ದಾವಣಗೆರೆ:- ಕರ್ನಾಟಕಕ್ಕೆ ಖನಿಜ ಬ್ಲಾಕ್ಗಳ ಹರಾಜು, ನಿರ್ವಹಣೆಯಲ್ಲಿ 3ನೇ ಸ್ಥಾನ ಲಭಿಸಿದೆ. ಮಧ್ಯಪ್ರದೇಶದ ಭೂಪಾಲ್ನಲ್ಲಿ ಆಯೋಜಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರ ಸಮ್ಮೇಳನದಲ್ಲಿ ಘೋಷಣೆ ಮಾಡಲಾಗಿದೆ.
ಕೇಂದ್ರ ಖನಿಜ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಂದ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಮರಳು ನೀತಿ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಿರ್ವಹಿಸಿದ ನೀತಿ ದೇಶಕ್ಕೆ ಮಾದರಿ ಆಗಿದೆ.
ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದು, ಎರಡನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದ ಸಂದರ್ಭದಲ್ಲಿ ಭೋಪಾಲ್ ನಲ್ಲಿ ಗಣಿ ಮತ್ತು ಖನಿಜ ಸಚಿವಾಲಯ ಆಯೋಜಿಸಿದ್ದ “ಮೈನಿಂಗ್ ಆ್ಯಂಡ್ ಬಿಯಾಂಡ್” ವಸ್ತುಪ್ರದರ್ಶನವನ್ನು ಭೇಟಿ ನೀಡಿದ ಕ್ಷಣ. ಇದೇ ಸಂದರ್ಭದಲ್ಲಿ ಭೋಪಾಲ್ನ ಭೋಜೇಶ್ವರ ಮಹಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮಹದಾವಕಾಶ ನನ್ನದಾಯಿತು ಎಂದು ಬರೆದುಕೊಂಡಿದ್ದಾರೆ.