ಬೆಂಗಳೂರು: ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ರಾಷ್ಟ್ರದಲ್ಲೆಲ್ಲಾ ವ್ಯಾಪಕವಾಗಿ ಚರ್ಚೆ ಆಗುತ್ತಿದೆ .justice is due ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು ..ಸದ್ಯ ಪ್ರಕರಣ ಸಂಬಂಧ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನ ಪೋಲಿಸರು ಬಂದಿಸಿದ್ದಾರೆ. ಆ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲದೆ.. 40 ಪುಟಗಳ ಡೆತ್ ನೋಟ್ ಬರೆದಿಟ್ಟು ವೀಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದ ಅತುಲ್..
ಕೆಸ್ ನಲ್ಲಿ ದಿನೇ ದಿನೇ ತಿರುವುಗಳು ಕಂಡುಬರುತ್ತಿದ್ವು. ಮಾರತಹಳ್ಳಿ ಯ ಪೋಲಿಸರ ತಂಡವೊಂದು ಉತ್ತರಪ್ರದೇಶಕ್ಕೆ ತೆರಳಿ ಅಲ್ಲಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ರು . ಸದ್ಯ A1- ಆರೋಪಿ ನಿಕಿತಾ ,A2 – ನಿಶಾ ಸಿಂಘಾನಿಯಾ ಹಾಗೂ ಅನುರಾಘ ನನ್ನು ಮಾರತಹಳ್ಳಿ ಪೋಲಿಸರು ಬಂಧಿಸಿದ್ದಾರೆ .
ಇನ್ನು ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ ನಿಕಿತಾ ರನ್ನ ಗುರುಗ್ರಾಮ್ ನ ಪಿಜಿಯೊಂದರಲ್ಲಿ ಬಂಧಿಸಿದ್ರೆ, ಇನ್ನಿಬ್ಬರನ್ನ ಪ್ರಯಾಗ್ ರಾಜ್ ನ ರಾಮೇಶ್ವರಂ ಹೋಟೆಲ್ ಬಳಿ ಬಂಧಿಸಲಾಗಿದೆ …ಆರೋಪಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು…ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
ಸದ್ಯ ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಶೀಪ್ಟ್ ಮಾಡಲಾಗಿದ್ದು , ನಿಕಿತಾ ಹಾಗೂ ನಿಶಾರನ್ನ ಮಹಿಳಾ ಬ್ಯಾರಕ್ ನಲ್ಲಿ ಶೀಪ್ಟ್ ಮಾಡಲಾಗಿದೆ ಹಾಗೂ ಅನುರಾಗ್ ನನ್ನು ಕ್ವಾರೆಂಟೈನ್ ಜೈಲಿಗೆ ಶೀಪ್ಟ್ ಮಾಡಲಾಗಿದೆ.. ಪ್ರಕರಣ ಸಂಬಂಧ ಮಾತನಾಡಿರುವ ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಾಗ್ತಿದೆ ಎಂದಿದ್ದಾರೆ.
ಇನ್ನು justice is due ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಅತುಲ್ ಪ್ರಕರಣದಲ್ಲಿ ,ಅತುಲ್ ಗೆ ಒಂದು ಹಂತದ ನ್ಯಾಯ ಸಿಕ್ಕಂತಾಗಿದೆ…ಮತ್ತೊಂದೆಡೆ ತನಿಖೆ ಮುಂದುವರೆದಿದ್ದು ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿ ಮತ್ತೊರ್ವ ಆರೋಪಿಗಾಗಿ ಬೆಂಗಳೂರು ಪೋಲಿಸ್ ಶೋಧ ನಡೆಸುತ್ತಿದ್ದಾರೆ.