ಬೆಂಗಳೂರು ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕ್ಕಿ ಅತುಲ್ ಸುಭಾಷ್ ಕೇಸ್ ತನಿಖೆ ಚುರುಕುಗೊಂಡಿದೆ ಘಟನೆ ಸಂಬಂಧ ಪೊಲೀಸರ ಮುಂದೆ ಅರೆಸ್ಟ್ ಆಗಿರುವ ಅತುಲ್ ಪತ್ನಿ ನಿಕಿತಾ ಹೇಳಿಕೆ ದಾಖಲಿಸಿದ್ದಾಳೆ. ಅತುಲ್ ಸುಭಾಷ್ ನನಗೆ ಕಿರುಕುಳ ನೀಡುತ್ತಿದ್ದ ಅಂತಾ ಪೊಲೀಸರ ಮುಂದೆ ಅತುಲ್ ಪತ್ನಿ ನಿಕಿತಾ ಹೇಳಿಕೆ ನೀಡಿದ್ದಾಳೆ. ಘಟನೆಯಲ್ಲಿ ಅತುಲ್ ಸಂತ್ರಸ್ತ ಅಲ್ಲಾ, ನಾನೇ ನಿಜವಾದ ಸಂತ್ರಸ್ತೆ.
ಅಡುಗೆ ಚೆನ್ನಾಗಿ ಮಾಡಿಲ್ಲ ಅಂತಾ ಅತುಲ್ ಸಾಕಷ್ಟು ಕಿರುಕುಳ ನೀಡುತ್ತಿದ್ದ. ನಾನು ನಾನ್ ವೆಜ್ ತಿನ್ನಲ್ಲ ಅಂದ್ರು ಕೇಳದೇ ನಾನ್ ವೆಜ್ ಅಡುಗೆ ಮಾಡು ಅಂತಾ ಪೀಡಿಸುತ್ತಿದ್ದ. ಇಷ್ಟೆಲ್ಲಾ ಅದರೂ ನಾನು ಮನೆ ಬಿಟ್ಟು ಹೋಗಿರಲಿಲ್ಲ. ಆದರೆ ನಾನು ಮನೆ ಬಿಟ್ಟು ಹೋಗುವಂತೆ ಮಾಡಿದ್ದು ಅತುಲ್ ಅಂತಾ ಸುಸೈಡ್ ಮಾಡಿಕೊಂಡಿರುವ ಗಂಡ ಅತುಲ್ ಮೇಲೆ ನಿಕಿತಾ ಗಂಭೀರ ಆರೋಪ ಮಾಡಿದ್ದಾಳೆ.
ಗರ್ಭಿಣಿಯರು ಕೇಸರಿ ಹಾಲು ಕುಡಿದ್ರೆ ಮಗು ಬೆಳ್ಳಗೆ ಹುಟ್ಟುತ್ತಾ? ಕೆಂಪಗೆ ಹುಟ್ಟುತ್ತಾ.? ಇಲ್ಲಿದೆ ಮಾಹಿತಿ
ಈ ಎಲ್ಲಾ ಹೇಳಿಕೆಯನ್ನು ಪೊಲೀಸರು ನೋಟ್ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದ್ರೆ ಅತುಲ್ ಬರೆದಿರುವ ಡೆತ್ ನೋಟ್ ಹಾಗೂ ಮಾಡಿಟ್ಟಿರುವ ವಿಡಿಯೋದಲ್ಲಿ ತನ್ನ ಮೇಲೆ ಹಾಕಿರುವ 9 ಕೇಸ್ ಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ತನ್ನ ಪತ್ನಿಯಿಂದ ಏನೇನೂ ಕಿರುಕುಳ ಆಗಿದೆ ಎಂಬುದನ್ನು ಸಹ ಹೇಳಿಕೊಂಡಿದ್ದಾನೆ. ಹೀಗಾಗಿ ಪೊಲೀಸರು ನಿಕಿತಾ ಹೇಳಿಕೆಯನ್ನು ಎಷ್ಟು ಸಿರಿಯಸ್ಸಾಗಿ ತಗೊಂತಾರೆ ಅಂತಾ ನೋಡ್ಬೇಕು.