ಕೋಲಾರ:- ಆಡಿ ಕಾರ್ ಮರಕ್ಕೆ ಡಿಕ್ಕಿಯಾಗಿ ನಡೆದ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಹೊರವಲಯದ ಬಂಗಾರಪೇಟೆ ಮುಖ್ಯ ರಸ್ತೆಯ ಸಹಕಾರ ನಗರ ಬಳಿ ಜರುಗಿದೆ.
ಇತ್ತೊಬ್ಬ ಆಶ್ಚರ್ಯಕರ ರೀತಿಯಲ್ಲಿ ಬಚಾವ್ ಆಗಿದ್ದಾನೆ. ಮೃತರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಚ್ಚಲ್ ಎಂದು ಗುರುತಿಸಲಾಗಿದೆ.
ಬಂಗಾರಪೇಟೆ ಮೂಲದ ಸಾಯಿ ಗಗನ್ ಬಚಾವ್ ಆಗಿದ್ದಾನೆ. ಅಪಘಾತದ ರಭಸಕ್ಕೆ ಆಡಿ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಚಾವಾದ ಸಾಯಿಗಗನ್ ಮನೆಗೆ ಸ್ನೇಹಿತರು ಬಂದಿದ್ದರು. ಮನೆಯಿಂದ ಕೋಲಾರಕ್ಕೆ ಮರಳುವಾಗ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಅತಿ ವೇಗ ಕಾರಣ ಎನ್ನಲಾಗಿದೆ. ಮದ್ಯ ಸೇವನೆಯ ಸಾಧ್ಯತೆಯನ್ನು ಪೋಸ್ಟ್ ಮಾರ್ಟಂ ಮೂಲಕ ನಿರ್ಣಯಿಸಲಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ
ಅಪಘಾತಕ್ಕೆ ಒಳಗಾದ ಕಾರಿನಲ್ಲಿ ಏರ್ಬ್ಯಾಗ್ ಇರಲೇ ಇಲ್ಲ ಎಂದು ಗೊತ್ತಾಗಿದೆ