕಾರಿ ಪ್ರದರ್ಶನ ಮೂಲಕ ಗಮಸ ಸೆಳೆದಿದ್ದಾರೆ. ಆದರೆ ಆಸ್ಟ್ರೇಲಿಯಾ ಬೌಲರ್ಗಳ ಎದುರು ಬ್ಯಾಟರ್ಗಳಿಗೆ ಸತ್ವ ಪರೀಕ್ಷೆ ಎದುರಾಗಲಿದೆ. ಅಚ್ಚರಿಯ ತಂಡವಾಗಿ ಸೆಮೀಸ್ಗೇರುವ ಜೀವಂತವಾಗಿಟ್ಟಿರುವ ಆಘನ್ ಎರಡು ಪಂದ್ಯಗಳ ಗೆಲುವಿನ ಜತೆಗೆ ರನ್ರೇಟ್ ಸುಧಾರಣೆಗೆ ಒತ್ತು ನೀಡಬೇಕಿದೆ.